ಗುಡಿಬಂಡೆಯಲ್ಲಿ ವನಮಹೋತ್ಸವಕ್ಕೆ ಚಾಲನೆ ನೀಡಿದ ಎಸ್.ಎನ್.ಸುಬ್ಬಾರೆಡ್ಡಿ
by GS Bharath Gudibande
ಗುಡಿಬಂಡೆ: ಹಳ್ಳಿ, ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಹೆಚ್ಚ ಹೆಚ್ಚಾಗಿ ಗಿಡಗಳನ್ನು ಬೆಳೆಸುವ ಮೂಲಕ ಪರಿಸರವನ್ನು ಉಳಿಸಿ ಬೆಳೆಸುವ ಮೂಲಕ ಮನುಷ್ಯನ ಜೀವನದ ಭಾಗವಂತೆ ರಕ್ಷಿಸಬೇಕೆಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಪ್ರತಿಪಾದಿಸಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ವನಮಹೋತ್ಸವ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಲ್ಲರೂ ಹಸರೀಕರಣಕ್ಕೆ ಪ್ರಯತ್ನಿಸಬೇಕು, ಗಿಡ-ಮರಗಳನ್ನು ಬೆಳೆಸುವ ಮೂಲಕ ವಾತಾವರಣವನ್ನು ಶುದ್ಧವಾಗಿಡಲು ಸಹಕರಿಸಬೇಕು, ನಾವು ಆಚರಿಸುವ ಹಬ್ಬಗಳಂತೆ ವನಮಹೋತ್ಸವವನ್ನು ನಿತ್ಯೋತ್ಸವದಂತೆ ಆಚರಿಸಬೇಕು, ಅರಣ್ಯ ಇಲಾಖೆ ತಾಲೂಕಿನಲ್ಲಿ ಪರಿಸರದ ಅರಿವು ಮೂಡಿಸಿ ಹೆಚ್ಚು ಗಿಡಗಳನ್ನು ನೆಡುತ್ತಿರುವುದು ಶ್ಲಾಘನೀಯ, ಎಲ್ಲರೂ ಗಿಡ-ಮರಗಳನ್ನು ಹೆಚ್ಚಾಗಿ ಬೆಳೆಸಿ ಎಂದು ಸಲಹೆ ನೀಡಿದರು ಶಾಸಕರು.
ಪರಿಸರ ಮಾಲಿನ್ಯ ದೊಡ್ಡ ಸವಾಲು. ಅದನ್ನು ಹತ್ತಿಕ್ಕಲು ಹಸಿರೀಕರಣವನ್ನು ಹೆಚ್ಚಿಸದೇ ಬೇರೆ ದಾರಿ ಇಲ್ಲ. ಜಾಗತಿಕ ತಾಪಮಾನ ವ್ಯತ್ಯಯವಾಗುತ್ತಿರುವುದರಿಂದ ಭೂಮಿಯ ಮೇಲೆ ಅರಣ್ಯವನ್ನು ಹೆಚ್ಚಿಸಲೇಬೇಕು. ಹೀಗಾಗಿ ನಾವು ಮರ ಗಿಡಗಳನ್ನು ಹೆಚ್ಚು ಹೆಚ್ಚಾಗಿ ಬೆಳೆಸೋಣ ಎಂದು ಶಾಸಕರು ಹೇಳಿದರು.
ಈ ವೇಳೆ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸಿಬ್ಗತ್ ವುಲ್ಲಾ, ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಚಂದ್ರಶೇಖರ್, ಆರಕ್ಷಕ ವೃತ್ತ ನಿರೀಕ್ಷಕ ಲಿಂಗರಾಜು, ಉಪ ಅರಣ್ಯಾಧಿಕಾರಿ ಕನಕರಾಜು, ಅರಣ್ಯ ರಕ್ಷಕ ಹುಲಿಗೆಪ್ಪ, ಜಾವೀದ್, ಚಂದ್ರಶೇಖರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜಶೇಖರ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಮಂಜುಳಾ, ವೀಣಾ, ವಿಕಾಸ್, ರಾಜೇಶ್, ಆರೋಗ್ಯ ರಕ್ಷಾಸಮಿತಿ ಸದಸ್ಯ ನವೀನ್ ಕುಮಾರ್, ನಯಾಜ್ ಪಾಷ, ಮುಖಂಡರಾದ ರಘುನಾಥ್ ರೆಡ್ಡಿ, ಕೃಷ್ಣೇಗೌಡ, ಅಂಬರೀಶ್, ರಮೇಶ್, ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.
ವನಮಹೋತ್ಸವ ಕಾರ್ಯಕ್ರಮವನ್ನು ಇಡೀ ತಾಲೂಕಿನಲ್ಲಿ ಹಮ್ಮಿಕೊಂಡಿದ್ದೇವೆ, ಶಾಲೆ, ಸರಕಾರ ಕಚೇರಿಗಳ ಆವರಣ, ಹಾಗೂ ಇತರೆ ಸಾರ್ವಜನಿಕರು ಈ ಯೋಜನೆಯಲ್ಲಿ ಗಿಡಗಳನ್ನು ನೆಡಲಿಕ್ಕೆ ಅರಣ್ಯ ಇಲಾಖೆಯ ಸಹಕಾರ ನೀಡುತ್ತದೆ. ವನಮಹೋತ್ಸವ ಆಚರಣೆ ಪ್ರಯುಕ್ತ ಪ್ರತಿಯೊಬ್ಬರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ.
ಚಂದ್ರಶೇಖರ್ ವಲಯ ಅರಣ್ಯಾಧಿಕಾರಿ ಗುಡಿಬಂಡೆ