• About
  • Advertise
  • Careers
  • Contact
Thursday, November 5, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS NATION

ಗೃಹ ಇಲಾಖೆ ನಡೆಸುವುದಕ್ಕೆ ಪ್ರಿಯಾಂಕ್ ಖರ್ಗೆ Unfit ಎಂದ ಹೆಚ್.ಡಿ.ಕುಮಾರಸ್ವಾಮಿ

cknewsnow desk by cknewsnow desk
November 4, 2026
in NATION, POLITICS, STATE
Reading Time: 1 min read
0
ಗೃಹ ಇಲಾಖೆ ನಡೆಸುವುದಕ್ಕೆ ಪ್ರಿಯಾಂಕ್ ಖರ್ಗೆ Unfit ಎಂದ ಹೆಚ್.ಡಿ.ಕುಮಾರಸ್ವಾಮಿ
914
VIEWS
FacebookTwitterWhatsuplinkedinEmail
ಸ್ಟಿಂಗ್ ತನಿಖೆಯ ವಾಗ್ದಾಳಿ ಮುಂದುವರಿಸಿದ ಕೇಂದ್ರ ಸಚಿವರು; ಸಂತ್ರಸ್ತೆ ಕಲಿಸಿದ್ದ ಈ ಮೇಲ್ ಎಲ್ಲಿ ಹೋಯಿತು ಖರ್ಗೆ ಅವರೇ ಎಂದು ಕಿಡಿ
ಈ ಮೇಲ್ ಇಟ್ಟುಕೊಂಡಿದ್ದಿರೋ, ಡಿಲಿಟ್ ಮಾಡಿದ್ದಿರೋ ಎಂದು ತಿರುಗೇಟು

ಬೆಂಗಳೂರು: ಗೃಹ ಇಲಾಖೆಯನ್ನು ನಡೆಸಲು ಪ್ರಿಯಾಂಕ್ ಖರ್ಗೆ Unfit ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಮಾಧ್ಯಮಗಳ ಜತೆ ಮಾತನಾಡಿದ ಅವರು; ಗೃಹ ಇಲಾಖೆ ಅವರ ಕೈಯಲ್ಲಿದೆ. ಅಧಿಕಾರ ಅವರ ಕೈಯಲ್ಲೇ ಇದೆ. ಗುಪ್ತದಳವೂ ಅವರ ಬಳಿಯೇ ಇದೆ. ಆದರೆ ಪ್ರಿಯಾಂಕ್ ಖರ್ಗೆ ಸಾಕ್ಷ್ಯ ಕೊಡಿ ಎಂದು ನನ್ನನ್ನು ಕೇಳುತ್ತಿದ್ದಾರೆ. ಇಂತಹ ವ್ಯಕ್ತಿಯನ್ನು ಗೃಹ ಸಚಿವ ಎನ್ನಲು ಆಗುತ್ತದೆಯೇ? ಈ ಮನುಷ್ಯನಿಗೆ ಗೃಹ ಸಚಿವನಾಗುವುದಕ್ಕೆ ಹಾಗೂ ಅಂತಹ ಜವಾಬ್ದಾರಿಯುತ ಖಾತೆ ನಿರ್ವಹಣೆ ಮಾಡುವ ಯೋಗ್ಯತೆ ಇಲ್ಲ ಎಂದು ಕುಮಾರಸ್ವಾಮಿ ಅವರು ಹರಿಹಾಯ್ದರು.

ಸ್ಟಿಂಗ್ ಆಪರೇಷನ್ ತನಿಖೆಯ ಬಗ್ಗೆ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು; ಕೊಲೆ ನಡೆದಿದೆ, ಕೊಲೆಗಾರರನ್ನು ಬಿಟ್ಟರು, ಅದನ್ನು ಚಿತ್ರೀಕರಣ ಮಾಡಿದವರನ್ನು ಕೂಡ ಬಿಟ್ಟರು, ಕೊಲೆ ಆಗಿದೆ ಎಂದು ಕಿರುಚಿಕೊಂಡವರ ವಿರುದ್ಧ ಪೊಲೀಸರು ಪ್ರತಾಪ ತೋರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಪ್ರಕರಣದ ಸಂತ್ರಸ್ತೆ ಕೃಪಾ ಆಳ್ವ ಅಧ್ಯಕ್ಷರಾಗಿದ್ದಾಗ ಮಕ್ಕಳ ಹಕ್ಕು ಆಯೋಗಕ್ಕೆ ಕಳಿಸಿರುವ ಈ ಮೇಲ್ ಎಲ್ಲಿ ಹೋಯಿತು? ಅದನ್ನು ಇಟ್ಟುಕೊಂಡಿದೀರಾ? ಅಥವಾ ಅಳಿಸಿ ಹಾಕಿದ್ದೀರಾ? ಈ ಮೇಲ್ ಗೂ ತನಿಖೆಗೆ ಏನು ಸಂಬಂಧ ಎಂದು ಅವರು ಕೇಳುತ್ತಿದ್ದಾರೆ. ಆಗ ಪ್ರಿಯಾಂಕ್ ಖರ್ಗೆ ಖಾತೆ ಬೇರೆ ಇತ್ತು. ಈಗ ಅವರಿಗೆ ಗೃಹ ಖಾತೆ ಕೊಡಲಾಗಿದೆ. ಆಗ ಬಂದಿದ್ದ ಈ ಮೇಲ್ ನೋಡಿದ್ದವರನ್ನೇ ತನಿಖೆ ಮಾಡಲು ಹೇಳಿ. ಅದು ನನ್ನ ಯಾವುದು ವ್ಯಾಪ್ತಿಗೆ ಬರಲ್ಲ ಎಂದರೆ ಏನರ್ಥ? ಯಾಕೆ ಬರಲ್ಲ? ಮತ್ತೆ ಇದು ಯಾರಿಗೆ ಬರುತ್ತೆ? ಆ ವ್ಯಾಪ್ತಿ ಈ ವ್ಯಾಪ್ತಿ ಯಾಕಪ್ಪಾ ಬರುತ್ತೆ? ಎಂದು ಸಚಿವರು ಪ್ರಶ್ನಿಸಿದರು.

ಈಗಾಗಲೇ ಹಲವು ಬಾರಿ ಸ್ಟಿಂಗ್ ಸೂತ್ರಧಾರರನ್ನ ಬಂಧಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯ ಮಾಡುತ್ತಲೇ ಇದ್ದಾರೆ. ಈ ಬಗ್ಗೆ ಅವರು ಹೈಕಮಾಂಡ್ ಮೇಲೆಯೂ ಒತ್ತಡ ಹೇರಿದ್ದಾರೆ. ಸಿದ್ದರಾಮಯ್ಯ ಅವರು ಹೇಳುತ್ತಿರುವುದನ್ನೇ ನಾನು ಕೂಡ ಹೇಳುತ್ತಿದ್ದೇನೆ. ಆದರೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಒತ್ತಡದಿಂದ ತನಿಖೆಯ ದಾರಿ ತಪ್ಪುತ್ತಿದೆ. ಪೊಲೀಸರು ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಕಿಡಿಕಾರಿದರು.

ತನಿಖೆಯ ದಾರಿ ತಪ್ಪುವುದು ಬೇಡ. ಅದನ್ನು ಸರಿ ಮಾಡಿಕೊಳ್ಳಿ ಎಂದಷ್ಟೇ ಹೇಳುತ್ತಿದ್ದೇನೆ. ಕೇರಳಕ್ಕೆ ಹೋಗಿ ಶೂಟಿಂಗ್ ಮಾಡಿಕೊಂಡು ಬಂದರಲ್ಲಾ, ಅದೇನು? ಕೊಲೆ ಮಾಡಿ ಶೂಟ್ ಮಾಡಿದ್ದಾರೆ. ಆದರೆ ಕೊಲೆ ಮಾಡಿದವನ ಬಗ್ಗೆ ಚರ್ಚೆ ಇಲ್ಲ. ಅಯ್ಯೋ.. ಅಯ್ಯೋ.., ಅಲ್ಲೆಲ್ಲೋ ಕೊಲೆ ಆಗ್ತಿದೆ ನೋಡಿ ಅಂದರಲ್ಲಾ.. ಅವರ ಹಿಂದೆ ಪೊಲೀಸರು ಓಡುತ್ತಿದ್ದಾರೆ. ಆ ರೀತಿಯಲ್ಲಿ ತನಿಖೆ ನಡೆಯುತ್ತಿದೆ ಎಂದು ಸಚಿವರು ಕಿಡಿಕಾರಿದರು.

ಸಿದ್ದರಾಮಯ್ಯ ಅವರು ಹೈಕಮಾಡ್ ಗೆ ಎಚ್ಚರಿಕೆ ನೀಡಿದ್ದಾರಂತೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; ಅವರು ವರಿಷ್ಠರಿಗೆ ಗಟ್ಟಿಯಾಗಿಯೇ ಎಚ್ಚರಿಕೆ ನೀಡಿದ್ದಾರೆ ಎಂಬ ಮಾಹಿತಿ ಬಂದಿದೆ. 2028ಕ್ಕೆ ನಾನು ಇರಬೇಕೋ ಬೇಡವೋ ನೀವೇ ಹೇಳಿ ಎಂದು ಅವರು ರಾಹುಲ್ ಗಾಂಧಿ ಅವರನ್ನು ಕೇಳಿದ್ದಾರೆ ಅಂತ ವರದಿಯಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಸಿದ್ದರಾಮಯ್ಯ ಅವರ ವಿರುದ್ಧ ನಾನು ಹೋರಾಟ ಮಾಡಿಕೊಂಡು ಬಂದವನು. ಇಲ್ಲಿ ಸಿದ್ದರಾಮಯ್ಯನವರ ಮೇಲಿನ ಅನುಕಂಪಕ್ಕೆ ನಾನು ಮಾತಾಡಿಲ್ಲ. ರಾಜ್ಯದ ಜನತೆಗೆ ಹೇಳಲು ಬಯಸುತ್ತೇನೆ. ಇವತ್ತು ನಮ್ಮ ಸಮಾಜ ವ್ಯಕ್ತಿ ಸಿಎಂ ಆಗಿದ್ದಾರೆ, ಅವರ ಮೇಲಿನ ಅಸೂಯೆಗೆ ಹೊಟ್ಟೆ ಕಿವುಚಿಕೊಂಡು ಇದನ್ನೆಲ್ಲ ಹೇಳುತ್ತಿಲ್ಲ ನಾನು. ಎಂತಹ ದಾರಿದ್ರ್ಯ ರಾಜ್ಯಕ್ಕೆ ಬಂತು ಎಂಬ ನೋವಿನಿಂದ ಹೇಳಿದ್ದೇನೆ. ಇದೇನಾದರೂ ಮುಂದುವರೆದರೆ ಈ ರಾಜ್ಯ ಏನಾಗುತ್ತದೆ? ಅರ್ಥ ಮಾಡಿಕೊಳ್ಳಿ ಎಂದು ಹೇಳುತ್ತಿದ್ದೇನೆ ಅಷ್ಟೇ ಎಂದರು ಕುಮಾರಸ್ವಾಮಿ.

ಕಾಂಗ್ರೆಸ್ ಪಕ್ಷದ ಕೆಲವರು ಇವತ್ತು ಸಿದ್ದರಾಮಯ್ಯ ಅವರನ್ನು ಮುಗಿಸಿ, ಈಗ ಹೊಸ ರಾಜಕೀಯ ಮಾಡೋಕೆ ಹೊರಟಿದ್ದಾರೆ. ಅದರ ಫಲವಾಗಿ2028ಕ್ಕೆ ಜನ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಸಚಿವರು ಎಚ್ಚರಿಕೆ ನೀಡಿದರು.

Tags: ckcknewsnowCongresshd kumaraswamyjdskarnatakaPriyank Khargesting operation case
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಂತರಾಜು ವರದಿ ನೈಜತೆ ಬಗ್ಗೆ ಅನುಮಾನಗಳಿವೆ ಎಂದ ಅಶೋಕ್

ಸಾರಿಗೆ ನಿಗಮಗಳಿಗೆ ₹5,650 ಕೋಟಿ ಬಾಕಿ! ಜನರ ಮೇಲೆ ದರ ಏರಿಕೆಯ ಹೊರೆ

by cknewsnow desk
November 5, 2026
0

ಸಾರಿಗೆ ನಿಗಮಗಳ ಒಟ್ಟು ಹೊಣೆಗಾರಿಕೆ ₹7,130.80 ಕೋಟಿ

ಕೇಂದ್ರ ಪೆಟ್ರೋಲ್, ಡೀಸೆಲ್ ದರ ಇಳಿಸಿದರೆ ಬಸ್ ಪ್ರಯಾಣ ದರ ಕಡಿಮೆ ಮಾಡುತ್ತೇವೆ

ಕೇಂದ್ರ ಪೆಟ್ರೋಲ್, ಡೀಸೆಲ್ ದರ ಇಳಿಸಿದರೆ ಬಸ್ ಪ್ರಯಾಣ ದರ ಕಡಿಮೆ ಮಾಡುತ್ತೇವೆ

by cknewsnow desk
November 5, 2026
0

ಮಹಿಳೆಯರಿಗೆ ಫ್ರೀ ಬಸ್ ಕೊಟ್ಟಿದ್ದಕ್ಕೆ ಆರ್ಥಿಕ ಹೊರೆ ಆಗಿದೆ ಎಂದ ಮುಖ್ಯಮಂತ್ರಿ

ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಅಗತ್ಯವಿಲ್ಲ: ರಾಜಮಾತೆ ಪ್ರಮೋದಾ ದೇವಿ ಒಡೆಯರ್

ಮೈಸೂರು ಅರಮನೆ ಖಾಸಗಿ ಸ್ವತ್ತು, ಸರ್ಕಾರ ಕಟ್ಟಿಸಿದ್ದಲ್ಲ; ರಾಜಮಾತೆ ಪ್ರಮೋದಾ ದೇವಿ

by cknewsnow desk
November 4, 2026
0

ಸರಕಾರ ಬೇಕಾದರೆ ಇನ್ನೊಂದು ಅಂಬಾರಿಯನ್ನು ಮಾಡಿಸಿಕೊಳ್ಳಲಿ

ಬಸ್‌ ಪ್ರಯಾಣ ದರ ಶೇ.23ರಿಂದ ಶೇ.37ರಷ್ಟು ಹೆಚ್ಚಳ

ಬಸ್‌ ಪ್ರಯಾಣ ದರ ಶೇ.23ರಿಂದ ಶೇ.37ರಷ್ಟು ಹೆಚ್ಚಳ

by cknewsnow desk
November 4, 2026
0

ಇಂದು ಮಧ್ಯರಾತ್ರಿಯಿಂದಲೇ ಬರೆ ಏರಿಕೆ ಜಾರಿ

ಹಾಸನ ಪ್ರಕರಣದಲ್ಲಿ ಅಶ್ಲೀಲ ವಿಡಿಯೋಗಳನ್ನು ಹರಡಿದ A2 ಜತೆ ಡಿಕೆಶಿ ನಂಟು!

ಹಾಸನ ಪ್ರಕರಣದಲ್ಲಿ ಅಶ್ಲೀಲ ವಿಡಿಯೋಗಳನ್ನು ಹರಡಿದ A2 ಜತೆ ಡಿಕೆಶಿ ನಂಟು!

by cknewsnow desk
November 4, 2026
0

ಪ್ರಿಯಾಂಕ್ ಖರ್ಗೆ ಪಾಸ್ ಟ್ರೇಲರ್ ಹೈ.. ಹಮಾರೇ ಪಾಸ್ ಪಿಕ್ಚರ್ ಹೈ

ಸ್ಟಿಂಗ್ ವಿರುದ್ಧ ಕೋರ್ಟ್ ಮೊರೆ ಹೋದ ಸಿದ್ದರಾಮಯ್ಯ! ಇಂದು ಆದೇಶ ನಿರೀಕ್ಷೆ

ವಿಡಿಯೋದಲ್ಲಿರುವ ಕೇರಳ ಮಹಿಳೆ ಸ್ಟಿಂಗ್ ಪಿತೂರಿ ಭಾಗ!

by cknewsnow desk
November 4, 2026
0

ತನಿಖೆ ದಾರಿ ತಪ್ಪಿಸಿದ ಪೊಲೀಸ್ ಆಯುಕ್ತರು; ಸುಪ್ರೀಂ ಕೋರ್ಟ್ ಮಾರ್ಗಸೂಚಿ ಉಲ್ಲಂಘನೆ ಎಂದು ಆರೋಪಿಸಿದ ಕೇಂದ್ರ ಸಚಿವರು

Next Post
ಸ್ಟಿಂಗ್ ವಿರುದ್ಧ ಕೋರ್ಟ್ ಮೊರೆ ಹೋದ ಸಿದ್ದರಾಮಯ್ಯ! ಇಂದು ಆದೇಶ ನಿರೀಕ್ಷೆ

ವಿಡಿಯೋದಲ್ಲಿರುವ ಕೇರಳ ಮಹಿಳೆ ಸ್ಟಿಂಗ್ ಪಿತೂರಿ ಭಾಗ!

Leave a Reply Cancel reply

Your email address will not be published. Required fields are marked *

Recommended

ಚಿಕ್ಕಬಳ್ಳಾಪುರ-ಕೋಲಾರ ಕೆರೆಗಳಿಗೆ ಹರಿಸುವ ತ್ಯಾಜ್ಯ ನೀರು 3ನೇ ಹಂತದ ಶುದ್ಧೀಕರಣ

ಚಿಕ್ಕಬಳ್ಳಾಪುರ-ಕೋಲಾರ ಕೆರೆಗಳಿಗೆ ಹರಿಸುವ ತ್ಯಾಜ್ಯ ನೀರು 3ನೇ ಹಂತದ ಶುದ್ಧೀಕರಣ

5 years ago
ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ-2021 ಪ್ರಕಟ: ವೈಮಾನಿಕ-ರಕ್ಷಣೆ ಸೇರಿ 5 ಆದ್ಯತಾ ವಲಯಗಳಲ್ಲಿ ಕ್ರಾಂತಿಕಾರಿ ಮುನ್ನಡೆ ಸಾಧಿಸಲು ಕರ್ನಾಟಕ ಸಜ್ಜು

ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ-2021 ಪ್ರಕಟ: ವೈಮಾನಿಕ-ರಕ್ಷಣೆ ಸೇರಿ 5 ಆದ್ಯತಾ ವಲಯಗಳಲ್ಲಿ ಕ್ರಾಂತಿಕಾರಿ ಮುನ್ನಡೆ ಸಾಧಿಸಲು ಕರ್ನಾಟಕ ಸಜ್ಜು

6 years ago

Popular News

  • ಕಾಂತರಾಜು ವರದಿ ನೈಜತೆ ಬಗ್ಗೆ ಅನುಮಾನಗಳಿವೆ ಎಂದ ಅಶೋಕ್

    ಸಾರಿಗೆ ನಿಗಮಗಳಿಗೆ ₹5,650 ಕೋಟಿ ಬಾಕಿ! ಜನರ ಮೇಲೆ ದರ ಏರಿಕೆಯ ಹೊರೆ

    0 shares
    Share 0 Tweet 0
  • ಕೇಂದ್ರ ಪೆಟ್ರೋಲ್, ಡೀಸೆಲ್ ದರ ಇಳಿಸಿದರೆ ಬಸ್ ಪ್ರಯಾಣ ದರ ಕಡಿಮೆ ಮಾಡುತ್ತೇವೆ

    0 shares
    Share 0 Tweet 0
  • ಮೈಸೂರು ಅರಮನೆ ಖಾಸಗಿ ಸ್ವತ್ತು, ಸರ್ಕಾರ ಕಟ್ಟಿಸಿದ್ದಲ್ಲ; ರಾಜಮಾತೆ ಪ್ರಮೋದಾ ದೇವಿ

    0 shares
    Share 0 Tweet 0
  • ಬಸ್‌ ಪ್ರಯಾಣ ದರ ಶೇ.23ರಿಂದ ಶೇ.37ರಷ್ಟು ಹೆಚ್ಚಳ

    0 shares
    Share 0 Tweet 0
  • ಹಾಸನ ಪ್ರಕರಣದಲ್ಲಿ ಅಶ್ಲೀಲ ವಿಡಿಯೋಗಳನ್ನು ಹರಡಿದ A2 ಜತೆ ಡಿಕೆಶಿ ನಂಟು!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಂತರಾಜು ವರದಿ ನೈಜತೆ ಬಗ್ಗೆ ಅನುಮಾನಗಳಿವೆ ಎಂದ ಅಶೋಕ್

ಸಾರಿಗೆ ನಿಗಮಗಳಿಗೆ ₹5,650 ಕೋಟಿ ಬಾಕಿ! ಜನರ ಮೇಲೆ ದರ ಏರಿಕೆಯ ಹೊರೆ

November 5, 2026
ಕೇಂದ್ರ ಪೆಟ್ರೋಲ್, ಡೀಸೆಲ್ ದರ ಇಳಿಸಿದರೆ ಬಸ್ ಪ್ರಯಾಣ ದರ ಕಡಿಮೆ ಮಾಡುತ್ತೇವೆ

ಕೇಂದ್ರ ಪೆಟ್ರೋಲ್, ಡೀಸೆಲ್ ದರ ಇಳಿಸಿದರೆ ಬಸ್ ಪ್ರಯಾಣ ದರ ಕಡಿಮೆ ಮಾಡುತ್ತೇವೆ

November 5, 2026
ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಅಗತ್ಯವಿಲ್ಲ: ರಾಜಮಾತೆ ಪ್ರಮೋದಾ ದೇವಿ ಒಡೆಯರ್

ಮೈಸೂರು ಅರಮನೆ ಖಾಸಗಿ ಸ್ವತ್ತು, ಸರ್ಕಾರ ಕಟ್ಟಿಸಿದ್ದಲ್ಲ; ರಾಜಮಾತೆ ಪ್ರಮೋದಾ ದೇವಿ

November 4, 2026
ಬಸ್‌ ಪ್ರಯಾಣ ದರ ಶೇ.23ರಿಂದ ಶೇ.37ರಷ್ಟು ಹೆಚ್ಚಳ

ಬಸ್‌ ಪ್ರಯಾಣ ದರ ಶೇ.23ರಿಂದ ಶೇ.37ರಷ್ಟು ಹೆಚ್ಚಳ

November 4, 2026

Covid 19

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

October 16, 2026
ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ