• About
  • Advertise
  • Careers
  • Contact
Thursday, November 5, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home EDITORS'S PICKS

ಮೈಸೂರು ಅರಮನೆ ಖಾಸಗಿ ಸ್ವತ್ತು, ಸರ್ಕಾರ ಕಟ್ಟಿಸಿದ್ದಲ್ಲ; ರಾಜಮಾತೆ ಪ್ರಮೋದಾ ದೇವಿ

cknewsnow desk by cknewsnow desk
November 4, 2026
in EDITORS'S PICKS, NATION, POLITICS, STATE
Reading Time: 1 min read
0
ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಅಗತ್ಯವಿಲ್ಲ: ರಾಜಮಾತೆ ಪ್ರಮೋದಾ ದೇವಿ ಒಡೆಯರ್

Photo by Nandan Mysuru

914
VIEWS
FacebookTwitterWhatsuplinkedinEmail

ಸರಕಾರ ಬೇಕಾದರೆ ಇನ್ನೊಂದು ಅಂಬಾರಿಯನ್ನು ಮಾಡಿಸಿಕೊಳ್ಳಲಿ

ಮೈಸೂರು: ಮೈಸೂರು ಅರಮನೆ ಖಾಸಗಿ ಸ್ವತ್ತು,ಇದನ್ನ ಕಟ್ಟಿಸಿದ್ದು ಸರ್ಕಾರ ಅಲ್ಲ, ಸರ್ಕಾರದ ಔದಾರ್ಯದಿಂದ ನಾವು ಅರಮನೆಯಲ್ಲಿ ವಾಸ ಇಲ್ಲ. ನ್ಯಾಯಾಲಯದ ನಿರ್ದೇಶನದಂತೆ ಇಲ್ಲಿದ್ದೇವೆ ಎಂದು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಸ್ಪಷ್ಟಪಡಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಅರಮನೆಯ ಮಾಲೀಕತ್ವ ಹಾಗೂ ನಿರ್ವಹಣೆ ವಿಚಾರವಾಗಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿ, ಅರಮನೆ ನಿರ್ವಹಣೆಗೆ ಅರಮನೆ ಆಡಳಿತ ಮಂಡಳಿ ರಚನೆ ಆಗಿದೆ. ಅದನ್ನ ನ್ಯಾಯಾಲಯದಲ್ಲಿ ನಾವು ಪ್ರಶ್ನಿಸಿದ್ದೇವೆ.ಅದು ಇನ್ನೂ ವಿಚಾರಣೆಯಲ್ಲಿದೆ, ನಾವು ಸರ್ಕಾರದ ವಿಶೇಷ ಅನುಗ್ರಹದಿಂದ ಇಲ್ಲಿ ವಾಸ ಮಾಡುತ್ತಿಲ್ಲ ಎಂದು ಹೇಳಿದರು.

ಅಂಬಾರಿಗೆ ಬಾಡಿಗೆ ಕೊಡುತ್ತಿಲ್ಲ, ಅಂಬಾರಿ ಇಟ್ಟುಕೊಂಡು ಟಿಕೆಟ್ ಮಾರಿ ಹಣ ಸಂಪಾದಿಸುತ್ತಾರೆ, ಅಂಬಾರಿ ಇಟ್ಟುಕೊಂಡು ಪ್ರಚಾರ ಮಾಡಿ ಹಣ ಮಾಡುತ್ತಾರೆ, ಇದಕ್ಕಾಗಿ ಹಣ ಕೊಡುತ್ತಾರೆ, ಅದು ಬಾಡಿಗೆ ಅಲ್ಲ. ಅಂಬಾರಿ, ಸಿಂಹಾಸನ ಎರಡೂ ನಮ್ಮ ವಶದಲ್ಲಿದೆ. ಹಿಂದೆಯೂ ನಮ್ಮ ವಶದಲ್ಲಿತ್ತು. ಮುಂದೆಯೂ ನಮ್ಮ ವಶದಲ್ಲೇ ಇರುತ್ತದೆ ಎಂದು ಕಡಕ್ಕಾಗಿ ಹೇಳಿದರು.

ಅಂಬಾರಿಗೆ ಎಷ್ಟು ಗೌರವಧನ ನೀಡಲಾಗಿದೆ ಎಂಬುದನ್ನು ನಾನು ಬಹಿರಂಗಪಡಿಸುವುದಿಲ್ಲ. ಸರ್ಕಾರ ಬೇಕಾದರೆ ಎಷ್ಟು ಹಣ ನೀಡಿದೆ ಎಂಬುದನ್ನು ಬಹಿರಂಗವಾಗಿ ಹೇಳಲಿ. ಅಂಬಾರಿಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿರುವುದರಿಂದ ಹಣ ಕೇಳಲಾಗುತ್ತಿದೆ. ಸರ್ಕಾರ ಬೇಕಾದರೆ ಇನ್ನೊಂದು ಅಂಬಾರಿಯನ್ನು ಮಾಡಿಸಿಕೊಳ್ಳಲಿ. ಇದಕ್ಕೆ ನನ್ನ ಯಾವುದೇ ಅಭ್ಯಂತರವಿಲ್ಲ. ಈ ಹಿಂದೆಯೂ ಸರ್ಕಾರಕ್ಕೆ ಇದೇ ಸಲಹೆ ನೀಡಿದ್ದೆ. ಸರ್ಕಾರದ ಬಳಿ ಸಂಪನ್ಮೂಲವಿದೆ. ಹೊಸ ಅಂಬಾರಿ ಮಾಡಿಸಿಕೊಳ್ಳಬಹುದಿತ್ತು. ಆದರೆ, ಸರ್ಕಾರ ಮಾಡಿಸಲಿಲ್ಲ ಅಷ್ಟೇ ಎಂದು ಹೇಳಿದರು.

ಅಂಬಾರಿಯ ಮೇಲೆ ತಾಯಿ ಚಾಮುಂಡೇಶ್ವರಿ.

ಅಂಬಾರಿ ಹೊರುವ ಆನೆಯ ಬಗ್ಗೆ ತಿಳಿದುಕೊಳ್ಳುವ ಸಂಪೂರ್ಣ ಹಕ್ಕು ನನಗಿದೆ. ಅಂಬಾರಿಯ ಮಾಲೀಕರಾಗಿ ಅದನ್ನು ಹೊರುವ ಆನೆ ಯಾವುದು ಎಂಬುದನ್ನು ತಿಳಿದುಕೊಳ್ಳುವುದು ನನ್ನ ಹಕ್ಕು. ಶಿಷ್ಟಾಚಾರದ ಪ್ರಕಾರ ನನಗೆ ತಿಳಿಸಬೇಕು ಎಂದು ನಾನು ಹೇಳಿಲ್ಲ. ಇದಕ್ಕೆ ಶಿಷ್ಟಾಚಾರ ಇಲ್ಲ ಎಂಬುದು ನನಗೂ ಗೊತ್ತು. ಅನೇಕ ವಿಚಾರಗಳು ಪರಸ್ಪರ ನಂಬಿಕೆ, ಸಹಕಾರ ಮತ್ತು ತಿಳಿವಳಿಕೆಯಿಂದ ನಡೆಯುತ್ತವೆ. ಅಂಬಾರಿ ಹೊರುವ ಆನೆಯನ್ನು ಮೊದಲೇ ನಿರ್ಧರಿಸಬಹುದಿತ್ತು. ಕೇವಲ ಐದು ದಿನ ಮುಂಚಿತವಾಗಿ ತಿಳಿಸಿದರೆ ನಾನು ಹೇಗೆ ಭರವಸೆ ಮೂಡಿಸಿಕೊಳ್ಳಲಿ ಯಾವ ಭರವಸೆಯ ಮೇಲೆ ಅಂಬಾರಿಯನ್ನು ನೀಡಲಿ ಎಂದು ರಾಜಮಾತೆ ಖಾರವಾಗಿ ಪ್ರಶ್ನಿಸಿದರು.

ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತೇನೆ ಎಂದು ಸಿಎಂ ಹೇಳಿರುವುದಕ್ಕೆ ಧನ್ಯವಾದಗಳು. ಇದನ್ನು ಜಾಸ್ತಿ ದೊಡ್ಡದು ಮಾಡುವುದು ಬೇಡ. ಪೊಲೀಸರ ಭದ್ರತಾ ವ್ಯವಸ್ಥೆ ಹೆಸರಿನಲ್ಲಿ ತೊಂದರೆ ಆಗಿತ್ತು. ಅದರ ಬಗ್ಗೆ ಧ್ವನಿ ಎತ್ತಿದ್ದೇನೆ. ಜಟ್ಟಿ ಕಾಳಗ ನಡೆಸುವವರನ್ನು ಒಳಗೆ ಬಿಟ್ಟಿಲ್ಲ. ಇದು ತೊಂದರೆ ಆಯಿತು. ಆಯುಧ ಪೂಜೆ ಮತ್ತು ವಿಜಯಯಾತ್ರೆಗೆ ಪ್ರತಿ ವರ್ಷವೂ ತೊಂದರೆ ಆಗುತ್ತಿದೆ. ನಾನು ಎಲ್ಲಿಯೂ ರಾಜ್ಯ ಸರ್ಕಾರವನ್ನು ದೂಷಿಸಿಲ್ಲ. ಏಳು ದಿನ ನವರಾತ್ರಿ ಮಾಡಿ ಎಂದು ಹೇಳಿಲ್ಲ. ಏಳು ದಿನಕ್ಕೆ ಅರ್ಧ ಮುಗಿಸಿ ನಂತರ ಮಾಡಿ ಎಂದು ಹೇಳಿದ್ದೇನೆ. ನಾನು ಸಲಹೆ ಮಾತ್ರ ಕೊಟ್ಟಿದ್ದೇನೆ. ನಾನು ಸರ್ಕಾರಕ್ಕೆ ನಿರ್ದೇಶನ ನೀಡಿಲ್ಲ. ನಾನು ಸರ್ಕಾರಕ್ಕೆ ಪತ್ರವೇ ಬರೆದಿಲ್ಲ. ಬರೀ ಮಾಧ್ಯಮಕ್ಕೆ ಪತ್ರ ಬರೆದು ಸಾರ್ವಜನಿಕರ ಸಹಕಾರ ಕೇಳಿದ್ದೇನೆ. ಈ ಸಮಸ್ಯೆ ಮತ್ತು ಗೊಂದಲವನ್ನು ಮುಂದಿನ ದಸರಾವರೆಗೂ ಮುಂದುವರಿಸುವುದಿಲ್ಲ. ದಸರಾ ಪ್ರಾಧಿಕಾರ ರಚನೆಯಿಂದಲೇ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ನಾನು ಹೇಳುವುದಿಲ್ಲ. ಈ ವಿಚಾರವನ್ನು ಇನ್ನು ಮುಂದೆ ಮುಂದುವರಿಸುವುದು ಬೇಡ ಎಂದು ಪ್ರಮೋದಾದೇವಿ ಒಡೆಯರ್ ತಿಳಿಸಿದರು.

ಅಂಬಾರಿಯ ತೂಕ ಎಷ್ಟು, ಅದರಲ್ಲಿ ಎಷ್ಟು ಚಿನ್ನವಿದೆ ಎಂಬುದನ್ನು ನಾನು ತೂಕ ಹಾಕಿಲ್ಲ. ಮುಂದೆಯೂ ತೂಕ ಹಾಕುವುದಿಲ್ಲ. ಈ ಬಗ್ಗೆ ಯಾರಿಗೆ ಏನು ಅನಿಸುತ್ತದೆಯೋ ಅದನ್ನು ಬರೆದುಕೊಳ್ಳಲಿ, ಮಾತನಾಡಲಿ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.

ಮೈಸೂರು ಅರಮನೆ

Tags: ambariDasarakarnatakamysuru palaceRajmata pramodhadevi
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಂತರಾಜು ವರದಿ ನೈಜತೆ ಬಗ್ಗೆ ಅನುಮಾನಗಳಿವೆ ಎಂದ ಅಶೋಕ್

ಸಾರಿಗೆ ನಿಗಮಗಳಿಗೆ ₹5,650 ಕೋಟಿ ಬಾಕಿ! ಜನರ ಮೇಲೆ ದರ ಏರಿಕೆಯ ಹೊರೆ

by cknewsnow desk
November 5, 2026
0

ಸಾರಿಗೆ ನಿಗಮಗಳ ಒಟ್ಟು ಹೊಣೆಗಾರಿಕೆ ₹7,130.80 ಕೋಟಿ

ಕೇಂದ್ರ ಪೆಟ್ರೋಲ್, ಡೀಸೆಲ್ ದರ ಇಳಿಸಿದರೆ ಬಸ್ ಪ್ರಯಾಣ ದರ ಕಡಿಮೆ ಮಾಡುತ್ತೇವೆ

ಕೇಂದ್ರ ಪೆಟ್ರೋಲ್, ಡೀಸೆಲ್ ದರ ಇಳಿಸಿದರೆ ಬಸ್ ಪ್ರಯಾಣ ದರ ಕಡಿಮೆ ಮಾಡುತ್ತೇವೆ

by cknewsnow desk
November 5, 2026
0

ಮಹಿಳೆಯರಿಗೆ ಫ್ರೀ ಬಸ್ ಕೊಟ್ಟಿದ್ದಕ್ಕೆ ಆರ್ಥಿಕ ಹೊರೆ ಆಗಿದೆ ಎಂದ ಮುಖ್ಯಮಂತ್ರಿ

ಬಸ್‌ ಪ್ರಯಾಣ ದರ ಶೇ.23ರಿಂದ ಶೇ.37ರಷ್ಟು ಹೆಚ್ಚಳ

ಬಸ್‌ ಪ್ರಯಾಣ ದರ ಶೇ.23ರಿಂದ ಶೇ.37ರಷ್ಟು ಹೆಚ್ಚಳ

by cknewsnow desk
November 4, 2026
0

ಇಂದು ಮಧ್ಯರಾತ್ರಿಯಿಂದಲೇ ಬರೆ ಏರಿಕೆ ಜಾರಿ

ಹಾಸನ ಪ್ರಕರಣದಲ್ಲಿ ಅಶ್ಲೀಲ ವಿಡಿಯೋಗಳನ್ನು ಹರಡಿದ A2 ಜತೆ ಡಿಕೆಶಿ ನಂಟು!

ಹಾಸನ ಪ್ರಕರಣದಲ್ಲಿ ಅಶ್ಲೀಲ ವಿಡಿಯೋಗಳನ್ನು ಹರಡಿದ A2 ಜತೆ ಡಿಕೆಶಿ ನಂಟು!

by cknewsnow desk
November 4, 2026
0

ಪ್ರಿಯಾಂಕ್ ಖರ್ಗೆ ಪಾಸ್ ಟ್ರೇಲರ್ ಹೈ.. ಹಮಾರೇ ಪಾಸ್ ಪಿಕ್ಚರ್ ಹೈ

ಸ್ಟಿಂಗ್ ವಿರುದ್ಧ ಕೋರ್ಟ್ ಮೊರೆ ಹೋದ ಸಿದ್ದರಾಮಯ್ಯ! ಇಂದು ಆದೇಶ ನಿರೀಕ್ಷೆ

ವಿಡಿಯೋದಲ್ಲಿರುವ ಕೇರಳ ಮಹಿಳೆ ಸ್ಟಿಂಗ್ ಪಿತೂರಿ ಭಾಗ!

by cknewsnow desk
November 4, 2026
0

ತನಿಖೆ ದಾರಿ ತಪ್ಪಿಸಿದ ಪೊಲೀಸ್ ಆಯುಕ್ತರು; ಸುಪ್ರೀಂ ಕೋರ್ಟ್ ಮಾರ್ಗಸೂಚಿ ಉಲ್ಲಂಘನೆ ಎಂದು ಆರೋಪಿಸಿದ ಕೇಂದ್ರ ಸಚಿವರು

ಗೃಹ ಇಲಾಖೆ ನಡೆಸುವುದಕ್ಕೆ ಪ್ರಿಯಾಂಕ್ ಖರ್ಗೆ Unfit ಎಂದ ಹೆಚ್.ಡಿ.ಕುಮಾರಸ್ವಾಮಿ

ಗೃಹ ಇಲಾಖೆ ನಡೆಸುವುದಕ್ಕೆ ಪ್ರಿಯಾಂಕ್ ಖರ್ಗೆ Unfit ಎಂದ ಹೆಚ್.ಡಿ.ಕುಮಾರಸ್ವಾಮಿ

by cknewsnow desk
November 4, 2026
0

ಸ್ಟಿಂಗ್ ತನಿಖೆಯ ವಾಗ್ದಾಳಿ ಮುಂದುವರಿಸಿದ ಕೇಂದ್ರ ಸಚಿವರು; ಸಂತ್ರಸ್ತೆ ಕಲಿಸಿದ್ದ ಈ ಮೇಲ್ ಎಲ್ಲಿ ಹೋಯಿತು ಖರ್ಗೆ ಅವರೇ ಎಂದು ಕಿಡಿ

Next Post
ಕೇಂದ್ರ ಪೆಟ್ರೋಲ್, ಡೀಸೆಲ್ ದರ ಇಳಿಸಿದರೆ ಬಸ್ ಪ್ರಯಾಣ ದರ ಕಡಿಮೆ ಮಾಡುತ್ತೇವೆ

ಕೇಂದ್ರ ಪೆಟ್ರೋಲ್, ಡೀಸೆಲ್ ದರ ಇಳಿಸಿದರೆ ಬಸ್ ಪ್ರಯಾಣ ದರ ಕಡಿಮೆ ಮಾಡುತ್ತೇವೆ

Leave a Reply Cancel reply

Your email address will not be published. Required fields are marked *

Recommended

ಜನರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಕೊನೆಗೂ ನೈಟ್‌ ಕರ್ಫ್ಯೂ ವಾಪಸ್‌; ಆ ವೈಕುಂಠಾಧಿಪತಿಗೆ ಮಣಿಯಿತಾ ಯಡಿಯೂರಪ್ಪ ಸರಕಾರ

ಜನರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಕೊನೆಗೂ ನೈಟ್‌ ಕರ್ಫ್ಯೂ ವಾಪಸ್‌; ಆ ವೈಕುಂಠಾಧಿಪತಿಗೆ ಮಣಿಯಿತಾ ಯಡಿಯೂರಪ್ಪ ಸರಕಾರ

6 years ago
ಹೊರೆ ಆಗಿರುವ ಸಚಿವರಿಗೆ ಗೇಟ್‌ಪಾಸ್

ಹೊರೆ ಆಗಿರುವ ಸಚಿವರಿಗೆ ಗೇಟ್‌ಪಾಸ್

5 years ago

Popular News

  • ಕಾಂತರಾಜು ವರದಿ ನೈಜತೆ ಬಗ್ಗೆ ಅನುಮಾನಗಳಿವೆ ಎಂದ ಅಶೋಕ್

    ಸಾರಿಗೆ ನಿಗಮಗಳಿಗೆ ₹5,650 ಕೋಟಿ ಬಾಕಿ! ಜನರ ಮೇಲೆ ದರ ಏರಿಕೆಯ ಹೊರೆ

    0 shares
    Share 0 Tweet 0
  • ಕೇಂದ್ರ ಪೆಟ್ರೋಲ್, ಡೀಸೆಲ್ ದರ ಇಳಿಸಿದರೆ ಬಸ್ ಪ್ರಯಾಣ ದರ ಕಡಿಮೆ ಮಾಡುತ್ತೇವೆ

    0 shares
    Share 0 Tweet 0
  • ಮೈಸೂರು ಅರಮನೆ ಖಾಸಗಿ ಸ್ವತ್ತು, ಸರ್ಕಾರ ಕಟ್ಟಿಸಿದ್ದಲ್ಲ; ರಾಜಮಾತೆ ಪ್ರಮೋದಾ ದೇವಿ

    0 shares
    Share 0 Tweet 0
  • ಬಸ್‌ ಪ್ರಯಾಣ ದರ ಶೇ.23ರಿಂದ ಶೇ.37ರಷ್ಟು ಹೆಚ್ಚಳ

    0 shares
    Share 0 Tweet 0
  • ಹಾಸನ ಪ್ರಕರಣದಲ್ಲಿ ಅಶ್ಲೀಲ ವಿಡಿಯೋಗಳನ್ನು ಹರಡಿದ A2 ಜತೆ ಡಿಕೆಶಿ ನಂಟು!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಂತರಾಜು ವರದಿ ನೈಜತೆ ಬಗ್ಗೆ ಅನುಮಾನಗಳಿವೆ ಎಂದ ಅಶೋಕ್

ಸಾರಿಗೆ ನಿಗಮಗಳಿಗೆ ₹5,650 ಕೋಟಿ ಬಾಕಿ! ಜನರ ಮೇಲೆ ದರ ಏರಿಕೆಯ ಹೊರೆ

November 5, 2026
ಕೇಂದ್ರ ಪೆಟ್ರೋಲ್, ಡೀಸೆಲ್ ದರ ಇಳಿಸಿದರೆ ಬಸ್ ಪ್ರಯಾಣ ದರ ಕಡಿಮೆ ಮಾಡುತ್ತೇವೆ

ಕೇಂದ್ರ ಪೆಟ್ರೋಲ್, ಡೀಸೆಲ್ ದರ ಇಳಿಸಿದರೆ ಬಸ್ ಪ್ರಯಾಣ ದರ ಕಡಿಮೆ ಮಾಡುತ್ತೇವೆ

November 5, 2026
ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಅಗತ್ಯವಿಲ್ಲ: ರಾಜಮಾತೆ ಪ್ರಮೋದಾ ದೇವಿ ಒಡೆಯರ್

ಮೈಸೂರು ಅರಮನೆ ಖಾಸಗಿ ಸ್ವತ್ತು, ಸರ್ಕಾರ ಕಟ್ಟಿಸಿದ್ದಲ್ಲ; ರಾಜಮಾತೆ ಪ್ರಮೋದಾ ದೇವಿ

November 4, 2026
ಬಸ್‌ ಪ್ರಯಾಣ ದರ ಶೇ.23ರಿಂದ ಶೇ.37ರಷ್ಟು ಹೆಚ್ಚಳ

ಬಸ್‌ ಪ್ರಯಾಣ ದರ ಶೇ.23ರಿಂದ ಶೇ.37ರಷ್ಟು ಹೆಚ್ಚಳ

November 4, 2026

Covid 19

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

October 16, 2026
ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ