• About
  • Advertise
  • Careers
  • Contact
Sunday, November 15, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home EDITORS'S PICKS

ಲಾಲಕೃಷ್ಣ ಆಡ್ವಾಣಿ: ರಾಷ್ಟ್ರವಾದಿ ರಾಜಕಾರಣದ ಮಹಾನ್ ನೇತಾರ

cknewsnow desk by cknewsnow desk
November 14, 2026
in EDITORS'S PICKS, EXCLUSIVE, GUEST COLUMN, NATION, NEWS & VIEWS, POLITICS, STATE
Reading Time: 2 mins read
0
30 ವರ್ಷಗಳ ಭಾರತ; ಆಡ್ವಾಣಿ ಮತ್ತು ಜೋಷಿ ಅವರ ನಂತರ ಝಗಮಗಿಸುತ್ತಿರುವ ಬಿಜೆಪಿ
919
VIEWS
FacebookTwitterWhatsuplinkedinEmail
ಆಡ್ವಾಣಿಯವರ 99ನೇ ಹುಟ್ಟುಹಬ್ಬ (ಜನನ: 8 ನವೆಂಬರ್ 1927, ಕರಾಚಿ). ಅಂದರೆ, ಅವರು ತಮ್ಮ ಜನ್ಮ ಶತಮಾನೋತ್ಸವಕ್ಕೆ ಕಾಲಿಟ್ಟಿದ್ದಾರೆ.

ಬಿ ಎಸ್ ಜಯಪ್ರಕಾಶ ನಾರಾಯಣ

ಆಡ್ವಾಣಿಯವರ 99ನೇ ಹುಟ್ಟುಹಬ್ಬ (ಜನನ: 8 ನವೆಂಬರ್ 1927, ಕರಾಚಿ). ಅಂದರೆ, ಅವರು ತಮ್ಮ ಜನ್ಮ ಶತಮಾನೋತ್ಸವಕ್ಕೆ ಕಾಲಿಟ್ಟಿದ್ದಾರೆ.

ನಾನು, ಆಡ್ವಾಣಿ ಮತ್ತು ವಾಜಪೇಯಿ ಇಬ್ಬರ ಹೆಸರನ್ನೂ ಮೊದಲ ಬಾರಿಗೆಕೇಳಿದ್ದು— ಯಥಾಪ್ರಕಾರ ನಮ್ಮ ತಂದೆಯವರ ಬಾಯಲ್ಲೇ! ದೇಶದ ರಾಜಕಾರಣವನ್ನು ಸದಾ ಉತ್ಸಾಹದಿಂದ ಗಮನಿಸುತ್ತಿದ್ದ ಅವರಿಗೆ, ಇವರಿಬ್ಬರೂ ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ಚೆನ್ನಾಗಿ ಕೆಲಸ ಮಾಡಿದವರು ಎನ್ನುವ ಸದಭಿಪ್ರಾಯವಿತ್ತು.

ಅದೆಲ್ಲಾ 1985-86ರ ಸಮಯ. ಇಂದಿರಾ ಗಾಂಧಿಯ ಬರ್ಬರ ಕೊಲೆಯಾಗಿ, ಸಿಖ್ಖರ ನರಮೇಧದ ಕಳಂಕ ಕಾಂಗ್ರೆಸ್ಸಿಗೆ ಮೆತ್ತಿಕೊಂಡಿತ್ತು. ಆಗ ಕಾಂಗ್ರೆಸ್ಸಿನ‌ ಗೂಂಡಾಗಳು ದೇಶದ ಹಲವೆಡೆಗಳಲ್ಲಿ —ಮುಖ್ಯವಾಗಿ ದೆಹಲಿಯಲ್ಲಿ — ಹುಡುಕಿ ಹುಡುಕಿ ಅದೆಷ್ಟೋ ಸಾವಿರ ಸಿಖ್ಖರ‌ನ್ನು ರಾಕ್ಷಸರಂತೆ ಕೊಂದು ಹಾಕಿದರು. ಇದರ ಬಗ್ಗೆ ಕೇಳಿದಾಗ ರಾಜೀವ್ ಗಾಂಧಿಯವರು ‘ಒಂದು ದೊಡ್ಡ ಮರ ಬಿದ್ದಾಗ, ನೆಲ ಕಂಪಿಸುವುದು ಸಹಜ’ ಎಂದು, ಅದನ್ನು ಸಮರ್ಥಿಸಿಕೊಂಡಿದ್ದರು.

ಒಟ್ಟಿನಲ್ಲಿ ಪಂಜಾಬಿನ ವಿಷಯದಲ್ಲಿ ಇಂದಿರಾ ಗಾಂಧಿಯವರು ಇಂದ್ರಸಿಂಗ್ ಭಿಂದ್ರನ್ವಾಲೆಯನ್ನು ನಂಬಿ, ಅದಕ್ಕೆ ದೊಡ್ಡ ಬೆಲೆ ತೆತ್ತಿದ್ದರು. ಅಗ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅನುಕಂಪದ ಅಲೆಯ ಲಾಭ ಪಡೆದು, ನಾಲ್ಕುನೂರಕ್ಕೂ ಹೆಚ್ಚು ಲೋಕಸಭಾ ಸೀಟುಗಳನ್ನು ಗೆದ್ದಿತ್ತು. ಆ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದ ಕ್ಷೇತ್ರಗಳು ಕೇವಲ ಎರಡು!

ಆದರೆ, ದೇಶದ ರಾಜಕೀಯ ಹೊರಳು ಹಾದಿ ಹಿಡಿಯಲು ಶುರುವಾಗಿದ್ದು ಆಗಲೇ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಂದಿದ್ದು ವಿ ಪಿ ಸಿಂಗ್ ನೇತೃತ್ವದ ಥರ್ಡ್ ಫ್ರಂಟ್ ಸರಕಾರ. ಅದಕ್ಕೆ ಎಂಬತ್ತೂ ಚಿಲ್ಲರೆ ಸೀಟುಗಳನ್ನು ಗೆದ್ದಿದ್ದ ಬಿಜೆಪಿ ಬೆಂಬಲ ಕೊಟ್ಟಿತ್ತು. ರಾಮ ಮಂದಿರದ ವಿಚಾರ ಮುನ್ನೆಲೆಗೆ ಬಂದು, ದೇಶದ ರಾಜಕೀಯದಲ್ಲಿ ಮನ್ವಂತರ ಕಾಣುತ್ತಿತ್ತು.

ಶಾಬಾನೋ ಕೇಸಿನಲ್ಲಿ ಅಪರಾತಪರಾ ಮಾಡಿಕೊಂಡ ರಾಜೀವ್ ಗಾಂಧಿ, ಅದುವರೆಗೂ ಬೀಗ ಬಿದ್ದಿದ್ದ ರಾಮ ಮಂದಿರದ ಬಾಗಿಲು ತೆರೆದಿದ್ದರು. ಆಮೇಲೆ ವಿ ಪಿ ಸಿಂಗ್ ಮೊದಲು ರಾಮ‌ಮಂದಿರದ ಪರವಾಗಿದ್ದವರು, ಆಮೇಲೆ ಅದರಿಂದ ಪಾರಾಗಲು ಮಂಡಲ್ ವರದಿಯ ಅಸ್ತ್ರವನ್ನು ಪ್ರಯೋಗಿಸಿದರು. ಏತನ್ಮಧ್ಯೆ ರಾಮ ಮಂದಿರದ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳಲು ವಿ.ಎಚ್.ಪಿ ತೀರ್ಮಾನಿಸಿತು.

ಹತ್ತು ಸಾವಿರ ಕಿಲೋಮೀಟರುಗಳ ಉದ್ದದ ರಾಮ ರಥಯಾತ್ರೆಯ ಆಲೋಚನೆ ಬಂದಿದ್ದು ಆ ದಿನಗಳಲ್ಲೇ! ಅದರೆ ವಾಜಪೇಯಿ, ವಿಜಯರಾಜೇ ಸಿಂಧಿಯಾ, ಸಿಖಂದರ್ ಬಖ್ತ್ ಈ ಯಾತ್ರೆಯ ನೇತೃತ್ವ ವಹಿಸಿಕೊಳ್ಳಲು ಹಿಂಜರಿದರು. ಆಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದವರು ಆಡ್ವಾಣಿ. ರಥಯಾತ್ರೆಯ ನೇತೃತ್ವವನ್ನು ವಹಿಸಿಕೊಳ್ಳಬೇಕು ಎಂದು ಹಿರಿಯರು ಹೇಳಿದಾಗ ಇವರು ಅದನ್ನು ನಮ್ರತೆಯಿಂದ ಒಪ್ಪಿಕೊಂಡರು.

ಇದರ ಬಗ್ಗೆ ಆಡ್ವಾಣಿಯವರು ತಮ್ಮ ಆತ್ಮಕತೆ My Country My Lifeನಲ್ಲಿ ಸಾದ್ಯಂತವಾಗಿ ಬರೆದುಕೊಂಡಿದ್ದಾರೆ. ನಮ್ಮ ಕಾಲದ ವಾಙ್ಮಯದಲ್ಲಿ ಇದೊಂದು ಉಜ್ಜ್ವಲ ಅಧ್ಯಾಯ.

ದೇಶದಲ್ಲಿ ಕಾಂಗ್ರೆಸ್ಸಿಗೆ ಪರ್ಯಾಯವಾದ ರಾಜಕಾರಣವನ್ನು ಕಟ್ಟಲು ನೆಹರೂ ಕಾಲದಿಂದಲೂ ಹಲವರು ಯತ್ನಿಸಿದ್ದುಂಟು. ಆದರೆ ಅವ್ಯಾವೂ ಅಷ್ಟೊಂದು ಯಶಸ್ಸು ಕಂಡಿರಲಿಲ್ಲ. ಇದರಲ್ಲಿ ಗೆದ್ದು, ಪಕ್ಷವನ್ನು ದೆಹಲಿ ಗದ್ದುಗೆಗೆ ತಂದ ಶ್ರೇಯಸ್ಸು ಆಡ್ವಾಣಿಯವರಿಗೆ ಸಲ್ಲಬೇಕು. ಆದರೆ ವಾಜಪೇಯಿಯವರಿಗೆ ಇದ್ದ ತಾರಾವರ್ಚಸ್ಸು ಈ ಯೋಗದಾನವನ್ನು ಮಸುಕಾಗಿಸಿದೆ.

ಆದರೆ ಆಡ್ವಾಣಿಯವರು ನಡೆಸಿದ ರಥಯಾತ್ರೆ ಮತ್ತು ಅದರ ನಂತರ ಅವರು ನಡೆಸಿದ ಇನ್ನೂ ಅನೇಕ ಯಾತ್ರೆಗಳ ಫಲಗಳನ್ನು ನಾವು —ಅದರಲ್ಲೂ ಹಿಂದೂ ಸಮಾಜ— ಈಗ ಸವಿಯುತ್ತಿದೆ. ಒಟ್ಟಿನಲ್ಲಿ ಕಾಂಗ್ರೆಸ್ ನಡೆಸುತ್ತಿದ್ದ Muslim appeasement ರಾಜಕೀಯವನ್ನು ಮೊದಲು ದೃಢವಾಗಿ ವಿರೋಧಿಸಿ, ರಾಷ್ಟ್ರೀಯ ಸಾಂಸ್ಕೃತಿಕ ಅಸ್ಮಿತೆಯ ಆಧಾರದ ಮೇಲೆ ನಮ್ಮ ರಾಜಕಾರಣವನ್ನು ನಡೆಸಬೇಕೆಂಬ narrative ಅನ್ನು ಸೃಷ್ಟಿಸಿದ ಅಧ್ವರ್ಯು ಎನ್ನುವ ಕೀರ್ತಿ ಆಡ್ವಾಣಿಯವರಿಗೆ ಸಲ್ಲಬೇಕು. ಅವರು ಉಪಪ್ರಧಾನಿಗಳಾಗಿದ್ದ NDA ಸರಕಾರದಲ್ಲೂ ಅಷ್ಟೇ— ಅವರ ಚಿಂತನೆಯ ಛಾಪು ಕಾಣಿಸುತ್ತಿತ್ತು.

ಆಡ್ವಾಣಿಯವರು ಮೌಲ್ಯಾಧಾರಿತ ರಾಜಕಾರಣ ಮಾಡಿಕೊಂಡು ಬಂದವರು. ಕರಾಚಿಯಲ್ಲಿ ಆಧುನಿಕ ಇಂಗ್ಲೀಷ್ ಕಲಿಕೆಯ ಮೂಲಕ ಬೆಳೆದ ಅವರು, ದೇಶ ವಿಭಜನೆಯ ದುರಂತ ಸಂಭವಿಸಿದಾಗ ಅವರಿಗೆ ಇಪ್ಪತ್ತು ವರ್ಷ. ಆಗ ಭಾರತಕ್ಕೆ ವಲಸೆ ಬಂದ ಅವರು, ರಾಜಾಸ್ಥಾನದಲ್ಲಿ ಆರೆಸ್ಸೆಸ್ ಮೂಲಕ ಸಾರ್ವಜನಿಕ ಬದುಕಿಗೆ ಬಂದವರು.

ಅಪಾರ ಓದು, ಸತತ ಓಡಾಟ, ಕ್ರಿಕೆಟ್ ವೀಕ್ಷಣೆ, ಭಾರತೀಯ ಸಂಸ್ಕೃತಿ, ರಾಷ್ಟ್ರವಾದಿ ರಾಜಕಾರಣ, ಸ್ವದೇಶಿ ಚಿಂತನೆ, ಆಂತರಿಕ ಭದ್ರತೆ— ಇವೆಲ್ಲವೂ ಅವರಿಗೆ ಪ್ರಿಯವಾದ ಸಂಗತಿಗಳು. ಅವರು ಕುಟುಂಬವತ್ಸಲರೂ ಹೌದು.

ಆಡ್ವಾಣಿಯವರಿಗೆ ಪ್ರಧಾನಿಗಳಾಗುವ ಯೋಗ್ಯತೆ ಇತ್ತು; ಆದರೆ ಅದಕ್ಕೆ ಬೇಕಾದ ಯೋಗ್ಯವಿರಲಿಲ್ಲ ಎನಿಸುತ್ತದೆ. 2004 ಮತ್ತು 2009ರ ಚುನಾವಣೆಗಳನ್ನು ಬಿಜೆಪಿ ಆಡ್ವಾಣಿಯವರ ನಾಯಕತ್ವದಲ್ಲೇ ಎದುರಿಸಿತು, ನಿಜ. ಆದರೆ, ಅವರು ನಿರೀಕ್ಷಿಸಿದ್ದ ಫಲಿತಾಂಶ ಬರಲಿಲ್ಲ! ಜಿನ್ನಾ ವಿಚಾರದಲ್ಲಿ ಅವರು ಆಡಿದ ಕೆಲವು ಮಾತುಗಳು blown out of proportion ಆಗಿ, ಆರೆಸ್ಸೆಸ್ ಅವರ ಮೇಲೆ ಮುನಿಸಿಕೊಂಡಿತು. ಅದನ್ನು ಆರೆಸ್ಸೆಸ್ ಸರಿಯಾಗಿ ಗ್ರಹಿಸದೆ ತಪ್ಪು ಮಾಡಿತು ಎಂದೇ ನನಗೆ ಈಗಲೂ ಅನಿಸುತ್ತಿದೆ.

ಇಷ್ಟರಲ್ಲಿ ಆರೆಸ್ಸೆಸ್, ಆಡ್ವಾಣಿಯವರ blue eyed boy ಮೋದಿಯವರನ್ನು ಮುನ್ನೆಲೆಗೆ ತಂದು ಕೂರಿಸಿತು. ಆದರೆ, ಮೋದಿಗೆ ಒಲಿದು ಬಂದ ಶುಕ್ರದೆಸೆಯಲ್ಲಿ ಆಡ್ವಾಣಿಯವರ ಕೃಪೆಯ ಪಾತ್ರ ದೊಡ್ಡದು. ಗೋಧ್ರಾ ಗಲಭೆಯ ನಂತರ ವಾಜಪೇಯಿಯವರು ರಾಜಧರ್ಮದ ಹೆಸರಿನಲ್ಲಿ ಮೋದಿ ಮೇಲೆ ಗದಾಪ್ರಹಾರ ನಡೆಸಲು ಮುಂದಾಗಿದ್ದಾಗ ಅದನ್ನು ತಡೆದವರು ಇದೇ ಆಡ್ವಾಣಿ. ಅದರಲ್ಲೂ ಬಿಜೆಪಿಯಲ್ಲಿ ದ್ವಿತೀಯ ಸ್ತರದ ನಾಯಕರನ್ನು ಸೃಷ್ಟಿ ಮಾಡಿದ್ದು ಇದೇ ವಾಜಪೇಯಿ & ಆಡ್ವಾಣಿ ಜೋಡಿ. ಅವರ ಇಂತಹ ರಾಜಕಾರಣದಿಂದ ಕಾಂಗ್ರೆಸ್ ಕಳಾಹೀನವಾಗುತ್ತ ಬಂತು.

ಒಟ್ಟಿನಲ್ಲಿ, ಆಡ್ವಾಣಿಯವರದು 80 ವರ್ಷಗಳ ಸಾರ್ವಜನಿಕ ಬದುಕು. ಇದರಲ್ಲಿ ಅವರು ದೇಶಕ್ಕಾಗಿ ತಮ್ಮನ್ನು ತೆತ್ತುಕೊಂಡು, ಮುಂಚೂಣಿಗೆ ತಂದು ಪ್ರತಿಷ್ಠಾಪಿಸಿದ ವಿಚಾರಗಳು ಈಗ ಭಾರತಕ್ಕೊಂದು ಘನವಾದ ಶಕ್ತಿಯನ್ನು ತಂದಿವೆ. ನಾನಂತೂ ಅವರ ಧೀರೋದಾತ್ತ ವಿಚಾರಗಳ, ವ್ಯಕ್ತಿತ್ವದ ಅಭಿಮಾನಿ. ದೇಶವಾಸಿಗಳು ಅವರಿಗೆ ಕೃತಜ್ಞರಾಗಬೇಕೆಂದೇ ನಾನು ಹೇಳುತ್ತೇನೆ. ಅವರು ಭಾರತಮಾತೆಯ ಹೆಮ್ಮೆಯ ಪುತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ.

(8 ಅಕ್ಟೋಬರ್ 2024, ಭಾನುವಾರ, ಹುಲುಗುಂಡಿ ಗ್ರಾಮದಲ್ಲಿ ಕೂತುಕೊಂಡು ಬರೆದ ಒಂದು ಜ್ಞಾಪಕ ಚಿತ್ರಶಾಲೆಯ ಟಿಪ್ಪಣಿ)

ಬಿಎಸ್ ಜಯಪ್ರಕಾಶ ನಾರಾಯಣ; ಕನ್ನಡದ ಶ್ರೇಷ್ಠ ಅನುವಾದಕ, ಸಾಹಿತಿ ಮತ್ತು ಕವಿ

Tags: 100 year of lk ad Advanibjpcknewsnowguest columnindialk advani
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಭಾರತೀಯ ಸಂಸ್ಕೃತಿ ಅಧ್ಯಯನ ಸಮಿತಿ ತುಂಬಾ ಉತ್ತರ ಭಾರತೀಯರು!! ದಕ್ಷಿಣ ಭಾರತಕ್ಕೆ ಅನ್ಯಾಯವಾಗಿದೆ ಎಂದ ಎಚ್‌ಡಿಕೆ

ಕನ್ನಡವೆಂದರೆ ಅಮ್ಮನ ಮಡಿಲು

by cknewsnow desk
November 11, 2026
0

ಕವಿತೆ

Courtey; AI

ಕಷ್ಟದಲ್ಲಿ ಕನ್ನಡಿಗರು; ಫ್ರೀಬೀಸ್ ಸುಳಿಯಲ್ಲಿ ದೃಢ ಸಂಕಲ್ಪ ಕರ್ನಾಟಕ

by cknewsnow desk
November 11, 2026
0

ಆದಾಯಕ್ಕಿಂತ ಖರ್ಚು ಜಾಸ್ತಿ; ಮೂಗುಗಿಂತ ಮೂಗುತಿ ಭಾರ

ಸೋನಿಯಾ ಗಾಂಧಿ ಪುಸ್ತಕ ಖರೀದಿಗೆ ರಾಜಕೀಯ ಆಸಕ್ತರು

ಸೋನಿಯಾ ಗಾಂಧಿ ಪುಸ್ತಕ ಖರೀದಿಗೆ ರಾಜಕೀಯ ಆಸಕ್ತರು

by cknewsnow desk
November 10, 2026
0

ಸೋನಿಯಾ ಆತ್ಮಕಥನ 'ಬಿಲಾಂಗಿಂಗ್' ನಲ್ಲಿ ರೋಚಕ ಅಂಶಗಳ ಉಲ್ಲೇಖ: ಪ್ರಧಾನಿ ಹುದ್ದೆ ನಿರಾಕರಣೆಯ ರಹಸ್ಯ ಬಹಿರಂಗ

ಸಿದ್ದರಾಮಯ್ಯ-ಡಿಕೆಶಿ ಭೇಟಿ; ಸ್ಟಿಂಗ್ ಸಾಂತ್ವನ ಹೇಳಿದರಾ ಮುಖ್ಯಮಂತ್ರಿ

ಸಿದ್ದರಾಮಯ್ಯ-ಡಿಕೆಶಿ ಭೇಟಿ; ಸ್ಟಿಂಗ್ ಸಾಂತ್ವನ ಹೇಳಿದರಾ ಮುಖ್ಯಮಂತ್ರಿ

by cknewsnow desk
November 9, 2026
0

ಹಾಲಿ-ಮಾಜಿ ನಡುವೆ ಒಂದೂವರೆ ಗಂಟೆಗೂ ಹೆಚ್ಚು ಕಾಲ ಚರ್ಚೆ

ಹೈವೋಲ್ಟೇಜ್ ಅಧಿವೇಶನ

ಮುಂದಿನ 6 ತಿಂಗಳು ಸ್ಥಳೀಯ ಸಂಸ್ಥೆ ಚುನಾವಣೆ ಇಲ್ಲ

by cknewsnow desk
November 9, 2026
0

ಬ್ಯಾಲೆಟ್ ಪೇಪರ್ ಮೂಲಕವೇ ಲೋಕಲ್ ಎಲೆಕ್ಷನ್

ಹಾಸನ ಜಿಲ್ಲಾಧಿಕಾರಿ ಕಚೇರಿಯಿಂದ ಕ್ರಷರ್ ಮಾಲೀಕರಿಂದ ಹಣ ಸುಲಿಗೆ

ಹಾಸನ ಜಿಲ್ಲಾಧಿಕಾರಿ ಕಚೇರಿಯಿಂದ ಕ್ರಷರ್ ಮಾಲೀಕರಿಂದ ಹಣ ಸುಲಿಗೆ

by cknewsnow desk
November 9, 2026
0

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ; ಮಧ್ಯವರ್ತಿಗಳಿಂದ ಕಲೆಕ್ಷನ್, ಜಿಲ್ಲಾಧಿಕಾರಿಗೆ ಹಣ ಸಂದಾಯ; ಡಿಸಿ ಆಪ್ತ ಸಹಾಯಕನ ವಾಟ್ಸಾಪ್ ಚಾಟ್ ದಾಖಲೆ ಬಿಡುಗಡೆ

Leave a Reply Cancel reply

Your email address will not be published. Required fields are marked *

Recommended

ತೆಲಂಗಾಣಕ್ಕೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ವರ್ಗಾವಣೆಗೆ ಸಿದ್ದರಾಮಯ್ಯ ನೇರ ಹೊಣೆ!

ತೆಲಂಗಾಣಕ್ಕೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ವರ್ಗಾವಣೆಗೆ ಸಿದ್ದರಾಮಯ್ಯ ನೇರ ಹೊಣೆ!

2 years ago
ಪಕ್ಕಾ ಟೀಂ, ಸೂಪರ್ ಪ್ಲಾನ್; ಸಿಇಟಿ ಪರೀಕ್ಷೆ ಸಕ್ಸಸ್

ಸಿಇಟಿ ರಿಸಲ್ಟ್ ಬೇಕೆ? ಇಲ್ಲಿ ನೋಡಿ, ಕ್ಲಿಕ್ ಮಾಡಿ

6 years ago

Popular News

  • 30 ವರ್ಷಗಳ ಭಾರತ; ಆಡ್ವಾಣಿ ಮತ್ತು ಜೋಷಿ ಅವರ ನಂತರ ಝಗಮಗಿಸುತ್ತಿರುವ ಬಿಜೆಪಿ

    ಲಾಲಕೃಷ್ಣ ಆಡ್ವಾಣಿ: ರಾಷ್ಟ್ರವಾದಿ ರಾಜಕಾರಣದ ಮಹಾನ್ ನೇತಾರ

    0 shares
    Share 0 Tweet 0
  • ಕನ್ನಡವೆಂದರೆ ಅಮ್ಮನ ಮಡಿಲು

    0 shares
    Share 0 Tweet 0
  • ಕಷ್ಟದಲ್ಲಿ ಕನ್ನಡಿಗರು; ಫ್ರೀಬೀಸ್ ಸುಳಿಯಲ್ಲಿ ದೃಢ ಸಂಕಲ್ಪ ಕರ್ನಾಟಕ

    0 shares
    Share 0 Tweet 0
  • ಸೋನಿಯಾ ಗಾಂಧಿ ಪುಸ್ತಕ ಖರೀದಿಗೆ ರಾಜಕೀಯ ಆಸಕ್ತರು

    0 shares
    Share 0 Tweet 0
  • ಸಿದ್ದರಾಮಯ್ಯ-ಡಿಕೆಶಿ ಭೇಟಿ; ಸ್ಟಿಂಗ್ ಸಾಂತ್ವನ ಹೇಳಿದರಾ ಮುಖ್ಯಮಂತ್ರಿ

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

30 ವರ್ಷಗಳ ಭಾರತ; ಆಡ್ವಾಣಿ ಮತ್ತು ಜೋಷಿ ಅವರ ನಂತರ ಝಗಮಗಿಸುತ್ತಿರುವ ಬಿಜೆಪಿ

ಲಾಲಕೃಷ್ಣ ಆಡ್ವಾಣಿ: ರಾಷ್ಟ್ರವಾದಿ ರಾಜಕಾರಣದ ಮಹಾನ್ ನೇತಾರ

November 14, 2026
ಭಾರತೀಯ ಸಂಸ್ಕೃತಿ ಅಧ್ಯಯನ ಸಮಿತಿ ತುಂಬಾ ಉತ್ತರ ಭಾರತೀಯರು!! ದಕ್ಷಿಣ ಭಾರತಕ್ಕೆ ಅನ್ಯಾಯವಾಗಿದೆ ಎಂದ ಎಚ್‌ಡಿಕೆ

ಕನ್ನಡವೆಂದರೆ ಅಮ್ಮನ ಮಡಿಲು

November 11, 2026
Courtey; AI

ಕಷ್ಟದಲ್ಲಿ ಕನ್ನಡಿಗರು; ಫ್ರೀಬೀಸ್ ಸುಳಿಯಲ್ಲಿ ದೃಢ ಸಂಕಲ್ಪ ಕರ್ನಾಟಕ

November 11, 2026
ಸೋನಿಯಾ ಗಾಂಧಿ ಪುಸ್ತಕ ಖರೀದಿಗೆ ರಾಜಕೀಯ ಆಸಕ್ತರು

ಸೋನಿಯಾ ಗಾಂಧಿ ಪುಸ್ತಕ ಖರೀದಿಗೆ ರಾಜಕೀಯ ಆಸಕ್ತರು

November 10, 2026

Covid 19

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

October 16, 2026
ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ