ನ್ಯಾಷನಲ್ ಕಾಲೇಜಿನಲ್ಲಿ ಮಾತಾಡ್ ಮಾತಾಡ್ ಕನ್ನಡ
by Ra Na Gopala Reddy Bagepalli
ಬಾಗೇಪಲ್ಲಿ: ಕನ್ನಡ ಮತ್ತು ಸಂಸ್ಕೃತ ಇಲಾಖೆಯು ಜಿಲ್ಲೆಯಾದ್ಯಂತ ‘ಮಾತಾಡ್ ಮಾತಾಡ್ ಕನ್ನಡ’ ಘೋಷ ವಾಕ್ಯದಡಿ ‘ಕನ್ನಡಕ್ಕಾಗಿ ನಾವು’ ಎಂಬ ಅಭಿಯಾನವನ್ನು ಹಮ್ಮಿಕೊಂಡಿತ್ತು.
ಗೀತೆಗಳ ಗಾಯನ ಅಭಿಯಾನದಲ್ಲಿ ವಿವಿಧ ಕಾಲೇಜುಗಳಿಂದ ಬಂದ ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ನ್ಯಾಷನಲ್ ಕಾಲೇಜ್ʼನಲ್ಲಿ ಸೇರುವ ಮೂಲಕ ಭಾಗಿಯಾಗುವ ಮೂಲಕ ತಮ್ಮ ಕನ್ನಡ ಅಭಿಮಾನ ಮತ್ತು ಕನ್ನಡ ಭಾಷೆ ಮೇಲಿನ ಪ್ರೀತಿಯನ್ನ ಅಭಿವ್ಯಕ್ತಿಗೊಳಿಸಿದರು. ಈ ವಿದ್ಯಾರ್ಥಿಗಳಿಂದ ಕಂಠದಿಂದ ಕನ್ನಡ ಗೀತ ಗಾಯನ ಮೊಳಗಿತು.
ಸಾವಿರಾರು ವಿದ್ಯಾರ್ಥಿಗಳಿಂದ ರಾಷ್ಟ್ರಕವಿ ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಂಮವ’, ನಿಸಾರ್ ಅಹಮ್ಮದ್ ಅವರ ‘ಜೋಗದ ಸಿರಿ ಬೆಳಕಿನಲ್ಲಿ’ ಹಾಗೂ ಡಾ. ಹಂಸಲೇಖ ಅವರ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಮೂರು ಗೀತೆಗಳು ಇಂದು ಬೆಳಗ್ಗೆ 11 ಗಂಟೆಗೆ ವಿದ್ಯಾರ್ಥಿಗಳ ಕಂಠಸಿರಿಯಿಂದ ಹೊರಹೊಮ್ಮಿದವು.
ಗೀತೆಗಳ ಗಾಯನದ ನಂತರ ಉಪನ್ಯಾಸಕರಾದ ಸೋಮಶೇಖರ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯಾರ್ಥಿಗಳು ಸಂಕಲ್ಪವೊಂದನ್ನು ಸ್ವೀಕರಿಸಿ; ” ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ನಾನು ಕನ್ನಡದಲ್ಲೇ ಮಾತನಾಡುತ್ತೇನೆ. ಕನ್ನಡದಲ್ಲೇ ಬರೆಯುತ್ತೇನೆ. ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ. ಕನ್ನಡ ನಾಡಿನಲ್ಲಿ ವಾಸವಾಗಿರುವ ಕನ್ನಡೇತರ ಬಂಧುಗಳಿಗೆ ಪ್ರೀತಿಯಿಂದ ಕನ್ನಡ ಕಲಿಸುತ್ತೇನೆ. ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಲು ಕಟಿಬದ್ಧನಾಗಿರುತ್ತೇನೆ” ಎಂದು ಪ್ರತಿಜ್ಞೆ ಮಾಡಿದರು.
ಈ ಸಂದರ್ಭದಲ್ಲಿ ಬಾಗೇಪಲ್ಲಿ ತಾಲೂಕು ತಹಸೀಲ್ದಾರ್ ಡಿ.ಎ.ದಿವಾಕರ್, ಡಾ.ಸತ್ಯನಾರಾಯಣ ರೆಡ್ಡಿ, ಪುರಸಭೆ ಪ್ರಭಾರಿ ಅದ್ಯಕ್ಷ ಶ್ರೀನಿವಾಸ್, ಸ್ಥಾಯಿ ಸಮಿತಿಯ ಅಧ್ಯಕ್ಷ ನಂಜುಂಡಪ್ಪ ಅತಾವುಲ್ಲಾ, ನ್ಯಾಷನಲ್ ಪದವಿ ಕಾಲೇಜು ಪ್ರಾಂಶುಪಾಲ ನಾರಾಯಣಪ್ಪ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಕೆ.ಟಿ.ವೀರಾಂಜನೇಯ, ಡಾ.ನಯಾಜ್ ಅಹಮದ್, ವೆಂಕಟರಾಮಿರೆಡ್ಡಿ, ಅಮೀರ್ ಜಾನ್, ಸರಕಾರಿ ನೌಕರರ ಸಂಘದ ಗೌರಾವಾಧ್ಯಕ್ಷ ಆರ್.ಹನುಮಂತ ರೆಡ್ಡಿ, ಕೃಷಿ ಇಲಾಖೆ ಮಂಜುನಾಥ ಸ್ವಾಮಿ, ರೇಷ್ಮೆ ಇಲಾಖೆ ಚಿನ್ನ ಕೈವಾರಮಯ್ಯ, ಇಓ ಮಂಜುನಾಥ ಸ್ವಾಮಿ, ಬಿಟಿ ಶ್ರೀನಿವಾಸ್ ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.