• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home EDITORS'S PICKS

ಭಾರತದೆಲ್ಲಡೆ ಹಬ್ಬಿದ ಗುಡಿಬಂಡೆ ಕೀರ್ತಿ!

cknewsnow desk by cknewsnow desk
August 24, 2021
in EDITORS'S PICKS, STATE
Reading Time: 3 mins read
5
ಭಾರತದೆಲ್ಲಡೆ ಹಬ್ಬಿದ ಗುಡಿಬಂಡೆ ಕೀರ್ತಿ!

ಪೋಷಕರು ಮತ್ತು ಕುಟುಂಬದ ಸದಸ್ಯರ ಜತೆ ಜಿಎನ್‌ ಕೀರ್ತಿ.

5.9k
VIEWS
FacebookTwitterWhatsuplinkedinEmail

ಏರ್‌ಟ್ಯಾಕ್ಸಿ ವೈಮಾನಿಕ ಯೋಜನೆಯಲ್ಲಿ ಗುಡಿಬಂಡೆ ಎಂಜಿನಿಯರಿಂಗ್‌ ವಿದ್ಯಾರ್ಥಿನಿ: ಆವಿಷ್ಕಾರದಲ್ಲಿ ಅದ್ಭುತ ಸಾಧನೆ ಮಾಡಿದ ಹಳ್ಳಿಮೇಷ್ಟ್ರ ಮಗಳು


by GS Bharath Gudibande

ಗುಡಿಬಂಡೆ: ರಾಜ್ಯದ ಕಟ್ಟಕಡೆಯ ತಾಲೂಕು, ಸದಾ ಬರಪೀಡತ ನೆಲವೆಂಬ ನಾನಾ ಹೆಸರುಗಳಿಗೆ ಪಾತ್ರವಾಗಿರುವ ಗುಡಿಬಂಡೆ ತಾಲೂಕು ಈಗ ಪ್ರತಿಭೆಯ ಕಾರಣಕ್ಕೆ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಗಾತ್ರ ಚಿಕ್ಕದು, ʼಕೀರ್ತಿʼ ದೊಡ್ಡದು ಎನ್ನುವಂತೆ ತಾಲೂಕು ಮಿರಮಿರ ಮಿಂಚುತ್ತಿದೆ.

ಬೆಂಗಳೂರಿನ ಎಂಜಿನಿಯರಿಂಗ್‌ ಕಾಲೇಜ್‌ ಒಂದರಲ್ಲಿ ವ್ಯಾಸಂಗ ಮಾಡುತ್ತಿರುವ ಪಟ್ಟಣದ ವಿದ್ಯಾರ್ಥಿನಿಯೊಬ್ಬರು, ವಿಭಿನ್ನವಾದ ವೈಮಾನಿಕ ಪ್ರಾಜೆಕ್ಟ್‌ ಒಂದನ್ನು ಕಾರ್ಯಗತ ಮಾಡಿ ರಾಷ್ಟ್ರಮಟ್ಟದಲ್ಲಿ ಗುಡಿಬಂಡೆಗೆ ʼಕೀರ್ತಿʼ ತಂದಿದ್ದಾರೆ.

ಎಂವಿ‌ಜೆ ಎಂಜಿನಿಯರಿಂಗ್ ಕಾಲೇಜ್‌ನಲ್ಲಿ ಅಂತಿಮ ಏರೋನಾಟಿಕ್ಸ್ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಜಿ.ಎನ್.ಕೀರ್ತಿ ಎಂಬ ವಿದ್ಯಾರ್ಥಿನಿ ಈ ಸಂಭ್ರಮಕ್ಕೆ ಕಾರಣವಾಗಿದ್ದು, ತಮ್ಮ ಸಹಪಾಠಿಗಳ ಜತೆ ಸೇರಿ ಅವರು ಮಾಡಿದ ಟೆಕ್ನಿಕಲ್‌ ಅಸೈನ್‌ಮೆಂಟ್‌ ಒಂದು ಇಡೀ ದೇಶದ ಗಮನ ಸೆಳೆದಿದೆ.

ಅವರು ತಮ್ಮ ತಂಡದ ಜತೆಗೂಡಿ ಮಾಡಿರುವ ಪ್ರಾಜೆಕ್ಟ್‌ಗೆ ರಾಷ್ಟ್ರೀಯ ಏರೋಸ್ಪೇಸ್ ಪರಿಕಲ್ಪನಾ ವಿನ್ಯಾಸ ಸ್ಪರ್ಧೆ (National Aerospace Conceptual Design Competition) ಯಲ್ಲಿ ಮೊದಲ ಬಹುಮಾನ ಸಿಕ್ಕಿದೆ. ಅಲ್ಲದೆ, ಹೊಸ ತಲೆಮಾರಿಗೆ ಮಹೋನ್ನತ ಕೊಡುಗೆ ನೀಡಬಲ್ಲ ಅವರ ಆವಿಷ್ಕಾರಕ್ಕೆ ಎಲ್ಲಡೆಯಿಂದ ಮೆಚ್ಚುಗೆಯ ಮಹಾಹೊಳೆಯೇ ಹರಿದು ಬರುತ್ತಿದೆ.

ಪಟ್ಟಣದ 2ನೇ ವಾರ್ಡ್ʼನ ನಿವಾಸಿಯಾದ ಶಿಕ್ಷಕ ನಾಗರಾಜ್ ಮತ್ತು ಪಟ್ಟಣ ಪಂಚಾಯಿತಿಯ ಮಾಜಿ ಸದಸ್ಯೆ ಕಾಂತಮ್ಮ ದಂಪತಿ ಪುತ್ರಿಯಾದ ಕೀರ್ತಿ ಅವರ ಸಾಧನೆ ಈಗ ತಾಲೂಕು, ಜಿಲ್ಲೆ, ರಾಜ್ಯದ ಗಡಿ ದಾಟಿ ಇಡೀ ದೇಶವನ್ನು ವ್ಯಾಪಿಸಿದೆ.

ಎಡದಿಂದ ಬಲಕ್ಕೆ: ಕೌಶಿಕ್‌, ಅಯೂಬ್‌ ಹಕೀಂ, ಮಿಥುನ್‌ ಪ್ರಾನ್ಸಿಸ್‌, ಅಮೃತಾಂಶು ಮತ್ತು ಕೀರ್ತಿ


ಕೀರ್ತಿ ಮಾಡಿದ ಸಾಧನೆ ಏನು?

ನಮ್ಮ ದೇಶವನ್ನು ಕಾಡುತ್ತಿರುವ ವಾಹನ ದಟ್ಟಣಿ ಹಾಗೂ ವಾಯುಮಾಲಿನ್ಯವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಎಂವಿಜೆ ಎಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳ ತಂಡ ವಿಭಿನ್ನವಾಗಿ ‌ʼಏರ್‌ಟ್ಯಾಕ್ಸಿ-ಐಸ್‌ ವೀ ಟೋಲಾʼ (ಇಂಟರ್‌ಸಿಟಿ ಎಲೆಕ್ಟ್ರಿಕ್ ವರ್ಟಿಕಲ್ ಟೇಕ್ ಆಫ್ ಅಂಡ್ ಲ್ಯಾಂಡಿಂಗ್- Inter-city Electric Vertical Take-off and Landing Aircraft (ICeVTOLA) ಎಂಬ ಪ್ರಾಜೆಕ್ಟ್‌ ಮಾಡಿ ಯಶಸ್ವಿಯಾಗಿ ಹಾರಾಟ ನಡೆಸಿದ್ದಾರೆ. ಅತಿ ಕಿರಿದಾದ ಲಘು ವಿಮಾನಾಕಾರದ ಈ ಏರ್‌ಟ್ಯಾಕ್ಸಿಯಲ್ಲಿ ನಾಲ್ವರು ಪ್ರಯಾಣಿಕರು ಹಾಗೂ ಓರ್ವ ಪೈಲಟ್ ಹಾರಾಟ ನಡೆಸಬಹುದು. 10,000 ಅಡಿ ಎತ್ತರದಲ್ಲಿ 500 ಕಿ.ಮೀ. ದೂರ ಕ್ರಮಿಸಬಹುದು ಎಂದು ವಿದ್ಯಾರ್ಥಿನಿ ಕೀರ್ತಿ ಅವರು ತಮ್ಮ ಪ್ರಾಜೆಕ್ಟ್ ಬಗ್ಗೆ ಸಿಕೆನ್ಯೂಸ್ ನೌ ಜತೆ ಮಾತನಾಡುತ್ತಾ ಮಾಹಿತಿ ಹಂಚಿಕೊಂಡರು.

ಇದು ಲಘು ವಿಮಾನದಂತೆ ಸಿದ್ಧವಾಗಿದ್ದು, ಸಂಪೂರ್ಣ ವಿದ್ಯುತ್‌ ಚಾಲಿತವಾಗಿರುತ್ತದೆ. ಇಂಧನ ಬಳಕೆ ಇಲ್ಲದಿರುವುದರಿಂದ ಇದು ಹೊಗೆಯನ್ನೂ ಉಗುಳುವುದಿಲ್ಲ. ಪರಿಣಾಮ, ಪರಿಸರಕ್ಕೆ ಬಹಳ ಪೂರಕ ಎನ್ನುವುದು ಕೀರ್ತಿ ಹೇಳುವ ಮಾತು.

  • ಕೀರ್ತಿ ಅವರ ತಂಡ ವಿನ್ಯಾಸ ಮಾಡಿರುವ ಏರ್‌ ಟ್ಯಾಕ್ಸಿಯ ಮಾದರಿ ಚಿತ್ರ

ಈ ಪ್ರಾಜೆಕ್ಟ್ ಮಾಡಲು ಪ್ರತಿದಿನ 6ರಿಂದ 8 ಗಂಟೆ ಕಾಲ ಕೆಲಸ ಮಾಡುತ್ತಿದ್ದೆವು. ಅವಿಶ್ರಾಂತವಾಗಿ ಎಲ್ಲರೂ ಕೆಲಸ ಮಾಡುತ್ತಿದ್ದೆವು. ಇದೇ ನಮ್ಮ ತಂಡ ಶಕ್ತಿ ಮತ್ತು ಸ್ಪೂರ್ತಿ. ಜತೆಗೆ; ಗೂಗಲ್ ಮೀಟ್ ಮತ್ತು ಜೂಮ್ ಮೀಟಿಂಗ್ʼಗಳಲ್ಲಿ ಸದಾ ಚರ್ಚೆ, ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದೆವು. ಬಹಳಷ್ಟು ತಯಾರಿ ಮಾಡಿಕೊಂಡಿದ್ದೆವು. ಇದಕ್ಕೆ ನಮ್ಮ ಕಾಲೇಜಿನ ಉಪನ್ಯಾಸಕರು ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ. ನಮ್ಮ ತಂದೆ-ತಾಯಿ ಅವರ ಸಹಕಾರವೂ ಇದೆ. ಎಲ್ಲರಿಗೂ ನನ್ನ ಕೃತಜ್ಞತೆಗಳು.

ಜಿ‌.ಎನ್.ಕೀರ್ತಿ, ಏರೋನಾಟಿಕ್ ವಿದ್ಯಾರ್ಥಿ

26 ತಂಡಗಳ ಪೈಕಿ ಪ್ರಥಮ ಸ್ಥಾನ

ಬೆಂಗಳೂರಿನ ಎಂವಿಜೆ ಕಾಲೇಜಿನ ವಿದ್ಯಾರ್ಥಿಗಳ ತಂಡ ಪ್ರತೀ ವರ್ಷ ಮುಂಬಯಿಯಲ್ಲಿ ನಡೆಯುವ ʼದಿ ಬೆಸ್ಟ್ ಡಿಸೈನ್ ಸ್ಫರ್ಧೆʼಯಲ್ಲಿ ಭಾಗವಹಿಸುತ್ತದೆ. ಈ ವರ್ಷವೂ ʼಏರ್‌ಟ್ಯಾಕ್ಸಿʼ ಎಂಬ ಪ್ರಾಜೆಕ್ಟ್ʼನಲ್ಲಿ ಕಾಲೇಜ್‌ ವಿದ್ಯಾರ್ಥಿಗಳು ಸೇರಿ ಕರ್ನಾಟಕ 3 ಕಾಲೇಜುಗಳ ತಂಡಗಳು ಸೇರಿ ದೇಶದ 26 ತಂಡಗಳು ಭಾಗವಹಿಸಿದ್ದವು. ಅದರಲ್ಲಿ ಭಾಗವಹಿಸಿದ್ದ ಎಂವಿಜೆ ಕಾಲೇಜ್ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಏರ್‌ಟ್ಯಾಕ್ಸಿ ಪ್ರಾಜೆಕ್ಟ್ ಮಾಡಲು ಎಂವಿಜೆ ಕಾಲೇಜ್‌ನಲ್ಲಿ ವಿದ್ಯಾರ್ಥಿಗಳಿಗೆ ಅರ್ಹತಾ ಪರೀಕ್ಷೆ ಮಾಡಿ ಆಯ್ಕೆ ಮಾಡಲಾಗುತ್ತದೆ. ಆ ಆಯ್ಕೆಯಲ್ಲಿ ಕಿರಿಯ ಅಭ್ಯರ್ಥಿಯಾಗಿ ಆಯ್ಕೆಯಾದ ಗುಡಿಬಂಡೆಯ ಕೀರ್ತಿ ಅವರು ನಾಲ್ವರು ಹಿರಿಯ ವಿದ್ಯಾರ್ಥಿಗಳ ತಂಡದಲ್ಲಿ ಪ್ರಾಜೆಕ್ಟ್ ಮಾಡಿ ಈಗ ಸೀನಿಯರ್ ಆಗಿ ಉನ್ನತಿಗೊಂಡು ಯೋಜನೆಯನ್ನು ಸಕ್ಸಸ್‌ ಮಾಡಿದ್ದಾರೆ.

ಕೋವಿಡ್ ಕಾಲದಲ್ಲೂ ಅವಿಶ್ರಾಂತ ಕೆಲಸ

ಕೋವಿಡ್-19 ಲಾಕ್‌ಡೌನ್‌ ಸಂದರ್ಭದಲ್ಲಿಯೂ ಇಡೀ ಶಿಕ್ಷಣ ಕ್ಷೇತ್ರ ಅತಂತ್ರವಾಗಿತ್ತು. ಇಂಥ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ತಂಡ ಗೂಗಲ್ ಮೀಟ್ ಮತ್ತು ಜೂಮ್ ಮೀಟಿಂಗ್ʼಗಳ ಮೂಲಕ ಪ್ರಾಜೆಕ್ಟ್ ಬಗ್ಗೆ ಸದಾ ಚರ್ಚೆ, ವಿಚಾರ ವಿನಿಮಯ ಮಾಡಿಕೊಂಡು ಒಂದು ವರದಿ ತಯಾರಿ ಮಾಡಿಕೊಂಡು ಮುಂಬಯಿಯಲ್ಲಿ ನಡೆಯಲಿದ್ದ ಸ್ಪರ್ಧೆಗೆ ಅರ್ಜಿ ಸಲ್ಲಿಸಿದ್ದರು. ಆ ಸ್ಪರ್ಧೆಯಲ್ಲಿ ಕೀರ್ತಿ ಅವರಿದ್ದ ತಂಡದ ʼಏರ್‌ಟ್ಯಾಕ್ಸಿʼ ಪ್ರಾಜೆಕ್ಟ್ ಅತ್ಯುತ್ತಮ ಪ್ರಾಜೆಕ್ಟ್‌ ಆಗಿ ಹೊರಹೊಮ್ಮಿ ಬಹುಮಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ತಂಡದಲ್ಲಿ ಕೀರ್ತಿ ಜತೆಗೆ ಕೌಶಿಕ್‌, ಅಯೂಬ್‌ ಹಕೀಂ, ಮಿಥುನ್‌ ಪ್ರಾನ್ಸಿಸ್‌, ಅಮೃತಾಂಶು ಇದ್ದರು.

2030ರಲ್ಲಿ ಮಾರುಕಟ್ಟೆಗೆ, ಉಪಯೋಗ ಹೇಗೆ?

ʼಏರ್‌ಟ್ಯಾಕ್ಸಿʼ ಪ್ರಾಜೆಕ್ಟ್‌ ಪ್ರಥಮ ಸ್ಥಾನ ಪಡೆದ ನಂತರ ಈ ಲಘು ವಿಮಾನವನ್ನು 2030ರ ವೇಳೆಗೆ ಮಾರುಕಟ್ಟೆಗೆ ಪ್ರಾಯೋಗಿಕವಾಗಿ ತರಲು ಇವರ ತಂಡ ಪ್ರಯತ್ನ ಮಾಡುತ್ತಿದೆ. ಮುಖ್ಯವಾಗಿ ಬೆಂಗಳೂರಿನಂಥ ವಿಪರೀತ ಟ್ರಾಫಿಕ್‌ ಇರುವ ನಗರಗಳಲ್ಲಿ ಇದರ ಬಳಕೆ ಬಹಳ ಉಪಯುಕ್ತ. ಶೂನ್ಯ ಮಾಲಿನ್ಯ ಹೊಂದಿರುವ ಏರ್‌ಟ್ಯಾಕ್ಸಿಯು ಪ್ರವಾಸೋದ್ಯಮ ಅಭಿವೃದ್ಧಿಗೂ ಪೂರಕ, ಆರೋಗ್ಯ ತುರ್ತು ಸಂದರ್ಭಗಳಲ್ಲಿ ಪರಿಣಾಮಕಾರಿ ಬಳಕೆ ಸಾಧ್ಯ. ಉದಾಹರಣೆಗೆ ಬೆಂಗಳೂರಿನಿಂದ 500 ಕಿ.ಮೀ. ದೂರದಲ್ಲಿರುವ ತಾಣಗಳಿಗೆ ವೇಗವಾಗಿ ತಲುಪಬೇಕಾದರೆ ಇದು ಬೆಸ್ಟ್.‌


ನಮ್ಮ ಮಗಳು ವೈದ್ಯ ಶಿಕ್ಷಣವನ್ನು ಓದಬೇಕು ಎಂಬ ಆಸೆ ಇತ್ತು. ಆದರೆ ಕೀರ್ತಿಗೆ ಏರೋನಾಟಿಕ್ಸ್ ಮೇಲೆ ಹೆಚ್ಚು ಆಸಕ್ತಿ ಇರುವ ಉದ್ದೇಶದಿಂದ ಆ ಕೋರ್ಸಿಗೆ ಸೇರಿಸಿ ಸಹಕಾರ ನೀಡಿದೆವು‌. ಕೀರ್ತಿ ಸಾಧನೆಗೆ ನಮಗೆ ಸಂತಸ ಉಂಟು ಮಾಡಿದೆ. ನಮಗೆ ಹೆಮ್ಮೆ ತಂದಿದ್ದಾಳೆ.

ಕಾಂತಮ್ಮ, ಕೀರ್ತಿ ಅವರ ತಾಯಿ

ಗುಡಿಬಂಡೆ ಪಟ್ಟಣದ ಕೀರ್ತಿ ಏರ್‌ಟ್ಯಾಕ್ಸಿ ಪ್ರಾಜೆಕ್ಟ್ʼನಲ್ಲಿ ದೇಶದ 26 ತಂಡಗಳ ಪೈಕಿ ಪ್ರಥಮ ಸ್ಥಾನ ಪಡೆದಿರುವುದು ಶ್ಲಾಘನೀಯ. ಅವರ ಯಶಸ್ಸಿನ ಹಿಂದೆ ದುಡಿದ ಎಂವಿಜೆ ಕಾಲೇಜಿನ ಉಪನ್ಯಾಸಕರಿಗೆ, ಪೋಷಕರಿಗೆ ನಮ್ಮ ಅಭಿನಂಧನೆಗಳು.

ವಿ.ಶ್ರೀರಾಮಪ್ಪ, ಪ್ರಧಾನ ಕಾರ್ಯದರ್ಶಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಗುಡಿಬಂಡೆ

Tags: air taxibag top spots in design competitionsBengaluruchikkaballapuracity trafficemergencyengineering studentsgudinadeindiakarnatakalight flightmvj college of engineering
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಶ್ರೀ ಗುರು ರಾಘವೇಂದ್ರರ ಜತೆ ಆಂಗ್ಲ ಅಧಿಕಾರಿಯ ಭಕ್ತಿಯ ನಂಟು

ಶ್ರೀ ಗುರು ರಾಘವೇಂದ್ರರ ಜತೆ ಆಂಗ್ಲ ಅಧಿಕಾರಿಯ ಭಕ್ತಿಯ ನಂಟು

Comments 5

  1. Parimala Reddy says:
    4 years ago

    Well done Keerthi putta. Hats off to you your team even your College

    Reply
  2. Pingback: ಗುಡಿಬಂಡೆಯ ಕೀರ್ತಿ ಜಗದ ತುಂಬೆಲ್ಲ ಹರಡಲಿ - cknewsnow
  3. Sujaya says:
    4 years ago

    Well done kirthi we are proud of you

    Reply
  4. Pingback: ರಾಷ್ಟ್ರೀಯ ಏರೋಸ್ಪೇಸ್ ವಿನ್ಯಾಸ ಸ್ಪರ್ಧೆಯಲ್ಲಿ ಪ್ರಥಮ: ಎಂವಿಜೆ ಕಾಲೇಜ್‌ ವಿದ್ಯಾರ್ಥಿಗಳ ಬಗ್ಗೆ ಉನ್ನತ ಶಿಕ್
  5. Pingback: ರಾಷ್ಟ್ರೀಯ ಏರೋಸ್ಪೇಸ್ ವಿನ್ಯಾಸ ಸ್ಪರ್ಧೆಯಲ್ಲಿ ಪ್ರಥಮ: ಎಂವಿಜೆ ಕಾಲೇಜ್‌ ವಿದ್ಯಾರ್ಥಿಗಳ ಬಗ್ಗೆ ಉನ್ನತ ಶಿಕ್

Leave a Reply Cancel reply

Your email address will not be published. Required fields are marked *

Recommended

ನವದೆಹಲಿಯ ಅಮೆರಿಕದ ರಾಯಭಾರ ಕಚೇರಿಗೆ ಚಾರ್ಜ್ ಡಿ ಅಫೈರ್ಸ್ ಆಗಿ ರಾಯಭಾರಿ ಡೇನಿಯಲ್ ಸ್ಮಿತ್ ನೇಮಕ; ಕೋವಿಡ್‌ ಸೋಂಕಿನ ಅವಧಿಯಲ್ಲಿ ಬೈಡನ್‌ ಆಡಳಿತದ ಮಹತ್ತ್ವದ ಹೆಜ್ಜೆ

ನವದೆಹಲಿಯ ಅಮೆರಿಕದ ರಾಯಭಾರ ಕಚೇರಿಗೆ ಚಾರ್ಜ್ ಡಿ ಅಫೈರ್ಸ್ ಆಗಿ ರಾಯಭಾರಿ ಡೇನಿಯಲ್ ಸ್ಮಿತ್ ನೇಮಕ; ಕೋವಿಡ್‌ ಸೋಂಕಿನ ಅವಧಿಯಲ್ಲಿ ಬೈಡನ್‌ ಆಡಳಿತದ ಮಹತ್ತ್ವದ ಹೆಜ್ಜೆ

4 years ago
ಕೆಲಸ ಮಾಡಲು ಆಗದಿದ್ದರೆ ಮತ್ಯಾಕೆ ಭರವಸೆ ಕೊಡ್ತೀರಿ?

ಕೆಲಸ ಮಾಡಲು ಆಗದಿದ್ದರೆ ಮತ್ಯಾಕೆ ಭರವಸೆ ಕೊಡ್ತೀರಿ?

1 year ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ