• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS WORLD

ಲಕ್ಷಕ್ಕೂ ಕಡಿಮೆ ಜನಸಂಖ್ಯೆಯ ಆಫ್ರಿಕನ್‌ ದ್ವೀಪ ಶಿಶೆಲ್ಸ್‌ ಅಧ್ಯಕ್ಷರಾದ ಭಾರತೀಯ ಮೂಲದ ಕಲಾವನ್‌

cknewsnow desk by cknewsnow desk
October 29, 2020
in WORLD
Reading Time: 2 mins read
0
ಲಕ್ಷಕ್ಕೂ ಕಡಿಮೆ ಜನಸಂಖ್ಯೆಯ ಆಫ್ರಿಕನ್‌ ದ್ವೀಪ ಶಿಶೆಲ್ಸ್‌ ಅಧ್ಯಕ್ಷರಾದ ಭಾರತೀಯ ಮೂಲದ ಕಲಾವನ್‌
922
VIEWS
FacebookTwitterWhatsuplinkedinEmail

ವಿಕ್ಟೋರಿಯಾ: ಹಿಂದೆ ಫಿಜಿ ದ್ವೀಪ ಹಾಗೂ ಇತರೆ ಕೆಲ ದ್ವೀಪರಾಷ್ಟ್ರಗಳಲ್ಲಿ ಭಾರತೀಯ ಮೂಲದ ವಲಸಿಗರು ರಾಷ್ಟ್ರ ನಾಯಕರಾಗಿ ಹೊರಹೊಮ್ಮಿದ್ದರು. ಇದೀಗ ಆಫ್ರಿಕಾ ಖಂಡಕ್ಕೆ ಪೂರ್ವದಲ್ಲಿರುವ ಹಿಂದೂ ಮಹಾಸಾಗರದಲ್ಲಿ ನಡುಗಡ್ಡೆಯಾಗಿರುವ ಶಿಶೆಲ್ಸ್‌ ದೇಶಕ್ಕೆ ಭಾರತೀಯ ಮೂಲದವರೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರ ಹೆಸರು ವಾವೆಲ್ ರಾಮ್ ಕಲಾವನ್. ಅವರ ಪೂರ್ವಜರು ಬಿಹಾರದ ಗೋಪಾಲ್‌ಗಂಜ್‌ ನವರು.

ಇದೇ ಅಕ್ಟೋಬರ್‌ 26ರಂದು ನಡೆದಿದ್ದ ಚುನಾವಣೆಯಲ್ಲಿ ಕಲಾವನ್‌ ನೇತೃತ್ವದ ಪಕ್ಷಕ್ಕೆ ಶೇ.54ರಷ್ಟು ಬಹುಮತ ಬಂದು ಅಧಿಕಾರ ಸಿಕ್ಕಿದೆ. 1976ರಿಂದ ಅಂದರೆ; 44 ವರ್ಷಗಳ ನಂತರ ಪ್ರತಿಪಕ್ಷ ನಾಯಕರೊಬ್ಬರು ದೇಶದ ಚುಕ್ಕಾಣಿ ಹಿಡಿದಿದ್ದಾರೆ. ಅಂದಹಾಗೆ; ಪಾವಲ್ ಅಲ್ಲಿನ ಆಂಗ್ಲಿಕನ್ ಚರ್ಚಿನ ಮಾಜಿ ಧರ್ಮಗುರು.

Felicitations to H.E. @wavelramkalawan on his historic win in the Presidential and Assembly elections in Seychelles. We look forward to a strengthening of the close and traditional relationship between India and Seychelles under his leadership

— Narendra Modi (@narendramodi) October 25, 2020

ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೂತನ ಅಧ್ಯಕ್ಷ ಕಲಾವನ್‌ ಅವರಿಗೆ ಶುಭ ಕೋರಿದ್ದಾರೆ. ನಿಮ್ಮ ಅವಧಿಯಲ್ಲಿ ಭಾರತ ಮತ್ತು ಶಿಶೆಲ್ಸ್‌ ಸಂಬಂಧಗಳು ಮತ್ತಷ್ಟು ಗಾಢವಾಗಲಿ ಎಂಬ ಸಂದೇಶದೊಂದಿಗೆ ಮೋದಿ ಟ್ವೀಟ್‌ ಮಾಡಿದ್ದಾರೆ.

ಅಂದಹಾಗೆ ಈ ದ್ವೀಪ ರಾಷ್ಟಕ್ಕೆ ಪ್ರಧಾನಿ ನರೇಂದ್ರ ಮೋದಿಯೂ ಭೇಟಿ ಕೊಟ್ಟಿದ್ದರು. 2015ರ ಮಾರ್ಚ್‌ 10 ಮತ್ತು 11ರಂದು ಎರಡು ದಿನಗಳ ಭೇಟಿ ನೀಡಿದ್ದರು. 33 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಶಿಶೆಲ್ಸ್‌ಗೆ ಭೇಟಿ ನೀಡಿದ್ದು ಅದೇ ಪ್ರಥಮವಾಗಿತ್ತು.

With President Michel. Am deeply impressed by his vision. Together we will strengthen India-Seychelles ties. pic.twitter.com/ArWxAqjEaO

— Narendra Modi (@narendramodi) March 11, 2015

ಶಿಶೆಲ್ಸ್ ಎಂಬುದು ಮಾಹೆ ಸೇರಿದಂತೆ ಅನೇಕ ಪುಟ್ಟಪುಟ್ಟ ದ್ವೀಪಗಳಿರುವ ಸ್ವತಂತ್ರ ರಾಷ್ಟ್ರವಾಗಿದ್ದು, ಬ್ರಿಟಿಷ್ ವಸಾಹತುನಿಂದ 1977ರಲ್ಲಿ ಸ್ವಾತಂತ್ರ್ಯ ಪಡೆದಿತ್ತು. ಪೂರ್ವ ಆಫ್ರಿಕಾದ ಈ ದೇಶದ ಅಕ್ಕಪಕ್ಕದಲ್ಲಿ ಇನ್ನೂ ಅನೇಕ ಹೆಸರಾಂತ ದ್ವೀಪ ರಾಷ್ಟ್ರ ಗಳಿವೆ. ಶಿಶೆಲ್ಸ್ ರಾಜಧಾನಿ ವಿಕ್ಟೋರಿಯಾ ನಗರವಾಗಿದ್ದು, ಸುಂದರ ಬೀಚುಗಳು, ಅರಣ್ಯ, ವಿಶೇಷ ವನ್ಯಜೀವಿಗಳಿಂದ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ. ಹೀಗಾಗಿ ಈ ದೇಶಕ್ಕೆ ಪ್ರವಾಸೋದ್ಯಮವೇ ಆದಾಯದ ಮೂಲವಾಗಿದೆ.

2020ರ ಜನಗಣತಿಯಂತೆ ಈ ರಾಷ್ಟ್ರದ ಜನರಲ್ಲಿ ಶೇ.56ರಷ್ಟು ಮಂದಿ ನಗರ ಪ್ರದೇಶದಲ್ಲಿದ್ದಾರೆ. ಭಾರತೀಯರೂ ಸೇರಿ ಅನ್ಯರಾಷ್ಟ್ರ, ಅನ್ಯ ಧರ್ಮೀಯರೂ ಇದ್ದಾರೆ. ಇವರೆಲ್ಲರನ್ನು ಲೆಕ್ಕಕ್ಕೆ ತೆಗೆದುಕೊಂಡರೂ ದೇಶದ ಒಟ್ಟಾರೆ ಜನಸಂಖ್ಯೆ 98,546 ಮಾತ್ರ. ಅದರ ಪ್ರಮಾಣ ಒಂದು ಲಕ್ಷವನ್ನೂ ಮೀರಿಲ್ಲ ಎಂದರೆ ಯಾರಿಗಾದರೂ ಅಚ್ಚರಿಯಾಗಬಹುದು. ವಿಶ್ವ ಜನಸಂಖ್ಯೆಯಲ್ಲಿ ಇದು ಶೇ.0. ಅತಿ ಕಡಿಮೆ ಜನಸಂಖ್ಯೆಯ ದೇಶಗಳಲ್ಲಿ ಇದು ಒಂದು.

ಶಿಶೆಲ್ಸ್‌ ರಾಜಧಾನಿ ವಿಕ್ಟೋರಿಯಾ ಮತ್ತು ವಿಕ್ಟೋರಿಯಾ ನಗರದ ಕ್ಲಾಕ್‌ ಟವರ್.‌ ದೇಶದ ವಿವಿಧ ಸುಂದರ ದ್ವೀಪಗಳು.

5ನೇ ಅಧ್ಯಕ್ಷರು

ಕಲಾವನ್‌ ಅವರು ಶಿಶೆಲ್ಸ್‌ ದೇಶದ ಐದನೇ ಅಧ್ಯಕ್ಷರು. 1976ರಲ್ಲಿ ಶಿಶೆಲ್ಸ್‌ ಡೆಮಾಕ್ರಟಿಕ್‌ ಪಕ್ಷದ ಸರ್‌ ಜೇಮ್ಸ್‌ ಮ್ಯಾಂಚೆಮ್‌ ಮೊದಲ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅವರ ನಂತರ, 1977ರಲ್ಲಿ ಅಧಿಕಾರಕ್ಕೆ ಬಂದ ಶಿಶೆಲ್ಸ್‌ ಡೆಮಾಕ್ರಟಿಕ್‌ ಪ್ರೊಗ್ರೆಸಿವ್‌ ಫ್ರಂಟ್‌ನ ಫ್ರಾನ್ಸ್‌ ಆಲ್ಬರ್ಟ್‌ ರೆನೆ 2004ರವರೆಗೆ, ಅಂದರೆ; ಬರೋಬ್ಬರಿ 27 ವರ್ಷಗಳ ಕಾಲ ಆಡಳಿತ ನಡೆಸಿದ್ದರು. ಅವರಾದ ಮೇಲೆ 2004ರಿಂದ 2016ರವರೆಗೆ ಶಿಶೆಲ್ಸ್‌ ಡೆಮಾಕ್ರಟಿಕ್‌ ಪ್ರೊಗ್ರೆಸಿವ್‌ ಫ್ರಂಟ್‌ನ ಜೇಮ್ಸ್‌ ಮಿಶೆಲ್‌ ಅಧ್ಯಕ್ಷರಾಗಿದ್ದರು. ಇವರು 12 ವರ್ಷ ಅಧಿಕಾರದಲ್ಲಿದ್ದರು. ಇವರಾದ ಮೇಲೆ ಅಧ್ಯಕ್ಷರಾದ ಡೆನಿ ಫಾರೆ ಅವರು ಯುನೈಟೆಡ್‌ ಡೆಮಾಕ್ರಟಿಕ್‌ ಪಾರ್ಟಿಗೆ ಸೇರಿದವರು. ಇವರು 2016ರಿಂದ 2020ರ ಅಕ್ಟೋಬರ್‌ 26ರವರೆಗೂ ಅಧಿಕಾರದಲ್ಲಿದ್ದರು.

ಇದೀಗ ದೇಶದ 5ನೇ ಅಧ್ಯಕ್ಷರಾಗಿ 26ರಂದೇ ಕಲಾವನ್‌ ಪ್ರಮಾಣ ಸ್ವೀಕರಿಸಿದ್ದಾರೆ. ಕಲಾವನ್‌ ಅವರ ಪಕ್ಷ ಶೇಕಡಾವಾರು 54ರಷ್ಟು (35,562) ಮತ ಗಳಿಸಿದ್ದರೆ, ನಿಕಟಪೂರ್ವ ಅಧ್ಯಕ್ಷ ಡೆನಿ ಫಾರೆ ಅವರ ಯುನೈಟೆಡ್‌ ಡೆಮಾಕ್ರಟಿಕ್‌ ಪಾರ್ಟಿ ಶೇ.43.51ರಷ್ಟು (28,178) ಮತ ಗಳಿಸಿದೆ. ಮತ್ತೊಂದು ಪಕ್ಷವಾದ ಒನ್‌ ಶಿಶೆಲ್ಸ್‌ 1.58ರಷ್ಟು (1,021) ಮತ ಗಳಿಸಿದೆ.. ಒಟ್ಟು 64,761 ಮತಗಳು ಚಲಾವಣೆಯಾಗಿವೆ.

ವಿಕ್ಟೋರಿಯಾದಲ್ಲಿರುವ ಅರುಳ್‌ಮಿಗು ನವಶಕ್ತಿ ವಿನಾಯಕ ದೇಗುಲ.
*ವಿವಿಧ ಮೂಲಗಳಿಂದ / photos: Wikipedia

Tags: indiaseychellesWavel Ramkalawan
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಶ್ರೀರಾಮ ನವಮಿ ದಿನ ಅಯೋಧ್ಯೆಯ ಬಾಲ ರಾಮನಿಗೆ ಸೂರ್ಯ ತಿಲಕ

ಶ್ರೀರಾಮ ನವಮಿ ದಿನ ಅಯೋಧ್ಯೆಯ ಬಾಲ ರಾಮನಿಗೆ ಸೂರ್ಯ ತಿಲಕ

by cknewsnow desk
April 17, 2024
0

ಭಕ್ತಿ ಪರವಶತೆಯಿಂದ ಈ ದಿವ್ಯಕ್ಷಣವನ್ನು ಕಣ್ತುಂಬಿಕೊಂಡ ಅಸಂಖ್ಯಾತ ಭಕ್ತರು

Next Post
ಮರೆಯಲಾಗದ ಮಹಾನಟಿ ಸೌಂದರ್ಯ; 16 ವರ್ಷಗಳ ನಂತರ ಮರಳಿ ಬಂದರು ಬೆಳ್ಳೆತೆರೆಯ ಮೇಲೆ..

ಮರೆಯಲಾಗದ ಮಹಾನಟಿ ಸೌಂದರ್ಯ; 16 ವರ್ಷಗಳ ನಂತರ ಮರಳಿ ಬಂದರು ಬೆಳ್ಳೆತೆರೆಯ ಮೇಲೆ..

Leave a Reply Cancel reply

Your email address will not be published. Required fields are marked *

Recommended

ಗಾಂಧಿ ಜಯಂತಿಗೂ ಮುನ್ನವೇ ಪಬ್ ಒಪೆನ್!

ಅತಿಥಿ ಉಪನ್ಯಾಸಕ ಹುದ್ದೆ: 55,000ಕ್ಕೂ ಹೆಚ್ಚು ಅರ್ಜಿ!

3 years ago
ಭಾಗ್ಯನಗರದ ಭವ್ಯ ಇತಿಹಾಸ ಹಾದಿಬೀದಿಯಲ್ಲಿ ಅನಾಥವಾಗಿ ನರಳುತ್ತಿದೆ!!

ಭಾಗ್ಯನಗರದ ಭವ್ಯ ಇತಿಹಾಸ ಹಾದಿಬೀದಿಯಲ್ಲಿ ಅನಾಥವಾಗಿ ನರಳುತ್ತಿದೆ!!

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ