ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಉಪ ಚುನಾವಣೆ ಅಖಾಡದ ಕಾವು ಏರುತ್ತಿರುವ ವೇಳೆಯಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಲೆ ಸಿಬಿಐ ದಾಳಿ ನಡೆದಿದೆ!
ರಾಜ್ಯ ಕಾಂಗ್ರೆಸ್ ಸಾರಥ್ಯ ವಹಿಸಿದ ನಂತರ ಪಕ್ಷವನ್ನು ತಳಮಟ್ಟದಿಂದ ಮೇಲೆತ್ತುವ ಕೆಲಸ ಮಾಡುತ್ತಿದ್ದ ಡಿಕೆಶಿಗೆ ಇದೊಂದು ಆಘಾತ ಎನ್ನಬಹುದು. ಜತೆಗೆ, ಈ ದಾಳಿ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಟುವಾಗಿ ಟೀಕಿಸಿದ್ದಾರೆ. ದಾಳಿಗೆ ಅನುಮತಿ ನೀಡುವುದರ ವಿರುದ್ಧ ಅವರು ಹೈಕೋರ್ಟಿನಲ್ಲಿ ಅರ್ಜಿ ದಾಖಲಿಸಿರುವ ಬೆನ್ನಲ್ಲೇ ದಾಳಿಯಾಗಿದೆ.
ಡಿ.ಕೆ.ಶಿವಕುಮಾರ್ ಜತೆಗೆ ಅವರ ಸಹೋರದರ ಹಾಗೂ ಸಂಸದ ಡಿ.ಕೆ. ಸುರೇಶ್ ನಿವಾಸದ ಮೇಲೆಯೂ ಸೋಮವಾರ ಬೆಳಗ್ಗೆ ಸಿಬಿಐ ಅಧಿಕಾರಿಗಳು ನಡೆಸಿದ್ದಾರೆ. ಜತೆಗೆ, ಇವರ ಹುಟ್ಟೂರು ದೊಡ್ಡ ಆಲಹಳ್ಳಿ, ದೆಹಲಿಯಲ್ಲಿರುವ ಡಿ.ಕೆ.ಸುರೇಶ್ ಅವರ ಅಧಿಕೃತ ಮತ್ತು ಖಾಸಗಿ ನಿವಾಸದ ಮೇಲೂ ದಾಳಿಯಾಗಿದೆ. ಹಾಗೆಯೇ ಮುಂಬಯಿಯ ಒಂದು ಸ್ಥಳದ ಮೇಲೂ ಸಿಬಿಐ ಅಟ್ಯಾಕ್ ಮಾಡಿದೆ ಎನ್ನುವ ಮಾಹಿತಿ ಈ ಸುದ್ದಿ ಹೊರಬೀಳುವ ಹೊತ್ತಿಗೆ ಸಿಕ್ಕಿರುವ ಮಾಹಿತಿ ಪ್ರಕಾರ 14ಕ್ಕೂ ಹೆಚ್ಚು ಜಾಗಗಳಲ್ಲಿ ಸುಮಾರು 60ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿದ್ದಾರೆಂಬ ಮಾಹಿತಿ ಇದೆ.
ಉಪ ಚುನಾವಣೆ ಹಿನ್ನೆಲೆಯಾ?
ಬಿಜೆಪಿ ಪಾಲಿಗೆ ನಿರ್ಣಾಯಕವಾಗಿರುವ ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಕಾಂಗ್ರೆಸ್ ದೂರಿದೆ. ಮುಖ್ಯವಾಗಿ ರಾಜರಾಜೇಶ್ವರಿ ನಗರ ಕ್ಷೇತ್ರವನ್ನು ಸಂಸದ ಡಿ.ಕೆ. ಸುರೇಶ್ ಅವರ ನೇರ ಉಸ್ತುವಾರಿಯಲ್ಲಿತ್ತು. ಶಿರಾವನ್ನು ಸ್ವತಃ ಡಿಕೆಶಿ ಗಮನಿಸುತ್ತಿದ್ದರು. ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ದಿಕ್ಕುತಪ್ಪಿಸುವ ಉದ್ದೇಶದಿಂದಲೇ ಈ ದಾಳಿ ನಡೆಸಲಾಗಿದೆ ಎಂದು ಸಿದ್ದರಾಮಯ್ಯ ನೇರ ಆರೋಪ ಮಾಡಿದ್ದಾರೆ.
ಹಿಂದೆ ಕೂಡ ಆಗಿತ್ತು
ಚುನಾವಣೆಯ ವೇಳೆಯಲ್ಲೂ ಡಿ.ಕೆ. ಶಿವಕುಮಾರ್ ಮೇಲೆ ಆದಾಯ ತೆರಿಗೆ ದಾಳಿ ನಡೆದಿತ್ತು. ಆಗ ಗುಜರಾತ್‌ನ ಕಾಂಗ್ರೆಸ್ ಶಾಸಕರು ಬೆಂಗಳೂರಿನ ರೆಸಾರ್ಟ್‌ವೊಂದರಲ್ಲಿ ಆಶ್ರಯ ಪಡೆದಿದ್ದರು. ಅವರ ಉಸ್ತುವಾರಿಯನ್ನು ಡಿಕೆಶಿ ನೋಡಿಕೊಳ್ಳುತ್ತಿದ್ದರು.
ರಾಜಕೀಯ ದುರುದ್ದೇಶ
ಇದೇ ವೇಳೆ ಮಾತನಾಡಿರುವ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್, “ಇದು ರಾಜಕೀಯ ಪ್ರೇರಿತ ದಾಳಿ. ಉಪ ಚುನಾವಣೆ ಘೋಷಣೆ ಆಗಿದೆ. ರಾಜ್ಯದ ಜನರು ನೋಡುತ್ತಿದ್ದಾರೆ” ಎಂದು ಪ್ರತಿಕ್ರಿಯಿಸಿದ್ದಾರೆ.
It’s all political war…. And everything is a challenging task….