ಇಡೀ ದೇಶವನ್ನು ಬೆಚ್ಚಿಬೀಳುವಂತೆ ಮಾಡಿದ ಹಿರೇನಾಗವೇಲಿ ಕ್ರಷರ್ ಸ್ಫೋಟ ಸಂಭವಿಸಿದ ಸ್ಥಳಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ತನಿಖಾ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಚಿಕ್ಕಬಳ್ಳಾಪುರ/ಬೆಂಗಳೂರು: ಇಡೀ ದೇಶದ ಗಮನ ಸೆಳೆದಿದ್ದ ಹಿರೇನಾಗವೇಲಿ ಕ್ರಷರ್‌ನ ಜಿಲೆಟನ್ ಕಡ್ಡಿಗಳ ಭೀಕರ ಸ್ಫೋಟದ ಬಗ್ಗೆ ತನಿಖೆ ನಡೆಸಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ರಚನೆ ಮಾಡಿದ್ದ ಉನ್ನತ ಮಟ್ಟದ ಸಮಿತಿಯ ಸದಸ್ಯರು ಮಂಗಳವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
2021 ಫೆಬ್ರವರಿ 22ರಂದು ಹಿರೇನಾಗವೇಲಿ ಕ್ರಷರ್ ಸ್ಫೋಟದಿಂದ ಆರು ಕಾರ್ಮಿಕರು ಧಾರುಣವಾಗಿ ಸಾವನ್ನಪ್ಪಿದ್ದರು. ನಂತರ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಮಾಧ್ಯಮ ವರದಿಗಳ ಆಧಾರದ ಮೇಲೆ ಪ್ರಕರಣವನ್ನು ಕೈಗೆತ್ತಿಕೊಂಡಿತಲ್ಲದೆ, ಆ ಬಗ್ಗೆ ವರದಿ ನೀಡಲು ಆರು ಜನರ ಉನ್ನತ ಸಮಿತಿ ರಚನೆ ಮಾಡಿತ್ತು. ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡುವಂತೆ ಸಮಿತಿಗೆ ಮಂಡಳಿಯು ಆದೇಶ ನೀಡಿತ್ತು.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿ, ಚಿಕ್ಕಬಳ್ಳಾಪುರ ಜಿಲ್ಲಾ ಮ್ಯಾಜಿಸ್ಟ್ರೇಟ್, ಗಣಿ ಇಲಾಖೆಯ ಮಹಾ ನಿರ್ದೇಶಕ, ಗಣಿ ಸ್ಫೋಟಗಳ ನಿಯಂತ್ರಣಾಧಿಕಾರಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ನಾಗಪುರ ಮತ್ತು ಕರ್ನಾಟಕ ಗಣಿ ನಿರ್ದೇಶಕರನ್ನೊಳಗೊಂಡ ಸಮಿತಿಯನ್ನು ಹಸಿರು ನ್ಯಾಯಮಂಡಳಿ ಅಧ್ಯಕ್ಷರಾದ ನ್ಯಾಯಮೂರ್ತಿ ಎ.ಕೆ.ಗೋಯಲ್ ಅವರು ರಚನೆ ಮಾಡಿದ್ದರು.
ಅದರಂತೆ ಸಮಿತಿಯ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿದರಲ್ಲದೆ, ಎಲ್ಲ ಆಯಾಮಗಳಲ್ಲೂ ಪರಿಶೀಲನೆ ನಡೆಸಿದರು ಎಂಬುದಾಗಿ ಕೆಲ ಉನ್ನತ ಮೂಲಗಳು ಸಿಕೆನ್ಯೂಸ್ ನೌ ಗೆ ತಿಳಿಸಿವೆ.
ದುರಂತಕ್ಕೆ ಕಾರಣವಾದ ಕ್ರಷರ್, ಕ್ವಾರಿಗಳು ಹಾಗೂ ಸ್ಫೋಟ ಸಂಭವಿಸಿದ ಸ್ಥಳಕ್ಕೆ ಸಮಿತಿ ಸದಸ್ಯರು ಭೇಟಿ ನೀಡಿದರು. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ & ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಚಿಕ್ಕಬಳ್ಳಾಪುರ ಜಿಲ್ಲಾ ಮ್ಯಾಜಿಸ್ಟ್ರೇಟ್, ರಾಜ್ಯ ಗಣಿ ಇಲಾಖೆಯ ಮಹಾ ನಿರ್ದೇಶಕರು, ಗಣಿ ಸ್ಫೋಟಗಳ ನಿಯಂತ್ರಣಾಧಿಕಾರಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಧಿಕಾರಿಗಳು, ನಾಗಪುರ ಮತ್ತು ಕರ್ನಾಟಕ ಗಣಿ ನಿರ್ದೇಶಕರನ್ನೊಳಗೊಂಡ ಸಮಿತಿ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿದವರು.
ಜತೆಗೆ, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಗುಡಿಬಂಡೆ ಪೊಲೀಸ್ ಠಾಣೆ ಆಧಿಕಾರಿಗಳು ಎನ್‌ಜಿಟಿ ಸಮಿತಿ ಜತೆಯಲ್ಲಿದ್ದರು.
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
ಈ ಸಂದರ್ಭದಲ್ಲಿ ಸಮಿತಿಯು ಕೂಲಂಕಶವಾಗಿ ಎಲ್ಲ ಮಾಹಿತಿಯನ್ನೂ ಸಂಗ್ರಹ ಮಾಡಿದೆ. ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಇಲಾಖೆಯಿಂದ ಅಗತ್ಯವಾದ ಎಲ್ಲ ವಿವರಗಳನ್ನೂ ಶೇಖರಣೆ ಮಾಡಿತು. ಅಷ್ಟೇ ಅಲ್ಲದೆ, ಈಗಾಗಲೇ ತನಗೆ ಸಿಕ್ಕಿರುವ ಮಾಹಿತಿ, ಮಾಧ್ಯಮಗಳು ಮಾಡಿರುವ ವರದಿಗಳು ಇತ್ಯಾದಿಗಳನ್ನು ಇಟ್ಟುಕೊಂಡು ತನಿಖೆ ಮಾಡಿದೆ. ಹಾಗೆಯೇ ಜಿಲ್ಲಾಡಳತದಿಂದ ಕೆಲ ಮಹತ್ವದ ದಾಖಲೆಗಳನ್ನು ಪಡೆದುಕೊಂಡದೆ ಎಂಬ ಮಾಹಿತಿ ಸಿಕ್ಕಿದೆ.
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..