• About
  • Advertise
  • Careers
  • Contact
Sunday, November 29, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS NATION

ಸ್ಟಿಂಗ್ ಆಪರೇಷನ್‌; ಸಿಬಿಐ ತನಿಖೆಗೆ HDK ಆಗ್ರಹ

cknewsnow desk by cknewsnow desk
October 14, 2026
in NATION, STATE
Reading Time: 2 mins read
0
ಸ್ಟಿಂಗ್ ಆಪರೇಷನ್‌; ಸಿಬಿಐ ತನಿಖೆಗೆ HDK ಆಗ್ರಹ
917
VIEWS
FacebookTwitterWhatsuplinkedinEmail

ಷಡ್ಯಂತ್ರ್ಯದ ವಿರುದ್ಧ ಸಿದ್ದರಾಮಯ್ಯ ಗಟ್ಟಿ ದನಿ ಎತ್ತಲಿ ಎಂದ ಕೇಂದ್ರ ಸಚಿವರು; ರಾಜಕೀಯ ವಿರೋಧಿಗಳು, ಶಾಸಕರು, ಸಚಿವರ ವಿರುದ್ಧ ಸದಾಶಿವನಗರದಲ್ಲಿ ಫೋನ್ ಟ್ಯಾಪಿಂಗ್ ಸೆಂಟರ್

ಫೋನ್ ಟ್ಯಾಪಿಂಗ್ ಮಾಡಲು ನಿವೃತ್ತ ಪೊಲೀಸ್ ಅಧಿಕಾರಿಗಳ ನೇಮಕ

ಬೆಂಗಳೂರು: ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್‌ಗಳ ಹೆಸರಿನಲ್ಲಿ ರಾಜಕೀಯ ನಾಯಕರು ಮತ್ತು ಅವರ ಕುಟುಂಬಗಳನ್ನು ಗುರಿ ಮಾಡಲಾಗುತ್ತಿದೆ ಎಂಬ ಆರೋಪಗಳ ಕುರಿತು ಸಮಗ್ರ, ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಆ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಆಗ್ರಹಿಸಿದರು.

ಅಲ್ಲದೆ, ಈ ಬಗ್ಗೆ ಕೇಂದ್ರದ ಗೃಹ ಸಚಿವರಾದ ಅಮಿತ್ ಶಾ ಅವರನ್ನು ಭೇಟಿಯಾಗಿ ಚರ್ಚೆ ಮಾಡುತ್ತೇನೆ ಹಾಗೂ ಅವರಿಗೆ ದೂರನ್ನು ನೀಡುತ್ತೇನೆ ಎಂದು ಸಚಿವರು ಹೇಳಿದರು.

ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವರು; ಈ ಪ್ರಕರಣಗಳ ಹಿಂದೆ ಯಾರು ಇದ್ದಾರೆ? ಕಾರ್ಯಾಚರಣೆಗಳನ್ನು ಯಾರು ನಡೆಸಿದ್ದಾರೆ? ಯಾರ ಯಾರ ಪಾತ್ರವಿದೆ? ಎಂಬುದನ್ನು ತನಿಖೆಯಿಂದ ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು ಹಾಗೂ ಪ್ರಕರಣದ ಸತ್ಯಾಸತ್ಯತೆ ಹೊರಬರಲು ಸಿಬಿಐ ತನಿಖೆ ಅಗತ್ಯ ಎಂದು ಅವರು ಹೇಳಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವಿರುದ್ಧ ನಡೆಸಿರುವ ಷಡ್ಯಂತ್ರಕ್ಕೆ ಹೆದರುವ ಅಗತ್ಯವಿಲ್ಲ. ಅವರು ಈಗಿನ ಸಿದ್ದರಾಮಯ್ಯ ಆಗಿರಬಾರದು. ಅವರು ಹಿಂದಿನ ಹೋರಾಟ ಮನೋಭಾವದ ಸಿದ್ಧರಾಮಯ್ಯ ಮಾತನಾಡಬೇಕು. ಇದರ ಬಗ್ಗೆ ಮೌನ ವಹಿಸುವುದು ಸರಿಯಲ್ಲ. ನಾನೊಬ್ಬನೇ ಮಾತನಾಡಿದರೆ ಸಾಕಾಗುವುದಿಲ್ಲ ಎಂದು ಎಂದು ಕುಮಾರಸ್ವಾಮಿ ಅವರು ಹೇಳಿದರು.

ಹಿಂದೆ ಮಾಜಿ ಮುಖ್ಯಮಂತ್ರಿ ಒಬ್ಬರ ವಿರುದ್ಧ ಸ್ಟಿಂಗ್ ಮಾಡಿದರು, ಆಮೇಲೆ ರಮೇಶ್ ಜಾರಕಿಹೊಳಿ ಅವರನ್ನು ಮುಗಿಸಿದರು, ಅದಾದ ಮೇಲೆ ಅದೇ ಸಮುದಾಯದ ಕೆ.ಎನ್.ರಾಜಣ್ಣ ಅವರನ್ನು ತೆಗೆದರು. ನಮ್ಮ ಪಕ್ಷದ ನಾಯಕನೇ ಸಿಡಿ ಪ್ಯಾಕ್ಟರಿ ನಡೆಸುತ್ತಿದ್ದಾನೆ ಎಂದು ರಾಜಣ್ಣ ಹೇಳಿದರೂ ಆಮೇಲೆ ಅವರ ಬಾಯಿ ಮುಚ್ಚಿಸಿದರು. ಈಗ ಸಿದ್ದರಾಮಯ್ಯ ಅವರ ಸರದಿ ಬಂದಿದೆ ಎಂದು ಸಚಿವರು ಹೇಳಿದರು.

ಸದಾಶಿವನಗರದಲ್ಲಿ ಪೋನ್‌ ಟ್ಯಾಫಿಂಗ್; ನಿಗಾ ಇಡಲು ನಿವೃತ್ತ ಪೊಲೀಸ್ ಅಧಿಕಾರಿಗಳ ನೇಮಕ

ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದ ನಂತರ ಸದಾಶಿವನಗರದ ಮನೆಯಲ್ಲಿ ನಾಲ್ವರು ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ನೇಮಿಸಿಕೊಂಡು, ಅತ್ಯಾಧುನಿಕ ಉಪಕರಣಗಳ ಮೂಲಕ ಸಚಿವರು ಹಾಗೂ ಇತರರು ಏನು ಚರ್ಚಿಸುತ್ತಾರೆ ಎಂಬ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂಬ ಮಾಹಿತಿ ತಮಗೆ ಬಂದಿದೆ ಎಂದು ಕುಮಾರಸ್ವಾಮಿ ಅವರು ಸಂದರ್ಭದಲ್ಲಿ ಸ್ಪೋಟಕ ಸಂಗತಿಯನ್ನು ಬಹಿರಂಗ ಮಾಡಿದರು.

ಸದಾಶಿವನಗರದಲ್ಲಿ ನಡೆಸಲಾಗುತ್ತಿರುವ ಫೋನ್ ಟ್ಯಾಪಿಂಗ್, ನಿಗಾ ವ್ಯವಸ್ಥೆಯ ಬಗ್ಗೆ ಪೊಲೀಸ್ ಇಲಾಖೆಯಲ್ಲೂ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಎಂಬ ಮಾಹಿತಿ ನನಗೆ ಬಂದಿದೆ ಎಂದು ಹೇಳಿದ ಕೇಂದ್ರ ಸಚಿವರು; ಸಿಎಂ ಆಗಿರುವ ವ್ಯಕ್ತಿ ತನ್ನ ಸ್ಥಾನ ಭದ್ರ ಮಾಡಿಕೊಳ್ಳಲು ಸ್ವಪಕ್ಷದ ಶಾಸಕರು, ಸಚಿವರ ಮೇಲೆಯೇ ನಿಗಾ ಇಟ್ಟರೆ ಕಥೆ ಏನು? ಈ ಎಲ್ಲಾ ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಲು ಸಿಬಿಐ ತನಿಖೆ ಅಗತ್ಯವೆಂದರು ಕುಮಾರಸ್ವಾಮಿ ಅವರು.

ಸಚಿವರು ಮತ್ತು ರಾಜಕೀಯ ನಾಯಕರ ಫೋನ್‌ಗಳನ್ನು ಟ್ಯಾಪ್ ಮಾಡಲಾಗುತ್ತಿದೆ ಎಂಬುದು ಗಂಭೀರ ವಿಷಯ. ಅವರ ಚಟುವಟಿಕೆಗಳನ್ನು ಗಮನಿಸಲು ಪ್ರತ್ಯೇಕ ವ್ಯವಸ್ಥೆ ಅಥವಾ ಘಟಕವಿದೆ ಎಂಬುದು ಅಘಾತಕಾರಿ ಸಂಗತಿ. ಆದರೆ ಮುಖ್ಯಮಂತ್ರಿ ಸ್ವತಃ ಇದಕ್ಕೆ ಆದೇಶಿಸಿದ್ದಾರೆ ಎಂದು ತಾನು ಹೇಳುತ್ತಿಲ್ಲ; ಇಲಾಖೆಗಳಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತನಿಖೆಯಿಂದ ಪರಿಶೀಲಿಸಬೇಕು ಎಂದು ಸ್ಪಷ್ಟಪಡಿಸಿದರು.

ತಮ್ಮ ಫೋನ್‌ ಟ್ಯಾಪ್ ಆಗಿದೆಯೇ ಎಂಬ ಪ್ರಶ್ನೆಗೆ, ತಾವು ಎಲ್ಲ ವಿಚಾರಗಳನ್ನು ಬಹಿರಂಗವಾಗಿ ಚರ್ಚಿಸುವುದರಿಂದ ಮರೆಮಾಚುವುದೇನೂ ಇಲ್ಲ ಎಂದು ಉತ್ತರಿಸಿದರು.

ಬಾಲಕಿ ಕುರಿತು ಸಲ್ಲಿಕೆಯಾದ ದೂರು ಮತ್ತು ಸ್ಟಿಂಗ್‌ ಆರೋಪ

ಬೆಂಗಳೂರಿನ ನೈಜ ಹೋರಾಟಗಾರರ ವೇದಿಕೆ ಎಂಬುದು ಅಕ್ಟೋಬರ್ 9ರಂದು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ, ಬಾಲನ್ಯಾಯಕ್ಕೆ ಸಂಬಂಧಿಸಿದ ಸಮಿತಿ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧಿಕಾರಿಗಳಿಗೆ ದೂರು ಸಲ್ಲಿಸಿದೆ ಎಂಬ ಮಾಹಿತಿಯನ್ನು ಕುಮಾರಸ್ವಾಮಿ ಅವರು ಇದೇ ಸಂದರ್ಭದಲ್ಲಿ ಉಲ್ಲೇಖಿಸಿದರು.

ಆ ದೂರಿನಲ್ಲಿ ಹದಿನಾಲ್ಕು ವರ್ಷದ ಬಾಲಕಿ ಬಗ್ಗೆ ಮಾಹಿತಿ ಇದೆ. ಈಗ ಆ ಬಾಲಕಿ ವಯಸ್ಕಲಾಗಿದ್ದು, ಆಕೆಯನ್ನು ಪ್ರೇರೇಪಿಸಿ ಸ್ಟಿಂಗ್ ಆಪರೇಷನ್ ನಡೆಸಲಾಗಿದೆ ಎಂಬ ಆರೋಪವಿದೆ ಎಂದು ಅರ್ಜಿಯಲ್ಲಿ ಹೇಳಿದ್ದಾರೆ. ಈ ದೂರಿನಲ್ಲಿರುವ ಆರೋಪಗಳೂ ತನಿಖೆಯಿಂದ ಪರಿಶೀಲನೆಯಾಗಬೇಕು ಎಂದು ಸಚಿವರು ಹೇಳಿದರು.

ಸ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ್ಯಾಯಾಲಯದಿಂದ ತಡೆ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಪ್ರಸಾರವಾಗಿರುವುದನ್ನೂ ಪ್ರಸ್ತಾಪಿಸಿದ ಕೇಂದ್ರ ಸಚಿವರು; ಯಾವುದೇ ವಿಚಾರದಲ್ಲಿ ತಪ್ಪಿದ್ದರೆ ಅಂತಿಮವಾಗಿ ಸಂವಿಧಾನಾತ್ಮಕ ಮತ್ತು ನ್ಯಾಯಾಂಗ ಸಂಸ್ಥೆಗಳ ಮೂಲಕ ಸತ್ಯ ಹೊರಬರಬೇಕು. ನ್ಯಾಯಾಲಯದ ತೀರ್ಪಿಗೆ ತಲೆಬಾಗಬೇಕು ಎಂಬುದು ತಮ್ಮ ನಿಲುವು. ತಮ್ಮ ಕುಟುಂಬ ಕೂಡ ಇಂಥ ವಿಚಾರದಲ್ಲಿ ಸಂಕಷ್ಟಕ್ಕೆ ಸಿಲುಕಿದಾಗ ಈ ರಕ್ಷಣೆ ಪಡೆಯಲು ನ್ಯಾಯಾಲಯದ ಮೊರೆ ಹೋಗಿಲ್ಲ ಎಂದು ಅವರು ತಿಳಿಸಿದರು.

ಪೆನ್‌ಡ್ರೈವ್‌ ಹಂಚಿಕೆ, ವಿಡಿಯೋಗಳನ್ನು ಹರಿದುಬಿಟ್ಟ ದುರುಳರ ವಿರುದ್ಧ ಕ್ರಮವೀಯ:*2024ರ ಲೋಕಸಭಾ ಚುನಾವಣೆಗೆ ಎರಡು ದಿನ ಬಾಕಿ ಇರುವಾಗ ಮಂಡ್ಯ ಮತ್ತು ಹಾಸನ ಭಾಗಗಳಲ್ಲಿ ವಿಡಿಯೊಗಳನ್ನು ಪೆನ್‌ಡ್ರೈವ್‌ಗಳಲ್ಲಿ ಹಂಚಲಾಗಿದೆ ಎಂದು ಹೇಳಿದ ಕುಮಾರಸ್ವಾಮಿ ಅವರು; ವಿಡಿಯೋಗಳಲ್ಲಿ ಇದ್ದ ಮಹಿಳೆಯರ ಮುಖಗಳನ್ನು ಮರೆಮಾಚಲಿಲ್ಲ. ಲೋಕಸಭೆಯ ಇವತ್ತಿನ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ನಾನೂರು ಮಹಿಳೆಯರ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿದ್ದರು. ಆ ನಾನೂರು ಜನ ಮಹಿಳೆಯರಲ್ಲಿ ಎಷ್ಟು ಜನ ಬಂದು ಕೇಸು ದಾಖಲು ಮಾಡಿದ್ದಾರೆ? ಎಂದು ಪ್ರಶ್ನಿಸಿದರು.

ಪೆನ್‌ಡ್ರೈವ್‌ಗಳಲ್ಲಿ ಹಲವು ಮಹಿಳೆಯರ ವಿಡಿಯೊಗಳನ್ನು ಹಂಚಿ ಅವರ ಕುಟುಂಬಗಳ ಗೌರವಕ್ಕೆ ಧಕ್ಕೆ ಉಂಟು ಮಾಡಿದರು. ವಿಡಿಯೊಗಳನ್ನು ಹೊರಕ್ಕೆ ಬಿಟ್ಟಾಗ ಆ ಮಹಿಳೆಯರ ಮುಖಗಳನ್ನು ಮಸುಕುಗೊಳಿಸಿ ಗೌಪ್ಯತೆ ಕಾಪಾಡಲಿಲ್ಲ. ಆ ವಿಡಿಯೊಗಳನ್ನು ಸಿದ್ಧಪಡಿಸಿ ಹಂಚಿದವರು ಯಾರು? ಯಾವ ಸ್ಥಳದಲ್ಲಿ ಸಿದ್ಧಪಡಿಸಲಾಯಿತು? ಅವುಗಳನ್ನು ಹಂಚಿದವರ ವಿರುದ್ಧ ಏನು ಕ್ರಮ ಕೈಗೊಳ್ಳಲಾಯಿತು? ಅವರೆಲ್ಲರೂ ದಿನವೂ ಹಾಸನದಲ್ಲಿ ಡಾನ್ಸ್ ಮಾಡಿಕೊಂಡು ತಿರುಗುತ್ತಿದ್ದಾರೆ. ಇದಕ್ಕೆ ಈ ಸರಕಾರ ಉತ್ತರ ಕೊಡಬೇಕು ಎಂದು ಸಚಿವರು ಒತ್ತಾಯಿಸಿದರು.

ತಮ್ಮ ಕುಟುಂಬದ ಬಗ್ಗೆ, ನಮ್ಮ ತಾಯಿಯ ವಿರುದ್ಧವೂ ಸುದ್ದಿಗಳನ್ನು ಪ್ರಸಾರ ಮಾಡಲಾಯಿತು. ಕುಟುಂಬದವರು ಹಲವು ರೀತಿಯ ನಿಂದನೆಗಳನ್ನು ಎದುರಿಸಿದ್ದಾರೆ. ಅದಾಗ್ಯೂ ನಾವು ಯಾರೂ ಕೋರ್ಟ್ ಮೊರೆ ಹೋಗಿ ರಕ್ಷಣೆ ಪಡೆಯಲು ಹೋಗಲಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.

ನಾನು ಈ ವ್ಯಕ್ತಿಯನ್ನು ಇಂದಿಗೂ ಮುಖ್ಯಮಂತ್ರಿ ಎಂದು ಹೇಳಲು ಸಿದ್ಧನಿಲ್ಲ, ನಮ್ಮ ರಾಜ್ಯಕ್ಕೆ ಇಂತಹ ಸ್ಥಿತಿ ಬರಬಾರದಾಗಿತ್ತು ಎಂದ ಸಚಿವರು; ನನ್ನ ತಾಯಿಯನ್ನೂ ಬಿಡಲಿಲ್ಲ ಇವರು. ದಿನವೂ ದೇವರ ಕೋಣೆಯಲ್ಲಿ ಬದುಕಿದವರು ನನ್ನ ತಾಯಿ, ಅವರ ಬಗ್ಗೆಯೂ ಸರಣಿ ಕಥೆಗಳನ್ನು ಸೃಷ್ಟಿಸಿದಿರಿ, ಈ ರೀತಿಯ ವಾತಾವರಣ ನಿರ್ಮಾಣ ಮಾಡಿರುವ ವ್ಯಕ್ತಿಯ ನಿರಂತರ ಕಸುಬೇ ಅಂತಹದ್ದು ಎಂದು ಮುಖ್ಯಮಂತ್ರಿ ಡಿಕೆಶಿ ವಿರುದ್ಧ ಕೇಂದ್ರ ಸಚಿವರು ಹರಿಹಾಯ್ದರು.

ಸುದೀರ್ಘ ಕಾಲ ಆಡಳಿತ ನಡೆಸಿದ ಅನುಭವವಿರುವ ಸಿದ್ದರಾಮಯ್ಯ ಅವರು ಕೋರ್ಟ್‌ಗಳಿಂದ ತಡೆಯಾಜ್ಞೆ ಪಡೆಯುವ ಬದಲು ದಿಟ್ಟವಾಗಿ ನಿಲ್ಲಬೇಕು. ಅಹಿಂದ ನಾಯಕರು ಇಂತಹ ಕೆಟ್ಟ ಬೆಳವಣಿಗೆಗಳನ್ನು ವಿರೋಧಿಸದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ. ಹೀಗಾಗಿ, ಹೋರಾಟ ಮಾಡಿ, ಉನ್ನತ ತನಿಖೆ ನಡೆಸಿ ಎಂದು ಸಚಿವರು ಕರೆ ನೀಡಿದರು.ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸಿರುವುದನ್ನು ತಾವು ಟೀಕಿಸಿಲ್ಲ ಎಂದು ಹೇಳಿದ ಅವರು; ಅದೇ ರೀತಿಯ ಗಂಭೀರತೆ ಇತರ ಪ್ರಕರಣಗಳಲ್ಲಿಯೂ ಇರಬೇಕು ಎಂದರು.

ಪೆನ್‌ಡ್ರೈವ್‌ಗಳನ್ನು ತಯಾರಿಸಿ ಹಂಚಿದವರ ವಿರುದ್ಧ ಎಷ್ಟು ಮಂದಿಯನ್ನು ಬಂಧಿಸಲಾಗಿದೆ? ಎಷ್ಟು ಮಹಿಳೆಯರು ದೂರು ನೀಡಿದ್ದಾರೆ? ತನಿಖೆಯಲ್ಲಿ ಏನು ಪತ್ತೆಯಾಗಿದೆ? ಪ್ರಶ್ನಿಸಿದ ಅವರು; ಒಬ್ಬರನ್ನು ಜೈಲಿಗೆ ಕಳುಹಿಸಲು ಎಸ್ ಐಟಿಗೆ ₹35 ಲಕ್ಷ ಬಹುಮಾನ ನೀಡಲಾಗಿದೆ ಎಂದು ಅವರು ಕಿಡಿಕಾರಿದರು.

ಸಿದ್ದರಾಮಯ್ಯ ಅವರಿಗೆ ಹೆಚ್ಡಿಕೆ ಮನವಿ

ಯಾವುದೇ ಕಾರಣಕ್ಕೂ ಈ ಕುತಂತ್ರಕ್ಕೆ ನೀವು ಹೆದರಬಾರದು ಎಂದು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಸಚಿವ ಕುಮಾರಸ್ವಾಮಿ ಅವರು; ನೀವು ಎಂಟು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು. ದಿವಂಗತ ದೇವರಾಜ ಅರಸು ಅವರ ದಾಖಲೆಯನ್ನು ಮೀರಿದ ನಾಯಕ ನೀವು. ಇಂತಹ ಹಿನ್ನೆಲೆ ಹೊಂದಿರುವ ನೀವು ನಿಮ್ಮ ವಿರುದ್ಧ ನಿಮ್ಮ ಪಕ್ಷದಲ್ಲಿ ನಡೆದಿರುವ ಸಂಚಿಗೆ ಹೆದುರುವ ಅಗತ್ಯವಿಲ್ಲ. ನಿಮಗೆ ಕಳಂಕ ಬರಲು ಬಿಡುವುದಿಲ್ಲ. ನೀವು ನ್ಯಾಯಾಲಯದ ಮೊರೆ ಹೋಗುವ ಸ್ಥಿತಿಗೆ ಏಕೆ ತಳ್ಳಲ್ಪಟ್ಟಿದ್ದೀರಿ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯನವರ ವಿರುದ್ಧ ತಾನು ಹಿಂದೆ ರಾಜಕೀಯವಾಗಿ ಹೋರಾಡಿದ್ದೇನೆ, ವಿಧಾನಸಭೆಯಲ್ಲಿ ಅವರ ಜತೆ ವಾಗ್ವಾದಗಳೂ ನಡೆದಿವೆ ಎಂದ ಸಚಿವರು; ಈಗ ನಾನು ಅವರ ಮೇಲೆ ಅನುಕಂಪದಿಂದ ಮಾತನಾಡುತ್ತಿಲ್ಲ. ಆದರೆ, ಅವರ ವಿರುದ್ಧ ನಡೆದಿರುವ ಷಡ್ಯಂತ್ರ್ಯದ ಬಗ್ಗೆ ಮಾತ್ರ ಹೇಳುತ್ತಿದ್ದೇನೆ. ಸಿದ್ದರಾಮಯ್ಯ ಅವರು ಸ್ಟಿಂಗ್‌ ಆಪರೇಷನ್‌ಗಳ ವಿರುದ್ಧ ತಮ್ಮ ಹಿಂದಿನ ಗಟ್ಟಿಯಾದ ದನಿಯಲ್ಲಿ ಮಾತನಾಡಿ ಇಂತಹ ಪ್ರವೃತ್ತಿಗೆ ಅಂತ್ಯ ಹಾಡಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್‌ ಸರ್ಕಾರವನ್ನು ವಜಾಗೊಳಿಸಬೇಕು ಅಥವಾ ಸರ್ಕಾರ ಕೆಡವಬೇಕು ಎಂದು ತಾನು ಹೇಳುತ್ತಿಲ್ಲ. ಸ್ಟಿಂಗ್‌ಗಳ ಮೂಲಕ ಜನರನ್ನು ಮತ್ತು ಕುಟುಂಬಗಳನ್ನು ಗುರಿಯಾಗಿಸುವ ಕೆಟ್ಟ ಸಂಸ್ಕೃತಿ ನಿಲ್ಲಬೇಕು ಎಂಬುದಷ್ಟೇ ತಮ್ಮ ಆಶಯ ಎಂದು ಅವರು ಸ್ಪಷ್ಟಪಡಿಸಿದರು.ಸರ್ಕಾರಕ್ಕೆ ಬಹುಮತವಿದೆ. ಸರ್ಕಾರ ಬೀಳುತ್ತದೆ ಎಂಬ ಭಯದಿಂದ ತನಿಖೆ ತಪ್ಪಿಸಬೇಕಾಗಿಲ್ಲ ಎಂದ ಅವರು; ಶಾಸಕರು, ಸಚಿವರು ಮತ್ತು ಎಲ್ಲ ಪಕ್ಷಗಳ ನಾಯಕರು ಈ ವಿಷಯದಲ್ಲಿ ದನಿ ಎತ್ತಬೇಕು. ಇಂದು ಒಬ್ಬರನ್ನು ಗುರಿಯಾಗಿಸಿದರೆ ನಾಳೆ ಮತ್ತೊಬ್ಬರನ್ನೂ ಗುರಿಯಾಗಿಸಬಹುದು. ಇಂಥ ಚಾಳಿಗೆ ಬಿದ್ದಿರುವ ವ್ಯಕ್ತಿಗಳನ್ನು ಕಟ್ಟಿ ಹಾಕಿ ಅಂಕುಶ ಹಾಕಬೇಕು ಎಂದು ಅವರು ಒತ್ತಾಯಿಸಿದರು.

ಸಿಬಿಐ ತನಿಖೆ ಆಗಬೇಕು ಮತ್ತು ಕೇಂದ್ರ ಗೃಹ ಸಚಿವರಿಗೆ ದೂರು ಕೊಡುವೆ ಎಂದ ಹೆಚ್ಡಿಕೆ

ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ಯಾವುದೇ ರಾಜಕೀಯ ಪ್ರಭಾವವಿಲ್ಲದ ನಿಷ್ಪಕ್ಷಪಾತ ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂದು ಕುಮಾರಸ್ವಾಮಿ ಅವರು ಆಗ್ರಹಿಸಿದರು.ತಪ್ಪಿಲ್ಲದವರು ತನಿಖೆಗೆ ಹೆದರಬೇಕಾಗಿಲ್ಲ. ಯಾರೇ ತಪ್ಪು ಮಾಡಿದ್ದರೂ ಅವರು ತನಿಖೆಗೆ ಒಳಗಾಗಲಿ. ನಾನು ಈ ಬಗ್ಗೆ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರನ್ನು ಭೇಟಿಯಾಗಿ ದೂರು ನೀಡುತ್ತೇನೆ. ನನಗೆ ಲಭ್ಯವಿರುವ ಮಾಹಿತಿಯನ್ನು ನೀಡಿ ಅಲ್ಲಿಂದಲೂ ತನಿಖೆ ನಡೆಸುವಂತೆ ಮನವಿ ಮಾಡುತ್ತೇನೆ ಎಂದು ಅವರು ಹೇಳಿದರು.

ತನಿಖೆಯ ಉದ್ದೇಶ ಯಾರನ್ನಾದರೂ ದುರುದ್ದೇಶಪೂರ್ವಕವಾಗಿ ಸಿಲುಕಿಸುವುದಲ್ಲ. ಸಾರ್ವಜನಿಕ ವಲಯಕ್ಕೆ ಬಂದಿರುವ ಗಂಭೀರ ಆರೋಪಗಳ ಸತ್ಯಾಸತ್ಯತೆ ಹೊರತರುವುದು ನನ್ನ ಉದ್ದೇಶ. ಹಾಲಿ ಮುಖ್ಯಮಂತ್ರಿ ತಮ್ಮ ಆಡಳಿತದಲ್ಲಿ ನಿಜವಾಗಿಯೂ ಶುದ್ಧತೆ ತರಲು ಬಯಸಿದರೆ ಮತ್ತು ಸತ್ಯ ಹಾಗೂ ನ್ಯಾಯವನ್ನು ಉಳಿಸಬೇಕೆಂದಿದ್ದರೆ ಸಿಬಿಐ ತನಿಖೆಗೆ ಅವಕಾಶ ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಇದು ನಮ್ಮ ಕುಟುಂಬ ಅಥವಾ ಒಬ್ಬ ರಾಜಕೀಯ ನಾಯಕನಿಗೆ ಮಾತ್ರ ಸಂಬಂಧಿಸಿದ ವಿಚಾರವಲ್ಲ. ಸ್ಟಿಂಗ್‌ ಆಪರೇಷನ್‌ಗಳ ಮೂಲಕ ಯಾರನ್ನಾದರೂ ಸಿಲುಕಿಸುವ ಪ್ರವೃತ್ತಿ ಮುಂದುವರಿದರೆ ಸಮಾಜದ ನಂಬಿಕೆ ಮತ್ತು ಸಾರ್ವಜನಿಕ ಜೀವನದ ಮೌಲ್ಯಗಳಿಗೆ ಹಾನಿಯಾಗುತ್ತದೆ. ಮೌಲ್ಯಗಳು ದಿನೇದಿನೇ ಕುಸಿಯುತ್ತಿವೆ. ಕುಟುಂಬಗಳ ಗೌರವಕ್ಕೆ ಧಕ್ಕೆ ಬಾರದಂತೆ ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಜನರು ಹಾಗೂ ಜನಪ್ರತಿನಿಧಿಗಳು ದನಿ ಎತ್ತಬೇಕು ಎಂದು ಅವರು ಮನವಿ ಮಾಡಿದರು.

ಬಿಡದಿ, ನೈಸ್‌ ಬಂದಾಗೆಲ್ಲ ಪ್ರಜ್ವಲ್ ವಿಷಯ ಮುನ್ನೆಲೆಗೆ

ಬಿಡದಿ ರೈತರ ಹೋರಾಟ ಮತ್ತು ನೈಸ್‌ ವಿಚಾರಗಳು ಚರ್ಚೆಗೆ ಬಂದ ಸಂದರ್ಭದಲ್ಲಿ ಪ್ರಜ್ವಲ್‌ ರೇವಣ್ಣಗೆ ಸಂಬಂಧಿಸಿದ ಜೈಲು ಘಟನೆಗಳು ಮತ್ತೆ ಮತ್ತೆ ಮುನ್ನೆಲೆಗೆ ಬಂದ ಸಮಯದ ಬಗ್ಗೆ ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ನಡೆದಿತ್ತೆಂದು ಹೇಳಲಾದ ಘಟನೆಗಳ ಬಗ್ಗೆ ಅಧಿಕಾರಿಗಳು ಒಂದೂವರೆ ವರ್ಷ ಏನು ಮಾಡುತ್ತಿದ್ದರು? ಬಿಡದಿ ಹೋರಾಟ ಆರಂಭವಾದಾಗಲೇ ಆ ವಿಚಾರವನ್ನು ಏಕೆ ಹೊರತಂದರು ಎಂದು ಕೇಳಿದ ಅವರು; ಒಬ್ಬರನ್ನು ಹಿಂಡಲಗಾ ಅಥವಾ ಶಿರಾ ಕಡೆಗೆ ಕರೆದೊಯ್ದು ಮತ್ತೆ ಹಿಂದಕ್ಕೆ ಕರೆತಂದ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬಂದಿವೆ. ಪ್ರಜ್ವಲ್ ರೇವಣ್ಣ ಅವರನ್ನು ಹಿಂಡಲಗಾ ಜೈಲಿಗೆ ಕಳಿಸಿ ಎಂದು ಹೇಳಿದವರು ಯಾರು? ಹಿಂದಕ್ಕೆ ಕರೆತರುವಂತೆ ಯಾರು ಸೂಚಿಸಿದರು? ದೂರವಾಣಿ ಕರೆ ಮಾಡಿದವರು ಯಾರು?ಎಂಬುದನ್ನು ಸರಕಾರ ಸ್ಪಷ್ಟಪಡಿಸಬೇಕು. ಸರಕಾರ ಅಥವಾ ಮುಖ್ಯಮಂತ್ರಿ ವಿರುದ್ಧ ಗಂಭೀರ ವಿಷಯಗಳು ಪ್ರಸ್ತಾಪ ಆದಾಗ ಇಂಥ ವಿಷಯಗಳನ್ನು ಮುನ್ನೆಲೆಗೆ ತಂದು ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಎಂದು ಕುಮಾರಸ್ವಾಮಿ ಅವರು ಆರೋಪಿಸಿದರು.

Tags: ckcknewsnowHd Kumaraswamy press meethoney trapkarnataka politicssting aginst former chife minister
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

KPSC ಅಕ್ರಮಕ್ಕೆ ಟ್ವಿಸ್ಟ್; ಪೊಲೀಸರಿಗೆ ದೂರು ಕೊಟ್ಟ ED

KPSC ಅಕ್ರಮಕ್ಕೆ ಟ್ವಿಸ್ಟ್; ಪೊಲೀಸರಿಗೆ ದೂರು ಕೊಟ್ಟ ED

by cknewsnow desk
November 26, 2026
0

ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ ಜಾರಿ ನಿರ್ದೇಶನಾಲಯ

ನಿರ್ಮಾಣ, ಮೂಲಸೌಕರ್ಯ ಉಪಕರಣ ಉದ್ಯಮಕ್ಕೆ ಕೇಂದ್ರದಿಂದ ₹11,000 ಕೋಟಿ ಯೋಜನೆ

ನಿರ್ಮಾಣ, ಮೂಲಸೌಕರ್ಯ ಉಪಕರಣ ಉದ್ಯಮಕ್ಕೆ ಕೇಂದ್ರದಿಂದ ₹11,000 ಕೋಟಿ ಯೋಜನೆ

by cknewsnow desk
November 25, 2026
0

ಹೆಚ್.ಡಿ. ಕುಮಾರಸ್ವಾಮಿ ಅವರ ಕೇಂದ್ರದ ಬೃಹತ್ ಕೈಗಾರಿಕೆ ಸಚಿವಾಲಯದ ಯೋಜನೆಗೆ ಸಂಪುಟ ಅನುಮೋದನೆ

ಕಾಂಗ್ರೆಸ್ಸಿಗರ ಗಂಜಿ ಕೇಂದ್ರಕ್ಕೆ ₹2,000 ಕೋಟಿ; ಆಶಾ ಕಾರ್ಯಕರ್ತರಿಗೆ ₹480 ಕೊಡಲು ಹಣವಿಲ್ಲ!

ಕಾಂಗ್ರೆಸ್ಸಿಗರ ಗಂಜಿ ಕೇಂದ್ರಕ್ಕೆ ₹2,000 ಕೋಟಿ; ಆಶಾ ಕಾರ್ಯಕರ್ತರಿಗೆ ₹480 ಕೊಡಲು ಹಣವಿಲ್ಲ!

by cknewsnow desk
November 25, 2026
0

ರಾಜ್ಯ ಸರಕಾರದ ದ್ವಂದ್ವ ನೀತಿ; ಆರ್. ಅಶೋಕ್ ಕಟು ಟೀಕೆ

ಹೈಕೋರ್ಟ್‌ ಆದೇಶ ರದ್ದು: 2 ವಾರದಲ್ಲಿ ಶರಣಾಗಲು ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಆದೇಶ

ಹೈಕೋರ್ಟ್‌ ಆದೇಶ ರದ್ದು: 2 ವಾರದಲ್ಲಿ ಶರಣಾಗಲು ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಆದೇಶ

by cknewsnow desk
November 25, 2026
0

ಧಾರವಾಡ ಜಿ.ಪಂ ಸದಸ್ಯ ಯೋಗೇಶ್‌ ಗೌಡ ಕೊಲೆ

ಕನ್ನಡಿಗರ ಕಣ್ಣೀರು ಹರಿದರೂ ಚಿಂತೆ ಇಲ್ಲ, ತಮಿಳುನಾಡಿಗೆ ಕಾವೇರಿ ಹರಿಯಲಿ ಎನ್ನುತ್ತಿದೆ ಕಾಂಗ್ರೆಸ್

ಕಾವೇರಿ ವಿಚಾರದಲ್ಲಿ ಕರ್ನಾಟಕ ಮಾಡಿದ ತಪ್ಪುಗಳು

by cknewsnow desk
November 25, 2026
0

ರಾಜಕೀಯ ಇಚ್ಛಾಶಕ್ತಿ ಕೊರತೆ; ತಮಿಳುನಾಡು ಎದುರು ರಾಜ್ಯಕ್ಕೆ ನಿರಂತರ ವೈಫಲ್ಯ

ನವೆಂಬರ್ 16ರಿಂದ ಶಬರಿಮಲೆ ಮಂಡಲೋತ್ಸವ; ಕೋವಿಡ್ ನೆಗೆಟೀವ್ ಪತ್ರ ಇದ್ದರೆ ಮಾತ್ರ ಅಯ್ಯಪ್ಪ ದರ್ಶನ

ಅಯ್ಯಪ್ಪ ಭಕ್ತರಿಗೆ ಕಟ್ಟುನಿಟ್ಟಿನ ಮಾರ್ಗಸೂಚಿ; ಪಂಪಾ ನದಿ ಮಲೀನ ಮಾಡಿದರೆ ₹5000 ದಂಡ

by cknewsnow desk
November 24, 2026
0

ಆರೋಗ್ಯಕ್ಕೆ ಸಂಬಂಧಿಸಿ ಸಲಹೆ; ವಿಮಾನ ಕ್ಯಾಬಿನ್ ನಲ್ಲಿ ಇರುಮುಡಿ ಕಟ್ಟು ಒಯ್ಯಲು ಅನುಮತಿ

Next Post
ಗ್ಯಾಸ್ ಲಾರಿಗೆ ರೇಂಜ್ ರೋವರ್ ಡಿಕ್ಕಿ; ಮಾಲೂರು ಬಿಜೆಪಿ ಮುಖಂಡ ದುರ್ಮರಣ

ಗ್ಯಾಸ್ ಲಾರಿಗೆ ರೇಂಜ್ ರೋವರ್ ಡಿಕ್ಕಿ; ಮಾಲೂರು ಬಿಜೆಪಿ ಮುಖಂಡ ದುರ್ಮರಣ

Leave a Reply Cancel reply

Your email address will not be published. Required fields are marked *

Recommended

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ &  ₹25,000  ಕನಿಷ್ಠ ವೇತನ‌ ; ಮುಖ್ಯಮಂತ್ರಿ & ಹಣಕಾಸು ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಶೀಘ್ರ  ನಿರ್ಧಾರ: ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ & ₹25,000 ಕನಿಷ್ಠ ವೇತನ‌ ; ಮುಖ್ಯಮಂತ್ರಿ & ಹಣಕಾಸು ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಶೀಘ್ರ ನಿರ್ಧಾರ: ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ

6 years ago
ಕೊಲಾರ ಜಿಲ್ಲೆಯಲ್ಲಿ ಆರು ಕಡೆ ಕೋವಿಡ್‌ ಲಸಿಕೆ ವಿತರಣೆ; ಮೊದಲ ಹಂತದಲ್ಲಿ 700 ಜನ ಕೋವಿಡ್‌ ಯೋಧರಿಗೆ ಮಾತ್ರ ವ್ಯಾಕ್ಸಿನೇಶನ್‌ ಎಂದ ಜಿಲ್ಲಾಧಿಕಾರಿ

ಕೊಲಾರ ಜಿಲ್ಲೆಯಲ್ಲಿ ಆರು ಕಡೆ ಕೋವಿಡ್‌ ಲಸಿಕೆ ವಿತರಣೆ; ಮೊದಲ ಹಂತದಲ್ಲಿ 700 ಜನ ಕೋವಿಡ್‌ ಯೋಧರಿಗೆ ಮಾತ್ರ ವ್ಯಾಕ್ಸಿನೇಶನ್‌ ಎಂದ ಜಿಲ್ಲಾಧಿಕಾರಿ

6 years ago

Popular News

  • KPSC ಅಕ್ರಮಕ್ಕೆ ಟ್ವಿಸ್ಟ್; ಪೊಲೀಸರಿಗೆ ದೂರು ಕೊಟ್ಟ ED

    KPSC ಅಕ್ರಮಕ್ಕೆ ಟ್ವಿಸ್ಟ್; ಪೊಲೀಸರಿಗೆ ದೂರು ಕೊಟ್ಟ ED

    0 shares
    Share 0 Tweet 0
  • ನಿರ್ಮಾಣ, ಮೂಲಸೌಕರ್ಯ ಉಪಕರಣ ಉದ್ಯಮಕ್ಕೆ ಕೇಂದ್ರದಿಂದ ₹11,000 ಕೋಟಿ ಯೋಜನೆ

    0 shares
    Share 0 Tweet 0
  • ಕಾಂಗ್ರೆಸ್ಸಿಗರ ಗಂಜಿ ಕೇಂದ್ರಕ್ಕೆ ₹2,000 ಕೋಟಿ; ಆಶಾ ಕಾರ್ಯಕರ್ತರಿಗೆ ₹480 ಕೊಡಲು ಹಣವಿಲ್ಲ!

    0 shares
    Share 0 Tweet 0
  • ಹೈಕೋರ್ಟ್‌ ಆದೇಶ ರದ್ದು: 2 ವಾರದಲ್ಲಿ ಶರಣಾಗಲು ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಆದೇಶ

    0 shares
    Share 0 Tweet 0
  • ಕಾವೇರಿ ವಿಚಾರದಲ್ಲಿ ಕರ್ನಾಟಕ ಮಾಡಿದ ತಪ್ಪುಗಳು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

KPSC ಅಕ್ರಮಕ್ಕೆ ಟ್ವಿಸ್ಟ್; ಪೊಲೀಸರಿಗೆ ದೂರು ಕೊಟ್ಟ ED

KPSC ಅಕ್ರಮಕ್ಕೆ ಟ್ವಿಸ್ಟ್; ಪೊಲೀಸರಿಗೆ ದೂರು ಕೊಟ್ಟ ED

November 26, 2026
ನಿರ್ಮಾಣ, ಮೂಲಸೌಕರ್ಯ ಉಪಕರಣ ಉದ್ಯಮಕ್ಕೆ ಕೇಂದ್ರದಿಂದ ₹11,000 ಕೋಟಿ ಯೋಜನೆ

ನಿರ್ಮಾಣ, ಮೂಲಸೌಕರ್ಯ ಉಪಕರಣ ಉದ್ಯಮಕ್ಕೆ ಕೇಂದ್ರದಿಂದ ₹11,000 ಕೋಟಿ ಯೋಜನೆ

November 25, 2026
ಕಾಂಗ್ರೆಸ್ಸಿಗರ ಗಂಜಿ ಕೇಂದ್ರಕ್ಕೆ ₹2,000 ಕೋಟಿ; ಆಶಾ ಕಾರ್ಯಕರ್ತರಿಗೆ ₹480 ಕೊಡಲು ಹಣವಿಲ್ಲ!

ಕಾಂಗ್ರೆಸ್ಸಿಗರ ಗಂಜಿ ಕೇಂದ್ರಕ್ಕೆ ₹2,000 ಕೋಟಿ; ಆಶಾ ಕಾರ್ಯಕರ್ತರಿಗೆ ₹480 ಕೊಡಲು ಹಣವಿಲ್ಲ!

November 25, 2026
ಹೈಕೋರ್ಟ್‌ ಆದೇಶ ರದ್ದು: 2 ವಾರದಲ್ಲಿ ಶರಣಾಗಲು ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಆದೇಶ

ಹೈಕೋರ್ಟ್‌ ಆದೇಶ ರದ್ದು: 2 ವಾರದಲ್ಲಿ ಶರಣಾಗಲು ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಆದೇಶ

November 25, 2026

Covid 19

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

October 16, 2026
ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ