• About
  • Advertise
  • Careers
  • Contact
Thursday, November 5, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS NATION

ಹಾಸನ ಪ್ರಕರಣದಲ್ಲಿ ಅಶ್ಲೀಲ ವಿಡಿಯೋಗಳನ್ನು ಹರಡಿದ A2 ಜತೆ ಡಿಕೆಶಿ ನಂಟು!

cknewsnow desk by cknewsnow desk
November 4, 2026
in NATION, NEWS & VIEWS, POLITICS, STATE
Reading Time: 1 min read
0
ಹಾಸನ ಪ್ರಕರಣದಲ್ಲಿ ಅಶ್ಲೀಲ ವಿಡಿಯೋಗಳನ್ನು ಹರಡಿದ A2 ಜತೆ ಡಿಕೆಶಿ ನಂಟು!
913
VIEWS
FacebookTwitterWhatsuplinkedinEmail

ಪ್ರಿಯಾಂಕ್ ಖರ್ಗೆ ಪಾಸ್ ಟ್ರೇಲರ್ ಹೈ.. ಹಮಾರೇ ಪಾಸ್ ಪಿಕ್ಚರ್ ಹೈ

ಡಿಕೆಶಿ- ಆರೋಪಿ ಕಾರ್ತಿಕ್ ಭೇಟಿ ಕುರಿತು CDR ದಾಖಲೆ ಪ್ರದರ್ಶಿಸಿದ ಕೇಂದ್ರ ಸಚಿವರು

ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ

ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರ ಕಾರು ಚಾಲಕನಾಗಿದ್ದ , ಅಶ್ಲೀಲ ವಿಡಿಯೋಗಳನ್ನು ಹಂಚಿದ ಆರೋಪ ಎದುರಿಸುತ್ತಿರುವ ಕಾರ್ತಿಕ್ ಮತ್ತು ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ನೇರ ನಂಟಿದೆ ಎಂದು ಆರೋಪಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ಅದಕ್ಕೆ ಸಂಬಂಧಿಸಿದ ದಾಖಲೆಯನ್ನು ಮಾಧ್ಯಮಗೋಷ್ಠಿಯಲ್ಲಿ ಪ್ರದರ್ಶಿಸಿದರು.

ಜೆಡಿಎಸ್ ಪಕ್ಷದ ಕೇಂದ್ರ ಕಚೇರಿಯಲ್ಲಿ ಕಿಕ್ಕಿರಿದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು; ಮಾಜಿ ಸಿಎಂ ವಿರುದ್ಧ ಸ್ಟಿಂಗ್ ವಿಡಿಯೋ ಹರಡಿದ ವ್ಯಕ್ತಿ ಜತೆ ನನಗೆ ಸಂಬಂಧವಿದೆ ಎಂದು ಇವರು ಆರೋಪ ಮಾಡಿದ್ದಾರೆ. ಈ ಸರ್ಕಾರಕ್ಕೆ ಮತ್ತು ರಾಜ್ಯದ ಜನತೆಗೆ ಒಂದು ಮಾಹಿತಿಯನ್ನು ತಿಳಿಸಲು ಬಯಸುತ್ತೇನೆ. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ 2ನೇ ಆರೋಪಿ ಕಾರ್ತಿಕ್ ಜತೆ ಹಾಲಿ ಮುಖ್ಯಮಂತ್ರಿ ಸಂಬಂಧ ಹೊಂದಿದ್ದಾರೆ. ಕಾರ್ತಿಕ್ ಎನ್ನುವ ವ್ಯಕ್ತಿ ಡಿಕೆಶಿ ಮನೆಗೆ ಬಂದಿರುವ ಸಿಡಿಆರ್ ದಾಖಲೆ ನನ್ನ ಬಳಿ ಇದೆ. ಅಶ್ಲೀಲ ವಿಡಿಯೋಗಳನ್ನು ಹಂಚಿದ ಪ್ರಕರಣದಲ್ಲಿ ಕಾರ್ತಿಕ್ ಮತ್ತು ಡಿಕೆಶಿ ಇಬ್ಬರೂ ಶಾಮೀಲಾಗಿದ್ದಾರೆ ಎಂದು ಕೇಂದ್ರ ಸಚಿವರು ಗಂಭೀರ ಆರೋಪ ಮಾಡಿದರು.

ನನ್ನ ಮೇಲೆ ಆರೋಪ ಮಾಡುವ ಮುಖ್ಯಮಂತ್ರಿ, ತಾವು ಎಸಗಿರುವ ಅಕ್ರಮದ ಬಗ್ಗೆ ಏನು ಹೇಳುತ್ತಾರೆ? ಅದರ ಬಗ್ಗೆ ನಾನು ನೇರವಾಗಿ ಜನರಿಗೆ ಹೇಳಿದ್ದೇನೆ. ಈ ವ್ಯಕ್ತಿಯ ಬಗ್ಗೆ ಜನರೇ ತೀರ್ಮಾನ ಮಾಡಲಿ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.

ಪ್ರಜ್ವಲ್ ರೇವಣ್ಣ ಮಾಜಿ ಚಾಲಕ ಕಾರ್ತಿಕ್ ಎಂಬಾತ ಅಶ್ಲೀಲ ವಿಡಿಯೋಗಳು ಹೊರಕ್ಕೆ ಬರುವ ಮೊದಲೇ 2023 ಆಗಸ್ಟ್ 5 ಮತ್ತು 6ರಂದು ಅಂದಿನ ಡಿಸಿಎಂ ಆಗಿದ್ದ ಡಿ.ಕೆ ಶಿವಕುಮಾರ್ ಅವರ ಮನೆಗೆ ಭೇಟಿ ನೀಡಿದ್ದರು. ಇದರ ದಾಖಲೆಗಳು ನನ್ನ ಬಳಿ ಇವೆ ನೋಡಿ ಎಂದು ಸಚಿವರು ಹೇಳಿದರು.

ಪ್ರಕರಣದ ಎರಡನೇ ಆರೋಪಿ ಕಾರ್ತಿಕ್ ಜತೆ ಹಾಲಿ ಮುಖ್ಯಮಂತ್ರಿ ಹೊಂದಿದ್ದ ಸಂಬಂಧದ ಅವರು ಉತ್ತರ ಕೊಡಲೇಬೇಕಾಗುತ್ತದೆ. ಈ ಬಗ್ಗೆ ಬಹಿರಂಗವಾಗಿ ಡಿಕೆಶಿ ಅವರು ಸ್ಪಷ್ಟೀಕರಣ ನೀಡಬೇಕು. ಪ್ರಿಯಾಂಕ್ ಖರ್ಗೆ ಪಾಸ್ ಟ್ರೇಲರ್ ಹೈ.. ಹಮಾರೇ ಪಾಸ್ ಪಿಕ್ಚರ್ ಹೈ ಎಂದ ಕುಮಾರಸ್ವಾಮಿ ಅವರು ಗುಡುಗಿದರು.

ಪೊಲೀಸ್ ಆಯುಕ್ತರು ಹೇಳಿಕೆ ಕೊಟ್ಟಿದ್ದಾರೆ. ಹೇಳಿಕೆ ಬಂದ ಮೇಲೆ ಅನೇಕ ವ್ಯಾಖ್ಯಾನಗಳು ಆಗಿವೆ. ಸ್ಟಿಂಗ್ ಆಪರೇಷನ್ ಕುಮಾರಸ್ವಾಮಿಗೆ ತಿರುಗುಬಾಣ ಆಗುತ್ತದೆ ಎಂದು ಹೇಳುತ್ತಿದ್ದಾರೆ. ಕಾರ್ತಿಕ್ ವಿಷಯದಲ್ಲಿ ಯಾರಿಗೆ ತಿರುಗುಬಾಣ ಆಗುತ್ತದೆ ಎಂಬುದನ್ನು ನಾನು ಚರ್ಚೆ ಮಾಡಲು ಹೋಗುವುದಿಲ್ಲ. ಆದರೆ, ಈ ಮುಖ್ಯಮಂತ್ರಿ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಚಿವರು ಹೇಳಿದರು.

ಪ್ರಜ್ವಲ್ ರೇವಣ್ಣ ಅವರ ವಿಷಯವನ್ನು ಇಟ್ಟುಕೊಂಡು ಕಾಂಗ್ರೆಸ್ ನಾಯಕರು ನಮ್ಮ ಕುಟುಂಬವನ್ನು ಮುಗಿಸಲು ಹೊರಟಿದೆ. ಅಲ್ಲದೆ, ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯನ್ನು ತಪ್ಪಿಸಲು ಇವರು ಅಶ್ಲೀಲ ವೀಡಿಯೊಗಳನ್ನು ಬಳಸಿಕೊಂಡರು. ಆ ಮಹಿಳೆಯರ ಮುಖಗಳನ್ನು ಮರೆಮಾಚದೆ ವಿಡಿಯೋಗಳನ್ನು ಹಾಗೆಯೇ ಹೊರಗೆ ಬಿಟ್ಟರು. ಇಂತಹ ವಿಡಿಯೋಗಳನ್ನು ಹರಡಿದ ಕಾರ್ತಿಕ್‌ನನ್ನು ಡಿಕೆಶಿ ಭೇಟಿ ಮಾಡಿದ್ದಾರೆ ಎಂದರೆ ಏನರ್ಥ? ನಾನು ಆ ಕಾರ್ತಿಕ್ ನನ್ನು ತನ್ನ ಮನೆಗೆ ಕರೆಸಿಕೊಂಡಿರಲಿಲ್ಲ ಎಂದು ಈ ಮುಖ್ಯಮಂತ್ರಿ ಎದೆ ಮುಟ್ಟಿಕೊಂಡು ಹೇಳಲಿ ಎಂದು ಸಚಿವರು ಸವಾಲು ಹಾಕಿದರು.

ಇಂತಹ ಆರೋಪ ಹೊತ್ತ ವ್ಯಕ್ತಿ ಜತೆ ಸಂಬಂಧ ಹೊಂದಿರುವ ಮುಖ್ಯಮಂತ್ರಿ ನನ್ನ ವಿರುದ್ಧ ಆರೋಪ ಹೊರಿಸಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅವರ ದುರುದ್ದೇಶ ಸಫಲ ಆಗುವುದಿಲ್ಲ ಎಂದು ಸಚಿವರು ಹೇಳಿದರು.

ಸಚಿವ ಕಾಶಪ್ಪನವರ್ ನೀಡಿರುವ ಹೇಳಿಕೆ ಗಮನಿಸಿದ್ದೇನೆ. ಕುಮಾರಸ್ವಾಮಿ ಪ್ರಜ್ವಲ್ ಪೆನ್ ಡ್ರೈವ್ ಹಂಚಿಕೆ ಮಾಡಿದ್ದರು ಎಂದು ಹೇಳಿದ್ದಾರೆ ಎಂದಿದ್ದಾರೆ. ಮಂಡ್ಯದವನೊಬ್ಬ ದೇವೇಗೌಡರ ಕುಟುಂಬವನ್ನು ಮುಗಿಸುತ್ತೇವೆ ಎನ್ನುತ್ತಾನೆ. ಇವರಿಗೆ ಮಾನವೀಯತೆ ಎನ್ನುವುದು ಇದೆಯಾ? ಹಾಸನ ಪ್ರಕರಣದಲ್ಲಿ ಎಷ್ಟು ಮಹಿಳೆಯರು ದೂರು ನೀಡಿದ್ದಾರೆ? ಎಷ್ಟು ಜನಕ್ಕೆ ಈ ಸರಕಾರ ನ್ಯಾಯ ಕೊಡಿಸಿದೆ. ಅಂದಿನ ಸಿಎಂ, ಡಿಸಿಎಂ ಇಬ್ಬರೂ ನಮ್ಮ ವಿರುದ್ಧ ಹಗೆ ಸಾಧಿಸಿದರು. ಸುರ್ಜೇವಾಲ, ರಾಹುಲ್ ಗಾಂಧಿ ಎಲ್ಲರೂ ಸೇರಿ ಕುತಂತ್ರ ನಡೆಸಿದರು. ರಾಹುಲ್ ಗಾಂಧಿ ಪ್ರಧಾನಿ ಆಗಬೇಕು, ದೇವೇಗೌಡರು ನರೇಂದ್ರ ಮೋದಿ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ಹೀಗಾಗಿ ಅವರ ಕುಟುಂಬವನ್ನು ನಿರ್ನಾಮ ಮಾಡಲೇಬೇಕು ಎಂದು ಷಡ್ಯಂತ್ರ್ಯ ನಡೆಸಿದರು. ಹಾಲಿ ಮುಖ್ಯಮಂತ್ರಿ ಮಾತಿನಲ್ಲೇ ಹೇಳುವುದಾದರೆ ಕಾಲವೇ ನಿರ್ಣಯ ಮಾಡುತ್ತದೆ ಎಂದರು ಕುಮಾರಸ್ವಾಮಿ.

Tags: cknewsnowhd kumaraswamykarnatakaKarnataka sting operationnewssiddaramaiah
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಂತರಾಜು ವರದಿ ನೈಜತೆ ಬಗ್ಗೆ ಅನುಮಾನಗಳಿವೆ ಎಂದ ಅಶೋಕ್

ಸಾರಿಗೆ ನಿಗಮಗಳಿಗೆ ₹5,650 ಕೋಟಿ ಬಾಕಿ! ಜನರ ಮೇಲೆ ದರ ಏರಿಕೆಯ ಹೊರೆ

by cknewsnow desk
November 5, 2026
0

ಸಾರಿಗೆ ನಿಗಮಗಳ ಒಟ್ಟು ಹೊಣೆಗಾರಿಕೆ ₹7,130.80 ಕೋಟಿ

ಕೇಂದ್ರ ಪೆಟ್ರೋಲ್, ಡೀಸೆಲ್ ದರ ಇಳಿಸಿದರೆ ಬಸ್ ಪ್ರಯಾಣ ದರ ಕಡಿಮೆ ಮಾಡುತ್ತೇವೆ

ಕೇಂದ್ರ ಪೆಟ್ರೋಲ್, ಡೀಸೆಲ್ ದರ ಇಳಿಸಿದರೆ ಬಸ್ ಪ್ರಯಾಣ ದರ ಕಡಿಮೆ ಮಾಡುತ್ತೇವೆ

by cknewsnow desk
November 5, 2026
0

ಮಹಿಳೆಯರಿಗೆ ಫ್ರೀ ಬಸ್ ಕೊಟ್ಟಿದ್ದಕ್ಕೆ ಆರ್ಥಿಕ ಹೊರೆ ಆಗಿದೆ ಎಂದ ಮುಖ್ಯಮಂತ್ರಿ

ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಅಗತ್ಯವಿಲ್ಲ: ರಾಜಮಾತೆ ಪ್ರಮೋದಾ ದೇವಿ ಒಡೆಯರ್

ಮೈಸೂರು ಅರಮನೆ ಖಾಸಗಿ ಸ್ವತ್ತು, ಸರ್ಕಾರ ಕಟ್ಟಿಸಿದ್ದಲ್ಲ; ರಾಜಮಾತೆ ಪ್ರಮೋದಾ ದೇವಿ

by cknewsnow desk
November 4, 2026
0

ಸರಕಾರ ಬೇಕಾದರೆ ಇನ್ನೊಂದು ಅಂಬಾರಿಯನ್ನು ಮಾಡಿಸಿಕೊಳ್ಳಲಿ

ಬಸ್‌ ಪ್ರಯಾಣ ದರ ಶೇ.23ರಿಂದ ಶೇ.37ರಷ್ಟು ಹೆಚ್ಚಳ

ಬಸ್‌ ಪ್ರಯಾಣ ದರ ಶೇ.23ರಿಂದ ಶೇ.37ರಷ್ಟು ಹೆಚ್ಚಳ

by cknewsnow desk
November 4, 2026
0

ಇಂದು ಮಧ್ಯರಾತ್ರಿಯಿಂದಲೇ ಬರೆ ಏರಿಕೆ ಜಾರಿ

ಸ್ಟಿಂಗ್ ವಿರುದ್ಧ ಕೋರ್ಟ್ ಮೊರೆ ಹೋದ ಸಿದ್ದರಾಮಯ್ಯ! ಇಂದು ಆದೇಶ ನಿರೀಕ್ಷೆ

ವಿಡಿಯೋದಲ್ಲಿರುವ ಕೇರಳ ಮಹಿಳೆ ಸ್ಟಿಂಗ್ ಪಿತೂರಿ ಭಾಗ!

by cknewsnow desk
November 4, 2026
0

ತನಿಖೆ ದಾರಿ ತಪ್ಪಿಸಿದ ಪೊಲೀಸ್ ಆಯುಕ್ತರು; ಸುಪ್ರೀಂ ಕೋರ್ಟ್ ಮಾರ್ಗಸೂಚಿ ಉಲ್ಲಂಘನೆ ಎಂದು ಆರೋಪಿಸಿದ ಕೇಂದ್ರ ಸಚಿವರು

ಗೃಹ ಇಲಾಖೆ ನಡೆಸುವುದಕ್ಕೆ ಪ್ರಿಯಾಂಕ್ ಖರ್ಗೆ Unfit ಎಂದ ಹೆಚ್.ಡಿ.ಕುಮಾರಸ್ವಾಮಿ

ಗೃಹ ಇಲಾಖೆ ನಡೆಸುವುದಕ್ಕೆ ಪ್ರಿಯಾಂಕ್ ಖರ್ಗೆ Unfit ಎಂದ ಹೆಚ್.ಡಿ.ಕುಮಾರಸ್ವಾಮಿ

by cknewsnow desk
November 4, 2026
0

ಸ್ಟಿಂಗ್ ತನಿಖೆಯ ವಾಗ್ದಾಳಿ ಮುಂದುವರಿಸಿದ ಕೇಂದ್ರ ಸಚಿವರು; ಸಂತ್ರಸ್ತೆ ಕಲಿಸಿದ್ದ ಈ ಮೇಲ್ ಎಲ್ಲಿ ಹೋಯಿತು ಖರ್ಗೆ ಅವರೇ ಎಂದು ಕಿಡಿ

Next Post
ಬಸ್‌ ಪ್ರಯಾಣ ದರ ಶೇ.23ರಿಂದ ಶೇ.37ರಷ್ಟು ಹೆಚ್ಚಳ

ಬಸ್‌ ಪ್ರಯಾಣ ದರ ಶೇ.23ರಿಂದ ಶೇ.37ರಷ್ಟು ಹೆಚ್ಚಳ

Leave a Reply Cancel reply

Your email address will not be published. Required fields are marked *

Recommended

ಸಿದ್ದರಾಮಯ್ಯ ʼಗೊಬೆಲಪ್ಪʼ, ʼಬ್ರೋಕರಪ್ಪʼ ಎಂದ ಮಾಜಿ ಸಿಎಂ

ದೇವೇಗೌಡರ ಮೇಲೆ ಆಣೆ ಮಾಡು ಎನ್ನಲಿಕ್ಕೆ ನೀನು ಯಾವೂರು ದಾಸಯ್ಯ?

5 years ago
ಚಿಕ್ಕಬಳ್ಳಾಪುರ, ಕೋಲಾರಕ್ಕೆ ಎತ್ತಿನಹೊಳೆ ನೀರು ಬರಲು ಬಿಜೆಪಿ ಸರಕಾರ ಬಿಡುತ್ತಿಲ್ಲ: ಕೃಷ್ಣ ಭೈರೇಗೌಡ

ಚಿಕ್ಕಬಳ್ಳಾಪುರ, ಕೋಲಾರಕ್ಕೆ ಎತ್ತಿನಹೊಳೆ ನೀರು ಬರಲು ಬಿಜೆಪಿ ಸರಕಾರ ಬಿಡುತ್ತಿಲ್ಲ: ಕೃಷ್ಣ ಭೈರೇಗೌಡ

5 years ago

Popular News

  • ಕಾಂತರಾಜು ವರದಿ ನೈಜತೆ ಬಗ್ಗೆ ಅನುಮಾನಗಳಿವೆ ಎಂದ ಅಶೋಕ್

    ಸಾರಿಗೆ ನಿಗಮಗಳಿಗೆ ₹5,650 ಕೋಟಿ ಬಾಕಿ! ಜನರ ಮೇಲೆ ದರ ಏರಿಕೆಯ ಹೊರೆ

    0 shares
    Share 0 Tweet 0
  • ಕೇಂದ್ರ ಪೆಟ್ರೋಲ್, ಡೀಸೆಲ್ ದರ ಇಳಿಸಿದರೆ ಬಸ್ ಪ್ರಯಾಣ ದರ ಕಡಿಮೆ ಮಾಡುತ್ತೇವೆ

    0 shares
    Share 0 Tweet 0
  • ಮೈಸೂರು ಅರಮನೆ ಖಾಸಗಿ ಸ್ವತ್ತು, ಸರ್ಕಾರ ಕಟ್ಟಿಸಿದ್ದಲ್ಲ; ರಾಜಮಾತೆ ಪ್ರಮೋದಾ ದೇವಿ

    0 shares
    Share 0 Tweet 0
  • ಬಸ್‌ ಪ್ರಯಾಣ ದರ ಶೇ.23ರಿಂದ ಶೇ.37ರಷ್ಟು ಹೆಚ್ಚಳ

    0 shares
    Share 0 Tweet 0
  • ಹಾಸನ ಪ್ರಕರಣದಲ್ಲಿ ಅಶ್ಲೀಲ ವಿಡಿಯೋಗಳನ್ನು ಹರಡಿದ A2 ಜತೆ ಡಿಕೆಶಿ ನಂಟು!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಂತರಾಜು ವರದಿ ನೈಜತೆ ಬಗ್ಗೆ ಅನುಮಾನಗಳಿವೆ ಎಂದ ಅಶೋಕ್

ಸಾರಿಗೆ ನಿಗಮಗಳಿಗೆ ₹5,650 ಕೋಟಿ ಬಾಕಿ! ಜನರ ಮೇಲೆ ದರ ಏರಿಕೆಯ ಹೊರೆ

November 5, 2026
ಕೇಂದ್ರ ಪೆಟ್ರೋಲ್, ಡೀಸೆಲ್ ದರ ಇಳಿಸಿದರೆ ಬಸ್ ಪ್ರಯಾಣ ದರ ಕಡಿಮೆ ಮಾಡುತ್ತೇವೆ

ಕೇಂದ್ರ ಪೆಟ್ರೋಲ್, ಡೀಸೆಲ್ ದರ ಇಳಿಸಿದರೆ ಬಸ್ ಪ್ರಯಾಣ ದರ ಕಡಿಮೆ ಮಾಡುತ್ತೇವೆ

November 5, 2026
ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಅಗತ್ಯವಿಲ್ಲ: ರಾಜಮಾತೆ ಪ್ರಮೋದಾ ದೇವಿ ಒಡೆಯರ್

ಮೈಸೂರು ಅರಮನೆ ಖಾಸಗಿ ಸ್ವತ್ತು, ಸರ್ಕಾರ ಕಟ್ಟಿಸಿದ್ದಲ್ಲ; ರಾಜಮಾತೆ ಪ್ರಮೋದಾ ದೇವಿ

November 4, 2026
ಬಸ್‌ ಪ್ರಯಾಣ ದರ ಶೇ.23ರಿಂದ ಶೇ.37ರಷ್ಟು ಹೆಚ್ಚಳ

ಬಸ್‌ ಪ್ರಯಾಣ ದರ ಶೇ.23ರಿಂದ ಶೇ.37ರಷ್ಟು ಹೆಚ್ಚಳ

November 4, 2026

Covid 19

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

October 16, 2026
ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ