• About
  • Advertise
  • Careers
  • Contact
Thursday, October 15, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS CRIME

ಗ್ಯಾಸ್ ಲಾರಿಗೆ ರೇಂಜ್ ರೋವರ್ ಡಿಕ್ಕಿ; ಮಾಲೂರು ಬಿಜೆಪಿ ಮುಖಂಡ ದುರ್ಮರಣ

cknewsnow desk by cknewsnow desk
October 14, 2026
in CRIME
Reading Time: 1 min read
0
ಗ್ಯಾಸ್ ಲಾರಿಗೆ ರೇಂಜ್ ರೋವರ್ ಡಿಕ್ಕಿ; ಮಾಲೂರು ಬಿಜೆಪಿ ಮುಖಂಡ ದುರ್ಮರಣ
919
VIEWS
FacebookTwitterWhatsuplinkedinEmail

ಓವರ್’ಟೇಕ್ ಮಾಡುವ ರಭಸದಲ್ಲಿ ಮುಂದಿನ ಲಾರಿಗೆ ಡಿಕ್ಕಿ ಹೊಡೆದ ಕಾರು

ದೇವನಹಳ್ಳಿ: ಗ್ಯಾಸ್ ಲಾರಿಗೆ ರೇಂಜ್ ರೋವರ್ ಡಿಕ್ಕಿ ಪರಿಣಾಮ ಮಾಲೂರು ತಾಲೂಕಿನ ಬಿಜೆಪಿ ಮುಖಂಡ ಶಿವಕುಮಾರ್ ದುರ್ಮರಣಕ್ಕೆ ತುತ್ತಾಗಿದ್ದಾರೆ.

ಡಿಕ್ಕಿಯ ರಭಸಕ್ಕೆ ರೇಂಜ್ ರೋವರ್ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಶಿವಕುಮಾರ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಚಿತ್ರದುರ್ಗದಿಂದ ಮಾಲೂರಿಗೆ ರೇಂಜ್ ರೋವರ್ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಹೊಸಕೋಟೆ-ದಾಬಸ್ಪೇಟೆಯ ರಿಂಗ್ ರಸ್ತೆಯ ಹೆದ್ದಾರಿಯಲ್ಲಿ ಓವರ್‌ಟೇಕ್ ಮಾಡುವ ರಭಸದಲ್ಲಿ ಎದುರಿಗೆ ನಿಲ್ಲಿಸಿದ್ದ ಗ್ಯಾಸ್ ಲಾರಿಗೆ ರೇಂಜ್ ರೋವರ್ ಕಾರು ಅತಿ ವೇಗವಾಗಿ ಡಿಕ್ಕಿ ಹೊಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಡಿಕ್ಕಿ ರಭಸಕ್ಕೆ ರೇಂಜ್ ರೋವರ್ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಶಿವಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಇತರ ಮೂವರು ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.

ಬಿಜೆಪಿ ಮುಖಂಡರಾಗಿದ್ದ 50 ವರ್ಷದ ಶಿವಕುಮಾರ್ ಅವರು, ಮುಂಬರುವ ಚುನಾವಣೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದಿಂದ ಟಿಕೆಟ್ ಪಡೆಯುವ ಆಕಾಂಕ್ಷೆ ಹೊಂದಿದ್ದರು ಎಂಬ ಮಾಹಿತಿ ದೊರೆತಿದೆ. ಅಲ್ಲದೆ ಇವರು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಡೆವಲಪರ್ ಆಗಿಯೂ ಹೆಸರು ಮಾಡಿದ್ದರು. ಮಂಗಳವಾರ ಚಿತ್ರದುರ್ಗದಲ್ಲಿ ವೀರ ಮದಕರಿ ನಾಯಕ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಲೂರಿಗೆ ವಾಪಸ್ ಬರುತ್ತಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಸಂಜೆ 4:30 ಗಂಟೆಗೆ ತಮ್ಮ ಸಹಾಯಕರಾದ ಚಂದನ್, ವಿನೋದ್ ಕುಮಾರ್ ಮತ್ತು ಚಾಲಕ ಪ್ರದೀಪ ಅವರೊಂದಿಗೆ ಚಿತ್ರದುರ್ಗದಿಂದ ಹೊರಟ ಶಿವಕುಮಾರ್ ಅವರು, ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದರು.

ರಾಷ್ಟ್ರೀಯ ಹೆದ್ದಾರಿ 648ರಲ್ಲಿ ಹೊಸಕೋಟೆ – ಡಾಬಸ್ ಪೇಟೆ ನಡುವಿನ ಮುತ್ತಪ್ಪ ರೈ ಲೇಔಟ್ ಸಮೀಪ ರಾತ್ರಿ 7.48ರ ಸುಮಾರಿಗೆ ಮುಂದೆ ಹೋಗುತ್ತಿದ್ದ ವಾಹನವನ್ನು ಹಿಂದಕ್ಕೆ ಹಾಕಲು ವೇಗವಾಗಿ ಮುನ್ನುಗ್ಗಿದ ಲ್ಯಾಂಡ್ ರೋವರ್ ಎದುರಿಗೆ ಎಡಬದಿಯಲ್ಲಿ ನಿಂತಿದ್ದ ಗ್ಯಾಸ್ ಲಾರಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಮುಂದೆ ಕೂತಿದ್ದ ಶಿವಕುಮಾರ್ ಅವರ ಎದೆ, ಮುಖ, ತಲೆ ಮತ್ತು ಕುತ್ತಿಗೆ ಭಾಗಕ್ಕೆ ತೀವ್ರವಾದ ಗಾಯಗಳಾದ ಪರಿಣಾಮ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tags: crimekarnatakaroad accident
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಸ್ಟಿಂಗ್ ವಿರುದ್ಧ ಕೋರ್ಟ್ ಮೊರೆ ಹೋದ ಸಿದ್ದರಾಮಯ್ಯ! ಇಂದು ಆದೇಶ ನಿರೀಕ್ಷೆ

ಸ್ಟಿಂಗ್ ವಿರುದ್ಧ ಕೋರ್ಟ್ ಮೊರೆ ಹೋದ ಸಿದ್ದರಾಮಯ್ಯ! ಇಂದು ಆದೇಶ ನಿರೀಕ್ಷೆ

by cknewsnow desk
October 13, 2026
0

ವಿಡಿಯೋಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ತಡೆ ನೀಡಬೇಕೆಂದು ಅಸಲು ದಾವೆ

ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಹೈಕೋರ್ಟ್ ಛೀಮಾರಿ

ವಾಲ್ಮೀಕಿ ಹಗರಣ: ಹೈಕೋರ್ಟ್ ಮಟ್ಟಿಲೇರಿದ ಯೂನಿಯನ್ ಬ್ಯಾಂಕ್

by cknewsnow desk
July 23, 2024
0

ರಾಜ್ಯ ಸರಕಾರಕ್ಕೆ ಹೊಸ ಪೀಕಲಾಟ

ಪೆನ್ ಡ್ರೈ ಪ್ರಕರಣ: HDK ಹೆಸರು ಹೇಳಲು ₹100 ಕೋಟಿ ಆಫರ್ ಕೊಟ್ಟ ಡಿಕೆಶಿ!

ಪೆನ್ ಡ್ರೈ ಪ್ರಕರಣ: HDK ಹೆಸರು ಹೇಳಲು ₹100 ಕೋಟಿ ಆಫರ್ ಕೊಟ್ಟ ಡಿಕೆಶಿ!

by cknewsnow desk
May 17, 2024
0

ಹೊಸ ಬಾಂಬ್‌ ಸ್ಫೋಟಿಸಿದ ವಕೀಲ ಬಿಜೆಪಿ ನಾಯಕ ದೇವರಾಜೇಗೌಡ

ಹಾಸನ ಪೆನ್‍ಡ್ರೈವ್ ಪ್ರಕರಣ; ಅಶ್ಲೀಲ ವಿಡಿಯೋ ಲೀಕ್‌ ಹಿಂದೆ DCM ಡಿಕೆಶಿ ಕೈ ಚಳಕ

ಹಾಸನ ಪೆನ್‍ಡ್ರೈವ್ ಪ್ರಕರಣ; ಅಶ್ಲೀಲ ವಿಡಿಯೋ ಲೀಕ್‌ ಹಿಂದೆ DCM ಡಿಕೆಶಿ ಕೈ ಚಳಕ

by cknewsnow desk
May 6, 2024
0

ನಾಗಮಂಗಲದ ಎಲ್.‌ಆರ್.‌ಶಿವರಾಮೇಗೌಡ ಮಧ್ಯಸ್ಥಿಕೆ; ಮೊಬೈಲ್‌ ಸಂಭಾಷಣೆ ಆಡಿಯೋ ಬಿಡುಗಡೆ

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಕೋಲ್ಕತಾ ಗಲ್ಲಿಯ ಮನೆಯೊಂದರಲ್ಲಿ ಅಡಗಿದ್ದರು

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಕೋಲ್ಕತಾ ಗಲ್ಲಿಯ ಮನೆಯೊಂದರಲ್ಲಿ ಅಡಗಿದ್ದರು

by cknewsnow desk
April 12, 2024
0

ರಾಜ್ಯ ರಾಜ್ಯಗಳನ್ನು ದಾಟಿ ಪಶ್ಚಿಮ ಬಂಗಾಳದಲ್ಲಿ ತಲೆಮರೆಸಿಕೊಂಡಿದ್ದರು

ಮಹಿಳೆಯರ ಸುರಕ್ಷತೆ ಕಾರಣ; ಒಂದೆರಡು ದಿನದಲ್ಲೇ ರಾಜ್ಯದಲ್ಲಿ ಆಸಿಡ್ ನಿಷೇಧ

ಮಹಿಳೆಯರ ಸುರಕ್ಷತೆ ಕಾರಣ; ಒಂದೆರಡು ದಿನದಲ್ಲೇ ರಾಜ್ಯದಲ್ಲಿ ಆಸಿಡ್ ನಿಷೇಧ

by cknewsnow desk
March 7, 2024
0

ಎಲ್ಲರ ಕೈಗೂ ಸುಲಭವಾಗಿ ಸಿಗದಂತೆ ಕ್ರಮ

Leave a Reply Cancel reply

Your email address will not be published. Required fields are marked *

Recommended

ಶೇ.10ರಷ್ಟು ವೇತನ ಪರಿಷ್ಕರಣೆಗೆ ಸಿದ್ದ; ಆದರೆ, 6ನೇ ವೇತನ ಆಯೋಗದ ಸಂಬಳ ಮಾತ್ರ ಸಾಧ್ಯವಿಲ್ಲ ಎಂದುಬಿಟ್ಟ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಜ್

ಶೇ.10ರಷ್ಟು ವೇತನ ಪರಿಷ್ಕರಣೆಗೆ ಸಿದ್ದ; ಆದರೆ, 6ನೇ ವೇತನ ಆಯೋಗದ ಸಂಬಳ ಮಾತ್ರ ಸಾಧ್ಯವಿಲ್ಲ ಎಂದುಬಿಟ್ಟ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಜ್

6 years ago
ಚಿರಸ್ಮರಣೀಯ ಚಿರಂಜೀವಿ

ಚಿರಸ್ಮರಣೀಯ ಚಿರಂಜೀವಿ

6 years ago

Popular News

  • ಗ್ಯಾಸ್ ಲಾರಿಗೆ ರೇಂಜ್ ರೋವರ್ ಡಿಕ್ಕಿ; ಮಾಲೂರು ಬಿಜೆಪಿ ಮುಖಂಡ ದುರ್ಮರಣ

    ಗ್ಯಾಸ್ ಲಾರಿಗೆ ರೇಂಜ್ ರೋವರ್ ಡಿಕ್ಕಿ; ಮಾಲೂರು ಬಿಜೆಪಿ ಮುಖಂಡ ದುರ್ಮರಣ

    0 shares
    Share 0 Tweet 0
  • ಸ್ಟಿಂಗ್ ಆಪರೇಷನ್‌; ಸಿಬಿಐ ತನಿಖೆಗೆ HDK ಆಗ್ರಹ

    0 shares
    Share 0 Tweet 0
  • ಕೇಂದ್ರ ಸಚಿವ HD ಕುಮಾರಸ್ವಾಮಿ ಪ್ರೆಸ್ ಮೀಟ್ #Live

    0 shares
    Share 0 Tweet 0
  • ತಾಪಂ, ಜಿಪಂ ಚುನಾವಣೆ; ಜಿಲ್ಲಾವಾರು ಸಭೆಗಳನ್ನು ಆರಂಭಿಸಿದ HDK

    0 shares
    Share 0 Tweet 0
  • ಸ್ಟಿಂಗ್ ವಿರುದ್ಧ ಕೋರ್ಟ್ ಮೊರೆ ಹೋದ ಸಿದ್ದರಾಮಯ್ಯ! ಇಂದು ಆದೇಶ ನಿರೀಕ್ಷೆ

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಗ್ಯಾಸ್ ಲಾರಿಗೆ ರೇಂಜ್ ರೋವರ್ ಡಿಕ್ಕಿ; ಮಾಲೂರು ಬಿಜೆಪಿ ಮುಖಂಡ ದುರ್ಮರಣ

ಗ್ಯಾಸ್ ಲಾರಿಗೆ ರೇಂಜ್ ರೋವರ್ ಡಿಕ್ಕಿ; ಮಾಲೂರು ಬಿಜೆಪಿ ಮುಖಂಡ ದುರ್ಮರಣ

October 14, 2026
ಸ್ಟಿಂಗ್ ಆಪರೇಷನ್‌; ಸಿಬಿಐ ತನಿಖೆಗೆ HDK ಆಗ್ರಹ

ಸ್ಟಿಂಗ್ ಆಪರೇಷನ್‌; ಸಿಬಿಐ ತನಿಖೆಗೆ HDK ಆಗ್ರಹ

October 14, 2026
ತಾಪಂ, ಜಿಪಂ ಚುನಾವಣೆ; ಜಿಲ್ಲಾವಾರು ಸಭೆಗಳನ್ನು ಆರಂಭಿಸಿದ HDK

ತಾಪಂ, ಜಿಪಂ ಚುನಾವಣೆ; ಜಿಲ್ಲಾವಾರು ಸಭೆಗಳನ್ನು ಆರಂಭಿಸಿದ HDK

October 13, 2026
ಸ್ಟಿಂಗ್ ವಿರುದ್ಧ ಕೋರ್ಟ್ ಮೊರೆ ಹೋದ ಸಿದ್ದರಾಮಯ್ಯ! ಇಂದು ಆದೇಶ ನಿರೀಕ್ಷೆ

ಸ್ಟಿಂಗ್ ವಿರುದ್ಧ ಕೋರ್ಟ್ ಮೊರೆ ಹೋದ ಸಿದ್ದರಾಮಯ್ಯ! ಇಂದು ಆದೇಶ ನಿರೀಕ್ಷೆ

October 13, 2026

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ