ಗುಡಿಬಂಡೆ: ಅತ್ಯಂತ ಜಿದ್ದಾಜಿದ್ದಿ ಹಾಗೂ ಕೂತುಹಲ ಕೆರಳಿಸಿದ್ದ ಗುಡಿಬಂಡೆ ತಾಲೂಕಿನ ಕೋಚಿಮುಲ್ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಜೆಡಿಎಸ್ ಮುಖಂಡ ಡಿ.ಜೆ.ನಾಗರಾಜ ರೆಡ್ಡಿ ಬೆಂಬಲಿತ ಸಿಪಿಎಂ ಪಕ್ಷದ ಆಭ್ಯರ್ಥಿ ಆದಿನಾರಾಯಣ ರೆಡ್ಡಿ 33 ಮತ ಪಡೆದು ಐತಿಹಾಸಿಕ ಗೆಲುವು ಸಾಧಿಸಿದ್ದಾರೆ.
ಇತ್ತಿಚೆಗೆ ಕೋಚಿಮುಲ್ ನಿರ್ದೇಶಕರಾಗಿದ್ದ ಕಾಂಗ್ರೇಸ್ಸಿನ ಕೆ.ಅಶ್ವತ್ಥರೆಡ್ಡಿ ಅಕಾಲಿಕ ನಿಧನದಿಂದ ತರೆವಾಗಿದ್ದ ನಿರ್ದೇಶಕ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು.
ಗುಡಿಬಂಡೆ ತಾಲೂಕಿನಲ್ಲಿ ಒಟ್ಟು 48 ಮತಗಳಿದ್ದು ನಿರ್ದೇಶಕ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಆಭ್ಯರ್ಥಿಯಾಗಿ ಬೈರಾರೆಡ್ಡಿ ಹಾಗೂ ಜೆಡಿಎಸ್ & ಸಿಪಿಎಂ ಬೆಂಬಲಿತ ಆಭ್ಯರ್ಥಿಯಾಗಿ ಆದಿನಾರಾಯರೆಡ್ಡಿ ಚುನಾವಣೆಗೆ ಸ್ವರ್ಧಿಸಿದ್ದು, ಜೆಡಿಎಸ್ ಹಾಗೂ ಸಿಪಿಎಂ ಆಭ್ಯರ್ಥಿ ಆದಿನಾರಾಯಣ ರೆಡ್ಡಿ 33 ಮತಗಳನ್ನು, ಕಾಂಗ್ರೇಸ್ ಬೆಂಬಲಿತ ಬೈರಾರೆಡ್ಡಿ ಕೇವಲ 14 ಮತಗಳನ್ನು ಪಡೆದರು. ಒಂದು ಮತ ಅಸಿಂಧುವಾಗಿದೆ.
33 ಮತಗಳ ಪಡೆದ ಆದಿನಾರಾಯಣ ರೆಡ್ಡಿ 18 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದರೆ, ಕಾಂಗ್ರೇಸ್ ಬೆಂಬಲಿತ ಆಭ್ಯರ್ಥಿ ಹೀನಾಯ ಸೋಲು ಅನುಭವಿಸಿದ್ದಾರೆ. ಇದರಿಂದ 40 ವರ್ಷಗಳಿಂದ ಕಾಂಗ್ರೆಸ್ಸಿನ ಹಿಡಿತದಲ್ಲಿದ್ದ ಕೋಚಿಮುಲ್ ನಿರ್ದೇಶಕ ಸ್ಥಾನ ಕಳೆದುಕೊಂಡ ಕಾಂಗ್ರೆಸ್ ಬಾರಿ ಮುಖಭಂಗ ಅನುಭವಿಸಿದಂತಾಗಿದೆ.
ಜೆಡಿಎಸ್ ಬೆಂಬಲಿತ ಆಭ್ಯರ್ಥಿ ಭಾರೀ ಅಂತರದ ಮತಗಳಿಂದ ಗೆಲುವು ಸಾಧಿಸುತ್ತಿದ್ದಂತೆ ಜೆಡಿಎಸ್ ಹಾಗೂ ಸಿಪಿಎಂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಮೊದಲ ಬಾರಿಗೆ ಅತ್ಯಧಿಕ ಮತಗಳ ಅಂತರದಿಂದ ಗೆದ್ದ ಆದಿನಾರಾಯ ರೆಡ್ಡಿಗೆ ಜೆಡಿಎಸ್ ಮುಖಂಡ ಡಿ.ಜೆ.ನಾಗಾರಾಜ ರೆಡ್ಡಿ, ಸಿಪಿಎಂ ಮುಖಂಡ ಲಕ್ಷೀನಾರಾಯಣ, ಪೋಲಂಪಲ್ಲಿ ಮಂಜುನಾಥ್, ಆದಿನಾರಾಯಣಪ್ಪ ಮುಂತಾದವರು ಅಭಿನಂದಿಸಿದ್ದಾರೆ.
ಹಲವಾರು ವರ್ಷಗಳಿಂದ ತಾಲೂಕಿನ ಕೋಚಿಮುಲ್ ಸ್ಥಾನ ಕಾಂಗ್ರೆಸ್ ಹಿಡಿತದಲ್ಲಿತ್ತು. ಈ ಬಾರಿ ಶತಾಯಗತಾಯ ನಿರ್ದೇಶಕ ಸ್ಥಾನವನ್ನು ನಮ್ಮ ಬೆಂಬಲಿತರ ಹಿಡಿದಕ್ಕೆ ತೆಗೆದುಕೊಳ್ಳಬೇಕೆಂಬ ದೃಢ ನಿರ್ಧಾರದಿಂದ ಜೆಡಿಎಸ್ ಮತ್ತು ಸಿಪಿಎಂ ಮುಖಂಡರ ಸಹಕಾರದಿಂದ ಕಾರ್ಯತಂತ್ರ ರೂಪಿಸಿ ಐತಿಹಾಸಿಕ ಗೆಲುವು ಗಳಿಸಿದ್ದೆವೆ. ಇನ್ನೂ ಮುಂದೆ ಎಲ್ಲಾ ಕ್ಷೇತ್ರದಲ್ಲೂ ಕಾಂಗ್ರೆಸ್ಗೆ ನೇರ ಪೈಪೋಟಿ ನೀಡುತ್ತೆನೆ.
-ಡಿ.ಜೆ.ನಾಗರಾಜ ರೆಡ್ಡಿ, ಜೆಡಿಎಸ್ ನಾಯಕ