• About
  • Advertise
  • Careers
  • Contact
Sunday, October 11, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home GUEST COLUMN

ಸದ್ಯಕ್ಕಿಲ್ಲ ಸಂಪುಟ ಪುನಾರಚನೆ

cknewsnow desk by cknewsnow desk
October 10, 2026
in GUEST COLUMN, NATION, POLITICS, STATE
Reading Time: 1 min read
0
ಸದ್ಯಕ್ಕಿಲ್ಲ ಸಂಪುಟ ಪುನಾರಚನೆ
911
VIEWS
FacebookTwitterWhatsuplinkedinEmail

ಮುಂದಿನ ವರ್ಷ ಏಪ್ರಿಲ್‌-ಮೇನಲ್ಲಿ ಮಂತ್ರಿಮಂಡಲಕ್ಕೆ ಹೊಸರೂಪ

ಬೆಂಗಳೂರು: ಉತ್ತರ ಪ್ರದೇಶ, ಗುಜರಾತ್‌, ಗೋವಾ ಸೇರಿದಂತೆ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಮ್ಮ ಮಂತ್ರಿಮಂಡಲ ಪುನಾರಚನೆ ಮಾಡಲಿದ್ದಾರೆ.

2027ರ ಏಪ್ರಿಲ್‌-ಮೇನಲ್ಲಿ ಮಂತ್ರಿಮಂಡಲ ಪುನಾರಚನೆ ಮಾಡಲಿದ್ದು, ಸಂಪುಟದಲ್ಲಿರುವ ನಾಲ್ವರು ಹಿರಿಯ ಸಚಿವರನ್ನು ಕೈಬಿಟ್ಟು ಹೊಸದಾಗಿ ಆರು ಮಂದಿಯನ್ನು ಸೇರ್ಪಡೆ ಮಾಡಿಕೊಳ್ಳಲಿದ್ದಾರೆ.

ನಾಲ್ಕು ಸಚಿವರು ಹೊರಕ್ಕೆ

ನಾಲ್ಕು ಕಂದಾಯ ವಲಯದ ಒಬ್ಬೊಬ್ಬರು ಸಚಿವರನ್ನು ಬಿಟ್ಟು, ಅವರಿಗೆ ಕೆಪಿಸಿಸಿಯಲ್ಲಿ ಕಾರ್ಯಾಧ್ಯಕ್ಷ ಸ್ಥಾನ ಕಲ್ಪಿಸಿ, ಪಕ್ಷದ ಸಂಘಟನೆ ಹಾಗೂ ಮುಂಬರುವ ವಿಧಾನಸಭಾ ಚುನಾವಣೆಗೆ ತೊಡಗಿಸಿಕೊಳ್ಳಲಿದೆ.ಇವರಿಂದ ತೆರವಾಗುವ ಸ್ಥಾನಕ್ಕೆ ಇಬ್ಬರು ಮಹಿಳೆಯರೂ ಸೇರಿದಂತೆ ಆರು ಮಂದಿಯನ್ನು ಸೇರ್ಪಡೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.

ಜಿಎಸ್‌ಟಿ ಸಭೆಯಲ್ಲಿ ಭಾಗವಹಿಸಲು ನವದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ, ಇಂದಿರಾ ಭವನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಪ್ರತ್ಯೇಕ ಭೇಟಿ ಮಾಡಿ ಸಂಪುಟ ವಿಸ್ತರಣೆ ಇಲ್ಲವೆ ಪುನಾರಚನೆಗೆ ಇದು ಸೂಕ್ತ ಕಾಲವಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.

ಪಂಚರಾಜ್ಯಗಳ ಚುನಾವಣೆ ನಂತರ ಪುನಾರಚನೆ

ಶಿವಕುಮಾರ್‌ ಸಲಹೆಗೆ ಸಮ್ಮತಿಸಿರುವ ಉಭಯ ನಾಯಕರು, ಪಂಚರಾಜ್ಯಗಳ ಚುನಾವಣೆ ಹಾಗೂ ಕರ್ನಾಟಕದಲ್ಲಿ ಜನವರಿಯಲ್ಲಿ ನಡೆಯುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್‌ ಚುನಾವಣೆ ನಂತರವೇ ರಾಜಕೀಯ ನಿರ್ಧಾರ ಕೈಗೊಳ್ಳಲು ಹಸಿರು ನಿಶಾನೆ ತೋರಿದ್ದಾರೆ.

ರಾಜ್ಯ ವಿಧಾನಸಭೆಗೆ 2028ರ ಏಪ್ರಿಲ್‌ಗೆ ಚುನಾವಣೆ ನಡೆಯಲಿದ್ದು, ಹೊಸದಾಗಿ ಮಂತ್ರಿ ಆಗುವವರಿಗೆ ಒಂದು ವರ್ಷ ಅಧಿಕಾರ ನಿರ್ವಹಿಸಲು ಅವಕಾಶ ದೊರೆಯಲಿದೆ.

ಜಮೀರ್‌ ಅಹ್ಮದ್‌ ಖಾನ್‌, ಶಿವರಾಜ್‌ ತಂಗಡಗಿ ಅವರನ್ನು ಕೈಬಿಟ್ಟು ಬಸವರಾಜ ನೀಲಪ್ಪ ಶಿವಣ್ಣನವರ್‌ ಹಾಗೂ ಅನ್ನಪೂರ್ಣ ತುಕಾರಾಂ ಅವರನ್ನು ಮಂತ್ರಿಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕೆಂದು ಮುಖ್ಯಮಂತ್ರಿ ಮತ್ತು ಎಐಸಿಸಿ ಮೇಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಡ ಹೇರಿದ್ದರು.

ಸುರ್ಜೇವಾಲ ಪಟ್ಟುಇದರ ಜತೆಗೆ ಪಕ್ಷದ ಹಿರಿಯ ಶಾಸಕ ಎಂ.ಕೃಷ್ಣಪ್ಪ ಅವರನ್ನು ಮಂತ್ರಿ ಮಾಡಲೇಬೇಕೆಂದು ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಸಹಾ ಪಟ್ಟು ಹಿಡಿದಿದ್ದರು.

ಸದ್ಯಕ್ಕೆ ಎಲ್ಲಾ ಒತ್ತಡಗಳಿಂದ ಪಾರಾಗಿರುವ ಮುಖ್ಯಮಂತ್ರಿ, ನಿಗಮ ಮತ್ತು ಮಂಡಳಿಗಳಿಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಗಳ ನೇಮಕವನ್ನು ಯಾವುದೇ ಸಂದರ್ಭದಲ್ಲಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೆಹಲಿ ಮೂಲಗಳ ಸಂಪುಟ ಪುನಾರಚನೆಗೆ ಸಿದ್ದರಾಮಯ್ಯ ಅವರು ಪಟ್ಟು ಹಿಡಿಯುವ ಸಾಧ್ಯತೆ ಇದೆ ಎಂಬ ಅಂಶವನ್ನು ಮೊದಲೇ ಗ್ರಹಿಸಿ ಅದಕ್ಕೆ ಚೆಕ್ಮೀಟ್ ಇಡುವ ಉದ್ದೇಶದಿಂದ ಡಿಕೆಶಿ ಮುಂದಿನ ವರ್ಷ ಪುನಾರಚನೆ ಮಾಡೋಣ ಎಂದು ವರಿಷ್ಠರಿಗೆ ಹೇಳಿದ್ದಾರೆ ಎನ್ನಲಾಗಿದೆ.

ಆದರೆ, ಚುನಾವಣೆ ಬರುವುದಕ್ಕೆ ಮೊದಲ ಕೇವಲ ಒಂದು ವರ್ಷ ಅಥವಾ ಅದಕ್ಕಿಂತ ಕಡಿಮೆ ಅವಧಿಗೆ ಮಂತ್ರಿ ಸ್ಥಾನ ಸಿಕ್ಕಿದರೆ ಉಪಯೋಗ ಇಲ್ಲ. ಅಂತಹ ಸಚಿವಗಿರಿ ಪಡೆಯುವ ಬದಲು ಶಾಸಕರಾಗಿಯೇ ಇರುವುದು ಮೇಲು ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ.

Tags: Cabinate reshuffleDK Shivakumarkarantaka cabinatekarnataka politics
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಡಿಕೆಶಿ ಹೊಡೆತಕ್ಕೆ ತತ್ತರ, ಪುನಾ ಸಿದ್ದುಗೆ ಹತ್ತಿರ

ಡಿಕೆಶಿ ಹೊಡೆತಕ್ಕೆ ತತ್ತರ, ಪುನಾ ಸಿದ್ದುಗೆ ಹತ್ತಿರ

by cknewsnow desk
October 10, 2026
0

ಚದುರಿದ್ದ ಸಿದ್ದರಾಮಯ್ಯ ಟೀಮ್ ಮತ್ತೆ ಒಂದಾಗುತ್ತಿದೆ! ಮೈಸೂರಲ್ಲಿ ಹಿಡಿತ ಸಾಧಿಸಲು ಸಿಎಂ ಡಿಕೆಶಿ ಮಾಸ್ಟರ್ ಪ್ಲಾನ್

ಡಿಕೆಶಿ ನೈಸ್ ಖರೀದಿ; ಹೈಕಮಾಂಡ್ ಅಂಗಳದಲ್ಲಿ ಅಲ್ಲೋಲ ಕಲ್ಲೋಲ

ಡಿಕೆಶಿ ನೈಸ್ ಖರೀದಿ; ಹೈಕಮಾಂಡ್ ಅಂಗಳದಲ್ಲಿ ಅಲ್ಲೋಲ ಕಲ್ಲೋಲ

by cknewsnow desk
October 10, 2026
0

ಹೆಚ್.ಡಿ.ಕುಮಾರಸ್ವಾಮಿ ಆರೋಪದಿಂದ ಕಾಂಗ್ರೆಸ್ ನಲ್ಲಿ ತಳಮಳ

₹4,756.48 ಕೋಟಿ ಟೋಲ್ ಸುಲಿಗೆ ಮಾಡಿದ ನೈಸ್

₹4,756.48 ಕೋಟಿ ಟೋಲ್ ಸುಲಿಗೆ ಮಾಡಿದ ನೈಸ್

by cknewsnow desk
October 9, 2026
0

ನೈಸ್ ಯೋಜನಾ ವೆಚ್ಚವೇ ₹1,583,76 ಕೋಟಿ

ಬೆಂಗಳೂರು ಸುತ್ತಲಿನ ಜನರ ಸಮಾಧಿ ಮೇಲೆ ಬ್ರ್ಯಾಂಡ್‌ ಬೆಂಗಳೂರು

ಸ್ಟಿಂಗ್ ಮಾಸ್ಟರ್ ವಿರುದ್ಧವೇ ಸ್ಟಿಂಗ್!!

by cknewsnow desk
October 9, 2026
0

ಸ್ಟಿಂಗ್ ಆಗಿದ್ದರೆ ತನಿಖೆ ಮಾಡಿಸಿ ಎಂದು ಮುಖ್ಯಮಂತ್ರಿಗೆ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯ

36 ಎಕರೆ ಸರಕಾರಿ ಭೂಮಿ ಲಪಟಾಯಿಸಿದ ಸಚಿವ ಹೆಚ್.ಸಿ.ಬಾಲಕೃಷ್ಣ

36 ಎಕರೆ ಸರಕಾರಿ ಭೂಮಿ ಲಪಟಾಯಿಸಿದ ಸಚಿವ ಹೆಚ್.ಸಿ.ಬಾಲಕೃಷ್ಣ

by cknewsnow desk
October 6, 2026
0

ಬಾಲಕೃಷ್ಣ ವಿಚಾರಣೆ; ರಾಜ್ಯಪಾಲರ ಅನುಮತಿ ಕೋರಲಿರುವ JDS

ನಾಳೆ ಬಾ ಎತ್ತಿನಹೊಳೆ!

ನಾಳೆ ಬಾ ಎತ್ತಿನಹೊಳೆ!

by cknewsnow desk
October 6, 2026
0

ಚಿಕ್ಕಬಳ್ಳಾಪುರ, ಕೋಲಾರಕ್ಕೆ ಈ ಸರಕಾರಕ್ಕೆ ನೀರು ಕೊಡಲು ಸಾಧ್ಯವಿಲ್ಲ; ಯೋಜನೆ ಇನ್ನೂ ಹಾಸನ ದಾಟಿಲ್ಲ

Leave a Reply Cancel reply

Your email address will not be published. Required fields are marked *

Recommended

ಸಿಕೆನ್ಯೂಸ್‌ ನೌ  ಇನ್ನೊಮ್ಮೆ ಬದಲಾಗಿದೆ!

ಸಿಕೆನ್ಯೂಸ್‌ ನೌ ಇನ್ನೊಮ್ಮೆ ಬದಲಾಗಿದೆ!

5 years ago
ಬಂಡೀಪುರ ಅರಣ್ಯದಲ್ಲಿ ಜಿಂಕೆಗೆ ತಿಂಡಿ ತಿನ್ನಿಸಿದ ದಿಲ್ಲಿ ಪತ್ರಕರ್ತನಿಗೆ ದಂಡ ವಿಧಿಸಿದ ಅರಣ್ಯಾಧಿಕಾರಿಗಳು

ಬಂಡೀಪುರ ಅರಣ್ಯದಲ್ಲಿ ಜಿಂಕೆಗೆ ತಿಂಡಿ ತಿನ್ನಿಸಿದ ದಿಲ್ಲಿ ಪತ್ರಕರ್ತನಿಗೆ ದಂಡ ವಿಧಿಸಿದ ಅರಣ್ಯಾಧಿಕಾರಿಗಳು

5 years ago

Popular News

  • ಸದ್ಯಕ್ಕಿಲ್ಲ ಸಂಪುಟ ಪುನಾರಚನೆ

    ಸದ್ಯಕ್ಕಿಲ್ಲ ಸಂಪುಟ ಪುನಾರಚನೆ

    0 shares
    Share 0 Tweet 0
  • ಡಿಕೆಶಿ ಹೊಡೆತಕ್ಕೆ ತತ್ತರ, ಪುನಾ ಸಿದ್ದುಗೆ ಹತ್ತಿರ

    0 shares
    Share 0 Tweet 0
  • ಡಿಕೆಶಿ ನೈಸ್ ಖರೀದಿ; ಹೈಕಮಾಂಡ್ ಅಂಗಳದಲ್ಲಿ ಅಲ್ಲೋಲ ಕಲ್ಲೋಲ

    0 shares
    Share 0 Tweet 0
  • ₹4,756.48 ಕೋಟಿ ಟೋಲ್ ಸುಲಿಗೆ ಮಾಡಿದ ನೈಸ್

    0 shares
    Share 0 Tweet 0
  • ಸ್ಟಿಂಗ್ ಮಾಸ್ಟರ್ ವಿರುದ್ಧವೇ ಸ್ಟಿಂಗ್!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಸದ್ಯಕ್ಕಿಲ್ಲ ಸಂಪುಟ ಪುನಾರಚನೆ

ಸದ್ಯಕ್ಕಿಲ್ಲ ಸಂಪುಟ ಪುನಾರಚನೆ

October 10, 2026
ಡಿಕೆಶಿ ಹೊಡೆತಕ್ಕೆ ತತ್ತರ, ಪುನಾ ಸಿದ್ದುಗೆ ಹತ್ತಿರ

ಡಿಕೆಶಿ ಹೊಡೆತಕ್ಕೆ ತತ್ತರ, ಪುನಾ ಸಿದ್ದುಗೆ ಹತ್ತಿರ

October 10, 2026
ಡಿಕೆಶಿ ನೈಸ್ ಖರೀದಿ; ಹೈಕಮಾಂಡ್ ಅಂಗಳದಲ್ಲಿ ಅಲ್ಲೋಲ ಕಲ್ಲೋಲ

ಡಿಕೆಶಿ ನೈಸ್ ಖರೀದಿ; ಹೈಕಮಾಂಡ್ ಅಂಗಳದಲ್ಲಿ ಅಲ್ಲೋಲ ಕಲ್ಲೋಲ

October 10, 2026
₹4,756.48 ಕೋಟಿ ಟೋಲ್ ಸುಲಿಗೆ ಮಾಡಿದ ನೈಸ್

₹4,756.48 ಕೋಟಿ ಟೋಲ್ ಸುಲಿಗೆ ಮಾಡಿದ ನೈಸ್

October 9, 2026

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ