• About
  • Advertise
  • Careers
  • Contact
Saturday, October 17, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS NATION

ಸಿದ್ದರಾಮಯ್ಯ ಪದಚ್ಯುತಿಗೆ ಡಿಕೆಶಿ, ಜರ್ನಲಿಸ್ಟ್ ರಾಕೇಶ್ ಶೆಟ್ಟಿ ಸ್ಟಿಂಗ್ ಸಂಚು

cknewsnow desk by cknewsnow desk
October 16, 2026
in NATION, POLITICS, STATE
Reading Time: 1 min read
0
ಮುಂದಿನ ತಿಂಗಳೇ 5 ಗ್ಯಾರಂಟಿ!
914
VIEWS
FacebookTwitterWhatsuplinkedinEmail

ಸ್ಟಿಂಗ್ ಸಂಚಿಗೆ ದಾರಿತಪ್ಪಿದ ಕಾಂಗ್ರೆಸ್ ಹೈಕಮಾಂಡ್

ಕರ್ನಾಟಕದ ಸ್ಟಿಂಗ್ ಸಾಮ್ರಾಟ್ ಎಂದು ಸಿಎಂ

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ

ಸೋಶಿಯಲ್ ಮೀಡಿಯಾ ಯುವಕರಿಗೆ ಕಿರುಕುಳ; ಕಿಡಿಕಿಡಿಯಾದ ಕೇಂದ್ರ ಸಚಿವರು

ಬೆಂಗಳೂರು: ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹಾಗೂ ಬ್ಲ್ಯಾಕ್ಮೇಲ್ ಪತ್ರಕರ್ತ ರಾಕೇಶ್ ಶೆಟ್ಟಿ ಇಬ್ಬರು ಸ್ಟಿಂಗ್ ಆಪರೇಶನ್ ಸಂಚು ಮಾಡಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.

ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವರು; ಹಾಲಿ ಮುಖ್ಯಮಂತ್ರಿ ಮತ್ತು ಒಬ್ಬ ಕೆಟ್ಟ ಪತ್ರಕರ್ತ ಹೂಡಿದ ಸಂಚಿಗೆ ಸಿದ್ದರಾಮಯ್ಯ ಬಲಿಯಾದರೂ ಎಂದು ದೂರಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚಾರಿತ್ರ್ಯಹರಣ ಮಾಡಲು ರಾಜಕೀಯ ಸಂಚು ರೂಪಿಸಿದ ಡಿ.ಕೆ.ಶಿವಕುಮಾರ್ ಸಿಂಡಿಕೇಟಿನಲ್ಲಿ ಇದ್ದ ಎಲ್ಲರನ್ನು ಬಂಧಿಸಬೇಕು ಹಾಗೂ ಈ ಮುಖ್ಯಮಂತ್ರಿಯನ್ನು ‘ಕರ್ನಾಟಕದ ಸ್ಟಿಂಗ್ ಸಾಮ್ರಾಟ್’ ಎಂದು ಕರೆಯಬೇಕೆಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.

ಸಿದ್ದರಾಮಯ್ಯ ಅವರನ್ನು ಕುರ್ಚಿಯಿಂದ ಕೆಳಗೆ ಇಳಿಸಲು ಇವರು ಎಲ್ಲಾ ರೀತಿಯ ಸಂಚು ರೂಪಿಸಿ ಅದನ್ನು ಕಾರ್ಯಗತ ಮಾಡುವಲ್ಲಿ ಯಶಸ್ವಿಯಾದರು. ಕಾಂಗ್ರೆಸ್ ಹೈಕಮಾಂಡ್ ಕೂಡ ಇವರ ಸಂಚಿನಿಂದ ದಾರಿ ತಪ್ಪಿತು ಎಂದು ಸಚಿವರು ಆರೋಪಿಸಿದರು. ಸ್ಟಿಂಗ್‌ ಆಪರೇಷನ್‌ ಪ್ರಕರಣದಲ್ಲಿ ನನ್ನನ್ನು ಕೂಡ ಸಿಲುಕಿಸುವ ಸಂಚು ಹೂಡಲಾಗಿತ್ತು. ಸ್ಟಿಂಗ್‌ ಆಪರೇಷನ್‌ನ ಮೂಲ ಪುರುಷನನ್ನು ಕರೆಸಿ ಅವನಿಂದ ನ್ಯಾಯಾಲಯದಲ್ಲಿ 164ರ ಅಡಿಯಲ್ಲಿ ಹೇಳಿಕೆ ಕೊಡಿಸಿ ನನ್ನನ್ನೂ ಕೇಸಲ್ಲಿ ಸಿಲುಕಿಸಲು ಇವರು ಸಂಚು ಮಾಡಿದ್ದರು ಎಂದು ಸಚಿವರು ದೂರಿದರು.

ಸ್ಟಿಂಗ್‌ ಆಪರೇಷನ್‌ ವಿಚಾರದಲ್ಲಿ ಸಿದ್ದರಾಮಯ್ಯ ಅವರಿಗೆ ತಾವು ನ್ಯಾಯಾಲಯದಿಂದ ತಡೆಯಾಜ್ಞೆ ಪಡೆಯಲು ಹೋಗಬೇಡಿ, ಧೈರ್ಯವಾಗಿ ಎದುರಿಸಿ ಎಂದು ನಾನು ಮನವಿ ಮಾಡಿದ್ದೆ. ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಆದೇಶ ಕೊಟ್ಟರು ಎಂಬ ಕಾರಣಕ್ಕೆ ಗೃಹಮಂತ್ರಿ ಪ್ರಿಯಾಂಕ್ ಖರ್ಗೆ ಅವರು ಸ್ಟಿಂಗ್ ಆಪರೇಷನ್ ತನಿಖೆಯನ್ನು ಚುರುಕು ಮಾಡಿದ್ದಾರೆ. ಅದರ ಭಾಗವಾಗಿ ಸಿದ್ದರಾಮಯ್ಯ ಅವರ ವಿರುದ್ಧ ಸ್ಟಿಂಗ್ ಮಾಡಿದ ಅಸಲಿ ಅಪರಾಧಿಗಳನ್ನು ಕರೆಸಿ ನನ್ನ ವಿರುದ್ಧ ಸ್ಟೇಟ್ ಮೆಂಟ್ ಮಾಡಿಸಲು ಹುನ್ನಾರ ನಡೆಸಿದ್ದರು ಎಂದು ಅವರು ಹೇಳಿದರು.

ನಾನೇನು ಹೆಚ್.ಡಿ. ರೇವಣ್ಣ ಅಲ್ಲ, ಆತನ ಹಾಗೆ ಸುಲಭವಾಗಿ ಇವರ ಸಂಚಿಗೆ ಬಲಿ ಆಗೋದಕ್ಕೆ. ಇವರಿಗೆ ಹೇಗೆ ಚೆಕ್ಮೆಟ್ ಇಡಬೇಕು ಎನ್ನುವುದು ನನಗೆ ಗೊತ್ತಿದೆ. ಅದು ತಿಳಿದೇ ಇವರು ಜೆಡಿಎಸ್ ಸಾಮಾಜಿಕ ಜಾಲ ತಾಣದ ಒಬ್ಬ ಹುಡುಗನನ್ನು ಕರೆದುಕೊಂಡು ಕಿರುಕುಳ ನೀಡಿದ್ದಾರೆ. ಇನ್ನೊಬ್ಬ ಹುಡುಗನ ಮನೆ ಬಳಿಗೆ ಹೋಗಿ ಗಲಾಟೆ ಮಾಡಿದ್ದಾರೆ. ಇದೆಲ್ಲವೂ ಗೃಹಮಂತ್ರಿಯ ಅತ್ಯುತ್ಸಾಹದ ಫಲ ಎಂದು ಎಂದು ಕೇಂದ್ರ ಸಚಿವರು ಟೀಕಿಸಿದರು.

ಸ್ಟಿಂಗ್ ಆಪರೇಷನ್ ವಿಚಾರವನ್ನು ವ್ಯವಸ್ಥಿತವಾಗಿ ನನ್ನ ತಲೆಗೆ ಕಟ್ಟಲು ಸಂಚು ಮಾಡಿದ್ದರು. ಈ ಸಂಚಿನಲ್ಲಿ ಹಾಲಿ ಮುಖ್ಯಮಂತ್ರಿ ಜತೆಗೇ ನಕಲಿ ಪತ್ರಕರ್ತ ರಾಕೇಶ್ ಶೆಟ್ಟಿ, ಅವನ ಚೇಲಾ ಬಾಗೇಪಲ್ಲಿಯ ಪ್ರಶಾಂತ್ ಎಂಬುವವನು ಸೇರಿದ್ದಾನೆ. ಅಲ್ಲದೆ ಕೃಪಾ ಆಳ್ವ ಎಂಬ ಕಾಂಗ್ರೆಸ್ ಪಕ್ಷದ ಮಹಿಳಾ ಮುಖಂಡರೊಬ್ಬರು ಸೇರಿದ್ದಾರೆ. ಮೊದಲು ಮೂವರನ್ನು ಬಂಧಿಸುವ ಬದಲು ನಮ್ಮ ಹುಡುಗರಿಗೆ ಕಿರುಕುಳ ಕೊಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಸ್ಟಿಂಗ್‌ ಆಪರೇಷನ್‌ ವಿಚಾರ ಆರಂಭಿಸಿದ್ದು ನಾನಲ್ಲ. ಈ ವಿಷಯ ಸಂಪುಟದಲ್ಲಿ ಚರ್ಚೆಯಾಗಿತ್ತು. ಸಂಪುಟದ ಚರ್ಚೆಗಳು ರಹಸ್ಯವಾಗಿರಬೇಕಾದ ಸಂದರ್ಭದಲ್ಲಿ ಅದರ ಮಾಹಿತಿ ಮಾಧ್ಯಮಗಳಿಗೆ ಸೋರಿಕೆಯಾಗಿದ್ದು ಹೇಗೆ ಎಂಬುದು ಪ್ರಶ್ನೆ? ಮುಖ್ಯಮಂತ್ರಿಗಳು ತಮಗೆ ಬೇಕಾದವರಿಗೆ ಸ್ಟಿಂಗ್‌ ಆಪರೇಷನ್‌ ಫೈಲ್‌ನ ವಿಷಯವನ್ನು ಪೂರ್ವನಿಯೋಜಿತವಾಗಿ ಸೋರಿಕೆ ಮಾಡಿದರು. ಅಂದು ನಾನು ಬೆಳಗ್ಗೆ 11 ಗಂಟೆಗೆ ಮಾಧ್ಯಮಗೋಷ್ಠಿ ಕರೆದು ನೈಸ್ ಅಕ್ರಮಗಳ ಕುರಿತು ಕೆಲ ದಾಖಲೆಗಳನ್ನು ಬಹಿರಂಗ ಮಾಡಲು ನಿರ್ಧಾರ ಮಾಡಿದ್ದೆ. ಆದರೆ, ಪ್ರಧಾನಿಗಳು ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದ ಸಂದರ್ಭ ಅದಾಗಿದ್ದರಿಂದ ನಾನು ನನ್ನ ಮಾಧ್ಯಮಗೋಷ್ಠಿಯನ್ನು ಹನ್ನೆರಡು ಗಂಟೆಗೆ ಮುಂದಕ್ಕೆ ಹಾಕಿ ಮಾಧ್ಯಮಗಳಿಗೆ ಸಂದೇಶ ಕಳಿಸಲಾಯಿತು. ಅದನ್ನೇ ಕಾದು ಕುಳಿತಿದ್ದ ಮುಖ್ಯಮಂತ್ರಿ ಸಿಂಡಿಕೇಟ್ ನನ್ನ ಮಾಧ್ಯಮಗೋಷ್ಠಿ ಆರಂಭಕ್ಕೆ ಕೆಲ ನಿಮಿಷಗಳ ಮೊದಲು ಸಂಪುಟದಲ್ಲಿ ಸ್ಟಿಂಗ್ ವಿಷಯ ಚರ್ಚೆಯಾಗಿದೆ ಎಂಬ ವಿಷಯವನ್ನು ಮಾಧ್ಯಮಗಳಲ್ಲಿ ತೇಲಿಬಿಟ್ಟಿತು. ಅದರ ಮೂಲಕ ಮಾಜಿ ಮುಖ್ಯಮಂತ್ರಿಗಳ ವಿರುದ್ಧ ನಡೆಸಿದ ಸ್ಟಿಂಗ್ ಸಂಚು ಕೂಡ ಚರ್ಚೆಗೆ ಬಂತು ಎಂದು ಕುಮಾರಸ್ವಾಮಿ ಅವರು ಹೇಳಿದರು.

ಇಷ್ಟಕ್ಕೂ ಸ್ಟಿಂಗ್ ಫೈಲ್ ಅನ್ನು ಸಂಪುಟಕ್ಕೆ ತೆಗೆದುಕೊಂಡು ಹೋಗಿದ್ದು ಏಕೆ? ಅದರಲ್ಲಿ ಏನೇನು ವಿಷಯ ಇತ್ತು? ಎಂಬುದನ್ನು ಮುಖ್ಯಮಂತ್ರಿ ಜನತೆಗೆ ಹೇಳಬೇಕು. ಸಂಪುಟದಲ್ಲಿಯೇ ಸಚಿವರ ಗುಟ್ಟು ರಟ್ಟು ಮಾಡಿದ ವಿಷಯವನ್ನೇ ಮೀಡಿಯಾಗೆ ಬಿಟ್ಟು ಪಂಚಾಯಿತಿ ಮಾಡಿದ್ದು ಈ ಮುಖ್ಯಮಂತ್ರಿ. ಮುಖ್ಯಮಂತ್ರಿ ಸ್ಥಾನದಲ್ಲಿ ಕೂತಿರುವ ವ್ಯಕ್ತಿಗೆ ಸಚಿವರನ್ನು ಹೇಗೆ ನಡೆಸಿಕೊಳ್ಳಬೇಕು? ಸಂಪುಟ ಸಭೆಯ ಪಾವಿತ್ರತೆ ಏನು? ಎಂಬುದು ಗೊತ್ತಿರಬೇಕು. ಈ ಮುಖ್ಯಮಂತ್ರಿಗೆ ಅಂತಹ ಯಾವುದೇ ಶಿಷ್ಟಾಚಾರ ನಿಯಮ ಬದ್ಧತೆಗಳು ಇಲ್ಲ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

ಜೆಡಿಎಸ್ ಹುಡುಗರನ್ನು ಬಂಧಿಸಿದ್ದಕ್ಕೆ ಆಕ್ರೋಶ

ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಯುವಕ ಶಂಕರ್ ಅವರನ್ನು ಬುಧವಾರ ಬೆಳಗ್ಗೆ ಅವರ ಮನೆಯಿಂದ ಕರೆದುಕೊಂಡು ಹೋಗಲಾಗುತ್ತದೆ. ಆಮೇಲೆ ಈ ಬಗ್ಗೆ ನಮ್ಮ ಪಕ್ಷದ ಕಾನೂನು ಘಟಕ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತದೆ. ತದನಂತರ ಶಂಕರ್ ನಿಂದ ಪೊಲೀಸರೇ ಕಾಲ್ ಮಾಡಿಸಿ ನನ್ನನ್ನು ಸಿಸಿಬಿ ಪೊಲೀಸರು ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಿಸಿ ಕರೆ ಕಟ್ ಮಾಡಿಸುತ್ತಾರೆ. ರಾತ್ರಿ ನಮ್ಮ ತಂಡದ ಇನ್ನೊಬ್ಬ ಯುವಕ ಮೋಹನ್ ಎಂಬಾತನ ಮನೆ ಮುಂದೆ ಪೊಲೀಸರು ಗಲಾಟೆ ಮಾಡುತ್ತಾರೆ. ಅಕ್ಕ ಪಕ್ಕದಆನೆಗಳಲ್ಲಿ ವಾಸ ಮಾಡುವ ಜನರಿಗೆ ಇದರಿಂದ ತೊಂದರೆಯಾಗುತ್ತದೆ ಎಂದು ಸಚಿವರು ಹೇಳಿದರು.

ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ನಾನಿದ್ದೇನೆ. ತಾಕತ್ತಿದ್ದರೆ ನನ್ನನ್ನು ಬಂದನ ಮಾಡಿ, ಈಗಲೂ ಕಚೇರಿಯಲ್ಲಿಯೇ ಕೂತಿದ್ದೇನೆ. ಒಂದು ನೋಟಿಸ್ ನೀಡಲಿ, ಉತ್ತರ ಕೊಡುತ್ತೇನೆ. ಬಂಧಿಸುವುದಾದರೆ ಬಂದು ನನ್ನನ್ನು ಕರೆದುಕೊಂಡು ಹೋಗಲಿ ಎಂದು ಕೇಂದ್ರ ಸಚಿವರು ಸರ್ಕಾರಕ್ಕೆ ಸವಾಲು ಹಾಕಿದರು.

ಮಾಧ್ಯಮಗೋಷ್ಠಿಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ವಿಧಾನ ಪರಿಷತ್ ಸದಸ್ಯರಾದ ಟಿ.ಎನ್. ಜವರಾಯಿಗೌಡ, ಮಾಜಿ ಶಾಸಕರಾದ ಚೌಡರೆಡ್ಡಿ, ಎ.ಮಂಜುನಾಥ್, ಸುರೇಶ್ ಗೌಡ, ಪಕ್ಷದ ರಾಜ್ಯ ವಕ್ತಾರರಾದ ದೇವರಾಜು, ನಾಗೇಂದ್ರ ಬಾಬು ಮುಂತಾದವರು ಜತೆಯಲಿದ್ದರು.

Tags: DK Shivakumarhd kumaraswamyKarnataka sting operationsiddaramaiahsting agonist former chief minister
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕೇಂದ್ರ ಸಚಿವ HD ಕುಮಾರಸ್ವಾಮಿ ಪ್ರೆಸ್ ಮೀಟ್ #Live

HDK #preesmeet #Live

by cknewsnow desk
October 15, 2026
0

ಮುಖ್ಯಮಂತ್ರಿ ಡಿಕೆಶಿ ಮತ್ತು ಸ್ಟಿಂಗ್ ಪಿನ್ ಸಂಬಂಧದ ಬಗ್ಗೆ ಮಹತ್ವದ ಅಂಶಗಳನ್ನು ಬಹಿರಂಗಪಡಿಸಿದ ಕೇಂದ್ರ ಸಚಿವರು

ಸ್ಟಿಂಗ್ ಆಪರೇಷನ್‌; ಸಿಬಿಐ ತನಿಖೆಗೆ HDK ಆಗ್ರಹ

ಸ್ಟಿಂಗ್ ಆಪರೇಷನ್‌; ಸಿಬಿಐ ತನಿಖೆಗೆ HDK ಆಗ್ರಹ

by cknewsnow desk
October 14, 2026
0

ಷಡ್ಯಂತ್ರ್ಯದ ವಿರುದ್ಧ ಸಿದ್ದರಾಮಯ್ಯ ಗಟ್ಟಿ ದನಿ ಎತ್ತಲಿ ಎಂದ ಕೇಂದ್ರ ಸಚಿವರು; ರಾಜಕೀಯ ವಿರೋಧಿಗಳು, ಶಾಸಕರು, ಸಚಿವರ ವಿರುದ್ಧ ಸದಾಶಿವನಗರದಲ್ಲಿ ಫೋನ್ ಟ್ಯಾಪಿಂಗ್ ಸೆಂಟರ್

ಕೇಂದ್ರ ಸಚಿವ HD ಕುಮಾರಸ್ವಾಮಿ ಪ್ರೆಸ್ ಮೀಟ್ #Live

ಕೇಂದ್ರ ಸಚಿವ HD ಕುಮಾರಸ್ವಾಮಿ ಪ್ರೆಸ್ ಮೀಟ್ #Live

by cknewsnow desk
October 13, 2026
0

ಬೆಂಗಳೂರು ಜೆ.ಪಿ. ಭವನದಿಂದ ನೇರ ಪ್ರಸಾರ

ಸ್ಟಿಂಗ್ ವಿರುದ್ಧ ಕೋರ್ಟ್ ಮೊರೆ ಹೋದ ಸಿದ್ದರಾಮಯ್ಯ! ಇಂದು ಆದೇಶ ನಿರೀಕ್ಷೆ

ಸ್ಟಿಂಗ್ ವಿರುದ್ಧ ಕೋರ್ಟ್ ಮೊರೆ ಹೋದ ಸಿದ್ದರಾಮಯ್ಯ! ಇಂದು ಆದೇಶ ನಿರೀಕ್ಷೆ

by cknewsnow desk
October 13, 2026
0

ವಿಡಿಯೋಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ತಡೆ ನೀಡಬೇಕೆಂದು ಅಸಲು ದಾವೆ

ಡಿಜಿಟ್‌ನೊಂದಿಗೆ  ಸಿಎಂ ಪುತ್ರ ವಿಜಯೇಂದ್ರ ಡೀಲ್ ಬಗ್ಗೆ ಹೇಳಿದ  ಬಸನಗೌಡ ಪಾಟೀಲ್‌ ಯತ್ನಾಳ್‌

ಕಮಲದ ಕೈ ಹಿಡಿಯಲಿರುವ 25 ಕಾಂಗ್ರೆಸ್ ಶಾಸಕರು

by cknewsnow desk
October 12, 2026
0

ಚುನಾವಣೆ ಹೊತ್ತಿಗೆ ಶುರುವಾಗಲಿದೆ ಪಕ್ಷಾಂತರ ಪರ್ವ

ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೃಷಿ ಪಂಪುಸೆಟ್ಟುಗಳಿಗೆ 24/7 ಉಚಿತ ವಿದ್ಯುತ್

ಕಾಲ ಉತ್ತರಿಸುತ್ತದೆ ಎನ್ನುವುದು ತನಿಖೆಗೆ ಪರ್ಯಾಯವಲ್ಲ: HDK

by cknewsnow desk
October 12, 2026
0

ಡಿಕೆಶಿಗೆ ತಿರುಗೇಟು; ಸ್ಟಿಂಗ್ ಆಪರೇಷನ್ ಸತ್ಯಾಸತ್ಯತೆ ಹೊರಬರಲು ತನಿಖೆ ಅಗತ್ಯ ಎಂದ ಕೇಂದ್ರ ಸಚಿವರು

Leave a Reply Cancel reply

Your email address will not be published. Required fields are marked *

Recommended

ಮುನಿರತ್ನ ಇಲ್ಲದೆ ಏಳು ಸಚಿವರು ಪ್ರಮಾಣ ಸ್ವೀಕರಿಸಿದ್ದೇನೋ ಸರಿ! ಆದರೆ, ನಾಗೇಶ್ ವಿಕೆಟ್ ಪತನವಾಗಿದ್ದೇಕೆ? ಅನ್ಯಾಯ ಆಗಿದ್ದು ಕೋಲಾರಕ್ಕೆ, ಖುಷಿಯಾಗಿದ್ದು ವಿರೋಧಿಗಳಿಗೆ

ಮುನಿರತ್ನ ಇಲ್ಲದೆ ಏಳು ಸಚಿವರು ಪ್ರಮಾಣ ಸ್ವೀಕರಿಸಿದ್ದೇನೋ ಸರಿ! ಆದರೆ, ನಾಗೇಶ್ ವಿಕೆಟ್ ಪತನವಾಗಿದ್ದೇಕೆ? ಅನ್ಯಾಯ ಆಗಿದ್ದು ಕೋಲಾರಕ್ಕೆ, ಖುಷಿಯಾಗಿದ್ದು ವಿರೋಧಿಗಳಿಗೆ

6 years ago
ಕಮ್ಯುನಿಸ್ಟರು ಮತ್ತು ಕಾಂಗ್ರೆಸ್‌ 7 ದಶಕದ ಆಡಳಿತದಿಂದ  ಭ್ರಮನಿರಸನಗೊಂಡ ಕೇರಳದಲ್ಲಿ ಬಿಜೆಪಿಯತ್ತ ಒಲವು; ದೇವರ ನಾಡಿನಲ್ಲಿ ಬದಲಾವಣೆಯ ಗಾಳಿ ಎಂದ ಡಿಸಿಎಂ

ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂದು ಹೇಳಲು ನಾನು ‘ಜ್ಯೋತಿಷಿ’ ಅಲ್ಲ ಎಂದ ಡಿಸಿಎಂ; ಸೈನಿಕನಿಗೆ ಪರೋಕ್ಷ ಟಾಂಗ್

5 years ago

Popular News

  • ಮುಂದಿನ ತಿಂಗಳೇ 5 ಗ್ಯಾರಂಟಿ!

    ಸಿದ್ದರಾಮಯ್ಯ ಪದಚ್ಯುತಿಗೆ ಡಿಕೆಶಿ, ಜರ್ನಲಿಸ್ಟ್ ರಾಕೇಶ್ ಶೆಟ್ಟಿ ಸ್ಟಿಂಗ್ ಸಂಚು

    0 shares
    Share 0 Tweet 0
  • ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

    0 shares
    Share 0 Tweet 0
  • HDK #preesmeet #Live

    0 shares
    Share 0 Tweet 0
  • ಗ್ಯಾಸ್ ಲಾರಿಗೆ ರೇಂಜ್ ರೋವರ್ ಡಿಕ್ಕಿ; ಮಾಲೂರು ಬಿಜೆಪಿ ಮುಖಂಡ ದುರ್ಮರಣ

    0 shares
    Share 0 Tweet 0
  • ಸ್ಟಿಂಗ್ ಆಪರೇಷನ್‌; ಸಿಬಿಐ ತನಿಖೆಗೆ HDK ಆಗ್ರಹ

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಮುಂದಿನ ತಿಂಗಳೇ 5 ಗ್ಯಾರಂಟಿ!

ಸಿದ್ದರಾಮಯ್ಯ ಪದಚ್ಯುತಿಗೆ ಡಿಕೆಶಿ, ಜರ್ನಲಿಸ್ಟ್ ರಾಕೇಶ್ ಶೆಟ್ಟಿ ಸ್ಟಿಂಗ್ ಸಂಚು

October 16, 2026
ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

October 16, 2026
ಗ್ಯಾಸ್ ಲಾರಿಗೆ ರೇಂಜ್ ರೋವರ್ ಡಿಕ್ಕಿ; ಮಾಲೂರು ಬಿಜೆಪಿ ಮುಖಂಡ ದುರ್ಮರಣ

ಗ್ಯಾಸ್ ಲಾರಿಗೆ ರೇಂಜ್ ರೋವರ್ ಡಿಕ್ಕಿ; ಮಾಲೂರು ಬಿಜೆಪಿ ಮುಖಂಡ ದುರ್ಮರಣ

October 14, 2026
ಸ್ಟಿಂಗ್ ಆಪರೇಷನ್‌; ಸಿಬಿಐ ತನಿಖೆಗೆ HDK ಆಗ್ರಹ

ಸ್ಟಿಂಗ್ ಆಪರೇಷನ್‌; ಸಿಬಿಐ ತನಿಖೆಗೆ HDK ಆಗ್ರಹ

October 14, 2026

Covid 19

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

October 16, 2026
ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ