ಇದು ಸಿಕೆನ್ಯೂಸ್ ನೌ ಬಿಗ್ ಇಂಪ್ಯಾಕ್ಟ್
by GS Bharath Gudibande
ಗುಡಿಬಂಡೆ: ಕಾಮಗಾರಿ ಸಂಪೂರ್ಣಗೊಳ್ಳದೇ, ಸ್ಥಳೀಯ ಅಧಿಕಾರಿ, ಜನ ಪ್ರತಿನಿಧಿಗಳಿಗೆ, ಮುಖ್ಯ ಶಿಕ್ಷಕಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ನಿರಪೇಕ್ಷಣಾ ಪತ್ರವೂ ಇಲ್ಲದೆ ಆತುರಾತುರವಾಗಿ ಶಾಸಕರಿಂದ ಉದ್ಘಾಟನೆಗೊಂಡಿದ್ದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡಕ್ಕೆ ಕೊನೆಗೂ ಕಾಯಕಲ್ಪ ಸಿಕ್ಕಿದೆ.
ತಾಲೂಕಿನ ವರ್ಲಕೊಂಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಲಕ್ಷ್ಮೀಸಾಗರ ಗ್ರಾಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ 2020-2021ನೇ ಸಾಲಿನ ಯೋಜನೆಯಡಿ 11 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಶಾಲೆಯ ಕಟ್ಟಡವನ್ನು ಪೂರ್ಣಗೊಳಿಸದೇ ಉದ್ಘಾಟನೆ ಮಾಡಲಾಗಿತ್ತು. ಸ್ಥಳೀಯ ಕಾಂಗ್ರೆಸ್ ನಾಯಕರು ತಪ್ಪು ಮಾಹಿತಿ ನೀಡಿದ ಪರಿಣಾಮ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಇದೇ ಸೆಪ್ಟೆಂಬರ್ ೨ರಂದು ಉದ್ಘಾಟನೆ ಮಾಡಿದ್ದರು.
ಅಪೂರ್ಣವಾಗಿ ಉದ್ಘಾಟನೆಯಾಗಿದ್ದ ವರಲಕೊಂಡ ಶಾಲೆ ಕಟ್ಟಡ ಹಾಗೂ ಸಿಕೆನ್ಯೂಸ್ ನೌ ವರದಿ ಪ್ರಕಟವಾದ ನಂತರದ ಶಾಲೆಯ ಕಟ್ಟಡ.
ಈ ಬಗ್ಗೆ ಕೂಡಲೇ ವಿವರವಾದ ವರದಿ ಪ್ರಕಟಿಸಿದ ಸಿಕೆನ್ಯೂಸ್ ನೌ ಆಗಿರುವ ಪ್ರಮಾದವನ್ನು ಎತ್ತಿ ತೋರಿಸಿತು. ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು ಈಗ ಸೂಕ್ತ ಕ್ರಮ ಜರುಗಿಸಿ ಕಾಮಗಾರಿ ಗುತ್ತಿಗೆದಾರರಿಗೆ ಎಚ್ಚರಿಸಿದ ಪರಿಣಾಮ ಈಗ ಪೂರ್ಣಗೊಂಡಿದೆ. ನಾಮಫಲಕ, ಫ್ಯಾನ್, ಲೈಟ್ ಇತ್ಯಾದಿಗಳನ್ನು ಅಳವಡಿಸಲಾಗಿದೆ.
ಇನ್ನೊಂದೆಡೆ ಶಾಲಾ ಕಟ್ಟಡದ ಕಾಮಗಾರಿ ಗುಣಮಟ್ಟದ ಬಗ್ಗೆ ಸ್ಥಳೀಯರು ಕೆಲ ಸಂಶಯಗಳನ್ನು ವ್ಯಕ್ತಪಡಿಸಿದ್ದಾರೆ. ೧೧ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಕಟ್ಟಡದ ಖರ್ಚು ವೆಚ್ಚದ ಅಂಕಿ-ಅಂಶವನ್ನು ಕೂಡಲೇ ಬಹಿರಂಗಪಡಿಸಬೇಕು ಎಂದು ಅವರು ಒತ್ತಾಯ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಡಿವೈಪಿಸಿ ಅಧಿಕಾರಿಗಳು ಭೇಟಿ ಮಾಡಿ, ಕಟ್ಟಡ ಪರಿಶೀಲನೆ ಮಾಡುತ್ತಾರೆ. ಅವರು ನೀಡುವ ವರದಿ ಮೇಲೆ ಶಾಲೆಯ ಕಟ್ಟಡದ ಪೂರ್ಣಗೊಂಡ ಬಗ್ಗೆ ಧೃಡಪಡಿಸುತ್ತೇವೆ.
ಎನ್.ವೆಂಕಟೇಶಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ, ಗುಡಿಬಂಡೆ
ಶಾಲಾ ಕಟ್ಟಡ ಈಗ ಸಂಪೂರ್ಣವಾಗೊಂಡಿದೆ. ನಾಮಫಲಕ, ಫ್ಯಾನ್, ಲೈಟ್ ಎಲ್ಲವನ್ನೂ ಅಳವಡಿಕೆ ಮಾಡಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದು ನಂತರ ನಿರಾಪೇಕ್ಷಣ ಪತ್ರ ನೀಡುತ್ತೇವೆ.
ಮನೋಜಮ್ಮ, ಮುಖ್ಯಶಿಕ್ಷಕಿ, ಲಕ್ಷ್ಮೀಸಾಗರ ಶಾಲೆ