ಕಾಡಿದ ಕಾಮ್ರೇಡ್ ನೆನಪು
ಬೆಂಗಳೂರು: ಪತ್ರಕರ್ತ ನವೀನ್ ಸೂರಿಂಜೆ ಸಂಪಾದಕತ್ವದ ʼಸದನದಲ್ಲಿ ಶ್ರೀರಾಮರೆಡ್ಡಿʼ ಕೃತಿಯನ್ನು ಬೆಂಗಳೂರಿನಲ್ಲಿ ಇಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬಿಡುಗಡೆ ಮಾಡಿದರು.
ಸಿಪಿಎಂ ಪಕ್ಷವನ್ನು ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರದಿಂದ ಎರಡು ಸಲ ಪ್ರತಿನಿಧಿಸಿದ್ದ ಶ್ರೀರಾಮರೆಡ್ಡಿ ಅವರು, ಕಲಾಪದಲ್ಲಿ ಮಾಡಿದ್ದ ಭಾಷಣಗಳ ಗುಚ್ಛವನ್ನು ಸಂಪಾದಿಸಿರುವ ಪುಸ್ತಕ ಇದಾಗಿದೆ. ಕಳೆದ ಏಪ್ರಿಲ್ 15ರಂದು ಅವರು ಹೃದಯಾಘಾತದಿಂದ ನಿಧನರಾಗಿದ್ದರು.
ಕಮ್ಯುನಿಸ್ಟರಲ್ಲಿ ಸ್ವಾರ್ಥ ಇರುವುದಿಲ್ಲ
ಕಮ್ಯುನಿಸ್ಟರು ಖಾರವಾಗಿ ಮಾತನಾಡುತ್ತಾರೆ. ಆದರೆ, ಅವರಲ್ಲಿ ಸ್ವಾರ್ಥ ಇರುವುದಿಲ್ಲ. ಜನಪರವಾದ ಕಾಳಜಿ ಇರುತ್ತಿತ್ತು. ಶ್ರೀರಾಮರೆಡ್ಡಿ ಅಂತಹ ಜನಪರ ಬದ್ಧತೆಯುಳ್ಳ ನಾಐಕರಾಗಿದ್ದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶ್ರೀರಾಮರೆಡ್ಡಿ ಅದ್ಭುತ ಭಾಷಣಕಾರರಾಗಿದ್ದರು. ಅಪರಿಮಿತ ಸಿದ್ಧತೆ ಮಾಡಿಕೊಂಡು ಕಲಾಪಕ್ಕೆ ಬರುತ್ತಿದ್ದರು. ನಾವೆಲ್ಲರೂ ಅಲುಗಾಡದೇ ಅವರ ಭಾಷಣವನ್ನು ಆಲಿಸುತ್ತಿದ್ದೆವು. ಜನಪರ ಕಾಳಜಿಯುಳ್ಳ ಅತ್ಯುತ್ತಮ ನಾಯಕರಾಗಿದ್ದರು ಅವರು ಎಂದು ಸಿದ್ದರಾಮಯ್ಯ ನುಡಿದರು.

ಶ್ರೀರಾಮರೆಡ್ಡಿ ಸದಾ ಸದನದಲ್ಲಿ ಬಡವರು, ಕೂಲಿ ಕಾರ್ಮಿಕರು, ದೀನ ದಲಿತರ ಬಗ್ಗೆ ಮಾತನಾಡುತ್ತಿದ್ದರು. ಅವರ ವಿವಾರಗಳು ಗಂಭೀರವಾಗಿರುತ್ತಿದ್ದವು. ಅಂಥ ಶಾಸಕರ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿದೆ ಎಂದು ಅವರು ವಿಷಾದಿಸಿದರು.
ಮಾಜಿ ಶಾಸಕ ವೈ.ಎಸ್.ವಿ.ದತ್ತ, ಕಾರ್ಮಿಕ ಮುಖಂಡ ವಿ.ಜೆ.ಕೆ ನಾಯರ್, ವಕೀಲ ಅನಂತ ನಾಯ್ಕ, ಹೋರಾಟಗಾರರಾದ ಗೀತಾ, ಅಭಿರುಚಿ ಗಣೇಶ್ ಇನ್ನಿತರರು ಹಾಜರಿದ್ದರು.
ಕೆಳಗಿನ ಲೇಖನ ಓದಲು ಈ ಲಿಂಕ್ ಕ್ಲಿಕ್ ಮಾಡಿ..

















