• About
  • Advertise
  • Careers
  • Contact
Thursday, October 29, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home COVID-19

ಲಸಿಕೆ ಒಂದೇ ಆಪ್ತರಕ್ಷಕ, ಕೋವಿಶೀಲ್ಡ್ ಡೋಸ್ ಅಂತರ ಮತ್ತೆ ಬದಲಿಸುವ ಅಗತ್ಯವಿಲ್ಲ; ನಾವು ಎಚ್ಚರದಿಂದ ಇದ್ದರೆ 3ನೇ ಅಲೆ ಬರುವುದೇ ಇಲ್ಲ

cknewsnow desk by cknewsnow desk
June 22, 2021
in COVID-19, NATION, NEWS IN USE, STATE
Reading Time: 2 mins read
0
ರಾಜ್ಯದಲ್ಲಿ ದಿನೇದಿನೆ ಹೆಚ್ಚುತ್ತಿರುವ ಡಿಮಾಂಡ್: 2 ಕೋಟಿ ಕೋವಿಡ್ ಲಸಿಕೆ ಖರೀದಿಗೆ ಜಾಗತಿಕ ಟೆಂಡರ್‌,  ಈ ಮೊದಲೇ 3 ಕೋಟಿ ಡೋಸ್‌ಗೆ ಸರಕಾರದಿಂದ ಆರ್ಡರ್
917
VIEWS
FacebookTwitterWhatsuplinkedinEmail

ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪಾಲ್

Photo’s courtesy: Wikipedia

  • ಡಾ.ವಿ.ಕೆ.ಪಾಲ್

ನವದೆಹಲಿ: ಕೋವಿಡ್ ಲಸಿಕೆ ಕುರಿತು ಪರಿಷ್ಕೃತ ಮಾರ್ಗಸೂಚಿ ಜಾರಿಗೆ ಬಂದ ಮೊದಲ ದಿನ ನಿನ್ನೆ (ಸೋಮವಾರ) ಸುಮಾರು 81 ಲಕ್ಷ ಲಸಿಕೆ ಡೋಸ್ʼಗಳನ್ನು ಹಾಕಿರುವುದು ಭಾರತದ ಲಸಿಕೆ ಹಾಕುವ ಸಾಮರ್ಥ್ಯದ ಸಂಕೇತವಾಗಿದೆ ಎಂದು ನೀತಿ ಆಯೋಗದ (ಆರೋಗ್ಯ) ಸದಸ್ಯ ಡಾ.ವಿ.ಕೆ.ಪಾಲ್ ಹೇಳಿದರು.

ಅವರು ಡಿಡಿ ನ್ಯೂಸ್ ಜೊತೆ ಮಾತನಾಡುತ್ತಾ ತಮ್ಮ ವಿಚಾರಗಳನ್ನು ಹಂಚಿಕೊಂಡ ಪಾಲ್‌ ಅವರು, ಮೊದಲ ದಿನದ ಲಸಿಕಾ ಅಭಿಯಾನದಲ್ಲಿ ಹಾಕಿರುವ ಸಂಖ್ಯೆಯನ್ನು ಗಮನಿಸಿದರೆ ಬರುವ ದಿನಗಳು ಮತ್ತು ವಾರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಲಸಿಕೆ ಹಾಕುವ ಸಾಮರ್ಥ್ಯವನ್ನು ಇದು ಪ್ರದರ್ಶಿಸುತ್ತವೆ. ಇದೆಲ್ಲವೂ ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆ ಮತ್ತು ಸಮನ್ವಯತೆಯಿಂದ ಸಾಧ್ಯವಾಗಲಿದ್ದು, ಈ ಕಾರ್ಯವನ್ನು ಅಭಿಯಾನದ ಮಾದರಿಯಲ್ಲಿ ಕೊಂಡೊಯ್ಯಬೇಕಾಗುತ್ತದೆ ಎಂದರು.

3ನೇ ಅಲೆ ಸಂಭವವಿದೆಯೋ ಇಲ್ಲವೋ ಎಂಬುದು ನಮ್ಮ ಕೈಯ್ಯಲ್ಲೇ ಇದೆ

ಹೆಚ್ಚಿನ ಸಂಖ್ಯೆಯ ಜನತೆ ಲಸಿಕೆ ಹಾಕಿಸಿಕೊಂಡರೆ ಮತ್ತು ಕೋವಿಡ್ʼನ ಸೂಕ್ತ ವರ್ತನೆಯನ್ನು ಅನುಸರಿಸಿದರೆ ಮೂರನೇ ಅಲೆಯನ್ನು ತಡೆಯಬಹುದು ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಎಂದು ಡಾ. ಪಾಲ್ ಹೇಳಿದರು.

“ಕೋವಿಡ್ ಸೂಕ್ತ ವರ್ತನೆಯನ್ನು ನಾವು ಅನುಸರಿಸಿದರೆ ಏಕೆ ಮೂರನೇ ಅಲೆಯಾದರೂ ಏಕೆ ಬರುತ್ತದೆ? ಹಲವಾರು ದೇಶಗಳಿಗೆ ಎರಡನೇ ಅಲೆಯೂ ಬರಲಿಲ್ಲ. ನಾವು ಕೋವಿಡ್ ಸೂಕ್ತ ವರ್ತನೆ ಪರಿಪಾಲಿಸಿದರೆ ಈ ಪರಿಸ್ಥಿಯಿಂದ ಮುಂದೆ ಸಾಗಬಹುದು” ಎಂದು ಅವರು ತಿಳಿಸಿದರು.

ಬೇಗ ಸಾಮಾನ್ಯ ಸ್ಥಿತಿಗೆ ಮರಳಲು ತ್ವರಿತ ಲಸಿಕಾ ಆಂದೋಲನವೊಂದೇ ದಾರಿ

ಭಾರತದಲ್ಲಿ ಆರ್ಥಿಕತೆಯನ್ನು ಮುಕ್ತಗೊಳಿಸಲು ಮತ್ತು ಜನ ಸಾಮಾನ್ಯರು ಮೊದಲು ಲಸಿಕೆ ಹಾಕಿಸಿಕೊಳ್ಳುವುದು ಪ್ರಮುಖವಾಗಿದೆ. ನಾವು ದೈನಂದಿನ ಕೆಲಸಕ್ಕೆ ತೆರಳಲು, ನಮ್ಮ ಸಾಮಾಜಿಕ ಜೀವನವನ್ನು ನಿರ್ವಹಿಸಲು, ಶಾಲೆಗಳನ್ನು ತೆರೆಯಲು, ವ್ಯಾಪಾರ, ಆರ್ಥಿಕ ಚಟುವಟಿಕೆ ಬಗ್ಗೆ ಗಮನಕೊಡಲು; ಇದೆಲ್ಲವನ್ನೂ ಮಾಡಲು ತ್ವರಿತಗತಿಯಲ್ಲಿ ಲಸಿಕೆ ಹಾಕಿಸಿಕೊಂಡಾಗ ಮಾತ್ರ ಸಾಧ್ಯ ಎಂದು ಅವರು ಪ್ರತಿಪಾದಿಸಿದರು.

ನಮ್ಮ ಲಸಿಕೆಗಳು ಸುರಕ್ಷಿತವಲ್ಲ ಎಂದು ಯೋಚಿಸುವುದು ನಾವು ಮಾಡುವ ದೊಡ್ಡ ತಪ್ಪು ಎಂದು ಡಾ. ಪಾಲ್ ಹೇಳಿದ್ದಾರೆ. “ ಜಗತ್ತಿನ ಎಲ್ಲಾ ಲಸಿಕೆಗಳನ್ನು ನಮ್ಮ ದೇಶದಲ್ಲಿನ ಲಸಿಕೆಗಳಂತೆಯೇ ತುರ್ತು ಬಳಕೆಗಾಗಿನ ಅಧಿಕಾರವನ್ನು ಅನುಮೋದಿಸಲಾಗಿದೆ. ಸಮಾಜದ ವಿವಿಧ ವರ್ಗಗಳ ಜನತೆ ಇವುಗಳನ್ನು ಪಡೆದಿದ್ದಾರೆ. ಎರಡನೇ ಅಲೆಯನ್ನು ಹಿಮ್ಮೆಟ್ಟಿಸಲಾಗಿದೆ ಮತ್ತು ಕೋವಿಡ್ –19 ಲಸಿಕೆ ಪಡೆಯಲು ಇದು ಉತ್ತಮ ಸಮಯ” ಎಂದು ಹೇಳಿದರು.

ನಮ್ಮ ಆರೋಗ್ಯ ಕಾರ್ಯಕರ್ತರಿಗೆ ಆದ್ಯತೆ ಮೇರೆಗೆ ಲಸಿಕೆ ಹಾಕಿದ ಪರಿಣಾಮ ಎರಡನೇ ಅಲೆಯಿಂದ ಅವರನ್ನು ರಕ್ಷಿಸಲಾಗಿದೆ. “ಕೇವಲ ಕೆಲವೇ ಕೆಲವು ಆರೋಗ್ಯ ಕಾರ್ಯಕರ್ತರು ಮಾತ್ರ ಸೋಂಕಿಗೆ ಒಳಗಾಗಿದ್ದಾರೆ. ಇಲ್ಲವಾಗಿದ್ದಲ್ಲಿ ಎರಡನೇ ಅಲೆ ಸಂದರ್ಭದಲ್ಲಿ ನಮ್ಮ ಆಸ್ಪತ್ರೆ ವ್ಯವಸ್ಥೆ ತಾನಾಗಿಯೇ ಕುಸಿದು ಬೀಳುತ್ತಿತ್ತು. ಹೀಗಾಗಿಯೇ ಲಸಿಕೆಯಿಂದ ಜನರನ್ನು ಸೋಂಕಿನಿಂದ ರಕ್ಷಿಸಲು ಸಾಧ್ಯವಾಗುತ್ತಿದೆ ಎಂಬುದನ್ನು ದಯವಿಟ್ಟು ಗಮನಿಸಿ” ಎಂದು ಡಾ.ಪಾಲ್‌ ಕಿವಿಮಾತು ಹೇಳಿದರು.

ಭಾರತಕ್ಕೆ ಪ್ರತಿದಿನ 1.25 ಕೋಟಿ ಡೋಸ್ ಲಸಿಕೆ ಹಾಕುವ ಸಾಮರ್ಥ್ಯವಿದೆ

ಭಾರತದಲ್ಲಿ ಲಸಿಕಾ ಕಾರ್ಯಕ್ರಮ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹೆಗಾರರ ಗುಂಪಿನ ಅಧ‍್ಯಕ್ಷ (ಎನ್.ಟಿ.ಎ.ಜಿ.ಐ) ಡಾ.ಎನ್.ಕೆ.ಅರೋರ ಸಹ ಈ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಅವರು ಮಾತನಾಡಿ, ಇಂದು ನೀಡಿದ ಲಸಿಕಾ ಡೋಸ್ʼಗಳು ಅತಿ ದೊಡ್ಡ ಸಾಧನೆ. “ ಇಂದು ನಾವೇನು ಮಾಡಿದ್ದೇವೆಯೋ ಅದು ಅತಿ ದೊಡ್ಡ ಸಾಧನೆ. ಪ್ರತಿದಿನ ಒಂದು ಕೋಟಿ ಜನರಿಗೆ ಲಸಿಕೆ ಹಾಕುವುದು ನಮ್ಮ ಗುರಿ. ನಮಗೆ ಪ್ರತಿದಿನ ಸುಲಭವಾಗಿ 1.25 ಕೋಟಿ ಡೋಸ್ ಲಸಿಕೆ ಹಾಕುವ ಸಾಮರ್ಥ್ಯವಿದೆ” ಎಂದರು.

ಪರಿಷ್ಕೃತ ಮಾರ್ಗಸೂಚಿ ಜಾರಿಗೆ ಬಂದ ಮೊದಲ ದಿನ ನಾವು ಇದನ್ನು ಸಾಧಿಸಿದ್ದೇವೆ ಮತ್ತು ಖಾಸಗಿ ವಲಯದಿಂದ ಉತ್ತಮ ಬೆಂಬಲ ದೊರೆತಲ್ಲಿ ವಿಶೇಷವಾಗಿ ಈ ಗುರಿ ಸಾಧಿಸಬಹುದು ಎಂದು ಡಾ. ಅರೋರ ಹೇಳಿದರು.

ಈ ಹಿಂದೆಯೂ ಭಾರತ ಹೇಗೆ ಯಶಸ್ವಿಯಾಗಿದೆ ಎನ್ನುವ ಕುರಿತು ಮಾತನಾಡಿದ ಡಾ.ಅರೋರ, “ಇದು ಹಿಂದೆಂದೂ ಕಂಡಿದ್ದೇನು ಅಲ್ಲ. ನಾವು ಪೊಲೀಯೋ ಲಸಿಕೆಯನ್ನು 17 ಕೋಟಿ ಜನರಿಗೆ ಹಾಕಿದ್ದೇವೆ. ಭಾರತ ಏನಾದರೂ ಸಾಧಿಸಬೇಕು ಎಂದು ಬಯಸಿದರೆ ಅದನ್ನು ಸಾಧಿಸಿಯೇ ತೀರುತ್ತದೆ.” ಎಂದರು.

ಸಾರ್ವಜನಿಕ ಮತ್ತು ಖಾಸಗಿ ವಲಯ ಕೈಜೋಡಿಸಿದರೆ ಉತ್ತಮ ಕೆಲಸ ಮಾಡಬಹುದು ಮತ್ತು ದೇಶದ ಸಮಸ್ಯೆಗಳನ್ನು ಬಗೆಹರಿಸಬಹುದು ಎನ್ನುವುದಕ್ಕೆ ಭಾರತದ ಕೋವಿಡ್–19 ಲಸಿಕೆ ಅಭಿಯಾನ ಒಂದು ಪ್ರಮುಖ ಉದಾಹರಣೆಯಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಲಸಿಕೆ ಕುರಿತ ಹಿಂಜರಿಕೆ ತೊಡೆದುಹಾಕಲು ಸಾರ್ವಜನಿಕ ಪಾಲ್ಗೊಳ್ಳುವಿಕೆ ಮತ್ತು ಜಾಗೃತಿ ಅಗತ್ಯ

ಲಸಿಕೆ ಕುರಿತ ತಪ್ಪು ಕಲ್ಪನೆ ಮತ್ತು ಊಹಾಪೋಹಗಳನ್ನು ನಿಯಂತ್ರಿಸಲು ಜನರ ಪಾಲ್ಗೊಳ್ಳುವಿಕೆ ಮತ್ತು ಜಾಗೃತಿ ಅತ್ಯಂತ ಮಹತ್ವ ಪಡೆದಿದೆ ಎಂದು ಎನ್.ಟಿ.ಎ.ಜಿ.ಐ ಅಧ‍್ಯಕ್ಷರು ಪ್ರತಿಪಾದಿಸಿದರು.

“ಲಸಿಕೆ ಕುರಿತ ಭೀತಿ ನಿರ್ಮೂಲನೆ ಮಾಡಲು ಜನರ ಸಹಭಾಗಿತ್ವ ಮತ್ತು ಜನ ಜಾಗೃತಿ ಅತ್ಯಂತ ಅಗತ್ಯವಾಗಿದೆ. ಅಂತಿಮವಾಗಿ ಇದು ಜನರ ಕೈಯಲ್ಲಿದ್ದು, ಜನತೆ ಮುಂದೆ ಬರಬೇಕು ಮತ್ತು ಲಸಿಕೆಯನ್ನು ಹಾಕಿಸಿಕೊಳ್ಳಬೇಕು” ಎಂದರು.

ಲಸಿಕಾಕರಣ ಬಗ್ಗೆ ಅರಿವು ಹೆಚ್ಚಿಸಲು ಸಿದ್ಧತೆಗಳನ್ನು ಮಾಡಬೇಕು ಮತ್ತು ಲಸಿಕೆ ಕುರಿತ ಹಿಂಜರಿಕೆಯನ್ನು ತೊಡೆದುಹಾಕಲು ತಳಮಟ್ಟದಲ್ಲಿ ಆಶಾ ಮತ್ತು ಮಂಚೂಣಿ ಕಾರ್ಯಕರ್ತರು ಈಗಾಗಲೇ ಕೆಲಸ ಆರಂಭಿಸಿದ್ದಾರೆ ಎಂದು ಹೇಳಿದರು.

ಲಸಿಕೆ ಪೂರೈಕೆಗೆ ಯಾವುದೇ ಸಮಸ್ಯೆಯಾಗದು

ಲಸಿಕೆ ಲಭ್ಯತೆ ಕುರಿತಂತೆ ಯಾವುದೇ ಸಮಸ್ಯೆಯಾಗದು ಎಂದು ಅಧ್ಯಕ್ಷರು ಆಶ್ವಾಸನೆ ನೀಡಿದ್ದಾರೆ. “ ಮುಂದಿನ ತಿಂಗಳು 20 ರಿಂದ 22 ಕೋಟಿ ಲಸಿಕೆ ದೊರೆಯಲಿದೆ.” ಎಂದರು. ದೇಶದ ಪ್ರತಿಯೊಂದು ಮೂಲೆ ಮೂಲೆಗೆ, ಗುಡ್ಡಗಾಡು ಪ್ರದೇಶ, ಬುಡಕಟ್ಟು ಮತ್ತು ಬಹಳ ವಿರಳ ಜನಸಂಖ್ಯೆ ಹೊಂದಿರುವ ಪ್ರದೇಶಗಳಿಗೂ ಲಸಿಕೆ ದೊರೆಯುವಂತೆ ಮಾಡಲಾಗಿದ್ದು, ಆರೋಗ್ಯ ಮೂಲ ಸೌಕರ್ಯ ಉತ್ತಮವಾಗಿ ವಿಸ್ತರಿಸಿದೆ ಎಂದು ಡಾ. ಅರೋರ ಹೇಳಿದರು.

ಪ್ರಸ್ತುತ ಕೋವಿಶೀಲ್ಡ್ ಲಸಿಕೆಯ ಡೋಸ್ ನಡುವಿನ ಅಂತರದಲ್ಲಿ ಬದಲಾವಣೆ ಅಗತ್ಯವಿಲ್ಲ

ಕೋವಿಶೀಲ್ಡ್ ಲಸಿಕೆಯ ಡೋಸೆಜ್ ಗಳ ನಡುವಿನ ಅಂತರದ ಅವಧಿಯನ್ನು ಬದಲಾಯಿಸುವ ಕುರಿತಾದ ಪ್ರಶ್ನೆಗೆ ಅಧ್ಯಕ್ಷರು ಪ್ರತಿಕ್ರಿಯೆ ನೀಡಿ, ಮಧ್ಯಂತರ ಅವಧಿಯನ್ನು ಬದಲಾಯಿಸಲು ಈ ಸಮಯದಲ್ಲಿ ಯಾವುದೇ ಅಗತ್ಯವಿಲ್ಲ ಎಂದು ಹೇಳಿದರು.

“ನಾವು ರಾಷ್ಟ್ರೀಯ ಲಸಿಕಾ ಜಾಡುಪತ್ತೆ ಕುರಿತ ವ್ಯವಸ್ಥೆಯಿಂದ ದತ್ತಾಂಶ ಸಂಗ್ರಹಿಸುತ್ತಿದ್ದೇವೆ ಮತ್ತು ಲಸಿಕೆಯ ಪರಿಣಾಮಕಾರಿತ್ವ, ಡೋಸ್ ಗಳ ಮಧ್ಯಂತರ ಅವಧಿ, ಪ್ರದೇಶವಾರು ಪರಿಣಾಮ, ರೂಪಾಂತರ ಕುರಿತು ಸೂಕ್ತ ಸಮಯದಲ್ಲಿ ಮೌಲ್ಯಮಾಪನ ಮಾಡಲಾಗುತ್ತಿದ್ದು, ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ ಎಂದರು.

ಲಸಿಕೆಯ ಪ್ರತಿಯೊಂದು ಡೋಸ್ʼನಿಂದ ಜನತೆ ಗರಿಷ್ಠ ಲಾಭ ಪಡೆಯಬೇಕು ಎನ್ನುವುದು ನಮ್ಮ ಮೂಲ ತತ್ವವಾಗಿದೆ. ಪ್ರಸ್ತುತ ನಮ್ಮ ಡೋಸೆಜ್ʼನಿಂದ ಹೆಚ್ಚಿನ ಲಾಭ ಪಡೆಯುತ್ತಿರುವುದನ್ನು ನಾವು ಗಮನಿಸಿದ್ದೇವೆ.” ಎಂದರು.

Tags: covid third wavecovid19covishielddr Vinod Kumar Pauldr VK Paulindiaindia fights coronaniti aayogvaccination
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

#SIR ರಾಜ್ಯದಲ್ಲಿ 99.32 ಲಕ್ಷ ಮತದಾರರ ಹೆಸರಿಲ್ಲ

#SIR ರಾಜ್ಯದಲ್ಲಿ 99.32 ಲಕ್ಷ ಮತದಾರರ ಹೆಸರಿಲ್ಲ

by cknewsnow desk
October 28, 2026
0

ಬೆಂಗಳೂರಿನಲ್ಲಿ 43.13% ಮತದಾರರ ಪ್ರಮಾಣ ಕುಸಿತ

ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ₹600 ಕೋಟಿಗೆ ಡೀಲ್ ಕೊಟ್ಟರಾ ಡಿಕೆಶಿ!!

ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ₹600 ಕೋಟಿಗೆ ಡೀಲ್ ಕೊಟ್ಟರಾ ಡಿಕೆಶಿ!!

by cknewsnow desk
October 25, 2026
0

ಹಾಲಿ ಮುಖ್ಯಮಂತ್ರಿ ವಿರುದ್ಧ ಕೇಂದ್ರ ಸಚಿವರ ಗಂಭೀರ ಆರೋಪ; ಈಗಿನ ಮಹಾನ್ ಮುಖ್ಯಮಂತ್ರಿಗಳೇ ಸ್ಟಿಂಗ್ ಮೂಲಪುರುಷ

ಸ್ಟಿಂಗ್ ಮಾಡಿದವರಿಗೆ ನೋಟಿಸ್, ಅನ್ಯಪಕ್ಷದವರ ಅರೆಸ್ಟ್!

ಸ್ಟಿಂಗ್ ಮಾಡಿದವರಿಗೆ ನೋಟಿಸ್, ಅನ್ಯಪಕ್ಷದವರ ಅರೆಸ್ಟ್!

by cknewsnow desk
October 25, 2026
0

ಸ್ಟಿಂಗ್ ಆಪರೇಶನ್ ಪ್ರಕರಣದಲ್ಲಿ ರಾಜ್ಯ ಸರ್ಕಾರದ್ದು ಇಬ್ಬಗೆ ನೀತಿ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ

ಸ್ಟಿಂಗ್ ವಿರುದ್ಧ ಕೋರ್ಟ್ ಮೊರೆ ಹೋದ ಸಿದ್ದರಾಮಯ್ಯ! ಇಂದು ಆದೇಶ ನಿರೀಕ್ಷೆ

ನನ್ನ ತಲೆಗೆ ಸ್ಟಿಂಗ್ ಕಟ್ಟಲು ಡಿಕೆಶಿ, ಪ್ರಿಯಾಂಕ್ ಖರ್ಗೆ ಸಂಚು

by cknewsnow desk
October 25, 2026
0

ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ; #kpsc ಹಗರಣದ ದಿಕ್ಕು ತಪ್ಪಿಸಲು ಪ್ರಿಯಾಂಕ್ ಖರ್ಗೆ ಒದ್ದಾಟ

ಬೆಂಗಳೂರು ಸುತ್ತಲಿನ ಜನರ ಸಮಾಧಿ ಮೇಲೆ ಬ್ರ್ಯಾಂಡ್‌ ಬೆಂಗಳೂರು

10 ತಿಂಗಳಾದರೂ ಸಿಗದ ಭೂಮಿ; ರಾಜ್ಯದ ಕೈತಪ್ಪಲಿದೆಯಾ ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ

by cknewsnow desk
October 22, 2026
0

ಬೇಸತ್ತು ಮುಖ್ಯಮಂತ್ರಿ ಡಿಕೆಶಿಗೆ ಪತ್ರ ಬರೆದ ಕೇಂದ್ರ ಸಚಿವ #HDK

ರಾಜೀನಾಮೆ ಕೊಟ್ಟು ಹೊರಬನ್ನಿ; ಅಪಮಾನಿತ ದಲಿತ ಸಚಿವರಿಗೆ #Jds ಕಿವಿಮಾತು

ರಾಜೀನಾಮೆ ಕೊಟ್ಟು ಹೊರಬನ್ನಿ; ಅಪಮಾನಿತ ದಲಿತ ಸಚಿವರಿಗೆ #Jds ಕಿವಿಮಾತು

by cknewsnow desk
October 22, 2026
0

ಮೈಸೂರು ದಸರಾದಲ್ಲಿ ಅವಮಾನ ಪ್ರಸಂಗ; ಬಾಯಲ್ಲಿ ಜಾತ್ಯತೀತ ತತ್ವ, ಆಚರಣೆಯಲ್ಲಿ ಅಸೃಶ್ಯತೆ!; ಕಾಂಗ್ರೆಸ್ ವಿರುದ್ಧ ಜೆಡಿಎಸ್ ವಾಗ್ದಾಳಿ

Next Post
ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳಿಗೆ ಗಲೀಜು ನೀರೇ ಗತಿ; ಹೆಚ್.ಎನ್.ವ್ಯಾಲಿ & ಕೆ.ಸಿ.ವ್ಯಾಲಿ ವಿಷಕಾರಿ ನೀರಿನ 3ನೇ ಹಂತದ ಶುದ್ಧೀಕರಣ ಇಲ್ಲ ಎಂದು ಕೈ ಎತ್ತಿಬಿಟ್ಟ ಸರಕಾರ!!

ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳಿಗೆ ಗಲೀಜು ನೀರೇ ಗತಿ; ಹೆಚ್.ಎನ್.ವ್ಯಾಲಿ & ಕೆ.ಸಿ.ವ್ಯಾಲಿ ವಿಷಕಾರಿ ನೀರಿನ 3ನೇ ಹಂತದ ಶುದ್ಧೀಕರಣ ಇಲ್ಲ ಎಂದು ಕೈ ಎತ್ತಿಬಿಟ್ಟ ಸರಕಾರ!!

Leave a Reply Cancel reply

Your email address will not be published. Required fields are marked *

Recommended

ಕೇಂದ್ರ ಸಚಿವ HD ಕುಮಾರಸ್ವಾಮಿ ಪ್ರೆಸ್ ಮೀಟ್ #Live

ಕೇಂದ್ರ ಸಚಿವ HD ಕುಮಾರಸ್ವಾಮಿ ಪ್ರೆಸ್ ಮೀಟ್ #Live

2 weeks ago
ಹೈದರಾಬಾದ್‌ನಲ್ಲಿ ರಾಕಿಭಾಯ್;‌ ಕೆಜಿಎಫ್‌ ಚಾಪ್ಟರ್-‌2 ಕೊನೆ ಹಂತದ ಶೂಟಿಂಗ್‌ ಶುರು

ಹೈದರಾಬಾದ್‌ನಲ್ಲಿ ರಾಕಿಭಾಯ್;‌ ಕೆಜಿಎಫ್‌ ಚಾಪ್ಟರ್-‌2 ಕೊನೆ ಹಂತದ ಶೂಟಿಂಗ್‌ ಶುರು

6 years ago

Popular News

  • #SIR ರಾಜ್ಯದಲ್ಲಿ 99.32 ಲಕ್ಷ ಮತದಾರರ ಹೆಸರಿಲ್ಲ

    #SIR ರಾಜ್ಯದಲ್ಲಿ 99.32 ಲಕ್ಷ ಮತದಾರರ ಹೆಸರಿಲ್ಲ

    0 shares
    Share 0 Tweet 0
  • ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ₹600 ಕೋಟಿಗೆ ಡೀಲ್ ಕೊಟ್ಟರಾ ಡಿಕೆಶಿ!!

    0 shares
    Share 0 Tweet 0
  • ಸ್ಟಿಂಗ್ ಮಾಡಿದವರಿಗೆ ನೋಟಿಸ್, ಅನ್ಯಪಕ್ಷದವರ ಅರೆಸ್ಟ್!

    0 shares
    Share 0 Tweet 0
  • ನನ್ನ ತಲೆಗೆ ಸ್ಟಿಂಗ್ ಕಟ್ಟಲು ಡಿಕೆಶಿ, ಪ್ರಿಯಾಂಕ್ ಖರ್ಗೆ ಸಂಚು

    0 shares
    Share 0 Tweet 0
  • 10 ತಿಂಗಳಾದರೂ ಸಿಗದ ಭೂಮಿ; ರಾಜ್ಯದ ಕೈತಪ್ಪಲಿದೆಯಾ ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

#SIR ರಾಜ್ಯದಲ್ಲಿ 99.32 ಲಕ್ಷ ಮತದಾರರ ಹೆಸರಿಲ್ಲ

#SIR ರಾಜ್ಯದಲ್ಲಿ 99.32 ಲಕ್ಷ ಮತದಾರರ ಹೆಸರಿಲ್ಲ

October 28, 2026
ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ₹600 ಕೋಟಿಗೆ ಡೀಲ್ ಕೊಟ್ಟರಾ ಡಿಕೆಶಿ!!

ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ₹600 ಕೋಟಿಗೆ ಡೀಲ್ ಕೊಟ್ಟರಾ ಡಿಕೆಶಿ!!

October 25, 2026
ಸ್ಟಿಂಗ್ ಮಾಡಿದವರಿಗೆ ನೋಟಿಸ್, ಅನ್ಯಪಕ್ಷದವರ ಅರೆಸ್ಟ್!

ಸ್ಟಿಂಗ್ ಮಾಡಿದವರಿಗೆ ನೋಟಿಸ್, ಅನ್ಯಪಕ್ಷದವರ ಅರೆಸ್ಟ್!

October 25, 2026
ಸ್ಟಿಂಗ್ ವಿರುದ್ಧ ಕೋರ್ಟ್ ಮೊರೆ ಹೋದ ಸಿದ್ದರಾಮಯ್ಯ! ಇಂದು ಆದೇಶ ನಿರೀಕ್ಷೆ

ನನ್ನ ತಲೆಗೆ ಸ್ಟಿಂಗ್ ಕಟ್ಟಲು ಡಿಕೆಶಿ, ಪ್ರಿಯಾಂಕ್ ಖರ್ಗೆ ಸಂಚು

October 25, 2026

Covid 19

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

October 16, 2026
ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ