ಭಾರತದ ಮೇಲೆ ರಾಸಾಯನಿಕ ಶಸ್ತ್ರಾಸ್ತ್ರ ದಾಳಿ
ನವದೆಹಲಿ: ಗಡಿಭಾಗದಲ್ಲಿ ತಂಟೆ ಮುಂದುವರೆಸಿರುವ ಪಾಕಿಸ್ತಾನ ಇದೇ ಮೊದಲ ಬಾರಿಗೆ ಭಾರತದತ್ತ ಡ್ರೋಣ್‍ನಲ್ಲಿ ರಾಸಾಯನಿಕ ಶಸ್ತ್ರಾಸ್ತ್ರವನ್ನು ಎಸೆದಿದೆ.
ಉದಯಂಪುರದಲ್ಲಿ ಸುದ್ದಿಗೋಷ್ಠಿಯಲಿ ಜಮ್ಮು ಕಾಶ್ಮಿರದ ಪೊಲೀಸ್ ಮಹಾನಿರ್ದೇಶಕ ದಿಲ್ ಬಾಗ್ ಸಿಂಗ್ ಮಾತನಾಡಿ ಶಾಂತಿ ಕದಡುವ ಸಲುವಾಗಿಯೇ ಪಾಕಿಸ್ತಾನ ಡ್ರೋಣ್ ಗಳ ಮೂಲಕ ಪದೇ ಪದೇ ಗ್ರೆನೆಡ್, ಐಇಡಿ, ಪಿಸ್ತೂಲ್ ಸೇರಿದಂತೆ ಇತರ ಶಸ್ತ್ರಾಸ್ತ್ರಗಳನ್ನು ಎಸೆಯುತ್ತಿದೆ ಎಂದು ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ರಾಸಾಯನಿಕ ಮಿಶ್ರಿತ ದ್ರವ ಮಾದರಿಯ ಶಸ್ತ್ರಾಸ್ತ್ರವನ್ನು ಎಸೆಯಲಾಗಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನ ಹಲವು ದಿನಗಳಿಂದಲೂ ಜಮ್ಮು-ಕಾಶ್ಮಿರದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಸುತ್ತಲೇ ಇದೆ, ಹೊಸದಾಗಿ ಬಳಕೆ ಮಾಡಲಾಗಿರುವ ರಾಸಾಯನಿಕ ಆಯುಧದ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ 182 ಭಯೊತ್ಪಾದಕರನ್ನು ಹತ್ಯೆ ಮಾಡಲಾಗಿದೆ. 300ಕ್ಕೂ ಹೆಚ್ಚು ಆಯುಧಗಳನ್ನು ಜಪ್ತಿ ಮಾಡಲಾಗಿದೆ. ಅವರು ಪದೇ ಪದೇ ಹೆಚ್ಚು ಆಯುಧಗಳನ್ನು ಹಾಗೂ ಮಿಲಿಟನ್ ಗಳನ್ನು ಕಳುಹಿಸುತ್ತಲೇ ಇದ್ದಾರೆ. ಆದರೆ ನಾವು ಅದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ ಎಂದಿದ್ದಾರೆ.