• About
  • Advertise
  • Careers
  • Contact
Thursday, October 29, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home COVID-19

ಬೆಂಗಳೂರು ಆರೋಗ್ಯಕ್ಕೆ ಟ್ರೀಟ್‌ಮೆಂಟ್:‌ ಎಲ್ಲ ಆಸ್ಪತ್ರೆಗಳು ಬಿಬಿಎಂಪಿ ಕೈತಪ್ಪಿ ಆರೋಗ್ಯ ಇಲಾಖೆ ವ್ಯಾಪ್ತಿಗೆ; ತಜ್ಞರ ವರದಿ ಪಡೆದ ನಂತರ ಕ್ರಮಕ್ಕೆ ಸರಕಾರ ನಿರ್ಧಾರ

cknewsnow desk by cknewsnow desk
May 15, 2021
in COVID-19, STATE
Reading Time: 1 min read
0
ಬೆಂಗಳೂರು ಆರೋಗ್ಯಕ್ಕೆ ಟ್ರೀಟ್‌ಮೆಂಟ್:‌  ಎಲ್ಲ ಆಸ್ಪತ್ರೆಗಳು ಬಿಬಿಎಂಪಿ ಕೈತಪ್ಪಿ ಆರೋಗ್ಯ ಇಲಾಖೆ ವ್ಯಾಪ್ತಿಗೆ; ತಜ್ಞರ ವರದಿ ಪಡೆದ ನಂತರ ಕ್ರಮಕ್ಕೆ ಸರಕಾರ ನಿರ್ಧಾರ
916
VIEWS
FacebookTwitterWhatsuplinkedinEmail

Lead Photo from Wikipedia

ನಗರದ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ 100 ಬೆಡ್‌ಗಳ ಹೈಟೆಕ್‌ ಆಸ್ಪತ್ರೆ I 4 ವಿಧಾನಸಭೆ ಕ್ಷೇತ್ರಗಳಿಗೊಂದು ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ I ಡಿಸಿಎಂ ಡಾ.ಸಿಎನ್‌.ಅಶ್ವತ್ಥನಾರಾಯಣ ಪ್ರಸ್ತಾವನೆ

ಬೆಂಗಳೂರು: ಸುಮಾರು ಒಂದೂವರೆ ಕೋಟಿಗೂ ಹೆಚ್ಚು ಜನಬಾಹುಳ್ಯವಿರುವ ರಾಜಧಾನಿ ಬೆಂಗಳೂರಿನಲ್ಲಿ ಕಟ್ಟಕಡೆಯ ವ್ಯಕ್ತಿಗೂ ಉತ್ತಮ ಆರೋಗ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಇರುವ ವ್ಯವಸ್ಥೆಯನ್ನೇ ಆಮೂಲಾಗ್ರವಾಗಿ ಸುಧಾರಿಸಲು ರಾಜ್ಯ ಕೋವಿಡ್‌ ಕಾರ್ಯಪಡೆಯು ತಜ್ಞರ ವರದಿ ಪಡೆಯಲು ನಿರ್ಧರಿಸಿದೆ.

ಬೆಂಗಳೂರಿನಲ್ಲಿ ಶನಿವಾರ ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರೂ ಆದ ಡಿಸಿಎಂ ಡಾ.ಸಿ.ಎನ್.‌ಅಶ್ವತ್ಥನಾರಾಯಣ ನೇತೃತ್ವದಲ್ಲಿ ನಡೆದ ಕಾರ್ಯಪಡೆ ಸಭೆಯಲ್ಲಿ ಈ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಗಿದೆ. ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಡಿಸಿಎಂ ಮಾಹಿತಿ ನೀಡಿದರು.

ಡಿಸಿಎಂ ಇಟ್ಟ ಪ್ರಸ್ತಾಪನೆ ಏನು?

ಬೆಂಗಳೂರು ನಗರ ಆರೋಗ್ಯ ವ್ಯವಸ್ಥೆಯನ್ನು ಬಿಬಿಎಂಪಿ ವ್ಯಾಪ್ತಿಯಿಂದ ತೆಗೆದು ಆರೋಗ್ಯ ಇಲಾಖೆಗೆ ವಹಿಸುವುದು. ನಗರದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 100 ಹಾಸಿಗೆಗಳ ಸುಸಜ್ಜಿತ, ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳುಳ್ಳ ಸೆಕೆಂಡರಿ ಆಸ್ಪತ್ರೆ ಸ್ಥಾಪನೆ, ನಾಲ್ಕು ವಿಧಾನಸಭೆ ಕ್ಷೇತ್ರಗಳಿಗೊಂದು ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸುವುದು.

ಮಧ್ಯಮ ವರ್ಗ ಹಾಗೂ ಬಡವರಿಗೆ ಚಿಕಿತ್ಸೆ ಬಹಳ ದುಬಾರಿಯಾಗಿದೆ. ಇರುವ ಬೌರಿಂಗ್‌, ವಿಕ್ಟೋರಿಯಾ, ಕೆ.ಸಿ.ಜನರಲ್‌ ದಂಥ ಆಸ್ಪತ್ರೆಯಲ್ಲಿ ಒತ್ತಡ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಈ ಆಸ್ಪತ್ರೆಗಳಲ್ಲಿ ನಗರದಲ್ಲಿ ವಾಸ ಮಾಡುವ ಕಟ್ಟಕಡೆಯ ವ್ಯಕ್ತಿಗೂ ಅತ್ಯುತ್ತಮ ಚಿಕಿತ್ಸೆ ಕೊಡಬೇಕಿದೆ.

ನಗರದಲ್ಲಿ ಸರಕಾರದ ಉಸ್ತುವಾರಿಯಲ್ಲಿ ಅನೇಕ ಆಸ್ಪತ್ರೆಗಳಿವೆ. ಈ ಪೈಕಿ ಕೆಲವು ವೈದ್ಯ ಶಿಕ್ಷಣ ಇಲಾಖೆ, ಇನ್ನು ಕೆಲವು ಆರೋಗ್ಯ ಇಲಾಖೆ, ಮತ್ತೆ ಇನ್ನು ಕೆಲವು ಬಿಬಿಎಂಪಿ ಅಧೀನದಲ್ಲಿವೆ. ಹೀಗಾಗಿ ಸರಿಯಾದ ಸಮನ್ವಯತೆ ಇಲ್ಲ, ಹೊಂದಾಣಿಕೆ ಕಾಣುತ್ತಿಲ್ಲ. ಪರಿಣಾಮ ಜನರು ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಹೀಗಾಗಿ ಈ ಎಲ್ಲ ಆಸ್ಪತ್ರೆಗಳನ್ನು ಒಟ್ಟಾರೆಯಾಗಿ ಆರೋಗ್ಯ ಇಲಾಖೆಯ ಅಧೀನಕ್ಕೆ ತಂದು ಅದಕ್ಕೊಂದು ಪ್ರತ್ಯೇಕ ವ್ಯವಸ್ಥೆ ಮಾಡುವುದು ಒಳ್ಳೆಯದು ಎಂದು ಡಿಸಿಎಂ ಪ್ರಾಸ್ತಾಪಿಸಿದರು.

ಇಡೀ ಬೆಂಗಳೂರಿನ ಆರೋಗ್ಯ ವ್ಯವಸ್ಥೆಯ ಉಸ್ತುವಾರಿ ನೋಡಿಕೊಳ್ಳಲು ಪ್ರತ್ಯೇಕ ನಿರ್ದೇಶನಾಲಯ ಸ್ಥಾಪಿಸಬೇಕು.

ಚರ್ಚೆ & ಉತ್ತಮ ಪ್ರತಿಕ್ರಿಯೆ

ಡಿಸಿಎಂ ಅವರ ಪ್ರಸ್ತಾವನೆ ಬಗ್ಗೆ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆಯಿತು. ಸಚಿವರಾದ ಡಾ.ಸುಧಾಕರ್‌, ಸುರೇಶ್‌ ಕುಮಾರ್‌ ಹಾಗೂ ಉನ್ನತ ಅಧಿಕಾರಿಗಳಿಂದ ಈ ಪ್ರಸ್ತಾವನೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಬೆಂಗಳೂರು ನಗರದಲ್ಲಿ ಇಂಥ ವ್ಯವಸ್ಥೆ ಆಗಲೇಬೇಕು ಎಂದು ಇಬ್ಬರು ಸಚಿವರು ಪ್ರತಿಪಾದಿಸಿದರಲ್ಲದೆ, ಶೀಘ್ರದಲ್ಲಿಯೇ ಈ ಬಗ್ಗೆ ತಜ್ಞರ ವರದಿ ಸ್ವೀಕರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಉತ್ತಮ ಎಂದು ಸಲಹೆ ಮಾಡಿದರು.

ಬೆಂಗಳೂರು ನಗರದಲ್ಲಿ ಬಿಬಿಎಂಪಿಗೆ ಇತರೆ ಕ್ಷೇತ್ರಗಳಲ್ಲಿ ಮಾಡಲು ಸಾಕಷ್ಟು ಕೆಲಸವಿದೆ. ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಗಮನ ಕೊಡುವುದು ಅದಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ತಾಂತ್ರಿಕ, ಆಡಳಿತಾತ್ಮಕ ಸೇರಿದಂತೆ ಎಲ್ಲ ಅಂಶಗಳ ಬಗ್ಗೆ ಅಧ್ಯಯನ ಮಾಡಿ ವರದಿ ಕೊಡುವಂತೆ ತಜ್ಞರನ್ನು ಕೋರಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಡಿಸಿಎಂ ಹೇಳಿದರು.

Tags: bbmpBengalurucovid19covid19 taskforcedr cn ashwathnarayanhealth departmentkarnataka
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

#SIR ರಾಜ್ಯದಲ್ಲಿ 99.32 ಲಕ್ಷ ಮತದಾರರ ಹೆಸರಿಲ್ಲ

#SIR ರಾಜ್ಯದಲ್ಲಿ 99.32 ಲಕ್ಷ ಮತದಾರರ ಹೆಸರಿಲ್ಲ

by cknewsnow desk
October 28, 2026
0

ಬೆಂಗಳೂರಿನಲ್ಲಿ 43.13% ಮತದಾರರ ಪ್ರಮಾಣ ಕುಸಿತ

ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ₹600 ಕೋಟಿಗೆ ಡೀಲ್ ಕೊಟ್ಟರಾ ಡಿಕೆಶಿ!!

ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ₹600 ಕೋಟಿಗೆ ಡೀಲ್ ಕೊಟ್ಟರಾ ಡಿಕೆಶಿ!!

by cknewsnow desk
October 25, 2026
0

ಹಾಲಿ ಮುಖ್ಯಮಂತ್ರಿ ವಿರುದ್ಧ ಕೇಂದ್ರ ಸಚಿವರ ಗಂಭೀರ ಆರೋಪ; ಈಗಿನ ಮಹಾನ್ ಮುಖ್ಯಮಂತ್ರಿಗಳೇ ಸ್ಟಿಂಗ್ ಮೂಲಪುರುಷ

ಸ್ಟಿಂಗ್ ಮಾಡಿದವರಿಗೆ ನೋಟಿಸ್, ಅನ್ಯಪಕ್ಷದವರ ಅರೆಸ್ಟ್!

ಸ್ಟಿಂಗ್ ಮಾಡಿದವರಿಗೆ ನೋಟಿಸ್, ಅನ್ಯಪಕ್ಷದವರ ಅರೆಸ್ಟ್!

by cknewsnow desk
October 25, 2026
0

ಸ್ಟಿಂಗ್ ಆಪರೇಶನ್ ಪ್ರಕರಣದಲ್ಲಿ ರಾಜ್ಯ ಸರ್ಕಾರದ್ದು ಇಬ್ಬಗೆ ನೀತಿ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ

ಸ್ಟಿಂಗ್ ವಿರುದ್ಧ ಕೋರ್ಟ್ ಮೊರೆ ಹೋದ ಸಿದ್ದರಾಮಯ್ಯ! ಇಂದು ಆದೇಶ ನಿರೀಕ್ಷೆ

ನನ್ನ ತಲೆಗೆ ಸ್ಟಿಂಗ್ ಕಟ್ಟಲು ಡಿಕೆಶಿ, ಪ್ರಿಯಾಂಕ್ ಖರ್ಗೆ ಸಂಚು

by cknewsnow desk
October 25, 2026
0

ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ; #kpsc ಹಗರಣದ ದಿಕ್ಕು ತಪ್ಪಿಸಲು ಪ್ರಿಯಾಂಕ್ ಖರ್ಗೆ ಒದ್ದಾಟ

ಬೆಂಗಳೂರು ಸುತ್ತಲಿನ ಜನರ ಸಮಾಧಿ ಮೇಲೆ ಬ್ರ್ಯಾಂಡ್‌ ಬೆಂಗಳೂರು

10 ತಿಂಗಳಾದರೂ ಸಿಗದ ಭೂಮಿ; ರಾಜ್ಯದ ಕೈತಪ್ಪಲಿದೆಯಾ ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ

by cknewsnow desk
October 22, 2026
0

ಬೇಸತ್ತು ಮುಖ್ಯಮಂತ್ರಿ ಡಿಕೆಶಿಗೆ ಪತ್ರ ಬರೆದ ಕೇಂದ್ರ ಸಚಿವ #HDK

ರಾಜೀನಾಮೆ ಕೊಟ್ಟು ಹೊರಬನ್ನಿ; ಅಪಮಾನಿತ ದಲಿತ ಸಚಿವರಿಗೆ #Jds ಕಿವಿಮಾತು

ರಾಜೀನಾಮೆ ಕೊಟ್ಟು ಹೊರಬನ್ನಿ; ಅಪಮಾನಿತ ದಲಿತ ಸಚಿವರಿಗೆ #Jds ಕಿವಿಮಾತು

by cknewsnow desk
October 22, 2026
0

ಮೈಸೂರು ದಸರಾದಲ್ಲಿ ಅವಮಾನ ಪ್ರಸಂಗ; ಬಾಯಲ್ಲಿ ಜಾತ್ಯತೀತ ತತ್ವ, ಆಚರಣೆಯಲ್ಲಿ ಅಸೃಶ್ಯತೆ!; ಕಾಂಗ್ರೆಸ್ ವಿರುದ್ಧ ಜೆಡಿಎಸ್ ವಾಗ್ದಾಳಿ

Next Post
ಚಿಕ್ಕಬಳ್ಳಾಪುರ ಮೆಡಿಕಲ್‌ ಕಾಲೇಜು ಕಾಮಗಾರಿ 50% ಪೂರ್ಣ; ನಿಗದಿತ ಸಮಯದೊಳಗೆ ಜಿಲ್ಲೆಯ ಮಹತ್ವಾಕಾಂಕ್ಷಿ ಯೋಜನೆ ಸಾಕಾರ; ಹಾಗಾದರೆ, ವಿದ್ಯಾರ್ಥಿಗಳ ಪ್ರವೇಶ ಯಾವಾಗ?

ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಜಿಲ್ಲೆಗೆ ಬರುವವರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯ; ಮೆಡಿಕಲ್‌ ಸ್ಟೋರ್‌ಗಳಲ್ಲಿ ಜ್ವರ, ಕೆಮ್ಮು, ನೆಗಡಿ ಮಾತ್ರೆ ಖರೀದಿ ಮಾಡುವವರ ಮೇಲೆ ಹದ್ದಿನಕಣ್ಣು

Leave a Reply Cancel reply

Your email address will not be published. Required fields are marked *

Recommended

ಎನ್ ಟಿಆರ್ ಜನ್ಮಶತಮಾನೋತ್ಸವದ ಸ್ಮರಣೆ: ₹100 ನಾಣ್ಯ ಲೋಕಾರ್ಪಣೆ

ಎನ್ ಟಿಆರ್ ಜನ್ಮಶತಮಾನೋತ್ಸವದ ಸ್ಮರಣೆ: ₹100 ನಾಣ್ಯ ಲೋಕಾರ್ಪಣೆ

3 years ago
ಉನ್ನತ ಶಿಕ್ಷಣ ಡಿಜಿಟಲೀಕರಣ; ಜುಲೈ 15ರಿಂದ ಎಲ್ಲ ಆನ್‌ಲೈನ್

ಉನ್ನತ ಶಿಕ್ಷಣ ಡಿಜಿಟಲೀಕರಣ; ಜುಲೈ 15ರಿಂದ ಎಲ್ಲ ಆನ್‌ಲೈನ್

6 years ago

Popular News

  • #SIR ರಾಜ್ಯದಲ್ಲಿ 99.32 ಲಕ್ಷ ಮತದಾರರ ಹೆಸರಿಲ್ಲ

    #SIR ರಾಜ್ಯದಲ್ಲಿ 99.32 ಲಕ್ಷ ಮತದಾರರ ಹೆಸರಿಲ್ಲ

    0 shares
    Share 0 Tweet 0
  • ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ₹600 ಕೋಟಿಗೆ ಡೀಲ್ ಕೊಟ್ಟರಾ ಡಿಕೆಶಿ!!

    0 shares
    Share 0 Tweet 0
  • ಸ್ಟಿಂಗ್ ಮಾಡಿದವರಿಗೆ ನೋಟಿಸ್, ಅನ್ಯಪಕ್ಷದವರ ಅರೆಸ್ಟ್!

    0 shares
    Share 0 Tweet 0
  • ನನ್ನ ತಲೆಗೆ ಸ್ಟಿಂಗ್ ಕಟ್ಟಲು ಡಿಕೆಶಿ, ಪ್ರಿಯಾಂಕ್ ಖರ್ಗೆ ಸಂಚು

    0 shares
    Share 0 Tweet 0
  • 10 ತಿಂಗಳಾದರೂ ಸಿಗದ ಭೂಮಿ; ರಾಜ್ಯದ ಕೈತಪ್ಪಲಿದೆಯಾ ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

#SIR ರಾಜ್ಯದಲ್ಲಿ 99.32 ಲಕ್ಷ ಮತದಾರರ ಹೆಸರಿಲ್ಲ

#SIR ರಾಜ್ಯದಲ್ಲಿ 99.32 ಲಕ್ಷ ಮತದಾರರ ಹೆಸರಿಲ್ಲ

October 28, 2026
ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ₹600 ಕೋಟಿಗೆ ಡೀಲ್ ಕೊಟ್ಟರಾ ಡಿಕೆಶಿ!!

ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ₹600 ಕೋಟಿಗೆ ಡೀಲ್ ಕೊಟ್ಟರಾ ಡಿಕೆಶಿ!!

October 25, 2026
ಸ್ಟಿಂಗ್ ಮಾಡಿದವರಿಗೆ ನೋಟಿಸ್, ಅನ್ಯಪಕ್ಷದವರ ಅರೆಸ್ಟ್!

ಸ್ಟಿಂಗ್ ಮಾಡಿದವರಿಗೆ ನೋಟಿಸ್, ಅನ್ಯಪಕ್ಷದವರ ಅರೆಸ್ಟ್!

October 25, 2026
ಸ್ಟಿಂಗ್ ವಿರುದ್ಧ ಕೋರ್ಟ್ ಮೊರೆ ಹೋದ ಸಿದ್ದರಾಮಯ್ಯ! ಇಂದು ಆದೇಶ ನಿರೀಕ್ಷೆ

ನನ್ನ ತಲೆಗೆ ಸ್ಟಿಂಗ್ ಕಟ್ಟಲು ಡಿಕೆಶಿ, ಪ್ರಿಯಾಂಕ್ ಖರ್ಗೆ ಸಂಚು

October 25, 2026

Covid 19

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

October 16, 2026
ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ