• About
  • Advertise
  • Careers
  • Contact
Tuesday, October 13, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS NATION

ಕಾಲ ಉತ್ತರಿಸುತ್ತದೆ ಎನ್ನುವುದು ತನಿಖೆಗೆ ಪರ್ಯಾಯವಲ್ಲ: HDK

cknewsnow desk by cknewsnow desk
October 12, 2026
in NATION, POLITICS, STATE
Reading Time: 2 mins read
0
ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೃಷಿ ಪಂಪುಸೆಟ್ಟುಗಳಿಗೆ 24/7 ಉಚಿತ ವಿದ್ಯುತ್
915
VIEWS
FacebookTwitterWhatsuplinkedinEmail

ಡಿಕೆಶಿಗೆ ತಿರುಗೇಟು; ಸ್ಟಿಂಗ್ ಆಪರೇಷನ್ ಸತ್ಯಾಸತ್ಯತೆ ಹೊರಬರಲು ತನಿಖೆ ಅಗತ್ಯ ಎಂದ ಕೇಂದ್ರ ಸಚಿವರು

ಸಿದ್ದರಾಮಯ್ಯ ಹೆಸರು ಕೆಡಿಸುವ ಹುನ್ನಾರ; ಸ್ಟಿಂಗ್ ಮಾಡಿದವನ ವಿರುದ್ಧ ಕ್ರಮಕ್ಕೆ ಆಗ್ರಹ; ಮಾಜಿ ಸಿಎಂ ವಿರುದ್ಧದ ಸ್ಟಿಂಗ್ ಆರೋಪ ಲಘುವಾಗಿ ಪರಿಗಣಿಸಬೇಡಿ

SIR ಪ್ರಶ್ನಿಸುವ ಕಾಂಗ್ರೆಸ್‌ಗೆ ಗ್ಯಾರಂಟಿ ಯೋಜನೆಗಳ ಪರಿಶೀಲನೆ ಹೇಗೆ ಮಾಡುತ್ತದೆ?

ಬೆಂಗಳೂರು: ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಸ್ಟಿಂಗ್ ಆಪರೇಷನ್ ನಡೆಸಲಾಗಿದೆ ಎಂಬ ಆರೋಪದ ಸತ್ಯಾಸತ್ಯತೆ ಹೊರಬರಲು ಸರ್ಕಾರ ಸಮಗ್ರ ತನಿಖೆ ನಡೆಸಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು.

ಇದರ ಹಿಂದೆ ಯಾರಿದ್ದಾರೆ, ಯಾರು ಈ ಕಾರ್ಯಾಚರಣೆ ನಡೆಸಿದ್ದಾರೆ ಎಂಬುದನ್ನು ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ತನಿಖೆ ನಡೆಸದೆ ‘ಕಾಲವೇ ಉತ್ತರಿಸುತ್ತದೆ’ ಎಂದು ಹೇಳುವುದು ಸರಿಯಲ್ಲ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು. ಅವರ ವಿರುದ್ಧ ಸ್ಟಿಂಗ್ ಆಪರೇಷನ್ ನಡೆದಿರುವ ವಿಚಾರವನ್ನು ಲಘುವಾಗಿ ಪರಿಗಣಿಸಬಾರದು. ಈ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ, ಯಾರಿಗೆ ಯಾವ ಪಾತ್ರವಿದೆ, ಸರ್ಕಾರ ಇದುವರೆಗೆ ಏನು ಕ್ರಮ ಕೈಗೊಂಡಿದೆ ಎಂಬುದಕ್ಕೆ ಉತ್ತರ ನೀಡಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.

ಸಿದ್ದರಾಮಯ್ಯನವರೇ ಈ ಪ್ರಕರಣದ ತನಿಖೆ ನಡೆಯಬೇಕು ಮತ್ತು ಸತ್ಯ ಹೊರಬರಬೇಕು ಎಂದು ಹೇಳಿದ್ದಾರೆ; ಹಾಗಿದ್ದರೂ ಸರ್ಕಾರ ತನಿಖೆಗೆ ಮುಂದಾಗದಿರುವುದೇಕೆ ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.

ನಾನು ಸಿದ್ದರಾಮಯ್ಯ ಅವರ ವಿರುದ್ಧ ರಾಜಕೀಯವಾಗಿ ಹೋರಾಟ ಮಾಡಿದ್ದೇನೆ. ನಮ್ಮ ಪಕ್ಷ ಬಿಟ್ಟ ನಂತರವೂ ಹಲವು ವಿಷಯಗಳಲ್ಲಿ ಅವರ ವಿರುದ್ಧ ಮಾತನಾಡಿದ್ದೇನೆ. ಆದರೆ ಮಾಜಿ ಮುಖ್ಯಮಂತ್ರಿ ಅವರ ಹೆಸರನ್ನು ಹಾಳು ಮಾಡುವ ಉದ್ದೇಶದಿಂದ ಇಂತಹ ಕಾರ್ಯಾಚರಣೆ ನಡೆದಿದ್ದರೆ ಅದರ ಬಗ್ಗೆ ಮೌನವಾಗಿರಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಇದು ಅನುಕಂಪಕ್ಕಾಗಿ ಮಾಡುತ್ತಿರುವ ಆಗ್ರಹವಲ್ಲ; ತಪ್ಪು ಮಾಡಿದವರು ಯಾರು ಎಂಬುದು ತಿಳಿದು ಅವರ ವಿರುದ್ಧ ಕ್ರಮವಾಗಬೇಕು ಎಂಬುದು ತಮ್ಮ ನಿಲುವು ಎಂದು ಅವರು ಹೇಳಿದರು.

ಸಚಿವ ಸಂಪುಟದ ಕಡತ ಮತ್ತು ಮಾಹಿತಿ ಸೋರಿಕೆ ಬಗ್ಗೆ ಪ್ರಶ್ನೆ

ಸ್ಟಿಂಗ್ ಆಪರೇಷನ್‌ಗೆ ಸಂಬಂಧಿಸಿದ ಕಡತವನ್ನು ಮುಖ್ಯಮಂತ್ರಿ ಸಚಿವ ಸಂಪುಟದ ಸಭೆಗೆ ತೆಗೆದುಕೊಂಡು ಹೋಗಿರುವುದನ್ನು ಮಾಧ್ಯಮದವರು ತೋರಿಸಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಸಂಪುಟದಲ್ಲಿ ನಡೆದ ಚರ್ಚೆಗಳು ಸಾಮಾನ್ಯವಾಗಿ ಹೊರಗೆ ಸೋರಿಕೆಯಾಗುವುದಿಲ್ಲ; ಕೇಂದ್ರದಲ್ಲಿಯೂ ಸಚಿವರಿಗೆ ವಿವಿಧ ವಿಷಯಗಳ ಬಗ್ಗೆ ಸಲಹೆ ಮತ್ತು ಚರ್ಚೆ ನಡೆಯುತ್ತದೆ, ಆದರೆ ಅವು ಹೊರಗೆ ಬರುವುದಿಲ್ಲ ಎಂದು ಹೋಲಿಕೆ ಮಾಡಿದರು.ರಾಜ್ಯದಲ್ಲಿ ಮಾತ್ರ ಈ ವಿಷಯದ ಚರ್ಚೆ ಹೊರಗೆ ಬಂದಿರುವುದೇಕೆ, ಮಾಹಿತಿ ಸೋರಿಕೆ ಮಾಡಿದವರು ಯಾರು ಎಂಬುದನ್ನು ತನಿಖೆ ನಡೆಸುವುದರ ಮೂಲಕ ಪತ್ತೆಹಚ್ಚಬೇಕು ಎಂದು ಆಗ್ರಹಿಸಿದರು.

ಸ್ಟಿಂಗ್ ಆಪರೇಷನ್ ಕುರಿತು ತನಿಖೆ ನಡೆಸುವ ಕಡತವನ್ನು ಮುಖ್ಯಮಂತ್ರಿ ಸಂಪುಟಕ್ಕೆ ತೆಗೆದುಕೊಂಡು ಹೋಗಿದ್ದರೆ, ಪ್ರಕರಣದ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇತ್ತು ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ಅವರು ಹೇಳಿದರು.

ಒಂದು ಕಡೆ ಕಡತವನ್ನು ಸಂಪುಟಕ್ಕೆ ತೆಗೆದುಕೊಂಡು ಹೋಗಿ ಚರ್ಚಿಸಿ, ಮತ್ತೊಂದು ಕಡೆ ತನಿಖೆಗೆ ಅವಕಾಶ ನೀಡದಿರುವುದೇಕೆ ಎಂದು ಪ್ರಶ್ನಿಸಿದರು. ಈ ವಿಷಯವನ್ನು ರಾಜಕೀಯವಾಗಿ ಪ್ರಚಾರ ಮಾಡುವುದಕ್ಕಿಂತ ತನಿಖೆ ನಡೆಸಿ ಸತ್ಯವನ್ನು ಜನರ ಮುಂದೆ ಇಡಬೇಕು ಎಂದು ಹೇಳಿದರು.

ತಮ್ಮ ಬಳಿ ಇರುವ ಪೆನ್‌ಡ್ರೈವ್ ಅಸಲಿಯದ್ದು ಮತ್ತು ಅದನ್ನು ಇತರರು ನಕಲಿ ಮಾಡುತ್ತಿದ್ದಾರೆ ಎಂಬ ಆರೋಪವನ್ನೂ ಅವರು ಮಾಡಿದರು. ಸ್ಟಿಂಗ್ ಆಪರೇಷನ್ ನಡೆದಿರುವುದು ನಿಜವೇ ಆಗಿದ್ದರೆ ಅದರಲ್ಲಿರುವವರನ್ನು ಗುರುತಿಸಿ ತನಿಖೆ ನಡೆಸಬೇಕು; ಉತ್ತರ ಪ್ರದೇಶದಿಂದ ಬಂದವರು, ಕೇಂದ್ರ ಸಚಿವರು ಅಥವಾ ಬಿಜೆಪಿಯ ನಾಯಕರು ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಮಾತುಗಳಿದ್ದರೆ ಅವುಗಳನ್ನೂ ತನಿಖೆಯಿಂದ ಪರಿಶೀಲಿಸಬೇಕು ಎಂದು ಹೇಳಿದರು.

ಸ್ಟಿಂಗ್‌ಗೆ ಸಂಬಂಧಿಸಿದ ವ್ಯಕ್ತಿಗೆ ಪೊಲೀಸ್ ರಕ್ಷಣೆ ಮತ್ತು ತುಕಡಿಗಳನ್ನು ಒದಗಿಸಿರುವುದೇಕೆ ಎಂಬುದನ್ನೂ ಪ್ರಶ್ನಿಸಿದರು.

ಎಸ್‌ಐಆರ್‌ ಮತ್ತು ಫಲಾನುಭವಿಗಳ ಪರಿಶೀಲನೆ ಬಗ್ಗೆ ಕಾಂಗ್ರೆಸ್‌ಗೆ ಪ್ರಶ್ನೆ

ಮತದಾರರ ಪಟ್ಟಿಗೆ ಸಂಬಂಧಿಸಿದ ಎಸ್‌ಐಆರ್‌ ಪ್ರಕ್ರಿಯೆ ಹೊಸದಲ್ಲ; ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂದು ಕುಮಾರಸ್ವಾಮಿ ಹೇಳಿದರು.

ಮತದಾರರ ಹೆಸರುಗಳನ್ನು ಕಡಿತಗೊಳಿಸಲಾಗುತ್ತಿದೆ, ಕೆಲವು ಸಮುದಾಯಗಳ ಮತದಾರರ ಸಂಖ್ಯೆ ಉದ್ದೇಶಪೂರ್ವಕವಾಗಿ ಇಳಿಸಲಾಗುತ್ತಿದೆ ಎಂಬ ಆರೋಪವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಮತದಾನದ ಹಕ್ಕು ಮಹತ್ವದ್ದೆಂಬುದನ್ನು ಒಪ್ಪಿಕೊಂಡರೂ, ಈ ವಿಚಾರವನ್ನು ರಾಜಕೀಯವಾಗಿ ಬಳಸುವ ಮೊದಲು ರಾಜ್ಯದ ಜನರ ಬದುಕು ಮತ್ತು ಸರ್ಕಾರದ ಯೋಜನೆಗಳ ಅನುಷ್ಠಾನದ ಬಗ್ಗೆಯೂ ಮಾತನಾಡಬೇಕು ಎಂದು ಅವರು ಹೇಳಿದರು.

ಕಾಂಗ್ರೆಸ್ ನಾಯಕರು ಸಂವಿಧಾನದ ಬಗ್ಗೆ ಮಾತನಾಡುವಾಗ ಸಂವಿಧಾನಾತ್ಮಕ ಸಂಸ್ಥೆಗಳ ಶಿಷ್ಟಾಚಾರವನ್ನೂ ಗೌರವಿಸಬೇಕು ಎಂದು ಹೇಳಿದ ಅವರು, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಬಳಿ ರಾಜಕೀಯ ವಿಷಯಗಳ ಬಗ್ಗೆ ಚರ್ಚಿಸಲು ಸಮಯ ಕೇಳಿರುವ ಕ್ರಮದ ಉದ್ದೇಶವೇನು ಎಂದು ಪ್ರಶ್ನಿಸಿದರು.

ಯಾವ ವಿಷಯ ಚರ್ಚಿಸಲು ಸಮಯ ಕೋರಲಾಗಿದೆ, ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿರುವ ಶಿಷ್ಟಾಚಾರವನ್ನು ಹೇಗೆ ಪಾಲಿಸಬೇಕು ಎಂಬ ಕನಿಷ್ಠ ಅರಿವು ಇರಬೇಕು ಎಂದು ಟೀಕಿಸಿದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ನಿಜವಾದ ಫಲಾನುಭವಿಗಳಿಗೆ ಹಣ ತಲುಪುವಲ್ಲಿ ಲೋಪಗಳಿವೆ ಹಾಗೂ ಅರ್ಹರಲ್ಲದವರೂ ಹಣ ಪಡೆಯುತ್ತಿದ್ದಾರೆ ಎಂಬ ಕಾರಣಕ್ಕೆ ಸಮೀಕ್ಷೆ ಮತ್ತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ಉಲ್ಲೇಖಿಸಿದರು.

ಗೃಹಲಕ್ಷ್ಮಿ ಯೋಜನೆ, ವಿಧವಾ ವೇತನ, ಅಂಗವಿಕಲರ ವೇತನ ಮತ್ತು ವೃದ್ಧಾಪ್ಯ ವೇತನಗಳ ಫಲಾನುಭವಿಗಳ ಸಂಖ್ಯೆಯಲ್ಲಿ 16ರಿಂದ 20 ಲಕ್ಷದಷ್ಟು ಕಡಿತ ಮಾಡಿರುವುದೇಕೆ, ಯಾವ ಆಧಾರದ ಮೇಲೆ ಕಡಿತ ಮಾಡಲಾಗಿದೆ ಎಂಬುದಕ್ಕೆ ಸರ್ಕಾರ ಉತ್ತರಿಸಬೇಕು ಎಂದು ಕೇಳಿದರು.79 ಮಂದಿ ಮೃತಪಟ್ಟವರ ಖಾತೆಗಳಿಗೆ ₹79 ಕೋಟಿ ಹಣ ಜಮೆಯಾಗಿದ್ದು, ಅದನ್ನು ವಾಪಸು ಪಡೆಯಲಾಗುತ್ತಿದೆ ಎಂಬ ಹೇಳಿಕೆಯನ್ನು ಉಲ್ಲೇಖಿಸಿದ ಕುಮಾರಸ್ವಾಮಿ, ಅನರ್ಹರು ಅಥವಾ ಮೃತರ ಹೆಸರಿನಲ್ಲಿ ಹಣ ಪಡೆಯುವುದನ್ನು ತಡೆಯಲು ಫಲಾನುಭವಿಗಳ ಪರಿಶೀಲನೆ ಅಗತ್ಯವೆಂದರು.

ಇದೇ ರೀತಿಯ ಪರಿಶೀಲನಾ ಕ್ರಮವನ್ನು ಎಸ್‌ಐಆರ್‌ ವಿಚಾರದಲ್ಲಿ ಮಾತ್ರ ರಾಜಕೀಯ ವಿವಾದವನ್ನಾಗಿ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಮೈಸೂರು ಅರಮನೆ ಫೋಟೋಶೂಟ್‌ ಬಗ್ಗೆ ಲೇವಡಿ

ಸ್ಟಿಂಗ್ ಪ್ರಕರಣದ ಬಗ್ಗೆ ಉತ್ತರ ನೀಡುವುದರ ಬದಲು ಮುಖ್ಯಮಂತ್ರಿ ಮೈಸೂರು ಅರಮನೆಯಲ್ಲಿ ಫೋಟೋಶೂಟ್‌ ಮಾಡಿಸಿಕೊಳ್ಳುತ್ತಾ ಸಮಯ ಕಳೆಯುತ್ತಿದ್ದಾರೆ ಎಂದು ಕುಮಾರಸ್ವಾಮಿ ಟೀಕಿಸಿದರು. ಸಿಂಹಾಸನದ ಮುಂದೆ ಕುಳಿತು ಚಿತ್ರ ತೆಗೆಸಿಕೊಂಡಿರುವುದನ್ನು ಉಲ್ಲೇಖಿಸಿ, ಇದನ್ನು ಹೊಸ ಸಂಸ್ಕೃತಿಯಂತೆ ಪ್ರದರ್ಶಿಸಲಾಗುತ್ತಿದೆ ಎಂದು ವ್ಯಂಗ್ಯವಾಡಿದರು. “ಅತಿವಿನಯಂ ದುರ್ಲಕ್ಷಣಂ” ಎಂಬ ಮಾತನ್ನೂ ಅವರು ನೆನಪಿಸಿದರು.

ಮಾಜಿ ಸಿಎಂ ವಿರುದ್ಧದ ಸ್ಟಿಂಗ್ ಆರೋಪ ಲಘುವಾಗಿ ಪರಿಗಣಿಸಬೇಡಿ

ರಾಜ್ಯದಲ್ಲಿ ಇಂತಹ ಘಟನೆಗಳು ಮುಂದುವರಿದರೆ ಸಾಮಾನ್ಯ ಜನರು ಬದುಕುವುದು ಹೇಗೆ ಎಂಬುದು ತಮ್ಮ ಕಳವಳ ಎಂದು ಕುಮಾರಸ್ವಾಮಿ ಹೇಳಿದರು. ಸ್ಟಿಂಗ್ ಆರೋಪದ ಸತ್ಯಾಸತ್ಯತೆ ಹೊರತಂದು, ಯಾರು ತಪ್ಪು ಮಾಡಿದ್ದಾರೆ ಎಂಬುದನ್ನು ತನಿಖೆಯಿಂದ ನಿರ್ಧರಿಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಪುನರುಚ್ಚರಿಸಿದರು.

ಮುಖ್ಯ ನ್ಯಾಯಾಧೀಶರನ್ನು ರಾಜಕೀಯಕ್ಕೆ ಎಳೆಯುವುದು ತಪ್ಪು

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರನ್ನು ರಾಜಕೀಯಕ್ಕೆ ಎಳೆಯುವುದು ತಪ್ಪು. ರಾಹುಲ್ ಗಾಂಧಿ ಪ್ರಬುದ್ಧತೆಯ ರಾಜಕಾರಣ ಮಾಡಬೇಕು. ಸುಪ್ರೀಂ ಕೋರ್ಟ್ ವರೆಗೂ ಪಡೆದುಕೊಂಡು ಹೋಗಿ ನಿಮ್ಮನ್ನು ಭೇಟಿಯಾಗುತ್ತೇನೆ ನ್ಯಾಯಮೂರ್ತಿಗಳು ಭೇಟಿಯಾಗಲು ಹೇಗೆ ಸಾಧ್ಯ? ರಾಹುಲ್ ಗಾಂಧಿಗೆ ಸಾಂವಿಧಾನಿಕ ಸಂಸ್ಥೆಗಳು ಮತ್ತು ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸಿರುವ ವ್ಯಕ್ತಿಗಳ ಬಗ್ಗೆ ಗೌರವ ಇಲ್ಲ ಎಂದು ಕೇಂದ್ರ ಸಚಿವರು ಕಟುವಾಗಿ ಟೀಕಿಸಿದರು.

ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ, ಶಾಸಕ ಮೇಲೂರು ರವಿ, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.

Tags: hd kumaraswamyKarnataka sting oparationnewsPoliticsStingsting aginst ex chief minister
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಡಿಜಿಟ್‌ನೊಂದಿಗೆ  ಸಿಎಂ ಪುತ್ರ ವಿಜಯೇಂದ್ರ ಡೀಲ್ ಬಗ್ಗೆ ಹೇಳಿದ  ಬಸನಗೌಡ ಪಾಟೀಲ್‌ ಯತ್ನಾಳ್‌

ಕಮಲದ ಕೈ ಹಿಡಿಯಲಿರುವ 25 ಕಾಂಗ್ರೆಸ್ ಶಾಸಕರು

by cknewsnow desk
October 12, 2026
0

ಚುನಾವಣೆ ಹೊತ್ತಿಗೆ ಶುರುವಾಗಲಿದೆ ಪಕ್ಷಾಂತರ ಪರ್ವ

ನಾನು, ನನ್ನ ದಾಖಲೆಗಳು ಕ್ಲೀನ್

ಅತೃಪ್ತ ಶಾಸಕರ ಓಲೈಕೆಗೆ ತಲಾ ₹100 ಕೋಟಿ

by cknewsnow desk
October 11, 2026
0

18 ತಿಂಗಳಲ್ಲಿ ಎದುರಾಗಲಿದೆ ವಿಧಾನಸಭಾ ಚುನಾವಣೆ

ನಾಡಹಬ್ಬಕ್ಕೆ ಆರಂಭದಲ್ಲೇ ವಿಘ್ನ; ಮುರಿದುಬಿದ್ದ ನಂದಿ ಕಂಬ

ನಾಡಹಬ್ಬಕ್ಕೆ ಆರಂಭದಲ್ಲೇ ವಿಘ್ನ; ಮುರಿದುಬಿದ್ದ ನಂದಿ ಕಂಬ

by cknewsnow desk
October 11, 2026
0

ನಂದಿ ಧ್ವಜವು ಶುಭ ಸಂಕೇತ

ಸ್ಟಿಂಗ್’ಪಿನ್ ಜತೆ ಸಿಎಂ ಗುಪ್ತ ಸಭೆ

ಸ್ಟಿಂಗ್’ಪಿನ್ ಜತೆ ಸಿಎಂ ಗುಪ್ತ ಸಭೆ

by cknewsnow desk
October 11, 2026
0

ಮೌಂಟ್ ಕಾರ್ಮೆಲ್ ಕಾಲೇಜ್ ಪಕ್ಕದ ಫೈವ್'ಸ್ಟಾರ್ ಹೋಟೆಲ್'ನಲ್ಲಿ ಭೇಟಿ

ಸದ್ಯಕ್ಕಿಲ್ಲ ಸಂಪುಟ ಪುನಾರಚನೆ

ಸದ್ಯಕ್ಕಿಲ್ಲ ಸಂಪುಟ ಪುನಾರಚನೆ

by cknewsnow desk
October 10, 2026
0

ಮುಂದಿನ ವರ್ಷ ಏಪ್ರಿಲ್‌-ಮೇನಲ್ಲಿ ಮಂತ್ರಿಮಂಡಲಕ್ಕೆ ಹೊಸರೂಪ

ಡಿಕೆಶಿ ಹೊಡೆತಕ್ಕೆ ತತ್ತರ, ಪುನಾ ಸಿದ್ದುಗೆ ಹತ್ತಿರ

ಡಿಕೆಶಿ ಹೊಡೆತಕ್ಕೆ ತತ್ತರ, ಪುನಾ ಸಿದ್ದುಗೆ ಹತ್ತಿರ

by cknewsnow desk
October 10, 2026
0

ಚದುರಿದ್ದ ಸಿದ್ದರಾಮಯ್ಯ ಟೀಮ್ ಮತ್ತೆ ಒಂದಾಗುತ್ತಿದೆ! ಮೈಸೂರಲ್ಲಿ ಹಿಡಿತ ಸಾಧಿಸಲು ಸಿಎಂ ಡಿಕೆಶಿ ಮಾಸ್ಟರ್ ಪ್ಲಾನ್

Next Post
ಡಿಜಿಟ್‌ನೊಂದಿಗೆ  ಸಿಎಂ ಪುತ್ರ ವಿಜಯೇಂದ್ರ ಡೀಲ್ ಬಗ್ಗೆ ಹೇಳಿದ  ಬಸನಗೌಡ ಪಾಟೀಲ್‌ ಯತ್ನಾಳ್‌

ಕಮಲದ ಕೈ ಹಿಡಿಯಲಿರುವ 25 ಕಾಂಗ್ರೆಸ್ ಶಾಸಕರು

Leave a Reply Cancel reply

Your email address will not be published. Required fields are marked *

Recommended

ಹೊಸ ಪ್ರಭೇದದ ಕೊರೊನಾ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ, ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗ: ಡಾ.ಕೆ.ಸುಧಾಕರ್

ಕೋವಿಡ್ ಎರಡನೇ ಅಲೆ ಆರಂಭದ ಸೂಚನೆ ಸ್ಪಷ್ಟ, ಮುನ್ನೆಚ್ಚರಿಕೆ ವಹಿಸದಿದ್ದರೆ ಕಾದಿದೆ ಆಪತ್ತು; ರಾಷ್ಟ್ರೀಯ ಪಾಸಿಟಿವಿಟಿ ದರಕ್ಕಿಂತ ರಾಜ್ಯದ ಪಾಸಿಟಿವಿಟಿ ದರವೇ ಹೆಚ್ಚು!!

6 years ago
ಕೆಪಿಎಸ್‍ಸಿ ಸದಸ್ಯರಾಗಿ ನೇಮಕಗೊಂಡ ಡಾ.ಬಿ.ಪ್ರಭುದೇವ್; ಅಪ್ಪಟ ಮಣ್ಣಿನ ಮಗನ ಚಿನ್ನದಂಥ ಸಾಧನೆ

ಕೆಪಿಎಸ್‍ಸಿ ಸದಸ್ಯರಾಗಿ ನೇಮಕಗೊಂಡ ಡಾ.ಬಿ.ಪ್ರಭುದೇವ್; ಅಪ್ಪಟ ಮಣ್ಣಿನ ಮಗನ ಚಿನ್ನದಂಥ ಸಾಧನೆ

6 years ago

Popular News

  • ಡಿಜಿಟ್‌ನೊಂದಿಗೆ  ಸಿಎಂ ಪುತ್ರ ವಿಜಯೇಂದ್ರ ಡೀಲ್ ಬಗ್ಗೆ ಹೇಳಿದ  ಬಸನಗೌಡ ಪಾಟೀಲ್‌ ಯತ್ನಾಳ್‌

    ಕಮಲದ ಕೈ ಹಿಡಿಯಲಿರುವ 25 ಕಾಂಗ್ರೆಸ್ ಶಾಸಕರು

    0 shares
    Share 0 Tweet 0
  • ಕಾಲ ಉತ್ತರಿಸುತ್ತದೆ ಎನ್ನುವುದು ತನಿಖೆಗೆ ಪರ್ಯಾಯವಲ್ಲ: HDK

    0 shares
    Share 0 Tweet 0
  • ಅತೃಪ್ತ ಶಾಸಕರ ಓಲೈಕೆಗೆ ತಲಾ ₹100 ಕೋಟಿ

    0 shares
    Share 0 Tweet 0
  • ನಾಡಹಬ್ಬಕ್ಕೆ ಆರಂಭದಲ್ಲೇ ವಿಘ್ನ; ಮುರಿದುಬಿದ್ದ ನಂದಿ ಕಂಬ

    0 shares
    Share 0 Tweet 0
  • ಸ್ಟಿಂಗ್’ಪಿನ್ ಜತೆ ಸಿಎಂ ಗುಪ್ತ ಸಭೆ

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಡಿಜಿಟ್‌ನೊಂದಿಗೆ  ಸಿಎಂ ಪುತ್ರ ವಿಜಯೇಂದ್ರ ಡೀಲ್ ಬಗ್ಗೆ ಹೇಳಿದ  ಬಸನಗೌಡ ಪಾಟೀಲ್‌ ಯತ್ನಾಳ್‌

ಕಮಲದ ಕೈ ಹಿಡಿಯಲಿರುವ 25 ಕಾಂಗ್ರೆಸ್ ಶಾಸಕರು

October 12, 2026
ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೃಷಿ ಪಂಪುಸೆಟ್ಟುಗಳಿಗೆ 24/7 ಉಚಿತ ವಿದ್ಯುತ್

ಕಾಲ ಉತ್ತರಿಸುತ್ತದೆ ಎನ್ನುವುದು ತನಿಖೆಗೆ ಪರ್ಯಾಯವಲ್ಲ: HDK

October 12, 2026
ನಾನು, ನನ್ನ ದಾಖಲೆಗಳು ಕ್ಲೀನ್

ಅತೃಪ್ತ ಶಾಸಕರ ಓಲೈಕೆಗೆ ತಲಾ ₹100 ಕೋಟಿ

October 11, 2026
ನಾಡಹಬ್ಬಕ್ಕೆ ಆರಂಭದಲ್ಲೇ ವಿಘ್ನ; ಮುರಿದುಬಿದ್ದ ನಂದಿ ಕಂಬ

ನಾಡಹಬ್ಬಕ್ಕೆ ಆರಂಭದಲ್ಲೇ ವಿಘ್ನ; ಮುರಿದುಬಿದ್ದ ನಂದಿ ಕಂಬ

October 11, 2026

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ