ಬಾಬರೀ ಮಸೀದಿ ನೆಲಸಮಕ್ಕೆ ಸಂಬಂಧಿಸಿದಂತೆ 28 ವರ್ಷಗಳ ನಂತರ ಐತಿಹಾಸಿಕ ತೀರ್ಪು ನೀಡಿರುವ ಸಿಬಿಐ ವಿಶೇಷ ನ್ಯಾಯಾಲಯ, ಪ್ರಕರಣದಲ್ಲಿ ಆರೋಪಿಗಳಾಗಿದ್ದ ಎಲ್.ಕೆ. ಆಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾ ಭಾರತಿ, ಕಲ್ಯಾಣ್ ಸಿಂಗ್, ವಿನಯ್ ಕಟಿಯಾರ್, ಸಾಕ್ಷಿ ಮಹಾರಾಜ್ ಸೇರಿ ಎಲ್ಲ 32 ಆರೋಪಿಗಳಿಗೂ ಕ್ಲೀನ್‌ಚಿಟ್ ನೀಡಿ ಖುಲಾಸೆಗೊಳಿಸಿದೆ.
ಬೆಂಗಳೂರು: ಇಡೀ ಭಾರತ ಬುಧವಾರ ಮತ್ತೊಂದು ಐತಿಹಾಸಿಕ ತೀರ್ಪಿಗೆ ಸಾಕ್ಷಿಯಾಯಿತು. 28 ವರ್ಷಗಳ ಹಿಂದೆ ಬಾಬರೀ ಮಸೀದಿ ನೆಲಸಮಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದ್ದು, ಪ್ರಕರಣದ ಅಷ್ಟೂ ಆರೋಪಿಗಳಿಗೆ ಕ್ಲೀನ್‌ಚಿಟ್ ನೀಡಿದೆ.
ಇದರೊಂದಿಗೆ ಬಾಬರಿ ಮಸೀದಿ ಪ್ರಕರಣದಲ್ಲಿ ಕ್ರಿಮಿನಲ್ ಕೇಸ್ ಎದುರಿಸುತ್ತಿದ್ದ ಎಲ್ಲ ಆರೋಪಿಗಳು ಖುಲಾಸೆಯಾಗಿ ನಿಟ್ಟುಸಿರು ಬಿಟ್ಟಿದ್ದಾರೆ. ಮಾಜಿ ಪ್ರಧಾನಿ ಎಲ್.ಕೆ. ಆಡ್ವಾಣಿ, ಕೇಂದ್ರದ ಮಾಜಿ ಸಚಿವರಾದ ಮುರಳಿ ಮನೋಹರ ಜೋಶಿ, ಉಮಾ ಭಾರತಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಸೇರಿ ಎಲ್ಲ 32 ಆರೋಪಿಗಳು ಆರೋಪಮುಕ್ತರಾಗಿದ್ದಾರೆ.
ಸುಪ್ರೀಂ ಕೋರ್ಟ್ ಅಯೋಧ್ಯೆಯ ಜಾಗ ಯಾರಿಗೆ ಸೇರಿದ್ದು ಎಂಬ ಬಗ್ಗೆ ಮಹತ್ತ್ವದ ಆದೇಶದ ನೀಡಿದ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರೆವೇರಿಸಿ ಒಂದು ತಿಂಗಳ ಐದು ದಿನಕ್ಕೆ (ಅಗಸ್ಟ್ 5, 2020) ಸರಿಯಾಗಿ ಈ ತೀರ್ಪು ಹೊರಬಿದ್ದಿದೆ. ಇದರೊಂದಿಗೆ ಸಿವಿಲ್ ಕೇಸ್ ಇತ್ಯರ್ಥದ ಬಳಿಕ ಕ್ರಿಮಿನಲ್ ಕೇಸ್ ಕೂಡ ಅಂತ್ಯ ಕಂಡಂತೆ ಆಗಿದೆ.
ಜತೆಗೆ, ಮಸೀದಿ ಧ್ವಂಸವು ಪೂರ್ವ ನಿಯೋಜಿತವಲ್ಲ, ಇದರ ಹಿಂದೆ ಯಾವ ಷಡ್ಯಂತ್ರವೂ ಇಲ್ಲವೆಂದು ನ್ಯಾಯಾಲಯ ಹೇಳಿದೆ.
ಬುಧವಾರ ಬೆಳಗ್ಗೆ 12 ಗಂಟೆ 30 ನಿಮಿಷದ ಹೊತ್ತಿಗೆ ಸರಿಯಾಗಿ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎಸ್.ಕೆ.ಯಾದವ್ ಅವರು ತಮ್ಮ ವೃತ್ತಿಜೀವನದ ಕೊನೆಯ ಹಾಗೂ ಇಡೀ ದೇಶವನ್ನು ತುದಿಗಾಲ ಮೇಲೆ ನಿಲ್ಲಿಸಿದ್ದ ಐತಿಹಾಸಿಕ ತೀರ್ಪನ್ನು ಓದಿದರು. ಸುಮಾರು ಎರಡು ಸಾವಿರ ಪುಟಗಳ ಪೈಕಿ ತೀರ್ಪಿನ ಸಾರಾಂಶವನ್ನಷ್ಟೇ ಅವರು ಕೋರ್ಟ್ ಹಾಲ್‌ನಲ್ಲಿ ಓದಿ ಹೇಳಿದರು.
ಪ್ರಕರಣದ ಒಟ್ಟು ಆರೋಪಿಗಳ ಪೈಕಿ ಸಾಕ್ಷಿ ಮಹಾರಾಜ್, ವಿನಯ್ ಕಟಿಯಾರ್ ಸೇರಿ 26 ಮಂದಿ ನ್ಯಾಯಾಲಯಕ್ಕೆ ಹಾಜರಗಿದ್ದರು. ಮಾಜಿ ಉಪ ಪ್ರಧಾನಿ ಹಾಗೂ ರಥಯಾತ್ರೆಯ ನೇತೃತ್ವ ವಹಿಸಿದ್ದ ಎಲ್.ಕೆ. ಆಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾ ಭಾರತಿ ವಿಡಿಯೋ ಕಾನ್ಫ್‌ರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರಾಗಿದ್ದರು.
1992 ಡಿಸೆಂಬರ್ 6ರಂದು ಅಯೋಧ್ಯೆಯನ್ನು ಸೇರಿಕೊಂಡಿದ್ದ ಅಸಂಖ್ಯಾತ ಕರಸೇವಕರು ಮಂದಿರವಿದ್ದ ಜಾಗದಲ್ಲಿದೆ ಎಂದು ಹೇಳಿ ಬಾಬರೀ ಮಸೀದಿಯನ್ನು ನೆಲಸಮ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆಸಲಾಗಿತ್ತಲ್ಲದೆ, ಅಂತಿಮ ತೀರ್ಪು ನೀಡುವ ದಿನ ಎಲ್ಲ 32 ಆರೋಪಿಗಳು ಖುದ್ದು ನ್ಯಾಯಾಲಯದಲ್ಲಿ ಹಾಜರಿ ಇರಬೇಕು ಎಂದು ನ್ಯಾಯಮೂರ್ತಿ ಯಾದವ್ ಅವರು ಇದೇ ಸೆಪ್ಟೆಂಬರ್ 16ರಂದು ಆದೇಶ ನೀಡಿದ್ದರು.
ಮಸೀದಿ ನೆಲಸಮಗೊಂಡ ವೇಳೆ ಉತ್ತರ ಪ್ರದೇಶದಲ್ಲಿ ಕಲ್ಯಾಣ್ ಸಿಂಗ್ ಮುಖ್ಯಮಂತ್ರಿಯಾಗಿದ್ದರು. ಸುಮಾರು ವರ್ಷ ಸುದೀರ್ಘ ತನಿಖೆ ನಡೆಸಿರುವ ಸಿಬಿಐ 351 ಸಾಕ್ಷಿಗಳನ್ನು, 600 ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತಲ್ಲದೆ, 48 ಮಂದಿ ವಿರುದ್ಧ ಆರೋಪ ಪಟ್ಟಿಯನ್ನು ಸಲ್ಲಿಸಿತ್ತು. ವಿಚಾರಣೆ ವೇಳೆಯಲ್ಲೇ 17 ಆರೋಪಿಗಳು ಮೃತಪಟ್ಟಿದ್ದರು.
ಆಡ್ವಾಣಿ ಸಂತಸ
ವಿಶೇಷ ನ್ಯಾಯಾಲಯದ ತೀರ್ಪುನಿಂದ ನನಗೆ ತುಂಬಾ ಸಂತಸವಾಗಿದೆ. ಇವತ್ತು ನಮ್ಮೆಲ್ಲರಿಗೂ ಅತ್ಯಂತ ಮಹತ್ತ್ವದ ದಿನವಾಗಿದೆ ಎಂದು ಆಡ್ವಾಣಿಯವರು ಪ್ರತಿಕ್ರಿಯಿಸಿದ್ದಾರೆ. ದೆಹಲಿಯ ಅವರ ನಿವಾಸದ ಬಳಿ, ಬಿಜೆಪಿ ಕಚೇರಿಯಲ್ಲಿ ಸಿಹಿ ಹಂಚಿ ಸಂಭ್ರಮಿಸಲಾಯಿತು. ಇದೇ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತೀರ್ಪನ್ನು ಸ್ವಾಗತಿಸಿದ್ದಾರೆ.
***
ತಮ್ಮ ರಥಯಾತ್ರೆಯ ಬಗ್ಗೆ ಸ್ವತಃ ಎಲ್.ಕೆ.ಆಡ್ವಾಣಿ ಅವರೇ ಬರೆದ, ಬಿ.ಎಸ್. ಜಯಪ್ರಕಾಶ ನಾರಾಯಣ ಕನ್ನಡಕ್ಕೆ ಅನುವಾದ ಮಾಡಿರುವ ವಿಶೇಷ ಲೇಖನವನ್ನೂ ಓದಿ.. ಕೆಳಗಿನ ಲಿಂಕ್ ಕ್ಲಿಕ್ ಮಾಡಿ…
The judgement is in the expected lines. Advani is the iron man of our times. He is the pioneer of anti-Congress, anti-appeasement and anti-dynasty politics. He and Murali Manohar Joshi changed the equations of Indian polity through their historic Rathayathra and Ekatha Yathra. Through this they built the BJP and they are still representing some great values like integrity, commitment towards a great cause and sincerity. Vajpayee helped the BJP as a crowd puller. Today’s BJP must be grateful to these three personalities. Advani is the really a towering personality who introduced aggressive politics based on dialogues. After he came to the forefront in late 1980’s it was the beginning of the Congress’ downfall. Kudos to Advani and Joshi.
Historical day in the history of India. Adavani is the real hero who changed the political course of the nation and pioneer of anti-Congress, anti-appeasement and anti-dynasty politics. Good news coverage from You. Thanks for recalling my translation too.