ಸರ್ದಾರ್ ವಲ್ಲಭಭಾಯ್ ಪಟೇಲ್ ಅವರಿಗೆ ನಮನ ಸಲ್ಲಿಸಿದ ಯಡಿಯೂರಪ್ಪ.
………………….
ಬೆಂಗಳೂರು: ಈ ಉಪ ಚುನಾವಣೆಯಲ್ಲಿ ಗೆಲ್ಲುತ್ತಿದ್ದಂತೆಯೇ ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರಕಟಿಸಿದ್ದಾರೆ.
ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಪ್ರಚಾರಕ್ಕೆ ತೆರಳುವ ವೇಳೆ ಶನಿವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಮುನಿರತ್ನ ಗೆದ್ದೇ ಗೆಲ್ಲುತ್ತಾರೆ. ಅವರು ಗೆದ್ದುಬಂದ ಕೂಡಲೇ ಸಚಿವ ಸ್ಥಾನ ನೀಡಲಾಗುವುದು ಎಂದು ತಿಳಿಸಿದರು.
ಈ ಚುನಾವಣೆ ಮುಗಿದ ಕೂಡಲೇ ದೆಹಲಿಗೆ ಹೋಗುತ್ತೇನೆ. ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆಯ ಬಗ್ಗೆ ವರಿಷ್ಠರ ಜತೆ ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಸಿಎಂ, ಈಗಾಗಲೇ ಸಂಪುಟ ವಿಸ್ತರಣೆ ಮಾಡಿ ಮುಗಿಸಬೇಕಿತ್ತು. ಕೆಲ ಕಾರಣಗಳಿಂದ ತಡವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು ಸಿಎಂ.
ಬಿರುಸಿನ ಪ್ರಚಾರ
ಇನ್ನು ಮತದಾನಕ್ಕೆ ಮೂರೇ ದಿನ ಉಳಿದಿದೆ. ಬಹಿರಂಗ ಪ್ರಚಾರಕ್ಕೆ ಇವತ್ತೇ (ಅ.31) ಕೊನೆ. ಕೊನೆ ಕ್ಷಣದಲ್ಲಿಯೇ ರಾಜೇರಾಜೇಶ್ವರಿ ನಗರ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಚಾರ ಕೈಗೊಂಡಿದ್ದು, ಪ್ರಚಾರ ಕಣವೂ ರಂಗೇರಿದೆ.
ಕ್ಷೇತ್ರದದ ಜ್ಞಾನಭಾರತಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಯಡಿಯೂರಪ್ಪ ಅವರು ಪಕ್ಷದ ಆಭ್ಯರ್ಥಿ ಮುನಿರತ್ನ, ಸಚಿವ ಆರ್.ಅಶೋಕ್ ಜತೆ ಸೇರಿ ಪ್ರಚಾರ ನಡೆಸಿದರಲ್ಲದೆ, ಬಿಜೆಪಿಯನ್ನು ಗೆಲ್ಲಿಸುವುದು ಎಂದರೆ ಅಭಿವೃದ್ಧಿಯನ್ನು ಗೆಲ್ಲಿಸಿದಂತೆ ಅಂದು ಎಂದರು.