by GS Bharath Gudibande
ಗುಡಿಬಂಡೆ: ಕೊರೋನಾ 2ನೇ ಅಲೆಯಲ್ಲಿ ಸೋಂಕಿನ ಪ್ರಮಾಣ ತೀವ್ರವಾಗಿತ್ತು. ರಾಜ್ಯದಲ್ಲಿ 3ನೇ ಅಲೆಯ ಭೀತಿಯ ನಡುವೆ ವೆಸ್ಟ್ರನ್ ಆಸ್ಟ್ರೇಲಿಯಾದ ಕನ್ನಡ ಸಂಘವು ಕನ್ನಡಾಭಿನ ಮೆರೆದಿದ್ದು ಕರ್ನಾಟಕ ರಾಜ್ಯದ ಗಡಿಯಲ್ಲಿರುವ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಗೆ ಆಮ್ಲಜನಕ ಸಾಂದ್ರಕಗಳನ್ನು (ಆಕ್ಸಿಜನ್ ಕಾನ್ಸೆಂಟ್ರೇಟರ್) ಕಳುಹಿಸುತ್ತಿದ್ದಾರೆ.
ವೆಸ್ಟ್ರನ್ ಆಸ್ಟ್ರೇಲಿಯಾದ ಕನ್ನಡ ಸಂಸ್ಥೆ, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಹಯೋಗದಲ್ಲಿ, ಗುಡಿಬಂಡೆ ತಾಲೂಕು ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಬುಲೆಟ್ ಶ್ರೀನಿವಾಸ್ ಅವರು ಆಸ್ಟ್ರೇಲಿಯಾದಿಂದ ಗುಡಿಬಂಡೆಗೆ 4 ಆಕ್ಸಿಜನ್ ಕಾನ್ಸೆಂಟ್ರೇಟರ್ ತರಿಸಲು ಶ್ರಮಿಸಿದ್ದಾರೆ.
ಆಸ್ಟ್ರೇಲಿಯಾದಿಂದ ಭಾರತಕ್ಕೆ
ಕರ್ನಾಟಕ ರಾಜ್ಯದಲ್ಲಿ ಕೊರೋನಾ ಸೋಂಕಿಗೆ ತೀವ್ರವಾಗಿ ಒಳಗೊಂಡ ಸೋಂಕಿತರು ಆಕ್ಸಿಜನ್ ಇಲ್ಲದೆ ಪರದಾಡಿದ್ದರು. ಹಾಗಾಗಿ ಅದನ್ನು ಅರಿತ ವೆಸ್ಟ್ರನ್ ಆಸ್ಟ್ರೇಲಿಯಾದ ಕನ್ನಡ ಪರ ಸಂಘಟನೆಯು, ಆರ್ಟ್ ಆಫ್ ಲಿವಿಂಗ್ ಸಹಯೋಗದಿಂದ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಗೆ ಆಕ್ಸಿಜನ್ ಕಾನ್ಸೆಂಟ್ರೇಟರ್‌ಗಳನ್ನು ಕಳುಹಿಸಿದ್ದಾರೆ.
ಕೆಲ ವರ್ಷಗಳಿಂದ ವಿದೇಶದಲ್ಲಿ ಕೆಲಸ ಮಾಡಿ, ಅಲ್ಲೇ ವಾಸ ಮಾಡುತ್ತಿರುವ ಕನ್ನಡಿಗರ ಭಾಷಾಭಿಮಾನ ಕಡಿಮೆಯಾಗಿಲ್ಲ. ವೆಸ್ಟ್ರನ್ ಆಸ್ಟ್ರೇಲಿಯಾದಲ್ಲಿ ಕೂಡ ಕನ್ನಡಪರ ಸಂಘ ಮಾಡಿಕೊಂಡು ವಿದೇಶದಲ್ಲಿರುವ ಕನ್ನಡಿಗರಿಗೆ ನೆರವಾಗಿ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.
ವೆಸ್ಟ್ರನ್ ಆಸ್ಟ್ರೇಲಿಯಾದಲ್ಲಿ ನನ್ನ ಸ್ನೇಹಿತ ನರೇಂದ್ರ ಕುಮಾರ್ ಅವರ ಮೂಲಕ ಅಲ್ಲಿನ ಕನ್ನಡ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಮತ್ತು ಆರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಂಕರ್ ಗುರೂಜೀ ಸಹಯೋಗದಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಆಕ್ಸಿಜನ್ ಕಾನ್ಸೆಂಟ್ರೇಟರ್‌ಗಳನ್ನು ಕಳುಹಿಸುತ್ತಿದ್ದಾರೆ. ವಿದೇಶದಲ್ಲಿ ಇದ್ದರು ಕನ್ನಡಾಭಿಮಾನದಿಂದ ಕನ್ನಡಿಗರ ಸೆವೆ ಮಾಡುತ್ತಿರುವುದು ಶ್ಲಾಘನೀಯ, ಇದಕ್ಕೆ ಸಹಕರಿಸಿದ ತಹಸೀಲ್ದಾರ್ ಸಿಬ್ಗತ್ ವುಲ್ಲಾ ಹಾಗೂ ಟಿ.ಹೆಚ್.ಒ ಡಾ.ನರಸಿಂಹಮೂರ್ತಿ ಅವರಿಗೆ ಧನ್ಯವಾದಗಳು.
ಬುಲೆಟ್ ಶ್ರೀನಿವಾಸ್ / ಅಧ್ಯಕ್ಷ, ಜಯಕರ್ನಾಟಕ, ಗುಡಿಬಂಡೆ
ಕೊರೋನಾ ಸಂದರ್ಭದಲ್ಲಿ ಗುಡಿಬಂಡೆ ತಾಲೂಕಿನ ಜನ ಆಕ್ಸಿಜನ್‌ಗಾಗಿ ಪರದಾಡಿದ್ದರು. ಹಾಗಾಗಿ ವೆಸ್ಟ್ರನ್ ಆಸ್ಟ್ರೇಲಿಯಾದ ಕನ್ನಡ ಸಂಸ್ಥೆಯವರು ಮಾನವೀಯತೆಯಿಂದ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಗೆ ಆಕ್ಸಿಜನ್ ಕಾನ್ಸೆಂಟ್ರೇಟರ್ ನೀಡುತ್ತಿದ್ದಾರೆ.
ಎಂ.ನರೇಂದ್ರ ಕುಮಾರ್ / ಆಸ್ಟ್ರೇಲಿಯಾದಲ್ಲಿನ ಉದ್ಯೋಗಿ ಹಾಗೂ ಮೂಲತಃ ಗುಡಿಬಂಡೆಯವರು
ವೆಸ್ಟ್ರನ್ ಆಸ್ಪತ್ರೆಯಾ ಸರ್ಕಾರದ ಬಳಿ ಮನವಿ ಮಾಡಿ, ಕನ್ನಡಪರ ಸಂಸ್ಥೆ, ಇನ್ಂಟರ್ ನ್ಯಾಷನಲ್ ಅಸೋಸಿಯೇಷನ್ ಫಾರ್ ಹ್ಯೂಮನ್ ವ್ಯಾಲ್ಯೂಸ್ ಸಹಯೋಗದಿಂದ ಭಾರತಕ್ಕೆ ಆಕ್ಸಿಜನ್ ಕಾನ್ಸೆಂಟ್ರೇಟರ್ ಕಳುಹಿಸುತ್ತಿದ್ದೇವೆ, ನಾವು ವಿದೇಶದಲ್ಲಿ ಕೆಲಸ ಮಾಡುತ್ತಿದ್ದರು ಭಾರತ ಹಾಗೂ ಕನ್ನಡದ ಅಭಿಮಾನ ನಮಗೆ ಕಡಿಮೆಯಾಗುವುದಿಲ್ಲ, ಕೊರೋನಾ ಸಂದರ್ಭದಲ್ಲಿ ರಾಜ್ಯವು ಆಕ್ಸಿಜನ್ ಸಂಕಷ್ಟಕ್ಕೆ ಸಿಲುಕಿತ್ತು ಹಾಗಾಗಿ ವೆಸ್ಟ್ರನ್ ಆಸ್ಟ್ರೇಲಿಯಾದಿಂದ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಗೆ ಆಕ್ಸಿಜನ್ ಕಾನ್ಸೆಂಟ್ರೇಟರ್ ಕಳುಹಿಸುತ್ತಿದ್ದೇವೆ.
ಅರುಣ್‌ಕುಮಾರ್ / ಕನ್ನಡಪರ ಸಂಘದ ಅಧ್ಯಕ್ಷ, ವೆಸ್ಟ್ರನ್ ಆಸ್ಟ್ರೇಲಿಯಾ