• About
  • Advertise
  • Careers
  • Contact
Saturday, October 10, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS NATION

₹4,756.48 ಕೋಟಿ ಟೋಲ್ ಸುಲಿಗೆ ಮಾಡಿದ ನೈಸ್

cknewsnow desk by cknewsnow desk
October 9, 2026
in NATION, POLITICS, STATE
Reading Time: 2 mins read
0
₹4,756.48 ಕೋಟಿ ಟೋಲ್ ಸುಲಿಗೆ ಮಾಡಿದ ನೈಸ್
914
VIEWS
FacebookTwitterWhatsuplinkedinEmail

ನೈಸ್ ಯೋಜನಾ ವೆಚ್ಚವೇ ₹1,583,76 ಕೋಟಿ

ತಕ್ಷಣವೇ ಟೋಲ್ ಸಂಗ್ರಹ ನಿಲ್ಲಿಸಬೇಕು ಎಂದು ಆಗ್ರಹಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

ನೈಸ್ ರಸ್ತೆಗೆ ಟೋಲ್ ಕಟ್ಟಬೇಡಿ ಎಂದು ಮತ್ತೊಮ್ಮೆ ಕರೆ ಕೊಟ್ಟ HDK

ಬೆಂಗಳೂರು: ರಾಜ್ಯ ಹೈಕೋರ್ಟ್ ನೈಸ್ ಯೋಜನೆ ವಿರುದ್ಧ ಕಟುವಾದ ಶಬ್ದಗಳಲ್ಲಿ ಅಭಿಪ್ರಾಯ ದಾಖಲಿಸಿದ್ದರೂ, ಈ ಅಭಿಪ್ರಾಯಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡದೇ ಇದ್ದರೂ ನೈಸ್ ಸಂಸ್ಥೆ ಅಕ್ರಮವಾಗಿ ಟೋಲ್ ಸಂಗ್ರಹ ಮಾಡುತ್ತಿದೆ ಎಂದು ಆರೋಪಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು; ಈವರೆಗೆ ನೈಸ್ ಕಂಪನಿ ₹4,756.48 ಕೋಟಿ ಟೋಲ್ ಹಣವನ್ನು ಅಕ್ರಮವಾಗಿ ಸುಲಿಗೆ ಮಾಡಿದೆ ಎಂದು ದೂರಿದರು.

ಈ ಅಕ್ರಮ ಟೋಲ್ ಸಂಗ್ರಹವು 2008-2009 ರಲ್ಲಿ ವರ್ಷಕ್ಕೆ ₹5.59 ಕೋಟಿ ಇತ್ತು, 2024-2025ರ ವೇಳೆಗೆ ವರ್ಷಕ್ಕೆ ₹734.92.ಕೋಟಿ ತಲುಪಿದೆ. ನೈಸ್ ಯೋಜನೆ ಹೆಸರಿನಲ್ಲಿ ಕೋಟ್ಯಂತರ ರೂ. ಅಕ್ರಮ ಟೋಲ್ ದರೋಡೆ ಮುಂದುವರಿದೆ. ಹೈಕೋರ್ಟ್ ಆದೇಶದ ನಂತರವೂ ಅಕ್ರಮವಾಗಿ ಟೋಲ್ ಸುಲಿಗೆ ಆಗುತ್ತಿದೆ. ತಕ್ಷಣವೇ ಟೋಲ್ ಸಂಗ್ರಹ ಬಂದ್ ಮಾಡಬೇಕು ಎಂದು ಕುಮಾರಸ್ವಾಮಿ ಅವರು ಒತ್ತಾಯಿಸಿದರು.

ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆ.ಪಿ. ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು; ನೈಸ್ (NICE) ಸಂಸ್ಥೆಯು ಯೋಜನೆಯನ್ನು ಪೂರ್ಣಗೊಳಿಸದೆ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಟೋಲ್ ಸಂಗ್ರಹಿಸುತ್ತಿದ್ದು, ಬಡ ರೈತರ ಭೂಮಿಯನ್ನು ಲೂಟಿ ಮಾಡುತ್ತಿದೆ. ನೈಸ್ ರಸ್ತೆಯ ಮೂಲ ಯೋಜನಾ ವೆಚ್ಚವೇ ₹1,583,76 ಕೋಟಿ. ಆದರೆ ಈವರೆಗೆ ₹4,756.48 ಕೋಟಿ ವಸೂಲಿ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.

ಕಳೆದ 20 ವರ್ಷಗಳಿಂದ ಜೆಡಿಎಸ್ ಹಾಗೂ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ನಡೆಸಿಕೊಂಡು ಬಂದ ಹೋರಾಟಕ್ಕೆ ಈಗ ತಾರ್ಕಿಕ ಅಂತ್ಯ ಸಿಗುವ ಲಕ್ಷಣ ಕಾಣುತ್ತಿದೆ. ಇಷ್ಟೆಲ್ಲಾ ಅಕ್ರಮಗಳನ್ನು ನಡೆಸಿರುವ ನೈಸ್ ಕಂಪನಿಯ ಪಾಪದ ಕೊಡ ತುಂಬುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಟೋಲ್ ಒಪ್ಪಂದ (TCA) ಮತ್ತು ಕರಾರುಗಳ ಉಲ್ಲಂಘನೆ

ಸೆಪ್ಟೆಂಬರ್ 4, 2000ರಂದು ರಾಜ್ಯದ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಹಾಗೂ ನೈಸ್ ಸಂಸ್ಥೆ ನಡುವೆ ‘ಟೋಲ್ ಕನ್ಸೇಷನ್ ಒಪ್ಪಂದ’ (TCA) ಆಗಿತ್ತು. ಏಪ್ರಿಲ್ 3, 1997ರ ಮೂಲ ಫ್ರೇಮ್‌ವರ್ಕ್ ಅಗ್ರಿಮೆಂಟ್’ (FWA) ಪ್ರಕಾರವೇ ಎಲ್ಲವೂ ನಡೆಯಬೇಕು. ಟೋಲ್ ಒಪ್ಪಂದಕ್ಕೂ ಫ್ರೇಮ್‌ವರ್ಕ್ ಅಗ್ರಿಮೆಂಟ್ ನೀಡಿದ ಕರಾರುಗಳಿಗೂ ಸಂಘರ್ಷ ಏರ್ಪಟ್ಟರೆ ಫ್ರೇಮ್‌ವರ್ಕ್ ಅಗ್ರಿಮೆಂಟ್ ನಿಬಂಧನೆಗಳೇ ಅಂತಿಮವಾಗಿರುತ್ತವೆ ಎಂದು ಒಪ್ಪಿ ಅಂಕಿತ ಹಾಕಲಾಗಿತ್ತು. ಒಪ್ಪಂದದ ಪ್ರಕಾರ 4 ಪಥಗಳ ಕಾಂಕ್ರೀಟ್ ರಸ್ತೆ, ಸರ್ವಿಸ್ ರಸ್ತೆ ಹಾಗೂ ನಿರ್ವಹಣಾ ಪ್ರದೇಶಗಳನ್ನು ನಿರ್ಮಿಸಿದ ನಂತರವೇ ಕಂಪನಿಯು ಟೋಲ್ ಸಂಗ್ರಹಿಸಬೇಕಿತ್ತು. ಆದರೆ ಯಾವುದೇ ನಿಬಂಧನೆ ಪಾಲಿಸದೆ 2008ರಿಂದ ಅಕ್ರಮವಾಗಿ ಟೋಲ್ ವಸೂಲಿ ಮಾಡಲಾಗುತ್ತಿದೆ ಎಂದು ಸಚಿವರು ದೂರಿದರು.

ಕೆರೆಗಳ ಅತಿಕ್ರಮಣ, ODP ಮೂಲಕ ನಿರಂತರ ಅಕ್ರಮ

ಹೆಚ್.ಟಿ.ಸೋಮಶೇಖರ್ ರೆಡ್ಡಿ ಪ್ರಕರಣದಲ್ಲಿ ನೈಸ್ ಸಂಸ್ಥೆಯು ಸುಪ್ರೀಂ ಕೋರ್ಟ್ ಮುಂದೆ ಪೆರಿಫೆರಲ್ ರಸ್ತೆಗೆ 2,193 ಎಕರೆ ಸೇರಿ ಒಟ್ಟು 6,999 ಎಕರೆ ಭೂಮಿಯನ್ನು ಮಾತ್ರ ಕೇಳಿತ್ತು. ಇದರಲ್ಲಿ ಕರಾಬು, ಖುಷ್ಕಿ, ತರಿ ಮತ್ತು ತೋಟದ ಜಮೀನು ಇತ್ತೇ ಹೊರತು ಯಾವುದೇ ಕೆರೆ ಜಾಗವನ್ನು ಕೇಳಿರಲಿಲ್ಲ. ಆದರೆ, 2021ರಲ್ಲಿ ಎಂಜಿನಿಯರ್ ಕಪಿಲ್ ಶರ್ಮ ಎಂಬುವವರು ದಿಶಾಂಕ್ ಆಪ್ ಬಳಸಿ ಕೆರೆಗಳನ್ನು ಮುಚ್ಚಿ ರಸ್ತೆ ನಿರ್ಮಿಸಿರುವುದನ್ನು ಪತ್ತೆ ಹಚ್ಚಿ ದೂರು ನೀಡಿದ್ದರು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಚಿವರು ಕೆರೆಗಳನ್ನು ನುಂಗಿರುವ ದಾಖಲೆಗಳನ್ನು ಮಾಧ್ಯಮಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.

ಸಂಪುಟಕ್ಕೆ ವಂಚಿಸಿ ಅಲೈನ್‌ಮೆಂಟ್ ಬದಲು

ಫೆಬ್ರವರಿ 12, 2004ರಂದು ಔಟ್ ಲೈನ್ ಡೆವಲಪ್ಮೆಂಟ್ ಪ್ಲಾನ್ (ODP-Outline Development Plan) ಮೂಲಕ ಸಚಿವ ಸಂಪುಟದ ಅನುಮೋದನೆ ಪಡೆಯದೇ ಕಾನೂನುಬಾಹಿರವಾಗಿ ಅಲೈನ್‌ಮೆಂಟ್ ಬದಲಾಯಿಸಲಾಯಿತು. ಈ ಮೂಲಕ ಭೂಮಿ ಹೆಚ್ಚಳ ಮಾಡಿಕೊಂಡರು. ಕ್ಯಾಬಿನೆಟ್ ಅನುಮೋದನೆ ಇಲ್ಲದೆ ಪೆರಿಫೆರಲ್ ರಸ್ತೆಯ ಭೂಮಿಯನ್ನು 2,193 ಎಕರೆಯಿಂದ 2,747 ಎಕರೆಗೆ ಹಾಗೂ ಟೋಲ್ ರಸ್ತೆಯ ಜಮೀನನ್ನು 6,999 ಎಕರೆಯಿಂದ 9,468 ಎಕರೆಗೆ ಏಕಪಕ್ಷೀಯವಾಗಿ ಹೆಚ್ಚಿಸಿಕೊಳ್ಳಲಾಯಿತು ಎಂದು ಸಚಿವರು ದಾಖಲೆಗಳ ಸಮೇತ ಆರೋಪಿಸಿದರು.

ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಗಳಲ್ಲಿ ಈ ಬಗ್ಗೆ ಸಾಕಷ್ಟು ವಿಚಾರಣೆ ನಡೆದಿದೆ. ರಾಜ್ಯ ಹೈಕೋರ್ಟ್ ಕಳೆದ ಜುಲೈ 29ರಂದು ನೀಡಿರುವ ತೀರ್ಪಿನಲ್ಲಿ ODP ಪ್ಲಾನ್ ಮೂಲಕ ಮೂಲ ಒಪ್ಪಂದ ಬದಲಾಯಿಸಿರುವುದನ್ನು ಸಂವಿಧಾನ ಮತ್ತು ಕಾನೂನು ಮೀರಿ ಎಸಗಿದ ವಂಚನೆ (Fraud on Statute and Constitution)‌‌ಎಂದು ಸ್ಪಷ್ಟಪಡಿಸಿದೆ ಹಾಗೂ ರಾಜ್ಯ ಪ್ರಾಧಿಕಾರಗಳೂ ಈ ವಂಚನೆಯಲ್ಲಿ ಪಾಲುದಾರರು ಎಂದು ಚಾಟಿ ಬೀಸಿದೆ ಎಂಬ ಅಂಶವನ್ನು ಸಚಿವರು ಉಲ್ಲೇಖಿಸಿದರು.

ತಡೆ ನೀಡದ ಸುಪ್ರೀಂ ಕೋರ್ಟ್

ಹೈಕೋರ್ಟ್ ತೀರ್ಪಿನ ವಿರುದ್ಧ ನೈಸ್ ಸಂಸ್ಥೆ ಸಲ್ಲಿಸಿದ ರಜಾ ಕಾಲದ ವಿಶೇಷ ಅರ್ಜಿ (SLP) ಅರ್ಜಿಗೆ ಸುಪ್ರೀಂ ಕೋರ್ಟ್ ಯಾವುದೇ ತಡೆ ನೀಡದೆ, ಈ ವಿಷಯದ ಕುರಿತು ವಿಸ್ತೃತ ವಿಚಾರಣೆ ನಡೆಸಬೇಕಿದೆ ಎಂದು ಹೇಳಿ ವಿಚಾರಣೆಯನ್ನು ನವೆಂಬರ್ 2ಕ್ಕೆ ಮುಂದೂಡಿದೆ ಎಂದ ಸಚಿವರು; ನಾವು ಪರ ವಾದ ಮಾಡಲಿಕ್ಕೆ ಸರಕಾರದಿಂದ ಸೇರಿ ಒಟ್ಟು ಇಪ್ಪತೈದು ವಕೀಲರು ನ್ಯಾಯಾಲಯಕ್ಕೆ ಹಾಜರಾಗಿದ್ದರು ಎಂದು ತಿಳಿಸಿದರು.

ನೈಸ್ ರಸ್ತೆಯ ಮೂಲ ಯೋಜನಾ ವೆಚ್ಚ ₹1,583,76 ಕೋಟಿ ಆಗಿತ್ತು. ಆದರೆ, ಈ ಕಂಪನಿಯು ಅಪೂರ್ಣ ರಸ್ತೆಯನ್ನು ಸಂಚಾರಕ್ಕೆ ತೆರವುಗೊಳಿಸಿ 2008- 2009ರಲ್ಲಿ ವರ್ಷಕ್ಕೆ ₹5.59 ಕೋಟಿ ಅಕ್ರಮ ಟೋಲ್ ಸಂಗ್ರಹಿಸಿತ್ತು. 2024-2025 ರ ವೇಳೆಗೆ ವರ್ಷಕ್ಕೆ ₹734.97 ಕೋಟಿ ಟೋಲ್ ಸಂಗ್ರಹಿಸಿದೆ. 2008ರಿಂದ 2025ರವರೆಗೆ ಒಟ್ಟು 4,756.48 ಕೋಟಿ ಟೋಲ್ ಅನ್ನು ಅಕ್ರಮವಾಗಿ ಸುಲಿಗೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.

ಇಷ್ಟೇ ಅಲ್ಲದೆ ಮೂಲ ಚೌಕಟ್ಟು ಒಪ್ಪಂದ ಉಲ್ಲಂಘಿಸಿ ಅನೇಕ ರೀತಿಯಲ್ಲಿ ನೈಸ್ ಕಂಪನಿ ಹಣ ಮಾಡಿದೆ. ಇದರಲ್ಲಿ ಭೂ ಮಾರಾಟದಿಂದ ₹384 ಕೋಟಿ, ಭೂಮಿ ಮತ್ತು ನಿರ್ಮಾಣ ಯೋಜನೆಗಳ ಜಂಟಿ ಅಭಿವೃದ್ಧಿಗಳ ಮುಂಗಡವಾಗಿ ₹108 ಕೋಟಿ, ಕನ್ವೆನ್ಷನ್ ಸೆಂಟರ್‌ಗಳಿಂದ ₹338 ಕೋಟಿ ಗಳಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

2016ರಲ್ಲಿ ಸದನ ಸಮಿತಿ ಅಧ್ಯಕ್ಷರಾಗಿದ್ದ ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ ಅವರು, ನೈಸ್ ಯೋಜನೆಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಹೆಚ್ಚುವರಿ ಜಮೀನನ್ನು ಹಿಂಪಡೆಯಲು ಶಿಫಾರಸು ಮಾಡಿದ್ದರು. ಆಗಸ್ಟ್ 2023ರಲ್ಲಿ ಈ ನೈಸ್ ರಸ್ತೆ ಅಗತ್ಯವಿಲ್ಲ ಎಂದಿದ್ದ ಜಯಚಂದ್ರ ಅವರು, 2025 ಮೇ ತಿಂಗಳಲ್ಲಿ ನೈಸ್ ಯೋಜನೆ ಪೂರ್ಣಗೊಳಿಸಲು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದರ ಹಿಂದಿನ ರಹಸ್ಯವೇನು? ಇಲ್ಲಿ ಕಾಣದ ಕೈಗಳ ಕೈವಾಡ ಎದ್ದು ಕಾಣುತ್ತಿದೆ ಎಂದು ಕುಮಾರಸ್ವಾಮಿ ಅವರು ಆರೋಪಿಸಿದರು.

ಎಸ್.ಎಂ. ಕೃಷ್ಣ ಅವರ ಸರ್ಕಾರದ ಅವಧಿಯಲ್ಲಿ (ನವೆಂಬರ್ 4, 2002) ನಡೆದ ಸಂಪುಟ ನಿರ್ಣಯದಂತೆ 6 ವರ್ಷಗಳಲ್ಲಿ 4 ಪಥದ ಕಾಂಕ್ರೀಟ್ ರಸ್ತೆ ಪೂರ್ಣಗೊಳಿಸದಿದ್ದರೆ ಟೋಲ್ ವಸೂಲಿಯನ್ನು ಹಿಂಪಡೆಯಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಆದ್ದರಿಂದ, ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ತಕ್ಷಣವೇ ಕಾನೂನುಬಾಹಿರವಾಗಿ ನಡೆಯುತ್ತಿರುವ ನೈಸ್ ಟೋಲ್ ಸಂಗ್ರಹವನ್ನು ಬಂದ್ ಮಾಡಬೇಕು ಎಂದು ಸಚಿವರು ಒತ್ತಾಯಿಸಿದರು.

ಅಕ್ರಮ ಸುಲಿಗೆ ನಿಲ್ಲಿಸಲು ಇನ್ನೂ ಎಷ್ಟು ವರ್ಷ ಬೇಕಪ್ಪ? ಇನ್ನೂ ಹತ್ತು ವರ್ಷ ಇದೆ ಟೋಲ್ ವಸೂಲಿಗೆ ಅಂತಾರೆ. ಏನು ದರೋಡೆ ಕೆಲಸಕ್ಕ? ಹತ್ತು ವರ್ಷ ಎನ್ನುವುದೆಲ್ಲಾ ಈಗ ನಡೆಯಲ್ಲ ಎಂದು ಅವರು ಹೇಳಿದರು.

ಮಾಜಿ ಶಾಸಕರಾದ ಸುರೇಶ್ ಗೌಡ, ಚೌಡರೆಡ್ಡಿ ತೂಪಲ್ಲಿ, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ರಾಜ್ಯ ವಕ್ತಾರ ಹೆಚ್.ಎನ್. ದೇವರಾಜು ಮುಂತಾದವರು ಸಚಿವರ ಜತೆಯಲ್ಲಿದ್ದರು.

ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆ ಹೆಸರಿನಲ್ಲಿ ರಸ್ತೆ ಅಪೂರ್ಣವಾಗಿದ್ದರೂ ಅಕ್ರಮವಾಗಿ ಟೋಲ್ ಸುಲಿಗೆ ಮಾಡುತ್ತಿರುವ ಬಗ್ಗೆ ಮಾಧ್ಯಮಗೋಷ್ಟಿಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು. ಟೋಲ್ ಸುಲಿಗೆ ವಿರುದ್ಧ ಹೈಕೋರ್ಟ್ ಕಟುವಾದ ಅಭಿಪ್ರಾಯ ದಾಖಲಿಸಿದ್ದರೂ, ಇದಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ನೆ ನೀಡದೇ ಇದ್ದರೂ ಇನ್ನೂ ರಸ್ತೆ ಸುಂಕ ವಸೂಲಿ ಮಾಡುತ್ತಿರುವುದು ಅಕ್ರಮ. ನೈಸ್ ರಸ್ತೆ ಮೂಲ ಯೋಜನಾ ವೆಚ್ಚವೇ ₹1,583,76 ಕೋಟಿ. ಆದರೆ, ಈವರೆಗೆ ₹4,756.48 ಕೋಟಿ ಟೋಲ್ ಹಣ ವಸೂಲಿ ಮಾಡಿದೆ ಆ ಕಂಪನಿ. ಹೀಗಾಗಿ ತಕ್ಷಣವೇ ಟೋಲ್ ವಸೂಲಿ ನಿಲ್ಲಿಸಬೇಕು. ಅದಕ್ಕೆ ರಾಜ್ಯ ಸರಕಾರವೂ ತುರ್ತು ಕ್ರಮ ವಹಿಸಬೇಕು. ಸಾರ್ವಜನಿಕರು ಕೂಡ ಯಾವುದೇ ಕಾರಣಕ್ಕೂ ಟೋಲ್ ಪಾವತಿ ಮಾಡಬಾರದು ಎಂದು ಆಗ್ರಹಿಸುತ್ತೇನೆ.

-ಹೆಚ್.ಡಿ. ಕುಮಾರಸ್ವಾಮಿ

Tags: cknewsnowhd kumaraswamyillegal tollnicenice loots Karnatakanice roadtoll
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಡಿಕೆಶಿ ನೈಸ್ ಖರೀದಿ; ಹೈಕಮಾಂಡ್ ಅಂಗಳದಲ್ಲಿ ಅಲ್ಲೋಲ ಕಲ್ಲೋಲ

ಡಿಕೆಶಿ ನೈಸ್ ಖರೀದಿ; ಹೈಕಮಾಂಡ್ ಅಂಗಳದಲ್ಲಿ ಅಲ್ಲೋಲ ಕಲ್ಲೋಲ

by cknewsnow desk
October 9, 2026
0

ಹೆಚ್.ಡಿ.ಕುಮಾರಸ್ವಾಮಿ ಆರೋಪದಿಂದ ಕಾಂಗ್ರೆಸ್ ನಲ್ಲಿ ತಳಮಳ

ಬೆಂಗಳೂರು ಸುತ್ತಲಿನ ಜನರ ಸಮಾಧಿ ಮೇಲೆ ಬ್ರ್ಯಾಂಡ್‌ ಬೆಂಗಳೂರು

ಸ್ಟಿಂಗ್ ಮಾಸ್ಟರ್ ವಿರುದ್ಧವೇ ಸ್ಟಿಂಗ್!!

by cknewsnow desk
October 9, 2026
0

ಸ್ಟಿಂಗ್ ಆಗಿದ್ದರೆ ತನಿಖೆ ಮಾಡಿಸಿ ಎಂದು ಮುಖ್ಯಮಂತ್ರಿಗೆ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯ

36 ಎಕರೆ ಸರಕಾರಿ ಭೂಮಿ ಲಪಟಾಯಿಸಿದ ಸಚಿವ ಹೆಚ್.ಸಿ.ಬಾಲಕೃಷ್ಣ

36 ಎಕರೆ ಸರಕಾರಿ ಭೂಮಿ ಲಪಟಾಯಿಸಿದ ಸಚಿವ ಹೆಚ್.ಸಿ.ಬಾಲಕೃಷ್ಣ

by cknewsnow desk
October 6, 2026
0

ಬಾಲಕೃಷ್ಣ ವಿಚಾರಣೆ; ರಾಜ್ಯಪಾಲರ ಅನುಮತಿ ಕೋರಲಿರುವ JDS

ನಾಳೆ ಬಾ ಎತ್ತಿನಹೊಳೆ!

ನಾಳೆ ಬಾ ಎತ್ತಿನಹೊಳೆ!

by cknewsnow desk
October 6, 2026
0

ಚಿಕ್ಕಬಳ್ಳಾಪುರ, ಕೋಲಾರಕ್ಕೆ ಈ ಸರಕಾರಕ್ಕೆ ನೀರು ಕೊಡಲು ಸಾಧ್ಯವಿಲ್ಲ; ಯೋಜನೆ ಇನ್ನೂ ಹಾಸನ ದಾಟಿಲ್ಲ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

Next Post
ಡಿಕೆಶಿ ನೈಸ್ ಖರೀದಿ; ಹೈಕಮಾಂಡ್ ಅಂಗಳದಲ್ಲಿ ಅಲ್ಲೋಲ ಕಲ್ಲೋಲ

ಡಿಕೆಶಿ ನೈಸ್ ಖರೀದಿ; ಹೈಕಮಾಂಡ್ ಅಂಗಳದಲ್ಲಿ ಅಲ್ಲೋಲ ಕಲ್ಲೋಲ

Leave a Reply Cancel reply

Your email address will not be published. Required fields are marked *

Recommended

ಆರ್‌ಎಸ್‌ಎಸ್‌ ಬಗ್ಗೆ ಮಡಿವಂತಿಕೆ ಏಕೆ? ಮಾಜಿ ಗೆಳೆಯ ಸಿದ್ದರಾಮಯ್ಯ ಅವರಿಗೆ ಟಾಂಗ್‌ ಕೊಟ್ಟ ಎಂಎಲ್ಸಿ ವಿಶ್ವನಾಥ್‌

ಬಿಜೆಪಿ ಕೇಂದ್ರ ಸಚಿವರ ಜನಾಶೀರ್ವಾದ ಯಾತ್ರೆಯಿಂದ ಕೋವಿಡ್ ಹೆಚ್ಚಳ: ಹೆಚ್.ವಿಶ್ವನಾಥ್

5 years ago
ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್‌, ಆಟೋಗಳಿಗೆ ಮೀಟರ್;‌ ಡಿ.1ರಿಂದ ಕೋಲಾರದಲ್ಲಿ ಕಡ್ಡಾಯ

ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್‌, ಆಟೋಗಳಿಗೆ ಮೀಟರ್;‌ ಡಿ.1ರಿಂದ ಕೋಲಾರದಲ್ಲಿ ಕಡ್ಡಾಯ

6 years ago

Popular News

  • ಡಿಕೆಶಿ ನೈಸ್ ಖರೀದಿ; ಹೈಕಮಾಂಡ್ ಅಂಗಳದಲ್ಲಿ ಅಲ್ಲೋಲ ಕಲ್ಲೋಲ

    ಡಿಕೆಶಿ ನೈಸ್ ಖರೀದಿ; ಹೈಕಮಾಂಡ್ ಅಂಗಳದಲ್ಲಿ ಅಲ್ಲೋಲ ಕಲ್ಲೋಲ

    0 shares
    Share 0 Tweet 0
  • ₹4,756.48 ಕೋಟಿ ಟೋಲ್ ಸುಲಿಗೆ ಮಾಡಿದ ನೈಸ್

    0 shares
    Share 0 Tweet 0
  • ಸ್ಟಿಂಗ್ ಮಾಸ್ಟರ್ ವಿರುದ್ಧವೇ ಸ್ಟಿಂಗ್!!

    0 shares
    Share 0 Tweet 0
  • 36 ಎಕರೆ ಸರಕಾರಿ ಭೂಮಿ ಲಪಟಾಯಿಸಿದ ಸಚಿವ ಹೆಚ್.ಸಿ.ಬಾಲಕೃಷ್ಣ

    0 shares
    Share 0 Tweet 0
  • ನಾಳೆ ಬಾ ಎತ್ತಿನಹೊಳೆ!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಡಿಕೆಶಿ ನೈಸ್ ಖರೀದಿ; ಹೈಕಮಾಂಡ್ ಅಂಗಳದಲ್ಲಿ ಅಲ್ಲೋಲ ಕಲ್ಲೋಲ

ಡಿಕೆಶಿ ನೈಸ್ ಖರೀದಿ; ಹೈಕಮಾಂಡ್ ಅಂಗಳದಲ್ಲಿ ಅಲ್ಲೋಲ ಕಲ್ಲೋಲ

October 9, 2026
₹4,756.48 ಕೋಟಿ ಟೋಲ್ ಸುಲಿಗೆ ಮಾಡಿದ ನೈಸ್

₹4,756.48 ಕೋಟಿ ಟೋಲ್ ಸುಲಿಗೆ ಮಾಡಿದ ನೈಸ್

October 9, 2026
ಬೆಂಗಳೂರು ಸುತ್ತಲಿನ ಜನರ ಸಮಾಧಿ ಮೇಲೆ ಬ್ರ್ಯಾಂಡ್‌ ಬೆಂಗಳೂರು

ಸ್ಟಿಂಗ್ ಮಾಸ್ಟರ್ ವಿರುದ್ಧವೇ ಸ್ಟಿಂಗ್!!

October 9, 2026
36 ಎಕರೆ ಸರಕಾರಿ ಭೂಮಿ ಲಪಟಾಯಿಸಿದ ಸಚಿವ ಹೆಚ್.ಸಿ.ಬಾಲಕೃಷ್ಣ

36 ಎಕರೆ ಸರಕಾರಿ ಭೂಮಿ ಲಪಟಾಯಿಸಿದ ಸಚಿವ ಹೆಚ್.ಸಿ.ಬಾಲಕೃಷ್ಣ

October 6, 2026

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ