ಬೆಂಗಳೂರು: ಬಹು ನಿರೀಕ್ಷಿತ ಗ್ರಾಮ ಪಂಚಾಯತಿ ಚುನಾವಣೆ ದಿನಾಂಕವನ್ನು ರಾಜ್ಯ ಚುನಾವಣೆ ಆಯೋಗ ಘೋಷಣೆ ಮಾಡಿದ್ದು, ಮತದಾನ 2 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ.
ಮೊದಲ ಹಂತದ ಮತದಾನ ಡಿಸೆಂಬರ್ 22ರಂದು ನಡೆಯಲಿದ್ದು, ಎರಡನೇ ಹಂತದ ಮತದಾನ ಡಿಸೆಂಬರ್ 27ರಂದು ನಡೆಯಲಿದೆ. ದಿನಾಂಕ ಘೋಷಣೆ ಕ್ಷಣದಿಂದಲೇ, ಅಂದರೆ; ಇಂದಿನಿಂದಲೇ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ಆಯೋಗ ತಿಳಿಸಿದೆ.
ಡಿಸೆಂಬರ್ 30ರಂದು ಮತ ಎಣಿಕೆ ನಡೆಯಲಿದೆ. ಇನ್ನು; ಡಿಸೆಂಬರ್ 7ರಂದು ಅಧಿಸೂಚನೆ ಹೊರಬೀಳಲಿದೆ. ಡಿ. 11 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ನಾಮಪತ್ರ ವಾಸಪ್ ಪಡೆಯಲು ಡಿ. 19ರಂದು ಕೊನೆ ದಿನ. ಡಿ.30ರಂದು ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
ರಾಜ್ಯದ 30 ಜಿಲ್ಲೆಗಳ ಗ್ರಾಮ ಪಂಚಾಯತಿಗೆ ಚುನಾವಣೆ ನಡೆಯಲಿದೆ. 92,121 ಸದಸ್ಯರಿಗೆ ಚುನಾವಣೆ ನಡೆಯಲಿದೆ. 5762 ಗ್ರಾಮ ಪಂಚಾಯತಿಗೆ ಚುನಾವಣೆ ನಡೆಸಲಾಗುತ್ತದೆ.
ಚಿಕ್ಕಬಳ್ಳಾಪುರ-ಕೋಲಾರದಲ್ಲಿ
ಇನ್ನು ಇವೆರಡೂ ಜಿಲ್ಲೆಗಳಲ್ಲಿ ಡಿಸೆಂಬರ್ 27ರಂದು ಮತದಾನ ನಡೆಯಲಿದೆ. ಎರಡೂ ಜಿಲ್ಲೆಗಳಲ್ಲಿ ಒಟ್ಟು 308 ಗ್ರಾಮ ಪಂಚಾಯತಿಗಳಿಗೆ ಮತದಾನ ನಡೆಯಲಿದೆ. ಈ ಪೈಕಿ ಚಿಕ್ಕಬಳ್ಳಾಪುರ ಜಿಲ್ಲೆ ಒಟ್ಟು 152 ಗ್ರಾ.ಪಂ.ಗಳಿವೆ. ಇದರಲ್ಲಿ ಶಿಡ್ಲಘಟ್ಟ-24, ಚಿಕ್ಕಬಳ್ಳಾಪುರ-32, ಚಿಂತಾಮಣಿ-35, ಗೌರಿಬಿದನೂರು-37, ಬಾಗೇಪಲ್ಲಿ-25 ಹಾಗೂ ಗುಡಿಬಂಡೆ-08 ಗ್ರಾಮ ಪಂಚಾಯತಿಗಳಿವೆ.
ಕೋಲಾರ ಜಿಲ್ಲೆಗೆ ಬಂದರೆ, ಒಟ್ಟು 156 ಗ್ರಾ.ಪಂ.ಗಳಿದ್ದು; ಕೋಲಾರ-36, ಮುಳಬಾಗಿಲು-30, ಮಾಲೂರು-28, ಬಂಗಾರಪೇಟೆ-21, ಶ್ರೀನಿವಾಸಪುರ-25 ಹಾಗೂ ಕೆಜಿಎಫ್-16 ಗ್ರಾಮ ಪಂಚಾಯತಿಗಳಿವೆ.
election, Karnataka, gram Panchayati election,