• About
  • Advertise
  • Careers
  • Contact
Saturday, October 31, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home EXCLUSIVE

#HDK ಅವರ ನವದೆಹಲಿ ನಿವಾಸ ಪರಿಶೀಲನೆ, ಮಹಜರು ಸುಳ್ಳು

cknewsnow desk by cknewsnow desk
October 31, 2026
in EXCLUSIVE, NATION, POLITICS, STATE
Reading Time: 1 min read
0
ಸ್ಟಿಂಗ್ ಆಪರೇಷನ್‌; ಸಿಬಿಐ ತನಿಖೆಗೆ HDK ಆಗ್ರಹ
913
VIEWS
FacebookTwitterWhatsuplinkedinEmail

ಕೇಂದ್ರ ಸಚಿವರ ಗೃಹ ಕಚೇರಿಯ ಮಾಧ್ಯಮ ಪ್ರಕಟಣೆ; ಇಂತಹ ಸುಳ್ಳು ಸುದ್ದಿಗಳನ್ನು ಹರಡುವ ಸರಕಾರ, ಅಧಿಕಾರಿಗಳ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ

ಸುಳ್ಳು ವರದಿಗಳನ್ನು ಪ್ರಕಟಣೆ, ಪ್ರಸಾರ ಮಾಡಬಾರದು ಎಂದು ಮಾಧ್ಯಮಗಳಿಗೆ ಮನವಿ

ನವದೆಹಲಿ: ನವದೆಹಲಿಯಲ್ಲಿರುವ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರ ಅಧಿಕೃತ ನಿವಾಸದಲ್ಲಿ ಪರಿಶೀಲನೆ ನಡೆಸಲಾಗಿದೆ ಮತ್ತು ಮಹಜರು ಸಿದ್ಧಪಡಿಸಲಾಗಿದೆ ಎಂಬ ಕಪೋಲಕಲ್ಪಿತ ವರದಿಗಳ ಬಗ್ಗೆ ಸಚಿವರ ಗೃಹಕಚೇರಿ ಸ್ಪಷ್ಟನೆ ನೀಡಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಸಚಿವರ ಕಚೇರಿ; ರಾಜ್ಯದ ಕೆಲ ಸುದ್ದಿವಾಹಿನಿಗಳು ಪ್ರಸಾರ ಮಾಡುತ್ತಿರುವ, ಕೆಲ ದಿನಪತ್ರಿಕೆಗಳು ಪ್ರಕಟಿಸಿರುವ ವರದಿಗಳು ಸಂಪೂರ್ಣ ಸುಳ್ಳು, ದುರುದ್ದೇಶಪೂರಿತ ಮತ್ತು ತಪ್ಪು ಕಲ್ಪನೆಗಳನ್ನು ಬಿತ್ತುವ ಪ್ರಯತ್ನಗಳಾಗಿವೆ.

ಕರ್ನಾಟಕ ರಾಜ್ಯ ಸರಕಾರದೊಳಗಿನ ಕೆಲ ಸ್ವಾರ್ಥ ಹಿತಾಸಕ್ತಿಗಳು, ನೇರವಾಗಿ ಅಥವಾ ಸಿಸಿಬಿ (CCB) ಯಂತಹ ತನಿಖಾ ಸಂಸ್ಥೆಗಳ ಮೂಲಕ ವ್ಯಕ್ತಿಗಳ ಘನತೆಗೆ ಧಕ್ಕೆ ತರುವ ಮತ್ತು ಸುಳ್ಳು ನಿರೂಪಣೆಯನ್ನು (False Narrative) ಸೃಷ್ಟಿಸುವ ಉದ್ದೇಶದಿಂದ ಮಾಧ್ಯಮಗಳಲ್ಲಿ ಕಟ್ಟುಕಥೆಗಳನ್ನು ಹಾಗೂ ದಾರಿತಪ್ಪಿಸುವ ಮಾಹಿತಿಯನ್ನು ಹರಡಲು ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿದೆ.

ಪರಿಶೀಲಿಸದ ಮಾಹಿತಿಯನ್ನು ಆಯ್ದು ಸೋರಿಕೆ ಮಾಡುವ ಮೂಲಕ ಮತ್ತು ದಿನಪತ್ರಿಕೆ ಮತ್ತು ಸುದ್ದಿವಾಹಿನಿಗಳನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುವ ಮೂಲಕ ಸರಕಾರವು ಇಂತಹ ತಂತ್ರಗಳನ್ನು ಅನುಸರಿಸಬಾರದು ಎಂದು ಎಚ್ಚರಿಸುತ್ತೇವೆ.

ಹರಡಲಾಗುತ್ತಿರುವ ಈ ತಪ್ಪು ಮಾಹಿತಿಗೆ ಕರ್ನಾಟಕ ರಾಜ್ಯ ಸರಕಾರವೇ ಹೊಣೆಗಾರಿಕೆಯನ್ನು ಹೊರಬೇಕು. ಸರಕಾರದ ಯಾವುದೇ ಇಲಾಖೆ, ತನಿಖಾ ಸಂಸ್ಥೆ ಅಥವಾ ಸಚಿವರು ಮಾಧ್ಯಮಗಳಿಗೆ ಇಂತಹ ಸುಳ್ಳು ಮಾಹಿತಿಯನ್ನು ನೀಡಿದ್ದರೆ, ಅದಕ್ಕೆ ಕಾರಣರಾದವರನ್ನು ಬಹಿರಂಗಪಡಿಸಬೇಕು ಮತ್ತು ಅವರ ವಿರುದ್ಧ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು. ಸಂಬಂಧಪಟ್ಟ ದಿನಪತ್ರಿಕೆಗಳು, ಸುದ್ದಿವಾಹಿನಿಗಳು ಈ ಸುಳ್ಳು ವರದಿಗಳನ್ನು ತಕ್ಷಣವೇ ಹಿಂಪಡೆಯಬೇಕು, ಅಂತಹ ಸುಳ್ಳು ವರದಿಗಳನ್ನು ಪ್ರಸಾರ ಮಾಡಬಾರದು ಅಥವಾ ಪ್ರಕಟಿಸಬಾರದು ಎಂದು ಕೋರುತ್ತೇವೆ.

ಈಗಾಗಲೇ ಈ ಸುಳ್ಳು ಸುದ್ದಿಯನ್ನು ಪ್ರಕಟಿಸಿರುವ ವಾಹಿನಿಗಳು ಮತ್ತು ದಿನಪತ್ರಿಕೆಗಳು ತಿದ್ದುಪಡಿ ಪ್ರಕಟಿಸಬೇಕು ಎಂದು ವಿನಂತಿಸುತ್ತೇವೆ. ಅಲ್ಲದೆ, ಯಾವುದೇ ವರದಿ ಮಾಡುವ ಮೊದಲು ಮಾನ್ಯ ಸಚಿವರ ಕಚೇರಿಯಲ್ಲಿ ಪರಿಶೀಲನೆ ಮಾಡಿಕೊಳ್ಳಲು ಅವಕಾಶವಿರುತ್ತದೆ.ಹೆಚ್.ಡಿ. ಕುಮಾರಸ್ವಾಮಿ ಅವರ ಅಧಿಕೃತ ನಿವಾಸದಲ್ಲಿ ಪರಿಶೀಲನೆ ನಡೆಸಲಾಗಿದೆ ಮತ್ತು ಮಹಜರು (mahazar) ಸಿದ್ಧಪಡಿಸಲಾಗಿದೆ ಎಂಬ ವರದಿಯ ಮೂಲ ಯಾವುದು? ಅಂದರೆ, ಇದನ್ನು ಸಿಸಿಬಿ (CCB), ಸರಕಾರದ ಬೇರೆ ಯಾವುದೇ ಸಂಸ್ಥೆ ಅಥವಾ ಕರ್ನಾಟಕ ಸರಕಾರದ ಸಚಿವರೊಬ್ಬರು ನೀಡಿದ್ದಾರೆಯೇ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಕೋರುತ್ತೇವೆ.

ಇಂತಹ ಕಟ್ಟುಕಥೆ ಮತ್ತು ಮಾನಹಾನಿಕರ ಆರೋಪಗಳನ್ನು ಮುಂದೆಯೂ ಹರಡಿದರೆ ಅಥವಾ ಪ್ರಸಾರ ಮಾಡಿದರೆ, ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಗೌರವಪೂರ್ವಕವಾಗಿ ತಮ್ಮ ಗಮನಕ್ಕೆ ತರಲು ಬಯಸುತ್ತೇವೆ.

ಅಂತಹ ಸಂದರ್ಭದಲ್ಲಿ, ಇದಕ್ಕೆ ಕಾರಣರಾದ ಸರಕಾರಿ ಅಧಿಕಾರಿಗಳು, ಸಿಬ್ಬಂದಿ ಮತ್ತು ಸಚಿವರ ವಿರುದ್ಧ ಸೂಕ್ತ ಸಿವಿಲ್ (civil) ಹಾಗೂ ಕ್ರಿಮಿನಲ್ (criminal) ಕಾನೂನು ಕ್ರಮಗಳನ್ನು ಜರುಗಿಸಲು ಸಚಿವರು ಮುಕ್ತ ಅವಕಾಶ ಹೊಂದಿರುತ್ತಾರೆ.

ಕರ್ನಾಟಕ ರಾಜ್ಯ ಸರಕಾರವು ಒಂದು ವಿಷಯವನ್ನು ಅರ್ಥ ಮಾಡಿಕೊಳ್ಳಬೇಕು. ತನ್ನ ತನಿಖಾ ಸಂಸ್ಥೆಗಳನ್ನು ರಾಜಕೀಯ ದ್ವೇಷ ಸಾಧನೆಗೆ ಬಳಸಿಕೊಳ್ಳಬಾರದು. ಹಾಗೆಯೇ, ಸುಳ್ಳುಗಳನ್ನು ಪದೇಪದೇ ಪ್ರಸಾರ ಮಾಡಿದ ಮಾತ್ರಕ್ಕೆ ಅವು ಸತ್ಯವಾಗುವುದಿಲ್ಲ ಅಥವಾ ಕಾನೂನುಬದ್ಧವಾಗುವುದಿಲ್ಲ ಎಂದು ತಿಳಿಸಲು ಬಯಸುತ್ತೇವೆ ಎಂದು ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರ ಗೃಹ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೃಷಿ ಪಂಪುಸೆಟ್ಟುಗಳಿಗೆ 24/7 ಉಚಿತ ವಿದ್ಯುತ್

ಸರ್ಚ್ ನೆಪದಲ್ಲಿ ದೌರ್ಜನ್ಯ ಎಸಗುವ ಪೊಲೀಸ್ ಅಧಿಕಾರಿಗಳ ಹೆಸರು ಬರೆದಿಟ್ಟುಕೊಳ್ಳಿ!

by cknewsnow desk
October 31, 2026
0

ಜೆಡಿಎಸ್ ಕಾರ್ಯಕರ್ತರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಂದೇಶ

ಸ್ಟಿಂಗ್ ಆಪರೇಷನ್; ಕಾಂಗ್ರೆಸ್ಸಿನಿಂದ ಕೃಪಾ ಆಳ್ವ ಉಚ್ಚಾಟನೆ

ಸ್ಟಿಂಗ್ ಆಪರೇಷನ್; ಕಾಂಗ್ರೆಸ್ಸಿನಿಂದ ಕೃಪಾ ಆಳ್ವ ಉಚ್ಚಾಟನೆ

by cknewsnow desk
October 31, 2026
0

ಕಾಂಗ್ರೆಸ್ ಮೊದಲ ವಿಕೆಟ್ ಪತನ; ಸಿದ್ದರಾಮಯ್ಯ ಒತ್ತಡಕ್ಕೆ ಬೆದರಿದ ಹಸ್ತಪಡೆ

ಕರ್ನಾಟಕದಲ್ಲಿ ಸೊನ್ನೆ ಸಂಪಾದನೆ; ಬ್ಯಾಲೆಟ್ ಪೇಪರ್‌ ಬೇಕೆಂದು ಹಠ ಹಿಡಿದ ಕಾಂಗ್ರೆಸ್ mlc ಚುನಾವಣೆಯಲ್ಲಿ ಗೆದ್ದ ಸೀಟುಗಳೆಷ್ಟು?

ಕರ್ನಾಟಕದಲ್ಲಿ ಸೊನ್ನೆ ಸಂಪಾದನೆ; ಬ್ಯಾಲೆಟ್ ಪೇಪರ್‌ ಬೇಕೆಂದು ಹಠ ಹಿಡಿದ ಕಾಂಗ್ರೆಸ್ mlc ಚುನಾವಣೆಯಲ್ಲಿ ಗೆದ್ದ ಸೀಟುಗಳೆಷ್ಟು?

by cknewsnow desk
October 29, 2026
0

ರಾಹುಲ್ ಗಾಂಧಿ ಪಡೆಗೆ ಟಾಂಗ್ ಕೊಟ್ಟ ಪ್ರಧಾನಿ ನರೇಂದ್ರ ಮೋದಿ

#SIR ರಾಜ್ಯದಲ್ಲಿ 99.32 ಲಕ್ಷ ಮತದಾರರ ಹೆಸರಿಲ್ಲ

#SIR ರಾಜ್ಯದಲ್ಲಿ 99.32 ಲಕ್ಷ ಮತದಾರರ ಹೆಸರಿಲ್ಲ

by cknewsnow desk
October 28, 2026
0

ಬೆಂಗಳೂರಿನಲ್ಲಿ 43.13% ಮತದಾರರ ಪ್ರಮಾಣ ಕುಸಿತ

ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ₹600 ಕೋಟಿಗೆ ಡೀಲ್ ಕೊಟ್ಟರಾ ಡಿಕೆಶಿ!!

ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ₹600 ಕೋಟಿಗೆ ಡೀಲ್ ಕೊಟ್ಟರಾ ಡಿಕೆಶಿ!!

by cknewsnow desk
October 25, 2026
0

ಹಾಲಿ ಮುಖ್ಯಮಂತ್ರಿ ವಿರುದ್ಧ ಕೇಂದ್ರ ಸಚಿವರ ಗಂಭೀರ ಆರೋಪ; ಈಗಿನ ಮಹಾನ್ ಮುಖ್ಯಮಂತ್ರಿಗಳೇ ಸ್ಟಿಂಗ್ ಮೂಲಪುರುಷ

ಸ್ಟಿಂಗ್ ಮಾಡಿದವರಿಗೆ ನೋಟಿಸ್, ಅನ್ಯಪಕ್ಷದವರ ಅರೆಸ್ಟ್!

ಸ್ಟಿಂಗ್ ಮಾಡಿದವರಿಗೆ ನೋಟಿಸ್, ಅನ್ಯಪಕ್ಷದವರ ಅರೆಸ್ಟ್!

by cknewsnow desk
October 25, 2026
0

ಸ್ಟಿಂಗ್ ಆಪರೇಶನ್ ಪ್ರಕರಣದಲ್ಲಿ ರಾಜ್ಯ ಸರ್ಕಾರದ್ದು ಇಬ್ಬಗೆ ನೀತಿ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ

Leave a Reply Cancel reply

Your email address will not be published. Required fields are marked *

Recommended

ಬರ ಪರಿಹಾರ;‌ ಕೇಂದ್ರದ ಬಿಜೆಪಿ-ಕಾಂಗ್ರೆಸ್‌ ಸರಕಾರಗಳು ಕರ್ನಾಟಕಕ್ಕೆ ಕೊಟ್ಟಿದ್ದೆಷ್ಟು?

ಬರ ಪರಿಹಾರ;‌ ಕೇಂದ್ರದ ಬಿಜೆಪಿ-ಕಾಂಗ್ರೆಸ್‌ ಸರಕಾರಗಳು ಕರ್ನಾಟಕಕ್ಕೆ ಕೊಟ್ಟಿದ್ದೆಷ್ಟು?

3 years ago
ಚಾಮುಂಡೇಶ್ವರಿ ವಿಶೇಷ ದರ್ಶನಕ್ಕೆ 300 ರೂ.; ಭಕ್ತರ ಆಕ್ರೋಶ

ಚಾಮುಂಡೇಶ್ವರಿ ವಿಶೇಷ ದರ್ಶನಕ್ಕೆ 300 ರೂ.; ಭಕ್ತರ ಆಕ್ರೋಶ

5 years ago

Popular News

  • ಸ್ಟಿಂಗ್ ಆಪರೇಷನ್‌; ಸಿಬಿಐ ತನಿಖೆಗೆ HDK ಆಗ್ರಹ

    #HDK ಅವರ ನವದೆಹಲಿ ನಿವಾಸ ಪರಿಶೀಲನೆ, ಮಹಜರು ಸುಳ್ಳು

    0 shares
    Share 0 Tweet 0
  • ಸರ್ಚ್ ನೆಪದಲ್ಲಿ ದೌರ್ಜನ್ಯ ಎಸಗುವ ಪೊಲೀಸ್ ಅಧಿಕಾರಿಗಳ ಹೆಸರು ಬರೆದಿಟ್ಟುಕೊಳ್ಳಿ!

    0 shares
    Share 0 Tweet 0
  • ಸ್ಟಿಂಗ್ ಆಪರೇಷನ್; ಕಾಂಗ್ರೆಸ್ಸಿನಿಂದ ಕೃಪಾ ಆಳ್ವ ಉಚ್ಚಾಟನೆ

    0 shares
    Share 0 Tweet 0
  • ಕರ್ನಾಟಕದಲ್ಲಿ ಸೊನ್ನೆ ಸಂಪಾದನೆ; ಬ್ಯಾಲೆಟ್ ಪೇಪರ್‌ ಬೇಕೆಂದು ಹಠ ಹಿಡಿದ ಕಾಂಗ್ರೆಸ್ mlc ಚುನಾವಣೆಯಲ್ಲಿ ಗೆದ್ದ ಸೀಟುಗಳೆಷ್ಟು?

    0 shares
    Share 0 Tweet 0
  • #SIR ರಾಜ್ಯದಲ್ಲಿ 99.32 ಲಕ್ಷ ಮತದಾರರ ಹೆಸರಿಲ್ಲ

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಸ್ಟಿಂಗ್ ಆಪರೇಷನ್‌; ಸಿಬಿಐ ತನಿಖೆಗೆ HDK ಆಗ್ರಹ

#HDK ಅವರ ನವದೆಹಲಿ ನಿವಾಸ ಪರಿಶೀಲನೆ, ಮಹಜರು ಸುಳ್ಳು

October 31, 2026
ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೃಷಿ ಪಂಪುಸೆಟ್ಟುಗಳಿಗೆ 24/7 ಉಚಿತ ವಿದ್ಯುತ್

ಸರ್ಚ್ ನೆಪದಲ್ಲಿ ದೌರ್ಜನ್ಯ ಎಸಗುವ ಪೊಲೀಸ್ ಅಧಿಕಾರಿಗಳ ಹೆಸರು ಬರೆದಿಟ್ಟುಕೊಳ್ಳಿ!

October 31, 2026
ಸ್ಟಿಂಗ್ ಆಪರೇಷನ್; ಕಾಂಗ್ರೆಸ್ಸಿನಿಂದ ಕೃಪಾ ಆಳ್ವ ಉಚ್ಚಾಟನೆ

ಸ್ಟಿಂಗ್ ಆಪರೇಷನ್; ಕಾಂಗ್ರೆಸ್ಸಿನಿಂದ ಕೃಪಾ ಆಳ್ವ ಉಚ್ಚಾಟನೆ

October 31, 2026
ಕರ್ನಾಟಕದಲ್ಲಿ ಸೊನ್ನೆ ಸಂಪಾದನೆ; ಬ್ಯಾಲೆಟ್ ಪೇಪರ್‌ ಬೇಕೆಂದು ಹಠ ಹಿಡಿದ ಕಾಂಗ್ರೆಸ್ mlc ಚುನಾವಣೆಯಲ್ಲಿ ಗೆದ್ದ ಸೀಟುಗಳೆಷ್ಟು?

ಕರ್ನಾಟಕದಲ್ಲಿ ಸೊನ್ನೆ ಸಂಪಾದನೆ; ಬ್ಯಾಲೆಟ್ ಪೇಪರ್‌ ಬೇಕೆಂದು ಹಠ ಹಿಡಿದ ಕಾಂಗ್ರೆಸ್ mlc ಚುನಾವಣೆಯಲ್ಲಿ ಗೆದ್ದ ಸೀಟುಗಳೆಷ್ಟು?

October 29, 2026

Covid 19

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

October 16, 2026
ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ