• About
  • Advertise
  • Careers
  • Contact
Monday, November 23, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS NATION

ರಾಜ್ಯ ಬಿಜೆಪಿಗೆ ಮೇಜರ್‌ ಸರ್ಜರಿ! ಯಾರು ಎಲ್ಲೆಲ್ಲಿಗೆ?

cknewsnow desk by cknewsnow desk
November 22, 2026
in NATION, POLITICS, STATE
Reading Time: 1 min read
0
ರಾಜ್ಯ ಬಿಜೆಪಿಗೆ ಮೇಜರ್‌ ಸರ್ಜರಿ! ಯಾರು ಎಲ್ಲೆಲ್ಲಿಗೆ?
913
VIEWS
FacebookTwitterWhatsuplinkedinEmail

ಆರ್.‌ ಅಶೋಕ್‌, ವಿಜಯೇಂದ್ರ ಸ್ಥಾನ ಪಲ್ಲಟ ಖಚಿತ, ಸುನೀಲ್‌ ಕುಮಾರ್‌ʼಗೆ ಆಯಕಟ್ಟಿನ ಜಾಗ ಗ್ಯಾರಂಟಿ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಪಕ್ಷವನ್ನು ಬಲಪಡಿಸಲು ರಾಜ್ಯ ಬಿಜೆಪಿಯಲ್ಲಿ ಮಹತ್ತರ ಬದಲಾವಣೆಳನ್ನು ಮಾಡಲು ವರಿಷ್ಠರು ತೀರ್ಮಾನ ಮಾಡಿದ್ದಾರೆ.

ಈ ಸಂಬಂಧ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವ ಉದ್ದೇಶದಿಂದ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ವರಿಷ್ಠರು ನವದೆಹಲಿಗೆ ಕರೆಸಿಕೊಂಡು ಚರ್ಚೆ ನಡೆಸಿದ್ದಾರೆ.

ಪ್ರಮುಖರೊಂದಿಗೆ ಸಮಾಲೋಚನೆ

ರಾಜ್ಯ ಉಸ್ತುವಾರಿ ಹರೀಶ್‌ ಚಂದ್ರ ದ್ವಿವೇದಿ ಒಂದು ವಾರ ನಗರದಲ್ಲೇ ಬಿಡಾರ ಹೂಡಿ ಪಕ್ಷದ ಮುಖಂಡರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಪ್ರಮುಖರೊಂದಿಗೆ ಸಮಾಲೋಚಿಸಿ, ಸಂಘಟನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದಿದ್ದರು.

ದ್ವಿವೇದಿ ನೀಡಿರುವ ವರದಿ ಆಧರಿಸಿ ವರಿಷ್ಠರು ರಾಜ್ಯ ನಾಯಕತ್ವದಲ್ಲಿ ಕೆಲವು ಬದಲಾವಣೆ ತೀರ್ಮಾನ ಕೈಗೊಳ್ಳಲಿದ್ದು, ಒಂದೆರಡು ದಿನದಲ್ಲೇ ಸ್ಪಷ್ಟ ಚಿತ್ರಣ ಹೊರಬೀಳಲಿದೆ.

ಹಾಲಿ ಅಧ್ಯಕ್ಷ ವಿಜಯೇಂದ್ರ ಅವರ ಅವಧಿ ನವೆಂಬರ್‌ ಮೂರನೇ ವಾರಕ್ಕೆ ಅಂತ್ಯಗೊಳ್ಳಲಿದ್ದು, ಅವರನ್ನೇ ಎರಡನೇ ಅವಧಿಗೆ ಮುಂದುವರಸುವರೇ ಅಥವಾ ಹೊಸಬರನ್ನು ಆ ಸ್ಥಾನಕ್ಕೆ ತರಬೇಕೇ ಎಂಬ ಕುರಿತು ನಿರ್ಧಾರವಾಗಲಿದೆ.

ಯಡಿಯೂರಪ್ಪ ಕಡೆಗಣನೆಗೆ ಧೈರ್ಯ ಇಲ್ಲ

ಕರ್ನಾಟಕದ ಬಿಜೆಪಿಯ ಕೆಲವು ಹಿರಿಯ ನಾಯಕರು ವಿಜಯೇಂದ್ರ ಬದಲಾವಣೆಗೆ ಒತ್ತಾಯ ತರುತ್ತಿದ್ದಾರೆ, ಆದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕಡೆಗಣಿಸಿ ವಿಧಾನಸಭೆ ಚುನಾವಣೆ ಎದುರಿಸುವ ಧೈರ್ಯ ವರಿಷ್ಠರಿಗಿಲ್ಲ ಎನ್ನಲಾಗಿದೆ.

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಬಸವರಾಜ ಬೊಮ್ಮಾಯಿ ಅವರನ್ನು ಕೂರಿಸಿದ ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಬೇಕಾಯಿತು. ಇದನ್ನು ಮನಗಂಡ ವರಿಷ್ಠರು ವಿಜಯೇಂದ್ರ ಅವರನ್ನು ಪ್ರಮುಖ ಸ್ಥಾನದಲ್ಲಿ ಉಳಿಸಿಕೊಂಡೇ ರಾಜ್ಯ ಬಿಜೆಪಿಯನ್ನು ಬಲಿಷ್ಠಗೊಳಿಸಲು ಮುಂದಾಗಿದ್ದಾರೆ.

ಹೊಸ ಮುಖಗಳಿಗೆ ಅವಕಾಶ

ಪಕ್ಷ ಬಲಪಡಿಸುವಲ್ಲಿ ಬಿಜೆಪಿ ಪುನಾರಚನೆ ವೇಳೆ ಕೆಲವರು ಅಧಿಕಾರ ಕಳೆದುಕೊಳ್ಳಲಿದ್ದು, ಹೊಸ ಮುಖಗಳಿಗೆ ಅವಕಾಶ ದೊರೆಯಲಿದೆ.

ವಿಧಾನಸಭೆ ಪ್ರತಿಪಕ್ಷ ನಾಯಕನ ಬದಲಾವಣೆ ಬಗ್ಗೆಯೂ ದೆಹಲಿಯ ಬಿಜೆಪಿ ಅಂಗಳದಲ್ಲಿ ಬಿರುಸಿನ ಚರ್ಚೆ ನಡೆದಿದ್ದು, ಯಾರು ಯಾವ ಸ್ಥಾನಕ್ಕೆ ಬರುತ್ತಾರೆ ಎಂಬ ಚಿತ್ರಣ ಒಂದೆರಡು ದಿನದಲ್ಲಿ ಹೊರಬೀಳಲಿದೆ. ಸದ್ಯಕ್ಕೆ ಆ ಸ್ಥಾನದಲ್ಲಿರುವ ಆರ್.‌ ಅಶೋಕ್‌ ಬದಲಾವಣೆ ಬಹುತೇಕ ಕನ್ಫರ್ಮ್‌ ಎಂದು ಗೊತ್ತಾಗಿದೆ.

ನವದೆಹಲಿಯಲ್ಲಿ ಇಂದು ನಮ್ಮ ಪಕ್ಷದ ಹಿರಿಯ ನಾಯಕರು, ದೇಶದ ಸುರಕ್ಷತೆ ಹಾಗೂ ಪಕ್ಷ ಸಂಘಟನೆಯ ಬಲವರ್ಧನೆಗಾಗಿ ಸದಾ ತಮ್ಮನ್ನು ಸಮರ್ಪಿಸಿಕೊಂಡಿರುವ ದಿಟ್ಟ ನೇತಾರ, ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಸನ್ಮಾನ್ಯ ಶ್ರೀ ಅಮಿತ್ ಶಾ ಜೀ ಅವರನ್ನು ಭೇಟಿ ಮಾಡಲಾಯಿತು.

ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ವಿದ್ಯಾವಂತ ಮತದಾರರು ಪಕ್ಷಕ್ಕೆ… pic.twitter.com/PpmWGn97EY

— Vijayendra Yediyurappa (@BYVijayendra) November 19, 2026

ವಿಜಯೇಂದ್ರ ಅವರನ್ನು ಕೆಳಗಿಳಿಸಿ ಆ ಸ್ಥಾನ ಪಡೆಯುವ ರೇಸಿನಲ್ಲಿ ವಿ.ಸೋಮಣ್ಣ, ಸುನೀಲ್‌ ಕುಮಾರ್‌, ಮುರುಗೇಶ್‌ ನಿರಾಣಿ, ಮಹೇಶ್‌ ಟೆಂಗಿನಕಾಯಿ ಹೆಸರುಗಳು ಚಾಲ್ತಿಯಲ್ಲಿವೆ. ರಾಜ್ಯ ಬಿಜೆಪಿ ಅಧ್ಯಕ್ಷನ ಸ್ಥಾನಕ್ಕೆ ಮಹೇಶ್‌ ಟೆಂಗಿನಕಾಯಿ ಅವರನ್ನು ತರುವ ಬಗ್ಗೆ ವರಿಷ್ಠರು ಆಲೋಚನೆ ಮಾಡುತ್ತಿದ್ದಾರೆ. ಪ್ರತಿಪಕ್ಷ ಸ್ಥಾನಕ್ಕೆ ವಿಜಯೇಂದ್ರ ಅಥವಾ ಸುನೀಲ್‌ ಕುಮಾರ್‌ ಎನ್ನಲಾಗಿದೆ.

ಮತ್ತೊಂದು ದೆಹಲಿ ಮೂಲದ ಪ್ರಕಾರ, ಸುನೀಲ್‌ ಕುಮಾರ್‌ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿ ವಿಜಯೇಂದ್ರ ಅವರನ್ನು ಪ್ರತಿಪಕ್ಷ ನಾಯಕರನ್ನಾವಗಿ ಮಾಡುವ ದಿಕ್ಕಿನಲ್ಲಿಯೂ ವರಿಷ್ಠರ ಚಿಂತನೆ ನಡೆದಿದೆ ಎನ್ನಲಾಗಿದೆ.

ನವೆಂಬರ್‌ ೧೯ರಂದು ವಿಜಯೇಂದ್ರ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿದ್ದರು. ಆ ಭೇಟಿ ಸಂದರ್ಭದಲ್ಲಿ ಹಿರಿಯೂರು ಉಪ ಚುನಾವಣೆ ವಿಷಯಕ್ಕಿಂತ ರಾಜ್ಯ ಬಿಜೆಪಿ ಸರ್ಜರಿ ಬಗ್ಗೆಯೇ ಹೆಚ್ಚು ಚರ್ಚೆ ನಡೆದಿದೆ ಎಂದು ಮಾಹಿತಿ ಸಿಕ್ಕಿದೆ.

Tags: bjpBY VijayendrackcknewsnowKarnataka bjp leadership changePoliticsr ashoksunilkumar
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಜಗದೀಶ್‌ ಶೆಟ್ಟರ್‌ ಸೋಲಿಸಿದ್ದ ಶಾಸಕ ಮಹೇಶ್‌ ಟೆಂಗಿನಕಾಯಿಗೆ ಸಿಗುತ್ತಾ ರಾಜ್ಯ ಬಿಜೆಪಿ ಸಾರಥ್ಯ?

ಜಗದೀಶ್‌ ಶೆಟ್ಟರ್‌ ಸೋಲಿಸಿದ್ದ ಶಾಸಕ ಮಹೇಶ್‌ ಟೆಂಗಿನಕಾಯಿಗೆ ಸಿಗುತ್ತಾ ರಾಜ್ಯ ಬಿಜೆಪಿ ಸಾರಥ್ಯ?

by cknewsnow desk
November 22, 2026
0

ಆರ್‌ ಎಸ್‌ ಎಸ್‌ ಹಿನ್ನೆಲೆ, ಸಂಘಟನಾ ಚತುರತೆ, ಪಕ್ಷನಿಷ್ಠೆಗೆ ಒಲಿಯುತ್ತಾ ಹುದ್ದೆ

ಸ್ಟಿಂಗ್‌ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಿ, ಪೊಲೀಸ್‌ ಮಹಾನಿರ್ದೇಶಕರಿಗೆ ಗೃಹ ಇಲಾಖೆ ಸೂಚನೆ

ಸ್ಟಿಂಗ್‌ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಿ, ಪೊಲೀಸ್‌ ಮಹಾನಿರ್ದೇಶಕರಿಗೆ ಗೃಹ ಇಲಾಖೆ ಸೂಚನೆ

by cknewsnow desk
November 22, 2026
0

ಪವರ್ ಟಿವಿ ಮಾಲೀಕ, ಸ್ಟಿಂಗ್ ಆಪರೇಷನ್ ನಲ್ಲಿ ಭಾಗಿಯಾದ ವಾಹಿನಿ ನೌಕರರ ವಿರುಧ್ಧ ಕ್ರಮಕ್ಕೆ ಸೂಚನೆ; ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ...

ಸೋನಿಯಾ ಗಾಂಧಿ ಪುಸ್ತಕ ಖರೀದಿಗೆ ರಾಜಕೀಯ ಆಸಕ್ತರು

ಸಿಂಪ್ಲಿ ಸೋನಿಯಾ, ಒಮ್ಮೆ ಓದಿಬಿಡಿ

by cknewsnow desk
November 20, 2026
0

ಬಿಲಾಂಗಿಂಗ್ : ಎ ಜರ್ನಿ ಆಫ್ ಲವ್ (Belonging: A Journey of Love) ಕೃತಿ ವಿಮರ್ಶೆ

ಗ್ರಾಮೀಣ ಎಲ್ಲಾ ಆಸ್ತಿಗಳಿಗೆ ಇ-ಸ್ವತ್ತು ದೃಢೀಕರಣ

ಗ್ರಾಮೀಣ ಎಲ್ಲಾ ಆಸ್ತಿಗಳಿಗೆ ಇ-ಸ್ವತ್ತು ದೃಢೀಕರಣ

by cknewsnow desk
November 18, 2026
0

ಇನ್ನು ಮುಂದೆ ಅಂಗೈನಲ್ಲಿ ಆಸ್ತಿ ದಾಖಲೆ

Belonging: A Journey of Love

ಸೋನಿಯಾ ಗಾಂಧಿ ಆತ್ಮಚರಿತ್ರೆ #BelongingA JourneyofLove ಓದಲ್ಲ

by cknewsnow desk
November 18, 2026
0

ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿಕೆ

ಕಾವೇರಿ ಬಿಕ್ಕಟ್ಟು; ಮೋದಿ ಮಧ್ಯಪ್ರವೇಶಕ್ಕೆ ಹೆಚ್.ಡಿ.ದೇವೇಗೌಡರ ಒತ್ತಾಯ

ಕಾವೇರಿ ಕುರಿತು ಪ್ರಧಾನಿ ನರೇಂದ್ರ ಮೋದಿಗೆ ದೇವೇಗೌಡರ ಪತ್ರ

by cknewsnow desk
November 17, 2026
0

ಮೇಕೆದಾಟು ಯೋಜನೆಗೆ ಅನುಮತಿ ನೀಡಿ, ಕಾವೇರಿ ನ್ಯಾಯಮಂಡಳಿ ತೀರ್ಪು ಮರು ಪರಿಶೀಲಿಸಿ ಎಂದು ಆಗ್ರಹ

Next Post
ಜಗದೀಶ್‌ ಶೆಟ್ಟರ್‌ ಸೋಲಿಸಿದ್ದ ಶಾಸಕ ಮಹೇಶ್‌ ಟೆಂಗಿನಕಾಯಿಗೆ ಸಿಗುತ್ತಾ ರಾಜ್ಯ ಬಿಜೆಪಿ ಸಾರಥ್ಯ?

ಜಗದೀಶ್‌ ಶೆಟ್ಟರ್‌ ಸೋಲಿಸಿದ್ದ ಶಾಸಕ ಮಹೇಶ್‌ ಟೆಂಗಿನಕಾಯಿಗೆ ಸಿಗುತ್ತಾ ರಾಜ್ಯ ಬಿಜೆಪಿ ಸಾರಥ್ಯ?

Leave a Reply Cancel reply

Your email address will not be published. Required fields are marked *

Recommended

ನೈಸ್‌ ಅಕ್ರಮ ಪ್ರಸ್ತಾಪಿಸಿದ್ದ ಟಿ.ಬಿ.ಜಯಚಂದ್ರ ಅವರಿಗೆ ಜೀವ ಬೆದರಿಕೆ

ನೈಸ್‌ ಅಕ್ರಮ ಪ್ರಸ್ತಾಪಿಸಿದ್ದ ಟಿ.ಬಿ.ಜಯಚಂದ್ರ ಅವರಿಗೆ ಜೀವ ಬೆದರಿಕೆ

3 years ago
ಪ್ರಯತ್ನದಿಂದ ದೊರೆಯುವ ಸಿದ್ಧಿಯೇ ಪರಮ ಸತ್ಯ, ಪ್ರಯತ್ನ ಮಾಡದೆ ಉದಾಸೀನತೆಯಿಂದ ಉಳಿದು ಬಿಡುವುದೇ ಅಜ್ಞಾನ: ಸದ್ಗುರು ಮಧುಸೂದನ ಸಾಯಿ

ಪ್ರಯತ್ನದಿಂದ ದೊರೆಯುವ ಸಿದ್ಧಿಯೇ ಪರಮ ಸತ್ಯ, ಪ್ರಯತ್ನ ಮಾಡದೆ ಉದಾಸೀನತೆಯಿಂದ ಉಳಿದು ಬಿಡುವುದೇ ಅಜ್ಞಾನ: ಸದ್ಗುರು ಮಧುಸೂದನ ಸಾಯಿ

6 years ago

Popular News

  • ಜಗದೀಶ್‌ ಶೆಟ್ಟರ್‌ ಸೋಲಿಸಿದ್ದ ಶಾಸಕ ಮಹೇಶ್‌ ಟೆಂಗಿನಕಾಯಿಗೆ ಸಿಗುತ್ತಾ ರಾಜ್ಯ ಬಿಜೆಪಿ ಸಾರಥ್ಯ?

    ಜಗದೀಶ್‌ ಶೆಟ್ಟರ್‌ ಸೋಲಿಸಿದ್ದ ಶಾಸಕ ಮಹೇಶ್‌ ಟೆಂಗಿನಕಾಯಿಗೆ ಸಿಗುತ್ತಾ ರಾಜ್ಯ ಬಿಜೆಪಿ ಸಾರಥ್ಯ?

    0 shares
    Share 0 Tweet 0
  • ರಾಜ್ಯ ಬಿಜೆಪಿಗೆ ಮೇಜರ್‌ ಸರ್ಜರಿ! ಯಾರು ಎಲ್ಲೆಲ್ಲಿಗೆ?

    0 shares
    Share 0 Tweet 0
  • ಸ್ಟಿಂಗ್‌ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಿ, ಪೊಲೀಸ್‌ ಮಹಾನಿರ್ದೇಶಕರಿಗೆ ಗೃಹ ಇಲಾಖೆ ಸೂಚನೆ

    0 shares
    Share 0 Tweet 0
  • ಸಿಂಪ್ಲಿ ಸೋನಿಯಾ, ಒಮ್ಮೆ ಓದಿಬಿಡಿ

    0 shares
    Share 0 Tweet 0
  • ಗ್ರಾಮೀಣ ಎಲ್ಲಾ ಆಸ್ತಿಗಳಿಗೆ ಇ-ಸ್ವತ್ತು ದೃಢೀಕರಣ

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಜಗದೀಶ್‌ ಶೆಟ್ಟರ್‌ ಸೋಲಿಸಿದ್ದ ಶಾಸಕ ಮಹೇಶ್‌ ಟೆಂಗಿನಕಾಯಿಗೆ ಸಿಗುತ್ತಾ ರಾಜ್ಯ ಬಿಜೆಪಿ ಸಾರಥ್ಯ?

ಜಗದೀಶ್‌ ಶೆಟ್ಟರ್‌ ಸೋಲಿಸಿದ್ದ ಶಾಸಕ ಮಹೇಶ್‌ ಟೆಂಗಿನಕಾಯಿಗೆ ಸಿಗುತ್ತಾ ರಾಜ್ಯ ಬಿಜೆಪಿ ಸಾರಥ್ಯ?

November 22, 2026
ರಾಜ್ಯ ಬಿಜೆಪಿಗೆ ಮೇಜರ್‌ ಸರ್ಜರಿ! ಯಾರು ಎಲ್ಲೆಲ್ಲಿಗೆ?

ರಾಜ್ಯ ಬಿಜೆಪಿಗೆ ಮೇಜರ್‌ ಸರ್ಜರಿ! ಯಾರು ಎಲ್ಲೆಲ್ಲಿಗೆ?

November 22, 2026
ಸ್ಟಿಂಗ್‌ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಿ, ಪೊಲೀಸ್‌ ಮಹಾನಿರ್ದೇಶಕರಿಗೆ ಗೃಹ ಇಲಾಖೆ ಸೂಚನೆ

ಸ್ಟಿಂಗ್‌ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಿ, ಪೊಲೀಸ್‌ ಮಹಾನಿರ್ದೇಶಕರಿಗೆ ಗೃಹ ಇಲಾಖೆ ಸೂಚನೆ

November 22, 2026
ಸೋನಿಯಾ ಗಾಂಧಿ ಪುಸ್ತಕ ಖರೀದಿಗೆ ರಾಜಕೀಯ ಆಸಕ್ತರು

ಸಿಂಪ್ಲಿ ಸೋನಿಯಾ, ಒಮ್ಮೆ ಓದಿಬಿಡಿ

November 20, 2026

Covid 19

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

October 16, 2026
ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ