• About
  • Advertise
  • Careers
  • Contact
Thursday, May 15, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CKPLUS

ಹೆಸರಿಗೆ ಐವತ್ತು; ಕನ್ನಡಕ್ಕೆ ಹೆಚ್ಚುತ್ತಿದೆ ಆಪತ್ತು

cknewsnow desk by cknewsnow desk
November 1, 2023
in CKPLUS, CKPRESS, EDITORS'S PICKS, GUEST COLUMN, NATION, NEWS & VIEWS, STATE
Reading Time: 2 mins read
0
ಭಾರತೀಯ ಸಂಸ್ಕೃತಿ ಅಧ್ಯಯನ ಸಮಿತಿ ತುಂಬಾ ಉತ್ತರ ಭಾರತೀಯರು!! ದಕ್ಷಿಣ ಭಾರತಕ್ಕೆ ಅನ್ಯಾಯವಾಗಿದೆ ಎಂದ ಎಚ್‌ಡಿಕೆ

ಚಿಣ್ಣರ ಕನ್ನಡ ಸಂಭ್ರಮ.

964
VIEWS
FacebookTwitterWhatsuplinkedinEmail

ಸಂಕೋಲೆ, ಸಮಸ್ಯೆಗಳಲ್ಲಿ ಕರ್ನಾಟಕ; ಸ್ವಂತ ನೆಲದಲ್ಲಿಯೇ ಪರಕೀಯ ಭಾವ; ನವೆಂಬರ್ ನಾಯಕರ ಅಪದ್ಧತೆ

• ಡಾ.ಗುರುಪ್ರಸಾದ ರಾವ್ ಹವಲ್ದಾರ್

ಸಾವಿರಾರು ವರ್ಷಗಳ ಇತಿಹಾಸ ಇರುವ ನಮ್ಮ ಕನ್ನಡ ಸಾಂಸ್ಕೃತಿಕ ಪರಂಪರೆಯನ್ನು ಸಂಭ್ರಮಿಸುವ ದಿನ  ಸ್ವಾತಂತ್ರ್ಯಪೂರ್ವ, ಸ್ವಾತಂತ್ರ್ಯದ ನಂತರ ಕೆಲ ವರ್ಷಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡನಾಡನ್ನು ಒಂದಾಗಿಸಿದ ದಿನ, ಮೈಸೂರು ರಾಜ್ಯ ಉದಯಿಸಿದ ದಿನ, ಅನೇಕರ ಹೋರಾಟದಿಂದ ಉದಯಿಸಿದ ನಮ್ಮ ಚೆಲುವ ಕನ್ನಡ ನಾಡನ್ನು ನನೆಯುವ ದಿನ ಈ ರಾಜ್ಯೋತ್ಸವ  ದಿನ.

ಕನ್ನಡ ಭಾಷೆ, ಸಂಸ್ಕೃತಿಯನ್ನು ಸ್ವಾತಂತ್ರ್ಯಪೂರ್ವದಿಂದ ಒಂದು ಪ್ರಜ್ಞಾವಂತ ಸಮುದಾಯ ಹಾಗೂ ಸಾಹಿತಿಗಳು ಜತನದಿಂದ ಕಾಪಿಟ್ಟುಕೊಂಡು ಬಂದ ಪರಿಣಾಮ ಅಖಂಡ ಕರ್ನಾಟಕ ರೂಪಗೊಳ್ಳಲು ಸಾಧ್ಯವಾಯಿತು. 

ಸಾಮಾನ್ಯವಾಗಿ ಭಾಷಾಭಿಮಾನ ಎಂದ ಕೂಡಲೇ ಎಲ್ಲರೂ ತಮಿಳರನ್ನು ಹೆಸರಿಸುತ್ತೇವೆ. ಕಾರಣ  ಪೆರಿಯಾರ್ ನೇತೃತ್ವದಲ್ಲಿ ಆರಂಭವಾದ ದ್ರಾವಿಡ ಸಂಸ್ಕೃತಿಯ ಚಳುವಳಿ ತಮಿಳು ಹೋರಾಟಕ್ಕೆ ತಾತ್ವಿಕ ನೆಲೆ ಕಲ್ಪಿಸುವಲ್ಲಿ ಸಫಲವಾಗಿತ್ತು. ಅದೇ ರೀತಿಯಲ್ಲಿ

ಕರ್ನಾಟಕ ಏಕೀಕರಣ ಚಳುವಳಿಯ ನಂತರ ರಾಜ್ಯದ ಪಾಲಿನ ಮತ್ತೊಂದು ಮಹತ್ವದ ಚಳವಳಿ ಎಂದರೆ ಗೋಕಾಕ್ ಚಳುವಳಿ.

ಈ ಚಳವಳಿಯಲ್ಲಿ ಕನ್ನಡ ಹೋರಾಟಗಾರರು ರಾಜ್ಯದ ಮೂಲೆ ಮೂಲೆಗೂ ಕ್ರಮಿಸಿ ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನೇ ಪ್ರಥಮ ಭಾಷೆಯಾಗಿ ಕಲಿಸಬೇಕು ಎಂದು ಹೋರಾಟವನ್ನು ಸಂಘಟಿಸಿದರು. ವಿ.ಕೃ.ಗೋಕಾಕ್ ಅವರು ಚಳವಳಿಯ ಮುಂಚೂಣಿ ನಾಯಕರಾದರೂ ವರನಟ ಡಾ.ರಾಜಕುಮಾರ್ ಅವರು ಚಳವಳಿಗೆ ಧುಮುಕಿದ ನಂತರ ಅದು ಮತ್ತೊಂದು ಆಯಾಮಕ್ಕೆ, ಎತ್ತರಕ್ಕೆ ಹೊರಳಿತು. ಈ ಚಳವಳಿ ಆಡಳಿತ, ಅಧಿಕಾರದಲ್ಲಿ ಕನ್ನಡತನವನ್ನು ತಂದಿತು, ಆದರೆ ಇಂದು ಗೋಕಾಕ್ ಅವರಂತೆ ಹೋರಾಟವನ್ನು ಸಂಘಟಿಸಬಲ್ಲ ಅಥವಾ ರಾಜಕುಮಾರ್ ಅವರಂತೆ ಹೋರಾಟಕ್ಕೆ ಸಮಗ್ರರೂಪ ಕೊಡಬಲ್ಲ ಒಬ್ಬೇ ಒಬ್ಬರು ನಾಯಕರು ರಾಜ್ಯದಲ್ಲಿ ಇಲ್ಲದಿರುವುದು ವಿರ್ಪಯಾಸ.

ನವೆಂಬರ್ ನಾಯಕರು

ನವೆಂಬರ್ ಕನ್ನಡಿಗರು ಎನ್ನುವ ಮಾತಿತ್ತು. ಅದನ್ನು ನವೆಂಬರ್ ನಾಯಕರು ಎಂದರೆ ಸರಿ ಹೋಗುತ್ತದೆ. ಈ ನವೆಂಬರ್ ಬಂತೆಂದರೆ ಸಾಕು, ಬೆಂಗಳೂರಿಗೆ ಉದ್ಯೋಗಕ್ಕಾಗಿ ಬೇರೆ ರಾಜ್ಯಗಳಿಂದ ಬರುವವರು ಕಡ್ಡಾಯವಾಗಿ ಕನ್ನಡ ಕಲಿಯಲೇಬೇಕು, ಆಡಳಿತ ಕನ್ನಡದಲ್ಲಿಯೇ ನಡೆಯಬೇಕು. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂದು ಉದ್ದುದ್ದ ಭಾಷಣ ಬಿಗಿಯುವ ಇವರು, ಉಳಿದ ದಿನಗಳಲ್ಲಿ ಈ ಕುರಿತ ಹೋರಾಟಕ್ಕೆ ಕನಿಷ್ಠ ಒಂದು ರೂಪುರೇಷೆ ಸಿದ್ಧಪಡಿಸಿ ಗೋಕಾಕ್ ಚಳುವಳಿಯಂತೆ ಮತ್ತೊಂದು ಚಳುವಳಿ ರೂಪಿಸುವ, ಸಜ್ಜುಗೊಳಿಸುವ  ಕನ್ನಡಿಗರಿಗೆ ಧುಮುಕುವಂತೆ ಮಾಡುವ ಯಾವ ನಾಯಕತ್ವವೂ ಕಾಣುತ್ತಿಲ್ಲ. ನಾಯಕರು ನವೆಂಬರ್ ನಾಯಕರಾಗಿಯೇ ಉಳಿದು ಹೋಗುತ್ತಿದ್ದಾರೆ!

ಮೇಕೆದಾಟು
ತೀರದ ಕಾವೇರಿ ಸಂಕಷ್ಟ

ಈ ವರ್ಷ ನಾಡು ಬರಗಾಲ, ನೀರಿನ ಕೊರತೆಯನ್ನು ತೀವ್ರವಾಗಿ ಎದುರಿಸುತ್ತಿದೆ. ಕಾವೇರಿ ಕೊಳ್ಳದಲ್ಲಿ ನೀರಿನ ಅಭಾವ ವಿಪರೀತ ಎನ್ನುವಷ್ಟು ಕಾಣಿಸಿಕೊಂಡಿದೆ. ಮತ್ತೆ ಮತ್ತೆ ತಮಿಳುನಾಡು ಕ್ಯಾತೆ ತೆಗೆದು ಕಾವೇರಿ ಜಲ ನಿಯಂತ್ರಣ ಸಮಿತಿ ಹಾಗೂ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ ಮುಂದೆ ಹಠ ಹಿಡಿದು ತನ್ನ ನೀರಿನ ಪಾಲನ್ನು ಪಡೆಯುತ್ತಿದೆ. ಅದರೆ ರಾಜ್ಯದ ವಾಸ್ತವ ಸ್ಥಿತಿಯನ್ನು ಇವೆರಡೂ ಸಂಸ್ಥೆಗಳಿಗೆ ಅರ್ಥಮಾಡಿಸುವಲ್ಲಿ ನಾವು ಸೋತಿದ್ದೇವೆ, ಸೋಲುತ್ತಲೇ ಇದ್ದೇವೆ. ಮತ್ತೆ ಮತ್ತೆ ಬಂದ್, ಪ್ರತಿಭಟನೆಗಳಷ್ಟೇ ಆಗಿ ಮತ್ತೂ ಸಾಮಾನ್ಯ ಕನ್ನಡಿಗರೇ  ಹೈರಾಣವಾಗುತ್ತಿದ್ದಾರೆ. ಆದರೆ, ಕರ್ನಾಟಕಕ್ಕೆ ಆದೇಶದ ಮೇಲೆ ಆದೇಶ ಬರುತ್ತಿದ್ದು, ತಮಿಳುನಾಡಿಗೆ ಕಾವೇರಿ ನೀರು ಹರಿದು ಹೋಗುತ್ತಿದೆ.

ಕಾವೇರಿ ಸೇರಿ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಶಾಶ್ವತ ಪರಿಹಾರ ಯಾರಿಗೂ ಬೇಡವಾಗಿದೆ. ಕಾರಣ, ಅದರಲ್ಲಿ ರಾಜಕೀಯ ಪಕ್ಷಗಳ ಹಿತ ಅಡಗಿದೆ. ಇನ್ನು ಕೆಲವರಿಗೆ ಅವರದೇ ಆದ ಒಳ ಉದ್ದೇಶಗಳಿವೆ. ತಮಿಳುನಾಡು ರಾಜ್ಯದಲ್ಲಿ ಇರುವಂಥ ಸಂಘಟಿತ ಹೋರಾಟ, ರಾಜಕೀಯ ಇಚ್ಛಾಶಕ್ತಿ, ಜನರ ಕುರಿತಾದ ಬದ್ಧತೆ ನಮ್ಮಲ್ಲಿ ಇಲ್ಲದ ಕಾರಣಕ್ಕೆ ಕಾವೇರಿ ಅಂತಿಮ ಐತೀರ್ಪು ಬಂದ ಮೇಲೆಯೂ ಕನ್ನಡಿಗರು ಸಂಕಷ್ಟ ಎದುರಿಸುತ್ತಿದ್ದಾರೆ. ನೀರಿನ ಬಿಕ್ಕಟ್ಟು ಕಾಣಿಸಿಕೊಂಡಾಗ ಮಾತ್ರ ಮಾಧ್ಯಮಗಳಲ್ಲಿ ಪ್ರತ್ಯಕ್ಷರಾಗಿ ಮೈಲೇಜ್ ಪಡೆಯುವ ನಾಯಕರು, ನೀರು ಹರಿದ ಮೇಲೆ ನಾಪತ್ತೆ ಆಗಿಬಿಡುತ್ತಾರೆ. ಇದು ಕರ್ನಾಟಕದ ಇವತ್ತಿನ ಸ್ಥಿತಿ. ನೆಲ ಜಲ ನಾಡು ನುಡಿ ವಿಚಾರದಲ್ಲಿ ರಾಜಿ ಪ್ರಶ್ನೆ ಇಲ್ಲ ಎನ್ನುವ ನಾಯಕರ ಹೇಳಿಕೆಗಳನ್ನು ಕೇಳಿ ಕೇಳಿ ಕನ್ನಡಿಗರಿಗೆ ಸಾಕು ಸಾಕಾಗಿ ಹೋಗಿದೆ.

ಇದೇ ಸ್ಥಿತಿ ಮಹಾದಾಯಿ ಯೋಜನೆಗೂ ಆಗಿದೆ. ಗೋವಾ ಜತೆಗಿನ ತಿಕ್ಕಾಟಕ್ಕೆ ಅಂತ್ಯ ಇಲ್ಲ ಎನ್ನುವಂತಾಗಿದೆ. ಆಲಮಟ್ಟಿ ಆಣೆಕಟ್ಟು ಎತ್ತರವಾದರೂ ಕರ್ನಾಟಕ ತನ್ನ ಪಾಲಿನ ಕೃಷ್ಣಾ ನದಿಯ ನೀರನ್ನು ಬಳಕೆ ಮಾಡಿಕೊಳ್ಳುವುದು ಇನ್ನೂ ಸಾಧ್ಯವಾಗಿಲ್ಲ. ಬೆಂಗಳೂರಿನಲ್ಲಿ ಒಂದು, ಬೆಳಗಾವಿಯಲ್ಲಿ ಇನ್ನೊಂದು ವಿಧಾನಸೌಧ ಕಟ್ಟಿಕೊಂಡು ತಾಸುಗಟ್ಟಲೆ ಚರ್ಚೆ ನಡೆದರೂ ವರ್ಷಗಳು ಉರಳುತ್ತಿವೆಯೇ ಹೊರತು ಪರಿಹಾರ ಕಾಣುತ್ತಿಲ್ಲ. 

ಬೆಳೆದಿದ್ದೇವೆ, ಬೆಯುತ್ತಿದ್ದೇವೆ!!

ಕನ್ನಡನಾಡು ಔದ್ಯೋಗಿಕವಾಗಿ ದೇಶದಲ್ಲೇ ಹೆಸರು ಮಾಡಿದೆ. ವಿಜ್ಞಾನ, ತಂತ್ರಜ್ಞಾನ, ಆವಿಷ್ಕಾರ ಸೇರಿ ಐಟಿ ಬಿಟಿ, ಬಾಹ್ಯಾಕಾಶ, ಕೃಷಿ, ಆಟೋಮೊಬೈಲ್ ಸೇರಿ ಅನೇಕ ಕ್ಷೇತ್ರಗಳಲ್ಲಿ ಕರ್ನಾಟಕ ದಾವುಗಾಲಿಡುತ್ತಿದೆ. ನಾಡಿನಲ್ಲಿ ಇಸ್ರೋ, ಆಪಲ್ ಅಂತಹ ಮೊಬೈಲ್ ಕಂಪನಿಗಳು, ಟಾಟಾ, ಟಯೋಟಾದಂತಹ ಆಟೋಮೊಬೈಲ್  ಕಂಪನಿಗಳು ಜಿಂದಾಲ್, ಸುಜನಾಲ್ ಎರ್ನಾಕೋದಂತಹ ಪವನ-ಸೌರ ವಿದ್ಯುತ್ ಕಂಪನಿಗಳು ನೆಲೆ ನಿಂತು ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶ ಸಿಗುವಂತೆ ಮಾಡಿವೆ. ಈ ಸಂಸ್ಥೆಗಳಲ್ಲಿ ಉದ್ಯೋಗಗಳನ್ನು ಅರಸಿ ನೆರೆ ರಾಜ್ಯದ ಜನ ಸಾಕಷ್ಟು ಅಗಾಧ ಪ್ರಮಾಣದಲ್ಲಿ ಬಹು ಹಿಂದೆಯೇ ಬೆಂಗಳೂರಿಗೆ ವಲಸೆ ಬಂದು ನೆಲೆಸಿದ್ದಾರೆ.

ಪರರಾಜ್ಯದವರಿಗೆ ಇಲ್ಲಿನ ಹಿತಕರವಾದ ಹವೆ, ಕೈತುಂಬಾ  ಸಂಬಳ ಕೊಡುವ ಉದ್ಯೋಗಾವಕಾಶ, ಕನ್ನಡ ಕಲಿಯದೆ ಬದುಕಬಹುದಾದ ಅನುಕೂಲಕರ ಸನ್ನಿವೇಶ ಎಲ್ಲಾ ಸೇರಿ ಬೆಂಗಳೂರು ನಗರ ವಲಸಿಗರಿಗೆ ಸ್ವರ್ಗವಾಗಿದೆ. ಈ ರೀತಿಯಲ್ಲಿ ಉದ್ಯೋಗ ಅರಸಿ ಬೆಂಗಳೂರಿಗೆ ಬರುವವರ ಸಂಖ್ಯೆ ಹೆಚ್ಚಾದಂತೆ ಇಲ್ಲಿನ ವ್ಯಾಪಾರ-ವಾಣಿಜ್ಯ ವ್ಯವಹಾರಗಳೂ ಹೆಚ್ಚಾದವು. ಪರರಾಜ್ಯದ ವ್ಯಾಪಾರಿಗಳ ವಲಸೆಯೂ ಹೆಚ್ಚಾಯಿತು. ಒಂದರ ಮೇಲೊಂದು ಬಹುಮಹಡಿ ಅಪಾರ್ಟ್ ಮೆಂಟುಗಳು, ವಾಣಿಜ್ಯ ಮಳಿಗೆಗಳು ತಲೆ ಎತ್ತಿದವು. ಈ ಕಟ್ಟಡಗಳ ಕೆಲಸಗಳ ಕಾಮಗಾರಿಗಳಿಗೂ ಪರರಾಜ್ಯದವರು ಬಂದರು. ಅಷ್ಟೇ ಏಕೆ, ಪ್ಲಂಬಿಂಗ್, ವೈರಿಂಗ್, ಮರಗೆಲಸಕ್ಕೆ ಬಿಹಾರದಿಂದ ಜನ ಬರಬೇಕಿದೆ. ಇದು ಬೆಂಗಳೂರಿನ ಇವತ್ತಿನ ಸ್ಥಿತಿ.

ನೆರೆರಾಜ್ಯಗಳಲ್ಲಿನ ಜನಸಂಖ್ಯಾ ದಟ್ಟನೆ, ವ್ಯಾಪಾರ ಮತ್ತು ಉದ್ಯೋಗದ ಅವಕಾಶಗಳ ಕೊರತೆ, ಬಡತನ ಇತ್ಯಾದಿ ಕರ್ನಾಟಕಕ್ಕೆ ಹೊಡೆತ ಕೊಡುತ್ತಿವೆ. ಅನ್ಯ ಭಾಷಿಗರ ಅತಿಯಾದ ವಲಸೆ ಬೆಂಗಳೂರಿನಂಥ ನಗರದಲ್ಲಿಯೇ ಕನ್ನಡಿಗರಿಗೆ ಪರಕೀಯ ಭಾವನೆ ಮೂಡಿಸುತ್ತದೆ. ಅಲ್ಲಲ್ಲಿ ಅನ್ಯ ಭಾಷಿಗರ ವಸಾಹತುಗಳೇ ಸೃಷ್ಟಿ ಆಗುತ್ತಿದ್ದರೂ ಸರಕಾರಕ್ಕೆ ಅದರ ಅಪಾಯದ ಅರಿವು ಇಲ್ಲ. ಕನ್ನಡಿಗರಿಂದಲೇ ಗಿಜಿಗುಡುತ್ತಿದ್ದ ಹಳೆಯ ಬೆಂಗಳೂರು ಪೇಟೆಗಳು, ಅಲ್ಲಿನ ಸ್ಥಳೀಯರ ಆಸ್ತಿಗಳು ಪರರ ಪಾಲಾಗಿವೆ. ಗಗನಚುಂಬಿ ಕಟ್ಟಡಗಳಲ್ಲಿ ಹೊರಗಿನವರು ಮೆರೆಯುತ್ತಿದ್ದರೆ, ಅವುಗಳ ಅಕ್ಕಪಕ್ಕದ ಗುಡಿಸಲುಗಲ್ಲಿ ಕನ್ನಡಿಗರು ವಾಸ ಮಾಡುತ್ತಿದ್ದಾರೆ.

ಇದು ಬೆಂಗಳೂರು ನಗರದ ಕಥೆಯಾದರೆ, ಇನ್ನು ನಮ್ಮ ಹಳ್ಳಿ, ಊರು, ನಗರ, ಪಟ್ಟಣಗಳಲ್ಲಿಯೂ ಪರಭಾಷಿಕರು ಭದ್ರ ನೆಲೆ ಕಂಡುಕೊಳ್ಳುತ್ತಿದ್ದಾರೆ. ಯಾವುದೇ ಊರುಗಳಿಗೆ ಹೋಗಿ ಗಮನಿಸಿದರೂ ಇದು ಕಣ್ಣಿಗೆ ರಾಚುವಂತೆ ಕಾಣುತ್ತದೆ. ಪಾನಿಪೂರಿಯಂತಹ ಸಣ್ಣಸಣ್ಣ ಅಂಗಡಿಯಿಂದ ಸೂಪರ್ ಮಾರ್ಕೆಟ್ ವರೆಗೆ, ದೊಡ್ಡ ದೊಡ್ಡ ಮಾಲ್ ಗಳು, ರೆಸ್ಟೋರೆಂಟ್ ಗಳು, ಐಷಾರಾಮಿ ಹೋಟೆಲ್ ಗಳಲ್ಲಿ ಹಾಗೆಯೇ ಹೆದ್ದಾರಿಗಳ ಪಕ್ಕದಲ್ಲಿರುವ ಹೋಟೆಲ್, ಡಾಬಾಗಳ  ಮಾಲೀಕತ್ವ ವನ್ನು ಹೊರ ರಾಜ್ಯದವರು ಹೊಂದಿದ್ದಾರೆ. ಅಯ್ಯಂಗಾರಿ ಬೇಕರಿಗಳ ಬದಲಾಗಿ ಕೇರಳದ ಬೇಕರಿ ಅಂಗಡಿಗಳು ನಾಯಿಕೊಡೆಗಳಂತೆ ಎಳುತ್ತಿವೆ. ಇದು ರಾಜ್ಯದ ಆಂತರಿಕ ಆರ್ಥಿಕ ಶಕ್ತಿಯ ಮೇಲೆ ಎಷ್ಟು ಪರಿಣಾಮ ಬೀರುತ್ತಿದೆ ಎನ್ನುವುದನ್ನು ಆಡಳಿತ ನಡೆಸುವವರು ಗಮನಿಸಬೇಕಾಗತ್ತದೆ.

ಸ್ಥಳೀಯರಿಗೆ ಉದ್ಯೋಗ ಎಂದು ದನಿ ಎತ್ತುವ ಕನ್ನಡಿಗರು ಸಿಕ್ಕಿದ ಅವಕಾಶಗಳನ್ನು ಕೈಚೆಲ್ಲಿದ್ದೇವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಸ್ಥಳೀಯರಿಗೆ ಉದ್ಯೋಗ ಎನ್ನುವ ಸರಕಾರದ ನೀತಿ ಕೇವಲ ಕಾಗದಕ್ಕೆ ಸೀಮಿತವಾಗಿದೆ. ಅಧಿಕಾರಶಾಹಿಗೆ ಈ ಬಗ್ಗೆ ಕಾಳಜಿಯೇ ಇಲ್ಲ. ಬಿಹಾರ, ಛತ್ತಿಸಗಾಢ,ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಮುಂತಾದ ಹೊರ ರಾಜ್ಯದಿಂದ ಬಂದಂತಹ ಜನರೇ ತುಂಬಿ ಹೋಗಿದ್ದಾರೆ. ಹಾಗಾದರೆ ನಮ್ಮವರಿಗೆ ಏಕೆ ಇಲ್ಲ? 

ಕನ್ನಡವನ್ನು ಅನ್ನದ ಭಾಷೆಯನ್ನಾಗಿ ಬೆಳೆಸುವ ಸಮರ್ಥ ಪ್ರಯತ್ನ ಸರ್ಕಾರದಿಂದ ಆಗಿರುವುದು ಎಷ್ಟರ ಮಟ್ಟಿಗೆ ಎನ್ನುವುಧಕ್ಕೆ ಮೇಲಿನ ವಿಶ್ಲೇಷಣೆ ಪುಷ್ಠಿ ನೀಡಬಲ್ಲುದು. ಮಕ್ಕಳಿಗೆ ಆಂಗ್ಲ ಭಾಷೆ ಕಲಿಸುತ್ತಿರುವ ಬೆನ್ನಲ್ಲೇ ಪೋಷಕರು ಕನ್ನಡದ ತೋರುತ್ತಿರುವ ಅಸಡ್ಡೆಗೆ ಕಾರಣಗಳನ್ನು ಹುಡುಕಬೇಕು. ಅದರಲ್ಲಿ ಆರ್ಥಿಕ ಕಾರಣಗಳನ್ನು ಹುಡುಕಿ ಪರಿಹಾರ ಪತ್ತೆ ಹಚ್ಚಬೇಕಿದೆ.

ಸರಕಾರದ ಭಾಗವಹಿಸುವಿಕೆ ಇಲ್ಲದೆ ಇಂದು ಖಾಸಗಿ ಕಂಪನಿ ದೇಶದ ಯಾವುದೇ ಮೂಲೆಯಲ್ಲಿ ಬೇಕಾದರೂ ತಮ್ಮ ವ್ಯವಹಾರವನ್ನು ಆರಂಭಿಸುವಷ್ಟು ಸ್ವಾತಂತ್ರ್ಯವನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ನೀಡಲಾಗಿದೆ. ಒಂದು ಕಂಪನಿ ಯಾವುದೇ ರಾಜ್ಯದಲ್ಲಿ ತನ್ನ ಕಾರ್ಯಚಟುವಟಿಕೆ ಆರಂಭಿಸಿದರೆ ಅಲ್ಲಿನ ರಾಜ್ಯ ಹಾಗೂ ಕೇಂದ್ರ ಸರಕಾರಗಳ ಅಧಿಕಾರಿಗಳ ಆಜ್ಞೆಯನ್ನು ಪಾಲಿಸಬೇಕು. ಆದರೆ ಭಾರತದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಸರಕಾರವನ್ನೇ ನಿಯಂತ್ರಿಸಬಲ್ಲಷ್ಟು ಶಕ್ತಿ ಪಡೆದಿವೆ. ಇಲ್ಲಿ ಸರ್ಕಾರದ ಆದೇಶಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಹಾಗಾಗಿ ರಾಜ್ಯದ ಯುವಜನತೆ ಕೆಲಸವಿಲ್ಲದೆ ಪರದಾಡುವ ಪರಿಸ್ಥಿತಿ ಬಂದಿದೆ.

ಇಂಗ್ಲೀಷ್ ಕಲಿತರೆ ಮಾತ್ರ ಇಲ್ಲಿನ ಐಟಿಬಿಟಿ ಉದ್ಯಮಗಳಲ್ಲಿ ಕೆಲಸ ಪಡೆಯುವುದು ಸಾಧ್ಯ. ಹಾಗಾಗಿ ಪಾಲಕರು ತಮ್ಮ ಮಕ್ಕಳ ಭವಿಷ್ಯದ ಚಿಂತೆಯಿಂದ ಶಾಲಾ ದಿನಗಳಿಂದಲೇ ಆಂಗ್ಲ ಮಾಧ್ಯಮಕ್ಕೆ ಆದ್ಯತೆ ನೀಡುತ್ತಿದ್ದಾರೆ. ಹಾಗಾಗಿ ಕನ್ನಡ ಶಾಲಾ ವಿದ್ಯಾರ್ಥಿಗಳಿಗೆ ಸರಕಾರಿ ಕೆಲಸದಲ್ಲಿ ಮೀಸಲು ಸೌಲಭ್ಯ ನೀಡಿದಂತೆ, ಬಹುರಾಷ್ಟ್ರೀಯ ಕಂಪನಿಗಳಲ್ಲೂ ಮೀಸಲಾತಿ ನೀಡಬೇಕು. ಈ ನಿಟ್ಟಿನಲ್ಲಿ ಡಾ.ಸರೋಜಿನಿ ಮಹಿಷಿ ವರದಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಸಾರ್ವಜನಿಕ ಮತ್ತು ಖಾಸಗಿ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಿಕೆಯಲ್ಲಿ ಆದ್ಯತೆ ಇರಬೇಕು. ಖಾಸಗಿ ಉದ್ದಿಮೆಗಳಲ್ಲಿ ಹಂತ ಹಂತವಾಗಿ ಶೇ.100ರಷ್ಟು ಕನ್ನಡಿಗರಿಗೆ ಅವಕಾಶ ಸಿಗುವಂತೆ ನೋಡಿಕೊಳ್ಳಬೇಕು.

ಕನ್ನಡದ ಯುವಜನರಿಗೆ ಉದ್ಯೋಗಾವಕಾಶ ಲಭಿಸಿದರೆ ಕನ್ನಡದಿಂದ ಅನ್ನ ಲಭಿಸಿದರೆ, ಸಾಮಾನ್ಯವಾಗಿ ಕನ್ನಡದ ಉಳಿವಿನ ಪ್ರಶ್ನೆ ತೆರೆಯ ಮರೆಗೆ ಸರಿಯಲಾರಂಭಿಸುತ್ತದೆ. ಈ ನಿಟ್ಟಿನಲ್ಲಿ ಭಾಷೆಯ ಮೂಲಕ ಸಿಗುವ ಅವಕಾಶಗಳ ಬಗ್ಗೆ ದೊಡ್ಡ ಆವಿಷ್ಕಾರವೇ ಆಗಬೇಕಿದ್ದು, ಅದಕ್ಕೆ ರಾಜ್ಯ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ.

ಇನ್ನು; ಕೇಂದ್ರ ಸರಕಾರವು ರೈಲ್ವೆ, ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅನುವು ಮಾಡಿದೆ, ಅದರೆ ನಮ್ಮ ಉದ್ಯೋಗಾಂಕ್ಷಿಗಳಿಗೆ ತಾತ್ಸಾರ.

ನೀವು ಗಮನಿಸಿರಬಹುದು, ರಾಜ್ಯದಲ್ಲಿ ಇರುವ ಕೇಂದ್ರ ಸರಕಾರದ ಆಡಳಿತ ಸಂಸ್ಥೆಗಳಲ್ಲಿ, ಅಂದರೆ; ರೈಲ್ವೆ, ಬ್ಯಾಂಕ್, ಪೋಸ್ಟ್ ಆಫೀಸ್, ಕೇಂದ್ರಿಯ ಮೀಸಲು ಪಡೆ ಮುಂತಾದ ಸಂಸ್ಥೆಗಳಲ್ಲಿ ಪರಭಾಷಿಕರೇ ತುಂಬಿ ಹೊಗಿದ್ದಾರೆ. ನಮ್ಮ ಪ್ರಯತ್ನವೇ ಶೂನ್ಯ ಮಟ್ಟದಲ್ಲಿದೆ.

ಕನ್ನಡವನ್ನು ಅನ್ನದ ಭಾಷೆಯನ್ನಾಗಿ ಮಾಡುವತ್ತ ಸರಕಾರ ಗಂಭೀರ ಚಿಂತನೆ ಮಾಡಲಿ. ಇಲ್ಲವಾದರೆ ನಮ್ಮಲ್ಲಿನ  ಕೆಲಸಗಳು ,ಅರ್ಥ ವ್ಯವಸ್ಥೆಯು ಎಲ್ಲವನ್ನೂ ಪರಭಾಷಿಕರ ದಾಕ್ಷಿಣ್ಯತೆಯಲ್ಲಿ ಬದುಕುವ ಸ್ಥಿತಿಗೆ ತಲುಪುವ ದಿನಗಳು ದೂರವೇನೂ ಇಲ್ಲ. ಪರಭಾಷೆ ಕಂಪನಿಗಳು, ಪರಭಾಷೆ ಸಿಇಒಗಳು, ಎಂಡಿಗಳು, ಹೆಚ್ ಆರ್ ಗಳು ಕನ್ನಡಿಗರಿಗೆ ಕಂಟಕವಾಗಿದ್ದಾರೆ.

ಕನ್ನಡಾಭಿಮಾನ ಬೆಳೆಸಿಕೊಳ್ಳುವುದೆಂದರೆ ಇತರೆ  ಭಾಷೆಗಳನ್ನು ದ್ವೇಷಿಸಬೇಕೆಂದು ಅಲ್ಲ. ಅಂತಹ ತಪ್ಪು ಕಲ್ಪನೆ ಸರಿಯಲ್ಲ. ಜನ್ಮತಃ ಕನ್ನಡಕ್ಕೆ, ಕನ್ನಡಿಗರಿಗೆ ಹೃದಯ ವೈಶಾಲ್ಯತೆ ಹೆಚ್ಚು. ಭಾರತದಂಹ ವಿಶಾಲ ಬಾಹುಳ್ಯವಿರುವ ದೇಶದಲ್ಲಿ ರಾಜ್ಯಕ್ಕೊಂದು, ಜಿಲ್ಲೆಗೊಂದು ಭಾಷೆಗಳಿವೆ. ಅದು ಹಲವು ಹೂಗಳ ಸುಂದರ ತೋಟವಿದ್ದಂತೆ, ಅನೇಕ  ಭಾಷೆಗಳ ವೈವಿಧ್ಯಪೂರ್ಣ ದೇಶ ನಮ್ಮದು. ಅಷ್ಟೇ ಏಕೆ; ಕನ್ನಡದಲ್ಲೇ ಹಲವಾರು ಬಗೆಗಳಿವೆ. ಬೆಂಗಳೂರು ಕಂಗ್ಲಿಷ್ ಕನ್ನಡ, ಮೈಸೂರಿನ ಮೆಲುದನಿ ಕನ್ನಡ, ಧಾರವಾಡದ ಗಂಡುಕನ್ನಡ, ದಕ್ಷಿಣಕನ್ನದ ಗ್ರಾಂಥಿಕ ಕನ್ನಡ, ಕಾಸರಗೋಡಿನ ಮಲಯಾಳಿ ಕನ್ನಡ, ಕಲ್ಯಾಣ ಕರ್ನಾಟಕದ ಉರ್ದು ಮಿಶ್ರಿತ ಕನ್ನಡ – ಹೀಗೆ ಹತ್ತು ಹಲವು ತರ. 

ಕರ್ನಾಟಕದಲ್ಲೇ ಹುಟ್ಟಿ ಬೆಳೆದರೂ, ಉನ್ನತ ವಿದ್ಯಾಭ್ಯಾಸ ಅಥವಾ ಜೀವನೋಪಾಯಕ್ಕಾಗಿ ಪರರಾಜ್ಯ ಮತ್ತು ಪರದೇಶಗಳಿಗೆ ಹೋಗಬೇಕಾದ ಅನಿವಾರ್ಯತೆ ಎದುರಾದರೂ, ಕನ್ನಡತನಕ್ಕೆ ಸಂಚಕಾರ ಒದಗದಂತೆ ನೋಡಿಕೊಳ್ಳುವ ಮತ್ತು ಮುಂದಿನ ಪೀಳಿಗೆಗೆ ಅದನ್ನು ಸಮರ್ಥವಾಗಿ ವರ್ಗಾಯಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಕೃತಿ, ಪರಂಪರೆಗಳ ಬೇರನ್ನು ಮತ್ತಷ್ಟು ಗಟ್ಟಿಗೊಳಿಸುವ ಯತ್ನಗಳು ವೈಯಕ್ತಿಕ ನೆಲೆಗಟ್ಟಿನಲ್ಲಿ ಸಾಕಷ್ಟು ಆಗಬೇಕಿದೆ. ಈ ನಿಟ್ಟಿನಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಬೇಕಿದೆ.

ಏಕೆಂದರೆ, ಕನ್ನಡ ಕೇವಲ ಭಾಷೆಯಲ್ಲ, ಅದೊಂದು ವಿಶಿಷ್ಟ ಸಂಗತಿ ಮತ್ತೂ ಜೀವನ. ಹಲವು ಒಳಿತು, ಶ್ರೇಷ್ಠತೆಗಳ ಸಂಗಮ. ಕನ್ನಡದ ಅಂತಃಸತ್ವವನ್ನು ಹೆಚ್ಚಿಸುವ ಸಂಕಲ್ಪ ನಮ್ಮದಾಗಲಿ. ವಿಜ್ಞಾನ, ತಂತ್ರಜ್ಞಾನದಲ್ಲೂ ಕನ್ನಡದ ವ್ಯಾಪ್ತಿ ಇನ್ನಷ್ಟು ಮತ್ತಷ್ಟು ಹೆಚ್ಚಾಗಬೇಕು. ಜತೆಗೆ, ಮನೆ ಮನೆಗಳಲ್ಲಿ ಕನ್ನಡ ಬಳಕೆ ವ್ಯಾಪಕವಾಗಬೇಕು. ಅಷ್ಟೇ ಅಲ್ಲ, ನಮ್ಮ ಚಿಂತನೆಗಳ ಅಭಿವ್ಯಕ್ತಿಗೂ ಮಾತೃಭಾಷೆ, ರಾಜ್ಯಭಾಷೆ ಹೆಚ್ಚು ಸಮರ್ಥ ಎಂಬುದು ಗೊತ್ತಿರುವಂಥದ್ದೇ. ಆಡಳಿತ ಭಾಷೆಯಾಗಿ ಮತ್ತು ಶಿಕ್ಷಣ ಮಾಧ್ಯಮವಾಗಿ ಕನ್ನಡ ಭಾಷೆಯ ಸ್ಥಿತಿಗತಿ, ಸಮಾಜದ ವಿವಿಧಕ್ಷೇತ್ರಗಳಲ್ಲಿನ ಕನ್ನಡದ, ಕನ್ನಡತನದ ಅಸ್ತಿತ್ವ, ಉದ್ಯೋಗಾವಕಾಶಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಇತ್ಯಾದಿ ವಿಷಯಗಳ ಕುರಿತಾದ ಚರ್ಚೆಗಳಿಗೆ ಸೀಮಿತಗೊಳಿಸದೆ ಶಾಸನ ಕಾನೂನುಗಳಾಗಿ ಜಾರಿಗೆ ತರಬೇಕಿದೆ.

ರಾಜ್ಯೋತ್ಸವದ ಸಂಭ್ರಮಾಚರಣೆಯ ಜತೆ ಜತೆಗೆ ಆತ್ಮಾವಲೋಕನದ ದಿನವೂ ಆಗಬೇಕಾದ್ದು ಇಂದಿನ ಅನಿವಾರ್ಯತೆ ಇದೆ. ಏಕೀಕರಣದ ಆಶಯಗಳು ಈಡೇರಿವೆಯೇ, ಅಭಿವೃದ್ಧಿಯ ಕನಸುಗಳು ನನಸಾಗಿವೆಯೇ ಎಂಬ ಚಿಂತನೆಗೆ ತೊಡಗಿಕೊಳ್ಳಬೇಕಿದೆ. ಕಾಲ ಬದಲಾದಂತೆ ಹೊಸ ಸ್ವರೂಪದ ಸಮಸ್ಯೆಗಳ ಪರಿಹಾರದ ನಿಟ್ಟಿನಲ್ಲೂ ಗಮನ ಹರಿಸಬೇಕಿದೆ. ಅದು ಕನ್ನಡದ, ಕರ್ನಾಟಕದ ಮತ್ತು ಕನ್ನಡಿಗರ ಉಜ್ವಲ ಭವಿಷ್ಯಕ್ಕೆ ಸಮರ್ಥ ಚಿಮ್ಮು ಹಲಗೆಯಾಗಿ ಪರಿಣಮಿಸಬೇಕಾಗಿದೆ. ಕರ್ನಾಟಕವೆಂಬ ಐವತ್ತು ವರ್ಷ ಕಳೆದರೂ ಸಂಕೋಲೆ, ಸಮಸ್ಯೆಗಳು ಹಾಗೆಯೇ ಉಳಿದಿರುವುದು ಖಂಡಿತಾ ಒಳ್ಳೆಯ ವಿಚಾರ ಅಲ್ಲ.

**

ಡಾ.ಗುರುಪ್ರಸಾದ್ ಹವಾಲ್ದಾರ್

ವೃತ್ತಿಯಲ್ಲಿ ಭೋಧನೆ, ಪ್ರವೃತ್ತಿಯಲ್ಲಿ ಬರವಣಿಗೆ ಇವರ ವಿಶೇಷ. ಅಧ್ಯಯನ, ಮಾಧ್ಯಮ ಇವರ ಆಸಕ್ತಿಯ ಅಂಶಗಳು. ರಾಜ್ಯದ ಅನೇಕ ಪತ್ರಿಕೆಗಳು, ವೆಬ್ ತಾಣಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ಇವರು ಸಿಕೆನ್ಯೂಸ್ ನೌ ಅಂಕಣಕಾರರು.

Tags: BengaluruckcknewsnowindiakannadakarnatakaLanguagenewsRajyotsav
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಇಂದಿನಿಂದ ಎಲ್ಲಾ ಸರಕಾರಿ ಶಾಲೆಗಳಿಗೆ ಉಚಿತ ವಿದ್ಯುತ್, ನೀರು

ಇಂದಿನಿಂದ ಎಲ್ಲಾ ಸರಕಾರಿ ಶಾಲೆಗಳಿಗೆ ಉಚಿತ ವಿದ್ಯುತ್, ನೀರು

Leave a Reply Cancel reply

Your email address will not be published. Required fields are marked *

Recommended

ಕೇಂದ್ರ ಸರಕಾರದ ವಿರುದ್ಧ ತೊಡೆ ತಟ್ಟಿದ ರಾಜ್ಯ ಕಾಂಗ್ರೆಸ್ ಸರಕಾರ; ಅದಕ್ಕೆ ಅಸಲಿ ಕಾರಣ ಏನು?

ಕೇಂದ್ರ ಸರಕಾರದ ವಿರುದ್ಧ ತೊಡೆ ತಟ್ಟಿದ ರಾಜ್ಯ ಕಾಂಗ್ರೆಸ್ ಸರಕಾರ; ಅದಕ್ಕೆ ಅಸಲಿ ಕಾರಣ ಏನು?

1 year ago
ಯೂರಿಯ ಜತೆಗೆ ರೈತರಿಗೆ ಕೋವಿಡ್ ಲಸಿಕೆ

ಯೂರಿಯ ಜತೆಗೆ ರೈತರಿಗೆ ಕೋವಿಡ್ ಲಸಿಕೆ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ