• About
  • Advertise
  • Careers
  • Contact
Thursday, October 29, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CHIKKABALLAPUR

ವಿದ್ಯಾರ್ಥಿಗಳಿಗೆ ಲಸಿಕೆ ನೀಡಿದ ನಂತರ ಕಾಲೇಜು ಆರಂಭ; ಡಿಸಿಎಂ & ಶಿಕ್ಷಣ ಸಚಿವರ ಜತೆ ಚರ್ಚೆ ನಂತರ ನಿರ್ಧಾರ: ಡಾ.ಕೆ.ಸುಧಾಕರ್

cknewsnow desk by cknewsnow desk
June 23, 2021
in CHIKKABALLAPUR, COVID-19, STATE
Reading Time: 1 min read
0
ಬೀದರ್‌ನ ಬ್ರಿಮ್ಸ್ ಅವ್ಯವಸ್ಥೆ ಕಂಡು ಗಾಬರಿಯಾದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್!!, ಹೆಜ್ಜೆ ಹೆಜ್ಜೆಗೂ ಅವ್ಯವಸ್ಥೆ ಕಂಡು ವೈದ್ಯರ ಮೇಲೆ ಕೆಂಡಾಮಂಡಲ
951
VIEWS
FacebookTwitterWhatsuplinkedinEmail

ಕಾಲೇಜು ಆರಂಭದಲ್ಲಿ ಗೊಂದಲ ಬೇಡ

ಚಿಕ್ಕಬಳ್ಳಾಪುರ / ಬೆಂಗಳೂರು: 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡಿ ನಂತರ ಕಾಲೇಜು ಆರಂಭಿಸುವ ಕುರಿತು ಪ್ರಾಥಮಿಕ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಾಲೇಜು ಆರಂಭದ ವಿಚಾರದಲ್ಲಿ ಯಾವುದೇ ಗೊಂದಲ ಬೇಡ. ಈ ಬಗ್ಗೆ ಪ್ರಾಥಮಿಕ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಸಚಿವರೊಂದಿಗೆ ಚರ್ಚಿಸಲಾಗುವುದು. ಕಾಲೇಜು ವಿದ್ಯಾರ್ಥಿಗಳೆಲ್ಲರಿಗೂ ಲಸಿಕೆ ನೀಡಿದ ಬಳಿಕ ಕಾಲೇಜು ಆರಂಭಿಸಬಹುದು ಎಂದು ತಾಂತ್ರಿಕ ಸಲಹಾ ಸಮಿತಿಯು ಮುಖ್ಯಮಂತ್ರಿಗಳ ಸಭೆಯಲ್ಲಿ ಸಲಹೆ ನೀಡಿತ್ತು. ಈ ಬಗ್ಗೆ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಮತ್ತೆ ಚರ್ಚಿಸಲಾಗುವುದು. ವಿದ್ಯಾರ್ಥಿಗಳ ಕ್ಷೇಮ ಸರ್ಕಾರದ ಮೊದಲ ಆದ್ಯತೆಯಾಗಿದೆ. ಆದ್ದರಿಂದ ಲಸಿಕೆ ಕೊಟ್ಟೇ ಕಾಲೇಜು ಆರಂಭಿಸಬೇಕೆಂದರೆ ಯಾವ ರೀತಿ, ಎಷ್ಟು ದಿನದೊಳಗೆ ಲಸಿಕಾ ಕಾರ್ಯಕ್ರಮ ಮಾಡಬೇಕೆಂದು ಚರ್ಚಿಸಲಾಗುವುದು ಎಂದರು.

ಮೊದಲು ಉನ್ನತ ಶಿಕ್ಷಣ, ನಂತರ ಪ್ರೌಢಶಾಲೆ ಆರಂಭಿಸಬೇಕಾಗುತ್ತದೆ. ಹೀಗೆ ಹಂತ ಹಂತವಾಗಿ ಆರಂಭಿಸಬೇಕಾಗುತ್ತದೆ. ಸಣ್ಣ ಮಕ್ಕಳಿಗೆ ಮೊದಲೇ ಶಾಲೆ ಆರಂಭಿಸಲಾಗುವುದಿಲ್ಲ. ಇದರಲ್ಲಿ ಸರ್ಕಾರದ ಜವಾಬ್ದಾರಿ ಹೆಚ್ಚಿದೆ ಎಂದರು ಅವರು.

ಟ್ಯಾಬ್ ವಿತರಣೆ

ಚಿಕ್ಕಬಳ್ಳಾಪುರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಟ್ಯಾಬ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಉನ್ನತ ಶಿಕ್ಷಣಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಯುವಜನರು ಉನ್ನತ ಶಿಕ್ಷಣ ಪಡೆಯಲು ಆದ್ಯತೆ ನೀಡಬೇಕು. ಚಿಕ್ಕಬಳ್ಳಾಪುರದಲ್ಲಿ ಕೋವಿಡ್ ಮಹಾ ಅಭಿಯಾನದ ಮೊದಲ ದಿನ 40 ಸಾವಿರ ಜನರಿಗೆ ಲಸಿಕೆ ನೀಡಲಾಗಿದೆ. ಜಿಲ್ಲೆಯನ್ನು ಕೊರೊನಾ ಮುಕ್ತ ಮಾಡಬೇಕಿದೆ ಎಂದರು.

ಚಿಕ್ಕಬಳ್ಳಾಪುರದಲ್ಲಿ ಇಂದು ಸ್ಮಾರ್ಟ್ ಕರ್ನಾಟಕ ಯೋಜನೆಯಡಿಯಲ್ಲಿ 2021-22ನೇ ಸಾಲಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಉಚಿತ ಟ್ಯಾಬ್ಲೆಟ್ ಪಿ.ಸಿ.ಗಳನ್ನು ವಿತರಿಸಿ, ಸ್ಮಾರ್ಟ್ ಕ್ಲಾಸ್ ಕೊಠಡಿಯನ್ನು ಉದ್ಘಾಟಿಸಲಾಯಿತು. pic.twitter.com/Sh4cztlAwH

— Dr Sudhakar K (Modi ka Parivar) (@DrSudhakar_) June 23, 2021

ಕಾಲೇಜಿಗೆ ಒಟ್ಟು 6.67 ಕೋಟಿ ಅನುದಾನ ನೀಡಲಾಗಿದೆ. ಸರ್ಕಾರಿ ಮಹಿಳಾ ಕಾಲೇಜಿಗೆ 3.20 ಕೋಟಿ ನೀಡಲಾಗಿದೆ. ಶೀಘ್ರದಲ್ಲೇ ಹೆಣ್ಣುಮಕ್ಕಳಿಗಾಗಿ ಕಾಲೇಜು ಆರಂಭಿಸಿ ಈ ವರ್ಷದಲ್ಲೇ ಉದ್ಘಾಟನೆ ಮಾಡಬೇಕಿದೆ. ಹೊಸ ಮೆಡಿಕಲ್ ಕಾಲೇಜು 2022 ರ ಜೂನ್ ಅಥವಾ ಸೆಪ್ಟೆಂಬರ್ ವೇಳೆಗೆ ಆರಂಭವಾಗಲಿದ್ದು, ಉತ್ಕೃಷ್ಟ ಆರೋಗ್ಯ ಸೇವೆ ಸಿಗಲಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ 2 ಕೋಟಿ ಜನರಿಗೆ ಲಸಿಕೆ

ರಾಜ್ಯದಲ್ಲಿ 2 ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡಿದ್ದು, ದಕ್ಷಿಣ ಭಾರತದಲ್ಲೇ ರಾಜ್ಯ ನಂ.1 ಆಗಿದೆ. ಲಸಿಕೆ ಪಡೆದವರು ಸೋಂಕಿಗೊಳಗಾಗಿರುವುದು ತೀರಾ ಕಡಿಮೆ ಎಂದು ಅವರು ಮಾಹಿತಿ ನೀಡಿದರು.

ಜಿನೋಮಿಕ್ ಸೀಕ್ವೆನ್ಸ್ ನಿಂದ ರೂಪಾಂತರಿ ವೈರಾಣು ಪತ್ತೆ ಮಾಡಲಾಗುತ್ತಿದೆ. ಡೆಲ್ಟಾ ಪ್ಲಸ್ ವೈರಾಣುವಿನ ಒಂದು ಪ್ರಕರಣ ಮೈಸೂರಿನಲ್ಲಿ ಕಂಡುಬಂದಿದ್ದು, ರೋಗಿಯನ್ನು ಐಸೋಲೇಟ್ ಮಾಡಲಾಗಿದೆ. ಅವರ ಸಂಪರ್ಕಿತರಿಗೆ ವೈರಾಣು ಹರಡಿಲ್ಲ. ಸೀಕ್ವೆನ್ಸ್ ಗೆ 6 ಲ್ಯಾಬ್ ರೂಪಿಸಲಾಗುತ್ತಿದೆ ಎಂದು ಅವರು ಹೇಳಿದರು.

ಸರಕಾರಿ ಆಸ್ಪತ್ರೆಗಳಲ್ಲೇ ಹಾಸಿಗೆ ಖಾಲಿ ಇದೆ. ಖಾಸಗಿಯಲ್ಲಿ ನಾನ್ ಕೋವಿಡ್ ರೋಗಿ ಬಂದರೆ ಚಿಕಿತ್ಸೆ ನೀಡಲು ಸೂಚಿಸಲಾಗಿದೆ. 3ನೇ ಅಲೆ ಬಂದರೆ ಆಗ ಹಾಸಿಗೆ ಕೇಳಲಾಗುವುದು ಎಂದರು ಡಾ.ಕೆ.ಸುಧಾಕರ್.

Tags: covid19dr cn ashwathnarayandr k sudhakarpucS Sureshkumarvaccination for college students
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

#SIR ರಾಜ್ಯದಲ್ಲಿ 99.32 ಲಕ್ಷ ಮತದಾರರ ಹೆಸರಿಲ್ಲ

#SIR ರಾಜ್ಯದಲ್ಲಿ 99.32 ಲಕ್ಷ ಮತದಾರರ ಹೆಸರಿಲ್ಲ

by cknewsnow desk
October 28, 2026
0

ಬೆಂಗಳೂರಿನಲ್ಲಿ 43.13% ಮತದಾರರ ಪ್ರಮಾಣ ಕುಸಿತ

ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ₹600 ಕೋಟಿಗೆ ಡೀಲ್ ಕೊಟ್ಟರಾ ಡಿಕೆಶಿ!!

ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ₹600 ಕೋಟಿಗೆ ಡೀಲ್ ಕೊಟ್ಟರಾ ಡಿಕೆಶಿ!!

by cknewsnow desk
October 25, 2026
0

ಹಾಲಿ ಮುಖ್ಯಮಂತ್ರಿ ವಿರುದ್ಧ ಕೇಂದ್ರ ಸಚಿವರ ಗಂಭೀರ ಆರೋಪ; ಈಗಿನ ಮಹಾನ್ ಮುಖ್ಯಮಂತ್ರಿಗಳೇ ಸ್ಟಿಂಗ್ ಮೂಲಪುರುಷ

ಸ್ಟಿಂಗ್ ಮಾಡಿದವರಿಗೆ ನೋಟಿಸ್, ಅನ್ಯಪಕ್ಷದವರ ಅರೆಸ್ಟ್!

ಸ್ಟಿಂಗ್ ಮಾಡಿದವರಿಗೆ ನೋಟಿಸ್, ಅನ್ಯಪಕ್ಷದವರ ಅರೆಸ್ಟ್!

by cknewsnow desk
October 25, 2026
0

ಸ್ಟಿಂಗ್ ಆಪರೇಶನ್ ಪ್ರಕರಣದಲ್ಲಿ ರಾಜ್ಯ ಸರ್ಕಾರದ್ದು ಇಬ್ಬಗೆ ನೀತಿ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ

ಸ್ಟಿಂಗ್ ವಿರುದ್ಧ ಕೋರ್ಟ್ ಮೊರೆ ಹೋದ ಸಿದ್ದರಾಮಯ್ಯ! ಇಂದು ಆದೇಶ ನಿರೀಕ್ಷೆ

ನನ್ನ ತಲೆಗೆ ಸ್ಟಿಂಗ್ ಕಟ್ಟಲು ಡಿಕೆಶಿ, ಪ್ರಿಯಾಂಕ್ ಖರ್ಗೆ ಸಂಚು

by cknewsnow desk
October 25, 2026
0

ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ; #kpsc ಹಗರಣದ ದಿಕ್ಕು ತಪ್ಪಿಸಲು ಪ್ರಿಯಾಂಕ್ ಖರ್ಗೆ ಒದ್ದಾಟ

ಬೆಂಗಳೂರು ಸುತ್ತಲಿನ ಜನರ ಸಮಾಧಿ ಮೇಲೆ ಬ್ರ್ಯಾಂಡ್‌ ಬೆಂಗಳೂರು

10 ತಿಂಗಳಾದರೂ ಸಿಗದ ಭೂಮಿ; ರಾಜ್ಯದ ಕೈತಪ್ಪಲಿದೆಯಾ ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ

by cknewsnow desk
October 22, 2026
0

ಬೇಸತ್ತು ಮುಖ್ಯಮಂತ್ರಿ ಡಿಕೆಶಿಗೆ ಪತ್ರ ಬರೆದ ಕೇಂದ್ರ ಸಚಿವ #HDK

ರಾಜೀನಾಮೆ ಕೊಟ್ಟು ಹೊರಬನ್ನಿ; ಅಪಮಾನಿತ ದಲಿತ ಸಚಿವರಿಗೆ #Jds ಕಿವಿಮಾತು

ರಾಜೀನಾಮೆ ಕೊಟ್ಟು ಹೊರಬನ್ನಿ; ಅಪಮಾನಿತ ದಲಿತ ಸಚಿವರಿಗೆ #Jds ಕಿವಿಮಾತು

by cknewsnow desk
October 22, 2026
0

ಮೈಸೂರು ದಸರಾದಲ್ಲಿ ಅವಮಾನ ಪ್ರಸಂಗ; ಬಾಯಲ್ಲಿ ಜಾತ್ಯತೀತ ತತ್ವ, ಆಚರಣೆಯಲ್ಲಿ ಅಸೃಶ್ಯತೆ!; ಕಾಂಗ್ರೆಸ್ ವಿರುದ್ಧ ಜೆಡಿಎಸ್ ವಾಗ್ದಾಳಿ

Next Post
ಕೋವಿಡ್‌ ಅಟ್ಟಹಾಸದಲ್ಲೂ ಹಳ್ಳಿಮಕ್ಕಳ ಮೊಗದಲ್ಲಿ ಮೂಡಿತು ಮಂದಹಾಸ!!

ಕೋವಿಡ್‌ ಅಟ್ಟಹಾಸದಲ್ಲೂ ಹಳ್ಳಿಮಕ್ಕಳ ಮೊಗದಲ್ಲಿ ಮೂಡಿತು ಮಂದಹಾಸ!!

Leave a Reply Cancel reply

Your email address will not be published. Required fields are marked *

Recommended

ಶಿಕ್ಷಣವನ್ನು ಶೀಲ ಸಂಪತ್ತು ಎಂದಿದ್ದರು ಸ್ವಾಮಿ ವಿವೇಕಾನಂದರು

ಶಿಕ್ಷಣವನ್ನು ಶೀಲ ಸಂಪತ್ತು ಎಂದಿದ್ದರು ಸ್ವಾಮಿ ವಿವೇಕಾನಂದರು

5 years ago
ಕೋಲಾರದ ವಿಸ್ಟ್ರಾನ್‌ ಐಫೋನ್‌ ಘಟಕದ ಮೇಲೆ ದಾಳಿ; ಪ್ರಧಾನಮಂತ್ರಿ ನರೇಂದ್ರ ಮೋದಿ ಕಳವಳಕ್ಕೆ ಕಾರಣವೇನು?

ರಾಜ್ಯದಲ್ಲಿ ನೀಗಲಿದೆ ಲಸಿಕೆ ಹಾಹಾಕಾರ, ಮೋದಿ ಕೊಟ್ಟರು ಪರಿಹಾರ: ಕುಣಿದು ಕುಪ್ಪಳಿಸಿದ ಯಡಿಯೂರಪ್ಪ ಸರಕಾರ

5 years ago

Popular News

  • #SIR ರಾಜ್ಯದಲ್ಲಿ 99.32 ಲಕ್ಷ ಮತದಾರರ ಹೆಸರಿಲ್ಲ

    #SIR ರಾಜ್ಯದಲ್ಲಿ 99.32 ಲಕ್ಷ ಮತದಾರರ ಹೆಸರಿಲ್ಲ

    0 shares
    Share 0 Tweet 0
  • ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ₹600 ಕೋಟಿಗೆ ಡೀಲ್ ಕೊಟ್ಟರಾ ಡಿಕೆಶಿ!!

    0 shares
    Share 0 Tweet 0
  • ಸ್ಟಿಂಗ್ ಮಾಡಿದವರಿಗೆ ನೋಟಿಸ್, ಅನ್ಯಪಕ್ಷದವರ ಅರೆಸ್ಟ್!

    0 shares
    Share 0 Tweet 0
  • ನನ್ನ ತಲೆಗೆ ಸ್ಟಿಂಗ್ ಕಟ್ಟಲು ಡಿಕೆಶಿ, ಪ್ರಿಯಾಂಕ್ ಖರ್ಗೆ ಸಂಚು

    0 shares
    Share 0 Tweet 0
  • 10 ತಿಂಗಳಾದರೂ ಸಿಗದ ಭೂಮಿ; ರಾಜ್ಯದ ಕೈತಪ್ಪಲಿದೆಯಾ ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

#SIR ರಾಜ್ಯದಲ್ಲಿ 99.32 ಲಕ್ಷ ಮತದಾರರ ಹೆಸರಿಲ್ಲ

#SIR ರಾಜ್ಯದಲ್ಲಿ 99.32 ಲಕ್ಷ ಮತದಾರರ ಹೆಸರಿಲ್ಲ

October 28, 2026
ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ₹600 ಕೋಟಿಗೆ ಡೀಲ್ ಕೊಟ್ಟರಾ ಡಿಕೆಶಿ!!

ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ₹600 ಕೋಟಿಗೆ ಡೀಲ್ ಕೊಟ್ಟರಾ ಡಿಕೆಶಿ!!

October 25, 2026
ಸ್ಟಿಂಗ್ ಮಾಡಿದವರಿಗೆ ನೋಟಿಸ್, ಅನ್ಯಪಕ್ಷದವರ ಅರೆಸ್ಟ್!

ಸ್ಟಿಂಗ್ ಮಾಡಿದವರಿಗೆ ನೋಟಿಸ್, ಅನ್ಯಪಕ್ಷದವರ ಅರೆಸ್ಟ್!

October 25, 2026
ಸ್ಟಿಂಗ್ ವಿರುದ್ಧ ಕೋರ್ಟ್ ಮೊರೆ ಹೋದ ಸಿದ್ದರಾಮಯ್ಯ! ಇಂದು ಆದೇಶ ನಿರೀಕ್ಷೆ

ನನ್ನ ತಲೆಗೆ ಸ್ಟಿಂಗ್ ಕಟ್ಟಲು ಡಿಕೆಶಿ, ಪ್ರಿಯಾಂಕ್ ಖರ್ಗೆ ಸಂಚು

October 25, 2026

Covid 19

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

October 16, 2026
ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ