• About
  • Advertise
  • Careers
  • Contact
Thursday, November 5, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS NEWS IN USE

ಬಸ್‌ ಪ್ರಯಾಣ ದರ ಶೇ.23ರಿಂದ ಶೇ.37ರಷ್ಟು ಹೆಚ್ಚಳ

cknewsnow desk by cknewsnow desk
November 4, 2026
in NEWS IN USE, STATE
Reading Time: 1 min read
0
ಬಸ್‌ ಪ್ರಯಾಣ ದರ ಶೇ.23ರಿಂದ ಶೇ.37ರಷ್ಟು ಹೆಚ್ಚಳ
919
VIEWS
FacebookTwitterWhatsuplinkedinEmail

ಇಂದು ಮಧ್ಯರಾತ್ರಿಯಿಂದಲೇ ಬರೆ ಏರಿಕೆ ಜಾರಿ

Lead photo: Decison joseph from pixels

ಬೆಂಗಳೂರು: ಹಾಲು ದರ ಏರಿಕೆ ಬೆನ್ನಲ್ಲೇ ಸರ್ಕಾರ ರಾಜ್ಯ ರಸ್ತೆ ಸಾರಿಗೆ ಬಸ್‌ ಪ್ರಯಾಣ ದರವನ್ನೂ ಶೇಕಡ 23ರಿಂದ 37ರಷ್ಟು ಹೆಚ್ಚಳ ಮಾಡಿದ್ದು, ಹೊಸ ದರ ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾರಿಗೆ ಸಚಿವ ಬೈರತಿ ಸುರೇಶ್‌, ಸಾರಿಗೆ ನಿಗಮಗಳ ನಷ್ಟ ಭರಿಸಲು ದರ ಹೆಚ್ಚಳ ಅನಿವಾರ್ಯ ಎಂದು ಸಮರ್ಥಿಸಿಕೊಂಡರು.

ಡೀಸೆಲ್‌ ಬೆಲೆ ಏರಿಕೆ

ಸತತವಾಗಿ ಡೀಸೆಲ್‌ ಬೆಲೆ ಏರಿಕೆ, ನೌಕರರ ವೇತನ ಮತ್ತು ಕಾರ್ಯಾಚರಣೆ ವೆಚ್ಚವೇ ದರ ಹೆಚ್ಚಳ ಮಾಡಲು ಕಾರಣ ಎಂದಿದ್ದಾರೆ. ಪ್ರಯಾಣಿಕರಿಗೆ ಹೊರೆ ಆಗದಂತೆ, ನಿಗಮಗಳನ್ನು ಉಳಿಸುವ ಉದ್ದೇಶದಿಂದ ಕಿಲೋ ಮೀಟರ್‌ ಮತ್ತು ಸ್ಟೇಜ್‌ ಆಧಾರದ ಮೇಲೆ ಪ್ರಯಾಣ ದರ ಏರಿಕೆ ಮಾಡಲಾಗಿದೆ. ನಗರ ಸಾರಿಗೆ ದರದಲ್ಲಿ ಅತಿಹೆಚ್ಚು ಅಂದರೆ 9 ರೂ., ಗ್ರಾಮೀಣ ಸಾರಿಗೆ ದರ ಸ್ಟೇಜ್‌ ಆಧಾರದ ಮೇಲೆ ಹೆಚ್ಚಳ ಮಾಡಿದ್ದೇವೆ.

ಕನಿಷ್ಠ ದರ ಪರಿಷ್ಕರಣೆ

ಹವಾನಿಯಂತ್ರಿತ ಬಸ್‌ಗಳಿಗೆ ಪ್ರಯಾಣಿಕರನ್ನು ಆಕರ್ಷಿಸಲು ಅತ್ಯಂತ ಕನಿಷ್ಠ ಪ್ರಮಾಣದಲ್ಲಿ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಸಚಿವರು ಅಂಕಿ-ಅಂಶ ನೀಡಿದರು.

ಶಕ್ತಿ ಯೋಜನೆಯಿಂದ ಪ್ರಯಾಣಿಕರ ಮೇಲೆ ಯಾವುದೇ ಹೊರೆ ಆಗಿಲ್ಲ, ಯೋಜನೆಗೆ ತಗಲುವ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ, ಆದರೆ, ಕಳೆದ 10 ವರ್ಷಗಳಲ್ಲಿ ಡೀಸೆಲ್‌ ಪ್ರತೀ ಲೀಟರ್‌ಗೆ 10 ರಿಂದ 11 ರೂ.ಏರಿಕೆ ಆಗಿರುವುದರಿಂದ ನಿಗಮಗಳಿಗೆ 10,200 ಕೋಟಿ ರೂ. ನಷ್ಟ ಉಂಟಾಗಿದೆ. ಅಲ್ಲದೆ, 9,900 ಕೋಟಿ ರೂ. ಬಾಕಿ ಹೊಣೆಯನ್ನೂ ಹೊತ್ತುಕೊಂಡಿದೆ, ಸಂಸ್ಥೆಗಳ ಒಟ್ಟು ವೆಚ್ಚದಲ್ಲಿ ಶೇಕಡ 80ರಷ್ಟು ಡೀಸೆಲ್‌ ಹಾಗೂ ಸಿಬ್ಬಂದಿ ವೆಚ್ಚಕ್ಕೆ ವಿನಿಯೋಗ ಆಗುತ್ತದೆ.

ಪ್ರತೀದಿನ 15.60 ಕೋಟಿ ರೂ. ವೆಚ್ಚ

ಡೀಸೆಲ್‌ಗಾಗಿ ಪ್ರತೀದಿನ 15.60 ಕೋಟಿ ರೂ. ವೆಚ್ಚ ಮಾಡುತ್ತಿದ್ದು, ಕಳೆದ 10 ವರ್ಷಗಳಲ್ಲಿ ಸಿಬ್ಬಂದಿ ವೇತನದಿಂದ 6,418 ಕೋಟಿ ರೂ., ಭವಿಷ್ಯ ನಿಧಿಯಿಂದ 7,916 ಕೋಟಿ ರೂ., ನಿವೃತ್ತ ನೌಕರರ ಬಾಕಿ 604 ಕೋಟಿ ರೂ. ಹೊರೆ ಬಿದ್ದಿದೆ.

ಹಿರಿಯ ಐಎಎಸ್‌ ಅಧಿಕಾರಿ ಅತುಲ್‌ ತಿವಾರಿ ನೇತೃತ್ವದ ಸಮಿತಿ ಶಿಫಾರಸು ಆಧರಿಸಿ, ನಿಗಮ ಆರ್ಥಿಕ ಸ್ಥಿತಿ ಸುಧಾರಣೆ ಹಾಗೂ ಪ್ರಯಾಣಿಕರಿಗೆ ಹೊರೆ ಆಗದಂತೆ ಅಲ್ಪ ಪ್ರಮಾಣದಲ್ಲಿ ದರ ಏರಿಕೆ ಮಾಡಲಾಗಿದೆ.ನಾವು ಶೇಕಡಾವಾರು ಮುಂದಿಟ್ಟುಕೊಂಡು ದರ ಹೆಚ್ಚಳ ಮಾಡಿಲ್ಲ, ಬಸ್‌ ಸಂಚರಿಸುವ ಕಿಲೋ ಮೀಟರ್‌ ಹಾಗೂ ನಿಗದಿತ ಸ್ಟೇಜ್‌ಗಳ ಲೆಕ್ಕಾಚಾರದಲ್ಲಿ ದರ ಪರಿಷ್ಕರಣೆ ಮಾಡಲಾಗಿದೆ.

ವೇಗದೂತ ದರ

ವೇಗದೂತ ಬಸ್‌ಗಳಲ್ಲಿ 10 ಹಂತದವರೆಗೆ ಕನಿಷ್ಠ 19 ರೂ.ನಿಂದ ಗರಿಷ್ಠ 68 ರೂ.ವರೆಗೆ ಪ್ರಯಾಣ ದರ ಏರಿಕೆ ಮಾಡಲಾಗಿದೆ ಎಂದು ವಿವರಿಸಿದರು. ಐರಾವತ, ಡ್ರೀಂ ಕ್ಲಾಸ್‌, ಅಂಬಾರಿ ಬಸ್‌ಗಳ ಸೇವೆಯಲ್ಲಿ 6 ಕೀಲೋ ಮೀಟರ್‌ ಪ್ರಯಾಣದವರೆಗೆ 5 ರೂ., 6 ರಿಂದ 18 ಕಿಲೋ ಮೀಟರ್‌ ಪ್ರಯಾಣದವರೆಗೆ 10 ರೂ., ದೂರ ಪ್ರಯಾಣಕ್ಕೆ ಗರಿಷ್ಠ 15 ರೂ. ಏರಿಕೆ ಮಾಡಲಾಗಿದೆ. ಬಿಎಂಟಿಸಿಯಲ್ಲಿ ಕನಿಷ್ಠ ಶೇಕಡ 33 ರಿಂದ ಗರಿಷ್ಠ ಶೇಕಡ 50ರಷ್ಟು ಏರಿಕೆ ಮಾಡಲಾಗಿದೆ ಎಂದು ವಿವರಿಸಿದರು.

ಮೈಸೂರಿಗೆ 160 ರಿಂದ 197 ರೂ.

ಬೆಂಗಳೂರಿನಿಂದ ಹೊರಡುವ ವೇಗದೂತ ಬಸ್‌ಗಳ ದರ ಪರಿಷ್ಕರಣೆ ನಂತರ ಮೈಸೂರಿಗೆ 160 ರಿಂದ 197 ರೂ., ಹಾಸನಕ್ಕೆ 219 ರಿಂದ 270 ರೂ., ಮಂಡ್ಯಕ್ಕೆ 110 ರಿಂದ 136 ರೂ., ಚಿಕ್ಕಮಗಳೂರಿಗೆ 295 ರಿಂದ 363 ರೂ., ಕೋಲಾರ ಹಾಗೂ ತುಮಕೂರಿಗೆ 81 ರಿಂದ 100 ರೂ. ಪ್ರಯಾಣ ದರ ಹೆಚ್ಚಳವಾಗಿದೆ. ದಾವಣಗೆರೆಗೆ 317 ರಿಂದ 390 ರೂ., ಶಿವಮೊಗ್ಗ 340 ರಿಂದ 419 ರೂ., ಮಂಗಳೂರಿಗೆ 423 ರಿಂದ 521 ರೂ. ಏರಿಕೆ ಆಗಿದೆ.

Tags: bus rate hikekarnatakaksrtc busMysurupoor people
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಂತರಾಜು ವರದಿ ನೈಜತೆ ಬಗ್ಗೆ ಅನುಮಾನಗಳಿವೆ ಎಂದ ಅಶೋಕ್

ಸಾರಿಗೆ ನಿಗಮಗಳಿಗೆ ₹5,650 ಕೋಟಿ ಬಾಕಿ! ಜನರ ಮೇಲೆ ದರ ಏರಿಕೆಯ ಹೊರೆ

by cknewsnow desk
November 5, 2026
0

ಸಾರಿಗೆ ನಿಗಮಗಳ ಒಟ್ಟು ಹೊಣೆಗಾರಿಕೆ ₹7,130.80 ಕೋಟಿ

ಕೇಂದ್ರ ಪೆಟ್ರೋಲ್, ಡೀಸೆಲ್ ದರ ಇಳಿಸಿದರೆ ಬಸ್ ಪ್ರಯಾಣ ದರ ಕಡಿಮೆ ಮಾಡುತ್ತೇವೆ

ಕೇಂದ್ರ ಪೆಟ್ರೋಲ್, ಡೀಸೆಲ್ ದರ ಇಳಿಸಿದರೆ ಬಸ್ ಪ್ರಯಾಣ ದರ ಕಡಿಮೆ ಮಾಡುತ್ತೇವೆ

by cknewsnow desk
November 5, 2026
0

ಮಹಿಳೆಯರಿಗೆ ಫ್ರೀ ಬಸ್ ಕೊಟ್ಟಿದ್ದಕ್ಕೆ ಆರ್ಥಿಕ ಹೊರೆ ಆಗಿದೆ ಎಂದ ಮುಖ್ಯಮಂತ್ರಿ

ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಅಗತ್ಯವಿಲ್ಲ: ರಾಜಮಾತೆ ಪ್ರಮೋದಾ ದೇವಿ ಒಡೆಯರ್

ಮೈಸೂರು ಅರಮನೆ ಖಾಸಗಿ ಸ್ವತ್ತು, ಸರ್ಕಾರ ಕಟ್ಟಿಸಿದ್ದಲ್ಲ; ರಾಜಮಾತೆ ಪ್ರಮೋದಾ ದೇವಿ

by cknewsnow desk
November 4, 2026
0

ಸರಕಾರ ಬೇಕಾದರೆ ಇನ್ನೊಂದು ಅಂಬಾರಿಯನ್ನು ಮಾಡಿಸಿಕೊಳ್ಳಲಿ

ಹಾಸನ ಪ್ರಕರಣದಲ್ಲಿ ಅಶ್ಲೀಲ ವಿಡಿಯೋಗಳನ್ನು ಹರಡಿದ A2 ಜತೆ ಡಿಕೆಶಿ ನಂಟು!

ಹಾಸನ ಪ್ರಕರಣದಲ್ಲಿ ಅಶ್ಲೀಲ ವಿಡಿಯೋಗಳನ್ನು ಹರಡಿದ A2 ಜತೆ ಡಿಕೆಶಿ ನಂಟು!

by cknewsnow desk
November 4, 2026
0

ಪ್ರಿಯಾಂಕ್ ಖರ್ಗೆ ಪಾಸ್ ಟ್ರೇಲರ್ ಹೈ.. ಹಮಾರೇ ಪಾಸ್ ಪಿಕ್ಚರ್ ಹೈ

ಸ್ಟಿಂಗ್ ವಿರುದ್ಧ ಕೋರ್ಟ್ ಮೊರೆ ಹೋದ ಸಿದ್ದರಾಮಯ್ಯ! ಇಂದು ಆದೇಶ ನಿರೀಕ್ಷೆ

ವಿಡಿಯೋದಲ್ಲಿರುವ ಕೇರಳ ಮಹಿಳೆ ಸ್ಟಿಂಗ್ ಪಿತೂರಿ ಭಾಗ!

by cknewsnow desk
November 4, 2026
0

ತನಿಖೆ ದಾರಿ ತಪ್ಪಿಸಿದ ಪೊಲೀಸ್ ಆಯುಕ್ತರು; ಸುಪ್ರೀಂ ಕೋರ್ಟ್ ಮಾರ್ಗಸೂಚಿ ಉಲ್ಲಂಘನೆ ಎಂದು ಆರೋಪಿಸಿದ ಕೇಂದ್ರ ಸಚಿವರು

ಗೃಹ ಇಲಾಖೆ ನಡೆಸುವುದಕ್ಕೆ ಪ್ರಿಯಾಂಕ್ ಖರ್ಗೆ Unfit ಎಂದ ಹೆಚ್.ಡಿ.ಕುಮಾರಸ್ವಾಮಿ

ಗೃಹ ಇಲಾಖೆ ನಡೆಸುವುದಕ್ಕೆ ಪ್ರಿಯಾಂಕ್ ಖರ್ಗೆ Unfit ಎಂದ ಹೆಚ್.ಡಿ.ಕುಮಾರಸ್ವಾಮಿ

by cknewsnow desk
November 4, 2026
0

ಸ್ಟಿಂಗ್ ತನಿಖೆಯ ವಾಗ್ದಾಳಿ ಮುಂದುವರಿಸಿದ ಕೇಂದ್ರ ಸಚಿವರು; ಸಂತ್ರಸ್ತೆ ಕಲಿಸಿದ್ದ ಈ ಮೇಲ್ ಎಲ್ಲಿ ಹೋಯಿತು ಖರ್ಗೆ ಅವರೇ ಎಂದು ಕಿಡಿ

Next Post
ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಅಗತ್ಯವಿಲ್ಲ: ರಾಜಮಾತೆ ಪ್ರಮೋದಾ ದೇವಿ ಒಡೆಯರ್

ಮೈಸೂರು ಅರಮನೆ ಖಾಸಗಿ ಸ್ವತ್ತು, ಸರ್ಕಾರ ಕಟ್ಟಿಸಿದ್ದಲ್ಲ; ರಾಜಮಾತೆ ಪ್ರಮೋದಾ ದೇವಿ

Leave a Reply Cancel reply

Your email address will not be published. Required fields are marked *

Recommended

ಸದನದಲ್ಲಿ ಅಂಗಿ ಬಿಚ್ಚಿದ ಭದ್ರಾವತಿ ಶಾಸಕರಿಗೆ ಅಮಾನತು ಶಿಕ್ಷೆ, ಶಾಸಕರಿಗೆ  ಅಪಮಾನಿಸಿದ ಡಾ.ಸುಧಾಕರ್‌ಗೇನು ಶಿಕ್ಷೆ? ವಜಾ ಮಾಡಲು ಪಟ್ಟುಹಿಡಿದ ಕಾಂಗ್ರೆಸ್ ಶಾಸಕಿಯರು

ಸದನದಲ್ಲಿ ಅಂಗಿ ಬಿಚ್ಚಿದ ಭದ್ರಾವತಿ ಶಾಸಕರಿಗೆ ಅಮಾನತು ಶಿಕ್ಷೆ, ಶಾಸಕರಿಗೆ ಅಪಮಾನಿಸಿದ ಡಾ.ಸುಧಾಕರ್‌ಗೇನು ಶಿಕ್ಷೆ? ವಜಾ ಮಾಡಲು ಪಟ್ಟುಹಿಡಿದ ಕಾಂಗ್ರೆಸ್ ಶಾಸಕಿಯರು

6 years ago
ರಾಜಧಾನಿಯಲ್ಲಿ ಭೀಮಗರ್ಜನೆ

ರಾಜಧಾನಿಯಲ್ಲಿ ಭೀಮಗರ್ಜನೆ

5 years ago

Popular News

  • ಕಾಂತರಾಜು ವರದಿ ನೈಜತೆ ಬಗ್ಗೆ ಅನುಮಾನಗಳಿವೆ ಎಂದ ಅಶೋಕ್

    ಸಾರಿಗೆ ನಿಗಮಗಳಿಗೆ ₹5,650 ಕೋಟಿ ಬಾಕಿ! ಜನರ ಮೇಲೆ ದರ ಏರಿಕೆಯ ಹೊರೆ

    0 shares
    Share 0 Tweet 0
  • ಕೇಂದ್ರ ಪೆಟ್ರೋಲ್, ಡೀಸೆಲ್ ದರ ಇಳಿಸಿದರೆ ಬಸ್ ಪ್ರಯಾಣ ದರ ಕಡಿಮೆ ಮಾಡುತ್ತೇವೆ

    0 shares
    Share 0 Tweet 0
  • ಮೈಸೂರು ಅರಮನೆ ಖಾಸಗಿ ಸ್ವತ್ತು, ಸರ್ಕಾರ ಕಟ್ಟಿಸಿದ್ದಲ್ಲ; ರಾಜಮಾತೆ ಪ್ರಮೋದಾ ದೇವಿ

    0 shares
    Share 0 Tweet 0
  • ಬಸ್‌ ಪ್ರಯಾಣ ದರ ಶೇ.23ರಿಂದ ಶೇ.37ರಷ್ಟು ಹೆಚ್ಚಳ

    0 shares
    Share 0 Tweet 0
  • ಹಾಸನ ಪ್ರಕರಣದಲ್ಲಿ ಅಶ್ಲೀಲ ವಿಡಿಯೋಗಳನ್ನು ಹರಡಿದ A2 ಜತೆ ಡಿಕೆಶಿ ನಂಟು!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಂತರಾಜು ವರದಿ ನೈಜತೆ ಬಗ್ಗೆ ಅನುಮಾನಗಳಿವೆ ಎಂದ ಅಶೋಕ್

ಸಾರಿಗೆ ನಿಗಮಗಳಿಗೆ ₹5,650 ಕೋಟಿ ಬಾಕಿ! ಜನರ ಮೇಲೆ ದರ ಏರಿಕೆಯ ಹೊರೆ

November 5, 2026
ಕೇಂದ್ರ ಪೆಟ್ರೋಲ್, ಡೀಸೆಲ್ ದರ ಇಳಿಸಿದರೆ ಬಸ್ ಪ್ರಯಾಣ ದರ ಕಡಿಮೆ ಮಾಡುತ್ತೇವೆ

ಕೇಂದ್ರ ಪೆಟ್ರೋಲ್, ಡೀಸೆಲ್ ದರ ಇಳಿಸಿದರೆ ಬಸ್ ಪ್ರಯಾಣ ದರ ಕಡಿಮೆ ಮಾಡುತ್ತೇವೆ

November 5, 2026
ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಅಗತ್ಯವಿಲ್ಲ: ರಾಜಮಾತೆ ಪ್ರಮೋದಾ ದೇವಿ ಒಡೆಯರ್

ಮೈಸೂರು ಅರಮನೆ ಖಾಸಗಿ ಸ್ವತ್ತು, ಸರ್ಕಾರ ಕಟ್ಟಿಸಿದ್ದಲ್ಲ; ರಾಜಮಾತೆ ಪ್ರಮೋದಾ ದೇವಿ

November 4, 2026
ಬಸ್‌ ಪ್ರಯಾಣ ದರ ಶೇ.23ರಿಂದ ಶೇ.37ರಷ್ಟು ಹೆಚ್ಚಳ

ಬಸ್‌ ಪ್ರಯಾಣ ದರ ಶೇ.23ರಿಂದ ಶೇ.37ರಷ್ಟು ಹೆಚ್ಚಳ

November 4, 2026

Covid 19

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

October 16, 2026
ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ