• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS STATE

ಈ ರಾಜ್ಯೋತ್ಸವಕ್ಕೆ ಕುವೆಂಪು ಸಮಗ್ರ ಸಾಹಿತ್ಯದ 12,000 ಪುಟಗಳ ಎಂಟು ಸಂಪುಟದ ಮುದ್ರಣ, ಡಿಜಿಟಲ್‌ ಆವೃತ್ತಿ ಲೋಕಾರ್ಪಣೆ

cknewsnow desk by cknewsnow desk
November 1, 2020
in STATE
Reading Time: 2 mins read
0
ಈ ರಾಜ್ಯೋತ್ಸವಕ್ಕೆ ಕುವೆಂಪು ಸಮಗ್ರ ಸಾಹಿತ್ಯದ 12,000 ಪುಟಗಳ ಎಂಟು ಸಂಪುಟದ ಮುದ್ರಣ, ಡಿಜಿಟಲ್‌ ಆವೃತ್ತಿ ಲೋಕಾರ್ಪಣೆ
925
VIEWS
FacebookTwitterWhatsuplinkedinEmail
ಹಂಪಿ ವಿವಿ ಕುಲಪತಿ ಪ್ರೊ.ಎಸ್.ರಮೇಶ್‌, ಡಾ.ಸಿ.ಎನ್.ಅಶ್ವತ್ಥನಾರಾಯಣ, ಭಾಷಿಣಿ ಡಿಜಿಟಲ್‌ ಸಂಸ್ಥೆಯ ಡಾ.ಶಿವಕುಮಾರ್, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕುಲಪತಿ ಪ್ರೊ.ಕರಿಸಿದ್ದಪ್ಪ.

ಆರಂಭ ಹಂತದಿಂದಲೇ ಕನ್ನಡ ಕಲಿಕೆ;
ಶಿಕ್ಷಣ ನೀತಿಯೊಂದಿಗೆ ಜಾರಿ ಎಂದ ಡಿಸಿಎಂ

ಬೆಂಗಳೂರು: ಕನ್ನಡ ರಾಜ್ಯೋತ್ಸವ ನಿಮಿತ್ತ ಸಮಸ್ತ ಕನ್ನಡಿಗರಿಗೆ ಅಪರೂಪದ ಕಾಣಿಕೆಯಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯವು ಸಂಪಾದಿಸಿ ಹೊರತಂದಿರುವ ರಾಷ್ಟ್ರಕವಿ ಕುವೆಂಪು ಅವರ ಸಮಗ್ರ ಸಾಹಿತ್ಯದ ಮೊದಲ ಎಂಟು ಸಂಪುಟಗಳ ಮುದ್ರಣ ಮತ್ತು ಡಿಜಿಟಲ್‌ ಆವೃತ್ತಿಗಳನ್ನು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಬೆಂಗಳೂರಿನಲ್ಲಿ ಭಾನುವಾರ ಲೋಕಾರ್ಪಣೆ ಮಾಡಿದರು.

ನಾಲ್ವರು ಕುಲಪತಿಗಳ ಅಧಿಕಾರ ಅವಧಿಯಲ್ಲಿ ಸಾಗಿದ ಈ ಯೋಜನೆಗೆ ಉಪ ಮುಖ್ಯಮಂತ್ರಿ ವೇಗ ನೀಡಿದ್ದರಲ್ಲದೆ, ಸ್ವತಃ ಕಾಳಜಿ ವಹಿಸಿ ಮೊದಲ ಎಂಟು ಸಂಪುಟಗಳು ಹೊರಬರುವಂತೆ ಮಾಡಿದ್ದಾರೆ. ಉಳಿದ ಹತ್ತು ಸಂಪುಟಗಳನ್ನು ಆದಷ್ಟು ಬೇಗ ಹೊರತರುವುದಾಗಿ ಅವರು ಹೇಳಿದರಲ್ಲದೆ, ಈ ರಾಜ್ಯೋತ್ಸವಕ್ಕೆ ಕನ್ನಡಿಗರಿಗೆ ನೀಡುತ್ತಿರುವ ಅತ್ಯುತ್ತಮ ಕೊಡುಗೆ ಇದಾಗಿದೆ ಎಂದರು.

ಹಂಪಿ ವಿವಿ ಕುಲಪತಿ ಪ್ರೊ.ಎಸ್.ರಮೇಶ್‌, ಡಾ.ಸಿ.ಎನ್.ಅಶ್ವತ್ಥನಾರಾಯಣ.

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕನ್ನಡಕ್ಕೆ ಒತ್ತು

ಕಾರ್ಯಕ್ರಮದಲ್ಲಿ ಭಾಗವಹಿಸಿ ಡಿಸಿಎಂ ಅವರಿಗೂ ಮೊದಲು ಮಾತನಾಡಿದ ವಿಶ್ರಾಂತ ನ್ಯಾಯಮೂರ್ತಿ ಎ.ಜೆ.ಸದಾಶಿವ ಅವರು, “ಪ್ರಾಥಮಿಕ ಶಿಕ್ಷಣ ಹಂತದಿಂದಲೇ ಕನ್ನಡವನ್ನು ಕಡಾಯವಾಗಿ ಬೋಧನೆ ಮಾಡಬೇಕು” ಎಂದು ಸಲಹೆ ಮಾಡಿದರು. ಈ ಸಲಹೆಗೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಸಿಯಿಸಿದ ಡಾ.ಅಶ್ವತ್ಥನಾರಾಯಣ; “ಪ್ರಾಥಮಿಕ ಶಿಕ್ಷಣ ಹಂತದಿಂದ ಅಲ್ಲ, ಶಿಶು ವಿಹಾರದ ಹಂತದಿಂದಲೇ ಕನ್ನಡ ಕಲಿಸುವ ಪ್ರಯತ್ನ ಆರಂಭವಾಗುತ್ತಿದೆ. ಆಯಾ ರಾಜ್ಯದ, ಅಂದರೆ; ಪ್ರಾದೇಶಿಕ ಭಾಷೆಯಲ್ಲಿಯೇ ಕಿರಿಯ ಮತ್ತು ಪ್ರಾಥಮಿಕ ಶಿಕ್ಷಣ ನೀಡಬೇಕು ಎಂಬ ಅಂಶ ಕೇಂದ್ರ ಸರಕಾರ ಪ್ರಕಟಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಡಕವಾಗಿದೆ. ರಾಜ್ಯ ಸರಕಾರವೂ ಶೀಘ್ರದಲ್ಲಿಯೇ ಈ ನೀತಿಯನ್ನು ಹಂತಹಂತವಾಗಿ ಜಾರಿಗೆ ತರಲು ನಿರ್ಧರಿಸಿ ಹೆಜ್ಜೆ ಇಟ್ಟಿದೆ” ಎಂದು ಪ್ರಕಟಿಸಿದರು.

ಬಾಲ್ಯದಲ್ಲಿ, ಅಂದರೆ; 3ರಿಂದ 6ವರ್ಷದ ವಯೋಮಿತಿಯ ಮಕ್ಕಳಿಗೆ 13 ಭಾಷೆಗಳನ್ನು ಕಲಿಯುವ ಸಾಮರ್ಥ್ಯ ಇರುತ್ತದೆ. ಅದಕ್ಕೆ ಸರಕಾರ ಆಗತ್ಯ ವೇದಿಕೆ ಕಲ್ಪಿಸಬೇಕಿದೆ. ಅದನ್ನು ಶಿಕ್ಷಣ ನೀತಿ ಜಾರಿ ಮೂಲಕ ಸರಕಾರ ಮಾಡುತ್ತಿದೆ.

ಕನ್ನಡಕ್ಕೆ ತಂತ್ರಜ್ಞಾನದ ಬಲ

ಕನ್ನಡಕ್ಕೆ ಸದೃಢವಾದ ನೆಲೆ ಇದೆ. ನಮ್ಮ ಭಾಷೆಯನ್ನು ಮಾತನಾಡುವ ಅಗಾಧ ಜನಸಮೂಹವಿದೆ. ದೊಡ್ಡ ಪ್ರಮಾಣದ ಶ್ರೇಷ್ಟ ಸಾಹಿತ್ಯವಿದೆ. ಇಂಥ ಭಾಷೆಗೆ ತಂತ್ರಜ್ಞಾನವೂ ಜತೆಯಾದರೆ, ಕನ್ನಡಕ್ಕಾಗಿ ಇನ್ನೂ ಅನೇಕ ಅದ್ಭುತ ಕೆಲಸಗಳು ಆಗಲಿವೆ. ಇದಕ್ಕೆ ಬೇಕಾದ ಎಲ್ಲ ಸಹಕಾರವನ್ನು ನೀಡಲು ಸರಕಾರ ಸದಾ ಸಿದ್ಧವಿದೆ ಎಂದರು ಡಿಸಿಎಂ.

ಬೆಂಗಳೂರಿನಲ್ಲಿ ಹಂಪಿ ವಿವಿ ಕ್ಯಾಂಪಸ್‌

ರಾಜಧಾನಿ ಬೆಂಗಳೂರಿನಲ್ಲೂ ಹಂಪಿ ವಿಶ್ವವಿದ್ಯಾಲಯದ ಕ್ಯಾಂಪಸ್‌ ಮಾಡಿ ಎಂದು ಇದೇ ವೇಳೆ ವಿವಿ ಕುಲಪತಿ ಪ್ರೊ.ಎಸ್.ರಮೇಶ್‌ ಅವರಿಗೆ ಸೂಚಿಸಿದ ಅವರು; ಈಗಾಗಲೇ 12 ಎಕರೆ ಭೂಮಿ ಇದೆ. ನೀವು ಯೋಜನೆಯನ್ನು ಹಾಕಿಕೊಳ್ಳಿ, ಅಗತ್ಯಬಿದ್ದರೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಸಹಯೋಗದಲ್ಲಿ ಮಾಡಿ. ಇಲ್ಲವಾದರೆ ಸ್ವತಂತ್ರ್ಯವಾಗಿಯೇ ಮಾಡಿ. ಸರಕಾರ ನಿಮ್ಮ ಜತೆಯಲ್ಲಿರುತ್ತದೆ ಎಂದು ಉಪ ಮುಖ್ಯಮಂತ್ರಿಗಳು ಹಂಪಿ ಕುಲಪತಿಗೆ ಭರವಸೆ ನೀಡಿದರು.

advt

ಕಾರ್ಯಕ್ರಮದಲ್ಲಿ ಮೊದಲು ಕುವೆಂಪು ಸಮಗ್ರ ಸಂಪುಟಗಳ ಸಂಪಾದಕ ಡಾ.ಕೆ.ಸಿ.ಶಿವಾರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ಸಂಸ್ಕೃತ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ವೆಂಕಟೇಶ್‌, ಹಂಪಿ ವಿವಿ ಕುಲಪತಿ ಪ್ರೊ.ಎಸ್.ರಮೇಶ್‌, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕುಲಪತಿ ಪ್ರೊ.ಕರಿಸಿದ್ದಪ್ಪ, ವಿಶ್ರಾಂತ ನ್ಯಾಯಮೂರ್ತಿ ಎ.ಜೆ.ಸದಾಶಿವ ಮಾತನಾಡಿದರು. ಆನ್‌ಲೈನ್‌ ಮೂಲಕ ಮೈಸೂರಿನ ಉದಯರವಿಯಿಂದಲೇ ಸಭೆಯಲ್ಲಿ ಭಾಗಿಯಾಗಿದ್ದ ವಿಶ್ರಾಂತ ಕುಲಪತಿ ಹಾಗೂ ಕುವೆಂಪು ಅವರ ಅಳಿಯ ಡಾ.ಚಿದಾನಂದ ಗೌಡ, ಅವರ ಪತ್ನಿ ಹಾಗೂ ಕುವೆಂಪು ಅವರ ಪುತ್ರಿ ತಾರಿಣಿ ಇಬ್ಬರೂ ಮಾತನಾಡಿದರು. ಹಾಗೆಯೇ ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿ ಹಾಗೂ ಡಿಜಿಟಲ್‌ ಕನ್ನಡಕ್ಕಾಗಿ ಅನೇಕ ಆವಿಷ್ಕಾರಗಳನ್ನು ಮಾಡುತ್ತಿರುವ ಡಾ.ಎ.ಜಿ.ರಾಮಕೃಷ್ಣನ್‌; ತಂತ್ರಜ್ಞಾನದಲ್ಲಿ ಕನ್ನಡಕ್ಕಾಗಿ ಐಐಎಸ್‌ಸ್ಸಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ಬಗ್ಗೆ ಬೆಳಕು ಚೆಲ್ಲಿದರು. ಕನ್ನಡ ತಾಂತ್ರಿಕ ಅಭಿವೃದ್ಧಿ ಮಂಡಳಿ ವಿಷನ್‌ ಗ್ರೂಪ್‌ ಅಧ್ಯಕ್ಷ ಡಾ.ಸಮೀರ್‌ ಕಾಗಲ್ಕರ್‌, ಜಗತ್ತಿನ ಇತರೆ ಭಾಷೆಗಳ ಜನರಿಗೂ ಕನ್ನಡ ಸಾಹಿತ್ಯವನ್ನು ಮುಟ್ಟಿಸುವುದ್ಹೇಗೆ ಎಂಬ ಬಗ್ಗೆ ಮಾತನಾಡಿದರು.

ಒಂದೇ ವಾರದಲ್ಲಿ ಸಿದ್ಧವಾದ ಡಿಜಿಟಲ್‌ ಆವೃತ್ತಿ

ಭಾಷಿಣಿ ಡಿಜಿಟಲ್‌ ಸಂಸ್ಥೆಯ ಡಾ.ಶಿವಕುಮಾರ್‌ ಮತ್ತು ಭಾರ್ಗವಿ ಅವರ ಶ್ರಮದಿಂದ ಕೇವಲ ಒಂದೇ ವಾರದಲ್ಲಿ 12 ಸಂಪುಟಗಳ 12,000 ಪುಟಗಳ ಕುವೆಂಪು ಸಾಹಿತ್ಯದ ಡಿಜಿಟಲ್‌ ಆವೃತ್ತಿ ಸಿದ್ಧವಾಗಿದೆ. ಅದರ ಬಳಕೆ, ಓದು ಅತ್ಯಂತ ಸರಳವಾಗಿದೆ.

ರಾಜ್ಯೋತ್ಸವದ ನಿಮಿತ್ತ ಹಂಪಿ ವಿವಿ ತನ್ನೆಲ್ಲ ಪುಸ್ತಕಗಳನ್ನು ಶೇ.50ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದ್ದು, ಈಗ ಬಿಡುಗಡೆ ಆಗಿರುವ ಕುವೆಂಪು ಸಮಗ್ರ ಸಾಹಿತ್ಯ ಸಂಪುಟವು 5 ಸಾವಿರ ರೂ.ಗಳಿಗೆ ಲಭ್ಯವಿದೆ ಎಂದು ಇದೇ ವೇಳೆ ಕುಲಪತಿ ಪ್ರೊ. ರಮೇಶ್‌ ಪ್ರಕಟಿಸಿದರು.

Tags: kannadakarnatakakuvempurajyotsava2020
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಹಿತವಾದ ಸುದ್ದಿ!; ಕನ್ನಡಕ್ಕೆ ಬರಲಿದೆ ಎಸ್ಪಿಬಿ, ಲಕ್ಷ್ಮೀ ನಟನೆಯ ದೃಶ್ಯಕಾವ್ಯ ಮಿಥುನಂ

ಹಿತವಾದ ಸುದ್ದಿ!; ಕನ್ನಡಕ್ಕೆ ಬರಲಿದೆ ಎಸ್ಪಿಬಿ, ಲಕ್ಷ್ಮೀ ನಟನೆಯ ದೃಶ್ಯಕಾವ್ಯ ಮಿಥುನಂ

Leave a Reply Cancel reply

Your email address will not be published. Required fields are marked *

Recommended

ಸಿಇಟಿ ಪರೀಕ್ಷೆಗೆ ಸಮಸ್ಯೆ ಇಲ್ಲ; ಹೈಕೋರ್ಟ್’ಗೆ ಇಂದು ಸರಕಾರದಿಂದ ಅಹವಾಲು

ಸಿಇಟಿ ಪರೀಕ್ಷೆಗೆ ಸಮಸ್ಯೆ ಇಲ್ಲ; ಹೈಕೋರ್ಟ್’ಗೆ ಇಂದು ಸರಕಾರದಿಂದ ಅಹವಾಲು

6 years ago
ದೇವರಾಜ ಅರಸು ಆಶಯ ಉಲ್ಟಾ ಮಾಡಿದ ಬಿಜೆಪಿ!!

ಜಾತಿ ಗಣತಿ ವರದಿ ಸಲ್ಲಿಕೆಗೆ ಆಯೋಗಕ್ಕೆ ಸಿಎಂ ಸೂಚನೆ

3 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ