• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home KOLAR

ಪಶ್ಚಿಮ ಬಂಗಾಳದ ಹೌರಾಕ್ಕೆ ನಮ್ಮ ಕೋಲಾರದ ಟೊಮೆಟೊ ಟ್ರೈನ್ ಲಿಫ್ಟ್‌; ಬೆಳೆಗಾರರು ಖುಷಿಯಿಂದ ಹೌಹಾರಬೇಕಿಲ್ಲ

P K Channakrishna by P K Channakrishna
December 6, 2020
in KOLAR, STATE
Reading Time: 1 min read
0
ಪಶ್ಚಿಮ ಬಂಗಾಳದ ಹೌರಾಕ್ಕೆ ನಮ್ಮ ಕೋಲಾರದ ಟೊಮೆಟೊ ಟ್ರೈನ್ ಲಿಫ್ಟ್‌; ಬೆಳೆಗಾರರು ಖುಷಿಯಿಂದ ಹೌಹಾರಬೇಕಿಲ್ಲ
931
VIEWS
FacebookTwitterWhatsuplinkedinEmail

lead photo: pixabay from pexels

ಕೋಲಾರ: ರೈಲು ಬೋಗಿಗಳಲ್ಲಿ ಕೋಲಾರದ ಟೊಮೆಟೊವನ್ನು ಪಶ್ಚಿಮ ಬಂಗಾಳದ ಹೌರಾಕ್ಕೆ ಸಾಗಿಸುವ ರೈಲ್ವೆ ಇಲಾಖೆಯ ಉಪಕ್ರಮಕ್ಕೆ ಕೋಲಾರ ಜಿಲ್ಲೆಯ ಟೊಮ್ಯಾಟೋ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ, ಇದರಿಂದ ರೈತರಿಗೆಷ್ಟು ಅನುಕೂಲವಾಗಲಿದೆ ಎಂಬ ಪ್ರಶ್ನೆಯೂ ಕಾಡುತ್ತಿದೆ.

ಬೆಳೆ ಮತ್ತು ಬೆಲೆಯಲ್ಲೂ ಯಾವಾಗಲೂ ರೈತರ ಪಾಲಿಗೆ ಕಣ್ಣಾಮುಚ್ಚಾಲೆ ಆಡುವ ಟೊಮೆಟೊಕ್ಕೆ ಈ ಮೂಲಕವಾದರೂ ಒಂದು ಸ್ಥಿರವಾದ ಬೆಲೆ ಸಿಗಲಿದೆ ಎಂಬ ನಂಬಿಕೆ, ಆಶಯ ರೈತರದ್ದು. ಆದರೆ, ಟೊಮೆಟೊವನ್ನು ಟ್ರೈನ್‌ ಲಿಫ್ಟ್‌ ಮಾಡುವುದು ಎಪಿಎಂಪಿ ಅಧಿಕಾರಿಗಳೋ ಅಥವಾ ಸದಾ ಲಾಭಕೋರ ಬುದ್ಧಿಯ ದಳ್ಳಾಳಿಗಳೋ ಎಂಬ ಪ್ರಶ್ನೆ ಎದ್ದಿದೆ.

ಹೀಗಿದ್ದರೂ; ಸಾಮಾನ್ಯ ಪ್ರಯಾಣಿಕರ ಬೋಗಿಗಳನ್ನೇ ಪರಿವರ್ತಿಸಿ ಅವುಗಳ ಮೂಲಕ ಕೋಲಾರದಿಂದ ಹೌರಾಕ್ಕೆ ಟೊಮೆಟೊವನ್ನು ಸಾಗಣೆ ಮಾಡಲು ಬೆಂಗಳೂರು ವಿಭಾಗೀಯ ರೈಲ್ವೆ ಮುಂದಾಗಿದ್ದು, ಒಂದು ವಾರದೊಳಗೆ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದರು.

ಕೋಲಾರದ ರೈಲ್ವೆ ನಿಲ್ದಾಣದಲ್ಲಿ ರೈಲುಗಳಿಗೆ ಟೊಮೆಟೊವನ್ನು ತುಂಬಲಾಗುವುದು ಹಾಗೂ ಆ ರೈಲು ಬಂಗಾರಪೇಟೆ, ಚೆನ್ನೈ ಮೂಲಕ ಹಾದು 1956 ಕಿ.ಮೀ ದೂರದ ಹೌರಾವನ್ನು 34ರಿಂದ 36 ಗಂಟೆಗಳ ಅವಧಿಯಲ್ಲಿ ತಲುಪಲಿದೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾಹಿತಿ ನೀಡಿದ ನೈರುತ್ಯ ರೈಲ್ವೆಯ ಬೆಂಗಳೂರು ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅಶೋಕ್ ಕುಮಾರ್ ವರ್ಮ ಅವರು ನೀಡಿದ ಮಾಹಿತಿ ಹೀಗಿದೆ;
“ಪ್ರಯಾಣಿಕರ ಎರಡನೇ ದರ್ಜೆಯ ಬೋಗಿಗಳ (ಜಿ.ಎಸ್ ಕೋಚ್) ರೈಲುಗಳನ್ನೇ ಪರಿವರ್ತನೆ ಮಾಡಿ, ಅವುಗಳಲ್ಲಿ ಟೊಮೆಟೊ ಸಾಗಣೆ ಮಾಡುವುದು ನಮ್ಮ ಉದ್ದೇಶ. ಈ ಉದ್ದೇಶಕ್ಕೆ ಹತ್ತು ಬೋಗಿಗಳನ್ನು ಬಳಸಲು ರೈಲ್ವೆ ಮಂಡಳಿ ಅವಕಾಶ ನೀಡಿದೆ. ಜತೆಗೆ, ಒಂದು ಶೈತ್ಯಾಗಾರ ಇರುತ್ತದೆ. ಈ ಉದ್ದೇಶಕ್ಕಾಗಿ ಒಟ್ಟು 15 ಬೋಗಿಗಳನ್ನು ಪ್ರಾಯೋಗಿಕವಾಗಿ ಬಳಸಲಾಗುವುದು. ಮುಂದಿನ ವಾರದ ಹೊತ್ತಿಗೆ ಟೊಮೆಟೊ ಸಾಗಣೆ ಶುರುವಾಗಬಹುದು” ಎಂದಿದ್ದಾರೆ.

“ನಮ್ಮ ಪ್ರಯತ್ನದಿಂದ ರೈತರಿಗೆ ಅನುಕೂಲವಾಗುತ್ತದೆ. ಈಗಾಗಲೇ ರೈಲ್ವೆಯು ಗುಂತಕಲ್‌ಗೆ ಕಿಸಾನ್ ಎಕ್ಸ್‌ಪ್ರೆಸ್‌ ರೈಲು ಸೇವೆಯನ್ನು ಕಲ್ಪಿಸಿದೆ. ಅದೇ ಮಾದರಿಯಲ್ಲಿ ಕೋಲಾರದಿಂದ ಹೌರಾಕ್ಕೆ ಟೊಮೆಟೊವನ್ನು ಸಾಗಿಸಲಾಗುವುದು. ಕೋಲಾರ ಮತ್ತು ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಟೊಮೆಟೊವನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ನಿಟ್ಟಿನಲ್ಲಿ ರೈತರು, ಕೋಲಾರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಜತೆ ಮಾತುಕತೆ ನಡೆಸಲಾಗುತ್ತಿದೆ. ನಮ್ಮ ಅಂದಾಜಿನ ಪ್ರಕಾರ, ಒಂದು ರೈಲಿನ 15 ಬೋಗಿಗಳಲ್ಲಿ ಸುಮಾರು ಹತ್ತು ಟನ್‌ಗೂ ಹೆಚ್ಚು ಟೊಮೆಟೊವನ್ನು ಸಾಗಿಸಬಹುದು. ಒಟ್ಟು 100 ಟನ್‌ನಷ್ಟು ಟೊಮೆಟೊ ಸಾಗಿಸಲಿದ್ದೇವೆ” ಎನ್ನುತ್ತಾರೆ ಶರ್ಮ.

ಈಗಷ್ಟೇ ಫಸಲು ಕೊಡಲು ಆರಂಭಿಸುತ್ತಿರುವ ಟೊಮೆಟೊ ತೋಟ. / CKPhotography ಸಿಕೆಪಿ@ckphotographi
ಹೊರಗೆ ಭಾರೀ ಬೇಡಿಕೆ

ಉತ್ತಮ ಗುಣಮಟ್ಟವುಳ್ಳ ಕೋಲಾರ ಟೊಮೆಟೊಗೆ ಉತ್ತರ, ಪೂರ್ವ ಹಾಗೂ ಈಶಾನ್ಯ ಭಾರತದ ರಾಜ್ಯಗಳಲ್ಲಿ ಭಾರೀ ಬೇಡಿಕೆ ಇದೆ. ಉತ್ತಮ ನೆಟ್‌ವರ್ಕ್‌ ಮಾಡಿಕೊಂಡರೆ ಪ್ರತಿಸಲವೂ ರೈತರಿಗೆ ಉತ್ತಮ ಬೆಲೆ ಸಿಗುತ್ತದೆ. ಈ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಮಾಡುತ್ತಿರುವ ಕೆಲಸ ಶ್ಲಾಘನೀಯ. ಈಗ ಕೋಲಾರ ಮಾರುಕಟ್ಟೆಗೆ ಸಾವಿರಾರು ಟನ್‌ ಟೊಮ್ಯಾಟೊ ಬರುತ್ತಿದೆ. ಒಂದು ಲಾರಿ ಲೋಡ್‌ನಲ್ಲಿ ಕಡಿಮೆ ಎಂದರೂ 100ರಿಂದ 160 ಟನ್‌ ಟೊಮ್ಯಾಟೊ ಇರುತ್ತದೆ. ಹೀಗಾಗಿ ರೈಲ್ವೆಯವರು ನಿತ್ಯವೂ ಟೊಮ್ಯಾಟೊ ಲಿಫ್ಟ್‌ ಮಾಡಿದರೆ ಉತ್ತಮ ಎನ್ನುತ್ತಾರೆ ಮಾಲೂರಿನ ರೈತ ಎಂ.ವಿ.ನಾರಾಯಣ ಸ್ವಾಮಿ.

ನಮ್ಮ ಅಕ್ಕಪಕ್ಕದ ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣವೂ ಸೇರಿದಂತೆ ಮಹಾರಾಷ್ಟ್ರ, ರಾಜಸ್ತಾನ, ಗುಜರಾತ್‌, ಪಶ್ಚಿಮ ಬಂಗಾಳ ಹಾಗೂ ಹೊರ ದೇಶಗಳಾದ ಬಾಂಗ್ಲಾ ದೇಶ, ಆಪ್ಘಾನಿಸ್ತಾನ, ಮ್ಯಾನ್ಮಾರ್‌ ಸೇರಿ ಆಸಿಯಾನ್‌ ದೇಶಗಳಲ್ಲಿ ಭಾರೀ ಬೇಡಿಕೆ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ನಮ್ಮ ರೈತರು ಬೆಳೆಯುವ ಟೊಮೆಟೊಗೆ ಉತ್ತಮ ಬೆಲೆ ಸಿಗಬಹುದು. ಚಿಕ್ಕಬಳ್ಳಾಪುರ ಜಿಲ್ಲೆಯಿಂದಲೂ ಸಾಕಷ್ಟು ಟೊಮ್ಯಾಟೊ ಕೋಲಾರ ಮಾರುಕಟ್ಟೆಗೆ ಹೋಗುತ್ತಿದೆ ಎನ್ನುತ್ತಾರೆ ಚಿಕ್ಕಬಳ್ಳಾಪುರದ ಪ್ರಗತಿಪರ ರೈತ ಆರ್.ಆಂಜನೇಯ ರೆಡ್ಡಿ.

ಆದರೆ, ಆಂಜನೇಯ ರೆಡ್ಡಿ ಕೆಲ ಪ್ರಶ್ನೆಗಳನ್ನು ಎತ್ತಿದ್ದಾರೆ. “ಟ್ರೈನ್‌ಗೆ ಟಮ್ಯಾಟೊವನ್ನು ಯಾರು ಲಿಫ್ಟ್‌ ಮಾಡುತ್ತಾರೆ? ಎಪಿಎಂಪಿಸಿ ಅಧಿಕಾರಿಗಳಾ? ರೈಲ್ವೆ ಅಧಿಕಾರಿಗಳಾ? ಅಥವಾ ಮಂಡಿ ಮಾಲೀಕರಾ? ಅದೇ ರೀತಿ, ಇಲ್ಲಿಂದ ಹೋಗುವ ಟೊಮ್ಯಾಟೊವನ್ನು ಹೌರಾದಲ್ಲಿ ಯಾರು ಖರೀದಿ ಮಾಡುತ್ತಾರೆ? ಎಂಬುದು ರೈತರಿಗೆ ಎಂಬುದು ಗೊತ್ತಾಗಬೇಕು. ಯಾಕೆಂದರೆ, ಟೊಮೆಟೊ ಮಂಡಿ ಮಾಲೀಕರು ಬೆಳೆಗಾರರ ಮೇಲೆ ಉಕ್ಕಿನ ಹಿಡಿತ ಸಾಧಿಸಿದ್ದಾರೆ. ಗ್ರಾಹಕನಿಗೆ ಬೆಲೆ ಬರೆ ಬೀಳುತ್ತಿದೆ. ರೈತನಿಗೆ ಮಾತ್ರ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಈ ಕೊಳಕನ್ನು ಮೊದಲು ಸರಕಾರ ಸ್ವಚ್ಛ ಮಾಡಬೇಕು. ಮಂಡಿ ಮಾಲೀಕರು ಬೆಲೆ ನಿಗದಿ ಹೇಗೆ ಮಾಡುತ್ತಾರೆ? ಅವರ ನೆಟ್‌ವರ್ಕ್‌ ಏನು? ಗೊತ್ತಾಗಬೇಕು. ಮುಖ್ಯವಾಗಿ ಮಂಡಿ ಮಾಲೀಕರ ಮೇಲೆ ಸರಕಾರಕ್ಕೆ ನಿಯಂತ್ರಣವೇ ಇಲ್ಲ. ಮಂಡಿ ಮಾಲೀಕರು ತೋಟಗಳಿಗೇ ನುಗ್ಗಿ ಖರೀದಿ ಮಾಡುತ್ತಿದ್ದಾರೆ” ಎನ್ನುತ್ತಾರೆ ಅವರು.

ಕೃಷಿ ಇಲಾಖೆಯ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಒಟ್ಟು 33 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗುತ್ತಿದೆ. ಆ ಪೈಕಿ ಕೋಲಾರ ಜಿಲ್ಲೆಯೊಂದರಲ್ಲೇ ಸುಮಾರು 8ರಿಂದ 10 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಜತೆಗೆ, ಪ್ರತಿವರ್ಷವೂ ಈ ಜಿಲ್ಲೆಯಲ್ಲಿ 4 ಲಕ್ಷ ಟನ್‌ಗೂ ಹೆಚ್ಚು ಪ್ರಮಾಣದ ಟೊಮೆಟೊ ಬೆಳೆ ಬೆಳೆಯಲಾಗುತ್ತದೆ ಎನ್ನುತ್ತಾರೆ ಕೋಲಾರ ತಾಲ್ಲೂಕಿನ ರೈತ ಬಾಬು.

ಹೌರಾಕ್ಕೆ ಏಕೆ?

ಕೊಲ್ಕತಾದ ಹೌರಾ ರೈಲು ನಿಲ್ದಾಣವು ಪಶ್ಚಿಮ ಬಂಗಾಳ ಮಾತ್ರವಲ್ಲ, ಪೂರ್ವ ಭಾರತದ ಅತಿದೊಡ್ಡ ರೈಲ್ವೆ ಜಂಕ್ಷನ್.‌ ಈಶಾನ್ಯ ಭಾರತದ ಎಲ್ಲ ರಾಜ್ಯಗಳಿಗೆ, ಬಾಂಗ್ಲಾ ದೇಶಕ್ಕೆ ಇಲ್ಲಿಂದ ಉತ್ತಮ ಸಂಪರ್ಕ ಜಾಲವಿದೆ. ಇದನ್ನು ಗೇಟ್‌ ವೇ ಆಫ್‌ ಈಸ್ಟ್‌ ಇಂಡಿಯಾ ಅಥವಾ ಗೇಟ್‌ ವೇ ಆಫ್‌ ವೆಸ್ಟ್‌ ಬೆಂಗಾಲ್‌ ಎಂದು ಕರೆಯಲಾಗುತ್ತಿದೆ. ಬೆಂಗಳೂರಿನಿಂದ ಹೌರಾಕ್ಕೆ ಅತ್ಯುತ್ತಮ ರೈಲು ಸಂಪರ್ಕ ಜಾಲವಿದೆ. ಮುಖ್ಯವಾಗಿ ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾ ದೇಶದಲ್ಲಿ ಕೋಲಾರದ ಟೊಮೆಟೊಗೆ ಸಿಕ್ಕಾಪಟ್ಟೆ ಡಿಮಾಂಡ್‌ ಇದೆ.

Tags: howrahindian railwaykolar tomatotomatotrain lift
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
150 ವರ್ಷವಾದರೂ‌ ಭಾರತದ ನದಿ ಜೋಡಣೆ ಕಾಗದದ ಮೇಲೆಯೇ ತೆವಳುತ್ತಿದೆ! ಚೀನಾ ಬ್ರಹ್ಮಪುತ್ರನನ್ನೇ ಯೆಲ್ಲೋ ನದಿಗೆ ತಿರುಗಿಸುತ್ತಿದೆ!!

150 ವರ್ಷವಾದರೂ‌ ಭಾರತದ ನದಿ ಜೋಡಣೆ ಕಾಗದದ ಮೇಲೆಯೇ ತೆವಳುತ್ತಿದೆ! ಚೀನಾ ಬ್ರಹ್ಮಪುತ್ರನನ್ನೇ ಯೆಲ್ಲೋ ನದಿಗೆ ತಿರುಗಿಸುತ್ತಿದೆ!!

Leave a Reply Cancel reply

Your email address will not be published. Required fields are marked *

Recommended

ಸರಕಾರಕ್ಕೆ ಸಂಚಕಾರ; ಹೆಚ್.ಡಿ.ಕುಮಾರಸ್ವಾಮಿ, ಯೋಗಿ ಹೇಳಿಕೆಯಿಂದ ಕಾಂಗ್ರೆಸ್‌ನಲ್ಲಿ ತಳಮಳ

ಪರಪಕ್ಷಗಳ ಶಾಸಕರ ಮೇಲೆ ಕಣ್ಣು; ಆಪರೇಷನ್ ಕಮಲಕ್ಕೂ ಮುನ್ನವೇ ಆಪರೇಷನ್ ಹಸ್ತ

2 years ago
ಹೆಚ್.ಡಿ.ಕುಮಾರಸ್ವಾಮಿ ರಾಜಕೀಯ ವಿಲನ್

ಹೆಚ್.ಡಿ.ಕುಮಾರಸ್ವಾಮಿ ರಾಜಕೀಯ ವಿಲನ್

3 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ