ಗುಡಿಬಂಡೆಯಲ್ಲಿ ಲಾಂಛನ ಬಿಡುಗಡೆ
ಗುಡಿಬಂಡೆ: ಡಾ.ಕೆ ಸುಧಾಕರ್ ಯುವಸೇನೆ ಇಡೀ ಜಿಲ್ಲೆ ಮತ್ತು ರಾಜ್ಯಕ್ಕೆ ಮಾದರಿಯಾಗುವ ಕೆಲಸವನ್ನು ಮಾಡಬೇಕು, ತಾಲೂಕಿನಲ್ಲಿ ಬಿಜೆಪಿ ಪಕ್ಷವನ್ನು ಶಕ್ತಿಗೊಳಿಸಿ ಪ್ರತಿಯೊಬ್ಬರು ಸಹಕಾರ ನೀಡುವ ಮೂಲಕ ಯಶಸ್ಸಿಗೆ ಶ್ರಮಿಸಬೇಕು ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಎನ್.ಚನ್ನಕೃಷ್ಣಾರೆಡ್ಡಿ ಅವರು ತಾಲೂಕಿನ ಯುವಕರಿಗೆ ಕರೆ ನೀಡಿದರು.
ಪಟ್ಟಣದ ಹೊಸ ಬಸ್ ನಿಲ್ದಾಣದಿಂದ ಅದ್ದೂರಿ ಮೆರವಣಿಗೆ ಜಾಥಾ ನಡೆಸಿ ಗಜನಾಣ್ಯ ಕಲ್ಯಾಣ ಮಂಟಪದಲ್ಲಿ ಲಾಂಛನ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಡಾ.ಕೆ.ಸುಧಾಕರ್ ಅವರು ಚಿಕ್ಕಬಳ್ಳಾಪುರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಬಸ್ ನಿಲ್ದಾಣ, ಗ್ರಂಥಾಲಯ, ಮೆಡಿಕಲ್ ಕಾಲೇಜು ಸೇರಿದಂತೆ ಮುಂತಾದ ರಾಜ್ಯ ಸರಕಾರದಲ್ಲಿ ಆರೋಗ್ಯ ಸಚಿವರಾಗಿ ಕೋವಿಡ್ ಸಂದರ್ಭದಲ್ಲಿ ಯಶಸ್ವಿಯಾಗಿ ಉತ್ತಮ ಕೆಲಸ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಅವರ ಆದರ್ಶಗಳನ್ನು ಯುವಕರು ಪಾಲಿಸಬೇಕು, ತಾಲೂಕಿನಲ್ಲಿ ಡಾ.ಕೆ ಸುಧಾಕರ್ ಯುವಸೇನೆಯ ಪಾತ್ರ, ಜವಾಬ್ದಾರಿ ಹೆಚ್ಚಾಗಿದೆ ಎಂದು ಅವರು ಹೇಳಿದರು.
ಶಾಸಕರಿಗೆ ಟಾಂಗ್ ಕೊಟ್ಟ ಮುನಿರಾಜು
ಕಾರ್ಯಕ್ರಮದಲ್ಲಿ ರಾಜ್ಯ ಸರಕಾರದ ಉಪನಗರ ಹೊರವರ್ತುಲ ರಸ್ತೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಮುನಿರಾಜು ಮಾತನಾಡಿ; “ಡಾ.ಕೆ ಸುಧಾಕರ್ ಅವರಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಿಜೆಪಿ ಪಕ್ಷಕ್ಕೆ ಶಕ್ತಿ ಬಂದಿದೆ. ಅದರಂತೆ ಗುಡಿಬಂಡೆಯಲ್ಲಿ ಸುಧಾಕರ್ ಯುವಸೇನೆ ಹೆಚ್ಚು ಶಕ್ತಿಯುತವಾಗಿ ಸೇವೆಯನ್ನು ಮಾಡಬೇಕು. ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕುಗಳಲ್ಲಿ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಅವರ ಕೊಡುಗೆ ಅಪಾರ. ಪ್ರಸ್ತುತ ಕ್ಷೇತ್ರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಬಡವರು ಸರಕಾರಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾನು ಕ್ಷೇತ್ರದಲ್ಲಿ ಉತ್ತಮ ಸೇವೆ ಮಾಡುತ್ತೇನೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ. ಬಡವರ ಕೆಲಸಗಳು ಶೀಘ್ರವಾಗಿ ಬಗೆ ಹರಿಸುತ್ತೇನೆ. ಬಡವರ ಜಮೀನು ಬೇನಾಮಿ ಮಾಡಿಕೊಂಡು ಶಾಸಕರು ಮೋಸ ಮಾಡುತ್ತಿದ್ದಾರೆ” ಎಂದು ನೇರ ಆರೊಪ ಮಾಡಿದರು.
ಡಾ.ಕೆ ಸುಧಾಕರ್ ಯುಸೇನೆ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಈಚೆಗೆ ಅಗಲಿದ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಅವರಿಗಾಗಿ ಎರಡು ನಿಮಿಷ ಕಾಲ ಮೌನಾಚರಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.
ಸಾಧಕರಿಗೆ ಸನ್ಮಾನ
ಗುಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗವಿಕುಂಟಹಳ್ಳಿ ಗ್ರಾಮದ ಹೆಣ್ಣುಮಕ್ಕಳಿಬ್ಬರು ಚಿನ್ನದ ಪದಕ ಸಾಧನೆ ಮಾಡಿದ್ದರು. ಅವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ರಾಜ್ಯ ಪ್ರಶಸ್ತಿ ವಿಜೇತ ಮುಖವೀಣೆ ಆಂಜಿನಪ್ಪ ಅವರಿಗೆ ಸನ್ಮಾನಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ನೇಕಾರರ ಪ್ರಕೊಷ್ಠ ಕಾರ್ಯದರ್ಶಿ ಜಿ.ಎಸ್ ನಾಗರಾಜು, ಭಜರಂಗ ದಳ ಜಿಲ್ಲಾ ಸಂಚಾಲಕ ಜಿ.ಎ ಅಮರೇಶ್, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಅನಿಲ್ ಕುಮಾರ್, ಬಿಜೆಪಿ ತಾಲೂಕು ಅಧ್ಯಕ್ಷ ಗಂಗಿರೆಡ್ಡಿ, ಡಾ.ಕೆ ಸುಧಾಕರ್ ಯುವಸೇನೆಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ರೆಡ್ಡಿ, ಪದಾಧಿಕಾರಿಗಳಾದ ದಪ್ಪರ್ತಿ ಶ್ರೀನಿವಾಸ್, ಅರವಿಂದ್, ನರೇಂದ್ರ, ರವಿ, ಎಲ್ಲೋಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೃಷ್ಣಾರೆಡ್ಡಿ, ರೈತ ಮುಖಂಡ ಬೈರಾರೆಡ್ಡಿ, ಗ್ರಾಮ ಸದಸ್ಯ ಮಂಜುನಾಥ್, ಹರೀಶ್, ಶ್ರೀನಾಥ್, ಮುತ್ಯಾಲಪ್ಪ, ವೆಂಕಟೇಶ್ ಬಿಜೆಪಿ ಮುಖಂಡರಾದ ರಿಜ್ವಾನ್, ಸಿಎಲ್,ಆರ್ ಮಂಜು, ಪದ್ಮಾವತಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.
ಡಾ.ಕೆ ಸುಧಾಕರ್ ಅವರ ಆದರ್ಶ, ಛಲ, ಕೆಸಲದ ಬದ್ದತೆ, ಶಿಸ್ತು, ಅವರ ಮಾರ್ಗದರ್ಶನದಲ್ಲಿ ತಾಲೂಕಿನಾದ್ಯಾಂತ ಸಂಘಟನೆ ಬಲಿಷ್ಠಗೊಳಿಸಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತೇವೆ, ತಾಲೂಕಿನಲ್ಲಿ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ.
ಜಿ.ಲೋಕೇಶ್ ಗೌಡ, ಅಧ್ಯಕ್ಷರು, ಡಾ.ಕೆ ಸುಧಾಕರ್ ಯುಸೇನೆ, ಗುಡಿಬಂಡೆ
ಕರ್ನಾಟಕ ರಾಜ್ಯ ಸರಕಾರದಲ್ಲಿ ಅತ್ಯಂತ ಯಶಸ್ವಿ ಮಂತ್ರಿಯಾಗಿ, ರಾಷ್ಟ್ರ,ಮಟ್ಟದಲ್ಲಿ ಗೌರವ ಪಡೆದು, ಕೋವಿಡ್ ನಿರ್ವಹಣೆಯಲ್ಲಿ ದೇಶಕ್ಕೆ ಮಾದರಿಯಾಗಿದ್ದಾರೆ, ಚಿಕ್ಕಬಳ್ಳಾಪುರ ಜಿಲ್ಲೆಗೆ ಮೆಡಿಕಲ್ ಕಾಲೇಜು, ಗ್ರಂಥಾಲಯ, ಬಸ್ ನಿಲ್ದಾಣ, ಹೆಚ್,ಎನ್ ವ್ಯಾಲಿ ಸೇರಿದಂತೆ ಮುಂತಾದ ಜನರ ಕೆಲಸಗಳನ್ನು ಮಾಡಿದ್ದಾರೆ, ಅವರ ಮಾರ್ಗದರ್ಶದಲ್ಲಿ ಯುವ ಸೇನೆ ನಡೆಯಬೇಕು ಎಂದು ಸಲಹೆ ನಿಡಿದರು.
ತಟ್ಟಹಳ್ಳಿ ಟಿ.ಎಂ.ಚೌಡರೆಡ್ಡಿ, ವಕೀಲರು, ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು