• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CHIKKABALLAPUR

ಕಾಂಗ್ರೆಸ್ ವಶಕ್ಕೆ ಗುಡಿಬಂಡೆ ಪಟ್ಟಣ ಪಂಚಾಯತಿ: ಸಿಪಿಎಂ-ಬಿಜೆಪಿಗೆ ಭಾರೀ ಮುಖಭಂಗ! ಒಂದು ಮತದಲ್ಲಿ ಗೆದ್ದ ಹಸ್ತ ಅಭ್ಯರ್ಥಿ!! ಹೊಸ ಅಭ್ಯರ್ಥಿಗಳ ಕೈಹಿಡಿದ ಮತದಾರರು

cknewsnow desk by cknewsnow desk
April 30, 2021
in CHIKKABALLAPUR, NEWS & VIEWS
Reading Time: 2 mins read
0
ರಾಜರಾಜೇಶ್ವರಿ ನಗರದಲ್ಲಿ ಹೆಚ್ಚಿದ ರಗಳೆ; ಕಾಂಗ್ರೆಸ್‌ ಮತದಾರರ ಚೀಟಿ ಸಂಗ್ರಹಿಸುತ್ತಿದೆ ಎಂದು ನೇರ ಆರೋಪ ಮಾಡಿದ ಬಿಜೆಪಿ
911
VIEWS
FacebookTwitterWhatsuplinkedinEmail

ಕೋಚಿಮುಲ್‌ ಚುನಾವಣೆಯಲ್ಲಿ ಕರಾಮತ್ತು ಮಾಡಿ ಜಯ ಗಳಿಸಿದ್ದ ಜೆಡಿಎಸ್‌ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲೂ ಪರವಾಗಿಲ್ಲ. ಶಾಸಕರ ಬಲದಿಂದ ಕಾಂಗ್ರೆಸ್‌ ಪಕ್ಷದ್ದು ಅತ್ಯುತ್ತಮ ಸಾಧನೆ. ಜಿಲ್ಲಾ ಉಸ್ತುವಾರಿ ಸಚಿವರಿದ್ದರೂ ಬಿಜೆಪಿಯದ್ದು ಶೂನ್ಯ ಸಾಧನೆ. ಒಂದು ಕಾಲದಲ್ಲಿ ಶಕ್ತಿಶಾಲಿಯಾಗಿದ್ದ ಸಿಪಿಎಂ ತನ್ನ ನೆಲೆಯನ್ನೇ ಕಳೆದುಕೊಳ್ಳುವ ಮುನ್ಸೂಚನೆ ನೀಡಿದೆ. ಇದು ಗುಡಿಬಂಡೆ ಪಟ್ಟಣ ಪಂಚಾಯಿತಿ ಚುನಾವಣೆ ಫಲಿತಾಂಶದ ಒಂದು ನೋಟ..

ಗುಡಿಬಂಡೆ: ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿದ್ದ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಕಾಂಗ್ರೇಸ್ 6 ಸ್ಥಾನಗಳನ್ನು ಗೆದ್ದು ಆಡಳಿತವನ್ನು ತನ್ನ ತೆಕ್ಕೆಗೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಭಾರೀ ಪೈಪೋಟಿ ಇದ್ದ 11 ವಾರ್ಡ್ʼಗಳ ಪೈಕಿ ಕಾಂಗ್ರೆಸ್-06, ಜೆಡಿಎಸ್-02, ಪಕ್ಷೇತರರು-03 ಸ್ಥಾನಗಳನ್ನು ಗೆದ್ದಿದ್ದಾರೆ. ಇನ್ನೂ 7 ವಾರ್ಡ್ʼಗಳಲ್ಲಿ ತನ್ನ ಆಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದ ಬಿಜೆಪಿಯದ್ದು ಈ ಚುನಾವಣೆಯಲ್ಲಿ ಶೂನ್ಯ ಸಾಧನೆ. ಜತೆಗೆ, ಸಿಪಿಐ(ಎಂ) ಕೂಡ ಯಾವುದೇ ವಾರ್ಡ್‌ನಲ್ಲಿ ಜಯ ಸಾಧಿಸಿಲ್ಲ.

ಪಟ್ಟಣದ ಒಂದನೇ ವಾರ್ಡಿನ ಕಾಂಗ್ರೇಸ್ ಆಭ್ಯರ್ಥಿ ರಾಜೇಶ್ ತಮ್ಮ ಪ್ರತಿಸ್ವರ್ದಿ ಪಕ್ಷೇತರ ಆಭ್ಯರ್ಥಿ ಬಾಲಾಜಿ ವಿರುದ್ದ ಕೇವಲ ಒಂದು ಮತದ ಅಂತರದಿಂದ ಗೆದ್ದರೆ, 9ನೇ ವಾರ್ಡಿನ ಪಕ್ಷೇತರ ಆಭ್ಯರ್ಥಿ ವೀಣಾ 03 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

11 ವಾರ್ಡ್ʼಗಳ ಪೈಕಿ ಮೂರು ವಾರ್ಡ್ʼಗಳಲ್ಲಿ ಮಾಜಿ ಪ.ಪಂ ಸದಸ್ಯರು ಸ್ವಧಿಸಿದ್ದರು. ಆದರೆ, ಇವರೆಲ್ಲರನ್ನೂ ಮತದಾರರು ಸೋಲಿಸಿದ್ದಾರೆ. ಈ ಬಾರಿ ಹೊಸ ಆಭ್ಯರ್ಥಿಗಳಿಗೆ ಜನ ಮಣೆ ಹಾಕಿದ್ದಾರೆ.

ಹೆಚ್ಚು ಮತಗಳಿಂದ ಗೆದ್ದವರು

5ನೇ ವಾರ್ಡ್ ಕಾಂಗ್ರೆಸ್ ಆಭ್ಯರ್ಥಿ ಜಿ.ಗಂಗಾರಾಜು 219 ಮತಗಳಿಂದ ಬಿಜೆಪಿ ಆಭ್ಯರ್ಥಿ ಮಲ್ಲೇಶ್ ವಿರುದ್ದ ಗೆಲುವು ಸಾಧಿಸಿದ್ದಾರೆ. 2ನೇ ವಾರ್ಡಿನ ಪಕ್ಷೇತರ ಆಭ್ಯರ್ಥಿ ಅನಿಲ್ ಕುಮಾರ್ 185 ಮತಗಳಿಂದ ಕಾಂಗ್ರೆಸ್ʼನ ಲಕ್ಷೀಕಾಂತಮ್ಮ ಅವರನ್ನು ಸೋಲಿಸಿದ್ದಾರೆ. 3ನೇ ವಾರ್ಡ್ ಕಾಂಗ್ರೆಸ್ ಆಭ್ಯರ್ಥಿ ವಿಕಾಸ್ 216 ಮತಗಳ ಅಂತರದಿಂದ ಪಕ್ಷೇತರ ಆಭ್ಯರ್ಥಿ ಆಶಾ ಜಯಪ್ಪ ವಿರುದ್ದ ಗೆಲುವು ಸಾಧಿಸಿದ್ದಾರೆ. 4ನೇ ವಾರ್ಡ್‌ ಜೆಡಿಎಸ್ ಆಭ್ಯರ್ಥಿ ಅನುಷಾ ಅವರು ಕಾಂಗ್ರೆಸ್ ಆಭ್ಯರ್ಥಿ ವಿರುದ್ದ 130 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 10ನೇ ವಾರ್ಡ್ ಕಾಂಗ್ರೆಸ್ ಪಕ್ಷದ ನಗೀನ ತಾಜ್ ಅವರು 215 ಮತಗಳಿಂದ ಜೆಡಿಎಸ್ ಆಭ್ಯರ್ಥಿ ವಿರುದ್ಧ ಗೆಲುವಿನ ನಗೆ ಬೀರಿದ್ದಾರೆ. ಇನ್ನು 7ನೇ ವಾರ್ಡಿನ ಬಷೀರಾ ರಿಜ್ವಾನ್ ಅವರು 37 ಮತಗಳಿಂದ ಗೆದ್ದಿದ್ದಾರೆ.

ವಾರ್ಡುವಾರು ಆಭ್ಯರ್ಥಿಗಳು ಪಡೆದಿರುವ ಮತ

1ನೇ ವಾರ್ಡ್
1) ಆದಿನಾರಾಯಣಪ್ಪ /ಜೆಡಿಎಸ್/ 72
2) ರಾಜೇಶ್ ‌/ ಕಾಂಗ್ರೆಸ್ / 135
3) ರಾಮಕೃಷ್ಣ / ಬಿಜೆಪಿ / 96
4) ಬಾಲಾಜಿ ಆರ್ / ಪಕ್ಷೇತರ / 134

2ನೇ ವಾರ್ಡ್
1) ಮಮತ / ಬಿಜೆಪಿ / 102
2) ಲಕ್ಷ್ಮೀಕಾಂತಮ್ಮ / ಕಾಂಗ್ರೆಸ್‌ / 176
3) ಶ್ರೀನಿವಾಸ್ / ಜೆಡಿಎಸ್ / 144
4) ಅನಿಲ್ ಕುಮಾರ್ / ಪಕ್ಷೇತರ / 361

3ನೇ ವಾರ್ಡ್
1) ಪ್ರಶಾಂತ್ / ಜೆಡಿಎಸ್ / 116
2) ಫಯಾಜ್ ಬೇಗ್ / ಸಿಪಿಐ(ಎಂ) / 10
3) ಮೋಹನ್ / ಬಿಜೆಪಿ / 28
4) ವಿಕಾಸ್ / ಕಾಂಗ್ರೆಸ್ / 373
5) ಆಶಾ ಜಯಪ್ಪ / ಪಕ್ಷೇತರ / 157
6) ಮಂಜು / ಪಕ್ಷೇತರ / 73

4ನೇ ವಾರ್ಡ್
1) ಅನುಶಾ / ಜೆಡಿಎಸ್ / 312
2) ಗಂಗಾದೇವಮ್ಮ / ಕಾಂಗ್ರೆಸ್ / 182
3) ರಾಮಲಕ್ಷ್ಮಿ / ಬಿಜೆಪಿ / 37
4) ಪುಷ್ಪ / ಪಕ್ಷೇತರ / 29
5) ಲಕ್ಷ್ಮಿ / ಪಕ್ಷೇತರ / 05
6) ನೋಟಾ / 08

5ನೇ ವಾರ್ಡ್
1) ಗಂಗಾರಾಜು / ಕಾಂಗ್ರೆಸ್ / 289
2) ನರಸಿಂಹ ಮೂರ್ತಿ / ಜೆಡಿಎಸ್ / 11
3) ಮಲ್ಲೇಶ್ / ಬಿಜೆಪಿ / 70
4) ಗಂಗಾಧರಪ್ಪ / ಎಎಪಿ / 08
5) ಸಾಗರ್ / ಪಕ್ಷೇತರ / 01

6ನೇ ವಾರ್ಡ್
1) ಬಷೀರ್ ಅಹ್ಮದ್ / ಜೆಡಿಎಸ್ / 182
2) ರಿಯಾಜ್ / ಕಾಂಗ್ರೆಸ್ / 161
3) ಶ್ರೀನಾಥ್ / ಬಿಜೆಪಿ / 22
3) ಷಬ್ಬೀರ್ ಪಾಷ /ಪಕ್ಷೇತರ / 02

7ನೇ ವಾರ್ಡ್
1) ನಿಶಾತ್ ಖಾನಂ / ಜೆಡಿಎಸ್ / 338
2) ಬಷೀರಾ ರಿಜ್ವಾನ್ / ಕಾಂಗ್ರೆಸ್ / 375
3)ರಿಜಿಯಾ ಸುಲ್ತಾನ / ಸಿಪಿಐ(ಎಂ) / 06
4)ಶಬರೀನ್ ತಾಜ್ / ಬಿಜೆಪಿ / 21
5)ಫರಿದಾ ಬೀ / ಎಎಪಿ / 11
6)ಫೌಜಿಯಾ ತಸ್ನಿಮ್ / ಪಕ್ಷೇತರ / 14

8ನೇ ವಾರ್ಡ್
1) ನಯಾಜ್ ಪಾಷ / ಕಾಂಗ್ರೆಸ್ / 197
2) ಮಹ್ಮದ್ ನಾಸೀರ್ / ಜೆಡಿಎಸ್ / 05
3) ಫಯಾಜ್ ಅಹ್ಮದ್ / ಎಎಪಿ / 16
4) ಅಬ್ದುಲ್ ರಹೀಮ್ / ಪಕ್ಷೇತರ / 07
5) ಇಸ್ಮಾಯಿಲ್ ಅಜಾದ್ / ಪಕ್ಷೇತರ / 379
6) ಬುಲೆಟ್ ಶ್ರೀನಿವಾಸ / ಪಕ್ಷೇತರ / 216
7) ನೋಟಾ / 05

9ನೇ ವಾರ್ಡ್
1) ತ್ರಿವೇಣಿ / ಕಾಂಗ್ರೆಸ್ / 198
2) ರಾಧಮ್ಮ / ಜೆಡಿಎಸ್ / 26
3) ಈಶ್ವರಮ್ಮ / ಪಕ್ಷೇತರ / 09
4) ವೀಣಾ / ಪಕ್ಷೇತರ / 201
5) ನೋಟಾ / 01

10ನೇ ವಾರ್ಡ್
1) ನಗೀನ್ ತಾಜ್ / ಕಾಂಗ್ರೆಸ್ / 452
2) ನೂರಾನಿ ಸಬಾ / ಜೆಡಿಎಸ್ / 237
3) ನಜ್ಮ / ಪಕ್ಷೇತರ / 16
4) ನೋಟಾ / 01

11ನೇ ವಾರ್ಡ್
1) ಭಾಗ್ಯ / ಜೆಡಿಎಸ್ / 58
2) ಮಂಜುಳ / ಕಾಂಗ್ರೆಸ್ / 194
3) ನಳಿನ / ಪಕ್ಷೇತರ / 107
4) ನೋಟಾ / 01


ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾಡಿರುವ ಜನಪರ ಕೆಲಸಗಳಿಂದ ಮತದಾರರು ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶಾಸಕರ ನೇತೃತ್ವದಲ್ಲಿ ಪ.ಪಂಚಾಯತಿ ಚುನಾಯಿತ ಜನ ಪ್ರತಿನಿಧಿಗಳ ಪ್ರಾಮಾಣಿಕವಾಗಿ ಶ್ರಮಿಸುತ್ತಾರೆ.

-ಕೆ.ಟಿ.ಹರಿ, ಕಾಂಗ್ರೆಸ್ ಯುವ ಮುಖಂಡ ಗುಡಿಬಂಡೆ


Tags: bjpchikkaballapuraCongresscpi(m)gudibandejdspattana panchayati election 2021
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಮುಂದಿನ ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ? ಗುಟ್ಟುಬಿಟ್ಟುಕೊಟ್ಟ ಬಂಗಾರಪೇಟೆ ಶಾಸಕ ಎಸ್.ಎನ್‌.ನಾರಾಯಣಸ್ವಾಮಿ

ಪ್ರತಿ ಬಿಪಿಎಲ್‌ ಕುಟುಂಬಕ್ಕೆ ಮಾಸಿಕ ₹10,000, ರೈತರಿಗೆ ಬೀಜ, ಗೊಬ್ಬರ, ಔಷಧ ಉಚಿತ, ಅನ್ನದಾತನಿಗೆ ಬಡ್ಡಿರಹಿತ ಸಾಲ ಸೇರಿ ವಿಶೇಷ ಪ್ಯಾಕೇಜ್‌ ನಿಡಲು ಸರಕಾರಕ್ಕೆ ಸಿದ್ದು ಡಿಮಾಂಡ್‌

Leave a Reply Cancel reply

Your email address will not be published. Required fields are marked *

Recommended

ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಮಾದಿಗ ಮೀಸಲು ಹೋರಾಟ ಸಮಿತಿ ಆಗ್ರಹ; ಬೇಡಿಕೆ ಈಡೇರದಿದ್ದರೆ ಸರಕಾರಕ್ಕೆ ಉಳಿಗಾಲವಿಲ್ಲವೆಂದು ಎಚ್ಚರಿಕೆ

ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಮಾದಿಗ ಮೀಸಲು ಹೋರಾಟ ಸಮಿತಿ ಆಗ್ರಹ; ಬೇಡಿಕೆ ಈಡೇರದಿದ್ದರೆ ಸರಕಾರಕ್ಕೆ ಉಳಿಗಾಲವಿಲ್ಲವೆಂದು ಎಚ್ಚರಿಕೆ

5 years ago
ಮಾರ್ಚ್ʼನಲ್ಲಿ ಲೋಕಸಭೆ ಚುನಾವಣೆ ವೇಳಾಪಟ್ಟಿ; ರಾಜ್ಯದಲ್ಲಿ ಎರಡು ಹಂತದ ಮತದಾನ?

3 ವರ್ಷದಿಂದ ಒಂದೇ ಜಾಗದಲ್ಲಿ ಝಾಂಡ ಹೂಡಿರುವ ಅಧಿಕಾರಿ, ನೌಕರರ ವರ್ಗಾವಣೆ

2 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ