• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CHIKKABALLAPUR

ಚಾಮರಾಜನಗರ, ಕೋಲಾರ ಜಿಲ್ಲೆಗಳ ಆಕ್ಸಿಜನ್‌ ದುರಂತಗಳ ಎಫೆಕ್ಟ್:‌ ಎಚ್ಚೆತ್ತುಕೊಂಡ ಆರೋಗ್ಯ ಸಚಿವರ ತವರು ಜಿಲ್ಲಾಡಳಿತ, ಆಮ್ಲಜನಕ-ರೆಮಿಡಿಸ್ವೀರ್‌ ಕೊರತೆ ಇಲ್ಲ ಎಂದ ಡಿಸಿ

cknewsnow desk by cknewsnow desk
May 3, 2021
in CHIKKABALLAPUR, COVID-19
Reading Time: 1 min read
0
ಚಾಮರಾಜನಗರ, ಕೋಲಾರ ಜಿಲ್ಲೆಗಳ ಆಕ್ಸಿಜನ್‌ ದುರಂತಗಳ ಎಫೆಕ್ಟ್:‌ ಎಚ್ಚೆತ್ತುಕೊಂಡ ಆರೋಗ್ಯ ಸಚಿವರ ತವರು ಜಿಲ್ಲಾಡಳಿತ, ಆಮ್ಲಜನಕ-ರೆಮಿಡಿಸ್ವೀರ್‌ ಕೊರತೆ ಇಲ್ಲ ಎಂದ ಡಿಸಿ
914
VIEWS
FacebookTwitterWhatsuplinkedinEmail

ರಾಜ್ಯದೆಲ್ಲಡೆ ಕೋವಿಡ್‌ ಸೋಂಕಿತರಿಗೆ ಆಮ್ಲಜನಕ ಮತ್ತು ರೆಮಿಡಿಸ್ವೀರ್‌ ಸಮಸ್ಯೆ ಇದ್ದರೂ, ಚಿಕ್ಕಬಳ್ಳಾಪುರದಲ್ಲಿ ಇಲ್ಲ. ಜಿಲ್ಲಾಡಳಿತ ಹೈ ಅಲರ್ಟ್‌ ಆಗಿದೆ!!!

ಚಿಕ್ಕಬಳ್ಳಾಪುರ: ಕೋಲಾರ ಮತ್ತು ಚಾಮರಾಜನಗರದಲ್ಲಿ ಆಕ್ಸಿಜನ್‌ ವೈಫಲ್ಯದಿಂದ ಉಂಟಾದ ದುರಂತಗಳ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರ ತವರು ಜಿಲ್ಲೆಯ ಆಡಳಿತ ಹೈ ಅಲರ್ಟ್‌ ಆಗಿದೆ.

ಯಾವುದೇ ಕಾರಣಕ್ಕೂ ಜಿಲ್ಲೆಯ ಆಸ್ಪತ್ರೆಗಳಲ್ಲಿ ಕೋವಿಡ್‌ ಔಷಧಿ ಮತ್ತು ಆಮ್ಲಜನಕದ ಜತೆಗೆ ರೆಮಿಡಿಸ್ವೀರ್‌ ಕೊರತೆ ಆಗದಂತೆ ಜಿಲ್ಲಾಧಿಕಾರಿ ಆರ್.‌ಲತಾ ಬಹಳಷ್ಟು ಎಚ್ಚರಿಕೆ ವಹಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಆರ್.‌ಲತಾ ಅವರು, ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಮ್ಲಜನಕದ ಅಗತ್ಯವನ್ನು ಮುನ್ನೆಚ್ಚರಿಕೆಯಾಗಿ ಮನಗಂಡು ಜಿಲ್ಲೆಯ ಸರಕಾರಿ ಕೋವಿಡ್ ಆಸ್ಪತ್ರೆಗಳಲ್ಲಿ 393 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 125 ಜಂಬೊ ಆಮ್ಲಜನಕ ಸಿಲಿಂಡರ್ʼಗಳನ್ನು ತುಂಬಿಸಿ ಸಂಗ್ರಹಣೆ ಮಾಡಿಟ್ಟುಕೊಳ್ಳಲಾಗಿದೆ ಎಂದಿದ್ದಾರೆ.

ಲಭ್ಯವಿರುವ ಒಟ್ಟು 518 ಆಮ್ಲಜನಕ ಸಿಲಿಂಡರ್ʼಗಳಲ್ಲಿ 91 ಸಿಲಿಂಡರ್ʼಗಳು ಖಾಲಿಯಾಗಿದ್ದು, 427 ಸಿಲಿಂಡರ್ʼಗಳು ಬಳಕೆಗೆ ಲಭ್ಯವಿವೆ. ಪ್ರತಿದಿನ ಖಾಲಿಯಾದ ಸಿಲಿಂಡರ್ʼಗಳಿಗೆ ಆ ದಿನವೇ ಆಮ್ಲಜನಕವನ್ನು ಸಂಬಂಧಪಟ್ಟ ಅಧಿಕೃತ ಆಕ್ಸಿಜನ್ ಸರಬರಾಜು ಕಂಪನಿಗಳಿಂದ ತುಂಬಿಸಲಾಗುತ್ತಿದೆ. ಈ ಕುರಿತು ನಿಗಾ ವಹಿಸಿ ಆಮ್ಲಜನಕದ ಕೊರತೆ ಆಗದಂತೆ ನೋಡಿಕೊಳ್ಳಲು ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಆಮ್ಲಜನಕ ಸರಬರಾಜು ಆಗಿರುವ ಬಗ್ಗೆ ನಾನು ಸಹ ನೋಡೆಲ್ ಅಧಿಕಾರಿಗಳಿಂದ ಮಾಹಿತಿ ಪಡೆದು ಪ್ರತಿದಿನ ಖಾತರಿಪಡಿಸಿಕೊಳ್ಳುತ್ತಿದ್ದೇನೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿನ 2 ಆಮ್ಲಜನಕ ಘಟಕಗಳಲ್ಲಿ 3,500 ಲೀಟರ್ ಸಾಮರ್ಥ್ಯದ ಆಮ್ಲಜನಕವನ್ನು ಭರ್ತಿ ಮಾಡಿಸಿ ಸಂಗ್ರಹಣೆ ಮಾಡಲಾಗಿದೆ.‌ ಆಮ್ಲಜನಕ ಉಪಯೋಗಿಸಿ ಖಾಲಿಯಾದ ದಿನವೇ ಆಮ್ಲಜನಕವನ್ನು ಪುನಾ ಸರಬರಾಜು ಮಾಡಿಸಿಕೊಂಡು ಮರುಪೂರಣ ಮಾಡಿಕೊಳ್ಳುವ ಮೂಲಕ ಯಾವಾಗಲು ಆಮ್ಲಜನಕ ದಾಸ್ತಾನು ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಖಾಲಿಯಾದ ಕೂಡಲೇ ನಿಯಮಿತವಾಗಿ ತುಂಬಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ರೆಮಿಡಿಸ್ವೀರ್‌ ಕೊರತೆಯೂ ಇಲ್ಲ

ಸರಕಾರಿ ಕೋವಿಡ್ ಆಸ್ಪತ್ರೆಯಲ್ಲಿ 250 ವೈಲ್ ಮತ್ತು ಖಾಸಗಿ ಕೋವಿಡ್ ಆಸತ್ರೆಗಳಲ್ಲಿ 50 ವೈಲ್ ರೆಮಿಡಿಸ್ವೀರ್ ಔಷಧಿ ಸಂಗ್ರಹಣೆ ಇದ್ದು, ಪ್ರಸ್ತುತ ಪ್ರತಿದಿನ 30ರಿಂದ 40 ವೈಲ್ ಔಷಧಿ ಮಾತ್ರ ಬಳಕೆಯಾಗುತ್ತಿದ್ದು 270 ವೈಲ್‌ಗಳಷ್ಟು ರೆಮಿಡಿಸ್ವೀರ್ ಔಷಧಿ ಬಳಕೆಗೆ ಲಭ್ಯವಿದೆ. ಅಲ್ಲದೆ, ಔಷಧಿ ಖಾಲಿಯಾದಂತೆ ಅಂದೇ ಸರಬರಾಜು ಮಾಡಿಕೊಳ್ಳಲಾಗುತ್ತಿದೆ. ಒಟ್ಟಾರೆ ಜಿಲ್ಲೆಯಲ್ಲಿ ಆಕ್ಸಿಜನ್, ಐಸಿಯು ಹಾಸಿಗೆಗಳು, ವೆಂಟಿಲೇಟರ್ ಸೇರಿದಂತೆ ರೆಮಿಡಿಸ್ವೀರ್‌ ಔಷಧದ ದಾಸ್ತಾನು ಸಾಕಷ್ಟಿದ್ದು ಜಿಲ್ಲೆಯ ಜನರು ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದ್ದಾರೆ.

Tags: chikkaballapuracovid19no scarcity of oxygenoxygenremdesivir
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಚಿಕ್ಕಬಳ್ಳಾಪುರಕ್ಕೆ ಬಜೆಟ್’ನಲ್ಲಿ ವಿಶೇಷ ಪ್ರಾಧಾನ್ಯತೆ ನೀಡಲು ಶ್ರಮಿಸಿದ ಸಂಸದ ಡಾ.ಕೆ.ಸುಧಾಕರ್

ಚಿಕ್ಕಬಳ್ಳಾಪುರಕ್ಕೆ ಬಜೆಟ್’ನಲ್ಲಿ ವಿಶೇಷ ಪ್ರಾಧಾನ್ಯತೆ ನೀಡಲು ಶ್ರಮಿಸಿದ ಸಂಸದ ಡಾ.ಕೆ.ಸುಧಾಕರ್

by cknewsnow desk
July 23, 2024
0

ಸಂಸದರಿಗೆ ಅಭಿನಂದನೆ ಸಲ್ಲಿಸಿದ ಆರ್.ಮಿಥುನ್ ರೆಡ್ಡಿ; ಹೈದರಾಬಾದ್‌-ಬೆಂಗಳೂರು ಕೈಗಾರಿಕಾ ಕಾರಿಡಾರ್‌ ನಿಂದ ಬಾಗೇಪಲ್ಲಿಗೆ ಹೆಚ್ಚು ಅನುಕೂಲ

ಬಾಗೇಪಲ್ಲಿಯಲ್ಲಿ ಗುರುಪೂರ್ಣಿಮೆ

ಬಾಗೇಪಲ್ಲಿಯಲ್ಲಿ ಗುರುಪೂರ್ಣಿಮೆ

by cknewsnow desk
July 23, 2024
0

ಶ್ರೀ ಯೋಗಿನಾರೇಯಣ ಬಲಿಜ ಟ್ರಸ್ಟ್ ವತಿಯಿಂದ ಆಚರಣೆ

ಡಾ.ಕೆ.ಸುಧಾಕರ್ ಅವರಿಗೆ ಬೆಂಬಲ ಘೋಷಿಸಿದ ಮಿಥುನ್ ರೆಡ್ಡಿ

ಡಾ.ಕೆ.ಸುಧಾಕರ್ ಅವರಿಗೆ ಬೆಂಬಲ ಘೋಷಿಸಿದ ಮಿಥುನ್ ರೆಡ್ಡಿ

by cknewsnow desk
April 14, 2024
0

ಎನ್'ಡಿಎ ಅಭ್ಯರ್ಥಿ ಡಾ.ಕೆ ಸುಧಾಕರ್ ಗೆಲ್ಲಿಸುವುದೇ ನಮ್ಮ ಗುರಿ

ದ್ವಿತೀಯ ಪಿಯುಸಿ ಫಲಿತಾಂಶ; ಗುಡಿಬಂಡೆ ಕಾಲೇಜ್ ಉತ್ತಮ ಸಾಧನೆ

ದ್ವಿತೀಯ ಪಿಯುಸಿ ಫಲಿತಾಂಶ; ಗುಡಿಬಂಡೆ ಕಾಲೇಜ್ ಉತ್ತಮ ಸಾಧನೆ

by cknewsnow desk
April 10, 2024
0

ವಿಜ್ಞಾನ ವಿಭಾಗದಲ್ಲಿ ಶೇ.79 ಫಲಿತಾಂಶ

ದೇಶಕ್ಕೆ ಭಷ್ಟಾಚಾರಕ್ಕಿಂತ ವಾತಾವರಣ ಬದಲಾವಣೆಯಿಂದ ಭಾರೀ ನಷ್ಟವಾಗುತ್ತಿದೆ: ಪ್ರೊ.ಸುರೇಶ್

ದೇಶಕ್ಕೆ ಭಷ್ಟಾಚಾರಕ್ಕಿಂತ ವಾತಾವರಣ ಬದಲಾವಣೆಯಿಂದ ಭಾರೀ ನಷ್ಟವಾಗುತ್ತಿದೆ: ಪ್ರೊ.ಸುರೇಶ್

by cknewsnow desk
April 9, 2024
0

ರಣಬಿಸಿಲನ್ನು ತಡೆಯುವ ಶಕ್ತಿ ಕೇವಲ ಮರಗಿಡಗಳಿಗೆ ಮಾತ್ರ ಇದೆ

ಗುಡಿಬಂಡೆ ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ, ಕಾನೂನು ಬಾಹಿರ ಬ್ಲಾಸ್ಟಿಂಗ್

ಗುಡಿಬಂಡೆ ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ, ಕಾನೂನು ಬಾಹಿರ ಬ್ಲಾಸ್ಟಿಂಗ್

by cknewsnow desk
March 6, 2024
0

ಸ್ಥಳಕ್ಕೆ ದಿಢೀರ್ ಭೇಟಿ ನೀಡಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

Next Post
ಕಮ್ಯುನಿಸ್ಟರು ಮತ್ತು ಕಾಂಗ್ರೆಸ್‌ 7 ದಶಕದ ಆಡಳಿತದಿಂದ  ಭ್ರಮನಿರಸನಗೊಂಡ ಕೇರಳದಲ್ಲಿ ಬಿಜೆಪಿಯತ್ತ ಒಲವು; ದೇವರ ನಾಡಿನಲ್ಲಿ ಬದಲಾವಣೆಯ ಗಾಳಿ ಎಂದ ಡಿಸಿಎಂ

1912 ಹೆಲ್ಪ್‌ಲೈನ್‌ ಸರಿಯಾಗಲು ಉನ್ನತ ಅಧಿಕಾರಿಗಳಿಗೆ 2 ದಿನ ಡೆಡ್ಲೈನ್‌ ಕೊಟ್ಟ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ

Leave a Reply Cancel reply

Your email address will not be published. Required fields are marked *

Recommended

ಡಿಜಿಟಲ್‌ ಇಂಡಿಯಾ ಜಗತ್ತಿನ ಅವಕಾಶಗಳ ಹೆಬ್ಬಾಗಿಲು ಎಂದ ಪಿಎಂ ನರೇಂದ್ರ ಮೋದಿ

ಡಿಜಿಟಲ್‌ ಇಂಡಿಯಾ ಜಗತ್ತಿನ ಅವಕಾಶಗಳ ಹೆಬ್ಬಾಗಿಲು ಎಂದ ಪಿಎಂ ನರೇಂದ್ರ ಮೋದಿ

5 years ago
ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜ್ʼಗೆ ಸ್ವಾಯತ್ತತೆ

ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜ್ʼಗೆ ಸ್ವಾಯತ್ತತೆ

5 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ