• About
  • Advertise
  • Careers
  • Contact
Saturday, November 7, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS CRIME

ಮಾಜಿ ಸಚಿವ ಪ್ರೊ ಲಕ್ಷ್ಮೀಸಾಗರ್‌ ಪುತ್ಥಳಿ ಮತ್ತೆ ಭಗ್ನ

cknewsnow desk by cknewsnow desk
October 8, 2021
in CRIME, STATE
Reading Time: 2 mins read
0
ಮಾಜಿ ಸಚಿವ ಪ್ರೊ ಲಕ್ಷ್ಮೀಸಾಗರ್‌ ಪುತ್ಥಳಿ ಮತ್ತೆ ಭಗ್ನ
1.2k
VIEWS
FacebookTwitterWhatsuplinkedinEmail

ಕುಡುಕರ ಅಡ್ಡೆಯಾದ ಸರಕಾರಿ ಶಾಲೆ; ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹ

By GS Bharath Gudibande

ಗುಡಿಬಂಡೆ: ರಾಜ್ಯದ ಕಾನೂನು ಸಚಿವರಾಗಿದ್ದ ದಿವಂಗತ ಪ್ರೊ.ಎ.ಲಕ್ಷ್ಮೀಸಾಗರ್ ಸಮಾಧಿಯ ಮೇಲಿನ ಪುತ್ಥಳಿಯನ್ನು ಕಿಡಿಗೇಡಿಗಳು ಮತ್ತೊಮ್ಮೆ ವಿರೂಪಗೊಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಕಿಡಿಗೇಡಿಗಳಿಂದ ವಿರೂಪಗೊಂಡಿದ್ದ ಅವರ ಪುತ್ಥಳಿಯನ್ನು ತೆಗೆದು ಹೊಸ ಪುತ್ಥಳಿ ಇಡಲಾಗಿತ್ತು. ಆದರೆ, ಈಗ ದುಷ್ಕರ್ಮಿಗಳು ಹೊಸ ಪುತ್ಥಳಿಯನ್ನೂ ಭಗ್ನಗೊಳಿಸಿದ್ದಾರೆ.

ತಾಲೂಕಿನ ವರ್ಲಕೊಂಡ ಗ್ರಾಮದ ಸರಕಾರಿ ಪ್ರೌಢಶಾಲೆ ಆವರಣದಲ್ಲಿರುವ ಲಕ್ಷ್ಮೀಸಾಗರ್‌ ಅವರ ಸಮಾಧಿ ಪದೇ ಪದೆ ದಾಳಿಗೆ ತುತ್ತಾಗುತ್ತಿದ್ದು, ಕತ್ತಲಲ್ಲಿ ಕುಡುಕರ ಅಡ್ಡೆಯಾಗುವ ಆ ಜಾಗದಲ್ಲಿರುವ ಮಾಜಿ ಸಚಿವರ ಪುತ್ಥಳಿಯನ್ನು ಬೇಕೆಂದೇ ವಿರೂಪಗೊಳಿಸುತ್ತಿದ್ದಾರೆ.

ತಮ್ಮ ಜನ್ಮಸ್ಥಳವಾದ ಲಕ್ಷ್ಮೀಸಾಗರ ಗ್ರಾಮದ ಸರ್ವತೋಮುಖ ಆಭಿವೃದ್ಧಿಗೆ ಎಣೆ ಇಲ್ಲದ ಸೇವೆ ಮಾಡಿದ್ದರು ಅವರು. ತಮ್ಮ ಸಂಸದರ ನಿಧಿಯಲ್ಲೇ ನಿರ್ಮಾಣವಾದ ಸರಕಾರಿ ಪ್ರೌಢಶಾಲೆ ಆವರಣದಲ್ಲಿನ ಅವರ ಸಮಾಧಿ ಸ್ಥಳದಲ್ಲಿ ಅವರ ಪುತ್ಥಳಿಯನ್ನಿಡಲಾಗಿತ್ತು. ಆದರೆ, ಕಿಡಿಗೇಡಿಗಳು ಪುತ್ಥಳಿಯನ್ನು ವಿರೂಪಗೊಳಿಸಿ ತಾಲೂಕು ಕಂಡ ಶ್ರೇಷ್ಠ ನಾಯಕನಿಗೆ ಅಪಮಾನ ಮಾಡುತ್ತಿರುವುದು ಸ್ಥಳೀಯರಿಗೆ ಆಕ್ರೋಶ ತಂದಿದೆ.

ಈ ಬಗ್ಗೆ ಸಿಕೆನ್ಯೂಸ್‌ನೌ ಜತೆ ಮಾತನಾಡಿದ ವರ್ಲಕೊಂಡ ಗ್ರಾ.ಪಂ ಉಪಾಧ್ಯಕ್ಷ ಎಲ್.ಎ.ಬಾಬು; ಪದೇ ಪದೆ ದುಷ್ಕರ್ಮಿಗಳು ಪುತ್ಥಳಿಯನ್ನು ಹಾಳು ಮಾಡುವ ಹೀನ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಈ ಬಗ್ಗೆ ಪೊಲೀಸರು ಮೊಕದ್ದಮೆ ದಾಖಲಿಸಿ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.

ಪ್ರೊ.ಎ.ಲಕ್ಷ್ಮೀಸಾಗರ್ ಅವರು 2007ರಲ್ಲಿ ರಾಜ್ಯಸಭೆ ಸದಸ್ಯರಾಗಿದ್ದ ವೇಳೆ ತಮ್ಮ ವಿಶೇಷ ಅನುದಾನದಲ್ಲಿ ತಾಲೂಕಿನ ವರ್ಲಕೊಂಡ ಹಾಗೂ ಸೋಮೇನಹಳ್ಳಿ ಸರಕಾರಿ ಪ್ರೌಢಶಾಲೆಗಳನ್ನು ಅಭಿವೃದ್ಧಿಪಡಿಸಿದರು. 2008ರಲ್ಲಿ ಅವರು ನಿಧನರಾದ ನಂತರ ವರ್ಲಕೊಂಡ ಶಾಲೆಯ ಆವರಣದಲ್ಲೇ ಅವರನ್ನು ಸಮಾಧಿ ಮಾಡಿ ಸ್ಮಾರಕ ನಿರ್ಮಿಸಲಾಯಿತು. ಅಭಿಮಾನಿಗಳು ಅಲ್ಲಿ ಲಕ್ಷ್ಮೀಸಾಗರ್‌ ಅವರ ಪುತ್ಥಳಿ ಇಟ್ಟು ಗೌರವಿಸಿದ್ದರು.

ಮತ್ತೊಮ್ಮೆ ಮರುಕಳಿಸಿದ ಘಟನೆ

ಈ ಹಿಂದೆ ಸಹ ಈ ಪುತ್ಥಳಿಯನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದರು. ಅದನ್ನು ತೆರವು ಮಾಡಿ ಮತ್ತೆ ಹೊಸ ಪುತ್ಥಳಿಯನ್ನು ಕಳೆದ ಸೆಪ್ಟೆಂಬರ್ 12ರಂದು ಇಡಲಾಗಿತ್ತು. ಆದರೆ ಅಕ್ಟೋಬರ್‌ 6ರ ರಾತ್ರಿ ಕಿಡಿಗೇಡಿಗಳು ಮತ್ತೆ ಹೊಸ ಪುತ್ಥಳಿಯ ಮೂಗನ್ನು ಭಗ್ನಗೊಳಿಸಿ ವಿರೂಪಗೊಳಿಸಿದ್ದಾರೆ.

ಪೊಲೀಸರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪುತ್ಥಳಿಯನ್ನು ವಿರೂಪಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸಬೇಕು. ಹೊಸ ಪುತ್ಥಳಿ ವೆಚ್ಚವನ್ನು ದುಷ್ಕರ್ಮಿಗಳಿಂದಲೇ ವಸೂಲಿ ಮಾಡಬೇಕು. ಈ ಕೃತ್ಯ ಖಂಡನೀಯ. ಕಿಡಿಗೇಡಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಾಬು ಒತ್ತಾಯಿಸಿದ್ದಾರೆ.

ಶಾಲೆ ಕುಡುಕರ ತಾಣವಾಗಿದೆ

ವಿದ್ಯೆ ಕಲಿಸುವ ಪವಿತ್ರ ತಾಣವಾದ ವರ್ಲಕೊಂಡ ಸರಕಾರಿ ಪ್ರೌಢಶಾಲೆಯ ಆವರಣವು ಇತ್ತೀಚಿನ ದಿನಗಳಲ್ಲಿ ಕುಡುಕರ ತಾಣವಾಗಿದೆ. ರಾತ್ರಿಯಾಗುತ್ತಲೇ ಕುಡುಕುರ ಗುಂಪು ಶಾಲೆಯ ಆವರಣದಲ್ಲಿ ಕುಳಿತು ಸುತ್ತಲಿನ ಪರಿಸರ ಹಾಳು ಮಾಡಿ ಹೋಗುತ್ತಿದೆ. ವಿದ್ಯಾರ್ಥಿಗಳು ನಿತ್ಯ ಬೆಳಗ್ಗೆ ಬಂದು ಕುಡಿದು ಬಿಸಾಡಿರುವ ಬಾಟಲಿ ಹಾಗೂ ಪ್ಲಾಸ್ಟಿಕ್‌ತ್ಯಾಜ್ಯವನ್ನು ಸ್ವಚ್ಛಗೊಳಿಸಬೇಕಿದೆ.

ಪೊಲೀಸ್ ಭದ್ರತೆಗೆ ಆಗ್ರಹ

ಪ್ರೌಢಶಾಲೆ ಆವರಣದಲ್ಲಿರುವ ಪ್ರೊ.ಎ.ಲಕ್ಷ್ಮೀಸಾಗರ್ ಅವರ ಪುತ್ಥಳಿ ಎರಡನೇ ಸಲ ಭಗ್ನವಾಗಿದೆ. ಇದಕ್ಕೆ ಮುಖ್ಯ ಕಾರಣ ಶಾಲೆ ಆವರಣ ಕುಡುಕರ ತಾಣವಾಗಿರುವುದು. ರಾತ್ರಿ ಸಮಯದಲ್ಲಿ ಪೊಲೀಸ್ ಬೀಟ್ ವ್ಯವಸ್ಥೆ ಇಲ್ಲದ ಕಾರಣ ಇಲ್ಲಿನ ಕುಡುಕರಿಗೆ ಯಾವುದೇ ಭಯ ಇಲ್ಲವಾಗಿದೆ. ಇನ್ನು ಮುಂದೆಯಾದರೂ ಈ ರೀತಿಯ ಘಟನೆಗಳು ನಡೆಯದಂತೆ ಶಾಲೆಗೆ ಸೂಕ್ತ ಬಂದೋಬಸ್ತ್ ಕಲ್ಪಿಸಬೇಕೆಂದು ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಆಗ್ರಹಿಸಿದ್ದಾರೆ.

ಈ ಲೇಖನವನ್ನು ಓದಲು ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ
ಪ್ರೊ.ಎ.ಲಕ್ಷ್ಮೀಸಾಗರ್: ಅಪ್ಪಟ ಗಾಂಧೀವಾದಿ, ರಾಜಕಾರಣದ ಸತ್ಯವಾದಿ

Tags: A Lakshmisagarchikkaballapuraformer ministergudibandejanata Daljdskarnatakapro a lakshmisagarvaralakonda
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಪರೇಷನ್‌ ಕಮಲಕ್ಕೆ ಸಿಕ್ಕಿ ಬೇಲಿ ಹಾರಿದ್ದವರಿಗೆ ಶಾಕ್!‌

ಬರದ ನಷ್ಟ ₹62,000 ಕೋಟಿ; ಕೇಂದ್ರಕ್ಕೆ ಕೇಳಿದ ಮೊತ್ತ ₹22,000 ಕೋಟಿ!

by cknewsnow desk
November 6, 2026
0

ಈವರೆಗೆ ಕ್ಷೇತ್ರಕ್ಕೆ ಮೂರು ಪತ್ರಗಳನ್ನು ಬರೆದಿರುವ ರಾಜ್ಯ ಸರಕಾರ

ಮೈತ್ರಿ ಹೋರಾಟಕ್ಕೆ ದೇವೇಗೌಡ-ಬಿಎಸ್‌ವೈ ಭೇಟಿ ದಿಕ್ಸೂಚಿ

ಮೈತ್ರಿ ಹೋರಾಟಕ್ಕೆ ದೇವೇಗೌಡ-ಬಿಎಸ್‌ವೈ ಭೇಟಿ ದಿಕ್ಸೂಚಿ

by cknewsnow desk
November 6, 2026
0

ಇನ್ನೊಂದು ಅವಧಿಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರನ್ನು ಮುಂದುವರಿಸಲು ಮಾಜಿ ಪ್ರಧಾನಿ ಜತೆ ಮಾಜಿ ಸಿಎಂ ಚರ್ಚಿಸಿದರಾ?

ನಾನು ಹಳ್ಳಿಯವನು, ಏನೀಗ?

ನಾನು ಹಳ್ಳಿಯವನು, ಏನೀಗ?

by cknewsnow desk
November 6, 2026
0

ಹಳ್ಳಿ ಗುಗ್ಗು ಎಂದ ಪ್ರಿಯಾಂಕ್ ಖರ್ಗೆ ಹಳ್ಳಿಗರಿಗೆ ಅಪಮಾನ ಮಾಡಿದ್ದಾರೆ ಎಂದು ಕೇಂದ್ರ ಸಚಿವರ ಬೇಸರ

ಕಾಂತರಾಜು ವರದಿ ನೈಜತೆ ಬಗ್ಗೆ ಅನುಮಾನಗಳಿವೆ ಎಂದ ಅಶೋಕ್

ಸಾರಿಗೆ ನಿಗಮಗಳಿಗೆ ₹5,650 ಕೋಟಿ ಬಾಕಿ! ಜನರ ಮೇಲೆ ದರ ಏರಿಕೆಯ ಹೊರೆ

by cknewsnow desk
November 5, 2026
0

ಸಾರಿಗೆ ನಿಗಮಗಳ ಒಟ್ಟು ಹೊಣೆಗಾರಿಕೆ ₹7,130.80 ಕೋಟಿ

ಕೇಂದ್ರ ಪೆಟ್ರೋಲ್, ಡೀಸೆಲ್ ದರ ಇಳಿಸಿದರೆ ಬಸ್ ಪ್ರಯಾಣ ದರ ಕಡಿಮೆ ಮಾಡುತ್ತೇವೆ

ಕೇಂದ್ರ ಪೆಟ್ರೋಲ್, ಡೀಸೆಲ್ ದರ ಇಳಿಸಿದರೆ ಬಸ್ ಪ್ರಯಾಣ ದರ ಕಡಿಮೆ ಮಾಡುತ್ತೇವೆ

by cknewsnow desk
November 5, 2026
0

ಮಹಿಳೆಯರಿಗೆ ಫ್ರೀ ಬಸ್ ಕೊಟ್ಟಿದ್ದಕ್ಕೆ ಆರ್ಥಿಕ ಹೊರೆ ಆಗಿದೆ ಎಂದ ಮುಖ್ಯಮಂತ್ರಿ

ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಅಗತ್ಯವಿಲ್ಲ: ರಾಜಮಾತೆ ಪ್ರಮೋದಾ ದೇವಿ ಒಡೆಯರ್

ಮೈಸೂರು ಅರಮನೆ ಖಾಸಗಿ ಸ್ವತ್ತು, ಸರ್ಕಾರ ಕಟ್ಟಿಸಿದ್ದಲ್ಲ; ರಾಜಮಾತೆ ಪ್ರಮೋದಾ ದೇವಿ

by cknewsnow desk
November 4, 2026
0

ಸರಕಾರ ಬೇಕಾದರೆ ಇನ್ನೊಂದು ಅಂಬಾರಿಯನ್ನು ಮಾಡಿಸಿಕೊಳ್ಳಲಿ

Next Post
ಕೋಡಿ ಹರಿದ ಅಮಾನಿ ಭೈರಸಾಗರ; ಕೆರೆಕಟ್ಟೆಯಲ್ಲಿ ಜನಸಾಗರ

ಕೋಡಿ ಹರಿದ ಅಮಾನಿ ಭೈರಸಾಗರ; ಕೆರೆಕಟ್ಟೆಯಲ್ಲಿ ಜನಸಾಗರ

Leave a Reply Cancel reply

Your email address will not be published. Required fields are marked *

Recommended

ಸಿಎಂ ಯಡಿಯೂರಪ್ಪ ಅವರ ಮಾಧ್ಯಮ ಸಲಹೆಗಾರರಾಗಿದ್ದ ಮಹದೇವ್‌ ಪ್ರಕಾಶ್‌ ನಿಧನ, ಕಿರಿಯರನ್ನು ಅಕ್ಕರೆಯಿಂದ ಪ್ರೋತ್ಸಾಹಿಸುತ್ತಿದ್ದ ಆ ನಸುನಗೆ ಇನ್ನಿಲ್ಲ

ಸಿಎಂ ಯಡಿಯೂರಪ್ಪ ಅವರ ಮಾಧ್ಯಮ ಸಲಹೆಗಾರರಾಗಿದ್ದ ಮಹದೇವ್‌ ಪ್ರಕಾಶ್‌ ನಿಧನ, ಕಿರಿಯರನ್ನು ಅಕ್ಕರೆಯಿಂದ ಪ್ರೋತ್ಸಾಹಿಸುತ್ತಿದ್ದ ಆ ನಸುನಗೆ ಇನ್ನಿಲ್ಲ

5 years ago
4 ದಿನ ಮುನ್ನವೇ ರಾಜಿನಾಮೆ ಸುಳಿವು ನೀಡಲು ಕಾರಣವಾದ ಆ 8 ಕಾರಣ

ಯಡಿಯೂರಪ್ಪ, ವಿಜಯೇಂದ್ರ ಆಪ್ತರ ಮೇಲೆ ಐಟಿ ದಾಳಿಗೆ ಕಾರಣ ಯಾರು?

5 years ago

Popular News

  • ಆಪರೇಷನ್‌ ಕಮಲಕ್ಕೆ ಸಿಕ್ಕಿ ಬೇಲಿ ಹಾರಿದ್ದವರಿಗೆ ಶಾಕ್!‌

    ಬರದ ನಷ್ಟ ₹62,000 ಕೋಟಿ; ಕೇಂದ್ರಕ್ಕೆ ಕೇಳಿದ ಮೊತ್ತ ₹22,000 ಕೋಟಿ!

    0 shares
    Share 0 Tweet 0
  • ಮೈತ್ರಿ ಹೋರಾಟಕ್ಕೆ ದೇವೇಗೌಡ-ಬಿಎಸ್‌ವೈ ಭೇಟಿ ದಿಕ್ಸೂಚಿ

    0 shares
    Share 0 Tweet 0
  • ನಾನು ಹಳ್ಳಿಯವನು, ಏನೀಗ?

    0 shares
    Share 0 Tweet 0
  • ಸಾರಿಗೆ ನಿಗಮಗಳಿಗೆ ₹5,650 ಕೋಟಿ ಬಾಕಿ! ಜನರ ಮೇಲೆ ದರ ಏರಿಕೆಯ ಹೊರೆ

    0 shares
    Share 0 Tweet 0
  • ಕೇಂದ್ರ ಪೆಟ್ರೋಲ್, ಡೀಸೆಲ್ ದರ ಇಳಿಸಿದರೆ ಬಸ್ ಪ್ರಯಾಣ ದರ ಕಡಿಮೆ ಮಾಡುತ್ತೇವೆ

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಪರೇಷನ್‌ ಕಮಲಕ್ಕೆ ಸಿಕ್ಕಿ ಬೇಲಿ ಹಾರಿದ್ದವರಿಗೆ ಶಾಕ್!‌

ಬರದ ನಷ್ಟ ₹62,000 ಕೋಟಿ; ಕೇಂದ್ರಕ್ಕೆ ಕೇಳಿದ ಮೊತ್ತ ₹22,000 ಕೋಟಿ!

November 6, 2026
ಮೈತ್ರಿ ಹೋರಾಟಕ್ಕೆ ದೇವೇಗೌಡ-ಬಿಎಸ್‌ವೈ ಭೇಟಿ ದಿಕ್ಸೂಚಿ

ಮೈತ್ರಿ ಹೋರಾಟಕ್ಕೆ ದೇವೇಗೌಡ-ಬಿಎಸ್‌ವೈ ಭೇಟಿ ದಿಕ್ಸೂಚಿ

November 6, 2026
ನಾನು ಹಳ್ಳಿಯವನು, ಏನೀಗ?

ನಾನು ಹಳ್ಳಿಯವನು, ಏನೀಗ?

November 6, 2026
ಕಾಂತರಾಜು ವರದಿ ನೈಜತೆ ಬಗ್ಗೆ ಅನುಮಾನಗಳಿವೆ ಎಂದ ಅಶೋಕ್

ಸಾರಿಗೆ ನಿಗಮಗಳಿಗೆ ₹5,650 ಕೋಟಿ ಬಾಕಿ! ಜನರ ಮೇಲೆ ದರ ಏರಿಕೆಯ ಹೊರೆ

November 5, 2026

Covid 19

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

October 16, 2026
ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ