• About
  • Advertise
  • Careers
  • Contact
Sunday, November 29, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS CRIME

ಬೆಂಕಿಯಲ್ಲಿ ಬೆಂದುಹೋದ ಬಾಗೇಪಲ್ಲಿ ಚಾಲಕ; ಇನ್ನೊಬ್ಬ ಡ್ರೈವರ್‌ ಪವಾಡಸದೃಶ ಪಾರು

cknewsnow desk by cknewsnow desk
March 25, 2022
in CRIME, STATE
Reading Time: 3 mins read
0
ಬೆಂಕಿಯಲ್ಲಿ ಬೆಂದುಹೋದ ಬಾಗೇಪಲ್ಲಿ ಚಾಲಕ; ಇನ್ನೊಬ್ಬ ಡ್ರೈವರ್‌  ಪವಾಡಸದೃಶ ಪಾರು
1.7k
VIEWS
FacebookTwitterWhatsuplinkedinEmail

ಆವತಿಯ ಭುಕ್ತಿ ಡಾಬಾ ಮುಂದೆ ಸಿಮೆಂಟ್‌ ಲಾರಿಗಳ ಭೀಕರ ಅಪಘಾತ; ಓವರ್‌ ಟೇಕ್‌ ತಂದಿಟ್ಟ ಆಪತ್ತು

by Sidhu Devanahalli

ದೇವನಹಳ್ಳಿ: ಪಟ್ಟಣಕ್ಕೆ ಸಮೀಪದ ಆವತಿಯ ಭುಕ್ತಿ ಡಾಬಾ ಮುಂಭಾಗ ಎರಡು ಲಾರಿಗಳ ನಡುವೆ ಸಂಭವಿಸಿದ  ಭೀಕರ ರಸ್ತೆ ಅಪಘಾತದಲ್ಲಿ ಎರಡೂ ಲಾರಿಗಳಿಗೆ ಬೆಂಕಿ ಹೊತ್ತಿಕೊಂಡು ಒಬ್ಬ ಚಾಲಕ ಲಾರಿಯಿಂದ ಹೊರ ಬರಲಾಗದೆ ಬೆಂಕಿಯಲ್ಲಿ ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.

ಮೃತ ಚಾಲಕ ವಸಂತ ಕುಮಾರ್ (28) ಬಾಗೇಪಲ್ಲಿಯ ಗೊರ್ತಪಲ್ಲಿಯವರೆಂದು ತಿಳಿದು ಬಂದಿದೆ. KA-02-AG-5852 ನಂಬರ್‌ ಪ್ಲೇಟ್‌ ಉಳ್ಳ ಲಾರಿ ಅರ್ಧ ಸುಟ್ಟ ಹೋಗಿದ್ದು, ಅದು ಆಂಧ್ರ ಪ್ರದೇಶದ ಜಮ್ಮಲ್ಲಮಡಗುವಿನ ದಾಲ್ಮಿ ಸಿಮೆಂಟ್ ಕಂಪನಿಗೆ ಸೇರಿದ್ದು ಎಂದು ಗೊತ್ತಾಗಿದೆ.

ಹೈದರಾಬಾದ್ ಮೂಲದ TN-70-Y-2566 ನಂಬರಿನ ಇನ್ನೊಂದು ಲಾರಿಯು ತಮಿಳುನಾಡು ಹೊಸೂರಿನ ನೋಂದಣಿ ಹೊಂದಿದ್ದು, ಅರುಣಾಚಲಂ ಕಂಪನಿ ಒಡೆತನಕ್ಕೆ ಸೇರಿದೆ ಎನ್ನಲಾಗಿದೆ. ಇದರ ಚಾಲಕ ವೇಲು ಆಶ್ಚರ್ಯಕರ ರೀತಿಯಲ್ಲಿ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾನೆ.

ಅಪಘಾತ ಸಂಭವಿಸಿದ್ದು ಹೇಗೆ?

ಗುರುವಾರ ರಾತ್ರಿ ಸುಮಾರು 10.15 ಗಂಟೆ ಹೊತ್ತಿಗೆ ಆವತಿ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳು ಅಪಘಾತಕ್ಕೀಡಾಗಿವೆ. ಎರಡೂ ಲಾರಿಗಳು ಆಂಧ್ರದಿಂದ ಸಿಮೆಂಟ್ ತುಂಬಿಕೊಂಡು ಒಂದು ಲಾರಿ ಮೈಸೂರಿಗೆ,  ಇನ್ನೊಂದು ಲಾರಿ ಬೆಂಗಳೂರಿನ ವೈಟ್ʼಫೀಲ್ಡ್ ಗೆ ಸಾಗುವಾಗ ಆವತಿ ಬಳಿಯ ಭುಕ್ತಿ ಡಾಬಾ ಬಳಿ ಚಾಲಕ ವಸಂತ್ ಕುಮಾರ್‌ ಎಡಬದಿಯಿಂದ ಓವರ್ ಟೇಕ್ ಮಾಡಲು ಹೋಗಿ ನಿಯಂತ್ರಣ ತಪ್ಪಿ ಮುಂದೆ ಹೋಗುತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ.

ಡಿಕ್ಕಿ ಹೊಡೆದ ರಭಸಕ್ಕೆ ಮುಂದಿನ ಲಾರಿಯು ರಸ್ತೆ ವಿಭಜಕವನ್ನು ದಾಟಿ ಪಲ್ಟಿ ಹೊಡೆದು ಚಿಕ್ಕಬಳ್ಳಾಪುರ ಕಡೆಯ ಮಾರ್ಗದಲ್ಲಿ ಹಾರಿ ಬಿದ್ದಿದೆ. ಲಾರಿ ಪಲ್ಟಿಯಾದ ಸಂದರ್ಭದಲ್ಲಿ ಚಾಲಕ ವೇಲು ಮುಂಬದಿಯ ಗ್ಲಾಸ್ ಹೊಡೆದುಕೊಂಡು ರಸ್ತೆ ಮೇಲೆ ಬಿದ್ದಿದ್ದಾನೆ. ತಕ್ಷಣವೇ ಅಲ್ಲಿದ್ದ ಜನರು ಚಾಲಕ ವೇಲುನನ್ನು ಕಾಪಾಡಿದ್ದಾರೆ.

ಆದರೆ ಹಿಂಬದಿಯಿಂದ ಡಿಕ್ಕಿ ಹೊಡೆದ ಲಾರಿ ನಿಯಂತ್ರಣಕ್ಕೆ ಸಿಗದೇ ಮುಂಬದಿ ಬಾನೆಟ್‌ ಪೂರ್ಣವಾಗಿ ಜಖಗೊಂಡು ರಸ್ತೆ ವಿಭಜಕದ ಮೇಲೆ ನಿಂತುಬಿಟ್ಟಿದೆ. ಘರ್ಷಣೆಯ ರಭಸಕ್ಕೆ ಎರಡೂ ಲಾರಿಗಳಿಗೆ ಬೆಂಕಿ ಹೊತ್ತಿಕೊಂಡು ಜಖಂ ಆದ ಲಾರಿಯಲ್ಲಿದ್ದ ಚಾಲಕ ವಸಂತ್ ಕುಮಾರ್ ಹೊರ ಬರಲಾಗದೇ ಬೆಂಕಿಯಲ್ಲಿ ಬೆಂದು ಹೋಗಿದ್ದಾನೆ.

ಅಲ್ಲಿದ್ದ ಸಾರ್ವಜನಿಕರು ಕೂಡ ಸಿಕ್ಕಿಹಾಕಿಕೊಂಡ ವಸಂತ್ ಕುಮಾರ್ʼನನ್ನು ಕಾಪಾಡಲು ತೀವ್ರಗತಿಯಲ್ಲಿ ಬೆಂಕಿ ಹೊತ್ತಿಕೊಂಡಿದ್ದ ಕಾರಣಕ್ಕೆ ಆಗಲಿಲ್ಲ ಎಂದು ಹೇಳಲಾಗಿದೆ. ವಿಷಯ ತಿಳಿದ ತಕ್ಷಣವೇ ಸ್ಥಳಕ್ಕಾಗಮಿಸಿದ ವಿಜಯಪುರ ಪೊಲೀಸರು ಹಾಗೂ ಅಗ್ನಿಶಾಮಕ ದಳವು ಕೂಡಲೇ ಬೆಂಕಿಯನ್ನು ನಂದಿಸಿದ್ದಾರೆ.

ಕಾರ್ಯಾಚರಣೆ ಹೀಗೆ ನಡೆಯಿತು

ಸ್ಥಳೀಯರ ಮಾಹಿತಿ ಮೇರೆಗೆ, ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕಾಗಮಿಸಿದ ವಿಜಯಪುರ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಅಪಘಾತದಲ್ಲಿ ಬೆಂಕಿಯಿಂದ ಹೆಚ್ಚು ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಪೀಣ್ಯ, ಯಲಹಂಕ, ದೇವನಹಳ್ಳಿ, ಚಿಕ್ಕಬಳ್ಳಾಪುರದಿಂದ 4 ಅಗ್ನಿಶಾಮಕ ದಳ ತಂಡಗಳು ಭಾಗಿಯಾಗಿದ್ದವು ಸುಟ್ಟು ಕರಕಲಾದ ವಸಂತ್‌ ಕುಮಾರ್ ದೇಹವನ್ನು ಜಖಂಗೊಂಡಿದ್ದ ಲಾರಿಯಲ್ಲಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ಹೈಡ್ರೋಲಿಕ್ ತಂತ್ರಜ್ಞಾನ ಬಳಸಿ ದೇಹವನ್ನು ಹೊರಗೆ ತೆಗೆಯಲಾಯಿತು. ಮೃತ ದೇಹವನ್ನು ಸಮೀಪದ ಆಕಾಶ್ ಆಸ್ಪತ್ರೆಗೆ ಸಾಗಿಸಲಾಯಿತು. ರಸ್ತೆಯ ಅಡ್ಡಲಾಗಿ ಬಿದ್ದಂತಹ ಲಾರಿ ಹಾಗೂ ಸಿಮೆಂಟ್ ಚೀಲಗಳಿಂದ ಹೆದ್ದಾರಿಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ತಕ್ಷಣವೇ ವಿಜಯಪುರ ಪೊಲೀಸರು ಹಾಗೂ ದೇವನಹಳ್ಳಿ ಪೊಲೀಸರು, ಟ್ರಾಫಿಕ್ ಪೊಲೀಸರು ಸಮಸ್ಯೆ ಆಗದಂತೆ ಪರಿಸ್ಥಿತಿ ನಿಭಾಯಿಸಿದರು.

ಬೆಳಗಿನ ಜಾವದವರೆಗೂ ಕಾರ್ಯಾಚರಣೆ ನಡೆಯಿತು. ಸ್ಥಳದಲ್ಲಿ ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಗಳು ಕಾರ್ಯಾಚರಣೆ ಮುಗಿಯುವವರೆಗೂ ಮೊಕ್ಕಾಂ ಹೂಡಿದ್ದರು.

ವಸಂತ್ ಕುಮಾರ್
ನತದೃಷ್ಟ ವಸಂತ್ ಕುಮಾರ್

ಈತ ಲಾರಿ ಚಾಲಕನಾಗಿದ್ದು, ಒಂದು ವರ್ಷದ ಗಂಡು ಮಗುವಿದೆ. ಒಂದೇ ಒಂದು ಲೋಡ್ ಟ್ರಿಪ್ ಮುಗಿಸಿಕೊಂಡು ವಾಪಸ್‌ ಬಂದು ಹರಕೆ ತೀರಿಸಲು ತಿರುಪತಿಗೆ  ಹೋಗೋಣವೆಂದು ಕುಟುಂಬದವರಿಗೆ ಹೇಳಿ ಬಂದಿದ್ದ. ಆದರೆ ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾನೆ. ಆತನ ಕುಟುಂಬ ತೀವ್ರ ಆಘಾತಕ್ಕೆ ಒಳಗಾಗಿದೆ.

ವೇಲು
ಪವಾಡಸದೃಶದಲ್ಲಿ ಪಾರಾದ ವೇಲು

ಮೂಲತಃ ತಮಿಳುನಾಡಿನ ಧರ್ಮಪುರಿಯ ವೇಲು ಈ ದುರಂತದಲ್ಲಿ ಪವಾದಸದೃಶವಾಗಿ ಪಾರಾಗಿದ್ದಾರೆ. ಆತನಿಗೆ ಗಾಯಗಲಾಗಿವೆ. ತನ್ನ ಕಣ್ಣೆದುರೇ ಸಂಭವಿಸಿದ ಅಪಘಾತವನ್ನು ನೆನೆದು ಕಣ್ಣೀರು ಹಾಕಿದ. ಕಣ್ಮುಚ್ಚಿ ಬಿಡುವಷ್ಟರಲ್ಲಿ ಎಲ್ಲಾ ನಡೆದು ಹೋಯಿತು. ನಾನು ಹೇಗೆ ರಸ್ತೆಗೆ ಬಿದ್ದೆ ಎಂಬುದೇ ನನಗೆ ತಿಳಿಯುತ್ತಿಲ್ಲ. ಇತ್ತೀಚೆಗಷ್ಟೇ ನಾನು ನಮ್ಮ  ಮನೆ ದೇವರು ಕರುಮಾರಿಯಮ್ಮನ ದರ್ಶನ ಮಾಡಿಕೊಂಡು ಬಂದಿದ್ದೆ. ತಾಯಿಯೇ ನನ್ನನ್ನು ಕಾಪಾಡಿದಳು ಎಂದು ಹೇಳಿದ್ದಾನೆ. ಮೃತಪಟ್ಟ ಚಾಲಕ ವಸಂತ್ ಕುಮಾರ್ ವಿಷಯ ತಿಳಿದು, ನನ್ನ ಹಾಗೆ ಅವನೂ ಒಬ್ಬ ಚಾಲಕ. ಅವನ ಹೆಂಡತಿ ಮಕ್ಕಳ ಗತಿ ಏನು ಎಂದು ಕಣ್ಣೀರಿಟ್ಟಿದ್ದಾನೆ.

ಒಟ್ಟಿನಲ್ಲಿ ವಾಹನ ಚಾಲನೆಯಲ್ಲಿ ಸ್ವಲ್ಪ ಮೈ ಮರೆತರೂ ಅಥವಾ ಅತಿ ವೇಗದಿಂದ ಏನಾಗುತ್ತದೆ ಎಂಬುದಕ್ಕೆ ಇದೊಂದು ನಿದರ್ಶನ ಎಂದು ಪೊಲೀಸರು ಹೇಳುತ್ತಾರೆ.

ವೇಗವಾಗಿ ಹೋಗುವ ಮುನ್ನ ನಿಮ್ಮನ್ನು ನಂಬಿ ಬದುಕುತ್ತಿರುವವರ ಬಗ್ಗೆಯೂ ಯೋಚನೆ ಮಾಡಬೇಕಾಗುತ್ತದೆ.  ಆದಷ್ಟು ನಿಧಾನವಾಗಿ ಚಲಿಸಿ ಎಂಬುದೇ ಸಿಕೆನ್ಯೂಸ್ ನೌ ಕಳಕಳಿ.

cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

KPSC ಅಕ್ರಮಕ್ಕೆ ಟ್ವಿಸ್ಟ್; ಪೊಲೀಸರಿಗೆ ದೂರು ಕೊಟ್ಟ ED

KPSC ಅಕ್ರಮಕ್ಕೆ ಟ್ವಿಸ್ಟ್; ಪೊಲೀಸರಿಗೆ ದೂರು ಕೊಟ್ಟ ED

by cknewsnow desk
November 26, 2026
0

ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ ಜಾರಿ ನಿರ್ದೇಶನಾಲಯ

ಕಾಂಗ್ರೆಸ್ಸಿಗರ ಗಂಜಿ ಕೇಂದ್ರಕ್ಕೆ ₹2,000 ಕೋಟಿ; ಆಶಾ ಕಾರ್ಯಕರ್ತರಿಗೆ ₹480 ಕೊಡಲು ಹಣವಿಲ್ಲ!

ಕಾಂಗ್ರೆಸ್ಸಿಗರ ಗಂಜಿ ಕೇಂದ್ರಕ್ಕೆ ₹2,000 ಕೋಟಿ; ಆಶಾ ಕಾರ್ಯಕರ್ತರಿಗೆ ₹480 ಕೊಡಲು ಹಣವಿಲ್ಲ!

by cknewsnow desk
November 25, 2026
0

ರಾಜ್ಯ ಸರಕಾರದ ದ್ವಂದ್ವ ನೀತಿ; ಆರ್. ಅಶೋಕ್ ಕಟು ಟೀಕೆ

ಹೈಕೋರ್ಟ್‌ ಆದೇಶ ರದ್ದು: 2 ವಾರದಲ್ಲಿ ಶರಣಾಗಲು ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಆದೇಶ

ಹೈಕೋರ್ಟ್‌ ಆದೇಶ ರದ್ದು: 2 ವಾರದಲ್ಲಿ ಶರಣಾಗಲು ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಆದೇಶ

by cknewsnow desk
November 25, 2026
0

ಧಾರವಾಡ ಜಿ.ಪಂ ಸದಸ್ಯ ಯೋಗೇಶ್‌ ಗೌಡ ಕೊಲೆ

ಕನ್ನಡಿಗರ ಕಣ್ಣೀರು ಹರಿದರೂ ಚಿಂತೆ ಇಲ್ಲ, ತಮಿಳುನಾಡಿಗೆ ಕಾವೇರಿ ಹರಿಯಲಿ ಎನ್ನುತ್ತಿದೆ ಕಾಂಗ್ರೆಸ್

ಕಾವೇರಿ ವಿಚಾರದಲ್ಲಿ ಕರ್ನಾಟಕ ಮಾಡಿದ ತಪ್ಪುಗಳು

by cknewsnow desk
November 25, 2026
0

ರಾಜಕೀಯ ಇಚ್ಛಾಶಕ್ತಿ ಕೊರತೆ; ತಮಿಳುನಾಡು ಎದುರು ರಾಜ್ಯಕ್ಕೆ ನಿರಂತರ ವೈಫಲ್ಯ

ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆ

ಹೂವಿನಂಥ ಹೃದಯಿ!; HDK ಹೀಗೆ ಹೇಳಿದ್ದು ಯಾರಿಗೆ?

by cknewsnow desk
November 23, 2026
0

ಆಶಾ ಕಾರ್ಯಕರ್ತೆಯರ ಪ್ರತಿಭಟನೆ ತಾರಕಕ್ಕೆ; ರಾಜ್ಯ ಸರಕಾರಕ್ಕೆ ಇಕ್ಕಟ್ಟು

ಜಗದೀಶ್‌ ಶೆಟ್ಟರ್‌ ಸೋಲಿಸಿದ್ದ ಶಾಸಕ ಮಹೇಶ್‌ ಟೆಂಗಿನಕಾಯಿಗೆ ಸಿಗುತ್ತಾ ರಾಜ್ಯ ಬಿಜೆಪಿ ಸಾರಥ್ಯ?

ಜಗದೀಶ್‌ ಶೆಟ್ಟರ್‌ ಸೋಲಿಸಿದ್ದ ಶಾಸಕ ಮಹೇಶ್‌ ಟೆಂಗಿನಕಾಯಿಗೆ ಸಿಗುತ್ತಾ ರಾಜ್ಯ ಬಿಜೆಪಿ ಸಾರಥ್ಯ?

by cknewsnow desk
November 22, 2026
0

ಆರ್‌ ಎಸ್‌ ಎಸ್‌ ಹಿನ್ನೆಲೆ, ಸಂಘಟನಾ ಚತುರತೆ, ಪಕ್ಷನಿಷ್ಠೆಗೆ ಒಲಿಯುತ್ತಾ ಹುದ್ದೆ

Next Post
ಕೇರಳದ ಪುರಾಣ ಪ್ರಸಿದ್ಧ ಶ್ರೀ ರಾಜರಾಜೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

ಕೇರಳದ ಪುರಾಣ ಪ್ರಸಿದ್ಧ ಶ್ರೀ ರಾಜರಾಜೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

Leave a Reply Cancel reply

Your email address will not be published. Required fields are marked *

Recommended

ಗಡಿನಾಡಿನಲ್ಲೊಬ್ಬ ಫುಕುವೋಕಾ! ಅರತ್ತೈದರ ಪ್ರಾಯದಲ್ಲೂ ಸಾವಯವ ಕೃಷಿ ಮೇಲೆ ವ್ಯಾಮೋಹ; ಬರಪೀಡಿತ ಗಡಿ ಪ್ರದೇಶದಲ್ಲಿ ವರ್ಷಕ್ಕೆರಡು ಭತ್ತದ ಬೆಳೆ

ಕೇಂದ್ರದಿಂದ ರೈತರಿಗೆ 9ನೇ ಕಂತಿನ ಪರಿಹಾರ ಬಿಡುಗಡೆ ಆಗುತ್ತಿದ್ದಂತೆ ರಾಜ್ಯದಲ್ಲೂ 1,023 ಕೋಟಿ ರೂ. ರಿಲೀಸ್

5 years ago
ರಾಜಕೀಯವಾಗಿ ಸಿದ್ದರಾಮಯ್ಯ ಅವರಿಗೆ ನಾನೇ ವಿಲನ್‌

ರಾಜಕೀಯವಾಗಿ ಸಿದ್ದರಾಮಯ್ಯ ಅವರಿಗೆ ನಾನೇ ವಿಲನ್‌

3 years ago

Popular News

  • KPSC ಅಕ್ರಮಕ್ಕೆ ಟ್ವಿಸ್ಟ್; ಪೊಲೀಸರಿಗೆ ದೂರು ಕೊಟ್ಟ ED

    KPSC ಅಕ್ರಮಕ್ಕೆ ಟ್ವಿಸ್ಟ್; ಪೊಲೀಸರಿಗೆ ದೂರು ಕೊಟ್ಟ ED

    0 shares
    Share 0 Tweet 0
  • ನಿರ್ಮಾಣ, ಮೂಲಸೌಕರ್ಯ ಉಪಕರಣ ಉದ್ಯಮಕ್ಕೆ ಕೇಂದ್ರದಿಂದ ₹11,000 ಕೋಟಿ ಯೋಜನೆ

    0 shares
    Share 0 Tweet 0
  • ಕಾಂಗ್ರೆಸ್ಸಿಗರ ಗಂಜಿ ಕೇಂದ್ರಕ್ಕೆ ₹2,000 ಕೋಟಿ; ಆಶಾ ಕಾರ್ಯಕರ್ತರಿಗೆ ₹480 ಕೊಡಲು ಹಣವಿಲ್ಲ!

    0 shares
    Share 0 Tweet 0
  • ಹೈಕೋರ್ಟ್‌ ಆದೇಶ ರದ್ದು: 2 ವಾರದಲ್ಲಿ ಶರಣಾಗಲು ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಆದೇಶ

    0 shares
    Share 0 Tweet 0
  • ಕಾವೇರಿ ವಿಚಾರದಲ್ಲಿ ಕರ್ನಾಟಕ ಮಾಡಿದ ತಪ್ಪುಗಳು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

KPSC ಅಕ್ರಮಕ್ಕೆ ಟ್ವಿಸ್ಟ್; ಪೊಲೀಸರಿಗೆ ದೂರು ಕೊಟ್ಟ ED

KPSC ಅಕ್ರಮಕ್ಕೆ ಟ್ವಿಸ್ಟ್; ಪೊಲೀಸರಿಗೆ ದೂರು ಕೊಟ್ಟ ED

November 26, 2026
ನಿರ್ಮಾಣ, ಮೂಲಸೌಕರ್ಯ ಉಪಕರಣ ಉದ್ಯಮಕ್ಕೆ ಕೇಂದ್ರದಿಂದ ₹11,000 ಕೋಟಿ ಯೋಜನೆ

ನಿರ್ಮಾಣ, ಮೂಲಸೌಕರ್ಯ ಉಪಕರಣ ಉದ್ಯಮಕ್ಕೆ ಕೇಂದ್ರದಿಂದ ₹11,000 ಕೋಟಿ ಯೋಜನೆ

November 25, 2026
ಕಾಂಗ್ರೆಸ್ಸಿಗರ ಗಂಜಿ ಕೇಂದ್ರಕ್ಕೆ ₹2,000 ಕೋಟಿ; ಆಶಾ ಕಾರ್ಯಕರ್ತರಿಗೆ ₹480 ಕೊಡಲು ಹಣವಿಲ್ಲ!

ಕಾಂಗ್ರೆಸ್ಸಿಗರ ಗಂಜಿ ಕೇಂದ್ರಕ್ಕೆ ₹2,000 ಕೋಟಿ; ಆಶಾ ಕಾರ್ಯಕರ್ತರಿಗೆ ₹480 ಕೊಡಲು ಹಣವಿಲ್ಲ!

November 25, 2026
ಹೈಕೋರ್ಟ್‌ ಆದೇಶ ರದ್ದು: 2 ವಾರದಲ್ಲಿ ಶರಣಾಗಲು ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಆದೇಶ

ಹೈಕೋರ್ಟ್‌ ಆದೇಶ ರದ್ದು: 2 ವಾರದಲ್ಲಿ ಶರಣಾಗಲು ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಆದೇಶ

November 25, 2026

Covid 19

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

October 16, 2026
ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ