• About
  • Advertise
  • Careers
  • Contact
Thursday, October 29, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home POLITICS

ರಾಜ್ಯಾಧ್ಯಕ್ಷರಾಗಲು ಶೋಭಾ ಕರಂದ್ಲಾಜೆ ಹಿಂದೇಟು; ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ವಿ.ಸೋಮಣ್ಣ

P K Channakrishna by P K Channakrishna
November 10, 2023
in POLITICS, STATE
Reading Time: 2 mins read
0
ರಾಜ್ಯಾಧ್ಯಕ್ಷರಾಗಲು ಶೋಭಾ ಕರಂದ್ಲಾಜೆ ಹಿಂದೇಟು; ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ವಿ.ಸೋಮಣ್ಣ
1k
VIEWS
FacebookTwitterWhatsuplinkedinEmail

ಬಸನಗೌಡ ಪಾಟೀಲ್ ಯತ್ನಾಳ್ ಹೆಸರೂ ಮುಂಚೂಣಿಗೆ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮಣಿಸಲು ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡ ಬಿಜೆಪಿ, ಇದೀಗ ರಾಜ್ಯಾಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರ ನೇಮಕದಲ್ಲಿ ಅಚ್ಚರಿಯ ಹೆಜ್ಜೆ ಇಡುವ ಸಾಧ್ಯತೆ ಹೆಚ್ಚಾಗಿದೆ.

ಮಹತ್ವದ ಸಂಗತಿ ಎಂದರೆ ನಳೀನ್ ಕುಮಾರ್ ಕಟೀಲ್ ಅವರ ನಂತರ ರಾಜ್ಯ ಬಿಜೆಪಿ ಹೊಣೆಯನ್ನು ಯಾರಿಗೆ ವಹಿಸಬೇಕು ಎಂದು ತಲೆ ಕೆಡಿಸಿಕೊಂಡಿದ್ದ ಬಿಜೆಪಿ ರಾಷ್ಟ್ರೀಯ ನಾಯಕರು; ಸಮೀಕ್ಷೆಗಳ ಮೊರೆ ಹೋಗಿದ್ದರು. ಆದರೆ, ಈ ಸಮೀಕ್ಷೆಗಳಿಂದ ಹೊರಬಂದ ಫಲಿತಾಂಶ ಆ ಪಕ್ಷದ ವರಿಷ್ಠರನ್ನು ಹೊಸ ಇಕ್ಕಟ್ಟಿಗೆ ದೂಡಿದೆ.

ಕರ್ನಾಟಕದಲ್ಲಿ ಜಾತಿಗಳ ಕಪಿಮುಷ್ಟಿಯಲ್ಲಿ ಸಿಲುಕಿರುವ ಪಕ್ಷವನ್ನು ಹೊರತಂದು ಕೇಡರ್ ಬೇಸ್ ಸಂಘಟನೆ ಕಟ್ಟಲು ಸಂಘವಾರದಿಂದ ಮಾರ್ಗದರ್ಶನ ಪಡೆದಿದ್ದ ಪಕ್ಷಕ್ಕೆ ಪುನಾ ಅನಿವಾರ್ಯವಾಗಿ ಜಾತಿ ವರ್ತುಲಕ್ಕೆ ಸಿಕ್ಕಿಕೊಳ್ಳುವ ಸ್ಥಿತಿ ಎದುರಾಗಿದೆ.

ಜಾತಿಗಳ ಪ್ರಭಾವದಿಂದ ಪಕ್ಷವನ್ನು ಹೊರಗೆ ತಂದು ಸಂಘಟನೆ ಕಟ್ಟುವ ವರಿಷ್ಠರ ಕನಸು ಬಹುತೇಕ ಕೈ ಕೊಟ್ಟಿದ್ದು, ಅಧ್ಯಕ್ಷ ಸ್ಥಾನಕ್ಕೆ ವೀರಶೈವ ಸಮುದಾಯಕ್ಕೆ ಸೇರಿದ ನಾಯಕರನ್ನೇ ಆಯ್ಕೆ ಮಾಡುವಂತೆ ರಾಷ್ಟ್ರೀಯ ಬಿಜೆಪಿ ನಡೆಸಿರುವ ಎರಡು ಸಮೀಕ್ಷೆಗಳು ವರದಿ ನೀಡಿವೆ.

ಬಸನಗೌಡ ಪಾಟೀಲ್ ಯತ್ನಾಳ್

ಸಮೀಕ್ಷೆಗಳ ನಂತರ ಮಾಜಿ ಸಚಿವ ವಿ.ಸೋಮಣ್ಣ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೆಸರುಗಳು ಮುಂಚೂಣಿಯಲ್ಲಿದ್ದು, ಇವರ ಪೈಕಿ ಸೋಮಣ್ಣ ಅವರ ಹೆಸರೇ ಫೈನಲ್ ಆಗಬಹುದು ಎನ್ನುವ ಸುಳಿವು ಸಿಕ್ಕಿದೆ.

ಒಂದು ವೇಳೆ ಸೋಮಣ್ಣ ಅವರೇ ಅಧ್ಯಕ್ಷ ಸ್ಥಾನಕ್ಕೆ ಅಂತಿಮವಾದರೆ, ಅದಕ್ಕೆ ಯತ್ನಾಳ್ ಅವರು ತಕರಾರು ತೆಗೆಯುವ ಸಾಧ್ಯತೆ ಕಡಿಮೆ. ಯತ್ನಾಳ್‌ ಅವರು ವರಿಷ್ಠರಿಗೆ ಎದುರಾಡುವ ಸಾಧ್ಯತೆ ಇಲ್ಲ.

ಉಳಿದಂತೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಒಕ್ಕಲಿಗರನ್ನೇ ತರಬೇಕು ಎನ್ನುವ ಅಂಶ ಸಮೀಕ್ಷೆಗಳಲ್ಲಿ ಇದೆ ಎಂಬ ಮಾಹಿತಿ ಸಿಕ್ಕಿದೆ.

ರಾಜ್ಯ ರಾಜಕಾರಣಕ್ಕೆ ಶೋಭಾ ಹಿಂದೇಟು

ಈ ಸಮೀಕ್ಷೆಗಳಿಗೂ ಮೊದಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ತರಲು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ದಾ ಅವರು ಆಸಕ್ತಿ ತೋರಿದ್ದರು. ಇದಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬೆಂಬಲವೂ ಇತ್ತು.

ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಶೋಭಾ ಕರಂದ್ಲಾಜೆ

ಶೋಭಾ ಅವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರೂ ಇದೇ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಪಕ್ಷಕ್ಕೆ ಲಾಭದಾಯಕವಲ್ಲ ಎಂಬ ವರದಿಯ ಹಿನ್ನೆಲೆಯಲ್ಲಿ ವರಿಷ್ಠರು ಈ ನಿರ್ಧಾರವನ್ನು ತಡೆಹಿಡಿದಿದ್ದಾರೆ. ಅಲ್ಲದೆ, ರಾಜ್ಯ ರಾಜಕಾರಣಕ್ಕೆ ಮರಳಲು ಸ್ವತಃ ಶೋಭಾ ಅವರೂ ಒಲವು ತೋರಿಲ್ಲ ಎನ್ನಲಾಗಿದೆ.

ದೀಪಾವಳಿ ಹಬ್ಬ ಅಥವಾ ಪಂಚರಾಜ್ಯಗಳ ಚುನಾವಣೆ ನಂತರ ಹೊಸ ಬಿಜೆಪಿ ಅಧ್ಯಕ್ಷರ ನೇಮಕ ಆಗುವ ಸಾಧ್ಯತೆ ಇದೆ. ರಾಜ್ಯಾಧ್ಯಕ್ಷರ ನೇಮಕಾತಿಗೆ ಕರ್ನಾಟಕದ ಮುಖಂಡರಿಂದ ಒತ್ತಡಗಳಿವೆ. ಇದಕ್ಕೆ ಮಣಿಯಬಾರದೆಂದು ಪಕ್ಷದ ವರಿಷ್ಠರು ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಸಮೀಕ್ಷೆ ನಡೆಸುವ ಸಂದರ್ಭದಲ್ಲೇ ಈ ಸ್ಥಾನಕ್ಕೂ ಸಮೀಕ್ಷೆ ನಡೆಸಿದೆ.

ಪಕ್ಷದ ಕಾರ್ಯಕರ್ತರು ಹಾಗೂ ಜನಾಭಿಪ್ರಾಯದಲ್ಲಿ ವೀರಶೈವ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ನೀಡಿದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಲು ಸಾಧ್ಯ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ ಎನ್ನುವ ಅಂಶ ಸಿಕೆನ್ಯೂಸ್‌ ಗೌ ಗೆ ಗೊತ್ತಾಗಿದೆ.

ಒಂದು ವೇಳೆ ಈ ಸಮುದಾಯಕ್ಕೆ ಅವಕಾಶ ಮಾಡಿಕೊಡುವುದಾದರೆ ಸಂಘಟನಾ ದೃಷ್ಟಿಯಿಂದ ವಿ. ಸೋಮಣ್ಣ ಇಲ್ಲವೇ ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಯತ್ನಾಳ್ ಅವರಿಗೆ ಬೆಂಬಲ ವ್ಯಕ್ತವಾಗಿದೆ. ಆದರೆ; ಯತ್ನಾಳ್ ಅವರನ್ನು ನೇಮಕ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಒಲವು ತೋರುತ್ತಿಲ್ಲ ಎನ್ನಲಾಗಿದೆ. ರಾಜ್ಯಾಧ್ಯಕ್ಷರಾಗಿ ವಿವಾದಾತ್ಮಕ ಹೇಳಿಕೆ ನೀಡಿ ಪಕ್ಷವನ್ನೇ ಗೊಂದಲಕ್ಕೆ ಸಿಲುಕಿಸಿದರೆ ಕಷ್ಟವಾಗುತ್ತದೆ ಎನ್ನುವ ತಕರಾರು ವರಿಷ್ಠರಲ್ಲಿ ಇದೆ.

ಸೋಮಣ್ಣ ಬಗ್ಗೆ ಗೃಹ ಸಚಿವರಿಗೆ ಒಲವು ಇದ್ದಂತಿದೆ. ಪಕ್ಷದ ಸೂಚನೆಯಂತೆ ತಮ್ಮ ಕ್ಷೇತ್ರ ಗೋವಿಂದರಾಜ ನಗರವನ್ನು ತೊರೆದು ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಫರ್ಧಿಸಿ ಆದೇಶ ಪಾಲನೆ ಮಾಡಿದ್ದು ಅವರಿಗೆ ವರದಾನವಾಗುತ್ತಿದೆ.

ಆರು ತಿಂಗಳಾದರೂ ವಿಧಾನಸಭೆ ವಿರೋಧ ಪಕ್ಷದ ನಾಯಕನಿಲ್ಲ. ಹಾಲಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಅವಧಿ ಪೂರ್ಣಗೊಂಡು 8 ತಿಂಗಳೇ ಕಳೆದಿದೆ. ಅಲ್ಲದೆ, ವಿಧಾನಸಭೆಯ ಪ್ರತಿಪಕ್ಷ ಸ್ಥಾನಕ್ಕೆ 6 ತಿಂಗಳಿನಿಂದಲೂ ನೇಮಕವಾಗಿಲ್ಲ. ಸದ್ಯಕ್ಕೆ ರಾಜ್ಯಾಧ್ಯಕ್ಷರ ಸ್ಥಾನ ಭರ್ತಿ ಮಾಡಲು ವರಿಷ್ಠರು ಕಸರತ್ತು ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಸೇರಿದಂತೆ ಲೋಕಸಭೆ ಚುನಾವಣೆ ಕುರಿತು ಸಮಾಲೋಚನೆ ನಡೆಸಲು ನವೆಂಬರ್ 10ನ್ನು ಮೀಸಲಿಟ್ಟಿದ್ದಾರೆ. ಅಂದು ರಾಜ್ಯಾಧ್ಯಕ್ಷರ ಬಗ್ಗೆ ಚರ್ಚೆ ನಡೆದು ದೀಪಾವಳಿ ಹಬ್ಬದ ನಂತರ ಹೊಸ ಅಧ್ಯಕ್ಷರ ನೇಮಕಾತಿ ಆಗಲಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಶಾಸಕಾಂಗ ಪಕ್ಷಕ್ಕೆ ನಾಯಕ ಯಾರು?

ಈ ಸ್ಥಾನ ಒಕ್ಕಲಿಗರ ಪಾಲಾಗುವ ಸಾಧ್ಯತೆ ನಿಶ್ಚಳವಾಗಿದೆ. ಆರ್.‌ಆಶೋಕ್‌, ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರ ಹೆಸರುಗಳು ಪರಿಶೀಲನೆಯಲ್ಲಿವೆ. ಹಾಗೆಯೇ, ಬಿಲ್ಲವ ಸಮುದಾಯದ ಹಿರಿಯ ನಾಯಕ ಸುನೀಲ್‌ ಕುಮಾರ್‌ ಅವರ ಹೆಸರು ವರಿಷ್ಠರ ಪಟ್ಟಿಯಲ್ಲಿದೆ. ವೀರಶೈವ ಲಿಂಗಾಯಿತ ನಾಯಕರೇ ಪಕ್ಷಾಧ್ಯಕ್ಷರಾದರೆ ಬಸವರಾಜ ಬೊಮ್ಮಾಯಿ ಅವರು ಪ್ರತಿಪಕ್ಷ ನಾಯಕರಾಗುವುದು ಬಹುತೇಕ ಕಷ್ಟ.

Tags: basana gouda patil yatnalbjpbjp karnatakackcknewsnowmodinewsPoliticsstate presidentv somanna
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಕರ್ನಾಟಕದಲ್ಲಿ ಸೊನ್ನೆ ಸಂಪಾದನೆ; ಬ್ಯಾಲೆಟ್ ಪೇಪರ್‌ ಬೇಕೆಂದು ಹಠ ಹಿಡಿದ ಕಾಂಗ್ರೆಸ್ mlc ಚುನಾವಣೆಯಲ್ಲಿ ಗೆದ್ದ ಸೀಟುಗಳೆಷ್ಟು?

ಕರ್ನಾಟಕದಲ್ಲಿ ಸೊನ್ನೆ ಸಂಪಾದನೆ; ಬ್ಯಾಲೆಟ್ ಪೇಪರ್‌ ಬೇಕೆಂದು ಹಠ ಹಿಡಿದ ಕಾಂಗ್ರೆಸ್ mlc ಚುನಾವಣೆಯಲ್ಲಿ ಗೆದ್ದ ಸೀಟುಗಳೆಷ್ಟು?

by cknewsnow desk
October 29, 2026
0

ರಾಹುಲ್ ಗಾಂಧಿ ಪಡೆಗೆ ಟಾಂಗ್ ಕೊಟ್ಟ ಪ್ರಧಾನಿ ನರೇಂದ್ರ ಮೋದಿ

#SIR ರಾಜ್ಯದಲ್ಲಿ 99.32 ಲಕ್ಷ ಮತದಾರರ ಹೆಸರಿಲ್ಲ

#SIR ರಾಜ್ಯದಲ್ಲಿ 99.32 ಲಕ್ಷ ಮತದಾರರ ಹೆಸರಿಲ್ಲ

by cknewsnow desk
October 28, 2026
0

ಬೆಂಗಳೂರಿನಲ್ಲಿ 43.13% ಮತದಾರರ ಪ್ರಮಾಣ ಕುಸಿತ

ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ₹600 ಕೋಟಿಗೆ ಡೀಲ್ ಕೊಟ್ಟರಾ ಡಿಕೆಶಿ!!

ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ₹600 ಕೋಟಿಗೆ ಡೀಲ್ ಕೊಟ್ಟರಾ ಡಿಕೆಶಿ!!

by cknewsnow desk
October 25, 2026
0

ಹಾಲಿ ಮುಖ್ಯಮಂತ್ರಿ ವಿರುದ್ಧ ಕೇಂದ್ರ ಸಚಿವರ ಗಂಭೀರ ಆರೋಪ; ಈಗಿನ ಮಹಾನ್ ಮುಖ್ಯಮಂತ್ರಿಗಳೇ ಸ್ಟಿಂಗ್ ಮೂಲಪುರುಷ

ಸ್ಟಿಂಗ್ ಮಾಡಿದವರಿಗೆ ನೋಟಿಸ್, ಅನ್ಯಪಕ್ಷದವರ ಅರೆಸ್ಟ್!

ಸ್ಟಿಂಗ್ ಮಾಡಿದವರಿಗೆ ನೋಟಿಸ್, ಅನ್ಯಪಕ್ಷದವರ ಅರೆಸ್ಟ್!

by cknewsnow desk
October 25, 2026
0

ಸ್ಟಿಂಗ್ ಆಪರೇಶನ್ ಪ್ರಕರಣದಲ್ಲಿ ರಾಜ್ಯ ಸರ್ಕಾರದ್ದು ಇಬ್ಬಗೆ ನೀತಿ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ

ಸ್ಟಿಂಗ್ ವಿರುದ್ಧ ಕೋರ್ಟ್ ಮೊರೆ ಹೋದ ಸಿದ್ದರಾಮಯ್ಯ! ಇಂದು ಆದೇಶ ನಿರೀಕ್ಷೆ

ನನ್ನ ತಲೆಗೆ ಸ್ಟಿಂಗ್ ಕಟ್ಟಲು ಡಿಕೆಶಿ, ಪ್ರಿಯಾಂಕ್ ಖರ್ಗೆ ಸಂಚು

by cknewsnow desk
October 25, 2026
0

ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ; #kpsc ಹಗರಣದ ದಿಕ್ಕು ತಪ್ಪಿಸಲು ಪ್ರಿಯಾಂಕ್ ಖರ್ಗೆ ಒದ್ದಾಟ

ಬೆಂಗಳೂರು ಸುತ್ತಲಿನ ಜನರ ಸಮಾಧಿ ಮೇಲೆ ಬ್ರ್ಯಾಂಡ್‌ ಬೆಂಗಳೂರು

10 ತಿಂಗಳಾದರೂ ಸಿಗದ ಭೂಮಿ; ರಾಜ್ಯದ ಕೈತಪ್ಪಲಿದೆಯಾ ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ

by cknewsnow desk
October 22, 2026
0

ಬೇಸತ್ತು ಮುಖ್ಯಮಂತ್ರಿ ಡಿಕೆಶಿಗೆ ಪತ್ರ ಬರೆದ ಕೇಂದ್ರ ಸಚಿವ #HDK

Next Post
ಹೆಚ್.ಡಿ.ಕುಮಾರಸ್ವಾಮಿ ಅವರ ಬಿಡದಿ ತೋಟದಲ್ಲಿ ಇಸ್ರೇಲ್ ಕಾನ್ಸುಲೇಟ್ ಜನರಲ್ ಟಾಮಿ ಬೆನ್ ರೌಂಡ್ಸ್

ಹೆಚ್.ಡಿ.ಕುಮಾರಸ್ವಾಮಿ ಅವರ ಬಿಡದಿ ತೋಟದಲ್ಲಿ ಇಸ್ರೇಲ್ ಕಾನ್ಸುಲೇಟ್ ಜನರಲ್ ಟಾಮಿ ಬೆನ್ ರೌಂಡ್ಸ್

Leave a Reply Cancel reply

Your email address will not be published. Required fields are marked *

Recommended

ಸರಕಾರಕ್ಕೆ ಸಂಚಕಾರ; ಹೆಚ್.ಡಿ.ಕುಮಾರಸ್ವಾಮಿ, ಯೋಗಿ ಹೇಳಿಕೆಯಿಂದ ಕಾಂಗ್ರೆಸ್‌ನಲ್ಲಿ ತಳಮಳ

ಬೆಳಗಾವಿಯಲ್ಲಿ ಬಟಾ ಬಯಲಾದ ಕಾಂಗ್ರೆಸ್ ಕೋಲ್ಡ್ ವಾರ್

3 years ago
ಕಷ್ಟಗಳನ್ನೇ ಮೆಟ್ಟಿಲು ಮಾಡಿಕೊಂಡ ಅಕ್ಕ-ತಂಗಿ

ಚಿನ್ನದ ಸಹೋದರಿಯರಿಗೆ ಇಂದು ಸನ್ಮಾನ

4 years ago

Popular News

  • ಕರ್ನಾಟಕದಲ್ಲಿ ಸೊನ್ನೆ ಸಂಪಾದನೆ; ಬ್ಯಾಲೆಟ್ ಪೇಪರ್‌ ಬೇಕೆಂದು ಹಠ ಹಿಡಿದ ಕಾಂಗ್ರೆಸ್ mlc ಚುನಾವಣೆಯಲ್ಲಿ ಗೆದ್ದ ಸೀಟುಗಳೆಷ್ಟು?

    ಕರ್ನಾಟಕದಲ್ಲಿ ಸೊನ್ನೆ ಸಂಪಾದನೆ; ಬ್ಯಾಲೆಟ್ ಪೇಪರ್‌ ಬೇಕೆಂದು ಹಠ ಹಿಡಿದ ಕಾಂಗ್ರೆಸ್ mlc ಚುನಾವಣೆಯಲ್ಲಿ ಗೆದ್ದ ಸೀಟುಗಳೆಷ್ಟು?

    0 shares
    Share 0 Tweet 0
  • #SIR ರಾಜ್ಯದಲ್ಲಿ 99.32 ಲಕ್ಷ ಮತದಾರರ ಹೆಸರಿಲ್ಲ

    0 shares
    Share 0 Tweet 0
  • ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ₹600 ಕೋಟಿಗೆ ಡೀಲ್ ಕೊಟ್ಟರಾ ಡಿಕೆಶಿ!!

    0 shares
    Share 0 Tweet 0
  • ಸ್ಟಿಂಗ್ ಮಾಡಿದವರಿಗೆ ನೋಟಿಸ್, ಅನ್ಯಪಕ್ಷದವರ ಅರೆಸ್ಟ್!

    0 shares
    Share 0 Tweet 0
  • ನನ್ನ ತಲೆಗೆ ಸ್ಟಿಂಗ್ ಕಟ್ಟಲು ಡಿಕೆಶಿ, ಪ್ರಿಯಾಂಕ್ ಖರ್ಗೆ ಸಂಚು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕರ್ನಾಟಕದಲ್ಲಿ ಸೊನ್ನೆ ಸಂಪಾದನೆ; ಬ್ಯಾಲೆಟ್ ಪೇಪರ್‌ ಬೇಕೆಂದು ಹಠ ಹಿಡಿದ ಕಾಂಗ್ರೆಸ್ mlc ಚುನಾವಣೆಯಲ್ಲಿ ಗೆದ್ದ ಸೀಟುಗಳೆಷ್ಟು?

ಕರ್ನಾಟಕದಲ್ಲಿ ಸೊನ್ನೆ ಸಂಪಾದನೆ; ಬ್ಯಾಲೆಟ್ ಪೇಪರ್‌ ಬೇಕೆಂದು ಹಠ ಹಿಡಿದ ಕಾಂಗ್ರೆಸ್ mlc ಚುನಾವಣೆಯಲ್ಲಿ ಗೆದ್ದ ಸೀಟುಗಳೆಷ್ಟು?

October 29, 2026
#SIR ರಾಜ್ಯದಲ್ಲಿ 99.32 ಲಕ್ಷ ಮತದಾರರ ಹೆಸರಿಲ್ಲ

#SIR ರಾಜ್ಯದಲ್ಲಿ 99.32 ಲಕ್ಷ ಮತದಾರರ ಹೆಸರಿಲ್ಲ

October 28, 2026
ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ₹600 ಕೋಟಿಗೆ ಡೀಲ್ ಕೊಟ್ಟರಾ ಡಿಕೆಶಿ!!

ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ₹600 ಕೋಟಿಗೆ ಡೀಲ್ ಕೊಟ್ಟರಾ ಡಿಕೆಶಿ!!

October 25, 2026
ಸ್ಟಿಂಗ್ ಮಾಡಿದವರಿಗೆ ನೋಟಿಸ್, ಅನ್ಯಪಕ್ಷದವರ ಅರೆಸ್ಟ್!

ಸ್ಟಿಂಗ್ ಮಾಡಿದವರಿಗೆ ನೋಟಿಸ್, ಅನ್ಯಪಕ್ಷದವರ ಅರೆಸ್ಟ್!

October 25, 2026

Covid 19

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

October 16, 2026
ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ