ಶ್ರೀವರಾಹಗಿರಿ ಬೆಟ್ಟ ವರ್ಲಕೊಂಡ ಚಾರಿಟಬಲ್ ಟ್ರಸ್ಟ್(ರಿ) ರಚನೆ
ಗುಡಿಬಂಡೆ: ಬೆಟ್ಟದ ಸುತ್ತ ಕ್ವಾರಿ ಕ್ರಷರ್ಗ’ಳ ಉಪಟಳ, ವರ್ಲಕೊಂಡ ಏಕಶಿಲಾ ಬೆಟ್ಟಚನ್ನು ಕಬಳಿಸಲು ಕೆಲ ರಾಜಕೀಯ ನಾಯಕರು ಯತ್ನಿಸಿ ಸುಮ್ಮನಾಗಿದ್ದರು, ಬೆಟ್ಟವನ್ನು ರಕ್ಷಿಸಿ, ಐತಿಹಾಸಿಕ ಪ್ರವಾಸಿ ತಾಣವಾಗಿ ಮಾಡಿ ರಕ್ಷಸಬೇಕು ಎಂಬ ಉದ್ದೇಶದಿಂದ ಟ್ರಸ್ಟ್ ರಚನೆ ಮಾಡಲಾಗಿದೆ ಎಂದು ಶ್ರೀವರಾಹಗಿರಿಬೆಟ್ಟ ವರ್ಲಕೊಂಡ ಚಾರಿಟಬಲ್ ಟ್ರಸ್ಟ್ (ರಿ)ನ ಗೌರವಾಧ್ಯಕ್ಷೆ ಗಾಯತ್ರಿ ನಂಜುಂಡಪ್ಪ ಹೇಳಿದರು.
ಪಟ್ಟಣದ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ 21 ಸದಸ್ಯರನ್ನು ಒಳಗೊಂಡ ನೂತನ ಶ್ರೀವರಾಹಗಿರಿ ಬೆಟ್ಟ ವರ್ಲಕೊಂಡ ಚಾರಿಟಬಲ್ ಟ್ರಸ್ಟ್ ನೋಂದಣಿ ಮಾಡಿದ ನಂತರ ಅವರು ಮಾತನಾಡಿದರು.
ಶ್ರೀವರಾಹಗಿರಿ ವರ್ಲಕೊಂಡ ಚಾರಿಟಬಲ್ ಟ್ರಸ್ಟ್ ರಚನೆಯ ಮುಖ್ಯ ಉದ್ದೇಶ ವರಾಹಗಿರಿ ಬೆಟ್ಟವನ್ನು ಮೂಲಭೂತವಾಗಿ ಅಭಿವೃದ್ಧಿಪಡಿಸುವುದು. ಇದರಿಂದ ಈ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡಬೇಕು, ವರಾಹಗಿರಿ ಬೆಟ್ಟದ ಮೇಟ್ಟಿಲು ನಿರ್ಮಾಣ ಮಾಡಲು ಈಗಾಗಲೇ ಜಗದೀಶ್ ಎಂಬುವವರ ಜತೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ವರಾಹಗಿರಿ ಬೆಟ್ಟಕ್ಕೆ ಸುಮಾರು 1500ಕ್ಕೂ ಅಧಿಕ ಮೆಟ್ಟಿಲು ನಿರ್ಮಾಣ ಮಾಡಲು ಉದ್ದೇಶಿಲಾಗಿದೆ. ಒಂದು ಮೆಟ್ಟಿಲು ನಿರ್ಮಾಣ ಮಾಡಲು ಸುಮಾರು 6 ಸಾವಿರ ರೂಪಾಯಿ ಖರ್ಚು ಬರುತ್ತದೆ. ಇದರಿಂದ ಬೆಟ್ಟದ ಅಭಿವೃದ್ದಿಗೆ ದಾನಿಗಳ ಸಹಕಾರ ಬೇಕಾಗಿದ್ದು, ದಾನಿಗಳು ಸ್ವಯಂ ಇಚ್ಛೆಯಿಂದ ಮುಂದೆ ಬರಬೇಕೆಂದು ಅವರು ಮನವಿ ಮಾಡಿದರು.
ವರಾಹಗಿರಿ ಬೆಟ್ಟದ ಮೇಲೆ ಹೊಗಲು ಸುಸಜ್ಜಿತ ಮೆಟ್ಟಿಲು ನಿರ್ಮಾಣ, ವಿನೂತನ ವಿದ್ಯುತ್ ದೀಪಗಳು, ವಿಶ್ರಾಂತಿ ಪಡೆಯಲು ಆಸನ ವ್ಯವಸ್ಥೆ, ತಂಗುದಾಣ, ಕುಡಿಯುವ ನೀರಿನ ವ್ಯವಸ್ಥೆ ಇತ್ಯಾದಿ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.
ಗುಡಿಬಂಡೆ ತಾಲೂಕು ಪ್ರವಾಸೋದ್ಯಮ ಕ್ಷೇತ್ರದಲ್ಲಿ ರಾಜ್ಯದ ಪ್ರಮುಖ ತಾಣವಾಗಿದೆ. ಈಗಾಗಲೇ ರಾಜ್ಯದ ನಾನಾ ಕಡೆಗಳಿಂದ ಈ ಭಾಗಕ್ಕೆ ಪ್ರವಾಸಿಗರ ದಂಡೇ ಬರುತ್ತಿದೆ. ಈ ನಿಟ್ಟಿನಲ್ಲಿ ವರ್ಲಕೊಂಡೆ ಬೆಟ್ಟವನ್ನು ಅಭಿವೃದ್ಧಿಪಡಿಸಿ ಈ ಭಾಗದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಬೇಕು. ಅದಕ್ಕಾಗಿ ಎಲ್ಲ ಪ್ರಯತ್ನ ಮಾಡುವುದಾಗಿ ಗಾಯತ್ರಿ ನಂಜುಂಡಪ್ಪ ಹೇಳಿದರು.
ಚಾರಿಟಬಲ್ ಟ್ರಸ್ಟ್ ಉಪಾಧ್ಯಕ್ಷ ಎಲ್.ಎ ಬಾಬು ಮಾತನಾಡಿ, ಐತಿಹಾಸಿಕ ಮಹತ್ವ ಹೊಂದಿರುವ ತಾಲೂಕಿನ ಪಂಚಗಿರಿಗಳಲ್ಲಿ ಒಂದಾದ ವರಾಹಗಿರಿ ಬೆಟ್ಟವು ಹಲವಾರು ವರ್ಷಗಳಿಂದ ಅಭಿವೃದ್ಧಿ ಇಲ್ಲದೇ ಸೂರಗಿದೆ. ತಾಲೂಕಿನ ಗಣ್ಯರು ಸೇರಿಕೊಂಡು ವರ್ಲಕೊಂಡ ಬೆಟ್ಟವನ್ನು ಅಭಿವೃದ್ಧಿ ಮಾಡಲು ಪಣತೋಟ್ಟಿದ್ದು, ಅವರ ಸಲಹೆ-ಸೂಚನೆಗಳಂತೆ ಅಭಿವೃದ್ಧಿ ಟ್ರಸ್ಟ್ ರಚಿಸಲಾಗಿದೆ. ಈ ಟ್ರಸ್ಟ್ ಮೂಲಕ ವರಾಹಗಿರಿ ಬೆಟ್ಟಕ್ಕೆ ಮೊದಲು ಮೆಟ್ಟಿಲುಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಯೋಜನೆಯ ನೀಲನಕ್ಷೇ ತಯಾರಿಸಿ, ಬೆಟ್ಟದ ಮೇಲಿರುವ ಶ್ರೀರಾಮನ ದೇವಸ್ಥಾನವನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದರು.
ಈ ವೇಳೆ ಶ್ರೀವರಾಹಗಿರಿ ಬೆಟ್ಟ ವರ್ಲಕೊಂಡ ಚಾರಿಟಬಲ್ ಟ್ರಸ್ಟ್ ( ರಿ)ನ ಅಧಕ್ಷರಾದ ವಕೀಲ ಎ.ಶಿವರಾಂ, ಕಾರ್ಯದರ್ಶಿ ಶ್ರೀನಿವಾಸಚಾರಿ, ಸದಸ್ಯರಾದ ಚನ್ನರಾಯಪ್ಪ, ಶ್ರಿರಾಮಪ್ಪ, ನರಸಿಂಹಮೂರ್ತಿ, ಪಿ.ವಿ ನಾರಾಯಣಪ್ಪ, ದೇವರಾಜು, ರಾಮಕೃಷ್ಣಪ್ಪ, ಲಕ್ಷ್ಮಯ್ಯ, ದೊಡ್ಡಮುದ್ದಪ್ಪ, ಗುರುಮೂರ್ತಿ, ನರಸಿಂಹಮೂರ್ತಿ, ಅಶ್ವತ್ಥಪ್ಪ ಸೇರಿ ಹಲವಾರು ಪ್ರಮುಖರು ಇದ್ದರು.
ಇತಿಹಾಸ ಪ್ರಸಿದ್ದ ವರಾಹ ಗಿರಿ ಅಭಿವೃದ್ಧಿಗೆ ದಾನಿಗಳು ಮುಂದೆ ಬರಬೇಕಾಗಿದೆ..