• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS STATE

ಚಿಕ್ಕಬಳ್ಳಾಪುರ, ಕೋಲಾರ ಸೇರಿ 7 ಜಿಲ್ಲೆಗಳಲ್ಲಿ ಹಳದಿ ಅಲರ್ಟ್;‌ ಭತ್ತ, ರಾಗಿ, ತರಕಾರಿ ರೈತರಿಗೆ ಸಂಕಷ್ಟ

cknewsnow desk by cknewsnow desk
November 26, 2020
in STATE
Reading Time: 1 min read
0
ಚಿಕ್ಕಬಳ್ಳಾಪುರ, ಕೋಲಾರ ಸೇರಿ 7 ಜಿಲ್ಲೆಗಳಲ್ಲಿ ಹಳದಿ ಅಲರ್ಟ್;‌ ಭತ್ತ, ರಾಗಿ, ತರಕಾರಿ ರೈತರಿಗೆ ಸಂಕಷ್ಟ
916
VIEWS
FacebookTwitterWhatsuplinkedinEmail
Lead Photo: CKPhotography ಸಿಕೆಪಿ@ckpixels

ಬೆಂಗಳೂರು: ಬುಧವಾರ ಮಧ್ಯರಾತ್ರಿಗೆ ಮುನ್ನವೇ ಪುದುಚೆರಿ ಬಳಿ ಭೂಮಿಗೆ ಅಪ್ಪಳಿಸಿರುವ ನಿವಾರ್‌ ಚಂಡಮಾರುತವು ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ರಾಜ್ಯದ ಏಳು ಜಿಲ್ಲೆಗಳಲ್ಲಿ ಭಾರೀ ಮಳೆಗೆ ಕಾರಣವಾಗಿದ್ದು, ಈ ಎಲ್ಲ ಜಿಲ್ಲೆಗಳ ರೈತರು ತೀವ್ರ ಕಂಗಾಲಾಗಿದ್ದಾರೆ.

ಈಗಾಗಲೇ ರಾಜ್ಯದ ಏಳೂ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆಯು ಹಳದಿ ಅಲರ್ಟ್​ ಘೋಷಣೆ ಮಾಡಿದೆ. ಈ ನಡುವೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ತುಮಕೂರು, ರಾಮನಗರ ಜಿಲ್ಲೆಗಳಲ್ಲಿ ಗುರುವಾರದಂದು ಹಳದಿ ಅಲರ್ಟ್​ ಘೋಷಿಸಲಾಗಿದೆ.

ಈ ಚಂಡಮಾರುತದ ಗಾಳಿಯು ಕೋಲಾರ ಜಿಲ್ಲೆಯ ಕೆಜಿಎಫ್‌ ಮೂಲಕ ರಾಜ್ಯವನ್ನು ಪ್ರವೇಶ ಮಾಡಿದ್ದು; ತಮಿಳುನಾಡು-ಆಂಧ್ರ ಪ್ರದೇಶದ ಗಡಿ ತಾಲ್ಲೂಕುಗಳಾದ ಬಂಗಾರಪೇಟೆ, ಮಾಲೂರು, ಮುಳಬಾಗಿಲು ಮತ್ತು ಶ್ರೀನಿವಾಸಪುರ ಸೇರಿದಂತೆ ಎಲ್ಲ ತಾಲ್ಲೂಕುಗಳಲ್ಲೂ ವ್ಯಾಪಕ ಮಳೆಯಾಗುತ್ತಿದೆ. ಅದೇ ಬುಧವಾರ ಮಧ್ಯರಾತ್ರಿಯಿಂದಲೇ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಮೊದಲೇ ಚಳಿಗಾಲ, ಅದಕ್ಕೆ ಸೈಕ್ಲೋನ್‌ ಕೂಡ ಸೇರಿದ್ದರಿಂದ ವಾತಾವರಣ ಇನ್ನಷ್ಟು ತಂಪಾಗಿದೆ. ಹೀಗಾಗಿ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಜನರು ಮನೆಗಳಲ್ಲಿಯೇ ಉಳಿದುಕೊಂಡಿದ್ದಾರೆ.

ಮೊದಲೇ ಕೋವಿಡ್‌ ಭೀತಿ, ಇನ್ನೊಂದೆಡೆ ಮಳೆ ಬೀಳುತ್ತಿರುವುದರಿಂದ ಜನರು ಹೊರಗೆ ಬರುತ್ತಿಲ್ಲ. ಈಗಾಗಲೇ ಆರಂಭವಾಗಿರುವ ಪದವಿ ಕಾಲೇಜುಗಳತ್ತ ವಿದ್ಯಾರ್ಥಿಗಳು ಸುಳಿಯುತ್ತಿಲ್ಲ. ಮುಖ್ಯವಾಗಿ, ವೃದ್ಧರು ಮತ್ತು ಮಕ್ಕಳು ಚಳಿಗೆ ತತ್ತರಿಸುವಂಥ ಪರಿಸ್ಥಿತಿ ಉಂಟಾಗಿದೆ. ನಿವಾರ್ ಕಾರಣಕ್ಕೆ ತಮಿಳುನಾಡಿನಲ್ಲಿ ಸರಕಾರಿ ರಜೆ ಘೋಷಿಸಲಾಗಿದ್ದು, ಅದೇ ರೀತಿ ಕರ್ನಾಟಕದ ಗಡಿ ತಾಲ್ಲೂಕುಗಳಲ್ಲೂ ಇಂಥದ್ದೇ ಪರಿಸ್ಥಿತಿ ಇದೆ.

Karnataka: Bengaluru witnesses cloudy weather and light showers.

The India Meteorological Department has predicted generally cloudy sky with moderate rain in the city. #CycloneNivar pic.twitter.com/STxqYKMsj5

— ANI (@ANI) November 26, 2020

ಇನ್ನು ಬೆಂಗಳೂರಿನಲ್ಲಿ ಕಳೆದ ರಾತ್ರಿಯಿಂದಲೇ ಮಳೆ ಸುರಿಯುತ್ತಿದೆ. ವಾತಾವರಣದಲ್ಲಿ ಉಷ್ಣಾಂಶ ಗಣನೀಯವಾಗಿ ತಗ್ಗಿರುವುದರಿಂದ ಚಳಿಯೂ ಹೆಚ್ಚಾಗಿದೆ. ಒಂದು ಕುಂಭದ್ರೋಣ ಮಳೆ ಸುರಿದರೆ ತಗ್ಗುಪ್ರದೇಶಗಳಿಗೆ ನೀರು ನುಗದಗುವುದು ಖಚಿತ. ಅಂಥ ಪರಿಸ್ಥಿತಿನ್ನು ಎದುರಿಸಲು ಬಿಬಿಎಪಿ ಸಜ್ಜಾಗಿದೆ.

Severe Cyclonic Storm “NIVAR” weakened into a Cyclonic Storm over north coastal Tamilnadu.The Cyclonic Storm ‘NIVAR’ would continue to move northwestwards and weaken further into a Deep Depression during next 06 hours and into a depression by subsequent 06 hours. pic.twitter.com/RxhbZ6Ix1O

— India Meteorological Department (@Indiametdept) November 26, 2020

ಹವಮಾನ ಇಲಾಖೆಯ ಮಾಹಿತಿಯಂತೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲೇ ಹೆಚ್ಚು ಮಳೆಯಾಗಲಿದೆ. ಮಧ್ಯಾಹ್ನ ಎರಡು ಗಂಟೆ ಹೊತ್ತಿಗೆ ಬೆಂಗಳೂರು ನಗರದಲ್ಲಿ ಸಣ್ಣಗೆ ಸೋನೆಯಂತೆ ಸುರಿಯುತ್ತಿದ್ದ ಮಳೆ ಪಕ್ಕದ ಆ ಎರಡು ಜಿಲ್ಲೆಗಳಲ್ಲಿ ಗಾಳಿಮಿಶ್ರಿತವಾಗಿ ಅಬ್ಬರಿಸುತ್ತಿತ್ತು. ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ದಾಟಿಕೊಂಡು ತುಮಕೂರು ಜಿಲ್ಲೆಯ ಪಾವಗಢ, ಆಂಧ್ರದ ಅನಂತಪುರ ಜಿಲ್ಲೆಗಳತ್ತ ಸಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

ಪುದುಚೆರಿ, ತಮಿಳುನಾಡು, ಆಂಧ್ರ ತತ್ತರ

ಈ ಮೊದಲೇ ಅಂದಾಜು ಮಾಡಿದಂತೆ ನಿವಾರ್‌ ಚಂಡಮಾರುತವು ಪುದುಚೆರಿ ಬಳಿ ಭೂಮಿಗೆ ಅಲ್ಲಳಿಸಿದೆ. ಮಂಗಳವಾರದಿಂದಲೇ ತತ್ತರಿಸಿದ್ದ ಈ ಪ್ರದೇಶಗಳಲ್ಲಿ ಬೂಧವಾರವೂ ಭಾರೀ ಗಾಳಿಮಿಶ್ರಿತ ಮಳೆಯಾಗಿತ್ತು. ಗುರುವಾರ ಅದರ ರಭಸ ಮತ್ತಷ್ಟು ಹೆಚ್ಚಿದ ಪರಿಣಾಮ ವಿದ್ಯುತ್‌, ಸಂಚಾರ ಎಲ್ಲವುಗಳೂ ಅಸ್ತವ್ಯಸ್ತವಾಗಿವೆ. ಹವಾಮಾನ ಇಲಖೆ ಮಾಹಿತಿಯಂತೆ ಶುಕ್ರವಾರವೂ ಮಳೆ ಮುಂದುವರಿಯಲಿದೆ. ಶನಿವಾರ ಅಥವಾ ಭಾನುವಾರದವರೆಗೂ ಈಲ್ಲಿನ ಜನರಿಗೆ ಸೂರ್ಯದರ್ಶನ ಆಗವುದು ಕಷ್ಟ ಎನ್ನುವ ಮಾಹಿತಿ ಇದೆ.

ಇನ್ನೊಂದೆಡೆ ತೀರ ಪ್ರದೇಶದಲ್ಲಿ ಬಸ್‌ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಗಾಳಿ ಸುಮಾರು 160 ಕಿ.ಮೀ ಹೆಚ್ಚು ವೇಗದಲ್ಲಿ ಬೀಸುತ್ತಿರುವುದರಿಂದ ರಸ್ತೆಗಳಲ್ಲಿ ಬಸ್‌ಗಳು ಹಾರಿಹೋಗುವ ಅಪಾಯಕ್ಕೆ ತುತ್ತಾಗಿವೆ.

ನಿವಾರ್ ಅಪ್ಪಳಿಸಿದ ರಭಸಕ್ಕೆ ಪುದುಚೆರಿಯಲ್ಲಿ ಅನೇಕ ಸಾವು-ನೋವು ಉಂಟಾಗಿರುವ ಬಗ್ಗೆ ಮಾಹಿತಿ ಬಂದಿದೆ. ಇನ್ನೊಂದೆಡೆ ಅನೇಕರು ಕಣ್ಮರೆಯಾಗಿದ್ದಾರೆ ಎಂಬ ಅನುಮಾನವಿದೆ. ಚಂಡಮಾರುತವನ್ನು ಎದುರಿಸಲು ಎಲ್ಲ ರೀತಿಯ ಸನ್ನದ್ಧತೆ ಮಾಡಿಕೊಂಡಿದ್ದರೂ ಸಾವು-ನೋವು ಉಂಟಾಗಿರುವ ಬಗ್ಗೆ ಪುದುಚೆರಿ ಮುಖ್ಯಮಂತ್ರಿ ನಾರಾಯಣಸ್ವಾಮಿ ದುಃಖ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಚಂಡಮಾರುತ ಕಾರಣಕ್ಕೆ ಪುದುಚೆರಿ, ಕಾರೈಕಲ್‌, ತಿರುನಲ್ಲಾರ್‌, ನವಗ್ರಹ ಕ್ಷೇತ್ರಗಳಿಗೆ ಬರುವ ಭಕ್ತರಿಗೆ ಯಾತ್ರೆಯನ್ನು ಮುಂದೂಡುವಂತೆ ಪುದುಚೆರಿ ಪ್ರವಾಸೋದ್ಯಮ ಇಲಾಖೆ ಮನವಿ ಮಾಡಿದೆ.

ತಿರುಪತಿ ಜಲಾವೃತ

ನಿರೀಕ್ಷೆಯಂತೆ ತಿರುಮಲ ತಿರುಪತಿಯಲ್ಲಿ ಕಳೆದ ಮಧ್ಯರಾತ್ರಿಯಿಂದಲೇ ಕುಂಭದ್ರೋಣ ಮಳೆಯಾಗುತ್ತಿದೆ. ಪರಿಣಾಮವಾಗಿ ನಗರದ ಎಲ್ಲ ರಸ್ತೆಗಳು ಸಂಪೂರ್ಣವಾಗಿ ಜಲಾವೃತವಾಗಿದ್ದು, ಮನೆಗಳಿಗೆ ನೀರು ನುಗ್ಗಿದೆ. ಇನ್ನು, ಶ್ರೀ ಗೋವಿಂದರಾಜುಲು ಸ್ವಾಮಿ ದೇವಾಲಯದ ಹತ್ತಿರವೂ ರಾಜಕಾಳುವೆಯೊಂದು ಉಕ್ಕಿ ಭಕ್ತರಿಗೆ ತೀವ್ರ ಸಂಕಷ್ಟ ಸೃಷ್ಟಿಸಿದೆ. ಇನ್ನು ಮುಖ್ಯವಾಗಿ ತಿರುಪತಿಯಿಂದ ತಿರುಮಲಕ್ಕೆ, ವಿಮಾನ ನಿಲ್ದಾಣಕ್ಕೆ ಹಾಗೂ ಶ್ರೀಕಾಳಹಸ್ತಿಗೆ ಸಂಪರ್ಕ ಕಲ್ಪಿಸುವ ಕರಕಂಬಾಡಿ ಮುಖ್ಯರಸ್ತೆಯು ಪೂರ್ಣ ಜಲಾವೃತವಾಗಿ ನೀರು ನದಿಯಂತೆ ಹರಿಯುತ್ತಿದೆ. ತಿರುಮಲದಲ್ಲಿ ಮಳೆ ಎಡೆಬಿಡದೇ ಸುರಿಯುತ್ತಿದ್ದು, ಹೀಗಾಗಿ ಭಕ್ತರ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ.

  • ಕೆಳಗಿನ ಸುದ್ದಿ ಓದಲು ಓ ಲಿಂಕ್‌ ಕ್ಲಿಕ್‌ ಮಾಡಿ…
ತಿರುಮಲದಲ್ಲಿ ನಿವಾರ್‌ ಅಬ್ಬರಕ್ಕೆ ಭಕ್ತರು ತತ್ತರ; ಇನ್ನೂ 3 ದಿನ ತಮಿಳುನಾಡು ಕಡೆ ಹೋಗಲೇಬೇಡಿ

Tags: chikkaballapurkolarnivar Cyclonetamilnadutirumala
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
5000 ವರ್ಷದ ಬಾಗೇಪಲ್ಲಿ ಪಟ್ಟಣ ಭಾಗ್ಯನಗರ ಆಗಬೇಕು ಎಂದರೆ ಹೇಗೆ? ಹೆಸರಷ್ಟೇ ಬದಲಿಸಿಬಿಟ್ಟರೆ ಸಾಕೆ?

5000 ವರ್ಷದ ಬಾಗೇಪಲ್ಲಿ ಪಟ್ಟಣ ಭಾಗ್ಯನಗರ ಆಗಬೇಕು ಎಂದರೆ ಹೇಗೆ? ಹೆಸರಷ್ಟೇ ಬದಲಿಸಿಬಿಟ್ಟರೆ ಸಾಕೆ?

Leave a Reply Cancel reply

Your email address will not be published. Required fields are marked *

Recommended

ಬನ್ನೇರುಘಟ್ಟ ರಾಷ್ಟ್ರೀಯ ಜೈವಿನ ಉದ್ಯಾನವನದಲ್ಲಿ ಸಿಂಹದ ಮರಿ ದತ್ತು ಪಡೆದು ಅದಕ್ಕೆ ತಂದೆ ಹೆಸರಿಟ್ಟ ನಟ ವಸಿಷ್ಠ ಸಿಂಹ

ಬನ್ನೇರುಘಟ್ಟ ರಾಷ್ಟ್ರೀಯ ಜೈವಿನ ಉದ್ಯಾನವನದಲ್ಲಿ ಸಿಂಹದ ಮರಿ ದತ್ತು ಪಡೆದು ಅದಕ್ಕೆ ತಂದೆ ಹೆಸರಿಟ್ಟ ನಟ ವಸಿಷ್ಠ ಸಿಂಹ

4 years ago
ರಾಜಧಾನಿಯಲ್ಲಿ ಭೀಮಗರ್ಜನೆ

ರಾಜಧಾನಿಯಲ್ಲಿ ಭೀಮಗರ್ಜನೆ

3 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ