ಬೆಂಗಳೂರು: ಯುಟ್ಯೂಬ್ ಹವಾ ಹೆಚ್ಚಿದಂತೆಲ್ಲ ಆನ್’ಲೈನ್’ನಲ್ಲಿ ಆಲ್ಬಂಗಳ ಹವಾ ಹೆಚ್ಚುತ್ತಲೇ ಇದೆ. ಒಳ್ಳೆಯ ಸದಭಿರುಚಿಯ ಹಾಗೂ ಜಗತ್ತಿನ ಸಿನಿಮಾ ರಂಗವೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವ ಸಿನಿಮಾಗಳನ್ನು ತಯಾರಿಸುವ ದಕ್ಷಿಣ ಕೊರಿಯಾದಲ್ಲಿ ಮನರಂಜನೆಗೇನೂ ಕೊರತೆ ಇಲ್ಲ.
ಈಗ ಅದೇ ಕೊರಿಯಾದ ಪಾಪ್ ಬ್ಯಾಂಡ್ ʼಬಿಟಿಎಸ್’ ಬಿಟ್ಟಿರುವ ಹೊಸ ’ಡೈನಾಮೈಟ್’ ಎಂಬ ಇಂಗ್ಲಿಷ್’ನಲ್ಲಿರುವ ಹೊಸ ವಿಡಿಯೋ ಹಾಡನ್ನು ರಿಲೀಸ್ ಮಾಡಿದ್ದು, ಅದು ಬರೀ ಕೊರಿಯಾ ಮಾತ್ರವಲ್ಲದೆ, ಇಡೀ ಜಗತ್ತಿನ ಯುವಜನರನ್ನು ಭರ್ತಿ ಮೋಡಿ ಮಾಡಿಬಿಟ್ಟಿದೆ. ಆ ವಿಡಿಯೋ ರಿಲೀಸ್ ಆದ ಒಂದೇ ದಿನದಲ್ಲಿ 86.06 ದಶಲಕ್ಷ ಜನರು ವೀಕ್ಷಿಸಿದ್ದರು. ಶುಕ್ರವಾರ ಬೆಳಗ್ಗೆ 9.30ರಿಂದ ಶನಿವಾರ ಬೆಳಗ್ಗೆ 6.05 ಗಂಟೆವರೆಗೂ ಇಷ್ಟು ಜನ ನೋಡಿದ್ದಾರಲ್ಲದೆ, ಸಿಕ್ಕಾಪಟ್ಟೆ ಕಾಮೆಂಟುಗಳನ್ನು ಹಾಕಿದ್ದಾರೆ. ಭಾನುವಾರ ಸಂಜೆ ಹೊತ್ತಿಗೆ 1,57 ಕೋಟಿಗೂ ಹೆಚ್ಚು ಜನ ಇದನ್ನು ವೀಕ್ಷಿಸಿದ್ದಾರೆ. ಆಲ್’ಮೋಸ್ಟ್ ಭಾನುವಾರದವರೆಗೂ ಟ್ರಿಂಡಿಂಗಿನಲ್ಲಿದ್ದ ಈ ವಿಡಿಯೋವನ್ನು, ನಮ್ಮ ಚಂದನ್ ಶೆಟ್ಟಿಯ #ಕೋಲುಮುಂಡೆ ಸಾಂಗ್ ಕೊಂಚ ಹಿಂದಕ್ಕೆ ಹಾಕಿ
ಬಿಟಿಎಸ್ ಬ್ಯಾಂಡಿನ ಡಾನ್ಸರ್..
ಈ ಬಗ್ಗೆ ಕಾಮೆಂಟ್ ಮಾಡಿರುಬ ಬಿಟಿಎಸ್, “ಕೋವಿಡ್-19 ಕಾರಣಕ್ಕೆ ಇಡೀ ಜಗತ್ತೇ ಒತ್ತಡದಲ್ಲಿದೆ. ಈ ಕಾರಣಕ್ಕೆ ನಮ್ಮ ಆಲ್ಬಂ ಎಲ್ಲ ಮ್ಯೂಸಿಕ್ ಪ್ರಿಯರಿಗೆ ಕೊಂಚ ನೆಮ್ಮದಿ ಕೊಟ್ಟಿದೆ ಎಂಬ ತೃಪ್ತಿ ಇದೆ” ಎಂದು ಹೇಳಿದೆ.
ರೊನಾಲ್ಡೋ ಫಿದಾ:
ಕ್ರಿಸ್ಟಿನೋ ರೊನಾಲ್ಡೋ / curtsy: Wikipedia
ಜಗದ್ವಿಖ್ಯಾತ ಫುಟ್ʼಬಾಲರ್ ಕ್ರಿಸ್ಟಿನೋ ರೊನಾಲ್ಡೋ ಬಿಟಿಎಸ್ ಹಾಡಿಗೆ ಫಿದಾ ಆಗಿದ್ದಾರೆ. ಅವರು ಥ್ರೆಡ್ಮೀಲ್ ಮೇಲೆ ಈ ಹಾಡಿಗೆ ಡಾನ್ಸ್ ಮಾಡುತ್ತಾ ವರ್ಕೌಟ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಅವರು ಡಾನ್ಸ್ ಮಾಡುವ ವೇಳೆ ಕೊಂಚ ಆಯತಪ್ಪಿ ಬೀಳುವಂತಾದರೂ ಅದನ್ನು ಸರಿಪಡಿಸಿಕೊಂಡು ಸ್ಟೆಪ್ ಹಾಕಿದ್ದಾರೆ.
ಜೋಷ್’ಫುಲ್ಲಾಗಿದೆ ಎಂದ ಹೀರೋ ನವೀನ್ ಶಂಕರ್:
ಈ ಹಾಡು ರಿಧಮಿಕ್ಕಾಗಿದೆ ಹಾಗೂ ಮತ್ತೆ ಮತ್ತೆ ಕೇಳುವಂತೆ, ನೋಡುವಂತೆ ಇದೆ. ಹಾಡಿನ ಎನರ್ಜಿ ಎಲ್ಲೂ ಡ್ರಾಪ್’ಡೌನ್ ಆಗಲ್ಲ. ನಡುವಿನಲ್ಲಿ ಎಲ್ಲೂ ಬ್ರೇಕ್ಸ್ ಇಲ್ಲ. ಅಲ್ಲಲ್ಲಿ ಬಣ್ಣಗಳನ್ನು ರಮಣೀಯವಾಗಿ ಬಳಕೆ ಮಾಡಲಾಗಿದೆ, ಇದೂ ಚೆನ್ನಾಗಿದೆ. ಸ್ವೈಲ್’ನಲ್ಲಿ ರೆಟ್ರೋ ಥೀಮ್ ಇಟ್ಟುಕೊಂಡಿದ್ದಾರೆ. ಅದೂ ಹಿಡಿಸಿತು. ಮೈಕೆಲ್ ಜಾಕ್ಸನ್ ಅವರ ಕಾಲದ ಕೆಲ ಐಕಾನಿಕ್ ಮೂಮೆಂಟ್ಸ್ ಕೂಡ ಹಾಡಿನಲ್ಲಿವೆ. ಒಟ್ಟಾರೆ ಹೇಳುವುದಾದರೆ, ಇದು ಲೈಟ್ ಹಾರ್ಟೆಡ್, ಜೋಯಲ್ ಸಾಂಗ್ ಎನ್ನಬಹುದು. ಜತೆಗೆ ಒಂದು ರೀತಿಯಲ್ಲಿ ಮೂಡ್ ಬೂಸ್ಟರ್.
–ನವೀನ್ ಶಂಕರ್
ಕನ್ನಡದ ಖ್ಯಾತ ನಟ / ‘ಗುಳ್ಟು’ ಚಿತ್ರದ ಖ್ಯಾತಿ