• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CKPLUS

40,000ಕ್ಕೂ ಹೆಚ್ಚು ಗೀತಪುಷ್ಪಗಳ ಹಾರದೊಂದಿಗೆ ಸ್ವರಮಾತೆಯ ಮಡಿಲಲ್ಲಿ ಐಕ್ಯರಾದ ಬಾಲು

P K Channakrishna by P K Channakrishna
October 1, 2020
in CKPLUS, COVID-19, NATION, STATE
Reading Time: 1 min read
0
40,000ಕ್ಕೂ ಹೆಚ್ಚು ಗೀತಪುಷ್ಪಗಳ ಹಾರದೊಂದಿಗೆ ಸ್ವರಮಾತೆಯ ಮಡಿಲಲ್ಲಿ ಐಕ್ಯರಾದ ಬಾಲು
913
VIEWS
FacebookTwitterWhatsuplinkedinEmail

ಚೆನ್ನೈ: ಗುರುವಾರ ಮಧ್ಯಾಹ್ನ ಒಂದು ಗಂಟೆ ನಾಲ್ಕು ನಿಮಿಷಕ್ಕೆ ಚೆನ್ನೈನ ಆಸ್ಪತ್ರೆಯಲ್ಲಿ ತಮ್ಮ ಭೌತಿಕ ಬದುಕು ಮುಗಿಸಿದ ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ, ಶುಕ್ರವಾರ 12.50ರ ಹೊತ್ತಿಗೆಲ್ಲ ಮಣ್ಣಲ್ಲಿ ಮಣ್ಣಾಗಿ ಶಾಶ್ವತನಿದ್ರೆಯತ್ತ ತೆರಳಿದರಲ್ಲದೆ, ತಮ್ಮ ಅಂಖ್ಯಾತ ಅಭಿಮಾನಿಗಳನ್ನು ಮತ್ತು ಸ್ವರಪ್ರೇಮಿಗಳನ್ನು ಅತೀವ ಶೋಕಕ್ಕೆ ತಳ್ಳಿಬಿಟ್ಟು, ಸ್ವರತಾಯಿಯ ಮಡಿಲಲ್ಲಿ ಐಕ್ಯರಾದರು.

ಒಕ್ಕಡೇ ರಾವಡಂ…
ಒಕ್ಕಡೈ ಪೋವಡಂ…
ನಡುಮ ಈ ನಾಟಕಂ, ವಿಧಿಲೀಲ
ವೆಂಟ ಏ ಬಂಧಮೂ…
ತೋಡುಗಾ ರಾದುಗಾ ತುದಿವೇಳ
ಮರಣಮನೇದಿ ಖಾಯಮನಿ…
ಮಿಗಿಲೆನು ಕೀರ್ತಿ ಕಾಯಮನಿ
ನೀ ಬರುವೂ.. ನೀ ಪರುವೂ ಮೋಸೇದಿ..
ಆ ನಲುಗುರು… ಆ ನಲುಗುರು… ಆ ನಲುಗುರು… ಆ ನಲುಗುರು…

(ಒಬ್ಬನಾಗೇ ಬರುವುದು…
ಒಬ್ಬನಾಗೇ ನಡೆವುದು….
ನಡುವೆ ಈ ನಾಟಕ, ವಿಧಿಲೀಲೆ
ಹಿಂದೆ ಯಾವ ಬಂಧವೂ
ರಕ್ತ ಸಂಬಂಧವೂ
ಜತೆಯಲಿ ಬಾರದು ಕೊನೆಗೆ
ಮರಣವೆಂಬುದು ಖಚಿತವು…
ಉಳಿವುದು ಕೀರ್ತಿ ಅಳಿಯದೇ
ನಿನ್ನ ಭಾರ, ನಿನ್ನ ಗೌರವ ಹೊರುವುದು
ಆ ನಾಲ್ವರು, ಆ ನಾಲ್ವರು, ಆ ನಾಲ್ವರು, ಆ ನಾಲ್ವರು)

2004ರಲ್ಲಿ ತೆಲುಗಿನಲ್ಲಿ ಬಂದಿದ್ದ ʼಆ ನಲುಗುರುʼ (ಆ ನಾಲ್ವರು) ಚಿತ್ರದ ಕ್ಲೈಮ್ಯಾಕ್ಸ್‌ ಗೀತೆ ಇದು. ಈ ಹಾಡನ್ನು ಎದೆತುಂಬಿ, ಆರ್ದ್ರವಾಗಿ ಹಾಡಿ ಎಲ್ಲರ ಕಂಗಳಲ್ಲಿ ಹನಿತುಂಬಿಸಿದ್ದರು ಬಾಲು. ಇವತ್ತು ನಡೆದ ಅವರ ಅಂತ್ಯಕ್ರಿಯೆಯಲ್ಲಿ ಈ ಹಾಡು ಅಕ್ಷರಶಃ ಸಾಕ್ಷಾತ್ಕಾರವಾಗಿತ್ತು. ಕೋವಿಡ್‌ ಎಂಬ ಮಾರಿಯನ್ನು ಲೆಕ್ಕ ಮಾಡದೇ ತಮ್ಮ ನೆಚ್ಚಿನ ಬಾಲುರನ್ನು ನೋಡಲು ಸೆಲೆಬ್ರಿಟಿಗಳಷ್ಟೇ ಅಲ್ಲ, ಸಾಮಾನ್ಯ ಅಭಿಮಾನಿಗಳು ಸಾಲುಗಟ್ಟಿ ಅವರನ್ನು ಬೀಳ್ಕೊಟ್ಟರು. ದಾರಿಯಲ್ಲಿ ಸಾಗಿದ ಅವರ ಭಾರಕ್ಕೆ (ಪಾರ್ಥೀವ ಶರೀರಕ್ಕೆ) ಹೆಗಲುಕೊಟ್ಟರು. ಅವರು ಮೂಡಿಸಿಟ್ಟುಹೋದ ಹೆಗ್ಗುರುತುಗಳಲ್ಲಿ ಸಾಗಿ ಹಿಡಿಮಣ್ಣು ಹಾಕಿ ಧನ್ಯರಾದರು.

ಸಪ್ತಸ್ವರಗಳ ಮುದ್ದುಮಗನಾಗಿ ಐದು ದಶಕಗಳಿಗೂ ಹೆಚ್ಚು ಕಾಲ ಅಂಬೆಗಾಲಿಡುತ್ತಲೇ ಅನೇಕ ಭಾಷೆಗಳಲ್ಲಿ ನಲವತ್ತೈದು ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿ, ಶಿಖರದೆತ್ತರಕ್ಕೆ ಬೆಳೆದುನಿಂತಿದ್ದ ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ ಅವರು ಚೆನ್ನೈಗೆ ಅನತಿದೂರದಲ್ಲಿರುವ ತಾಮರೈಪಾಕಂನಲ್ಲಿ ಹೀಗೆ ಶಾಶ್ವತ ಚಿರನಿದ್ರೆಗೆ ಜಾರಿದರು.

ಕೋವಿಡ್‌ನಿಂದ ಪೊಲೀಸರ ಸೂಚನೆ ಮೇರೆಗೆ ತಮ್ಮ ತಮ್ಮ ಮನೆಗಳಿಂದಲೇ ದಕ್ಷಿಣ ಭಾರತದ ಸೆಲೆಬ್ರಿಟಿಗಳೆಲ್ಲ ಅಂತಿಮ ನಮನ ಸಲ್ಲಿಸಿದರೆ, ಅಭಿಮಾನಿಗಳು ಮಾತ್ರ ದಕ್ಷಿಣ ಭಾರತದ ಉದ್ದಗಲದಿಂದ ಬಂದು ಬೆಳಕರಿಯುವ ಹೊತ್ತಿಗೆ ತಾಮರೈಪಾಕಂನಲ್ಲಿರುವ ರೆಡ್‌ಹಿಲ್ಸ್‌ ಫಾರಂಹೌಸ್‌ ಮುಂದೆ ಜಾತ್ರೆಯಂತೆ ಸೇರಿದ್ದರು. ಬಾಲು ಅವರ ಕೊನೆಕ್ಷಣಗಳನ್ನು ಕಣ್ತುಂಬಿಕೊಂಡು ಭಾರವಾದ ಮನಸ್ಸಿನೊಂದಿಗೆ ವಾಪಸ್‌ ಹೊರಟರು.

Tamil Nadu: Last rites of singer SP Balasubrahmanyam being performed at Thamaraipakkam village of Thiruvallore district.

SP Balasubrahmanyam passed away yesterday. pic.twitter.com/jEdERZAzNV

— ANI (@ANI) September 26, 2020

ಅಂತಿಮ ವಿಧಿ

ಚೆನ್ನೈಗೆ ಸಮೀಪದ ತಿರುವಳ್ಳೂರ್ ಜಿಲ್ಲೆಯ ತಾಮರೈಪಾಕಂನಲ್ಲಿರುವ ರೆಡ್ ಹಿಲ್ಸ್ ಬಳಿಯ ತೋಟದಲ್ಲಿ ಬಾಲು ಅವರು ಮಣ್ಣು ಸೇರಿದರು. ಅದು ಅವರಿಗೆ ಅತ್ಯಂತ ಪ್ರಿಯವಾದ ತೋಟವಾಗಿತ್ತು. ಮೂಲತಃ ಆಂಧ್ರ ಪ್ರದೇಶದ ನೆಲ್ಲೂರಿನವರಾದ ಅವರ ಅಂತಿಮ ವಿಧಿವಿಧಾನಗಳು ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ನೆರೆವೇರಿದವು. ಅದಕ್ಕಾಗಿ ಹೈದರಾಬಾದಿನಿಂದ ಪುರೋಹಿತರ ತಂಡವನ್ನು ಕರೆಸಿಕೊಳ್ಳಲಾಗಿತ್ತು. ಬಾಲು ಅವರ ಪುತ್ರ ಎಸ್.ಪಿ.ಚರಣ್ ಅಂತಿಮ ವಿಧಿಗಳನ್ನು ನೆರೆವೇರಿಸಿದರು.

ಈ ಸಂದರ್ಭದಲ್ಲಿ ಬಾಲು ಅವರಿಗೆ ಸಕಲ ಸರಕಾರಿ ಗೌರವಗಳನ್ನು ಸಲ್ಲಿಸಲಾಯಿತು. ತಮಿಳುನಾಡು ಪೊಲೀಸರು ಮೂರು ಸುತ್ತಿನ ಕುಶಾಲುತೋಪು ಹಾರಿಸಿ ಅಂತಿಮ ಗೌರವ ಸಲ್ಲಿಸಿದರು

ಆಸ್ಪತ್ರೆಯಲ್ಲಿ ಹೋರಾಟ

ಕೋವಿಡ್‌ಗೆ ತುತ್ತಾಗಿದ್ದ ಬಾಲು ಅವರು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ತೀವ್ರಾ ನಿಗಾಘಟಕದಲ್ಲಿ ಒಂದೂವರೆ ತಿಂಗಳು ಚಿಕಿತ್ಸೆ ಪಡೆದಿದ್ದರು ಬಾಲು. ಚೇತರಿಸಿಕೊಂಡೆ ಎಂದು ವಿಡಿಯೋದಲ್ಲಿ ಹೇಳಿದ್ದ ಅವರು ಮತ್ತೆ ಆಸ್ಪತ್ರೆ ಸೇರಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಸೆಪ್ಟಂಬರ್ 25ರಂದು, ಅಂದರೆ ಗುರುವಾರ ಮಧ್ಯಾಹ್ನ 1.04ಕ್ಕೆ ಇಹಲೋಕ ತ್ಯಜಿಸಿದರು.

Thalapathy Vijay at the funeral of Singer #SPB pic.twitter.com/zyTWGJFFa3

— Ramesh Bala (@rameshlaus) September 26, 2020

ತಮಿಳು ಚಿತ್ರರಂಗದ ಸ್ಟಾರ್‌ನಟ ದಳಪತಿ ವಿಜಯ್‌, ಎಸ್‌ಪಿಬಿ ಅವರ ಚಿರಕಾಲದ ಮಿತ್ರ, ನಿರ್ದೇಶಕ ಭಾರತೀರಾಜಾ, ಗಾಯಕ ಮನು, ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್‌, ಹಾಸ್ಯನಟ ಮೈಲ್‌ಸಾಮಿ ಮುಂತಾದವರು ಬಾಲು ಅವರ ಅಂತಿಮ ದರ್ಶನ ಪಡೆದರು. ಇದೇ ವೇಳೆ ತೀವ್ರ ದುಃಖತಪ್ತರಾಗಿದ್ದ ಬಾಲು ಅವರ ಪತ್ನಿ ಸಾವಿತ್ರಿ, ಪುತ್ರಿ ಪಲ್ಲವಿ, ಸಹೋದರಿ ಎಸ್.ಪಿ. ಶೈಲಜಾ, ಭಾವಮೈದ ಹಾಗೂ ನಟ ಶುಭಲೇಖ ಸುಧಾಕರ್‌ ಮತ್ತು ಬಂಧುವರ್ಗದವರಿಗೆ ಬಂದಿದ್ದ ಗಣ್ಯರು ಸಾಂತ್ವನ ಹೇಳಿದರು.

ಮುಖ್ಯವಾಗಿ ಹೀರೋ ವಿಜಯ್‌ ಅವರು ಎಸ್.ಪಿ. ಚರಣ್‌ ಅವರಿಗೆ ಧೈರ್ಯ ತುಂಬಿದರಲ್ಲದೆ, ಬಾಲು ಅವರ ಅಂತಿಮ ವಿಧಿಗಳು ನಡೆಯುವವರೆಗೂ ಅಲ್ಲೇ ಇದ್ದು ಅಂತಿಮವಾಗಿ ಸಮಾಧಿಗೆ ಹಿಡಿಮಣ್ಣು ಅರ್ಪಿಸುವ ಮೂಲಕ ತಮ್ಮ ನೆಚ್ಚಿನ ಗಾಯಕನಿಗೆ ನಮನ ಸಲ್ಲಿಸಿದರು.

ಈ ವರದಿಯನ್ನು ಓದಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ…

ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ; ಹೃದಯವನ್ನೇ ಕೊರಳಾಗಿಸಿಕೊಂಡು ಹಾಡಿದ ಗಂಧರ್ವ
Tags: #spbpadmabhusn sp balasubrahmanyamsp balasubrahmanyamspbspb funeral
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ವಿಟಿ ವಿರುದ್ಧ ನಿಲ್ಲದ ಯುದ್ಧ ! ಸ್ವಾತಂತ್ರ್ಯಕ್ಕೆ ಏಳು ದಶಕ ಕಳೆದರೂ ದಾಸ್ಯವೆಂದರೆ ನಮಗೆ ಇಷ್ಟವೇಕೆ?

ವಿಟಿ ವಿರುದ್ಧ ನಿಲ್ಲದ ಯುದ್ಧ ! ಸ್ವಾತಂತ್ರ್ಯಕ್ಕೆ ಏಳು ದಶಕ ಕಳೆದರೂ ದಾಸ್ಯವೆಂದರೆ ನಮಗೆ ಇಷ್ಟವೇಕೆ?

Leave a Reply Cancel reply

Your email address will not be published. Required fields are marked *

Recommended

ಬರಪೀಡಿತ ಗುಡಿಬಂಡೆ ಈಗ ಜಲಪೀಡಿತ!

ಚಿಕ್ಕಬಳ್ಳಾಪುರ ಜನರಿಗೆ ಎಚ್ಚರಿಕೆ ಕೊಟ್ಟ ಎಸ್ಪಿ

4 years ago
ಕನ್ನಡ ಬಿಗ್‌ಬಾಸ್ ಸೀಸನ್ 3 ಸ್ಪರ್ಧಿ, ಕನ್ನಡ್ ಗೊತ್ತಿಲ್ಲ, ಉಪ್ಪು ಹುಳಿ ಖಾರ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಇನ್ನಿಲ್ಲ; ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ನಟಿ

ಕನ್ನಡ ಬಿಗ್‌ಬಾಸ್ ಸೀಸನ್ 3 ಸ್ಪರ್ಧಿ, ಕನ್ನಡ್ ಗೊತ್ತಿಲ್ಲ, ಉಪ್ಪು ಹುಳಿ ಖಾರ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಇನ್ನಿಲ್ಲ; ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ನಟಿ

5 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ