• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS STATE

ಉಕ್ರೇನ್‌ʼನಿಂದ ಸುರಕ್ಷಿತವಾಗಿ ಮರಳಿದ ಗುಡಿಬಂಡೆ ನವನೀತ್‌, ಗೌರಿಬಿದನೂರಿನ ಗೌತಮ್

cknewsnow desk by cknewsnow desk
March 6, 2022
in STATE
Reading Time: 2 mins read
0
ಉಕ್ರೇನ್‌ʼನಿಂದ ಸುರಕ್ಷಿತವಾಗಿ ಮರಳಿದ ಗುಡಿಬಂಡೆ ನವನೀತ್‌, ಗೌರಿಬಿದನೂರಿನ ಗೌತಮ್

ಉಕ್ರೇನ್‌ʼನಿಂದ ಮನೆಗೆ ಮರಳಿದ ಗುಡಿಬಂಡೆಯ ನವನೀತ್‌ ಕುಮಾರ್.

1.5k
VIEWS
FacebookTwitterWhatsuplinkedinEmail

ಯುದ್ಧಭೂಮಿಯಿಂದ ಏರ್‌ಲಿಫ್ಟ್‌ ಆದ ಚಿಕ್ಕಬಳ್ಳಾಪುರ ವಿದ್ಯಾರ್ಥಿಗಳು; ಹತ್ತು ದಿನಗಳ ನರಕಯಾತನೆ ಬಿಡಿಸಿಟ್ಟ ಹುಡುಗರು

by GS Bharath Gudibande

ಚಿಕ್ಕಬಳ್ಳಾಪುರ: ಯುದ್ಧಪೀಡಿತ ಉಕ್ರೇನ್’ನಿಂದ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಸುರಕ್ಷಿತವಾಗಿ ಮರಳಿದ್ದಾರೆ. ಶನಿವಾರ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಈ ಇಬ್ಬರು ವಿದ್ಯಾರ್ಥಿಗಳು ಪೋಷಕರನ್ನು, ಕುಟುಂಬದವರನ್ನು ಕಂಡ ಕೂಡಲೇ ಭಾವಪರವಶರಾದರು. ಅಲ್ಲದೆ, ಇವರಿಬ್ಬರೂ ಸುರಕ್ಷಿತವಾಗಿ ವಾಪಸ್ಸಾಗಿದ್ದು, ಕುಟುಂಬ ಸದಸ್ಯರಿಗೆ ನಿರಾಳತೆ ತಂದಿದೆ.

ಶನಿವಾರ ಉಕ್ರೇನ್ ಗಡಿ ಪ್ರದೇಶದಿಂದ ಕೇಂದ್ರ ಸರಕಾರ ಯಶಸ್ವಿಯಾಗಿ ವಿದ್ಯಾರ್ಥಿಗಳನ್ನು ಹಂತ ಹಂತವಾಗಿ ಏರ್‌ ಲಿಫ್ಟ್‌ ಮಾಡುತ್ತಿದ್ದು, ಜಿಲ್ಲೆಯ ಹತ್ತಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ಭಾರತಕ್ಕೆ ಮರಳಿದ್ದಾರೆ. ಗುಡಿಬಂಡೆಯ ನವನೀತ್ ಕುಮಾರ್ ಮತ್ತು ಗೌರಿಬಿದನೂರು ಮೂಲದ ಗೌತಮ್ ಎಂಬ ವಿದ್ಯಾರ್ಥಿಗಳು ತಮ್ಮ ಮನೆಗಳಿಗೆ ಸುರಕ್ಷಿತವಾಗಿ ತಲುಪಿದ್ದಾರೆ.

Pisochyn has been evacuated of all Indian citizens. Mission will continue to remain in touch with them through their journey. Their safety has always been our priority.
Be Safe Be Strong@opganga @MEAIndia pic.twitter.com/cz2Prishgp

— India in Ukraine (@IndiainUkraine) March 5, 2022

3 buses organised by GoI have reached Pisochyn and will shortly be making their way westwards.
2 more buses will be arriving soon.
Safe travels to all our students.

Be Safe Be Strong @opganga @MEAIndia pic.twitter.com/oHKLXHx0rg

— India in Ukraine (@IndiainUkraine) March 5, 2022

ರಾಯಭಾರ ಕಚೇರಿಯಿಂದ ಬಸ್‌, ಊಟದ ವ್ಯವಸ್ಥೆ

ಅಲ್ಲಿನ ವಾತವರಣದ ಉಷ್ಣಾಂಶ -3 ಮತ್ತು -4 ಡಿಗ್ರಿ ಇತ್ತು, ಅದರಲ್ಲಿ ನಾವು 9 ಗಂಟೆ ಬ್ಯಾಗ್’ಗಳನ್ನು ಹೊತ್ತುಕೊಂಡು ಕ್ಯೂನಲ್ಲಿದ್ದರೂ ಭಾರತೀಯರಿಗೆ ಯಾರಿಗೂ ಅವಕಾಶ ಸಿಗಲಿಲ್ಲ. ಉಕ್ರೇನ್ ಮತ್ತು ಬೇರೆ ದೇಶದವರನ್ನು ರ್ಬೋಡಿಂಗ್’ಗೆ ಕಳುಹಿಸುತ್ತಿದ್ದರು. ಮಾಲ್ದೋವಾ ಕ್ರಾಸ್ ಮಾಡಿದ ನಂತರ ಏನು ಸಮಸ್ಯೆ ಆಗಲಿಲ್ಲ. ಅಲ್ಲಿ ನಮ್ಮ ಭಾರತೀಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಭಾರತೀಯ ರಾಯಭಾರ ಕಚೇರಿಯಿಂದ‌ ಪಿಶೋಚಿನ್ ಪ್ರದೇಶದಿಂದ ಬಸ್ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ನಮ್ಮನ್ನು ಸುರಕ್ಷತವಾಗಿ ಕರೆದುಕೊಂಡು ಬಂದಿದ್ದಾರೆ. ಅಲ್ಲಿನ ರಾಯಭಾರ ಕಚೇರಿ ಸಿಬ್ಬಂದಿಗೆ ಧನ್ಯವಾದಗಳನ್ನು ಅರ್ಪಿಸುವುದಾಗಿ ವಿದ್ಯಾರ್ಥಿಗಳಿಬ್ಬರು ತಿಳಿಸಿದರು.

ಉಕ್ರೇನ್’ನಲ್ಲಿ ನನ್ನ ಜೊತೆ ರಾಜ್ಯದ 8 ವಿದ್ಯಾರ್ಥಿಗಳು ಇದ್ದರು. ಈಗ ನಮ್ಮಲ್ಲಿ ಮೂವರು ಮಾತ್ರ ಭಾರತಕ್ಕೆ ವಾಪಸ್ ಬಂದಿದೇವೆ. ಉಳಿದವರು‌ ಹಿಂದೆಯೇ ಬರುತ್ತಿದ್ದಾರೆ, ಹಾಗೆ ನೋಡಿದರೆ ಉಕ್ರೇನ್ ಒಂದು ಶಾಂತಿಯುತ, ಅಭಿವೃದ್ಧಿಶೀಲ ದೇಶವಾಗಿತ್ತು. ಹತ್ತು ದಿನಗಳಿಂದ ಯುದ್ಧ ಸಂಭವಿಸಿ ಅಶಾಂತಿ ನಿರ್ಮಾಣವಾಗಿದೆ ಎಂದು ಇಬ್ಬರೂ ವಿದ್ಯಾರ್ಥಿಗಳು ಹೇಳಿದರು.

ಭಾರತೀಯ ವಿದ್ಯಾರ್ಥಿಗಳಿಗೆ ರಷ್ಯಾ ಸೇನೆ ಮತ್ತು ಉಕ್ರೇನ್ ಸೇನೆ ಏನಾದರೂ ತೊಂದರೆ ಕೊಟ್ಟರಾ? ಎನ್ನುವ ಪ್ರಶ್ನೆಗೆ; ನಮಗೆ ಅಂತಹ ಅನುಭವ ಆಗಿಲ್ಲ, ನಮಗೆ ಯಾವುದೇ ಸಮಸ್ಯೆ ಮಾಡದೇ ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ ಎಂದು ಅವರು ಉತ್ತರಿಸಿದರು.

ಕುಟುಂಬದ ಜತೆ ಗೌರಿಬಿದನೂರಿನ ಗೌತಮ್.

ಯುದ್ದ ಆರಂಭದ ದಿನದಿಂದ ನಾವು ಬಂಕರ್‌ʼಗಳಲ್ಲೇ ಅಡಗಿದ್ದೆವು. ಊಟದ ಸಮಸ್ಯೆ ಇತ್ತು. ಉಕ್ರೇನ್ ಗಡಿ ಪ್ರದೇಶದಲ್ಲಿ ನಮಗೆ ಹೆಚ್ಚು ಸಮಸ್ಯೆ ಆಗಿತ್ತು. ಬಾಂಬ್, ಶೆಲ್‌ ಮತ್ತು ಕ್ಷಿಪಣಿ ಶಬ್ದ ಬರುತ್ತಿದಂತೆ ನಾವು ಬಂಕರ್‌ʼಗಳ ಒಳಕ್ಕೆ ಓಡಿ ಹೋಗುತ್ತಿದ್ದೆವು. 30ಕ್ಕೂ ಹೆಚ್ಚು ಬಾಂಬ್ ಶಬ್ದಗಳನ್ನು ನಾನು ಕೇಳಿದ್ದೇನೆ. 8 ದಿನ ಬಂಕರ್ ನಲ್ಲೇ ಇದ್ದೆ. ತುಂಬಾ ಭಯವಾಗಿತ್ತು. ಉಕ್ರೇನ್ ನಲ್ಲಿರುವ ಎಲ್ಲರೂ ಸುರಕ್ಷಿತವಾಗಿ ಬರಬೇಕು ಹಾಗೂ ನಾನು ನಾಲ್ಕು ದಿನಗಳಿಂದ ಪ್ರಯಾಣ ಮಾಡುತ್ತಿದ್ದೇನೆ. ಸದ್ಯ ಮುಂದಿನ ಶಿಕ್ಷಣದ ಬಗ್ಗೆ ಏನೂ ಹೇಳಲಿಕ್ಕೆ ಆಗಲ್ಲ. ಆ ಬಗ್ಗೆ ಮುಂದೇನು ಎನ್ನುವ ಪ್ರಶ್ನೆ ಇದೆ. ಸ್ವಲ್ಪ ಸಮಯ ಕಾದು ನೋಡುವುದು ಉತ್ತಮ.

ಗೌತಮ್ / ಉಕ್ರೇನ್’ನಿಂದ ಬಂದ ಗೌರಿಬಿದನೂರು ವಿದ್ಯಾರ್ಥಿ
ಕುಟುಂಬದ ಜತೆ ಗುಡಿಬಂಡೆಯ ನವನೀತ್.

ಅಕ್ಕಪಕ್ಕದಲ್ಲಿ ಬಾಂಬಿಂಗ್ ಆದರೂ ಮನೆಯಲ್ಲಿ ಹೇಳ್ತಾ ಇರಲಿಲ್ಲ. ಯಾಕೆಂದರೆ ನಮ್ಮ ತಂದೆ-ತಾಯಿ ತುಂಬಾ ಭಯಪಟ್ಟಿದ್ದರು. ಹಾಗಾಗಿ ಅವರಿಗೆ ಸ್ವಲ್ಪ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೆ. ಯುದ್ದ ಆರಂಭವಾದ ನಂತರ ನಾವು ಬಂಕರ್ ಗಳಲ್ಲೇ ಜೀವನ ಮಾಡಬೇಕಾಗಿತ್ತು. ಊಟ ಮತ್ತು ನೀರಿಗೆ ಸಮಸ್ಯೆ ಇತ್ತು. ನಂತರ ಭಾರತ ಸರಕಾರ ನಮ್ಮನ್ನು ಗಡಿ ಪ್ರದೇಶಕ್ಕೆ ಬರುವಂತೆ ಸೂಚನೆ ನೀಡಿತು. ಅದರಂತೆ ಹಂತ ಹಂತವಾಗಿ ಉಕ್ರೇನ್ ಗಡಿ ಪ್ರದೇಶ ತಲುಪಿ ಅಲ್ಲಿಂದ ಭಾರತಕ್ಕೆ ಬಂದೆವು.

ನವನೀತ್ ಕುಮಾರ್, ಉಕ್ರೇನ್ʼನಿಂದ ಬಂದ ಗುಡಿಬಂಡೆ ವಿದ್ಯಾರ್ಥಿ
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಗಾಂಧಿ ಜಯಂತಿಗೂ ಮುನ್ನವೇ ಪಬ್ ಒಪೆನ್!

ರಾಜ್ಯದಲ್ಲಿ ಅವಧಿಗೆ ಮುನ್ನವೇ ಚುನಾವಣೆ

Leave a Reply Cancel reply

Your email address will not be published. Required fields are marked *

Recommended

ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಆಯಿತು, ಈಗ ರಂಗದ ಮೇಲೆ ಎಸ್.ಎಲ್. ಭೈರಪ್ಪನವರ ಕಾದಂಬರಿ ‘ಪರ್ವ’; ಏಳೂವರೆ ಗಂಟೆ ನಾಟಕದಲ್ಲಿ 40ಕ್ಕೂ ಹೆಚ್ಚು ಕಲಾವಿದರು

ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಆಯಿತು, ಈಗ ರಂಗದ ಮೇಲೆ ಎಸ್.ಎಲ್. ಭೈರಪ್ಪನವರ ಕಾದಂಬರಿ ‘ಪರ್ವ’; ಏಳೂವರೆ ಗಂಟೆ ನಾಟಕದಲ್ಲಿ 40ಕ್ಕೂ ಹೆಚ್ಚು ಕಲಾವಿದರು

4 years ago
ನಂದಿಬೆಟ್ಟಕ್ಕೆ ರೋಪ್‌ ವೇ; ಒಂದು ತಿಂಗಳಲ್ಲೇ ಟೆಂಡರ್‌

ನಂದಿಬೆಟ್ಟಕ್ಕೆ ರೋಪ್‌ ವೇ; ಒಂದು ತಿಂಗಳಲ್ಲೇ ಟೆಂಡರ್‌

3 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ