• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home EDITORS'S PICKS

ಪ್ರದೀಪ್‌ ಈಶ್ವರ್‌ ಅವರನ್ನು ಪ್ರಶ್ನಿಸಿದ್ದಕ್ಕೇ ಜೆಡಿಎಸ್‌ ಕಾರ್ಯಕರ್ತನಿಗೆ ಜೀವ ಬೆದರಿಕೆ ಹಾಕಿದ ಚಿಕ್ಕಬಳ್ಳಾಪುರ ಶಾಸಕರ ಬೆಂಬಲಿಗರು

P K Channakrishna by P K Channakrishna
January 20, 2024
in EDITORS'S PICKS, NATION, POLITICS, STATE
Reading Time: 2 mins read
0
ಪ್ರದೀಪ್‌ ಈಶ್ವರ್‌ ಅವರನ್ನು ಪ್ರಶ್ನಿಸಿದ್ದಕ್ಕೇ ಜೆಡಿಎಸ್‌ ಕಾರ್ಯಕರ್ತನಿಗೆ ಜೀವ ಬೆದರಿಕೆ ಹಾಕಿದ ಚಿಕ್ಕಬಳ್ಳಾಪುರ ಶಾಸಕರ ಬೆಂಬಲಿಗರು
1.9k
VIEWS
FacebookTwitterWhatsuplinkedinEmail

ಕಾಂಗ್ರೆಸ್ ಕಾರ್ಯಕರ್ತರ ದರ್ಪ; ಅವಾಚ್ಯ ಶಬ್ದಗಳಿಂದ ನಿಂದನೆ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆಯೂ ಕೀಳು ಅಭಿರುಚಿಯ ಪದ ಬಳಕೆ

ಚಿಕ್ಕಬಳ್ಳಾಪುರ: ಕೊಟ್ಟ ಭರವಸೆಯನ್ನು ಈಡೇರಿಸಿ ಎಂದು ಶಾಸಕ ಪ್ರದೀಪ್‌ ಈಶ್ವರ್‌ ಅವರನ್ನು ಪ್ರಶ್ನೆ ಮಾಡಿದ ಜೆಡಿಎಸ್‌ ಕಾರ್ಯಕರ್ತರೊಬ್ಬರಿಗೆ ಕಾಂಗ್ರೆಸ್‌ ಮುಖಂಡರಿಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಜಿಡಿಎಸ್‌ ಯುವ ಮುಖಂಡ ಅಕಿಲ್‌ ರೆಡ್ಡಿ ಬೆದರಿಕೆಗೆ, ನಿಂದನೆಗೆ ಒಳಗಾದ ಜೆಡಿಎಸ್‌ ಕಾರ್ಯಕರ್ತ. ಕಾಂಗ್ರೆಸ್‌ ಮುಖಂಡರು, ಶಾಸಕರ ಬೆಂಬಲಿಗ, ಶಾಸಕರ ಊರಿನವರೇ ಆದ ಜೋಳ ಕಿಟ್ಟಪ್ಪ ಅಲಿಯಾಸ್‌ ರಾಮಕೃಷ್ಣ ಹಾಗೂ ಗುಡಿಬಂಡೆ ತಾಲೂಕಿನ ಕೋರೇನಹಳ್ಳಿ ಗ್ರಾಮದ ಶಶಿಕುಮಾರ್‌ ಬೆದರಿಕೆ ಒಡ್ಡಿದವರು.

ಶುಕ್ರವಾರ ರಾತ್ರಿ 8.30 ಸಮಯಕ್ಕೆ ಅಕಿಲ್‌ ರೆಡ್ಡಿಗೆ ಮೊಬೈಲ್ ಕರೆ ಮಾಡಿರುವ ಈ ಇಬ್ಬರೂ, “ವಿಡಿಯೋ ಮಾಡಿ ಶಾಸಕರನ್ನು ಟೀಕಿಸುವುದು, ಪ್ರಶ್ನೆ ಮಾಡುವುದನ್ನು ನಿಲ್ಲಿಸದಿದ್ದರೆ ನೆಟ್ಟಗಿರಲ್ಲ” ಎಂದು ನೇರವಾಗಿಯೇ ಬೆದರಿಕೆ ಹಾಕಿದ್ದಾರೆ.

ಇವರಿಬ್ಬರೂ ಅಕಿಲ್‌ ರೆಡ್ಡಿಗೆ ಬೆದರಿಕೆ ಹಾಕಿರುವ ಆಡಿಯೋ ಟೇಪ್‌ ಸಿಕೆನ್ಯೂಸ್‌ ನೌ ಗೆ ಲಭ್ಯವಾಗಿದ್ದು, ಇಬ್ಬರೂ ತೆಲುಗು ಭಾಷೆಯಲ್ಲಿ ಅಕಿಲ್‌ ರೆಡ್ಡಿಯನ್ನು ಅವಾಚ್ಯ ಶಬ್ದಗಳಲ್ಲಿ ನಿಂದಿಸಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ವೈಯಕ್ತಿವಾಗಿ ನಿಂದಿಸಿ ಅವರ ಚಾರಿತ್ರ್ಯಹರಣ ಮಾಡುವ ಕೃತ್ಯ ಎಸಗಿದ್ದಾರೆ.

https://youtu.be/AssCBCQajEA

ಅಕಿಲ್‌ ರೆಡ್ಡಿ ಸಮಜಾಯಿಷಿ ಕೊಡಲು ಪ್ರಯತ್ನ ಮಾಡಿದರೂ, ಆ ಮುಖಂಡರು ಮಾತನಾಡಲು ಅವಕಾಶವನ್ನೇ ನೀಡದೆ ಏಕವಚನದಲ್ಲಿ, ಅವಾಚ್ಯ ಶಬ್ದಗಳಲ್ಲಿ ಮನಸೋ ಇಚ್ಛೆ ನಿಂದಿಸಿದ್ದಾರೆ. ವರದಿಯಲ್ಲಿ ಬರೆಯಲಾಗದ ಕೆಟ್ಟ, ಕೊಳಕು ಶಬ್ದಗಳನ್ನು ಅವರು ಬಳಕೆ ಮಾಡಿದ್ದು, ಮಾತಿನ ನಡುವೆ ಜಾತಿಯನ್ನೂ ಎಳೆದುತಂದು, ತಾಯಿ-ತಂದೆಯನ್ನು ನಿಂದಿಸಿದ್ದಾರೆ.

ಕರೆ ಮಾಡಿದಾಗ ಮೊದಲು ಮಾತನಾಡುವ ಜೋಳ ಕಿಟ್ಟಪ್ಪ; “ವಿಡಿಯೋಗಳನ್ನು ಮಾಡ್ತಾ ಇದ್ದೀಯಾ.. ಏನ್‌ ಕೆಲಸ ನಿನಗೆ? ನೀನು ಏನ್‌ ಕೇಳಬೇಕು? ಯಾಕ್‌ ಕೇಳಬೇಕು?” ಎಂದು ಜೋರು ಮಾಡುತ್ತಾರೆ. ಕೂಡಲೇ ಮಧ್ಯದಲ್ಲಿ ಬಾಯಿ ಹಾಕುವ ಶಶಿಕುಮಾರ್‌, ಏಕಾಎಕಿ ಅಸಭ್ಯ ಭಾಷೆಯಲ್ಲಿ ಅಕಿಲ್‌ ರೆಡ್ಡಿಯನ್ನು ಮನ ಬಂದಂತೆ ನಿಂದಿಸುತ್ತಾರೆ.

“ನೀನ್‌ ಯಾವನೋ ಶಾಸಕರ ಬಗ್ಗೆ ಮಾತನಾಡೋಕೆ? ಏನ್‌ ಅಂದುಕೊಂಡಿದ್ದೀಯಾ? ನಮ್ಮ ಕಥೆ ನಿನಗೆ ಗೊತ್ತಿಲ್ಲ… ಎಂಎಲ್‌ʼಎಯನ್ನು ಪ್ರಶ್ನೆ ಮಾಡೋಕೆ ನೀನ್‌ ಯಾವನೋ?” ಎಂದು ಧಮ್ಕಿ ಹಾಕಿದ್ದಲ್ಲದೆ, ಕುಮಾರಸ್ವಾಮಿ ಅವರ ಬಗ್ಗೆ ಅಸಭ್ಯವಾಗಿ, ವಿಕೃತವಾಗಿ ಮಾತನಾಡಿದ್ದಾರೆ ಜೋಳ ಕಿಟ್ಟಪ್ಪ.

“ನೀನು ಜೆಡಿಎಸ್‌ ನವನು. ಎಂಎಲ್‌ ಎ ಬಗ್ಗೆ ಮಾತನಾಡೀಕೆ ನೀನ್‌ ಯಾವನೋ? ನಿನಗೆ ಹಿಂದೆಯೇ ಒದೆ ಬೀಳಬೇಕಿತ್ತು” ಎಂದು ಜೋಳ ಕಿಟ್ಟಪ್ಪ ಬೆದರಿಕೆ ಒಡ್ಡುತ್ತಾರೆ.

“ಏಯ್‌ ನೀನ್‌ ವಿಡಿಯೋ ಮಾಡು.. ಅವನ ಅಮ್ಮನ್‌ ಯಾವನು ಬರ್ತಾನೋ ನೋಡ್ತೀನಿ..” ಎಂದು ಜೋರು ಮಾಡುವ ಶಶಿಕುಮಾರ್‌, ಅಕಿಲ್‌ ರಡ್ಡಿಗೆ ಮಾತನಾಡಲು ಅವಕಾಶವನ್ನೇ ನೀಡದೇ ಮನಸೋಇಚ್ಛೆ ಕೀಳುಭಾಷೆಯಲ್ಲಿ ನಿಂದಿಸಿದ್ದಾರೆ.

“ನೀನು ನಮ್ಮ ಪಕ್ಷಕ್ಕೆ ವೋಟ್‌ ಹಾಕಿಲ್ಲ, ನೀನ್‌ ನಮ್ಮ ವೋಟರ್‌ ಅಲ್ಲ. ಹಾಗಿದ್ದ ಮೇಲೆ ನಮ್ಮ ಪ್ರದೀಪ್‌ ಈಶ್ವರ್‌ ಬಗ್ಗೆ ಮಾತನಾಡೋದಕ್ಕೆ ನೀನ್‌ ಯಾವನು? ನೀನ್‌ ಜೆಡಿಎಸ್‌ ಪಾರ್ಟಿಯಲ್ಲಿ ಇರೋನು. ನೀನು ಕಾಂಗ್ರೆಸ್‌ ಪಕ್ಷದಲ್ಲಿ ಇದಿಯಾ ನಮ್‌ ಎಂಎಲ್‌ ಎ ಬಗ್ಗೆ ಮಾತನಾಡೋದಕ್ಕೆ.. ನಿಮ್ಮ ಅಪ್ಪನಿಗೆ ಹುಟ್ಟಿದ್ರೆ ವಿಡಿಯೋ ಮಾಡು.. ಪೇರೇಸಂದ್ರಕ್ಕೆ ಬಾ.. ನಿನಗೆ ಬಾರಿಸಬೇಕು..” ಎಂದು ಶಶಿಕುಮಾರ್‌ ಧಮ್ಕಿ ಹಾಕಿದ್ದಾರೆ.

ಶುಕ್ರವಾರ ರಾತ್ರಿ ರಾತ್ರಿ 8.30 ಸಮಯಕ್ಕೆ ನನಗೆ ಮೊಬೈಲ್‌ ಕರೆ ಮಾಡಿದ ಜೋಳ ಕಿಟ್ಟಪ್ಪ(ರಾಮಕೃಷ್ಣ) ಹಾಗೂ ಶಶಿಕುಮಾರ್‌ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ನಾನು ಅವರಿಗೆ ವಿವರಣೆ ಕೊಡಲು ಯತ್ನಿಸಿದರೂ ಇಬ್ಬರೂ ನನ್ನನ್ನು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಣ್ಣ ಅವರನ್ನು ಅತ್ಯಂತ ಕೆಟ್ಟದಾಗಿ ನಿಂದಿಸಿದರು.

ಅಖಿಲ್‌ ರೆಡ್ಡಿ, ಜೆಡಿಎಸ್‌ ಯುವ ಮುಖಂಡ, ಚಿಕ್ಕಬಳ್ಳಾಪುರ

ಧಮ್ಕಿ ಹಿನ್ನೆಲೆ ಕಥೆ ಏನು?

ಕೆಲ ತಿಂಗಳ ಹಿಂದೆ ಸಭೆಯಲ್ಲಿ ಭಾಷಣ ಮಾಡಿದ್ದ ಶಾಸಕ ಪ್ರದೀಪ್‌ ಈಶ್ವರ್‌, “ಅಣ್ಣಾ ನನಗೊಂದು ಆಸೆ ಇದೆ. ನೀವೆಲ್ಲಾ ಕೈ ಜೋಡಿಸಿದರೆ ಒಂದು ತಿಂಗಳೊಳಗಡೆ ಪಿಎಲ್‌ ಡಿ ಬ್ಯಾಂಕ್‌ ನಲ್ಲಿ ಕೆ.ಬಿ.ಪಿಳ್ಳಪ್ಪ ಅವರ ವಿಗ್ರಹ ಸ್ಥಾಪಿಸಬೇಕು ಅಂತ ನನ್ನಾಸೆ” ಎಂದು ಹೇಳಿದ್ದರು.

ಆರು ತಿಂಗಳಾದರೂ ಪಿಳ್ಳಪ್ಪ ಅವರ ವಿಗ್ರಹ ಸ್ಥಾಪನೆ ಆಗದ ಬಗ್ಗೆ ವಿಡಿಯೋ ಮಾಡಿ ಫೇಸ್‌ ಬುಕ್‌ ನಲ್ಲಿ ಹಾಕಿ ಪ್ರಶ್ನೆ ಮಾಡಿದ್ದ ಅಕಿಲ್‌ ರೆಡ್ಡಿ, ಪ್ರಶ್ನೆ ಮಾಡಿದ್ದಾರಲ್ಲದೆ, ಶಾಸಕರು ಮಾತು ಕಡಿಮೆ ಮಾಡಿ ಕೆಲಸ ಜಾಸ್ತಿ ಮಾಡಿ ಎಂದು ಸಲಹೆ ಮಾಡಿದ್ದರು.

https://www.youtube.com/watch?v=_ACOx81y8MQ

ಅಕಿಲ್‌ ರೆಡ್ಡಿ ಭಾಷೆಯಲ್ಲಿ ಶಾಸಕರನ್ನು ನಿಂದಿಸುವ ಶಬ್ದವಾಗಲಿ ಅಥವಾ ಅವರನ್ನು ವೈಯಕ್ತಿಕವಾಗಿ ನಿಂದಿಸುವ ಪದಗಳಾಗಲಿ ಇಲ್ಲ. ಆ ವಿಡಿಯೋ ಕೂಡ ಸಿಕೆನ್ಯೂಸ್‌ ನೌ ಗೆ ಲಭ್ಯವಾಗಿದೆ.

ಅಕಿಲ್‌ ರೆಡ್ಡಿ ವಿಡಿಯೋವನ್ನು ಕಂಡು ರೊಚ್ಚಿಗೆದ್ದಿರುವ ಜೋಳ ಕಿಟ್ಟಪ್ಪ, ಶಶಿಕುಮಾರ್‌ ಅಸಭ್ಯ ಭಾಷೆಯಲ್ಲಿ ನಿಂದಿಸಿ ಜೀವ ಬೆದರಿಕೆಯನ್ನು ಒಡ್ಡಿದ್ದಾರೆ. ಅವರ ನಿಂದನಾ ಆಡಿಯೋ ಕುಮಾರಸ್ವಾಮಿ ಅವರ ಗಮನಕ್ಕೂ ಹೋಗಿದೆ.

Tags: Akhil ReddychikkaballapurcknewsnowCongressjdsLife Threat From Congress Leadersnewspradeepeshwar
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಕೆಲಸ ಮಾಡಲು ಆಗದಿದ್ದರೆ ಮತ್ಯಾಕೆ ಭರವಸೆ ಕೊಡ್ತೀರಿ?

ಕೆಲಸ ಮಾಡಲು ಆಗದಿದ್ದರೆ ಮತ್ಯಾಕೆ ಭರವಸೆ ಕೊಡ್ತೀರಿ?

Leave a Reply Cancel reply

Your email address will not be published. Required fields are marked *

Recommended

ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

3 years ago
ಕಾಟನ್ ಬಾಕ್ಸ್ ಗಳಲ್ಲಿ ಕುರುಡು ಕಾಂಚಾಣ!

ಕಾಟನ್ ಬಾಕ್ಸ್ ಗಳಲ್ಲಿ ಕುರುಡು ಕಾಂಚಾಣ!

3 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ