ಗುಡಿಬಂಡೆ: ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿದ್ದ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಕಾಂಗ್ರೇಸ್ 6 ಸ್ಥಾನಗಳನ್ನು ಗೆದ್ದು ಆಡಳಿತವನ್ನು ತನ್ನ ತೆಕ್ಕೆಗೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಭಾರೀ ಪೈಪೋಟಿ ಇದ್ದ 11 ವಾರ್ಡ್ʼಗಳ ಪೈಕಿ ಕಾಂಗ್ರೆಸ್-06, ಜೆಡಿಎಸ್-02, ಪಕ್ಷೇತರರು-03 ಸ್ಥಾನಗಳನ್ನು ಗೆದ್ದಿದ್ದಾರೆ. ಇನ್ನೂ 7 ವಾರ್ಡ್ʼಗಳಲ್ಲಿ ತನ್ನ ಆಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದ ಬಿಜೆಪಿಯದ್ದು ಈ ಚುನಾವಣೆಯಲ್ಲಿ ಶೂನ್ಯ ಸಾಧನೆ. ಜತೆಗೆ, ಸಿಪಿಐ(ಎಂ) ಕೂಡ ಯಾವುದೇ ವಾರ್ಡ್‌ನಲ್ಲಿ ಜಯ ಸಾಧಿಸಿಲ್ಲ.
ಪಟ್ಟಣದ ಒಂದನೇ ವಾರ್ಡಿನ ಕಾಂಗ್ರೇಸ್ ಆಭ್ಯರ್ಥಿ ರಾಜೇಶ್ ತಮ್ಮ ಪ್ರತಿಸ್ವರ್ದಿ ಪಕ್ಷೇತರ ಆಭ್ಯರ್ಥಿ ಬಾಲಾಜಿ ವಿರುದ್ದ ಕೇವಲ ಒಂದು ಮತದ ಅಂತರದಿಂದ ಗೆದ್ದರೆ, 9ನೇ ವಾರ್ಡಿನ ಪಕ್ಷೇತರ ಆಭ್ಯರ್ಥಿ ವೀಣಾ 03 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
11 ವಾರ್ಡ್ʼಗಳ ಪೈಕಿ ಮೂರು ವಾರ್ಡ್ʼಗಳಲ್ಲಿ ಮಾಜಿ ಪ.ಪಂ ಸದಸ್ಯರು ಸ್ವಧಿಸಿದ್ದರು. ಆದರೆ, ಇವರೆಲ್ಲರನ್ನೂ ಮತದಾರರು ಸೋಲಿಸಿದ್ದಾರೆ. ಈ ಬಾರಿ ಹೊಸ ಆಭ್ಯರ್ಥಿಗಳಿಗೆ ಜನ ಮಣೆ ಹಾಕಿದ್ದಾರೆ.
ಹೆಚ್ಚು ಮತಗಳಿಂದ ಗೆದ್ದವರು
5ನೇ ವಾರ್ಡ್ ಕಾಂಗ್ರೆಸ್ ಆಭ್ಯರ್ಥಿ ಜಿ.ಗಂಗಾರಾಜು 219 ಮತಗಳಿಂದ ಬಿಜೆಪಿ ಆಭ್ಯರ್ಥಿ ಮಲ್ಲೇಶ್ ವಿರುದ್ದ ಗೆಲುವು ಸಾಧಿಸಿದ್ದಾರೆ. 2ನೇ ವಾರ್ಡಿನ ಪಕ್ಷೇತರ ಆಭ್ಯರ್ಥಿ ಅನಿಲ್ ಕುಮಾರ್ 185 ಮತಗಳಿಂದ ಕಾಂಗ್ರೆಸ್ʼನ ಲಕ್ಷೀಕಾಂತಮ್ಮ ಅವರನ್ನು ಸೋಲಿಸಿದ್ದಾರೆ. 3ನೇ ವಾರ್ಡ್ ಕಾಂಗ್ರೆಸ್ ಆಭ್ಯರ್ಥಿ ವಿಕಾಸ್ 216 ಮತಗಳ ಅಂತರದಿಂದ ಪಕ್ಷೇತರ ಆಭ್ಯರ್ಥಿ ಆಶಾ ಜಯಪ್ಪ ವಿರುದ್ದ ಗೆಲುವು ಸಾಧಿಸಿದ್ದಾರೆ. 4ನೇ ವಾರ್ಡ್ ಜೆಡಿಎಸ್ ಆಭ್ಯರ್ಥಿ ಅನುಷಾ ಅವರು ಕಾಂಗ್ರೆಸ್ ಆಭ್ಯರ್ಥಿ ವಿರುದ್ದ 130 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 10ನೇ ವಾರ್ಡ್ ಕಾಂಗ್ರೆಸ್ ಪಕ್ಷದ ನಗೀನ ತಾಜ್ ಅವರು 215 ಮತಗಳಿಂದ ಜೆಡಿಎಸ್ ಆಭ್ಯರ್ಥಿ ವಿರುದ್ಧ ಗೆಲುವಿನ ನಗೆ ಬೀರಿದ್ದಾರೆ. ಇನ್ನು 7ನೇ ವಾರ್ಡಿನ ಬಷೀರಾ ರಿಜ್ವಾನ್ ಅವರು 37 ಮತಗಳಿಂದ ಗೆದ್ದಿದ್ದಾರೆ.
ವಾರ್ಡುವಾರು ಆಭ್ಯರ್ಥಿಗಳು ಪಡೆದಿರುವ ಮತ
1ನೇ ವಾರ್ಡ್
1) ಆದಿನಾರಾಯಣಪ್ಪ /ಜೆಡಿಎಸ್/ 72
2) ರಾಜೇಶ್ / ಕಾಂಗ್ರೆಸ್ / 135
3) ರಾಮಕೃಷ್ಣ / ಬಿಜೆಪಿ / 96
4) ಬಾಲಾಜಿ ಆರ್ / ಪಕ್ಷೇತರ / 134
2ನೇ ವಾರ್ಡ್
1) ಮಮತ / ಬಿಜೆಪಿ / 102
2) ಲಕ್ಷ್ಮೀಕಾಂತಮ್ಮ / ಕಾಂಗ್ರೆಸ್ / 176
3) ಶ್ರೀನಿವಾಸ್ / ಜೆಡಿಎಸ್ / 144
4) ಅನಿಲ್ ಕುಮಾರ್ / ಪಕ್ಷೇತರ / 361
3ನೇ ವಾರ್ಡ್
1) ಪ್ರಶಾಂತ್ / ಜೆಡಿಎಸ್ / 116
2) ಫಯಾಜ್ ಬೇಗ್ / ಸಿಪಿಐ(ಎಂ) / 10
3) ಮೋಹನ್ / ಬಿಜೆಪಿ / 28
4) ವಿಕಾಸ್ / ಕಾಂಗ್ರೆಸ್ / 373
5) ಆಶಾ ಜಯಪ್ಪ / ಪಕ್ಷೇತರ / 157
6) ಮಂಜು / ಪಕ್ಷೇತರ / 73
4ನೇ ವಾರ್ಡ್
1) ಅನುಶಾ / ಜೆಡಿಎಸ್ / 312
2) ಗಂಗಾದೇವಮ್ಮ / ಕಾಂಗ್ರೆಸ್ / 182
3) ರಾಮಲಕ್ಷ್ಮಿ / ಬಿಜೆಪಿ / 37
4) ಪುಷ್ಪ / ಪಕ್ಷೇತರ / 29
5) ಲಕ್ಷ್ಮಿ / ಪಕ್ಷೇತರ / 05
6) ನೋಟಾ / 08
5ನೇ ವಾರ್ಡ್
1) ಗಂಗಾರಾಜು / ಕಾಂಗ್ರೆಸ್ / 289
2) ನರಸಿಂಹ ಮೂರ್ತಿ / ಜೆಡಿಎಸ್ / 11
3) ಮಲ್ಲೇಶ್ / ಬಿಜೆಪಿ / 70
4) ಗಂಗಾಧರಪ್ಪ / ಎಎಪಿ / 08
5) ಸಾಗರ್ / ಪಕ್ಷೇತರ / 01
6ನೇ ವಾರ್ಡ್
1) ಬಷೀರ್ ಅಹ್ಮದ್ / ಜೆಡಿಎಸ್ / 182
2) ರಿಯಾಜ್ / ಕಾಂಗ್ರೆಸ್ / 161
3) ಶ್ರೀನಾಥ್ / ಬಿಜೆಪಿ / 22
3) ಷಬ್ಬೀರ್ ಪಾಷ /ಪಕ್ಷೇತರ / 02
7ನೇ ವಾರ್ಡ್
1) ನಿಶಾತ್ ಖಾನಂ / ಜೆಡಿಎಸ್ / 338
2) ಬಷೀರಾ ರಿಜ್ವಾನ್ / ಕಾಂಗ್ರೆಸ್ / 375
3)ರಿಜಿಯಾ ಸುಲ್ತಾನ / ಸಿಪಿಐ(ಎಂ) / 06
4)ಶಬರೀನ್ ತಾಜ್ / ಬಿಜೆಪಿ / 21
5)ಫರಿದಾ ಬೀ / ಎಎಪಿ / 11
6)ಫೌಜಿಯಾ ತಸ್ನಿಮ್ / ಪಕ್ಷೇತರ / 14
8ನೇ ವಾರ್ಡ್
1) ನಯಾಜ್ ಪಾಷ / ಕಾಂಗ್ರೆಸ್ / 197
2) ಮಹ್ಮದ್ ನಾಸೀರ್ / ಜೆಡಿಎಸ್ / 05
3) ಫಯಾಜ್ ಅಹ್ಮದ್ / ಎಎಪಿ / 16
4) ಅಬ್ದುಲ್ ರಹೀಮ್ / ಪಕ್ಷೇತರ / 07
5) ಇಸ್ಮಾಯಿಲ್ ಅಜಾದ್ / ಪಕ್ಷೇತರ / 379
6) ಬುಲೆಟ್ ಶ್ರೀನಿವಾಸ / ಪಕ್ಷೇತರ / 216
7) ನೋಟಾ / 05
9ನೇ ವಾರ್ಡ್
1) ತ್ರಿವೇಣಿ / ಕಾಂಗ್ರೆಸ್ / 198
2) ರಾಧಮ್ಮ / ಜೆಡಿಎಸ್ / 26
3) ಈಶ್ವರಮ್ಮ / ಪಕ್ಷೇತರ / 09
4) ವೀಣಾ / ಪಕ್ಷೇತರ / 201
5) ನೋಟಾ / 01
10ನೇ ವಾರ್ಡ್
1) ನಗೀನ್ ತಾಜ್ / ಕಾಂಗ್ರೆಸ್ / 452
2) ನೂರಾನಿ ಸಬಾ / ಜೆಡಿಎಸ್ / 237
3) ನಜ್ಮ / ಪಕ್ಷೇತರ / 16
4) ನೋಟಾ / 01
11ನೇ ವಾರ್ಡ್
1) ಭಾಗ್ಯ / ಜೆಡಿಎಸ್ / 58
2) ಮಂಜುಳ / ಕಾಂಗ್ರೆಸ್ / 194
3) ನಳಿನ / ಪಕ್ಷೇತರ / 107
4) ನೋಟಾ / 01
ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾಡಿರುವ ಜನಪರ ಕೆಲಸಗಳಿಂದ ಮತದಾರರು ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶಾಸಕರ ನೇತೃತ್ವದಲ್ಲಿ ಪ.ಪಂಚಾಯತಿ ಚುನಾಯಿತ ಜನ ಪ್ರತಿನಿಧಿಗಳ ಪ್ರಾಮಾಣಿಕವಾಗಿ ಶ್ರಮಿಸುತ್ತಾರೆ.
-ಕೆ.ಟಿ.ಹರಿ, ಕಾಂಗ್ರೆಸ್ ಯುವ ಮುಖಂಡ ಗುಡಿಬಂಡೆ