ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಬ್ಬರೂ ಭೇಟಿಯಾಗಿದ್ದು, ಸ್ಪ್ರಿಂಗ್ ಆಪರೇಷನ್ ವಿವಾದ ಹಿನ್ನೆಲೆಯಲ್ಲಿ ಈ ಭೇಟಿ ನಡೆದಿರಬಹುದಾ? ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.
ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಡಿಕೆಶಿ ಸರ್ಕಾರ ಸ್ಟಿಂಗ್ ತನಿಖೆಯನ್ನು ನಡೆಸುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು ಎಂಬ ವರದಿಗಳ ಹಿನ್ನೆಲೆಯಲ್ಲಿ ಡಿಕೆಶಿ ಭೇಟಿ ಆಗಿದ್ದಾರಾ? ಎಂಬ ಅಂಶ ಮುನ್ನೆಲೆಗೆ ಬಂದಿದೆ.
ಸದ್ಯಕ್ಕೆ ಸ್ಟಿಂಗ್ ವ್ಯವಹಾರ ಡಿಕೆಶಿ ಪಾಲಿಗೆ ಕಗ್ಗಂಟಾಗಿ ಪರಿಣಮಿಸಿದ್ದು, ಇದರಿಂದ ಪಾರಾಗುವ ದಾರಿಗಳನ್ನು ಅವರು ಹುಡುಕುತ್ತಿದ್ದಾರೆ.
ಸ್ಟಿಂಗ್ ಆಪರೇಷನ್ ಅನ್ನು ನಾನು ಮಾಡಿಲ್ಲ. ಪತ್ರಕರ್ತನೊಬ್ಬ ಹಾಗೂ ಕಾಂಗ್ರೆಸ್ ನಾಯಕಿಯೊಬ್ಬರು ಸೇರಿ ಮಾಡಿರುವ ಕಾರ್ಯಾಚರಣೆ ಇದಾಗಿದೆ ಎನ್ನುವ ವಿಚಾರವನ್ನು ಮುಖ್ಯಮಂತ್ರಿ ಅವರು ಮಾಜಿ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.
ಆದರೆ ತಮ್ಮ ವಿರುದ್ಧ ನಡೆದಿರುವ ಕುತಂತ್ರದ ಬಗ್ಗೆ ತೀವ್ರ ಕೆಂಡಮಂಡಲ ಆಗಿರುವ ಸಿದ್ದರಾಮಯ್ಯನವರು ಕೇರಳಕ್ಕೆ ಹೋಗಿ ಸ್ಟಿಂಗ್ ಮಾಡಿರುವ ಪತ್ರಕರ್ತ ಹಾಗೂ ಕಾಂಗ್ರೆಸ್ ನಾಯಕಿಯನ್ನು ಒದ್ದು ಒಳಗೆ ಹಾಕಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ಹಿನ್ನಲೆಯಲ್ಲಿ ಬಿಕ್ಕಟ್ಟಿಗೆ ಸಿಲುಕಿರುವ ಡಿಕೆಶಿ ಇಡಿ ಕುಟುಕು ಕಾರ್ಯಚರಣೆಯ ಆರೋಪವನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಕಡೆಗೆ ತಿರುಗಿಸಲು ಪ್ರಯತ್ನಿಸಿದರು ಎಂಬ ಮಾಹಿತಿ ಸೋರಿಕೆ ಆಗಿದೆ.
ಸರಿ ಸುಮಾರು ಒಂದುವರೆ ಗಂಟೆ ಕಾಲ ನಡೆದ ಈ ಮಾತುಕತೆಯು, ಮುಖ್ಯವಾಗಿ ಹಿರಿಯೂರು ಉಪಚುನಾವಣೆ ಹಾಗೂ ನಿಗಮ ಮಂಡಳಿಗಳಿಗೆ ನೇಮಕಾತಿ ಮಾಡುವ ವಿಚಾರಕ್ಕೆ ಸಂಬಂಧಿಸಿದ ಎಂದು ಸಿಎಂ ಕಚೇರಿ ಮೂಲಗಳು ಹೇಳುತ್ತಿವೆಯಾದರೂ, ಅಸಲು ವಿಷಯ ಏನೆಂದರೆ ಸ್ಟಿಂಗ್ ವಿಚಾರದಲ್ಲಿ ಸಿಟ್ಟು ಗೆದ್ದಿರುವ ಮಾಜಿ ಮುಖ್ಯಮಂತ್ರಿಯನ್ನು ಕೊಂಚ ಮಟ್ಟಿಗೆ ಸಮಾಧಾನಪಡಿಸುವುದೇ ಉದ್ದೇಶವಾಗಿತ್ತು ಎಂದು ಹೇಳಲಾಗಿದೆ.
ನನ್ನ ಮತ್ತು ಸಿದ್ದರಾಮಯ್ಯ ನಡುವೆ ಮುನಿಸು ಇಲ್ಲ ಎಂದು ಈ ಭೇಟಿಯ ನಂತರ ಒತ್ತಿ ಹೇಳಿರುವ ಮುಖ್ಯಮಂತ್ರಿ ಅವರು; ಸಿದ್ದರಾಮಯ್ಯ ಅವರೊಂದಿಗೆ ದೊಡ್ಡ ಮುನಿಸೂ ಇಲ್ಲ, ಸಣ್ಣ ಮುನಿಸು ಕೂಡ ಇಲ್ಲ ಎಂದು ಹೇಳಿದ್ದಾರೆ.ಸಿದ್ದರಾಮಯ್ಯ ಹಿರಿಯರು ಮತ್ತು ನಮ್ಮ ನಾಯಕರು. ಅವರೊಂದಿಗೆ ನನಗೆ ಯಾವ ಭಿನ್ನಾಭಿಪ್ರಾಯವು ಇಲ್ಲ ಎಂದು ಡಿಕೆಶಿ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.
ಸಿದ್ದರಾಮಯ್ಯ ಅವರಿಗೂ ನಿಮಗೂ ಮುನಿಸು ಉಂಟಾಗಿದೆಯೇ ಎಂದು ಕೇಳಿದಾಗ, ”ರಾಜಕಾರಣದಲ್ಲಿ ನಿಂದಕರು ಇರಬೇಕು, ವಿರೋಧಿಗಳು ಇರಬೇಕು. ಅವರೆಲ್ಲ ಇದ್ದಾಗಲೇ ನಮ್ಮಂತಹವರು ಶುದ್ಧ ರಾಜಕಾರಣ ಮಾಡಲು ಸಾಧ್ಯ. ಸಿದ್ದರಾಮಯ್ಯ ಅವರು ನಮ್ಮ ನಾಯಕರು. ಮಹಾಸ್ವಾಮಿಗಳೂ ಸೇರಿದಂತೆ ಕೆಲವರು ಮಾಧ್ಯಮಗಳಲ್ಲಿ ವಿಭಿನ್ನ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ಈ ವಿಚಾರಗಳಿಗೆ ಸಂಬಂಧಿಸಿದಂತೆ ನಾವು ಅವರಿಗೆ ತಿಳಿಸಬೇಕಾದ ವಿಷಯಗಳನ್ನು ಈಗಾಗಲೇ ತಿಳಿಸಿದ್ದೇವೆ” ಎಂದರು.
ಕುಟುಕು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿಕೆಶಿ ಹಾಗೂ ಕೇಂದ್ರ ಸಚಿವ ಹೆಚ್ಡಿಕೆ ನಡುವೆ ತೀವ್ರ ತಿಕ್ಕಾಟ ನಡೆಯುತ್ತಿರುವ ಬೆನ್ನಲಿಯೇ, ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ನಮ್ಮದೇ ಪಕ್ಷ ಕಾಂಗ್ರೆಸ್ನ ನಾಯಕರೇ ಈ ಷಡ್ಯಂತ್ರದಲ್ಲಿ ಪಾಲುದಾರರು ಎಂದು ನೇರವಾಗಿ ಆರೋಪ ಮಾಡಿದ್ದರು.
ಸಚಿವ ಹಾಗೂ ಸಿದ್ದರಾಮಯ್ಯ ಅವರ ಉತ್ತರ ಯತೀಂದ್ರ ಅವರು ಕೂಡ ನಮ್ಮ ಪಕ್ಷದ ನಾಯಕರೇ ಕುಟುಂಬ ಕಾರ್ಯಚರಣೆ ನಡೆಸಿದ್ದಾರೆ. ಅವರು ಯಾರು ಎಂಬುದು ಬಹಿರಂಗವಾಗಿದೆ ಎಂದು ತಿಳಿಸಿದ್ದರು. ಹೀಗಿದ್ದರೂ ಕೂಡ ಇಡೀ ಸ್ಟಿಂಗ್ ಕುತಂತ್ರದೊಳಕ್ಕೆ ಹೆಚ್ಡಿಕೆ ಮತ್ತು ಜೆಡಿಎಸ್ ಪಕ್ಷವನ್ನು ಎಳೆದು ತರುವ ಕೃತ್ಯವನ್ನು ಕಾಂಗ್ರೆಸ್ಎ ಸಗುತ್ತಿದೆ.
ಮುಖ್ಯವಾಗಿ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗವು ತನ್ನ ಇತಿಮಿತಿಗಳನ್ನು ಮೀರಿ ಪೋಸ್ಟ್ ಗಳನ್ನು ಹಾಕುತ್ತಿದೆ. ಹಾಗೆಯೇ ಯುವ ಕಾಂಗ್ರೆಸ್ ಕಾರ್ಯಕರ್ತರು ಕೀಳು ಅಭಿರುಚಿಯ ಪೋಸ್ಟ್ ಗಳನ್ನು ನಿರಂತರವಾಗಿ ಹಾಕುತ್ತಿದ್ದು ಇದರ ಬಗ್ಗೆ ಕಾನೂನು ಕ್ರಮಗಳನ್ನು ಜರಗಿಸಲು ಜೆಡಿಎಸ್ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.




















