• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home GUEST COLUMN

ಶ್ರೀ ಆದಿ ಶಂಕರರು: ಕಾಲ್ನಡಿಗೆಯಿಂದಲೇ ಭಾರತಕ್ಕೆ ಜ್ಞಾನದ ಉಸಿರು ತುಂಬಿದ ಮಹಾನ್‌ ಸಂತ, ಧರ್ಮೋದ್ಧಾರದ ಜತೆಗೆ ಸಮೈಕ್ಯತೆ ಸಾರಿದ ಯುಗಪುರುಷ

cknewsnow desk by cknewsnow desk
May 17, 2021
in GUEST COLUMN, STATE
Reading Time: 2 mins read
0
ಶ್ರೀ ಆದಿ ಶಂಕರರು: ಕಾಲ್ನಡಿಗೆಯಿಂದಲೇ ಭಾರತಕ್ಕೆ ಜ್ಞಾನದ ಉಸಿರು ತುಂಬಿದ ಮಹಾನ್‌ ಸಂತ, ಧರ್ಮೋದ್ಧಾರದ ಜತೆಗೆ ಸಮೈಕ್ಯತೆ ಸಾರಿದ ಯುಗಪುರುಷ
982
VIEWS
FacebookTwitterWhatsuplinkedinEmail

Adi Shankara: Painting by Karan Acharya

ಕಾಲಡಿಯಿಂದ ಕಾಲ್ನಡಿಗೆಯಲ್ಲೇ ಇಡೀ ಭಾರತವನ್ನು ನಡೆದಾಡಿದ ಶ್ರೀ ಆದಿಶಂಕರರ ಜಯಂತಿ ಇಂದು (ಮೇ 17). 32 ವರ್ಷವಷ್ಟೇ ಜೀವಿಸಿದ್ದ ಅವರು ಬಿಟ್ಟುಹೋದ ಜ್ಞಾನ ಸಂಪತ್ತನ ಪ್ರಭೆಯಲ್ಲೇ ಈ ನೆಲವಿನ್ನೂ ಹೊಳೆಯುತ್ತಿದೆ. ನಮ್ಮ ಅಂಕಣಕಾರ ಡಾ. ಗುರುಪ್ರಸಾದ್‌ ಹವಲ್ದಾರ್‌ ನಮ್ಮ ಓದುರಿಗರಿಗಾಗಿ ಶ್ರೀ ಶಂಕರರನ್ನು & ಅವರ ಅದ್ವೈತವನ್ನೂ ಮತ್ತೊಮ್ಮೆ ಸಾಕ್ಷಾತ್ಕರಿಸಿದ್ದಾರೆ.


“ಶ್ರುತಿ ಸ್ಮೃತಿ ಪುರಾಣಾನಾಂ ಆಲಯಂ ಕರುಣಾಲಯಂ। ನಮಾಮಿ ಭಗವತ್ಪಾದಂ ಶಂಕರಂ ಲೋತಶಂಕರಂ॥”

ಭಾರತೀಯ ಆಧ್ಯಾತ್ಮಿಕ ಜಗತ್ತಿನಲ್ಲಿ ಶಿಖರದಂತಿರುವರು, ಕಳೆಯನ್ನು ಕಳೆದುಕೊಂಡಿದ್ದ ಭಾರತೀಯ ತತ್ತ್ವಶಾಸ್ತ್ರದ ಕ್ಷೇತ್ರಕ್ಕೆ ಹೊಸದಾದ ಜೀವಕಳೆಯನ್ನು ಕೋಟ್ಟು ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದವರು, ಆಚಾರ್ಯತ್ರಯರಲ್ಲಿ ಮೊದಲಿಗರು ಆದಿಗುರು ಶ್ರೀಶಂಕರಾಚಾರ್ಯರು.

ಕ್ರಿ.ಶ.788ರಲ್ಲಿ ಚೇರರ ರಾಜ್ಯ (ಇಂದಿನ ಕೇರಳ) ಕಾಲಡಿ ಗ್ರಾಮದಲ್ಲಿ ವಿಭವ ಸಂವತ್ಸರದ ವೈಶಾಖ ಮಾಸದ ಶುಕ್ಲ ಪಂಚಮಿಯಂದು ಆತ್ರೇಯ ಗೋತ್ರದ, ಯಜುರ್ವೇದದ, ತೈತ್ತರೀಯ ಶಾಖೆಯವರಾದ ಶಿವಗುರು-ಆರ್ಯಾಂಬ ದಂಪತಿಗಳಿಗೆ ಶಿವನ ವರಪ್ರಸಾದದಿಂದ ಪುತ್ರರಾಗಿ ಶ್ರೀಶಂಕರರು ಜನಿಸಿದರು. ಬಾಲ್ಯದಲ್ಲಿಯೇ ಅವರಿಗೆ ಪಿತೃ ವಿಯೋಗವಾಯಿತು.

ಬಾಲಕ ಶಂಕರರಿಗೆ ಎಳವೆಯಿಂದಲೇ ಸಂನ್ಯಾಸ ಸ್ವೀಕರಿಸುವತ್ತ ಒಲವು. ಈ ಬಯಕೆಗೆ ತಾಯಿ ಸಮ್ಮತಿ ಇಲ್ಲ, ಒಂದು ದಿನ ಶಂಕರರು ಪೂರ್ಣಾನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಅಲ್ಲಿಯೇ ಇದ್ದ ಮೊಸಳೆಯೊಂದು ಅವರ ಕಾಲನ್ನು ಹಿಡಿಯಿತು. ಮಗನ ಕೂಗನ್ನು ಕೇಳಿ ಆರ್ಯಾಂಬೆ ಅಲ್ಲಿಗೆ ಓಡಿದರು. ʼಅಮ್ಮ! ನಾನು ಮೊಸಳೆಯ ಬಾಯಿಗೆ ಸಿಕ್ಕಿರುವೆ; ಇನ್ನು ನನ್ನ ಜೀವನ ಮುಗಿದಂತೆ. ಈಗಲಾದರೂ ನನ್ನ ಆಸೆಯನ್ನು ಪೂರೈಸಿಕೊಳ್ಳಲು ಒಪ್ಪಿಕೋ. ನಾನು ಸಂನ್ಯಾಸಿಯಾಗಲು ಅನುಮತಿಯನ್ನು ನೀಡುʼ ಎಂದು ಅಂಗಲಾಚಿದರು. ತಾಯಿ ಒಪ್ಪಿದರು. ಆದರೆ, ಆ ಕೂಡಲೇ ಮೊಸಳೆ ಶಂಕರನ ಕಾಲನ್ನು ಬಿಟ್ಟು ಅಲ್ಲಿಂದ ಹೊರಟುಹೋಯಿತು.

ಮುಂದೆ ಶಂಕರರು ನರ್ಮದಾ ನದೀತೀರದಲ್ಲಿದ್ದ ಗೋವಿಂದ ಭಗವತ್ಪಾದರಲ್ಲಿ ಶಿಷ್ಯತ್ವವನ್ನು ಸ್ವೀಕರಿಸಿ ಅವರಿಂದ ಯೋಗ, ವೇದ, ಉಪನಿಷತ್ತು ಮತ್ತು ವೇದಾಂತಗಳನ್ನು ಅಭ್ಯಾಸ ಮಾಡಿದರು. ಗುರುಗಳ ಆದೇಶದಂತೆ ಬ್ರಹ್ಮಸೂತ್ರ, ಉಪನಿಷತ್ತು ಮತ್ತು ಭಗವದ್ಗೀತೆಗೆ ಭಾಷ್ಯವನ್ನು ಬರೆದರು. ನಂತರ ಕಾಶಿಗೆ ತೆರಳಿ ಅಲ್ಲಿ ಕೆಲ ಶಿಷ್ಯರಿಗೆ ವೇದಾಂತ ಬೋಧಿಸಿದರು. ಕಾಶ್ಮೀರಕ್ಕೆ ತೆರಳಿ ಅಲ್ಲಿಯ ಮಹಾಪಂಡಿತರಾಗಿದ್ದ ಮಂಡನಮಿಶ್ರರನ್ನು ಆಧ್ಯಾತ್ಮಕ್ಕೆ ಸಂಬಂಧಿಸಿದಂತೆ ವಾದದಲ್ಲಿ ಸೋಲಿಸಿ ಸರ್ವಜ್ಞಪೀಠವನ್ನು ಅಲಂಕರಿಸಿದರು ಮತ್ತೂ ಮಂಡನಮಿಶ್ರರನ್ನು ಶಿಷ್ಯರನ್ನಾಗಿ ಸ್ವೀಕರಿಸಿ, ಅವರಿಗೆ ʼಸುರೇಶ್ವರಾಚಾರ್ಯʼ ಎಂದು ಹೆಸರು ಕೊಟ್ಟರು.

ಇಡೀ ಭಾರತವನ್ನು ಎರಡು ಬಾರಿ ಕಾಲ್ನಡಿಗೆಯಲ್ಲಿ ಪರ್ಯಟನೆ ಮಾಡಿ ತಮ್ಮ ಅಸಾಧಾರಣ ತರ್ಕಶಕ್ತಿಯಿಂದ ಪ್ರತಿವಾದಿಗಳನ್ನು ಸೋಲಿಸಿ. ಅದ್ವೈತದ ಧ್ವಜವನ್ನು ಎತ್ತಿ ಹಿಡಿದರು. ಅದ್ವೈತ ತತ್ತ್ವ ಸಿದ್ಧಾಂತಕ್ಕೆ ಸ್ಪಷ್ಟರೂಪ ಕೊಟ್ಟು ಜಗತ್ತಿನ ಮನ್ನಣೆ ಸಿಗುವಂತೆ ಮಾಡಿದರು. ಸನಾತನ ಧರ್ಮವನ್ನು ಪುನರುತ್ಥಾನಗೊಳಿಸಿದರು. ಈ ಸನಾತನ ಹಿಂದೂಧರ್ಮ ಪ್ರಚಾರ ನಿರಂತರವಾಗಿ ನಡೆಯಬೇಕು ಎಂಬ ಉದ್ದೇಶಕ್ಕಾಗಿ ಭಾರತದ ನಾಲ್ಕು ದಿಕ್ಕುಗಳಲ್ಲೂ ನಾಲ್ಕು ಆಮ್ನಾಯ ಪೀಠಗಳನ್ನು ಸ್ಥಾಪಿಸಿದರು. ಪರ್ವತ ಪ್ರದೇಶವಾದ ಭಾರತದ ಉತ್ತರದ ಬದರಿಯಲ್ಲಿ ಜ್ಯೋತಿರ್ಮಠ, ಸಹ್ಯಾದ್ರಿ ಬೆಟ್ಟಗಳ ಪ್ರದೇಶವಾದ ದಕ್ಷಿಣದ ಶೃಂಗೇರಿಯಲ್ಲಿ ಶಾರದಾಪೀಠ, ಪೂರ್ವದ ಸಮುದ್ರತೀರದ ಪುರಿಕ್ಷೇತ್ರದಲ್ಲಿ ಗೋವರ್ಧನ ಪೀಠ, ಪಶ್ಚಿಮದ ಸಮುದ್ರತೀರದ ದ್ವಾರಕಾದಲ್ಲಿ ದ್ವಾರಕಾಪೀಠವನ್ನು ಪ್ರತಿಷ್ಠಾಪಿಸಿದರು. ಈ ನಾಲ್ಕೂ ಮಠಗಳು ಇಂದಿಗೂ ತಮ್ಮ ಗುರು ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿವೆ.

ಆಮ್ನಾಯ ಪೀಠಗಳು ಯಾವು?

  • 1) ಗೋವರ್ಧನ ಪೀಠ: ಹಸ್ತಾಮಲಕಾಚಾರ್ಯರು, ಮಹಾವಾಕ್ಯ – ಪ್ರಜ್ಞಾನಂ ಬ್ರಹ್ಮ –ಋಗ್ವೇದ – ಐತ್ತರೇಯ ಉಪನಿಷತ್ – ಭೋಗವಾಲ ಸಂಪ್ರದಾಯ.
  • 2) ಶಾರದಾಪೀಠ: ಸುರೇಶ್ವರಾಚಾರ್ಯರು, ಮಹಾವಾಕ್ಯ – ಅಹಂ ಬ್ರಹ್ಮಾಸ್ಮಿ – ಯಜುರ್ವೇದ –ಬ್ರಹದಾರಣ್ಯಕ ಉಪ – ಭೂರಿವಾಲ ಸಂಪ್ರದಾಯ.
  • 3) ದ್ವಾರಕಾ ಪೀಠ: ಪದ್ಮಪಾದಾಚಾರ್ಯರು, ಮಹಾವಾಕ್ಯ – ತತ್ವಮಸೀ – ಸಾಮವೇದ –ಛಾಂದೋಗ್ಯ ಉಪನಿಷತ್ – ಕೀಟವಾಲ ಸಂಪ್ರದಾಯ.
  • 4) ಜ್ಯೋತಿರ್ಮಠ: ತೋಟಕಾಚಾರ್ಯರು, ಮಹಾವಾಕ್ಯ – ಅಯಮಾತ್ಮಾ ಬ್ರಹ್ಮ – ಅಥರ್ವ ವೇದ – ಮಾಂಡೂಕ್ಯ ಉಪ – ನಂದವಾಲ ಸಂಪ್ರದಾಯ.

ದಶನಾಮೀ ಪದ್ಧತಿ: ಶಂಕರಾಚಾರ್ಯರು ಏಕದಂಡಿ ಸಂಪ್ರದಾಯವನ್ನು ಪ್ರಾರಂಭಿಸಿದರು.
ಈ ಸಂಪ್ರದಾಯದ ಸಂನ್ಯಾಸಿಗಳು ತಮ್ಮ ಹೆಸರಿನ ಮುಂದೆ ದಶನಾಮಗಳಲ್ಲಿ ಒಂದನ್ನು ಇಟ್ಟುಕೊಳ್ಳುತ್ತಾರೆ. ಅವು ಯಾವುವೆಂದರೆ ಸರಸ್ವತಿ, ತೀರ್ಥ, ಅರಣ್ಯ, ಭಾರತೀ, ಆಶ್ರಮ, ಗಿರಿ, ಪರ್ವತ, ಸಾಗರ, ವನ ಮತ್ತು ಪುರಿ.

ಸರಸ್ವತಿ, ಭಾರತಿ ಮತ್ತು ಪುರಿ ಉಪನಾಮಗಳು ಶೃಂಗೇರಿ ಮಠಕ್ಕೆ ಸೇರಿವೆ. ತೀರ್ಥ, ಆಶ್ರಮ ನಾಮಗಳು ದ್ವಾರಕಾ ಪೀಠಕ್ಕೆ ಸೇರಿವೆ. ಗಿರಿ, ಪರ್ವತ, ಸಾಗರ ಜ್ಯೋತಿರ್ಮಠಕ್ಕೆ ಸೇರಿವೆ. ಉಳಿದವು ಸ್ವತಂತ್ರ ಸಂಪ್ರದಾಯ ಹೊಂದಿವೆ. ಅರಣ್ಯನಾಮದ ವಿದ್ಯಾರಣ್ಯರು ಶೃಂಗೇರಿ ಮಠದ ಪೀಠಾಧಿಪತಿಗಳಾಗಿದ್ದರು.

ಷಣ್ಮತ ಸ್ಥಾಪಕರು

ಷಣ್ಮತ ಸ್ಥಾಪನೆ ಸೂರ್ಯ, ಗಣಪತಿ, ಅಂಬಿಕಾ, ಶಿವ, ವಿಷ್ಣು ಮತ್ತು ಸ್ಕಂದ ಈ ದೇವರುಗಳ ಆರಾಧಕರು ಪರಸ್ಪರ ತಾವು ಮೇಲು, ತಾವು ಮೇಲೆಂದು ಜಗಳವಾಡುತ್ತಿದ್ದುದನ್ನು ನಿಲ್ಲಿಸಿ, ಅವೆಲ್ಲವೂ ಒಬ್ಬನೇ ಈಶ್ವರನ ಬೇರೆಬೇರೆ ರೂಪಗಳೆಂದು ಆರಾಧಕರನ್ನು ಒಪ್ಪಿಸಿ, ಈ ಆರೂ ದೇವತೆಗಳನ್ನು ಪರಸ್ಪರ ವಿರೋಧವಿಲ್ಲದೆ ಪೂಜಿಸಬೇಕೆಂದು ನಿಯಮವನ್ನು ಮಾಡಿದರು. ತಾವು ಉಪಾಸನೆ ಮಾಡುವ ದೇವತೆಯನ್ನು ಮಧ್ಯೆ ಇಟ್ಟು ಉಳಿದ ದೇವತೆಗಳನ್ನು ಅದರ ಸುತ್ತಾ ಇಟ್ಟು, ಅದನ್ನು ಮುಖ್ಯ ದೇವತೆಯ ಪರಿವಾರವೆಂದು ಪೂಜಿಸಲು ಹೇಳಿದರು. ಈ ಪದ್ಧತಿ ಅಂದಿನಿಂದ ಶುರುವಾಯಿತು. ಈ ಕಾರಣದಿಂದ ಶಂಕರರಿಗೆ ಷಣ್ಮತ ಸ್ಥಾಪಕರೆಂದು ಹೆಸರಾಯಿತು.

ಶಂಕರಾಚಾರ್ಯರು ಎಲ್ಲಾ ದೇವ-ದೇವಿಯರ ಮೇಲೂ ಛಂದೋಬದ್ಧವಾದ, ಆರ್ಥಗರ್ಭಿತವಾದ, ಮನೋಹರವಾದ, ಭಕ್ತಿಯಿಂದ ಸ್ತುತಿಸಿದರೆ ಇಷ್ಟಾರ್ಥವನ್ನು ಕೈಗೂಡಿಸುವಂತಹ ಅಸಂಖ್ಯ ಸ್ತೋತ್ರಗಳನ್ನು ರಚಿಸಿದ್ದಾರೆ. ಏಕಶ್ಲೋಕಿಯಿಂದ ಹಿಡಿದು ದಶ ಶ್ಲೋಕಿ, ಶತಶ್ಲೋಕಿ, 580 ಶ್ಲೋಕಗಳಿರುವ ವಿವೇಕ ಚೂಡಾಮಣಿ, ಉಪದೇಶ ಸಾಹಸ್ರೀವರೆಗೂ ಇವರ ರಚನೆಗಳಿವೆ.

ಶಂಕರ ಅದ್ವೈತ ಸಿದ್ಧಾಂತ

ʼಸೃಷ್ಟಿಯಲ್ಲಿ ಇರುವುದು ಒಂದೇ ವಸ್ತು; ಅದೇ ಬ್ರಹ್ಮ. ಈ ಬ್ರಹ್ಮದ ಅನುಭವವೇ ಆನಂದದ ಅನುಭವ. ಎಲ್ಲರಲ್ಲೂ ಎಲ್ಲೆಲ್ಲೂ ಬ್ರಹ್ಮವೇ ಆಗಿರುವಾಗ, ಎಲ್ಲವೂ ಬ್ರಹ್ಮವೇ ಆಗಿರುವಾಗ ಇಲ್ಲಿ ಭೇದಭಾವಕ್ಕೆ ಅವಕಾಶವೇ ಇರದು. ನಮ್ಮ ದಿಟವಾದ ಸ್ವರೂಪವಾದ ಬ್ರಹ್ಮ, ಎಂದರೆ ಆನಂದವನ್ನು ಅನುಭವಕ್ಕೆ ತಂದುಕೊಳ್ಳುವುದೇ ಮೋಕ್ಷ. ಇದಕ್ಕಾಗಿ ನಾವೇನೂ ಶ್ರಮಪಡಬೇಕಿಲ್ಲ. ನಮ್ಮಲ್ಲಿರುವ ಅಜ್ಞಾನವನ್ನು ಹೋಗಲಾಡಿಸಿಕೊಂಡರೆ ಸಾಕು.ʼ ಇದು ಶಂಕರಾಚಾರ್ಯರ ಉಪದೇಶದ ಸಾರ.

ಏನಿದು ಅದ್ವೈತ ತತ್ತ್ವ?

ಶಂಕರಾಚಾರ್ಯರು ಎತ್ತಿಹಿಡಿದ ತತ್ತ್ವವನ್ನು ʼಅದ್ವೈತದರ್ಶನʼ ಎಂದು ಕರೆಯುತ್ತಾರೆ, ಅದ್ವೈತ ಎಂದರೇನು? ಡಿವಿಜಿ ಅವರು ಈ ಹೀಗೆ ಹೇಳುತ್ತಾರೆ..
‘ಅದ್ವೈತ ಅಥವಾ ಎರಡಿಲ್ಲದಿರುವಿಕೆ ಎಂಬುದು ಒಂದು ಸಂವೇದನೆಯ (feeling) ಹೆಸರು ಅಥವಾ ವಿಶ್ವದೊಡನೆ ತಾದಾತ್ಮ್ಯ ಸಂಬಂಧ.

ʼಅದ್ವೈತ ಎಂದರೆ ಒಂದು ಸಂವೇದನೆ ಎಂದು ನಾನು ಹೇಳಿದಾಗ ಅದು ಒಂದು ದೃಷ್ಟಿಕೋನ, ಅದು ಕೇವಲ ತರ್ಕಕ್ಕೆ ವಿಷಯವಲ್ಲ ಎಂಬುದೇ ನನ್ನ ಉದ್ದೇಶದಲ್ಲಿರುವ ಅರ್ಥ. ಅದು ಭಾವನಾಗಮ್ಯವಾದದ್ದು.
ʼಈ ಆತ್ಮಜ್ಞಾನವು ತರ್ಕದಿಂದ ಪಡೆಯಯಕ್ಕದ್ದಲ್ಲ (ಕಠೋಪನಿಷತ್ತು).

ʼಅದ್ವೈತ ಎಂಬ ಪದವೇ ಗಮನಾರ್ಹವಾದದ್ದು. ಅದು ಏಕತೆ ಎಂಬುದಕ್ಕಿಂತ ಹೆಚ್ಚಾಗಿ, ಅ–ದ್ವೈತ – ಎರಡನೆಯದಿಲ್ಲದಿರುವಿಕೆ, ಕೇವಲ ಏಕತೆಯಲ್ಲ. ಮನುಷ್ಯ ಮತ್ತು ಜಗತ್ತು, ನೋಡುವವನು ಮತ್ತು ನೋಡಲ್ಪಟ್ಟದ್ದು, ತೋರಿಕೆಯಿಂದ ತಿಳಿದುಬರುವುದು ಮತ್ತು ಕಾಣಬಾರದ ಸತ್ತ್ವ– ಈ ಪ್ರತ್ಯೇಕತೆ ಅಥವಾ ಇರ್ತನ ಮೇಲ್ನೋಟಕ್ಕೆ ಮಾತ್ರ ಕಾಣಬರತಕ್ಕದ್ದು. ನಮ್ಮ ಕಣ್ಣಿಗೆ ಕಾಣಬರುವುದು ಮತ್ತು ಕಾಣದೇ ಇರುವುದು, ಅವು ಎಲ್ಲವೂ ಒಂದೇ, ಎರಡಲ್ಲ. ಯಾವುದು ಇದೆಯೋ ಅದೇ ನಿಜವಾದದ್ದು. ಎಂದರೆ ಜೀವವೆಲ್ಲ ಒಂದೇ, ಎರಡಲ್ಲ, ಹಲವೂ ಅಲ್ಲ.

ʼಜೀವನದ ಚಟುವಟಿಕೆಗಳನ್ನು ಕುರಿತು ಅದ್ವೈತಿಯ ದೃಷ್ಟಿಯನ್ನು ಹೀಗೆ ಸಂಗ್ರಹಿಸಬಹುದು:

ಯೋಗರತವೋ ವಾ ಭೋಗರತೋವಾ ಸಂಗರತೋ ವಾ ಸಂಗವಿಹೀನಃ।
ಯಸ್ಯ ಬ್ರಹ್ಮಣಿ ರಮತೇ ಚಿತ್ತಂ ನಂದತಿ ನಂದತಿ ನಂದತ್ಯೇವ।।
(ಯೋಗದಲ್ಲಿ ತೊಡಗಿರಲಿ, ಭೋಗಿಯಾಗಿರಲಿ, ಎಲ್ಲರ ಜೊತೆಯಲ್ಲಿರಲಿ, ಏಕಾಂತ ವಾಸಮಾಡಲಿ, ಯಾರ ಮನಸ್ಸು ಬ್ರಹ್ಮದಲ್ಲಿ ನೆಲೆಯಾಗಿ ನಿಂತಿರುತ್ತದೆಯೋ ಅವನ ಮನಸ್ಸು ಆನಂದಿಸುತ್ತದೆ, ಆನಂದಲ್ಲೇ ಇರುತ್ತದೆ.)

ಈ ಜಗತ್ತಿನ ವಿಷಯದಲ್ಲಿ ಬೇಸರಗೊಳ್ಳುವುದಾಗಲೀ, ಅನಾದರಣೆ ತೋರುವುದಾಗಲೀ ಅದ್ವೈತವಲ್ಲ. ಸೋತ ಭಾವವೋ ಗೋಳಾಟದ ಮನೋಭಾವವೋ ಅದ್ವೈತವಲ್ಲ. ವಾಸ್ತವವಾಗಿ ಅದು ಅಭಯ, ವಿಜಯ. ಏಕೆಂದರೆ ಭಗವಂತನ ಕೃಪೆಯೂ ಶಕ್ತಿಯೂ ಅನಂತ ಮತ್ತು ನೀವು ಆ ಅನಂತದೊಂದಿಗೆ ಒಂದಾಗಬಹುದು.

ಮೂಲತತ್ವ–ಬ್ರಹ್ಮ ಒಂದೇ ಸತ್ಯ. ಜಗತ್ತು, ಬ್ರಹ್ಮವು ಜ್ಞಾನಸ್ವರೂಪವಾಗಿದೆ. ಅದು ಸಚ್ಚಿದಾನಂದ ಸ್ವರೂಪ, ನಿರಾಕಾರ, ನಿರ್ಗುಣ. ಭೂತ, ಭವಿಷ್ಯತ್, ವರ್ತಮಾನಗಳಲ್ಲಿ ಬಾಧಿತವಾಗದೇ ಇರುವುದು ಬ್ರಹ್ಮವೊಂದೇ.

ಮನಸ್ಸು, ಬುದ್ಧಿ, ಅಹಂಕಾರ ಮತ್ತು ಚಿತ್ತದಿಂದ ಆವರಿಸಲ್ಪಟ್ಟ ಮೂಲ ಚೈತನ್ಯವೇ ಜೀವ. ಅವಿದ್ಯೆಯಿಂದ (ಅಜ್ಞಾನದಿಂದ) ಬಿಡುಗಡೆಯಾದರೆ ಜೀವವು ಬ್ರಹ್ಮದಲ್ಲಿ ಲೀನವಾಗುವುದು.
ಶಂಕರಾಚಾರ್ಯ ಪ್ರತಿಪಾದಿತ ಅದ್ವೈತ ತತ್ವವು ಮಾನವರಲ್ಲಿನ ಸಾವಿನ ಭಯವನ್ನು ದೂರಮಾಡಬಲ್ಲ ಶಕ್ತಿಯನ್ನು ಹೊಂದಿದೆ. ಯಾರು ಈ ಮೂಲ ತತ್ತ್ವವನ್ನು ಅರ್ಥೈಸಿಕೊಳ್ಳುತ್ತಾರೋ ಅಂತಹವರು ಎಂದಿಗೂ ಯಾವುದಕ್ಕೂ ಅಳುಕುವುದಿಲ್ಲ. ಸೃಷ್ಟಿಯ ಪ್ರತಿಯೊಂದು ಅಣು-ಅಣುವಿನಲ್ಲಿಯೂ ಪರಮಾತ್ಮ ಸ್ವರೂಪಿಯಾದ ಬ್ರಹ್ಮವು ತಾನು ಇರುವುದರಿಂದಲೂ, ಆತ್ಮನೂ ಬ್ರಹ್ಮನೂ ಏಕವಾದುದರಿಂದಲೂ ನನ್ನೊಳಗೇ ಪರಬ್ರಹ್ಮದ ಅಂಶವಿರುವುದರಿಂದಲೂ ಯಾವ ಜೀವಿಯೂ ತಾನು ಮೇಲು, ಕೀಳು ಎನ್ನುವ ಹಾಗಿಲ್ಲ.

ಯಾವುದೂ ಮುಖ್ಯವಲ್ಲ, ಯಾವುದೂ ಅಮುಖ್ಯವೂ ಅಲ್ಲ. ಜಗತ್ತೆಲ್ಲವೂ ಏಕಸ್ವರೂಪವಾಗಿದ್ದರೂ ಮಾಯೆಯಿಂದಾವೃತರಾದವರ ಕಣ್ಣುಗಳಿಗೆ ನಾನಾ ವಿಧಗಳಲ್ಲಿ ಕಾಣಿಸುತ್ತದೆ ಎನ್ನುವುದು ಅದ್ವೈತ ತತ್ತ್ವ. ಹೀಗಾಗಿ ಮಾನವರಾದಿಯಾಗಿ ಯಾರೂ ಸಾವಿಗೆ ಭಯಪಡಬೇಕಿಲ್ಲ. ಸಾವು ಅಂತ್ಯವಲ್ಲ, ಏಕೆಂದರೆ ಬ್ರಹ್ಮಕ್ಕೆ ಯಾವುದೇ ಅಂತ್ಯವಿಲ್ಲ. ಅದು ಅನಂತವಾದುದು.

ಜೀವನದ ಕೊನೆಯ ಭಾಗದಲ್ಲಿ ಹಿಮಾಲಯಕ್ಕೆ, ಕಾಶ್ಮೀರಕ್ಕೆ ಹೋಗಿ ಅಲ್ಲಿ ಸರ್ವಜ್ಞ ಪೀಠವನ್ನು ಅಲಂಕರಿಸಿದರು ಶ್ರೀ ಶಂಕರರು. ನಂತರ ಕೇದಾರನಾಥಕ್ಕೆ ಪ್ರಯಾಣ ಮಾಡಿ ತಮ್ಮ ಮೂವತ್ತೆರಡನೇ ವಯಸ್ಸಿನಲ್ಲಿ ಕೇದಾರ ದೇವಾಲಯದ ಹತ್ತಿರ ವಿದೇಹ ಮುಕ್ತಿಯನ್ನು ಪಡೆದರೆಂದು ಪ್ರಾಚೀನ ವಾದ. ʼಮಾಧವ ಶಂಕರ ವಿಜಯʼದಲ್ಲಿ ಕೇದಾರದಲ್ಲಿ ಅವರು ವಿದೇಹ ಮುಕ್ತಿ ಪಡೆದರೆಂದು ಹೇಳಲಾಗಿದೆ.


ಡಾ.ಗುರುಪ್ರಸಾದ ಹವಲ್ದಾರ್

ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.

Tags: adi shankaracharyaadi shankaracharya birth dayindiakaladikarnatakakeralashankara jayanti
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಕೋವಿಡ್ ಕೆಸರು; ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಪಂಚಪ್ರಶ್ನೆ ಹಾಕಿದ ಎಚ್ಡಿಕೆ

2ಡಿಜಿ ಔ‍ಷಧ ಖರೀದಿಸಿ ಜೆಡಿಎಸ್‌ನಿಂದ ಉಚಿತವಾಗಿ ಜನರಿಗೆ ಹಂಚಲು ಚಿಂತನೆ; ಸೋಂಕು ಪತ್ತೆ ಪರೀಕ್ಷೆ ಸಮಸ್ಯೆ, ಪಡಿತರ ವಿತರಣೆಯಲ್ಲಿನ ತೊಡಕಿನ ಬಗ್ಗೆ ಚರ್ಚೆ

Leave a Reply Cancel reply

Your email address will not be published. Required fields are marked *

Recommended

ಆರೋಗ್ಯ ಸಚಿವರ ಉಸ್ತುವಾರಿ ಜಿಲ್ಲೆಯ ದೇವನಹಳ್ಳಿಯಲ್ಲೇ ಹಳ್ಳಹಿಡಿದ ಸ್ವಚ್ಛಭಾರತ!!

ಆರೋಗ್ಯ ಸಚಿವರ ಉಸ್ತುವಾರಿ ಜಿಲ್ಲೆಯ ದೇವನಹಳ್ಳಿಯಲ್ಲೇ ಹಳ್ಳಹಿಡಿದ ಸ್ವಚ್ಛಭಾರತ!!

3 years ago
ಬೆಳಗಾವಿ ಅಧಿವೇಶನದ ನೇರ ಪ್ರಸಾರ

ಬೆಳಗಾವಿ ಅಧಿವೇಶನದ ನೇರ ಪ್ರಸಾರ

1 year ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ