• About
  • Advertise
  • Careers
  • Contact
Tuesday, October 13, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS NATION

ಕಮಲದ ಕೈ ಹಿಡಿಯಲಿರುವ 25 ಕಾಂಗ್ರೆಸ್ ಶಾಸಕರು

cknewsnow desk by cknewsnow desk
October 12, 2026
in NATION, POLITICS, STATE
Reading Time: 1 min read
0
ಡಿಜಿಟ್‌ನೊಂದಿಗೆ  ಸಿಎಂ ಪುತ್ರ ವಿಜಯೇಂದ್ರ ಡೀಲ್ ಬಗ್ಗೆ ಹೇಳಿದ  ಬಸನಗೌಡ ಪಾಟೀಲ್‌ ಯತ್ನಾಳ್‌
911
VIEWS
FacebookTwitterWhatsuplinkedinEmail

ಚುನಾವಣೆ ಹೊತ್ತಿಗೆ ಶುರುವಾಗಲಿದೆ ಪಕ್ಷಾಂತರ ಪರ್ವ

ಬೆಂಗಳೂರು: ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆಯಾದರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟದ ಕೆಲವು ಸದಸ್ಯರೂ ಸೇರಿದಂತೆ ಸುಮಾರು 25 ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ಬಾಂಬ್‌ ಸಿಡಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕರ್ನಾಟಕದಲ್ಲಿನ ರಾಜಕೀಯ ಪರಿಸ್ಥಿತಿ ಗಮನಿಸಿದರೆ ವಿಧಾನಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್‌ ಛಿದ್ರಗೊಳ್ಳಲಿದೆ ಎಂದು ಭವಿಷ್ಯ ನುಡಿದರು.

ಒಂದು ಹೆಜ್ಜೆ ಹೊರಗಿಟ್ಟಿದ್ದಾರೆಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟದ ತಪ್ಪು ಮಾಹಿತಿಗಳಿಂದ ಮೋಸಹೋದ ಮತದಾರರು, ಕಾಂಗ್ರೆಸ್‌ ಮಿತ್ರಕೂಟಕ್ಕೆ ಮತ ಹಾಕಿದ್ದರು, ಆದರೆ, ಈ ಬಾರಿ ಹಾಗಾಗುವುದಿಲ್ಲ, ಇದನ್ನು ಅರಿತಿರುವ ಆಡಳಿತ ಪಕ್ಷದ ಸದಸ್ಯರು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಕಾಂಗ್ರೆಸ್‌ನಿಂದ ಒಂದು ಹೆಜ್ಜೆ ಹೊರಗಿಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.

ಕಳೆದ ಮೂರೂವರೆ ವರ್ಷಗಳ ಆಡಳಿತದಲ್ಲಿ ಕಾಂಗ್ರೆಸ್ ಸದಸ್ಯರ ಕ್ಷೇತ್ರಗಳೇ ಅಭಿವೃದ್ಧಿ ಕಂಡಿಲ್ಲ, ಆ ಪಕ್ಷದ ಶಾಸಕರು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮನೆ ಬಾಗಿಲಿಗೆ ಎಷ್ಟೇ ಸುತ್ತಡಿದರೂ ಅಭಿವೃದ್ಧಿ ಯೋಜನೆಗಳಿಗೆ ಹಣ ಬಿಡುಗಡೆ ಆಗಿಲ್ಲ. ಗ್ಯಾರಂಟಿ ಯೋಜನೆಗಳಿಂದಲೇ ಮತ ಬೀಳುತ್ತಿದೆ ಎಂಬ ಭ್ರಮೆ ಆ ಪಕ್ಷದ ನಾಯಕರಲ್ಲಿದೆ, ಆದರೆ, ಶಾಸಕರಿಗೆ ಸ್ಥಳೀಯ ರಾಜಕೀಯ ವಿದ್ಯಮಾನದ ಅರಿವು ಇರುವುದರಿಂದ ಬಿಜೆಪಿ ಕಡೆ ಮುಖ ಮಾಡುತ್ತಿದ್ದಾರೆ ಎಂದರು ಅವರು.

ಕೀಳುಮಟ್ಟದ ರಾಜಕಾರಣ

ಕರ್ನಾಟಕದ ರಾಜಕಾರಣ ಇಷ್ಟೊಂದು ಕೀಳು ಮಟ್ಟಕ್ಕೆ ಎಂದೂ ಇಳಿದಿರಲಿಲ್ಲ, ರಾಜಕಾರಣಿಗಳೆಂದರೆ ಜನ ಅಸಹ್ಯ ಪಡುವಂತಾಗಿದೆ, ಇಂತಹ ಸಮಯದಲ್ಲಿ ಸ್ಟಿಂಗ್ ಆಪರೇಷನ್ ಖಂಡಿತಾ ಒಳ್ಳೆಯದಲ್ಲ. ಕಾಂಗ್ರೆಸ್‍ನಲ್ಲಿ ಕೆಲವರು ಅಧಿಕಾರಕ್ಕಾಗಿ ಸ್ಟಿಂಗ್ ಆಪರೇಷನ್ ಮಾಡಿದ್ದಾರೆ ಎಂಬ ವಿಚಾರಗಳು ಚರ್ಚೆಯಲ್ಲಿವೆ, ಪ್ರತೀದಿನ ಒಬ್ಬೊಬ್ಬ ಶಾಸಕರು, ಸಚಿವರು, ಮಾಜಿ ಮುಖ್ಯಮಂತ್ರಿಗಳು ಸ್ಟಿಂಗ್ ಆಪರೇಷನ್ ಬಗ್ಗೆಯೇ ಮಾತನಾಡುತ್ತಾರೆ.

ಮಂತ್ರಿಯಾಗಲು, ಮುಖ್ಯಮಂತ್ರಿಯಾಗಲು ಸ್ಟಿಂಗ್ ನಡೆದಿದೆಯಂತೆ, ಮುಂದಿನ ದಿನಗಳಲ್ಲಿ ಎಲ್ಲವೂ ಬಹಿರಂಗವಾಗಲಿದೆ, ಇದೊಂದು ರಾಜಕಾರಣದ ವ್ಯಭಿಚಾರ, ಇಂತಹ ಕೆಲಸ ಯಾರು ಮಾಡಿದ್ದಾರೋ, ಅವರು ಪರಿಣಾಮ ಅನುಭವಿಸುತ್ತಾರೆ.

ರೈತರಿಗೆ ಭಿಕ್ಷೆ

ರಾಜ್ಯದಲ್ಲಿ ಭೀಕರ ಬರಗಾಲ ಇದೆ, ರೈತರಿಗೆ ಭಿಕ್ಷೆ ನೀಡುವಂತೆ ₹2,500 ಪರಿಹಾರ ಘೋಷಣೆ ಮಾಡಲಾಗಿದೆ, ಆದರೆ ಇದುವರೆಗೂ ಹಣ ನೀಡಿಲ್ಲ. ಬಿ.ಎಸ್.ಯಡಿಯೂರಪ್ಪ ಆಡಳಿತದ ವೇಳೆ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡವರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಿದ್ದರು, ಆದರೆ, ಕಾಂಗ್ರೆಸ್‌ ಸರ್ಕಾರಕ್ಕೆ ಪರಿಹಾರ ಕೊಡಲು ಸಾಧ್ಯವಾಗದೇ ಸ್ಟಿಂಗ್ ಆಪರೇಷನ್ ವಿಷಯ ಮುನ್ನೆಲೆಗೆ ತಂದು ಜವಾಬ್ದಾರಿಯಿಂದ ನುಣುಚಿಕೊಳ್ಳಲು ನೋಡುತ್ತಿದೆ.

ರಾಜ್ಯ ಆರ್ಥಿಕ ದಿವಾಳಿಯತ್ತ ತಲುಪಿದೆ, ದಿವಾಳಿ ಆಗಿದೆ ಎಂಬುದನ್ನು ಒಪ್ಪಿಕೊಳ್ಳಲು ಮುಖ್ಯಮಂತ್ರಿ ಹಾಗೂ ಸರ್ಕಾರಕ್ಕೆ ಎದೆಗಾರಿಕೆ ಇಲ್ಲದೆ, ಕೇಂದ್ರದ ಮೇಲೆ ಆರೋಪ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಲಾಗುತ್ತಿದೆ.

ರಿಯಲ್ ಎಸ್ಟೇಟ್ ದಂಧೆ

ಸರ್ಕಾರ ತೈಲ ಕಂಪನಿಗಳಿಗೆ ಹಣ ನೀಡಲು ಆಗದೆ, ರಾಜ್ಯ ರಸ್ತೆ ಸಾರಿಗೆ ಬಸ್‍ಗಳು ಸಂಚಾರ ಸ್ಥಗಿತಗೊಳಿಸಿ ಡಿಪೋಗಳಲ್ಲೇ ನಿಲ್ಲುತ್ತಿವೆ, ರಿಯಲ್ ಎಸ್ಟೇಟ್ ದಂಧೆಯ ರಾಜ್ಯ ಸರ್ಕಾರದಲ್ಲಿ ಹಣ ಇಲ್ಲದಿದ್ದರೂ ತಾಲೂಕುಗಳಲ್ಲಿ ರಿಂಗ್ ರಸ್ತೆ ನಿರ್ಮಾಣ ಹೆಸರಿನಲ್ಲಿ ಅಲ್ಲೂ ರಿಯಲ್ ಎಸ್ಟೇಟ್ ದಂಧೆ ಮಾಡಲು ಹವಣಿಸುತ್ತಿದೆ ಎಂದರು.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‍ಐಆರ್) ವಿಷಯ ಈಗಾಗಲೇ ಸುಪ್ರೀಂಕೋರ್ಟ್ ಮುಂದೆ ವಿಚಾರಣೆಯಲ್ಲಿದ್ದರೂ, ಮುಖ್ಯನ್ಯಾಯಮೂರ್ತಿ ಸೂರ್ಯಕಾಂತ್ ಭೇಟಿಗೆ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಮನವಿ ಮಾಡಿರುವುದು ಶೋಭೆ ತರುವುದಿಲ್ಲ. ದೇಶದಲ್ಲಿ ರಾಜಕೀಯ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಯತ್ನಿಸುತ್ತಿದೆ, ಚುನಾವಣೆಯಲ್ಲಿನ ಸೋಲುಗಳಿಂದ ಆ ಪಕ್ಷ ಭ್ರಮನಿರಸನಗೊಂಡಿದೆ.

ಕಾಂಗ್ರೆಸ್ ಮುಖಂಡರ ಹಗಲುಗನಸು

ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ ಬೇರೆ ಬೇರೆ ಪರಿಸ್ಥಿತಿಗಳಲ್ಲಿ ಯುವಜನರಿಂದ (ಜೆನ್-ಜೀ) ಅರಾಜಕತೆ ನಿರ್ಮಾಣವಾಯಿತು, ಭಾರತದಲ್ಲೂ ಅದೇ ರೀತಿ ಆಗಲಿದೆ ಎಂಬುದು ಕಾಂಗ್ರೆಸ್ ಮುಖಂಡರು ಹಗಲುಗನಸು ಕಾಣುತ್ತಿದ್ದಾರೆ.

ಹೇಗಾದರೂ ಮಾಡಿ ಭಾರತದಲ್ಲಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ನಡೆಸುತ್ತಿರುವ ಷಡ್ಯಂತ್ರ, ಪಿತೂರಿಯನ್ನು ದೇಶದ ಜನತೆ ಒಪ್ಪುವುದಿಲ್ಲ.ಕಾಂಗ್ರೆಸ್‌ಗೆ ಮಾನ-ಮರ್ಯಾದೆ, ತಾಖತ್ ಇದ್ದರೆ, ದೇಶದ ಜನರ ಮತ್ತು ಮತದಾರರ ವಿಶ್ವಾಸ ಗಳಿಸಿ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿ ಎಂದು ಸವಾಲು ಹಾಕಿದರು.ಅರಾಜಕತೆ ಸೃಷ್ಟಿಸಿ, ಒಂದು ಸುಳ್ಳನ್ನು ನೂರು ಬಾರಿ ಹೇಳಿ ಗೊಂದಲ ವಾತಾವರಣ ನಿರ್ಮಾಣದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದರು.

Tags: 25-congress-mlas-shifted to bjpbjpcknewsnowCongresskarnataka politics
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೃಷಿ ಪಂಪುಸೆಟ್ಟುಗಳಿಗೆ 24/7 ಉಚಿತ ವಿದ್ಯುತ್

ಕಾಲ ಉತ್ತರಿಸುತ್ತದೆ ಎನ್ನುವುದು ತನಿಖೆಗೆ ಪರ್ಯಾಯವಲ್ಲ: HDK

by cknewsnow desk
October 12, 2026
0

ಡಿಕೆಶಿಗೆ ತಿರುಗೇಟು; ಸ್ಟಿಂಗ್ ಆಪರೇಷನ್ ಸತ್ಯಾಸತ್ಯತೆ ಹೊರಬರಲು ತನಿಖೆ ಅಗತ್ಯ ಎಂದ ಕೇಂದ್ರ ಸಚಿವರು

ನಾನು, ನನ್ನ ದಾಖಲೆಗಳು ಕ್ಲೀನ್

ಅತೃಪ್ತ ಶಾಸಕರ ಓಲೈಕೆಗೆ ತಲಾ ₹100 ಕೋಟಿ

by cknewsnow desk
October 11, 2026
0

18 ತಿಂಗಳಲ್ಲಿ ಎದುರಾಗಲಿದೆ ವಿಧಾನಸಭಾ ಚುನಾವಣೆ

ನಾಡಹಬ್ಬಕ್ಕೆ ಆರಂಭದಲ್ಲೇ ವಿಘ್ನ; ಮುರಿದುಬಿದ್ದ ನಂದಿ ಕಂಬ

ನಾಡಹಬ್ಬಕ್ಕೆ ಆರಂಭದಲ್ಲೇ ವಿಘ್ನ; ಮುರಿದುಬಿದ್ದ ನಂದಿ ಕಂಬ

by cknewsnow desk
October 11, 2026
0

ನಂದಿ ಧ್ವಜವು ಶುಭ ಸಂಕೇತ

ಸ್ಟಿಂಗ್’ಪಿನ್ ಜತೆ ಸಿಎಂ ಗುಪ್ತ ಸಭೆ

ಸ್ಟಿಂಗ್’ಪಿನ್ ಜತೆ ಸಿಎಂ ಗುಪ್ತ ಸಭೆ

by cknewsnow desk
October 11, 2026
0

ಮೌಂಟ್ ಕಾರ್ಮೆಲ್ ಕಾಲೇಜ್ ಪಕ್ಕದ ಫೈವ್'ಸ್ಟಾರ್ ಹೋಟೆಲ್'ನಲ್ಲಿ ಭೇಟಿ

ಸದ್ಯಕ್ಕಿಲ್ಲ ಸಂಪುಟ ಪುನಾರಚನೆ

ಸದ್ಯಕ್ಕಿಲ್ಲ ಸಂಪುಟ ಪುನಾರಚನೆ

by cknewsnow desk
October 10, 2026
0

ಮುಂದಿನ ವರ್ಷ ಏಪ್ರಿಲ್‌-ಮೇನಲ್ಲಿ ಮಂತ್ರಿಮಂಡಲಕ್ಕೆ ಹೊಸರೂಪ

ಡಿಕೆಶಿ ಹೊಡೆತಕ್ಕೆ ತತ್ತರ, ಪುನಾ ಸಿದ್ದುಗೆ ಹತ್ತಿರ

ಡಿಕೆಶಿ ಹೊಡೆತಕ್ಕೆ ತತ್ತರ, ಪುನಾ ಸಿದ್ದುಗೆ ಹತ್ತಿರ

by cknewsnow desk
October 10, 2026
0

ಚದುರಿದ್ದ ಸಿದ್ದರಾಮಯ್ಯ ಟೀಮ್ ಮತ್ತೆ ಒಂದಾಗುತ್ತಿದೆ! ಮೈಸೂರಲ್ಲಿ ಹಿಡಿತ ಸಾಧಿಸಲು ಸಿಎಂ ಡಿಕೆಶಿ ಮಾಸ್ಟರ್ ಪ್ಲಾನ್

Leave a Reply Cancel reply

Your email address will not be published. Required fields are marked *

Recommended

ಚಿಕ್ಕಬಳ್ಳಾಪುರ ಸಮೀಪದ ಹಳ್ಳಿಯ ಸರಕಾರಿ ಶಾಲೆಯಲ್ಲಿ ತರಗತಿ ಆರಂಭಕ್ಕೆ ಮುನ್ನ ಕಾಣಿಸಿಕೊಂಡ ಹಾವು; ಹಿಡಿದು ಅರಣ್ಯಕ್ಕೆ ಬಿಟ್ಟ ಸ್ನೇಕ್‌ ಭಾಷಾಗೆ ಧನ್ಯವಾದ ಅರ್ಪಿಸಿದ ಚಿಣ್ಣರು

ಚಿಕ್ಕಬಳ್ಳಾಪುರ ಸಮೀಪದ ಹಳ್ಳಿಯ ಸರಕಾರಿ ಶಾಲೆಯಲ್ಲಿ ತರಗತಿ ಆರಂಭಕ್ಕೆ ಮುನ್ನ ಕಾಣಿಸಿಕೊಂಡ ಹಾವು; ಹಿಡಿದು ಅರಣ್ಯಕ್ಕೆ ಬಿಟ್ಟ ಸ್ನೇಕ್‌ ಭಾಷಾಗೆ ಧನ್ಯವಾದ ಅರ್ಪಿಸಿದ ಚಿಣ್ಣರು

6 years ago
ಬುರ್ಖಾ ಧರಿಸಿ ಪ್ರೇಕ್ಷಕರ ನಡುವೆ ಸಿನಿಮಾ ವೀಕ್ಷಿಸಿದ ನಟಿ

ಬುರ್ಖಾ ಧರಿಸಿ ಪ್ರೇಕ್ಷಕರ ನಡುವೆ ಸಿನಿಮಾ ವೀಕ್ಷಿಸಿದ ನಟಿ

5 years ago

Popular News

  • ಡಿಜಿಟ್‌ನೊಂದಿಗೆ  ಸಿಎಂ ಪುತ್ರ ವಿಜಯೇಂದ್ರ ಡೀಲ್ ಬಗ್ಗೆ ಹೇಳಿದ  ಬಸನಗೌಡ ಪಾಟೀಲ್‌ ಯತ್ನಾಳ್‌

    ಕಮಲದ ಕೈ ಹಿಡಿಯಲಿರುವ 25 ಕಾಂಗ್ರೆಸ್ ಶಾಸಕರು

    0 shares
    Share 0 Tweet 0
  • ಕಾಲ ಉತ್ತರಿಸುತ್ತದೆ ಎನ್ನುವುದು ತನಿಖೆಗೆ ಪರ್ಯಾಯವಲ್ಲ: HDK

    0 shares
    Share 0 Tweet 0
  • ಅತೃಪ್ತ ಶಾಸಕರ ಓಲೈಕೆಗೆ ತಲಾ ₹100 ಕೋಟಿ

    0 shares
    Share 0 Tweet 0
  • ನಾಡಹಬ್ಬಕ್ಕೆ ಆರಂಭದಲ್ಲೇ ವಿಘ್ನ; ಮುರಿದುಬಿದ್ದ ನಂದಿ ಕಂಬ

    0 shares
    Share 0 Tweet 0
  • ಸ್ಟಿಂಗ್’ಪಿನ್ ಜತೆ ಸಿಎಂ ಗುಪ್ತ ಸಭೆ

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಡಿಜಿಟ್‌ನೊಂದಿಗೆ  ಸಿಎಂ ಪುತ್ರ ವಿಜಯೇಂದ್ರ ಡೀಲ್ ಬಗ್ಗೆ ಹೇಳಿದ  ಬಸನಗೌಡ ಪಾಟೀಲ್‌ ಯತ್ನಾಳ್‌

ಕಮಲದ ಕೈ ಹಿಡಿಯಲಿರುವ 25 ಕಾಂಗ್ರೆಸ್ ಶಾಸಕರು

October 12, 2026
ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೃಷಿ ಪಂಪುಸೆಟ್ಟುಗಳಿಗೆ 24/7 ಉಚಿತ ವಿದ್ಯುತ್

ಕಾಲ ಉತ್ತರಿಸುತ್ತದೆ ಎನ್ನುವುದು ತನಿಖೆಗೆ ಪರ್ಯಾಯವಲ್ಲ: HDK

October 12, 2026
ನಾನು, ನನ್ನ ದಾಖಲೆಗಳು ಕ್ಲೀನ್

ಅತೃಪ್ತ ಶಾಸಕರ ಓಲೈಕೆಗೆ ತಲಾ ₹100 ಕೋಟಿ

October 11, 2026
ನಾಡಹಬ್ಬಕ್ಕೆ ಆರಂಭದಲ್ಲೇ ವಿಘ್ನ; ಮುರಿದುಬಿದ್ದ ನಂದಿ ಕಂಬ

ನಾಡಹಬ್ಬಕ್ಕೆ ಆರಂಭದಲ್ಲೇ ವಿಘ್ನ; ಮುರಿದುಬಿದ್ದ ನಂದಿ ಕಂಬ

October 11, 2026

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ