ಕ್ಷುಲ್ಲಕ ಕಾರಣಕ್ಕೆ ಸಿಟ್ಟಾದ ನಿರ್ವಾಹಕಿ!
ಮಂಡ್ಯ: ರಾಜ್ಯ ಸರಕಾರಿ ಸಾರಿಗೆ ಬಸ್ಸಿನಲ್ಲಿ (ಕೆ ಎಸ್ ಆರ್ ಟಿಸಿ) ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯೊಬ್ಬರು ನಿರ್ವಾಹಕಿಗೆ ʼಟಿಕೆಟ್ ಕೊಡಿ ಅಜ್ಜಿʼ ಎಂದಿದ್ದಕ್ಕೆ ಆ ವಿದ್ಯಾರ್ಥಿನಿಗೆ ನಿರ್ವಾಹಕಿ ಕಪಾಳಮೋಕ್ಷ ಮಾಡಿದ್ದಾರೆ.
ಈ ವಿಲಕ್ಷಣ, ಅಸೂಕ್ಷ್ಮ ಘಟನೆ ಘಟನೆ ಮಂಡ್ಯದಲ್ಲಿ ನಡೆದಿದೆ. ʼಟಿಕೆಟ್ ಕೊಡಿ ಅಜ್ಜಿʼ ಎಂದು ಕೇಳಿದ್ದಕ್ಕೇ ಸಿಟ್ಟಿಗೆದ್ದ ನಿರ್ವಾಹಕಿ ಎಲ್ಲರ ಎದುರಿನಲ್ಲಿಯೇ ಆ ವಿದ್ಯಾರ್ಥಿನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಇದರಿಂದ ತೀವ್ರ ಅಪಮಾನಕ್ಕೆ ತುತ್ತಾದ ಆ ವಿದ್ಯಾರ್ಥಿನಿ ಬಸ್ಸಿನಲ್ಲಿಯೇ ಕಣ್ಣಿರು ಹಾಕಿದ್ದಾರೆ.
ಕೆ.ಎಂ.ದೊಡ್ಡಿಯಿಂದ ಮಂಡ್ಯಕ್ಕೆ ತೆರಳುತ್ತಿದ್ದ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದರು ವಿದ್ಯಾರ್ಥಿನಿ ಕಾವ್ಯಶ್ರೀ. ಟಿಕೆಟ್ ಪಡೆಯುವಾಗ ನಿರ್ವಾಹಕಿ ಸೌಭಾಗ್ಯ ಅವರನ್ನು ʼಅಜ್ಜಿ ಟಿಕೆಟ್ ಕೊಡಿʼ ಎಂದು ಕೇಳಿದ್ದಾರೆ. ಇದರಿಂದ ಕೋಪಗೊಂಡ ನಿರ್ವಾಹಕಿ, ʼನಾನು ಅಜ್ಜಿಯಂತೆ ಕಾಣುತ್ತೀನಾ?ʼ ಎಂದು ವಿದ್ಯಾರ್ಥಿನಿ ಕೆನ್ನೆಗೆ ಭಾರಿಸಿದ್ದಾರೆ.
ಸ್ಥಳದಲ್ಲೇ ಬಸ್ ನಿಲ್ಲಿಸಿ ನಿರ್ವಾಹಕಿ ವಿರುದ್ಧ ಆ ವಿದ್ಯಾರ್ಥಿನಿ ದೂರು ನೀಡಿದ್ದಾರೆ. ಹಲ್ಲೆಗೊಳಗಾದ ವಿದ್ಯಾರ್ಥಿನಿಗೆ ಸಹ ಪ್ರಯಾಣಿಕರು ಬೆಂಬಲವಾಗಿ ನಿಂತಿದ್ದಾರೆ. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ನಿರ್ವಾಹಕಿ ವಿರುದ್ದ ಪ್ರಕರಣ ದಾಖಲಾಗಿದೆ.
ಈ ವೇಳೆ ಮಹಿಳಾ ಸಂಘಟನೆಯವರು ನಿರ್ವಾಹಕಿ ವಿರುದ್ದ ಕ್ರಮ ತೆಗೆದುಕೊಳ್ಳದಿದ್ದರೆ ಮಂಡ್ಯ ಡಿಪೋ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಕೂಡಲೇ ದುರ್ವರ್ತನೆ ತೋರಿದ ನಿರ್ವಾಹಕಿಯನ್ನು ಕರ್ತವ್ಯದಿಂದ ಅಮಾನತು ಮಾಡಬೇಕೆಂದು ಮಹಿಳಾ ಸಂಘಟನೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.